Recent News

1 week ago

ತಪ್ಪು ಮಾಡದಿದ್ರೂ 200 ರೂ. ದಂಡ – ಮಗನಿಗೆ ಸ್ವೀಟ್ ಕೊಡಿಸಲಿಟ್ಟಿದ್ದ ಹಣ ಕಿತ್ಕೊಂಡ ಪೊಲೀಸ್

ಬಾಗಲಕೋಟೆ: ರಸ್ತೆ ನಿಯಮವನ್ನು ಪಾಲಿಸಿದ್ದರೂ ಲಂಚಬಾಕ ಪೊಲೀಸ್ ಅಧಿಕಾರಿಯೊಬ್ಬ ಚಾಲಕನಿಗೆ ಕಾಡಿಬೇಡಿ, ಬೈದು 100 ರೂ. ಪಡೆದಿರುವ ವಿಡಿಯೋ ಹಾಗೂ ಆಡಿಯೋ ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಜಮಖಂಡಿ ಗ್ರಾಮೀಣ ಠಾಣೆ ಎಎಸ್‍ಐ ಮಾರುತಿ ಭಜಂತ್ರಿ ಎಂಬವರೇ ಲಂಚ ಪಡೆದ ಅಧಿಕಾರಿ. ಜಮಖಂಡಿಯಿಂದ ಮಹಾಲಿಂಗಪುರಕ್ಕೆ ಚಾಲಕ ಖಾಲಿ ವಾಹನ ತೆಗೆದುಕೊಂಡು ಹೋಗುವಾಗ ರಸ್ತೆ ನಿಯಮ ಹಾಗೂ ದಾಖಲೆಗಳಿದ್ದರೂ 200 ರೂ. ದಂಡ ಕೊಡು ಎಂದು ಅಧಿಕಾರಿ ಬೈದಿದ್ದಾರೆ. ನನ್ನ ಬಳಿ […]

2 weeks ago

ತಂಗಿ ಜೊತೆ ಫೋನಿನಲ್ಲಿ ಮಾತನಾಡಿದ್ದಕ್ಕೆ ಸಹೋದರನಿಂದ ಯುವಕನ ಕೊಲೆ

ಬಾಗಲಕೋಟೆ: ಸಹೋದರಿ ಜೊತೆ ಫೋನಿನಲ್ಲಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಸಹೋದರನೊಬ್ಬ ತನ್ನ ಸ್ನೇಹಿತನ ಜೊತೆ ಸೇರಿ ಯುವಕನನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಕ್ರಾಸ್ ಬಳಿ ನಡೆದಿದೆ. ನಬಿಸಾಬ್ ತಹಸೀಲ್ದಾರ(22) ಕೊಲೆಯಾದ ಯುವಕ. ನಬಿಸಾಬ್ ಸುನಗ ಗ್ರಾಮದವನಾಗಿದ್ದು, ಅದೇ ಗ್ರಾಮದ ವಿಠ್ಠಲ ವಡವಾಣಿಯ ಸಹೋದರಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದನು....

ಶಾಲೆಯಲ್ಲಿ ನಿಗೂಢವಾಗಿ ಬೀಳುವ ಕಲ್ಲುಗಳಿಂದ ತಾತ್ಕಾಲಿಕ ಮುಕ್ತಿ

1 month ago

ಬಾಗಲಕೋಟೆ: ಕಳೆದ ಒಂದು ತಿಂಗಳಿನಿಂದ ಶಾಲೆಯಲ್ಲಿ ನಿಗೂಢವಾಗಿ ಬೀಳುತ್ತಿದ್ದ ಪ್ರಕರಣಕ್ಕೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಶಾಲೆಯಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಶಾಲೆಯಲ್ಲಿ ಅದೃಶ್ಯವಾಗಿ ಬೀಳುತ್ತಿದ್ದ ಕಲ್ಲುಗಳಿಗೆ ಈಗ ಬ್ರೆಕ್ ಬಿದ್ದಿದೆ. ಆದರೆ ಇದರ ಹಿಂದಿನ...

ಸನ್ಮಾನ ಮಾಡಿ ಯೋಧರಿಗೆ ಯುವಕರಿಂದ ಬೀಳ್ಕೊಡುಗೆ

2 months ago

ಬಾಗಲಕೋಟೆ: ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಇಂದು ಭಾರತೀಯ ಸೇನೆಯ ಯೋಧರು ತಮ್ಮ ತಮ್ಮ ಸ್ಥಳಕ್ಕೆ ಹಿಂತಿರುಗುತ್ತಿದ್ದಾರೆ. ಈ ವೇಳೆ ತೆರಳುತ್ತಿದ್ದ ಯೋಧರಿಗೆ ಜಮಖಂಡಿ ಯೋಧರು ಸನ್ಮಾನ ಮಾಡುವ ಮೂಲಕ ಬೀಳ್ಕೊಟ್ಟಿದ್ದಾರೆ. ಜಮಖಂಡಿ ಕನಕದಾಸ ಭವನದಲ್ಲಿ ಯುವಕರು ಮೇಜರ್ ವಿವೇಕ್ ಸೇರಿದಂತೆ ಎಲ್ಲ...

ಪ್ರವಾಹದ ನಡುವೆ ಜಾತ್ರೆ ನೆರವೇರಿಸಿದ ಗ್ರಾಮಸ್ಥರು

2 months ago

ಬಾಗಲಕೋಟೆ: ಪ್ರವಾಹದ ಮಧ್ಯೆಯೂ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ರಾಮಲಿಂಗೇಶ್ವರ ಜಾತ್ರೆ ನಡೆಯಿತು. ಈ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಜಾತ್ರೆ ನಡೆಯಲ್ಲ ಎಂದು ಎಲ್ಲರೂ ಎಂದುಕೊಂಡಿದ್ದರು. ಆದರೆ ಆ ಜನರಿಗೆ ದೇವರ...

ಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಎಮ್ಮೆ – ಕಣ್ಣೀರಿಟ್ಟ ಅಜ್ಜ

2 months ago

ಬಾಗಲಕೋಟೆ: ಮಲಪ್ರಭೆಯ ಅಬ್ಬರಕ್ಕೆ ಬಾಗಲಕೋಟೆ ಜಿಲ್ಲೆಯ ಜನರ ಬದುಕು ಕೊಚ್ಚಿ ಹೋಗಿದೆ. ಅದೆಷ್ಟೋ ಜಾನುವಾರುಗಳು ಸತ್ತು ಬಿದ್ದಿವೆ. ಆದರೆ ಬಾದಾಮಿ ತಾಲೂಕಿನ ಕೇಡಾ ಗ್ರಾಮದ ನಿವಾಸಿಯ ವೃದ್ಧನ ಬದುಕೇ ಭೀಕರ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. 75ರ ವೃದ್ಧ ಹನುಮಂತಪ್ಪ ತಮ್ಮ ಎಮ್ಮೆ...

ಉಕ್ಕಿ ಹರಿಯುತ್ತಿರುವ ಘಟಪ್ರಭಾ- ಪ್ರವಾಹದ ಮಧ್ಯೆ ಸಿಲುಕಿದ ತಂದೆ, ಮಗ

2 months ago

ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವರುಣನ ಆರ್ಭಟಕ್ಕೆ ಈ ಭಾಗದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಚಖಂಡಿಯಲ್ಲಿ ಪ್ರವಾಹದ ಮಧ್ಯೆ ತಂದೆ-ಮಗ ಸಿಲುಕಿಕೊಂಡು ಅಪಾಯದಲ್ಲಿದ್ದಾರೆ. ಹಿರಣ್ಯಕೇಶಿ,...

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಉತ್ತರ ಕರ್ನಾಟಕ ತತ್ತರ- ಭೀಮಾತೀರದಲ್ಲಿ ನೀರಿಗಾಗಿ ಹಾಹಾಕಾರ

3 months ago

ರಾಯಚೂರು/ಬಾಗಲಕೋಟೆ/ಕಲಬುರಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಅದರಲ್ಲೂ ಕೃಷ್ಣಾ ನದಿ ಪಾತ್ರದ ಜಿಲ್ಲೆಗಳು ಅಕ್ಷರಶಃ ಜಲಾವೃತಗೊಂಡು, ಲಕ್ಷಾಂತರ ಜನರು ಸಂತ್ರಸ್ತರಾಗಿದ್ದಾರೆ. ಅಲ್ಲದೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ....