Sunday, 24th March 2019

6 hours ago

ಪಾಕ್ ಸೈನಿಕರ ನೆಲೆ ಧ್ವಂಸಗೊಳಿಸಿದ ಆರ್ಮಿ – ಸಾಕ್ಷಿಗಾಗಿ ವಿಡಿಯೋ ಬಿಡುಗಡೆ

ಶ್ರೀನಗರ: ಜಮ್ಮು ಕಾಶ್ಮೀರದ ಅಖ್ನೂರ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಅಕ್ರಮವಾಗಿ ನಿರ್ಮಾಣ ಮಾಡಿದ್ದ ನೆಲೆಯನ್ನು ಭಾರತೀಯ ಸೈನಿಕರು ಧ್ವಂಸ ಮಾಡಿದ್ದಾರೆ. ಶನಿವಾರ ಸಂಜೆ ನಡೆದ ಫೈರಿಂಗ್‍ನಲ್ಲಿ ಪಾಕಿಸ್ತಾನ ಸೇನೆಯ ನೆಲೆಯನ್ನು ಧ್ವಂಸಗೊಳಿಸಿದ್ದು, ಧ್ವಂಸಗೊಂಡ ಸ್ಥಳದಲ್ಲಿ ಪಾಕಿಸ್ತಾನದ ಧ್ವಜ ಮಾತ್ರ ಹಾರಾಡುತ್ತಿರುವ ದೃಶ್ಯದ ವಿಡಿಯೋವನ್ನು ಆರ್ಮಿ ಸಾಕ್ಷಿಯಾಗಿ ಬಿಡುಗಡೆ ಮಾಡಿದೆ. ಅಲ್ಲದೇ ಶನಿವಾರ ಸಂಜೆಯಿಂದಲೇ ಭಾರತ ಸೈನಿಕರತ್ತ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ್ದು, ಪಾಕ್ ದಾಳಿಗೆ ಭಾರತದ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. #WATCH Indian Army video […]

2 days ago

ಇಬ್ಬರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರು ಹಾಗೂ ಸೇನಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಬಾರಾಮುಲ್ಲಾದ ಕಲಾಂತಾರ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದು ಉರುಳಿಸಲಾಗಿದೆ. ಈ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಶ್ರೀನಗರದ ರಕ್ಷಣಾ ವಿಭಾಗದ ವಕ್ತಾರ ಕರ್ನಲ್...

ನಕ್ಸಲರ ದಾಳಿಗೆ ಬೆಳಗಾವಿ ಯೋಧ ಹುತಾತ್ಮ

1 week ago

ಬೆಳಗಾವಿ: ಪಶ್ಚಿಮ ಬಂಗಾಳದಲ್ಲಿ ನಕ್ಸಲ ವಿರುದ್ಧ ಕಾರ್ಯಾಚರಣೆಯ ವೇಳೆ ನಕ್ಸಲರ ಗುಂಡು ತಾಗಿ ಗಂಭೀರವಾಗಿ ಗಾಯಗೊಂಡಿದ್ದ ಜಿಲ್ಲೆಯ ಬಿಎಸ್‍ಎಫ್ ಯೋಧ ಹುತಾತ್ಮರಾಗಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿ ನಾವಗ ಗ್ರಾಮದ ನಿವಾಸಿ ರಾಹುಲ್ ವಸಂತ ಶಿಂಧೆ (29) ಹುತಾತ್ಮರಾದ ಯೋಧ. ರಾಹುಲ್...

ಸಾವನ್ನೇ ಗೆದ್ದು ಬಂದ ವೀರಯೋಧನಿಗೆ ಬೀದರ್‌ನಲ್ಲಿ ಅದ್ಧೂರಿ ಸ್ವಾಗತ

2 weeks ago

ಬೀದರ್: ಜಮ್ಮು-ಕಾಶ್ಮೀರದ ಪುಲ್ವಾಮಾ ಬಳಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಸಾವನ್ನೇ ಗೆದ್ದು ಬಂದ ಯೋಧನಿಗೆ ಗಡಿ ಜಿಲ್ಲೆ ಬೀದರ್ ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಮನೋಹರ್ ರಾಥೋಡ್ ಸಾವನ್ನೇ ಗೆದ್ದು ಬಂದ ಯೋಧ. ಮನೋಹರ್ ರಾಥೋಡ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾಲಾಲ್ ತಾಂಡ...

ಕಾಶ್ಮೀರಿ ವ್ಯಾಪಾರಿಗಳಿಗೆ ಮನಬಂದಂತೆ ಥಳಿಸಿದ ಸಾಮಾಜಿಕ ಕಾರ್ಯಕರ್ತರು – ವಿಡಿಯೋ

2 weeks ago

ಲಕ್ನೋ: ಕಾಶ್ಮೀರ ಮೂಲದ ಇಬ್ಬರು ವ್ಯಾಪಾರಿಗಳಿಗೆ ಕೆಲ ಸಾಮಾಜಿಕ ಕಾರ್ಯಕರ್ತರು ನಡುರಸ್ತೆಯಲ್ಲೇ ಥಳಿಸಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬುಧವಾರ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಲಕ್ನೋನ ಡಾಲಿಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯವನ್ನು...

ಗಾಂಜಾ ಗುಂಗಿನಲ್ಲಿ ಇಬ್ಬರಿಗೆ ಚಾಕು ಇರಿದು 12 ಸಾವಿರ ದೋಚಿದ್ರು..!

3 weeks ago

ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಗಾಂಜಾ ಹಾವಳಿ ಹೆಚ್ಚಾಗಿದ್ದು, ದುಷ್ಕರ್ಮಿಗಳು ಗಾಂಜಾ ಗುಂಗಿನಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಚಾಕು ಇರಿದು, ಬಳಿಕ ಅವರ ಬಳಿಯಿದ್ದ ಸುಮಾರು 12 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ. ಜಿಲ್ಲೆಯ ಹೊರವಲಯದ ದೊಡ್ಡಿಬೀಳು ಬಳಿ ಮಧ್ಯರಾತ್ರಿ ಈ ಘಟನೆ...

40 ಯೋಧರ ಬಲಿ ಪಡೆದಿದ್ದ ಪುಲ್ವಾಮಾದಲ್ಲಿ ಮತ್ತೆ ಬಾಂಬ್ ಸ್ಫೋಟ

3 weeks ago

– ಸೈನಿಕರ ಆಹಾರದಲ್ಲಿ ವಿಷ ಬೆರೆಸಲು ಪಾಕ್ ತಂತ್ರ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ದಾಳಿ ಮಾಡಿ 40 ಭಾರತೀಯ ಯೋಧರನ್ನು ಬಲಿಪಡೆದಿದ್ದ ಸ್ಥಳದಲ್ಲಿ ಮತ್ತೆ ಬಾಂಬ್ ಸ್ಫೋಟವಾಗಿದೆ. ಪುಲ್ವಾಮಾ ಜಿಲ್ಲೆಯ ತ್ರಾಲ್‍ನಲ್ಲಿ ಸುಧಾರಿತ ಸ್ಫೋಟಕ (ಐಇಡಿ) ಬ್ಲಾಸ್ಟ್...

ಸತ್ತ ಸೋಗಿನಲ್ಲಿ ಐವರು ಯೋಧರನ್ನು ಕೊಂದ ಉಗ್ರ

3 weeks ago

ಶ್ರೀನಗರ: ಇಡೀ ದೇಶಕ್ಕೆ ದೇಶವೇ ಅಭಿನಂದನ್ ಸ್ವಾಗತಕ್ಕೆ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಆದರೆ ಕಣಿವೆ ನಾಡಿನಲ್ಲಿ ಉಗ್ರರು ತಮ್ಮ ಕುತಂತ್ರಿ ಬುದ್ಧಿ ಮುಂದುವರಿಸಿದ್ದು, ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಐವರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಉಗ್ರರು ಮತ್ತು ಸೇನಾಪಡೆಗಳ ನಡುವೆ...