Friday, 17th August 2018

Recent News

2 weeks ago

1 ಸಾವಿರ ಫೋಟೋ, 380 ವಿಡಿಯೋ – ಶಿಶುಕಾಮಿ ಭಾರತೀಯನಿಗೆ ಜೈಲು ಶಿಕ್ಷೆ!

ನ್ಯೂಯಾರ್ಕ್: ಮಕ್ಕಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ವ್ಯಕ್ತಿಯೊಬ್ಬನಿಗೆ ಅಮೆರಿಕದ ಕೋರ್ಟ್ 4 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ. ಪಿಟ್ಸ್‍ಬರ್ಗ್ ನಿವಾಸಿ 28 ವರ್ಷದ ಅಭಿಜಿತ್ ದಾಸ್, ಅಪ್ರಾಪ್ತ ಮಕ್ಕಳ 1,000 ಅಶ್ಲೀಲ ಫೋಟೋ ಮತ್ತು 380 ವಿಡಿಯೋಗಳನ್ನು ಸಂಗ್ರಹಿಸಿದ್ದನು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಫೆಡರಲ್ ಕೋರ್ಟ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 52 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಮೆರಿಕದ ಕಾನೂನು ಪ್ರಕಾರ 18 ವರ್ಷದ ಒಳಗಡೆ […]

2 weeks ago

ಖಾಸಗಿ ಬಾಹ್ಯಾಕಾಶ ಯಾನಕ್ಕೆ ಸುನಿತಾ ವಿಲಿಯಮ್ಸ್ ಆಯ್ಕೆ

ನ್ಯೂಯಾರ್ಕ್: ಅಮೆರಿಕ ಬಾಹ್ಯಕಾಶ ಸಂಸ್ಥೆ(ನಾಸಾ)ಯ ಮತ್ತೊಂದು ಗಗನಯಾತ್ರೆಯಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. 2019 ರ ಮಧ್ಯಂತರದಲ್ಲಿ ನಾಸಾವು ತನ್ನ ಮೊದಲ ವಾಣಿಜ್ಯ ಯಾತ್ರೆಯನ್ನು ಒಂಬತ್ತು ಗಗನಯಾತ್ರಿಗಳನ್ನು ಒಳಗೊಂಡ ತಂಡ ಕೈಗೊಳ್ಳಲಿದ್ದು, ಈ ತಂಡದಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಒಬ್ಬರಾಗಿದ್ದಾರೆ. ಇವರ ತಂದೆಯವರು ಮೂಲತಃ ಗುಜರಾತಿನ ಮೂಲದವರಾಗಿದ್ದಾರೆ. ಸುನಿತಾರವರು...

ತಿರುಮಲ ತಿಮಪ್ಪನಿಗೆ 13.5 ಕೋಟಿ ರೂ. ದೇಣಿಗೆ ನೀಡಿದ ಎನ್‌ಆರ್‌ಐ ಭಕ್ತರು

1 month ago

ಹೈದರಾಬಾದ್: ದೇಶದ ಶ್ರೀಮಂತ ದೇವರು ಎಂಬ ಹೆಗ್ಗಳಿಕೆ ಪಡೆದಿರುವ ತಿರುಮಲ ದೇವಾಲಯಕ್ಕೆ ಎನ್‌ಆರ್‌ಐ ಭಕ್ತರಿಬ್ಬರು ಬರೋಬ್ಬರಿ 13.5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅಮೆರಿಕದಲ್ಲಿ ವಾಸಿಸುತ್ತಿರುವ ಆಂಧ್ರಪ್ರದೇಶ ಮೂಲದ ರವಿ ಮತ್ತು ಶ್ರೀನಿವಾಸ್ ಎಂಬವರು ಟಿಟಿಡಿ ಸಮಿತಿಗೆ ಈ ಹಣವನ್ನು ಹಸ್ತಾಂತರ...

ನವಿಲು ಕುಕ್ಕಿ ಗಾಯಗೊಳಿಸಿದ್ದ ಅನಾಥ ಮಗುವಿಗೆ ಬರ್ತ್ ಡೇ ಸಂಭ್ರಮ- ಡಿಸಿ ರೋಹಿಣಿ ಸಿಂಧೂರಿ ಸಾಕ್ಷಿ

1 month ago

– ಅಮೆರಿಕಾ ವಾಸಿಯಾಗಲಿದ್ದಾಳೆ ಅನ್ವಿತಾ ಹಾಸನ: ಹೆತ್ತವರಿಂದ ದೂರವಾಗಿದ್ದ ಮಕ್ಕಳ ಹುಟ್ಟುಹಬ್ಬವನ್ನು ತವರು ಚಾರಿಟಿ ಸಂಸ್ಥೆಯೂ ವಿಜೃಂಭಣೆಯಿಂದ ಆಚರಣೆ ಮಾಡಿದ್ದು, ಇದಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಸಾಕ್ಷಿಯಾಗಿದ್ದರು. 2017 ಜುಲೈ 13ರಂದು ಜಿಟಿಜಿಟಿ ಮಳೆಯಲ್ಲಿ ಮುಳ್ಳಿನ ಪೊದೆಯಲ್ಲಿ ನವಜಾತ ಶಿಶುವೊಂದು ಅಳುವ...

2019ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಡೊನಾಲ್ಡ್ ಟ್ರಂಪ್ ಮುಖ್ಯ ಅತಿಥಿ?

1 month ago

ನವದೆಹಲಿ: ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಸರ್ಕಾರ ಆಹ್ವಾನ ನೀಡಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕಳೆದ ಏಪ್ರಿಲ್ ನಲ್ಲೇ ಭಾರತ ಅಮೆರಿಕ...

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ಕೊಲೆ- ಪತ್ತೆಗೆ ಸಹಕರಿಸಿದವರಿಗೆ ಬಂಪರ್ ಆಫರ್!

1 month ago

ವಾಷಿಂಗ್ಟನ್: ಇಲ್ಲಿನ ಕಾನ್ಸಾಸ್ ರೆಸ್ಟೋರೆಂಟ್ ನಲ್ಲಿ 25 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ದರೋಡೆ ಮಾಡಿ ಬರ್ಬರವಾಗಿ ಕೊಲೆಗೈಯಾಗಿದ್ದು, ಇದೀಗ ಆರೋಪಿಯ ಪತ್ತೆಗೆ ಸಹಕರಿಸಿದವರಿಗೆ ಬಂಪರ್ ಆಫರ್ ನೀಡಲಾಗಿದೆ. ತೆಲಂಗಾಣ ಮೂಲದ ಶರತ್ ಕೊಪ್ಪುವನ್ನು ಹತ್ಯೆಗೈದ ಆರೋಪಿಯನ್ನು ಪತ್ತೆ ಮಾಡಲು ಮಾಹಿತಿ ನೀಡಿ...

ಜಗತ್ತಿನ ಅತೀ ಮೂಕ ಕಾನೂನು ನಮ್ಮದು: ಡೊನಾಲ್ಡ್ ಟ್ರಂಪ್

2 months ago

ವಾಷಿಂಗ್ಟನ್: ದೇಶದ ವಲಸೆ ನೀತಿ ವಿರುದ್ಧದ ಪ್ರತಿಭಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇರೆ ಜಗತ್ತಿಗಿಂತ ನಮ್ಮ ಕಾನೂನು ಮೂಕ ಸ್ವರೂಪದ ಕಾನೂನು ಎಂದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅಕ್ರಮವಾಗಿ ನಮ್ಮ ರಾಷ್ಟ್ರದೊಳಗೆ ಪ್ರವೇಶಿಸುವ ಜನರನ್ನು ಮರಳಿ ಕಳುಹಿಸುವ...

ಅಮೆರಿಕದಲ್ಲಿ ಮಕ್ಕಳ ಡಾಕ್ಟರ್ – ಬೆಂಗಳೂರಿನ ಬೀದಿಗಳಲ್ಲಿ ಅನಾಥ!

2 months ago

ಬೆಂಗಳೂರು: ವಾಷಿಂಗ್ಟನ್ ನಲ್ಲಿ ಮಕ್ಕಳ ಡಾಕ್ಟರ್ ಆಗಿದ್ದ ವ್ಯಕ್ತಿಯೊಬ್ಬರು ನಗರದಲ್ಲಿ ಭಿಕ್ಷುಕನ ರೀತಿ ಬದುಕುತ್ತಿದ್ದಾರೆ. ಇದು ಎಂಥವರಿಗೂ ಆಶ್ಚರ್ಯವಾಗದೇ ಇರದು. `ನಾನು ಡಾಕ್ಟರ್ ಮೌರಿಸ್, ವಾಷಿಂಗ್ಟನ್. ಕ್ಯಾಲಿಫೋರ್ನಿಯಾದಲ್ಲಿ ಮಕ್ಕಳ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ’ ಅಂತ ಹೇಳಿಕೊಳ್ಳುವ ಈ ವ್ಯಕ್ತಿ ಶುದ್ಧ...