Tag: 10 ಗಂಟೆ ಕೆಲಸ ಅವಧಿ

  • ಕೆಲಸದ ಅವಧಿ 10 ಗಂಟೆಗೆ ಹೆಚ್ಚಿಸಲು ಒಪ್ಪದ ರಾಜ್ಯ ಸರ್ಕಾರ

    ಕೆಲಸದ ಅವಧಿ 10 ಗಂಟೆಗೆ ಹೆಚ್ಚಿಸಲು ಒಪ್ಪದ ರಾಜ್ಯ ಸರ್ಕಾರ

    ಬೆಂಗಳೂರು: 1961ರ ಕರ್ನಾಟಕ ಅಂಗಡಿ ಮತ್ತು ಸ್ಥಾಪನೆ ಕಾಯ್ದೆಗೆ ತಿದ್ದುಪಡಿ ತರುವ ಹಾಗೂ ಕಾರ್ಮಿಕರ (Workers) ಕೆಲಸದ ಅವಧಿಯನ್ನ 9 ಗಂಟೆಯಿಂದ 10 ಗಂಟೆಗೆ ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಲು ಮುಂದಾಗಿದೆ.

    ಪ್ರಸ್ತಾವನೆಗೆ ಕಾರ್ಮಿಕ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಕೇಂದ್ರ ಕಾರ್ಮಿಕ ಇಲಾಖೆಯ (Centger Labour Department) ಪ್ರಸ್ತಾವನೆಯನ್ನ ರಾಜ್ಯ ಸರ್ಕಾರ ತಿರಸ್ಕಾರ ಮಾಡಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಿನದಲ್ಲಿ 10 ಗಂಟೆ ಕೆಲಸಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡದ ಹಿನ್ನೆಲೆ ರಾಜ್ಯ ಕಾರ್ಮಿಕ ಇಲಾಖೆಯಿಂದ ಪ್ರಸ್ತಾವನೆ ತಿರಸ್ಕಾರ ಮಾಡುವ ಸಾಧ್ಯತೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ರಮ್ಯಾ – ದರ್ಶನ್ ಅಭಿಮಾನಿಗಳ ವಿರುದ್ಧ FIR

    IT Contract Workers 2

    ಪ್ರಸ್ತಾವನೆ ತಿರಸ್ಕರಿಸಲು ಕಾರಣ ಏನು?
    ಕೇಂದ್ರ ಕಾರ್ಮಿಕ ಇಲಾಖೆ ಎಲ್ಲಾ ರಾಜ್ಯಗಳಿಗೂ ಈ ಪ್ರಸ್ತಾವನೆಯನ್ನ ಕಳುಹಿಸಿದೆ. ಆದ್ರೆ ಕರ್ನಾಟಕ ಎರಡು ಕಾರಣಗಳಿಗಾಗಿ ಪ್ರಸ್ತಾವನೆಯನ್ನ ತಿರಸ್ಕರಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರವು ಸಮಾನ ನೀತಿ ಅವಕಾಶವನ್ನು ಹೊಂದಿದೆ. ಈಗಾಗಲೇ ಕಾರ್ಮಿಕರು ದಿನಕ್ಕೆ 9 ಗಂಟೆ ಮತ್ತು ವಾರದಲ್ಲಿ 48 ಗಂಟೆಗಳ ಕಾಲ ಕೆಲಸ ಮಾಡ್ತಿದ್ದಾರೆ. ಜೊತೆಗೆ ಹೆಚ್ಚುವರಿ ಅಗತ್ಯಕ್ಕನುಗುಣವಾಗಿ ಹೆಚ್ಚುವರಿ ಅವಧಿ ಕಾರ್ಯದ ನಿಬಂಧನೆ ಕೂಡ ಇದೆ. ನಿತ್ಯ 10 ಗಂಟೆ ಕೆಲಸಕ್ಕೆ ಅವಧಿಗೆ ಈಗಾಗಲೇ ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧ ಇದೆ. ಹೀಗಾಗಿ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ – ಸಾರಿಗೆ ಸಂಘಟನೆಯಿಂದ ಅನಿರ್ಧಿಷ್ಟಾವಧಿ ಉಪವಾಸ ಧರಣಿ

    ಕಾರ್ಮಿಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಕೇಂದ್ರದ ಪ್ರಸ್ತಾವನೆ ಬಂದ ನಂತರ ರಾಜ್ಯವು ತಿದ್ದುಪಡಿಯನ್ನ ತಿರಸ್ಕರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಸಂಪುಟ ಸಭೆಯಲ್ಲಿ ಸಿಎಂ ಹಾಗೂ ಸಚಿವರು ಪ್ರಸ್ತಾವನೆಯನ್ನ ವಿರೋಧಿಸಿದ್ದಾರೆ. ಆದ್ರೆ ಇನ್ನೂ ಅಧಿಕೃತವಾಗಿ ಕೇಂದ್ರಕ್ಕೆ ತಿಳಿಸಿಲ್ಲ. ಸಮಗ್ರ ಚರ್ಚೆ ಬಳಿಕ ಈ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಮಿಕ ಆಯುಕ್ತರು, ಈ ವಿಷಯದ ಕುರಿತು ಅಂತಿಮ ವರದಿಯನ್ನ ಕಾರ್ಮಿಕ ಸಚಿವರೊಂದಿಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ವಿಶ್ವ ಹುಲಿ ದಿನಾಚರಣೆ – ಚಾಮರಾಜನಗರ ಹುಲಿಗಳ ನಾಡಾಗಿದ್ದು ಹೇಗೆ?