Tag: ಹ್ಯಾರಿ ಬ್ರೂಕ್‌

  • ಕೊನೆಯವರೆಗೂ ಹೋರಾಡಿದ ರಿಂಕು – ಹೈದರಾಬಾದ್‌ಗೆ 23 ರನ್‌ಗಳ ಜಯ

    ಕೊನೆಯವರೆಗೂ ಹೋರಾಡಿದ ರಿಂಕು – ಹೈದರಾಬಾದ್‌ಗೆ 23 ರನ್‌ಗಳ ಜಯ

    ಕೋಲ್ಕತ್ತಾ: ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ (Harry Brook) ಅವರ ಸ್ಫೋಟಕ ಶತಕದಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧ 23 ರನ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 4 ವಿಕೆಟ್‌ ನಷ್ಟಕ್ಕೆ 228 ರನ್‌ ಹೊಡೆಯಿತು. 229 ರನ್‌ಗಳ ಸವಾಲು ಪಡೆದ ಕೋಲ್ಕತ್ತಾ 7 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    Nitish Rana

    ಕೋಲ್ಕತ್ತಾ 30 ರನ್‌ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ನಾಯಕ ನಿತೀಶ್‌ ರಾಣಾ (Nitish Rana) ಮತ್ತು ರಿಂಕು ಸಿಂಗ್‌ (Rinku Singh) ಸ್ಫೋಟಕ ಆಟವಾಡಿದರು. ರಾಣಾ 75 ರನ್‌(41 ಎಸೆತ, 5 ಬೌಂಡರಿ, 6 ಸಿಕ್ಸರ್‌) ಹೊಡೆದು ಔಟಾದರು. ಕೊನೆಯವರೆಗೂ ಹೋರಾಡಿದ ರಿಂಕು ಔಟಾಗದೇ 58 ರನ್‌(31 ಎಸೆತ, 4 ಬೌಂಡರಿ, 4 ಸಿಕ್ಸರ್‌) ಚಚ್ಚಿದ್ದರು.

    ಕೊನೆಯ 24 ಎಸೆತದಲ್ಲಿ ಕೋಲ್ಕತ್ತಾ ಗೆಲ್ಲಲು 70 ರನ್‌ಗಳ ಅವಶ್ಯಕತೆಯಿತ್ತು. ರಾಣಾ ಮತ್ತು ರಿಂಕು ಸಿಂಗ್‌ 6ನೇ ವಿಕೆಟಿಗೆ 39 ಎಸೆತಗಳಲ್ಲಿ 69 ರನ್‌ ಹೊಡೆದಿದ್ದರು. 17ನೇ ಓವರ್‌ನ ಮೊದಲ ಎಸೆತವನ್ನು ರಾಣಾ ಸಿಕ್ಸರ್‌ಗೆ ಅಟ್ಟಿದ್ದರೆ ಎರಡನೇ ಎಸೆತವನ್ನೂ ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ನಡೆಸಿದರು. ಆದರೆ ಕ್ಯಾಚ್‌ ಔಟಾದ ಪರಿಣಾಮ ಪಂದ್ಯ ಹೈದರಬಾದ್‌ ಕಡೆಗೆ ತಿರುಗಿತು.

    Harry Brook 2

    ಬ್ರೂಕ್‌ ಶತಕ:
    ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ ಈ ಐಪಿಎಲ್‌ (IPL 2023) ಅವೃತ್ತಿಯಲ್ಲಿ ಮೊದಲ ಶತಕ (Century) ಸಿಡಿಸಿದ್ದಾರೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ 55 ಎಸೆತಗಳಲ್ಲಿ ಔಟಾಗದೇ 100 ರನ್‌ (12 ಬೌಂಡರಿ, 3 ಸಿಕ್ಸರ್‌) ಚಚ್ಚಿದ್ದರು. ಇದು ಈ ಐಪಿಎಲ್‌ನಲ್ಲಿ ತಂಡವೊಂದರ ಅತಿ ಹೆಚ್ಚು ಸ್ಕೋರ್‌ ಆಗಿರುವುದು ವಿಶೇಷ.

    ಮೊದಲ 32 ಎಸೆತಗಳಲ್ಲಿ 50 ರನ್‌ ಬಂದರೆ ನಂತರ 33 ಎಸೆತದಲ್ಲಿ ಬ್ರೂಕ್‌ 50 ರನ್‌ ಚಚ್ಚಿದ್ದಾರೆ. ಹೈದರಾಬಾದ್‌ ಪರ ನಾಯಕ ಐಡೆನ್ ಮಾರ್ಕ್ರಾಮ್ 50 ರನ್‌(26 ಎಸೆತ, 2 ಬೌಂಡರಿ, 5 ಸಿಕ್ಸರ್‌), ಅಭಿಷೇಕ್‌ ಶರ್ಮಾ 32 ರನ್‌ (17 ಎಸೆತ, 3 ಬೌಂಡರಿ, 2 ಸಿಕ್ಸರ್)‌, ಕ್ಲಾಸೆನ್‌ ಔಟಾಗದೇ 1 6 ರನ್‌ (6 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದರು. ಇತರೇ ರೂಪದಲ್ಲಿ 12 ರನ್‌ (1 ನೋಬಾಲ್‌, 11 ವೈಡ್‌) ಬಂದಿತ್ತು.

    Harry Brook 1

    ರನ್‌ ಏರಿದ್ದು ಹೇಗೆ?
    50 ರನ್‌ – 26 ಎಸೆತ
    100 ರನ್‌ – 66 ಎಸೆತ
    150 ರನ್‌ – 59 ಎಸೆತ
    200 ರನ್‌ – 109 ಎಸೆತ
    228 ರನ್‌ – 120 ಎಸೆತ

  • ಐಪಿಎಲ್‌ನಲ್ಲಿ ಮೊದಲ ಶತಕ – ಕೋಲ್ಕತ್ತಾ ಬೌಲರ್‌ಗಳನ್ನು ಚೆಂಡಾಡಿದ ಬ್ರೂಕ್‌

    ಐಪಿಎಲ್‌ನಲ್ಲಿ ಮೊದಲ ಶತಕ – ಕೋಲ್ಕತ್ತಾ ಬೌಲರ್‌ಗಳನ್ನು ಚೆಂಡಾಡಿದ ಬ್ರೂಕ್‌

    ಕೋಲ್ಕತ್ತಾ: ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡದ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ (Harry Brook) ಈ ಐಪಿಎಲ್‌ (IPL 2023) ಅವೃತ್ತಿಯಲ್ಲಿ ಮೊದಲ ಶತಕ (Century) ಸಿಡಿಸಿದ್ದಾರೆ.

    ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧದ ಪಂದ್ಯದಲ್ಲಿ 55 ಎಸೆತಗಳಲ್ಲಿ ಔಟಾಗದೇ 100 ರನ್‌ (12 ಬೌಂಡರಿ, 3 ಸಿಕ್ಸರ್‌) ಚಚ್ಚಿದ್ದಾರೆ. ಪರಿಣಾಮ ಹೈದರಾಬಾದ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 228 ರನ್‌ ಗಳಿಸಿದೆ. ಇದು ಈ ಐಪಿಎಲ್‌ನಲ್ಲಿ ತಂಡವೊಂದರ ಟಾಪ್‌ ಸ್ಕೋರ್‌ ಆಗಿರುವುದು ವಿಶೇಷ.

    Harry Brook 1

    ಮೊದಲ 32 ಎಸೆತಗಳಲ್ಲಿ 50 ರನ್‌ ಬಂದರೆ ನಂತರ 33 ಎಸೆತದಲ್ಲಿ ಬ್ರೂಕ್‌ 50 ರನ್‌ ಚಚ್ಚಿದ್ದಾರೆ. ಹೈದರಾಬಾದ್‌ ಪರ ನಾಯಕ ಐಡೆನ್ ಮಾರ್ಕ್ರಾಮ್ 50 ರನ್‌(26 ಎಸೆತ, 2 ಬೌಂಡರಿ, 5 ಸಿಕ್ಸರ್‌), ಅಭಿಷೇಕ್‌ ಶರ್ಮಾ 32 ರನ್‌(17 ಎಸೆತ, 3 ಬೌಂಡರಿ, 2 ಸಿಕ್ಸರ್)‌, ಕ್ಲಾಸೆನ್‌ ಔಟಾಗದೇ 1 6 ರನ್‌( 6 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದರು. ಇತರೇ ರೂಪದಲ್ಲಿ 12 ರನ್‌ (1 ನೋಬಾಲ್‌, 11 ವೈಡ್‌) ಬಂದಿತ್ತು.

    ರನ್‌ ಏರಿದ್ದು ಹೇಗೆ?
    50 ರನ್‌ – 26 ಎಸೆತ
    100 ರನ್‌ – 66 ಎಸೆತ
    150 ರನ್‌ – 59 ಎಸೆತ
    200 ರನ್‌ – 109 ಎಸೆತ
    228 ರನ್‌ – 120 ಎಸೆತ

  • ಕೋಟಿ ಕೋಟಿ ಸುರಿದು ಖರೀದಿಸಿದ ಆಟಗಾರರು ಬ್ಯಾಟಿಂಗ್‌ನಲ್ಲಿ ಫ್ಲಾಪ್‌ – ಮಾಲೀಕರಿಗೆ ನಿರಾಸೆ

    ಕೋಟಿ ಕೋಟಿ ಸುರಿದು ಖರೀದಿಸಿದ ಆಟಗಾರರು ಬ್ಯಾಟಿಂಗ್‌ನಲ್ಲಿ ಫ್ಲಾಪ್‌ – ಮಾಲೀಕರಿಗೆ ನಿರಾಸೆ

    ಲಕ್ನೋ: ಇಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lacknow Super Gaints) ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ನಡುವೆ ನಡೆದ ಪಂದ್ಯದಲ್ಲಿ ಲಕ್ನೋ ತಂಡ 5 ವಿಕೆಟ್‌ಗಳ ಜಯ ಸಾಧಿಸಿತು.

    121 ಅತ್ಯಲ್ಪ ರನ್‌ ಗಳಿಸಿದ್ದ ಹೈದರಾಬಾದ್‌ ತಂಡ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಹಾಗೂ ಬೌಲರ್‌ಗಳ ಕಳಪೆ ಪ್ರದರ್ಶನದಿಂದ 2ನೇ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿತು. ಇದನ್ನೂ ಓದಿ: IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    ಲಕ್ನೋ ಸೂಪರ್‌ ಜೈಂಟ್ಸ್ ತಂಡ ಚೇಸಿಂಗ್‌ ಆರಂಭಿಸುತ್ತಿದ್ದಂತೆ ಬೌಲಿಂಗ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ಹೈದರಾಬಾದ್‌ ಪವರ್‌ ಪ್ಲೇ ನಂತರ ರನ್‌ ಬಿಟ್ಟುಕೊಟ್ಟಿತು. ಕಳೆದ ಎರಡೂ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಆರಂಭಿಕ ಕೇಲ್‌ ಮೇಯರ್ಸ್‌ 13 ರನ್‌ಗಳಿಗೆ ಔಟಾಗುತ್ತಿದ್ದಂತೆ ಹೈದರಾಬಾದ್‌ ತಂಡದ ಮಾಲೀಕರಾದ ಕಾವ್ಯ ಮಾರನ್‌ (Kavya Maran) ಹುಚ್ಚೆದ್ದು ಕುಣಿದಿದ್ದರು. ಕೊನೆಯಲ್ಲಿ ತಂಡದ ಸೋಲಿನಿಂದ ನಿರಾಸೆ ಅನುಭವಿಸಿದರು. ಈ ಕುರಿತ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    Kavya Maran

    ಕೈಕೋಟ್ಟ ದುಬಾರಿ ಆಟಗಾರರು: ಇನ್ನೂ ಐಪಿಎಲ್‌ ಹರಾಜಿನಲ್ಲಿ ಕೋಟಿ ಕೋಟಿ ಹಣ ಸುರಿದು ಬಿಕರಿ ಮಾಡಿದ ಹೈದರಾಬಾದ್‌ ತಂಡದ ಆಟಗಾರರು ಕಳೆದ 2 ಪಂದ್ಯಗಳಲ್ಲೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಇದನ್ನೂ ಓದಿ: ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    Lacknow Super Gaints

    ಇಂಗ್ಲೆಂಡ್‌ ತಂಡದಲ್ಲಿ ಟೆಸ್ಟ್‌, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಹ್ಯಾರಿ ಬ್ರೂಕ್‌ (Harry Brook) ಅವರನ್ನ ಹೈದರಾಬಾದ್‌ ತಂಡ 13.25 ಕೋಟಿ ರೂ.ಗೆ ಖರೀದಿಸಿತ್ತು. ಅದೇ ರೀತಿ ರಣಜಿಯಲ್ಲಿ ಏಕಾಂಗಿ ಹೋರಾಟ ನಡೆಸಿ ಕರ್ನಾಟಕ ತಂಡವನ್ನ ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ್ದ ಮಯಾಂಕ್‌ ಅಗರ್ವಾಲ್‌ (Mayank Agarwal) ಅವರನ್ನ 8.25 ಕೋಟಿ ರೂ. ನೀಡಿ ಖರೀದಿಸಿದೆ. ಟೀಂ ಇಂಡಿಯಾ ಆಟಗಾರರಾದ ರಾಹುಲ್‌ ತ್ರಿಪಾಠಿ (Rahul Tripathi) ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನ ಕ್ರಮವಾಗಿ 8.50 ಕೋಟಿ ರೂ., 8.75 ಕೋಟಿ ರೂ. ನೀಡಿ ಖರೀದಿಸಿದೆ. ತಂಡಕ್ಕೆ ದುಬಾರಿ ಬೆಲೆಗೆ ಬಿಕರಿಯಾದ ಆಟಗಾರರ ಕಳಪೆ ಪ್ರದರ್ಶನದಿಂದ ತಂಡ ಸೋಲನುಭವಿಸಿದ್ದು, ಮಾಲೀಕರೂ ನಿರಾಸೆ ಹೊಂದಿದ್ದಾರೆ.

    SRHvsLSG

    ಕಳೆದ ಎರಡೂ ಪದ್ಯಗಳಲ್ಲೂ ಹೈದರಾಬಾದ್‌ ತಂಡ ಬೌಲಿಂಗ್‌ನಲ್ಲಿ ಸ್ವಲ್ಪ ಹಿಡಿತ ಸಾಧಿಸಿದರೂ, ಬ್ಯಾಟಿಂಗ್‌ನಲ್ಲಿ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಎಡವಿದೆ. ಮೊದಲ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 131 ರನ್‌ ಗಳಿಸಿ 72 ರನ್‌ಗಳ ಅಂತರದಲ್ಲಿ ಸೋತರೆ, 2ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 121ರನ್‌ ಗಳಿಸಿ 5 ವಿಕೆಟ್‌ಗಳ ಹೀನಾಯ ಸೋಲುಕಂಡಿದೆ. ಮುಂದಿನ ಪಂದ್ಯಗಳಲ್ಲಿ ತಂಡ ಗೆಲುವಿನ ತಂತ್ರ ಹೇಗೆ ರೂಪಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ.

  • IPL 2023: ಜೋಸ್, ಜೈಸ್ವಾಲ್‌, ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ

    IPL 2023: ಜೋಸ್, ಜೈಸ್ವಾಲ್‌, ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ

    ಹೈದರಾಬಾದ್‌: ಜೋಸ್ ಬಟ್ಲರ್ (Jos Buttler), ಯಶಸ್ವೀ ಜೈಸ್ವಾಲ್ (Yashasvi Jaiswal) ಹಾಗೂ ಸಂಜು ಸ್ಯಾಮ್ಸನ್‌ (Sanju Samson) ಅವರ ಸಿಡಿಲಬ್ಬರದ ಅರ್ಧಶತಕ ಹಾಗೂ ಯಜುವೇಂದ್ರ ಚಾಹಲ್‌ ಸ್ಪಿನ್‌ ಬೌಲಿಂಗ್‌ ದಾಳಿ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    IPL 2023 RR

    ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ (Rajasthan Royals) 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಪೇರಿಸಿತ್ತು. 204 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಹೈದರಾಬಾದ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 131 ರನ್‌ ಗಳಿಸಿ ಹೀನಾಯ ಸೋಲನುಭವಿಸಿತು.

    IPL 2023 SRHvsRR 5

    ಬೌಲಿಂಗ್‌ ವಿಭಾಗದಲ್ಲಿ ಕಳಪೆ ಪ್ರದರ್ಶನ ತೋರಿ, ರನ್‌ ಚಚ್ಚಿಸಿಕೊಂಡ ಹೈದರಾಬಾದ್‌ ಆಟಗಾರರು ಬ್ಯಾಟಿಂಗ್‌ ವಿಭಾಗದಲ್ಲೂ ಕಳಪೆ ಪ್ರದರ್ಶನ ನೀಡಿದರು. ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ಆರಂಭದಲ್ಲೇ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಮಯಾಂಕ್‌ ಅಗರ್ವಾಲ್‌ (Mayank Agarwal) 23 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 27 ರನ್‌ ಗಳಿಸಿದರೆ, ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಹ್ರಾರಿ ಬ್ರೂಕ್‌ (Harry Brook) 21 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 13 ರನ್‌ ಗಳಿಸಿ ಔಟಾದರು. ಇದರಿಂದ ಪವರ್‌ ಪ್ಲೇ ಮುಗಿಯುವಷ್ಟರಲ್ಲೇ ಹೈದರಾಬಾದ್‌ ಕೇವಲ 30 ರನ್‌ ಗಳಿಸಿ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

    IPL 2023 SRHvsRR 4

    ನಂತರ ಕಣಕ್ಕಿಳಿದವರು ರಾಜಸ್ಥಾನ್‌ ಬೌಲರ್‌ಗಳ ದಾಳಿಗೆ ದಂಗಾದರು. ಆದಿಲ್‌ ರಶೀದ್‌ 18 ರನ್‌, ಗ್ಲೇನ್‌ ಫಿಲಿಪ್ಸ್‌ 8 ರನ್‌, ನಾಯಕ ಭುವನೇಶ್ವರ್‌ ಕುಮಾರ್‌ 6 ರನ್‌, ವಾಷಿಂಗ್ಟನ್‌ ಸುಂದರ್‌ 1 ರನ್‌ ಗಳಿಸಿದರೆ, ಆರಂಭಿಕ ಅಭಿಷೇಕ್‌ ಶರ್ಮಾ, ರಾಹುಲ್‌ ತ್ರಿಪಾಠಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. ಇದರಿಂದ ತಂಡವು 100 ರನ್‌ಗಳ ಗಡಿ ತಲುಪುವುದೇ ಕಷ್ಟವಾಗಿತ್ತು. ಆದರೆ ಕೊನೆಯಲ್ಲಿ ಉಮ್ರಾನ್‌ ಮಲಿಕ್‌, ಅಬ್ದುಲ್‌ ಸಮದ್‌ ಸಿಕ್ಸರ್‌, ಬೌಂಡರಿ ಚಚ್ಚಿ ತಂಡದ ಮೊತ್ತ 130ರ ಗಡಿ ದಾಟಿಸಿದರು. ಸಮದ್ 32 ರನ್‌ ಗಳಿಸಿದರೆ, ಮಲಿಕ್‌‌ ಕೇವಲ 8 ಎಸೆತಗಳಲ್ಲಿ 19 ರನ್‌ ಗಳಿಸಿ ತಂಡಕ್ಕೆ ನೆರವಾದರು.

    IPL 2023 SANJU 2

    ಚಾಹಲ್‌ ಸ್ಪಿನ್‌ ಕಮಾಲ್:‌ ರಾಜಸ್ಥಾನ್‌ ರಾಯಲ್ಸ್‌ ಪರ ಬೌಲಿಂಗ್‌ ಕಮಾಲ್‌ ಮಾಡಿದ ಯಜುವೇಂದ್ರ ಚಾಹಲ್‌ (Yuzvendra Chahal) 4 ಓವರ್‌ಗಳಲ್ಲಿ ಕೇವಲ 17 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌ 4 ಓವರ್‌ಗಳಲ್ಲಿ 21 ರನ್‌ ನೀಡಿ 2 ವಿಕೆಟ್‌ ಪಡೆದರು. ಜೇಸನ್‌ ಹೋಲ್ಡರ್‌, ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    IPL 2023 SRHvsRR 6

    ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌: ಇನ್ನೂ ಕಳೆದ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಜೋಸ್ ಬಟ್ಲರ್ ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಬೆಂಕಿ ಬ್ಯಾಟಿಂಗ್‌ ಮಾಡಿ, ಫಾರ್ಮ್ ಮುಂದುವರಿಸಿದರು. ಆರಂಭದಲ್ಲೇ ಅಬ್ಬರಿಸಿದ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳನ್ನು ಚೆಂಡಾಡಿದರು. ಇದರಿಂದಾಗಿ ರಾಜಸ್ಥಾನ್‌ ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಭರ್ಜರಿ 85 ರನ್‌ ಗಳಿಸಿತ್ತು.

    ಜೋಸ್ ಬಟ್ಲರ್ ಕೇವಲ 22 ಎಸೆತಗಳಲ್ಲಿ 54 ರನ್ (7 ಬೌಂಡರಿ, 3 ಸಿಕ್ಸರ್) ಗಳಿಸಿದರು. ಇದರೊಂದಿಗೆ ಪವರ್ ಪ್ಲೇನಲ್ಲಿ 3 ಅರ್ಧಶತಕ ಗಳಿಸುವ ಮೂಲಕ ಕ್ರಿಸ್‌ಗೇಲ್ ಸಾಧನೆಯನ್ನು ಜೋಸ್ ಬಟ್ಲರ್ ಸರಿಗಟ್ಟಿದರು. ಪವರ್ ಪ್ಲೇನಲ್ಲಿ 6 ಅರ್ಧಶತಕ ಗಳಿಸಿರುವ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    IPL 2023 JOS

    ಇನ್ನೂ ಜೋಸ್ ಬಟ್ಲರ್ ಔಟಾಗುತ್ತಿದ್ದಂತೆ ಜೊತೆಗೂಡಿದ ಸಂಜು ಸ್ಯಾಮ್ಸನ್‌ ಹಾಗೂ ಯಶಸ್ವೀ ಜೈಸ್ವಾಲ್ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದರು. ಯಶಸ್ವೀ ಜೈಸ್ವಾಲ್ 37 ಎಸೆತಗಳಲ್ಲಿ 9 ಬೌಂಡರಿ ಸಹಿತ 37 ರನ್ ಗಳಿಸಿದರೆ, ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ನಾಯಕ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲೇ 55 ರನ್ (3 ಬೌಂಡರಿ, 4 ಸಿಕ್ಸರ್) ಚಚ್ಚಿದರು. ನಂತರ ಬಂದ ದೇವದತ್ ಪಡಿಕ್ಕಲ್ ಕೇವಲ 2 ರನ್ ಗಳಿಸಿ ಔಟಾದರೆ, ರಿಯಾನ್ ಪರಾಗ್ ಕೂಡ 7 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು.

    ಕೊನೆಯಲ್ಲಿ ಶಿಮ್ರಾನ್ ಹೆಟ್ಮೇರ್ 16 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರೆ, ಅಶ್ವಿನ್ ಅಜೇಯ 1 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್‌ 203 ರನ್ ಗಳಿಸಿತ್ತು.

    IPL 2023 SRHvsRR 2

    ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಫಜಲಕ್ ಫಾರ್‍ಹೂಕಿ ಮತ್ತು ಟಿ. ನಟರಾಜನ್ ತಲಾ 2 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ ಒಂದು ವಿಕೆಟ್ ಪಡೆದು ಮಿಂಚಿದರು.