Tag: ಹೋಮ್ ಗಾರ್ಡ್

  • ಹೋಮ್ ಗಾರ್ಡ್ ಮೇಲೆ ಪಿಎಸ್‍ಐ ದಬ್ಬಾಳಿಕೆ – ಕೆಂಬಾವಿ ಠಾಣೆಯಲ್ಲಿ ಗುಲಾಮ ಪದ್ಧತಿ

    ಹೋಮ್ ಗಾರ್ಡ್ ಮೇಲೆ ಪಿಎಸ್‍ಐ ದಬ್ಬಾಳಿಕೆ – ಕೆಂಬಾವಿ ಠಾಣೆಯಲ್ಲಿ ಗುಲಾಮ ಪದ್ಧತಿ

    – ವರ್ಕಿಂಗ್ ಟೈಮ್‍ನಲ್ಲಿ ಹೋಮ್ ಗಾರ್ಡ್‍ನಿಂದ ಕಾರು ಕ್ಲೀನ್

    ಯಾದಗಿರಿ: ಕೆಂಬಾವಿ ಠಾಣೆಯ ವರ್ಕಿಂಗ್ ಟೈಮ್ ನಲ್ಲಿ ಹೋಮ್ ಗಾರ್ಡ್ ಕೈಯಲ್ಲಿ ಖಾಸಗಿ ವಾಹನ ಕ್ಲೀನ್ ಮಾಡಿಸಿ ಪಿಎಸ್‍ಐ ದಬ್ಬಾಳಿಕೆ ಮೆರೆದಿದ್ದಾರೆ. ಠಾಣೆಯ ಪಿಎಸ್‍ಐ ಗಜಾನನ ಹೋಮ್ ಗಾರ್ಡ್ ಕೈಯಲ್ಲಿ ತಮ್ಮ ಖಾಸಗಿ ಕಾರನ್ನು ಕ್ಲೀನ್ ಮಾಡಿಸಿಕೊಂಡಿದ್ದಾರೆ.

    Yadagiri Kembavi 2 medium

    ಬಂದೋಬಸ್ತ್ ಡ್ಯೂಟಿಗೆ ಬಂದ ಹೋಮ್ ಗಾರ್ಡ್ ಸಮವಸ್ತ್ರ ಕಳಚಿ ಠಾಣೆಯ ಮೈದಾನದಲ್ಲಿ ಪಿಎಸ್‍ಐ ಗಜಾನನ ಕಾರನ್ನು ಕ್ಲೀನ್ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಕೆಂಬಾವಿ ಪೊಲೀಸ್ ಠಾಣೆ ಇದೆ.

    Yadagiri Kembavi 3 medium

    ಪಿಎಸ್‍ಐ ವರ್ತನೆಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿತ್ತಿದ್ದು, ಕಾನೂನು ಕರ್ತವ್ಯ ನಿರ್ವಹಿಸುವವರು ಎಲ್ಲರೂ ಒಂದೇ. ಆದರೆ ಯಾದಗಿರಿ ಪೊಲೀಸ್ ಇಲಾಖೆಯಲ್ಲಿ ಮಾತ್ರ ಹಿರಿಯ ಅಧಿಕಾರಿಗಳು, ಕೆಳ ಹಂತದ ಸಿಬ್ಬಂದಿಯನ್ನು ಗುಲಾಮರಂತೆ ಕಾಣುತ್ತಿರುವುದು ಬ್ರಿಟಿಷ್ ಅಧಿಕಾರಿಗಳ ದರ್ಪವನ್ನು ನೆನಪು ಮಾಡುತ್ತಿದೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಶೂನ್ಯ, ಸಿನಿಮಾದಂತೆಯೇ ಸಂಸದೆಯಾಗಿ ಸುಮಲತಾ ನಟನೆ : ಶಿವರಾಮೇಗೌಡ

  • ಇಬ್ಬರು ಮಹಿಳಾ ಹೋಮ್‍ಗಾರ್ಡ್‍ಗಳಿಗೆ ಕೊರೊನಾ ಸೋಂಕು?

    ಇಬ್ಬರು ಮಹಿಳಾ ಹೋಮ್‍ಗಾರ್ಡ್‍ಗಳಿಗೆ ಕೊರೊನಾ ಸೋಂಕು?

    ಹುಬ್ಬಳ್ಳಿ: ನಗರದ ಇಬ್ಬರು ಮಹಿಳಾ ಹೋಮ್ ಗಾರ್ಡ್‍ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿದಿದ್ದು, ಈ ಮೂಲಕ ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ.

    ಕಳೆದ ವಾರ ಈ ಇಬ್ಬರು ಹೋಮ್ ಗಾರ್ಡ್‍ಗಳನ್ನು ಹೋಮ್ ಕ್ವಾರಂಟೈನಲ್ಲಿರಲು ಸೂಚಿಸಲಾಗಿತ್ತು. ಇದೀಗ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಮತ್ತೆ ಇಬ್ಬರು ಕೊರೋನಾ ವಾರಿಯರ್ಸ್‍ಗೆ ಕೊರೊನಾ ದೃಢಪಟ್ಟಂತಾಗಿದೆ.

    CORONA VIRUS 1 1 2

    ಒಬ್ಬರು ಹಳೇಹುಬ್ಬಳ್ಳಿ ನಿವಾಸಿ, ಇನ್ನೊಬ್ಬರು ಗ್ರಾಮೀಣ ಪ್ರದೇಶದವರೆಂದು ಹೇಳಲಾಗಿದೆ. ಇವರು ಕೆಲಸ ಮಾಡುತ್ತಿರುವ ಠಾಣೆ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ. ಇವರಿಬ್ಬರನ್ನು ಇಂದು ರಾತ್ರಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಳೆಯ ಬುಲಿಟಿನ್ ನಲ್ಲಿ ಅಧಿಕೃತವಾಗಿ ಪ್ರಕಟವಾಗಲಿದೆ.

  • ಕೊರೊನಾ ವಾರಿಯರ್ಸ್‍ಗೆ ಶ್ರೀ ಸಾಯಿ ಫೌಂಡೇಶನ್ ನೆರವು

    ಕೊರೊನಾ ವಾರಿಯರ್ಸ್‍ಗೆ ಶ್ರೀ ಸಾಯಿ ಫೌಂಡೇಶನ್ ನೆರವು

    ಬೆಂಗಳೂರು: ಸತತ ಎರಡು ತಿಂಗಳಿನಿಂದ ಹಗಲು ಇರುಳೆನ್ನದೆ ಮನೆ, ಮಕ್ಕಳು, ಕುಟುಂಬ ಬಿಟ್ಟು ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಹೋಮ್ ಗಾರ್ಡ್ ಸಿಬ್ಬಂದಿಗೆ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯಲ್ಲಿ ಶ್ರೀ ಸಾಯಿ ಫೌಂಡೇಶನ್ ಸಂಸ್ಥಾಪಕ ಬಿ. ಸುರೇಶ್ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

    nml food kit 1

    ಪೀಣ್ಯ, ಬಾಗಲಗುಂಟೆ ಹಾಗೂ ಪೀಣ್ಯ ಸಂಚಾರಿಯ ಹೋಮ್ ಗಾರ್ಡ್ ಸಿಬ್ಬಂದಿಗೆ ಆಹಾರದ ದಿನಸಿ ಕಿಟ್ ನೀಡಿ ಶ್ರೀ ಸಾಯಿ ಫೌಂಡೇಶನ್ ನೆರವಿಗೆ ದಾವಿಸಿದ್ದಾರೆ. ಈ ವೇಳೆ ಮಾತನಾಡಿದ ಫೌಂಡೇಶನ್ ಸಂಸ್ಥಾಪಕ ಬಿ.ಸುರೇಶ್, ಈ ಕೊರೊನಾ ವೈರಸ್ ಮಹಾಮಾರಿ ಸಾಕಷ್ಟು ರೀತಿಯಲ್ಲಿ ನಮ್ಮ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆತಂಕ ಸೃಷ್ಟಿಮಾಡುತ್ತಲೇ ಇದೆ. ಲಾಕ್‍ಡೌನ್ ವೇಳೆ ಸರ್ಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮದೇ ರೀತಿಯಲ್ಲಿ ಕೆಲಸ ನಿರ್ವಹಿಸಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

    nml food kit 2

    ಪೊಲೀಸ್ ಇಲಾಖೆಯ ಜೊತೆಗೆ ಹೋಮ್ ಗಾರ್ಡ್ ಸಿಬ್ಬಂದಿ ಸಹ ತಮ್ಮ ಕಾರ್ಯವನ್ನ ಈ ರಾಜ್ಯದ ಜನತೆಗೆ ನೀಡಿದ್ದು, ಅವರ ಕುಟುಂಬಕ್ಕೆ ನಮ್ಮ ಫೌಂಡೇಶನ್ ವತಿಯಿಂದ ಸಣ್ಣ ಪ್ರಮಾಣದ ಸಹಾಯ ಮಾಡುವ ಉದ್ದೇಶದಿಂದ ದಿನಸಿ ಕಿಟ್ ನೀಡಿದ್ದು ಸಂತಸ ತಂದಿದೆ ಬಿ.ಸುರೇಶ್ ಎಂದರು. ಈ ವೇಳೆ ಪೀಣ್ಯ ಸಂಚಾರಿ ಪೊಲೀಸ್ ಸಿಪಿಐ ರಾಜು, ಶ್ರೀ ಸಾಯಿ ಫೌಂಡೇಶನ್‍ನ ಬಿ.ಸುರೇಶ್, ಕೃಷ್ಣ ಮತ್ತಿತರು ಉಪಸ್ಥಿತರಿದ್ದರು.

  • ಡ್ಯೂಟಿ ಫಸ್ಟ್, ಮದ್ವೆ ನೆಕ್ಸ್ಟ್ – ಇಬ್ಬರು ಮಹಿಳಾ ಪೊಲೀಸರಿಂದ ಮದ್ವೆ ಮುಂದೂಡಿಕೆ

    ಡ್ಯೂಟಿ ಫಸ್ಟ್, ಮದ್ವೆ ನೆಕ್ಸ್ಟ್ – ಇಬ್ಬರು ಮಹಿಳಾ ಪೊಲೀಸರಿಂದ ಮದ್ವೆ ಮುಂದೂಡಿಕೆ

    ಭುವನೇಶ್ವರ: ಕೊರೊನಾದಿಂದ ಇಡೀ ದೇಶವೇ ಭಯಭೀತವಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಪೊಲೀಸರು ತಮ್ಮ ಕುಟುಂಬದವರಿಂದ ದೂರ ಉಳಿದು ಜನರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಒಡಿಶಾದ ಇಬ್ಬರು ಮಹಿಳಾ ಪೊಲೀಸರು ಕೊರೊನಾ ವೈರಸ್ ಹೋರಾಟಕ್ಕಾಗಿ ತಮ್ಮ ಮದುವೆಯನ್ನೇ ಮುಂದೂಡಿಕೆ ಮಾಡಿದ್ದಾರೆ.

    ಕಾನ್‍ಸ್ಟೇಬಲ್ ಸುನೀತಾ ಅಧಾ ಮತ್ತು ಮಹಿಳಾ ಹೋಮ್ ಗಾರ್ಡ್ ತಿಲೋಟಮ್ಮ ಮೆಹರ್ ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.

    ಕೊರೊನಾ ವೈರಸ್ ಕರ್ತವ್ಯದಿಂದ ಮಹಿಳಾ ಕಾನ್‍ಸ್ಟೇಬಲ್ ಮತ್ತು ಹೋಮ್ ಗಾರ್ಡ್ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ಮೂಲಕ ಇಬ್ಬರು ಮಹಿಳಾ ಪೊಲೀಸರು ಕರ್ತವ್ಯಕ್ಕಾಗಿ ತಮ್ಮ ವೈಯಕ್ತಿಕ ಸಂತೋಷವನ್ನು ತ್ಯಾಗ ಮಾಡಿದ್ದಾರೆ ಎಂದು ಒಡಿಶಾ ಡಿಜಿಪಿ ಅಭಯ್ ಅವರನ್ನು ಶ್ಲಾಘಿಸಿದ್ದಾರೆ.

    ಇಬ್ಬರು ತಮ್ಮ ತಮ್ಮ ಮದುವೆಗಾಗಿ ರಜೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ವಾರ ಜಿಲ್ಲೆಯಲ್ಲಿ ಕನಿಷ್ಠ ಮೂರು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಹೀಗಾಗಿ ಇಬ್ಬರೂ ತಮ್ಮ ಮದುವೆಯನ್ನು ಮೂಂದೂಡುವ ಮೂಲಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಡಿಜಿಪಿ ಅಭಯ್, “ಕಾನ್‍ಸ್ಟೇಬಲ್ ಸುನೀತಾ ಅಧಾ ಅವರ ಮದುವೆ ಏಪ್ರಿಲ್ 25 ರಂದು ನಿಶ್ಚಯವಾಗಿತ್ತು. ಆದರೆ ಒಡಿಶಾದ ಬಿರ್ಮಿತ್ರಪುರ ಪ್ರದೇಶದಲ್ಲಿ ಡ್ಯೂಟಿ ಮಾಡುವ ಮೂಲಕ ತಮ್ಮ ಮದುವೆಯನ್ನು ಮುಂದೂಡಿದ್ದಾರೆ” ಎಂದು ಹೇಳಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ, “ಮಹಿಳಾ ಹೋಮ್ ಗಾರ್ಡ್ ತಿಲೋಟಮ್ಮ ಮೆಹರ್ ಅವರ ಮದುವೆ ಏಪ್ರಿಲ್ 12 ರಂದು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಕರ್ತವ್ಯಕ್ಕಾಗಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ಮೂಲಕ ಇಬ್ಬರು ಮಹಿಳಾ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ” ಎಂದು ಡಿಜಿಪಿ ಅಭಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರುದೂರ ಹೊತ್ತೊಯ್ದು ಬಿಟ್ರು

    ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರುದೂರ ಹೊತ್ತೊಯ್ದು ಬಿಟ್ರು

    ಕಾರವಾರ: ನಿಯಮವನ್ನು ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಹೋಮ್ ಗಾರ್ಡಿಗೆ ಪ್ರವಾಸಿಗರು ಕಾರಿನಿಂದ ಡಿಕ್ಕಿ ಹೊಡೆದು, ಮಾರುದೂರ ಹೊತ್ತೊಯ್ದು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಚಿದಾನಂದ್ ಅಪಘಾತದಲ್ಲಿ ಗಾಯಗೊಂಡ ಹೋಮ್ ಗಾರ್ಡ್. ಕುಮಟಾ ತಾಲೂಕಿನ ಗೋಕರ್ಣದ ಕಡಲತೀರದ ರಸ್ತೆಯಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    KWR Car A

    ಪ್ರವಾಸಿಗರ ಕಾರು ಗೋಕರ್ಣದ ಕಡಲತೀರದ ಸಮೀಪದ ಒನ್ ವೇಯಲ್ಲಿ ಬರುತ್ತಿತ್ತು. ಅದನ್ನು ನೋಡಿದ ಚಿದಾನಂದ್ ಕಾರನ್ನು ತಡೆಯಲು ಮುಂದಾಗಿದ್ದರು. ಆದರೆ ಚಾಲಕ ಕಾರು ನಿಲ್ಲಿಸದೇ ಚಿದಾನಂದ್ ಅವರಿಗೆ ಡಿಕ್ಕಿ ಹೊಡೆದು, ಸ್ವಲ್ಪ ದೂರದವರೆಗೆ ಹೊತ್ತೊಯ್ದು ಬಿಟ್ಟಿದ್ದಾನೆ. ಅದೃಷ್ಟವಶಾತ್ ಚಿದಾನಂದ್ ಅವರಿಗೆ ಸಣ್ಣಪಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ದೃಶ್ಯವು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದುರಾದೃಷ್ಟವಶಾತ್ ಘಟನೆ ಸಂಬಂಧ ಪ್ರಕರಣ ಸಹ ದಾಖಲಾಗಿಲ್ಲ. ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮುಖ್ಯಪೇದೆಯಿಂದ್ಲೇ ಮಹಿಳಾ ಹೋಮ್ ಗಾರ್ಡ್ ಮೇಲೆ ಅತ್ಯಾಚಾರ

    ಮುಖ್ಯಪೇದೆಯಿಂದ್ಲೇ ಮಹಿಳಾ ಹೋಮ್ ಗಾರ್ಡ್ ಮೇಲೆ ಅತ್ಯಾಚಾರ

    -ರವಿ ಚನ್ನಣ್ಣನವರ್ ನಿಂದ ರಿವಾರ್ಡ್ ಪಡೆದಿದ್ದ ಪೇದೆಯಿಂದ ಕೃತ್ಯ

    ಬೆಂಗಳೂರು: ಖಡಕ್ ಪೊಲೀಸ್ ಅಧಿಕಾರಿ ರವಿ ಚನ್ನಣ್ಣನವರ್ ಅವರಿಂದ ರಿವಾರ್ಡ್ ಪಡೆದಿದ್ದ ಮುಖ್ಯಪೇದೆಯೊಬ್ಬ ಮಹಿಳಾ ಹೋಮ್ ಗಾರ್ಡ್ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ನಗರದ ನಂದಿನಿ ಲೇಔಟ್ ಠಾಣೆಯಲ್ಲಿ ನಡೆದಿದೆ.

    ಜ್ಞಾನ ಭಾರತಿ ಪೊಲೀಸ್ ಠಾಣೆಯ ಚಂದ್ರಶೇಖರ್ ಅತ್ಯಾಚಾರ ಎಸಗಿದ ಮುಖ್ಯಪೇದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆಯು ಜ್ಞಾನ ಭಾರತಿ ವಿಶ್ವವಿದ್ಯಾಲಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಚಂದ್ರಶೇಖರ್ ಸೋಮವಾರ ಮನೆಗೆ ನುಗ್ಗಿ ಮಹಿಳೆಯ ಅತ್ಯಾಚಾರ ಎಸಗಿದ್ದಾನೆ. ಹಳೇ ವೈಷಮ್ಯಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    Police arrest 1 copy

    ಏನಿದು ಪ್ರಕರಣ?:
    ಕುಖ್ಯಾತ ಸರಗಳ್ಳ ಅಚ್ಯುತ್ ಗಣಿಯನ್ನು ಮುಖ್ಯಪೇದೆ ಚಂದ್ರಶೇಖರ್ ಹಿಡಿದಿದ್ದನು. ಹೀಗಾಗಿ ಡಿಸಿಪಿ ರವಿ ಚನ್ನಣ್ಣನವರ ಅವರಿಂದ ರಿವಾರ್ಡ್ ಪಡೆದಿದ್ದ. ಆದರೆ ನಾನು ಕಾರ್ಯನಿರ್ವಹಿಸುತ್ತಿದ್ದ ಠಾಣೆ ವ್ಯಾಪ್ತಿಯ ಜ್ಞಾನ ಭಾರತಿ ವಿಶ್ವವಿದ್ಯಾಲಯದ ಮಹಿಳಾ ಹೋಮ್ ಗಾರ್ಡ್ ಗೆ ಡ್ರಾಪ್ ಕೊಡುವ ನೆಪದಲ್ಲಿ ಚಂದ್ರಶೇಖರ್ ಪರಿಚಯವಾಗಿದ್ದ. ಕೆಲ ದಿನಗಳ ನಂತರ ಕೆಲಸದ ನೆಪದಲ್ಲಿ ಆಕೆಗೆ ಅನೇಕ ಬಾರಿ ಲೈಂಗಿಕ ಕಿರುಕಳ ನೀಡಿದ್ದನು.

    ಅಷ್ಟಕ್ಕೆ ಸುಮ್ಮನಾಗದ ಚಂದ್ರಶೇಖರ್ ಡ್ಯೂಟಿ ಮೇಲಿದ್ದ ಮಹಿಳೆಯನ್ನು ನವೆಂಬರ್ 16ರಂದು ತಬ್ಬಿಕೊಂಡು, ಸೊಂಟದ ಮೇಲೆ ಕೈ ಹಾಕಿದ್ದನು. ಚಂದ್ರಶೇಖರ್ ವರ್ತನೆಯಿಂದ ಎಚ್ಚೆತ್ತುಕೊಂಡ ಮಹಿಳೆ, ಉಸ್ತುವಾರಿ ಅಧಿಕಾರಿ ಹರೀಶ್ ಎಂಬವರ ಗಮನಕ್ಕೆ ತಂದಿದ್ದದು. ಈ ಕರಿತು ಮಾಹಿತಿ ತಿಳಿಯುತ್ತಿದ್ದಂತೆ ಜ್ಞಾನ ಭಾರತಿ ಪೊಲೀಸ್ ಠಾಣಾ ಅಧಿಕಾರಿಗಳು ಚಂದ್ರಶೇಖರ್ ನನ್ನು ಕರೆಸಿಕೊಂಡು, ಫುಲ್ ಕ್ಲಾಸ್ ತೆಗೆದುಕೊಂಡಿದ್ದರು.

    RAPE 5

    ಇದಾದ ಬಳಿಕ ಮಹಿಳೆಯ ವಿರುದ್ಧ ವೈಷಮ್ಯ ಸಾಧಿಸುತ್ತಿದ್ದ ಚಂದ್ರಶೇಖರ್ ಆಕೆಯ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನುಗ್ಗಿದ್ದಾನೆ. ಈ ವೇಳೆ ಮಹಿಳೆ ಸ್ನಾನ ಮಾಡುತ್ತಿದ್ದು, ಬಾಗಿಲು ಬಡಿದ ಶಬ್ಧ ಕೇಳಿ ಪತಿ ಬಂದಿದ್ದಾನೆ ಎಂದು ಭಾವಿಸಿ ಬಾಗಿಲು ತೆರೆದಿದ್ದಾಳೆ. ಆಕೆಯನ್ನು ಒಳಗೆ ದೂಡಿದ ಚಂದ್ರಶೇಖರ್ ಬಾಗಿಲು ಹಾಕಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಸಂತ್ರಸ್ತ ಮಹಿಳೆ ದೂರು ನೀಡುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿ ಕೋರ್ಟ್‍ಗೆ ಹಾಜರುಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮೈಕಲ್ ಜಾಕ್ಸನ್ ಸ್ಟೆಪ್ ಹಾಕಿ ಸಂಚಾರ ನಿರ್ವಹಣೆ- ವಿಡಿಯೋ ವೈರಲ್

    ಮೈಕಲ್ ಜಾಕ್ಸನ್ ಸ್ಟೆಪ್ ಹಾಕಿ ಸಂಚಾರ ನಿರ್ವಹಣೆ- ವಿಡಿಯೋ ವೈರಲ್

    ಭುವನೇಶ್ವರ: ಮೈಕಲ್ ಜಾಕ್ಸನ್ ಸ್ಟೆಪ್ ಹಾಕಿಕೊಂಡು ಹೋಮ್ ಗಾರ್ಡ್ ಒಬ್ಬರು ವೃತ್ತದಲ್ಲಿ ನಿಂತು ಸಂಚಾರ ನಿರ್ವಹಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಪ್ರತಾಪ್ ಚಂದ್ರ ಖಂಡ್ವಾಲ್ ಇಂತಹ ಸಾಮಾಜಿಕ ಕಳಕಳಿ ಕೆಲಸ ಮಾಡುತ್ತಿದ್ದಾರೆ. ಅವರ ಈ ಸೇವೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಪ್ರತಾಪ್ ಅವರು ಹೋಮ್ ಗಾರ್ಡ್ ಆಗಿದ್ದರೂ ವೈಯಕ್ತಿಕ ಕಾಳಜಿ ಹೊಂದಿದ್ದು, ವೃತ್ತದಲ್ಲಿ ನಿಂತು ಕ್ರೀಯಾಶೀಲರಾಗಿ ಸಂಚಾರ ನಿರ್ವಹಣೆಯನ್ನು ಮಾಡುತ್ತಿದ್ದಾರೆ.

    ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಚಂದ್ರ ಅವರು, ನಾನು ಮೊದಲು ಕೈ ಸಿಗ್ನಲ್ ಮೂಲಕ ಸಂಚಾರ ನಿರ್ವಹಣೆ ಮಾಡುತ್ತಿದ್ದೆ. ಆದರೆ ಚಾಲಕರು ಹಾಗೂ ಸವಾರರು ನಿಯಮವನ್ನು ಅಷ್ಟಾಗಿ ಪಾಲಿಸುತ್ತಿರಲಿಲ್ಲ. ಹೀಗಾಗಿ ಡಾನ್ಸ್ ಮೂಲಕ ಸಂಚಾರ ನಿರ್ವಹಣೆ ಮಾಡಲು ಆರಂಭಿಸಿದೆ. ಇದನ್ನು ನೋಡಿದ ಜನರು ನಿಯಮ ಪಾಲಿಸುತ್ತಿದ್ದಾರೆ ಎಂದು ಪ್ರತಾಪ್ ಚಂದ್ರ ಖಂಡ್ವಾಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಡುಗನನ್ನು ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನಿಸಿದ್ದ ‘ಪೇದೆ’ ಅರೆಸ್ಟ್!

    ಹುಡುಗನನ್ನು ಕಿಡ್ನ್ಯಾಪ್ ಮಾಡಿ ಕೊಲೆಗೆ ಯತ್ನಿಸಿದ್ದ ‘ಪೇದೆ’ ಅರೆಸ್ಟ್!

    ಬೀದರ್: ಹೋಮ್ ಗಾರ್ಡ್ ಒಬ್ಬ ನಾನು ಪೊಲೀಸ್ ಕಾನ್ ಸ್ಟೇಬಲ್ ಎಂದು ಹುಡುಗನನ್ನು ಕಿಡ್ನ್ಯಾಪ್ ಮಾಡಿ ಒಂದು ರೂಮ್ ನಲ್ಲಿ ಕೂಡಿ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖೇಡ್ ಗ್ರಾಮದ ಸೂರ್ಯಕಾಂತ್ ಎಂಬ ಹೋಮ್ ಗಾರ್ಡ್ ಫೈನಾನ್ಸ್ ಮಾಡಿಕೊಂಡಿದ್ದ ಹುಡುಗನನ್ನು ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ಲಾಡ್ಜ್ ನ ರೂಮ್‍ ನಲ್ಲಿ ಕೂಡಿ ಹಾಕಿದ್ದನು. ನಂತರ ಫೈನಾನ್ಸ್ ವ್ಯಕ್ತಿಯಿಂದ 50 ಸಾವಿರ ರೂ. ಪಡೆದು ರೈಲ್ವೆ ಟ್ರಾಕ್ ಮೇಲೆ ಹಗ್ಗದಿಂದ ಕಟ್ಟಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ.

    BDR NAKALI POLICE

    ಆರೋಪಿಯಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿ ಮಾರ್ಕೆಟ್ ಪೊಲೀಸರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾನೆ. ದೂರು ದಾಖಲಾಗುತ್ತಿದ್ದಂತೆ ಎಸ್‍ಪಿ ದೇವರಾಜ್ ಡಿ ಮಾರ್ಗದರ್ಶನದಲ್ಲಿ ಬೀದರ್ ಪೊಲೀಸರು ಮಿಂಚಿನ ಕಾರ್ಯಚರಣೆ ಮಾಡಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

    ಹೋಮ್ ಗಾರ್ಡ್ ಆಗಿದ್ದ ಸೂರ್ಯಕಾಂತ್ ನಾನು ಪೊಲೀಸ್ ಕಾನ್ ಸ್ಟೇಬಲ್ ಎಂದು ಹೇಳಿಕೊಂಡು ಹಲವು ವ್ಯಕ್ತಿಗಳನ್ನು ಇದೆ ರೀತಿ ವಂಚಿಸಿದ್ದಾನೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

    BDR NAKALI POLICE 2

    BDR NAKALI POLICE 3

  • ರೈಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದು ಹೋಮ್ ಗಾರ್ಡ್ ಸಾವು

    ರೈಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದು ಹೋಮ್ ಗಾರ್ಡ್ ಸಾವು

    ನೆಲಮಂಗಲ: ರೈಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದು ಹೋಮ್ ಗಾರ್ಡ್ ಸಾವನ್ನಪ್ಪಿರುವ ಘಟನೆ ನೆಲಮಂಗಲದ ರೈಲ್ವೇ ಗೊಲ್ಲಹಳ್ಳಿ ನಿಲ್ದಾಣದಲ್ಲಿ ನಡೆದಿದೆ.

    ಅರ್ಜುನ್ ಬೆಟ್ಟಹಳ್ಳಿ ನಿವಾಸಿಯಾದ 22 ವರ್ಷದ ಅನುಸೂಯ ಮೃತ ದುರ್ದೈವಿ. ಬೆಂಗಳೂರಿನ ಮೆಟ್ರೋದಲ್ಲಿ ಹೋಮ್ ಗಾಡ್9 ಆಗಿ ಕೆಲಸ ಮಾಡುತ್ತಿದ್ದ ಅನುಸೂಯ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಈ ಘಟನೆ ಸಂಭವಿಸಿದೆ.

    nml home gaurd 1

    ಅಪಘಾತ ನಡೆದು ಎರಡು ಗಂಟೆಯಾದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.