Tag: ಹೀರೋ

  • ‘ಹೀರೋ’ ಚಿತ್ರದಲ್ಲಿವೆ ಹಲವಾರು ವಿಶೇಷತೆ – ರಿಷಬ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಹೀರೋ’

    ‘ಹೀರೋ’ ಚಿತ್ರದಲ್ಲಿವೆ ಹಲವಾರು ವಿಶೇಷತೆ – ರಿಷಬ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಹೀರೋ’

    ರಿಷಭ್ ಶೆಟ್ಟಿ, ಗಾನವಿ ಲಕ್ಷಣ್ ಅಭಿನಯದ ‘ಹೀರೋ’ ಸಿನಿಮಾ ಮಾರ್ಚ್ 5ರಂದು ಪ್ರೇಕ್ಷಕರನ್ನು ರಂಜಿಸಲು ಚಿತ್ರಮಂದಿರಕ್ಕೆ ಬರುತ್ತಿದೆ. ರಿಷಭ್ ಶೆಟ್ಟಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಈಗಾಗಲೇ ಚಿತ್ರದ ತುಣುಕುಗಳು ಪ್ರೇಕ್ಷಕ ಮಹಾಪ್ರಭುಗಳ ಮನಸ್ಸನ್ನು ಗೆದ್ದಿವೆ. ಚಿತ್ರದ ಪ್ರಚಾರ ಭರಾಟೆಯಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇತ್ತೀಚೆಗೆ ಚಿತ್ರದ ನೆನಪಿನ ಹುಡುಗಿ ಹಾಡು ಬಿಡುಗಡೆ ಮಾಡಿತ್ತು. ಈ ಹಾಡು ಜನ ಮೆಚ್ಚಿಕೊಂಡ ಬೆನ್ನಲ್ಲೇ ಚಿತ್ರದ ಮತ್ತೊಂದು ಲಿರಿಕಲ್ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

    Hero 3

    ‘ಹೀರೋ’ ಚಿತ್ರವನ್ನು ಭರತ್ ರಾಜ್ ನಿರ್ದೇಶನ ಮಾಡಿದ್ದು, ಇವರ ನಿರ್ದೇಶನದ ಮೊದಲ ಸಿನಿಮಾ ಇದು. ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪಾಥ್ರಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ನಿರ್ದೇಶನ ತಂಡದಲ್ಲಿ ದುಡಿದ ಅನುಭವ ಭರತ್ ರಾಜ್ ಅವರಿಗಿದೆ. ಹೀರೋ ಸಿನಿಮಾ ಎಳೆಯನ್ನು ಮೆಚ್ಚಿಕೊಂಡ ರಿಷಬ್ ಶೆಟ್ಟಿ ತಮ್ಮದೇ ಬ್ಯಾನರ್ ಮೂಲಕ ನಿರ್ಮಾಣ ಮಾಡಲೂ ಒಪ್ಪಿಕೊಂಡು ಭರತ್ ರಾಜ್ ಮೊದಲ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಹೀರೋ ಸಿನಿಮಾ ಒಂದು ದಿನದಲ್ಲಿ ನಡೆಯುವ ಕಥೆಯಾಗಿದ್ದು, ಸಿನಿಮಾದಲ್ಲಿ ಆಕ್ಷನ್, ಸೆಂಟಿಮೆಂಟ್, ಲವ್, ಥ್ರಿಲ್, ಡಾರ್ಕ್ ಹ್ಯೂಮರಸ್ ಎಲ್ಲವೂ ಇದೆ. ಕಾಮಿಡಿ ನೋಡುಗರಿಗೆ ಸಖತ್ ಮಜಾ ನೀಡಲಿದೆ ಎನ್ನುವುದು ಚಿತ್ರತಂಡದ ಮಾತು.

    Hero 1

    ಕೇವಲ 24 ಜನರ ತಂಡದಲ್ಲಿ ಅರಳಿದ ಸಿನಿಮಾ ‘ಹೀರೋ’. ಈ 24 ಜನರೇ ಸಿನಿಮಾದ ‘ಹೀರೋ’ ಎನ್ನುತ್ತೆ ಚಿತ್ರತಂಡ. ಲಾಕ್‍ಡೌನ್ ಅವಧಿಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಕೈ ಹಾಕಿದ ಚಿತ್ರತಂಡ ಕೇವಲ 24 ಜನರ ತಂಡದಲ್ಲೇ ಸಿನಿಮಾವನ್ನು ಸೆರೆ ಹಿಡಿದಿದೆ. ಪೂರ್ತಿ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಾನವಿ ಲಕ್ಷಣ್ ಹೊರತು ಪಡಿಸಿ ಉಳಿದ ಎಲ್ಲಾ ನಟರು ಸಿನಿಮಾ ತಾಂತ್ರಿಕ ವರ್ಗದವರೇ. ಹೌದು, ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದ ಲೈಟ್ ಬಾಯ್,ಕ್ಯಾಮೆರಾ ಅಸಿಸ್ಟೆಂಟ್, ಮೇಕಪ್ ಮ್ಯಾನ್, ಅಡುಗೆ ಮಾಡುವಾತ ಪ್ರತಿಯೊಬ್ಬರೂ ಈ ಸಿನಿಮಾದಲ್ಲಿಬಣ್ಣ ಹಚ್ಚಿದ್ದಾರೆ. ಹಾಗೆಯೇ ಸ್ಥಳೀಯ ಜನರನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಹೀಗೆ ಹತ್ತು ಹಲವು ವಿಶೇಷತೆಯನ್ನು ಹೀರೋ ಸಿನಿಮಾ ಒಳಗೊಂಡಿತ್ತು ನೈಜವಾಗಿ ಮೂಡಿ ಬಂದಿದೆ ಎನ್ನುವುದು ಚಿತ್ರತಂಡದ ಮಾತುಗಳು.

    hero 4

    ಚಿತ್ರಕ್ಕೆ ರಿಷಭ್ ಶೆಟ್ಟಿ, ವಿಕ್ರಂ ಮೋರ್ ಸಾಹಸ ನಿರ್ದೇಶನ ಮಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ‘ಹೀರೋ’ ಚಿತ್ರಕ್ಕಿದೆ. ಮಾರ್ಚ್ 5ರಂದು ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಹೀರೋ ಸಿನಿಮಾ ಬಿಡುಗಡೆಯಾಗುತ್ತಿದ್ದು ಜಯಣ್ಣ ಫಿಲಂಸ್ `ಹೀರೋ’ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.

    Rishab Shetty Hero Film

  • ಮಾರ್ಚ್ 5ಕ್ಕೆ ರಿಷಬ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ- ನಟಿ ಗಾನವಿ ಲಕ್ಷಣ್‍ಗೆ ಮೊದಲ ಅದೃಷ್ಟ ಪರೀಕ್ಷೆ

    ಮಾರ್ಚ್ 5ಕ್ಕೆ ರಿಷಬ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ- ನಟಿ ಗಾನವಿ ಲಕ್ಷಣ್‍ಗೆ ಮೊದಲ ಅದೃಷ್ಟ ಪರೀಕ್ಷೆ

    ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿರುವ ಸಿನಿಮಾ ‘ಹೀರೋ’. ರಿಷಭ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷಣ್ ನಾಯಕ ನಟಿ. ಟಿ.ಎನ್. ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಚಿಕ್ಕಮಗಳೂರು ಬೆಡಗಿ ಗಾನವಿ ಲಕ್ಷಣ್.

    Hero 3

    ಮೊದಲ ಧಾರಾವಾಹಿ ಮೂಲಕವೇ ಕನ್ನಡಿಗರ ಮನದಲ್ಲಿ ಬಹುಬೇಗ ಜಾಗ ಪಡೆದು ಖ್ಯಾತಿ ಗಳಿಸಿದ್ರು. ಸಿನಿಮಾದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಬಹುದೊಡ್ಡ ಕನಸಿಟ್ಟುಕೊಂಡಿದ್ದ ಇವರಿಗೆ ‘ಹೀರೋ’ ಸಿನಿಮಾದಲ್ಲಿ ನಟಿಸುವ ಸುವರ್ಣಾವಕಾಶ ಒದಗಿಬಂತು. ‘ಹೀರೋ’ ಮೂಲಕ ಬೆಳ್ಳಿತೆರೆ ಮೇಲೆ ಅದೃಷ್ಟ ಪರೀಕ್ಷೆಗಿಳಿದಿರುವ ಗಾನವಿ ಲಕ್ಷಣ್ ತಮ್ಮ ಮೊದಲ ಸಿನಿಮಾ ಮೇಲೆ ಸಾಕಷ್ಟು ಭರವಸೆಯನ್ನಿಟ್ಟುಕೊಂಡಿದ್ದಾರೆ. ಮಾರ್ಚ್ 5ರ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿರುವ ನಟಿ ಗಾನವಿ ಲಕ್ಷಣ್ ಜನರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

    Hero 2

    ಚೊಚ್ಚಲ ಸಿನಿಮಾದಲ್ಲೇ ಪರ್ಫಾಮೆನ್ಸ್ ಗೆ ಹೆಚ್ಚು ಅವಕಾಶ ಸಿಕ್ಕಿರೋದು ತುಂಬಾ ಖುಷಿ ಕೊಟ್ಟಿದೆ ಎನ್ನುತ್ತಾರೆ ಗಾನವಿ ಲಕ್ಷಣ್. ತಮ್ಮ ಪಾತ್ರ ನ್ಯಾಚುರಲ್ ಆಗಿ ಮೂಡಿ ಬಂದಿದ್ದು, ಹಲವು ಶೇಡ್ ನಲ್ಲಿ ಕಾಣಸಿಗಲಿದ್ದೇನೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ. ನಿರ್ದೇಶಕ ಭರತ್ ರಾಜ್ ಹಾಗೂ ರಿಷಬ್ ಶೆಟ್ಟಿ ತಂಡದ ಜೊತೆ ಕೆಲಸ ಮಾಡಿದ ಅನುಭವ ಖುಷಿ ಕೊಟ್ಟಿದ್ದು ಜನರು ಕೂಡ ಸಿನಿಮಾ ಮೇಲೆ ಪ್ರೀತಿ ತೋರಿಸುತ್ತಾರೆ ಎಂಬ ಭರವಸೆಯಲ್ಲಿದ್ದೇನೆ ಎಂದಿದ್ದಾರೆ.

    hero 2

    ರಿಷಭ್ ಶೆಟ್ಟಿ ನಟಿಸಿ ನಿರ್ಮಾಣ ಮಾಡುತ್ತಿರುವ ‘ಹೀರೋ’ ಚಿತ್ರಕ್ಕೆ ಭರತ್ ರಾಜ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಆಕ್ಷನ್, ಲವ್, ಸೆಂಟಿಮೆಂಟ್, ಕಾಮಿಡಿ ಎಲಿಮೆಂಟ್ ಗಳನ್ನು ಒಳಗೊಂಡಿರುವ ‘ಹೀರೋ’ ಸಿನಿಮಾ ನೋಡುಗರಿಗೆ ಹೊಸ ಫೀಲ್ ನೀಡಲಿದೆ ಎನ್ನುತ್ತದೆ ಚಿತ್ರತಂಡ. ಈಗಾಗಲೇ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆದಿದ್ದು ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ ಸಿನಿರಸಿಕರು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ .ಎಸ್. ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ತಾರಾಗಣದಲ್ಲಿ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

  • ‘ಹೀರೋ’ ಎಂಟ್ರಿಗೆ ದಿನಾಂಕ ಫಿಕ್ಸ್- ಮಾರ್ಚ್ 5ಕ್ಕೆ ರಿಷಭ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ

    ‘ಹೀರೋ’ ಎಂಟ್ರಿಗೆ ದಿನಾಂಕ ಫಿಕ್ಸ್- ಮಾರ್ಚ್ 5ಕ್ಕೆ ರಿಷಭ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ

    ರಿಷಭ್ ಶೆಟ್ಟಿ ಅಭಿನಯದ ‘ಹೀರೋ’ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 5ಕ್ಕೆ ‘ಹೀರೋ’ ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡಲಿರುವ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ. ಚಿತ್ರದ ಕುತೂಹಲ ಭರಿತ ಟ್ರೇಲರ್ ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆಯನ್ನು ಚಿತ್ರತಂಡದ ಮುಂದಿಟ್ಟಿದ್ರು. ಇದೀಗ ಪ್ರೇಕ್ಷಕ ಮಹಾಪ್ರಭುಗಳ ಕಾಯುವಿಕೆಗೆ ಉತ್ತರ ಸಿಕ್ಕಿದ್ದು, ಮಾರ್ಚ್ 5ರಂದು ‘ಹೀರೋ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    Rishab Shetty Hero Film

    ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಹೀರೋ’. ಬೆಲ್ ಬಾಟಂ ಸಿನಿಮಾ ನಂತರ ರಿಷಭ್ ನಾಯಕ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಭರತ್ ರಾಜ್ ‘ಹೀರೋ’ ನಿರ್ದೇಶಕ. ನಿರ್ದೇಶಕನಾಗಿ ಇದು ಇವರ ಮೊದಲ ಪ್ರಯತ್ನ ಕೂಡ ಹೌದು. ಲಾಕ್‍ಡೌನ್ ಅವಧಿಯಲ್ಲೇ ಇಡೀ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ ಸೈ ಎನಿಸಿಕೊಂಡಿತ್ತು ಚಿತ್ರತಂಡ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಸಿನಿಮಾ ಬಗ್ಗೆ ಒಂದೊಂದೇ ಅಪ್ಡೇಟ್ಸ್ ನೀಡುತ್ತ ಸಿನಿಮಾ ಬಗ್ಗೆ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಚಿತ್ರದ ಟ್ರೇಲರ್ ಎಲ್ಲರ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವುದರ ಜೊತೆಗೆ ಸಿನಿಮಾ ಮೇಲಿನ ಒಲವನ್ನು ಇನ್ನಷ್ಟು ಹೆಚ್ಚು ಮಾಡಿದೆ.

    hero 2

    ಸಸ್ಪೆನ್ಸ್, ಆಕ್ಷನ್, ಕಾಮಿಡಿ, ಥ್ರಿಲ್ಲರ್, ಲವ್ ಎಲ್ಲಾ ಎಲಿಮೆಂಟ್ ಗಳನ್ನು ಒಳಗೊಂಡಿರುವ ‘ಹೀರೋ’ ಚಿತ್ರದಲ್ಲಿ ರಿಷಭ್ ಶೆಟ್ಟಿ, ಗಾನವಿ ಲಕ್ಷ್ಮಣ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಕ್ಷೌರಿಕನ ಪಾತ್ರದಲ್ಲಿ ರಿಷಭ್ ಶೆಟ್ಟಿ ಬಣ್ಣಹಚ್ಚಿದ್ದಾರೆ. ರಿಷಭ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದ್ದು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ವಿಕ್ರಂ ಮೋರ್ ಸಾಹಸ ನಿರ್ದೇಶನದಲ್ಲಿ ‘ಹೀರೋ’ ಸಿನಿಮಾ ಸಾಹಸ ದೃಶ್ಯಗಳು ಮೂಡಿ ಬಂದಿದ್ದು, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಒಳಗೊಂಡಂತೆ ಹಲವು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  • ಅವಕಾಶಕ್ಕಾಗಿ ಚಪ್ಪಲಿ ಹರಿದು ಹೋಗುವವರೆಗೂ ಅಲೆದಿದ್ದೇನೆ: ನಟಿ ಗಾನವಿ ಲಕ್ಷ್ಮಣ್

    ಅವಕಾಶಕ್ಕಾಗಿ ಚಪ್ಪಲಿ ಹರಿದು ಹೋಗುವವರೆಗೂ ಅಲೆದಿದ್ದೇನೆ: ನಟಿ ಗಾನವಿ ಲಕ್ಷ್ಮಣ್

    ಗಳು ಜಾನಕಿ ಸೀರಿಯಲ್ ಖ್ಯಾತಿಯ ಗಾನವಿ ಲಕ್ಷ್ಮಣ್ ಹೀರೋ ಸಿನಿಮಾ ಬಗ್ಗೆ ಹಾಗೂ ತಮ್ಮ ಕನಸುಗಳ ಬಗ್ಗೆ ಆರಂಭದ ದಿನಗಳ ಹೋರಾಟದ ಬಗ್ಗೆ ತಮ್ಮ ಅನಿಸಿಕೆಯನ್ನು ಪಬ್ಲಿಕ್‌ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ಹೀರೋ ಸಿನಿಮಾ ಅನುಭವ ಹೇಗಿತ್ತು, ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?
    ಒಬ್ಬ ಕಲಾವಿದೆಗೆ ಏನು ಬೇಕೋ ಅದು ಈ ಟೀಮ್​ನಲ್ಲಿ ಇತ್ತು. ಹೀರೋ ಸಿನಿಮಾ ಕಥೆಯೇ ತುಂಬಾ ಇಂಟ್ರಸ್ಟಿಂಗ್ ಆಗಿದೆ. ತುಂಬಾ ಹಾರ್ಡ್ ವರ್ಕ್ ಮಾಡಿ ಎಲ್ಲರೂ ಕೆಲಸ ಮಾಡಿದ್ದೀವಿ. ನನ್ನ ಪಾತ್ರ ನನಗೆ ತುಂಬಾ ಖುಷಿ ಕೊಟ್ಟಿದೆ. ಒಂದೊಳ್ಳೆ ಅನುಭವ ಈ ಚಿತ್ರ ನೀಡಿದೆ. ರಿಷಭ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರುವ ನಾತೂರಾಮ್ ಸಿನಿಮಾಲ್ಲಿ ರಿಷಭ್ ಜೋಡಿಯಾಗಿ ನಾನು ಆಯ್ಕೆಯಾಗಿದ್ದೆ. ಆಗ ರಿಷಭ್ ಪರಿಚಯವಾಗಿತ್ತು. ಆ ಸಿನಿಮಾ ಸದ್ಯಕ್ಕೆ ಪೋಸ್ಟ್ ಪೋನ್ ಆಗಿದೆ. ಅದೇ ಪರಿಚಯದ ಮೇಲೆ ರಿಷಭ್ ಹೀರೋ ಸಿನಿಮಾಗಾಗಿ ನನ್ನನ್ನು ಸಂಪರ್ಕಿಸಿದ್ರು. ಸಬ್ಜೆಕ್ಟ್ ತುಂಬಾ ಚೆನ್ನಾಗಿತ್ತು ನಟಿಸಲು ಒಪ್ಪಿಕೊಂಡೆ. ಅದಾದ ಮೇಲೆ ಪವಾಡದಂತೆ ಇಡೀ ಸಿನಿಮಾ ನಡೆದು ಹೋಯ್ತು.

    Ganavi Laxman 1

    ರಿಷಭ್ ಶೆಟ್ಟಿಯವರ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು ?
    ಅವರೊಬ್ಬ ಸೂಪರ್ ಹೀರೋ. ತುಂಬಾ ಕಷ್ಟ ಪಟ್ಟು ಇಲ್ಲಿವರೆಗೆ ಬಂದಿದ್ದಾರೆ. ಅವರ ಜೊತೆ ಕೆಲಸ ಮಾಡೋದು ತುಂಬಾ ಹೆಮ್ಮೆಯ ವಿಚಾರ. ತಾವು ಬೆಳೆಯೋದರ ಜೊತೆ ತಮ್ಮ ತಂಡವನ್ನು ಬೆಳೆಸುತ್ತಾರೆ. ಹಲವಾರು ಪ್ರತಿಭಾವಂತರಿಗೆ ಸಿನಿಮಾ ಬರಹಗಾರರಿಗೆ ಅವಕಾಶ ನೀಡಿದ್ದಾರೆ. ಎಲ್ಲರನ್ನು ಅವರು ಮೋಟಿವೇಟ್ ಮಾಡುತ್ತಾರೆ. ಅವರಿಗೆ ಯಾವಾಗಲೂ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತೇನೆ.

    ಮಗಳು ಜಾನಕಿ ನಿಮ್ಮ ಕನಸಿಗೆ ನೀರೆರಿದು ಪೋಷಿಸಿತು?
    ಗಾನವಿ ಲಕ್ಷ್ಮಣ್ ಎಂಬ ಕಲಾವಿದೆಯೊಬ್ಬಳು ಇದ್ದಾಳೆ ಅನ್ನೋದನ್ನ ಕರ್ನಾಟಕಕ್ಕೆ ಪರಿಚಯಿಸಿದ್ದೇ ಮಗಳು ಜಾನಕಿ ಧಾರಾವಾಹಿ. ಈ ವಿಚಾರದಲ್ಲಿ ನಾನು ಕಲರ್ಸ್​ ಕನ್ನಡಕ್ಕೆ ಧನ್ಯವಾದ ಹೇಳುತ್ತೇನೆ. ಇವತ್ತು ಸಿನಿಮಾಗಳಲ್ಲಿ ಅವಕಾಶ ಸಿಕ್ತಿದೆ ಅಂದ್ರೆ ಅದಕ್ಕೆ ಕಾರಣ ಮಗಳು ಜಾನಕಿ. ಇಲ್ಲಿ ನಾನು ಸೀತಾರಾಮ್​ ಸರ್ ಬಳಿ ಹಲವು ವಿಚಾರಗಳನ್ನು ಕಲಿತುಕೊಂಡೆ. ಇವತ್ತು ನಾನಿಲ್ಲಿ ಬಂದು ನಿಂತಿದ್ದೀನಿ ಅಂದ್ರೆ ಅದು ಮಗಳು ಜಾನಕಿ ಧಾರಾವಾಹಿ ಕೊಟ್ಟ ಜನಪ್ರಿಯತೆಯಿಂದ.

    Ganavi Laxman 8

    ಮೊದಲ ಬಾರಿಯೇ ಟಿ.ಎನ್​ ಸೀತಾರಾಮ್​ ಸರ್​ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಎಷ್ಟು ಖುಷಿ ಇದೆ?
    ಹೌದು..ನಾನು ಆಡಿಷನ್​ನಲ್ಲಿ ಸೆಲೆಕ್ಟ್ ಆದಾಗ ಇಷ್ಟು ವರ್ಷ ಬೆಂಗಳೂರಿನಲ್ಲಿ ಅಲೆದದ್ದಕ್ಕೂ ಸಾರ್ಥಕವಾಯಿತು ಅನ್ನಿಸಿತು. ನಿಜಕ್ಕೂ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನಗೆ ತುಂಬಾ ಹೆಮ್ಮೆಯ ವಿಷಯ. ಪ್ರತಿಯೊಬ್ಬ ಕಲಾವಿದರಿಗೂ ಆರಂಭದಲ್ಲೇ ಅವರಂತ ಗುರುಗಳು ಸಿಕ್ಕರೆ ಬೇರೆಯದ್ದೇ ಲೆವೆಲ್​​ನಲ್ಲಿ ಬೆಳೆಯೋದು ಗ್ಯಾರೆಂಟಿ.

    ಬೆಂಗಳೂರಿಗೆ ಬಂದ ಆರಂಭದ ದಿನಗಳು ಹೇಗಿತ್ತು?
    ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಂಡು, ಮನೆಯಲ್ಲಿ ಎಲ್ಲರ ವಿರೋಧ ಕಟ್ಟಿಕೊಂಡು ಬೆಂಗಳೂರಿಗೆ ಬಂದ ಮೇಲೆ ನನಗೆ ನಿಜವಾದ ಜೀವನ ಏನು ಅನ್ನೋದು ಗೊತ್ತಾಯಿತು. ಬ್ಯಾಗ್ ಹಿಡಿದುಕೊಂಡು ಮೆಜೆಸ್ಟಿಕ್​ನಿಂದ ಚಪ್ಪಲಿ ಸವೆಯೋವರೆಗೂ ಅಲೆದಿದ್ದೇನೆ. ಅವಕಾಶಕ್ಕಾಗಿ ನಡೆಸಿದ ಹುಡುಕಾಟ ಅಷ್ಟಿಷ್ಟಲ್ಲ. ಮೆಜಿಸ್ಟಿಕ್​ನಿಂದ ಬ್ಯಾಗ್ ಹಿಡಿದ ಚಪ್ಪಲಿ ಹರಿದು ಹೋಗುವಷ್ಟು ಅಲೆದಿದ್ದೇನೆ. ಮಗಳು ಜಾನಕಿಗೆ ಅವಕಾಶ ಸಿಗುವುದಕ್ಕೂ ಮುನ್ನ ನಾನು ಪಟ್ಟ ಕಷ್ಟಗಳನ್ನು ಹೇಳಿಕೊಂಡರೆ ಯಾರೂ ನಂಬೋದಿಲ್ಲ.

    Ganavi Laxman 7

    ಲಾಕ್​ಡೌನ್​ ಲೈಫ್ ಹೇಗಿತ್ತು?
    ಲಾಕ್​ ಡೌನ್​ ಆರಂಭದ ಎರಡು ತಿಂಗಳು ಊರಿನಲ್ಲಿ ಕಳೆದೆ. ಆದ್ರೆ ಕಲಾವಿದರಿಗೆ ಕೆಲಸವಿಲ್ಲದೆ ತುಂಬಾ ದಿನ ಕೂರೋಕೆ ಆಗಲ್ಲ. ಅವಕಾಶ ಸಿಕ್ಕಿದ್ರೆ ಸಾಕು ಎಂದು ಕಾಯುತ್ತಿದ್ದೆ ಆ ಟೈಂನಲ್ಲಿ ರಿಷಭ್ ಸರ್ ಹೀರೋ ಪ್ರಾಜೆಕ್ಟ್ ಬಗ್ಗೆ ಹೇಳಿದ್ರು. ಅನ್​ಲಾಕ್​​ ಸಮಯದಲ್ಲಿ ಇಡೀ ಶೂಟಿಂಗ್ ಕಂಪ್ಲೀಟ್ ಮಾಡಿದ್ವಿ. ಪೂರ್ತಿ ಚಿತ್ರೀಕರಣ ನನ್ನೂರಾದ ಚಿಕ್ಕಮಗಳೂರಲ್ಲೇ ನಡೆದಿದ್ದರಿಂದ ಹೆಚ್ಚಿನ ಸಮಯ ಕುಟುಂಬದ ಜೊತೆ ಊರಲ್ಲೇ ಕಳೆದೆ.

    ನಟನೆ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
    ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮವೆಂದರೆ ತುಂಬಾ ಪ್ರೀತಿ. ಡಿಗ್ರಿ ಮುಗಿಸಿದ ನಂತರ ಕಾಫಿ ಡೇ ಸಿದ್ದಾರ್ಥ್​ ಅವರ ಇಂಟರ್​​ ನ್ಯಾಶನಲ್​ ಸ್ಕೂಲ್​ನಲ್ಲಿ ಡಾನ್ಸ್​ ಟೀಚರ್ ಆಗಿ ಸೇರಿಕೊಂಡೆ. ಅಲ್ಲಿ ಮಕ್ಕಳಿಗೆ ಡಾನ್ಸ್ ಕಲಿಸುತ್ತಾ ನನಗೆ ಗೊತ್ತಿಲ್ಲದೆ ನನ್ನೊಳಗೊಬ್ಬಳು ಕಲಾವಿದೆಯನ್ನು ನಾನು ಕಂಡೆ. ನನ್ನ ಮನಸ್ಸೆಲ್ಲ ಕಲೆಯ ಕಡೆಯೇ ಹೊರಳುತ್ತಿತ್ತು. ಹಾಸ್ಟೆಲ್​ ವಿದ್ಯಾಭ್ಯಾಸ ಮಾಡಿದ್ದರಿಂದ ಸಿನಿಮಾ ನೋಡಿದ್ದೇ ಹೆಚ್ಚು. ಇದೆಲ್ಲವೂ ನನ್ನನ್ನೂ ನೀನು ನಟಿಯಾಗಲೇ ಬೇಕು ಎಂದು ಪುಶ್ ಮಾಡುತ್ತಿತ್ತು.

    Ganavi Laxman 6

    ನಿಮ್ಮ ಸ್ಪೂರ್ತಿ ಯಾರು?
    ನನಗೆ ಕಲೆಯೇ ಒಂದು ಸ್ಪೂರ್ತಿ. ಆ ಪದದಲ್ಲೇ ಒಂದು ಶಕ್ತಿ ಇದೆ, ಅದನ್ನು ಕೇಳಿದಾಗ ನನಗೆ ರೋಮಾಂಚನವಾಗುತ್ತೆ. ಕಲೆಗೆ ಕಲಾವಿದರಿಗೆ ಯಾವತ್ತೂ ಸಾವಿಲ್ಲ ಕಲೆಯೇ ನನ್ನ ಜೀವನಕ್ಕೆ ಸ್ಪೂರ್ತಿ.

    ಪ್ರತಿಯೊಬ್ಬ ಕಲಾವಿದರಿಗೂ ಒಂದು ಕನಸಿರುತ್ತೆ ನಿಮ್ಮ ಕನಸಿನ ಬಗ್ಗೆ ಹೇಳಿ?
    ಕಲಾವಿದೆಯಾಗಿ ಕರ್ನಾಟಕವನ್ನು ಪ್ರಪಂಚದಾದ್ಯಂತ ಪ್ರತಿನಿಧಿಸಬೇಕು ಅನ್ನೋದು ನನ್ನ ದೊಡ್ಡ ಕನಸು. ಅದು ಈಡೇರುತ್ತೋ ಇಲ್ವೋ ಗೊತ್ತಿಲ್ಲ ಆದ್ರೆ ಕೊನೆಯವರೆಗೂ ಪ್ರಯತ್ನ ಪಡುತ್ತೇನೆ. ಕೊನೆವರೆಗೂ ಕಲಾವಿದೆಯಾಗಿಯೇ ಉಳಿಯಬೇಕು. ಎಲ್ಲೆ ಹೋದರೂ ಕೊನೆವರೆಗೂ ಕಲಾವಿದೆ ಎಂದೇ ಗುರುತಿಸಿಕೊಳ್ಳಬೇಕು ಅನ್ನೋದು ನನ್ನ ಮಹದಾಸೆ.

    magalu janaki ganavi 3

    ಆರಂಭದಲ್ಲಿ ಮನೆಯಲ್ಲಿದ್ದ ವಿರೋಧ, ಈಗ ನಿಮ್ಮ ಬೆಳವಣಿಗೆ ನೋಡಿದ ನಂತರದ ಪ್ರತಿಕ್ರಿಯೆ ಹೇಗಿದೆ. ?
    ಎಲ್ಲರ ಮನೆಯಲ್ಲೂ ಹೆಣ್ಣು ಮಕ್ಕಳು ಸಿನಿಮಾ ಕ್ಷೇತ್ರಕ್ಕೆ ಹೋಗ್ತೀವಿ ಅಂದಾಗ ಆತಂಕ ಇದ್ದೆ ಇರುತ್ತೆ ಅದೇ ರೀತಿ ನನ್ನ ಮನೆಯಲ್ಲೂ ಆಯ್ತು. ಆದ್ರೆ ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮನೆಯವರ ವಿರೋಧದ ನಡುವೆಯೂ ಬೆಂಗಳೂರಿಗೆ ಬಂದು ನಟನೆಯಲ್ಲಿ ತೊಡಗಿದೆ. ಈಗ ಅವರಿಗೆ ನನ್ನ ಮೇಲೆ ಅಪಾರ ಪ್ರೀತಿ, ಖುಷಿ ಇದೆ. ನನ್ನ ಮಗಳು ಅಂದುಕೊಂಡಿದ್ದನ್ನು ಸಾಧಿಸಿದಳು ಎಂಬ ಹೆಮ್ಮೆ ಇದೆ.

    ಗಾನವಿ ಲಕ್ಷ್ಮಣ್​ ಅವರು ಯಾವ ರೀತಿಯ ಹುಡುಗಿ?
    ನಾನು ಸ್ಟ್ರೈಟ್ ಫಾರ್ವರ್ಡ್ ಹುಡುಗಿ. ತುಂಬಾ ರೆಸ್ಪಾನ್ಸಿಬಲ್ ಹೆಣ್ಣು ಮಗಳು. ರೂಲ್ಸ್ ಬ್ರೇಕ್​ ಮಾಡೋದು ಅಂದ್ರೆ ನಂಗೆ ತುಂಬಾ ಇಷ್ಟ. ಅಷ್ಟೇ ಬೋಲ್ಡ್ ಕೂಡ ಹೌದು. ತುಂಬಾ ಸ್ವಾಭಿಮಾನಿ ನನ್ನ ಸ್ವಾಭಿಮಾನಕ್ಕೆ ಸ್ವಲ್ಪ ಧಕ್ಕೆಯಾದ್ರೂ  ನಾನು ಆ ಸ್ಥಳದಲ್ಲಿ ಇರೋದಿಲ್ಲ.

    magalu janaki ganavi 2

    ನಿಮ್ಮ ಹಾಗೆ ಸಿನಿಮಾ ಪ್ರೀತಿ ಇಟ್ಟುಕೊಂಡು ಚಿತ್ರರಂಗಕ್ಕೆ ಬರುವವರಿಗೆ ಏನು ಹೇಳೋಕೆ ಇಷ್ಟಪಡ್ತೀರಾ.?
    ನಾನು ಎಲ್ಲರಿಗೂ ಹೇಳೊದಿಷ್ಟೆ ಯಾವುದೂ ಸುಲಭವಾಗಿ ಸಿಗೋದಿಲ್ಲ. ಕಲೆಯನ್ನು ತುಂಬಾ ಭಕ್ತಿ ಹಾಗೂ ಶ್ರದ್ದೆಯಿಂದ ಒಲಿಸಿಕೊಳ್ಳಬೇಕು. ನಾವು ಕಲೆಗೆ ಎಷ್ಟು ಗೌರವ ತೋರಿಸುತ್ತೇವೋ ಅಷ್ಟೇ ಒಳ್ಳೆಯ ಸ್ಥಾನಕ್ಕೆ ಅದು ನಮ್ಮನ್ನು ಕರೆದುಕೊಂಡು ಹೋಗುತ್ತೆ. ಇದಕ್ಕೆಲ್ಲ ದೃಢ ನಿರ್ಧಾರ, ಧೃಡ ಸಂಕಲ್ಪ ಬೇಕು ಸುಮ್ಮನೆ ಶೋಕಿಗಾಗಿ ಬರಬಾರದು ಅನ್ನೋದು ನನ್ನ ಅಭಿಪ್ರಾಯ.

    ನಿಮ್ಮ ಫಿಟ್​​ನೆಸ್​​ ಮಂತ್ರದ ಬಗ್ಗೆ ಹೇಳಿ.
    ಲಾಕ್​ಡೌನ್ ಸಮಯದಲ್ಲಿ ಫಿಟ್​ನೆಸ್​ ಕಡೆ ಹೆಚ್ಚು ಗಮನ ಕೊಡಲು ಆಗಲಿಲ್ಲ. ಪ್ರತಿಯೊಬ್ಬರಿಗೂ ಫಿಟ್​ನೆಸ್ ತುಂಬಾ ಮುಖ್ಯ ಅದರಲ್ಲೂ ಕಲಾವಿದರೆಗೆ ಫಿಟ್​​ನೆಸ್​ ಇಲ್ಲ ಅಂದ್ರೆ ಆಗೋದೇ ಇಲ್ಲ. ನಾನು ಆ ಬಗ್ಗೆ ತುಂಬಾ ಗಮನ ಹರಿಸುತ್ತೇನೆ. ಯೋಗ ಇನ್ಸ್​ಸ್ಟ್ರಕ್ಟರ್​ ಆಗಿಯೂ ಕೆಲಸ ಮಾಡಿರೋದ್ರಿಂದ ದೇಹವನ್ನು ಹೇಗೆ ಆರೋಗ್ಯವಾಗಿ ಇಡಬೇಕು ಅನ್ನೋದು ಗೊತ್ತಿದೆ.

    magalu janaki ganavi 1

    ಧಾರಾವಾಹಿಯಲ್ಲಿ ಮತ್ತೆ ಅವಕಾಶ ಸಿಕ್ಕರೆ ಮಾಡುತ್ತೀರಾ?
    ಖಂಡಿತಾ ಇಲ್ಲ. ನಾನು ಆಕ್ಟಿಂಗ್ ಮಾಡಬೇಕೆಂದು ನಿರ್ಧರಿಸಿದ್ದೆ ತುಂಬಾ ಲೇಟ್ ಆಗಿ. ನನಗೆ ಚಿಕ್ಕಂದಿನಿಂದಲೂ ಸಿನಿಮಾದಲ್ಲೇ ನಟಿಸಬೇಕು ಅನ್ನೋದೇ ಮಹದಾಸೆ. ಆರಂಭದಲ್ಲಿ ಸಿನಿಮಾದಲ್ಲೇ ಪಾದಾರ್ಪಣೆ ಮಾಡಬೇಕು ಎಂದು ತುಂಬಾ ಕನಸಿತ್ತು. ಧಾರಾವಾಹಿ ಮುಖಾಂತರವೇ ನನ್ನ ಕೆರಿಯರ್ ಶುರುವಾಗಬೇಕೆಂದು ಆ ದೇವರು ಬರೆದಿದ್ದ ಅನ್ನಿಸುತ್ತೆ ಅದರಂತೆ ಆಯಿತು. ಇನ್ನೇನಿದ್ರು ನನ್ನ ಜರ್ನಿ ಸಿನಿಮಾದಲ್ಲೇ ಇರುತ್ತೆ.

  • ಹೀರೋಗಳ ಜೊತೆ ಮಲಗಿ ನಾನು ಅವಕಾಶ ಪಡೆದಿಲ್ಲ – ‘ಕೆಜಿಎಫ್’ನ ಪ್ರಧಾನಿ

    ಹೀರೋಗಳ ಜೊತೆ ಮಲಗಿ ನಾನು ಅವಕಾಶ ಪಡೆದಿಲ್ಲ – ‘ಕೆಜಿಎಫ್’ನ ಪ್ರಧಾನಿ

    ಮುಂಬೈ: ಹೀರೋಗಳ ಜೊತೆ ಮಲಗಿ ನಾನು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡಿಲ್ಲ ಎಂದು 90ರ ದಶಕದ ಬಾಲಿವುಡ್‍ನ ನಟಿ ರವೀನಾ ಟಂಡನ್ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ‘ಕೆಜಿಎಫ್’ನಲ್ಲಿ ನಾನೇ ಹೀರೋ, ನಾನೇ ವಿಲನ್ ಎಂದ ‘ಪ್ರಧಾನಿ’

    ಇತ್ತೀಚೆಗೆ ನಟಿ ರವೀನಾ ಟಂಡನ್ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಪಡೆಯಲು ತಾವು ಅನುಭವಿಸಿದ ಕಷ್ಟಗಳು ಮತ್ತು ಕೆಲವು ಕಹಿ ಘಟನೆಯ ಸತ್ಯ ಬಿಚ್ಚಿಟ್ಟಿದ್ದಾರೆ.

    Raveena2

    “ನಾನು ಯಾವುದೇ ಗಾಡ್‌ಫಾದರ್‌ಗಳನ್ನು ಹೊಂದಿರಲಿಲ್ಲ. ಅಲ್ಲದೇ ನನ್ನನ್ನು ಯಾವುದೇ ನಾಯಕ ಕೂಡ ಪ್ರಮೋಟ್ ಮಾಡಲಿಲ್ಲ. ನಾನು ಸಿನಿಮಾದಲ್ಲಿ ಅಭಿನಯಿಸುವ ಅವಕಾಶಕ್ಕಾಗಿ ಹೀರೋಗಳ ಜೊತೆ ಮಲಗಲಿಲ್ಲ ಅಥವಾ ಯಾರೊಂದಿಗೂ ಅಫೇರ್ ಕೂಡ ಇಟ್ಟುಕೊಂಡಿರಲಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ನನ್ನನ್ನು ಅಹಂಕಾರ ಇರುವವಳು ಎಂದು ಕರೆದಿದ್ದರು. ಯಾಕೆಂದರೆ ನಾನು ಅವರು ಹೇಳಿದಂತೆ ಕೇಳುತ್ತಿರಲಿಲ್ಲ. ಅವರು ನಗು ಎಂದರೆ ನಗಬೇಕು, ಕುಳಿತುಕೋ ಎಂದಾಗ ಕುಳಿತುಕೊಳ್ಳಬೇಕಿತ್ತು. ಹೀಗಾಗಿ ಅವರ ತಾಳಕ್ಕೆ ನಾನು ಕುಣಿಯುತ್ತಿರಲಿಲ್ಲ” ಎಂದು ತಾವು ಅನುಭವಿಸಿದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ.

    raveena

    ತಾನು ನಟಿಯಾಗಿ ಅಭಿನಯಿಸುತ್ತಿದ್ದ ಸಂದರ್ಭದಲ್ಲಿ ನನ್ನ ವಿರುದ್ಧ ಗಾಸಿಪ್ ಕಾಲಂಗಳಲ್ಲಿ ಏನೇನೋ ಲೇಖನಗಳು ಪ್ರಕಟವಾಗುತ್ತಿದ್ದವು. ಆದರೆ ನಾನು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಾನು ನನ್ನದೇ ಆದ ಕೆಲಸವನ್ನು ಮಾಡಿಕೊಂಡು, ನನ್ನ ಸ್ವಂತ ನಿಯಮಗಳಿಗೆ ಅನುಗುಣವಾಗಿ ಬದುಕಲು ಬಯಸುತ್ತಿದ್ದೆ ಎಂದು ರವೀನಾ ಹೇಳಿದ್ದಾರೆ.

    ಇಡೀ ಭಾರತ ಚಿತ್ರರಂಗವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ್ದು ‘ಕೆಜಿಎಫ್’ ಸಿನಿಮಾ. ಕೆಜಿಎಫ್-2 ಸಿನಿಮಾ ಕೂಡ ಬಿಡುಗಡೆಯ ಮೊದಲೇ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ರವೀನಾ ಟಂಡನ್ ‘ಕೆಜಿಎಫ್-2’ ಸಿನಿಮಾದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದ ಅಭಿನಯಿಸಿದ್ದಾರೆ.

    Raveena Tondan Prashanth neel kgf 2

    ಇತ್ತೀಚೆಗೆ ಸಿನಿಮಾದ ಬಗ್ಗೆ ಮಾತನಾಡುತ್ತಾ, “ಕೆಜಿಎಫ್ ಸಿನಿಮಾದಲ್ಲಿ ನಾನು ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಅದು ತುಂಬ ಪವರ್ ಫುಲ್ ಪಾತ್ರವಾಗಿದೆ. ಅಲ್ಲದೇ ಬಹಳ ಕುತೂಹಲ ಹೊಂದಿರುವ ಈ ಸಿನಿಮಾದಲ್ಲಿ ಅವಳೇ ಹೀರೋ ಆಗಿರುತ್ತಾಳೆ. ಹಾಗೆಯೇ ವಿಲನ್ ಕೂಡ ಅವಳೇ ಆಗಿರುತ್ತಾಳೆ. ಕೆಜಿಎಫ್ ಸಿನಿಮಾ ಕಥೆ ತುಂಬಾ ಆಸಕ್ತಿದಾಯಕವಾಗಿದೆ” ಎಂದು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದರು.

  • ನಾವು ಪಾತ್ರಧಾರಿಗಳಷ್ಟೇ, ನಿಜವಾದ ಹೀರೋಗಳು ನೀವು: ಸೈನಿಕರಿಗೆ ಶ್ವೇತಾ ನಮನ

    ನಾವು ಪಾತ್ರಧಾರಿಗಳಷ್ಟೇ, ನಿಜವಾದ ಹೀರೋಗಳು ನೀವು: ಸೈನಿಕರಿಗೆ ಶ್ವೇತಾ ನಮನ

    ಬೆಂಗಳೂರು: ಪ್ರಾಣಕ್ಕೆ ಅಂಜದೇ ನಮ್ಮೆಲ್ಲರಿಗೋಸ್ಕರ ಹೋರಾಡುತ್ತಿರುವ ಯೋಧರೇ ನಿಜವಾದ ಹೀರೋಗಳು ಎಂದು ನಟಿ ಮತ್ತು ನಿರೂಪಕಿ ಶ್ವೇತಾ ಚಂಗಪ್ಪ ಅವರು ಹೇಳಿದ್ದಾರೆ.

    ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಕುತಂತ್ರಿ ಚೀನಾ ತನ್ನ ನರಿ ಬುದ್ಧಿಯನ್ನು ತೋರುತ್ತಿದೆ. ಕಳೆದ ಸೋಮವಾರ ರಾತ್ರಿ ಚೀನಾ ಹಾಗೂ ಭಾರತೀಯ ಸೈನಿಕರ ನಡುವೆ ಸಂಘರ್ಷ ನಡೆದಿದೆ. ಚೀನಾದ ಸೈನಿಕರ ಜೊತೆ ಕೆಚ್ಚೆದೆಯಿಂದ ಹೋರಾಡಿದ ನಮ್ಮ ಭಾರತೀಯ ಸೇನೆಯ 20 ಜನರ ಯೋಧರು ಹುತಾತ್ಮರಾಗಿದ್ದಾರೆ. ಯೋಧರು ಹುತಾತ್ಮರಾಗಿದ್ದಕ್ಕೆ ಇಡೀ ದೇಶವವೇ ಕಂಬನಿ ಮಿಡಿದಿದೆ.

    https://www.instagram.com/p/CBkRRKEjoUU/

    ಈಗ ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಶ್ವೇತಾ ಚಂಗಪ್ಪ. ದೇಶ ಕಾಯುವ ಯೋಧರೇ, ನೀವು ನಮ್ಮೆಲ್ಲರ ಜೀವನದ ನಿಜವಾದ ಹೀರೋಗಳು. ನಿಮ್ಮನ್ನು ಬಣ್ಣಿಸಲು ಪದಗಳು ಸಿಗುವುದಿಲ್ಲ. ಪರದೆಯ ಮೇಲೆ ಪಾತ್ರ ಮಾಡುವ ನಾವು ನಟ ನಟಿಯರು ಹಾಗೂ ಕೇವಲ ಪಾತ್ರಧಾರಿಗಳು ಅಷ್ಟೇ. ಆದರೆ ನೀವು ನಿಜವಾದ ಹೀರೋಗಳು ಎಂದು ಯೋಧರನ್ನು ಹಾಡಿಹೊಗಳಿದ್ದಾರೆ.

    Army india china

    ಜೊತೆಗೆ ನಿಮ್ಮ ಪ್ರಾಣಕ್ಕೆ ಅಂಜದೆ ನಮ್ಮ ದೇಶಕ್ಕಾಗಿ, ನಮ್ಮೆಲ್ಲರಿಗೋಸ್ಕರ ಹೋರಾಟ ಮಾಡುತ್ತೀರಿ. ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಪ್ರತಿಯೊಬ್ಬ ಭಾರತೀಯ ಸೈನಿಕನಿಗೂ ನನ್ನ ಕೋಟಿ ಕೋಟಿ ನಮನ. ನಿಮ್ಮ ಬಲಿದಾನಕ್ಕೆ ನಾನು ಚಿರಋಣಿ. ಯುದ್ಧದಲ್ಲಿ ಅಮರರಾಗಿರುವ ಎಲ್ಲಾ ಯೋಧರ ಕುಟುಬದವರಿಗೆ ಆ ಭಗವಂತ ಹೆಚ್ಚಿನ ಶಕ್ತಿಯನ್ನೂ ಕೊಡಲಿ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಡಿರುವ ಶ್ವೇತಾ ಭಾರತೀಯ ಸೇನೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

    india china ladakh border conflict

    ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 40ಕ್ಕೂ ಹೆಚ್ಚು ಮಂದಿ ಯೋಧರನ್ನು ಸೆದೆಬಡಿದಿದೆ. ಇದರಲ್ಲಿ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿತ್ತು.

  • ಹೀರೋ ತಂಗಾಳಿಗಿಂತ ತಂಪಾಗಿಲ್ವಾ?- ಹಾಟ್ ವಿಡಿಯೋ ಹಂಚ್ಕೊಂಡ ರಾಖಿ

    ಹೀರೋ ತಂಗಾಳಿಗಿಂತ ತಂಪಾಗಿಲ್ವಾ?- ಹಾಟ್ ವಿಡಿಯೋ ಹಂಚ್ಕೊಂಡ ರಾಖಿ

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಿನಿಮಾಗಳಿಂದ ದೂರವಾಗಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಫುಲ್ ಆ್ಯಕ್ಟೀವ್ ಆಗಿರುತ್ತಾರೆ. ವಿಡಿಯೋವೊಂದನ್ನು ಪೋಸ್ಟ್ ಮಾಡಿಕೊಂಡಿರುವ ರಾಖಿ ಸಾವಂತ್, ಈ ಹೀರೋ ತಂಗಾಳಿಗಿಂತ ತಂಪಾಗಿಲ್ವಾ? ಎಂದು ಬರೆದುಕೊಂಡಿದ್ದಾರೆ.

    ಮರಭೂಮಿಯಲ್ಲಿ ಚಿತ್ರೀಕರಣದ ವಿಡಿಯೋವನ್ನು ರಾಖಿ ಸಾವಂತ್ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ರಾಖಿ ಕೆಂಪು ಡ್ರೆಸ್‍ನಲ್ಲಿ ಹಾಟ್ ರೆಡ್ ಚಿಲ್ಲಿಯಾಗಿ ಕಾಣಿಸಿಕೊಂಡರೆ ಸಹ ನಟ ಬ್ಲ್ಯಾಕ್ ಶರ್ಟ್ ನಲ್ಲಿ ಕೂಲ್ ಆಗಿ ಮಿಂಚಿದ್ದಾರೆ. ಹಾಗಾಗಿ ಹೀರೋ ತಂಗಾಳಿಗಿಂತ ಕೂಲ್ ಆಗಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೋಗೆ 1 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, ಮುನ್ನೂರಕ್ಕೂ ಹೆಚ್ಚು ಕಮೆಂಟ್ ಬಂದಿವೆ.

    https://www.instagram.com/p/B7TjsL2B6Td/

    ಹೊಸ ವರ್ಷದಂದು ರಾಖಿ ಸಾವಂತ್, ವಿಡಿಯೋ ಪೋಸ್ಟ್ ಮಾಡಿ ಶುಭಾಶಯ ತಿಳಿಸಿದ್ದರು. ಶುಭಾಶಯ ತಿಳಿಸಿದ ವ್ಯಕ್ತಿ ಯಾರೆಂಬ ಪ್ರಶ್ನೆಯೊಂದು ಸಹ ಹುಟ್ಟಿಕೊಂಡಿತ್ತು. ವಿಶ್ ಮಾಡಿದ ಆ ವ್ಯಕ್ತಿ ರಾಖಿಯ ಪತಿ ಇರಬಹುದೆಂದು ಬಹುತೇಕರು ಕಮೆಂಟ್ ಮಾಡಿದ್ದರು. ಕೊನೆಗೆ ರಾಖಿ ಸಾವಂತ್ ಆತ ನನ್ನ ಪತಿ ಅಲ್ಲ, ಸೋದರ ಎಂದು ಸ್ಪಷ್ಟನೆ ನೀಡಿದ್ದರು.

  • ಹೀರೋ ಆದ ಬಿಗ್‍ಬಾಸ್ ನವೀನ್ ಸಜ್ಜು

    ಹೀರೋ ಆದ ಬಿಗ್‍ಬಾಸ್ ನವೀನ್ ಸಜ್ಜು

    ಬೆಂಗಳೂರು: ‘ಬಿಗ್‍ಬಾಸ್ ಸೀಸನ್ 6’ರ ಗಾಯಕ ಮತ್ತು ಸಂಗೀತ ನಿರ್ದೇಶಕ ನವೀನ್ ಸಜ್ಜು ಇದೀಗ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ಸಿದ್ಧರಾಗುತ್ತಿದ್ದಾರೆ.

    ಗಾಯಕ ನವೀನ್ ಸಜ್ಜು ಅವರಿಗೆ ನಾಟನಾಗಬೇಕೆಂಬ ಆಸೆ ಇತ್ತು. ಇದೀಗ ಅವರ ಆಸೆ ಈಡೇರುತ್ತಿದ್ದು, ಇವರ ಮೊದಲ ಸಿನಿಮಾಗೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ದೇಶಕ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

    DqgCaZMWsAAIODG

    ಈ ಸಿನಿಮಾಗೆ ‘ಚಾರ್ಲಿ ಚಾಪ್ಲಿನ್’ ಎಂದು ಹೆಸರಿಟ್ಟಿದ್ದಾರೆ. ಇದೊಂದು ಹಾಸ್ಯ ಪ್ರಧಾನ ಸಿನಿಮಾವಾಗಿರುವುದರಿಂದ ಈ ಟೈಟಲ್ ಫಿಕ್ಸ್ ಮಾಡಲಾಗಿದೆ. ಬೆಂಗಳೂರಿನಿಂದ ಮಡಿಕೇರಿಗೆ ಹೋಗುವ ಒಂದು ತಂಡಕ್ಕೆ ಅಲ್ಲಿ ಏನೆಲ್ಲ ಆಗುತ್ತದೆ ಎಂಬುವುದನ್ನು ಈ ಸಿನಿಮಾದ ಮೂಲಕ ಹೇಳಲಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

    ಸಿನಿಮಾದಲ್ಲಿ ನವೀನ್ ಸಜ್ಜುಗೆ ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಳ್ಳಲ್ಲಿದ್ದಾರೆ. ಸದ್ಯಕ್ಕೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಜುಲೈನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

  • ಚುನಾವಣೆಯ ಹೀರೋಗಳನ್ನು ಪರಿಚಯಿಸಿದ ಡಿಸಿಪಿ ಅಣ್ಣಾಮಲೈ

    ಚುನಾವಣೆಯ ಹೀರೋಗಳನ್ನು ಪರಿಚಯಿಸಿದ ಡಿಸಿಪಿ ಅಣ್ಣಾಮಲೈ

    ಬೆಂಗಳೂರು: ನಗರದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಚುನಾವಣೆಯ ಹೀರೋಗಳನ್ನು ಪರಿಚಯಿಸಿದ್ದಾರೆ. ಅಣ್ಣಮಲೈ ಅವರು ತಮ್ಮ ಹೀರೋಗಳ ಫೋಟೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ಅಣ್ಣಾಮಲೈ ಅವರು ತಮ್ಮ ಜೊತೆ ಕೆಲಸ ಮಾಡುವ ಹೋಂ ಗಾರ್ಡ್‌ಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿ ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಇವರು ಈ ಚುನಾವಣೆ ಹಾಗೂ ಪ್ರತಿ ಚುನಾವಣೆಯ ನನ್ನ ಹೀರೋಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ನನಗೆ ಈ ಚುನಾವಣೆ ಹಾಗೂ ಪ್ರತಿ ಚುನಾವಣೆಯ ನಿಜವಾದ ಹೀರೋಗಳೆಂದರೆ ನನ್ನ ಜೊತೆ ಕೆಲಸ ಮಾಡುವ ಹೋಂ ಗಾರ್ಡ್‌ಗಳು. ಈ ಚಿಕ್ಕ ಗುಂಪಿನಲ್ಲಿ ದಣಿವರಿಯದ ಯೋಧರು ಎಂದರೆ ಅದು ಕಾರ್ಪೆಂಟರ್ಸ್, ಕೂಲಿ ಕಾರ್ಮಿಕರು, ಡ್ರೈವರ್ ಇತ್ಯಾದಿ. ಈ ಎಲ್ಲಗಿಂತ ದೊಡ್ಡ ಮಿಗಿಲಾದ ಕೆಲಸವೆಂದರೆ ಅದು ಹೋಂ ಗಾರ್ಡ್ ಕೆಲಸ ಎಂದು ಟ್ವೀಟ್ ಮಾಡಿದ್ದಾರೆ.

    ಅಣ್ಣಾಮಲೈ ಅವರು ಹೋಂ ಗಾರ್ಡ್‌ಗಳ ಜೊತೆ ತೆಗೆದುಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಈ ಫೋಟೋ ನೋಡಿದ ಜನರು ಅಣ್ಣಮಲೈ ಅವರ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ನಿಜ ಜೀವನದಲ್ಲೂ ಹೀರೋ ಆದ ಬಾಹುಬಲಿ

    ನಿಜ ಜೀವನದಲ್ಲೂ ಹೀರೋ ಆದ ಬಾಹುಬಲಿ

    ಹೈದರಾಬಾದ್: ಚಿತ್ರರಂಗದಲ್ಲಿ ನಟ-ನಟಿಯರು ತಮ್ಮ ಕೈಲಾದ ಸಹಾಯವನ್ನು ನೊಂದವರಿಗೆ ಮಾಡುತ್ತಿರುತ್ತಾರೆ. ಅದೇ ರೀತಿ ಈಗ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಚಾರಿಟಿಯೊಂದಕ್ಕೆ 10 ಲಕ್ಷ ರೂ. ದಾನ ಮಾಡಿದ್ದಾರೆ.

    ಪ್ರಭಾಸ ಪ್ರತಿ ವರ್ಷವೂ ಅವರು ಗಳಿಸುವ ಆದಾಯದಿಂದ ಲಕ್ಷಾಂತರ ರೂಪಾಯಿಗಳನ್ನು ಚಾರಿಟಿಗಳಿಗೆ ದಾನ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಆದರೆ ಇತ್ತೀಚೆಗೆ ಪ್ರಭಾಸ್ ಅವರು ನಲ್ಗೊಂಡ ಜಿಲ್ಲೆಯ ಅಂಧ ಶಾಲೆಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.

    ಪ್ರಭಾಸ್ ಅಲ್ಲಿನ ಅಂಧ ಮಕ್ಕಳಿಗೋಸ್ಕರ ಸುಮಾರು 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಅಷ್ಟೇ ಅಲ್ಲದೇ ಅವರು ಮಕ್ಕಳೊಂದಿಗೆ ಕೆಲ ಸಮಯವನ್ನು ಕಳೆದಿದ್ದಾರೆ. ಇದರಿಂದ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

    ಸದ್ಯಕ್ಕೆ ಪ್ರಭಾಸ್ ಬಹು ನೀರೀಕ್ಷಿತ `ಸಾಹೋ’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಶ್ರದ್ಧಾ ಕಪೂರ್, ನೀಲ್ ನಿತಿನ್ ಮುಖೇಶ್ ಮತ್ತು ಜಾಕಿ ಶ್ರಾಫ್ ಪ್ರಮುಖ ಗಣ್ಯರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಮೂರು ಭಾಷೆಗಳಿಲ್ಲಿ ಮೂಡಿಬರಲಿದೆ. ಸಾಹೋ ಸಿನಿಮಾ ಮುಂದಿನ ವರ್ಷ ತೆರೆಕಾಣುವ ಸಾಧ್ಯತೆಗಳಿವೆ.