Tag: ಸ್ನೇಹಿತೆ

  • ಸ್ನೇಹಿತೆಯ ಸೂಚನೆಯಂತೆ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರ ಬಂಧನ

    ಸ್ನೇಹಿತೆಯ ಸೂಚನೆಯಂತೆ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರ ಬಂಧನ

    ಮುಂಬೈ: 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ಸ್ನೇಹಿತೆಯೇ ಅತ್ಯಾಚಾರವೆಸಗುವಂತೆ ಸೂಚಿಸಿದ್ದರಿಂದ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮುಂಬೈನ ವಿರಾರ್ (ಪಶ್ಚಿಮ) ಪ್ರದೇಶದಲ್ಲಿ ನಡೆದಿದೆ.

    ಕೇವಲ ಆರು ಗಂಟೆಗಳ ಒಳಗೆ ಮೂವರು ಆರೋಪಿಗಳು ಸೇರಿದಂತೆ 21 ವರ್ಷದ ಯುವತಿಯನ್ನು ಪೊಲೀಸರು ಇದೀಗ ಬಂಧಿಸಿದ್ದು, ಆಗಸ್ಟ್ 16ರ ಮಂಗಳವಾರದಂದು ಸಂಜೆ 7 ಗಂಟೆಗೆ ಸಂತ್ರಸ್ತೆ ತನ್ನ ಸೆಲ್ ಫೋನ್ ರಿಪೇರಿ ಮಾಡಿಸಿಕೊಳ್ಳಲು ತನ್ನ ಮನೆಯ ಸಮೀಪವಿರುವ ಅಂಗಡಿಗೆ ಹೋದಾಗ ಈ ಘಟನೆ ನಡೆದಿದೆ.

    rape

    ಮೊಬೈಲ್ ಅಂಗಡಿಗೆ ಹೋಗಿದ್ದ ಬಾಲಕಿ, ಯುವತಿಯನ್ನು ಭೇಟಿಯಾದಾಗ ಆಟ ಆಡಲು ಆಕೆಯನ್ನು ಕರೆದೊಯ್ದಿದ್ದಾಳೆ. ನಂತರ ಬಾಲಕಿಯನ್ನು ಪ್ರತ್ಯೇಕೆ ಸ್ಥಳಕ್ಕೆ ಕರೆದೊಯ್ದು ತನ್ನ ಮೂವರು ಗೆಳೆಯರನ್ನು ಕರೆಸಿದಳು. ಮಧ್ಯರಾತ್ರಿ ಸ್ಥಳಕ್ಕೆ ಬಂದ ಆರೋಪಿಗಳನ್ನು ಬಾಲಕಿಯನ್ನು ಎಳೆದೊಯ್ದಿದ್ದಾರೆ. ಇದನ್ನೂ ಓದಿ: ತೇಜಸ್ವಿ ಆಡಿಯೋ – ಚಿಕ್ಕಮಗಳೂರು ಯುವ ಮೋರ್ಚಾ ಅಧ್ಯಕ್ಷನಿಗೆ ಕೊಕ್‌

    POLICE JEEP

    ನಂತರ ಬಾಲಕಿಗೆ ಬೆದರಿಕೆ ಹಾಕಿ ಸ್ನೇಹಿತೆ ಒಬ್ಬನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಹೇಳಿದ್ದಾಳೆ. ಅದರಂತೆ ಇಬ್ಬರು ವ್ಯಕ್ತಿಗಳು ಒಬ್ಬರ ನಂತರ ಮತ್ತೊಬ್ಬರು ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕಿರುಕುಳ ನೀಡಿದ್ದಾರೆ. ಈ ಎಲ್ಲವನ್ನು ಸಂತ್ರಸ್ತೆ ಸ್ನೇಹಿತೆ ಅಲ್ಲಿಯೇ ಇದ್ದುಕೊಂಡು ಸುಮ್ಮನೆ ನೋಡಿದ್ದಾಳೆ. ಕೊನೆಗೆ ಬುಧವಾರ ಮುಂಜಾನೆ ಸಂತ್ರಸ್ತೆಯನ್ನು ಆಕೆಯ ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

    ಮನೆಗೆ ಬಂದ ಬಾಲಕಿ ನಂತರ ನಡೆದ ಘಟನೆಯನ್ನೆಲ್ಲಾ ಆಕೆಯ ತಾಯಿಗೆ ವಿವರಿಸಿದಾಗ, ಕುಟುಂಬಸ್ಥರು ವಿರಾರ್ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿಯಾಗಿದ್ದರೆ, ಮತ್ತೊಬ್ಬ ತರಕಾರಿ ವ್ಯಾಪಾರಿಯಾಗಿದ್ದಾನೆ, ಉಳಿದ ಇಬ್ಬರೂ ವಿರಾರ್ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ರೀತಿಸಿದವಳ ಕೊಂದು ದೇಹವನ್ನು ಪೀಸ್, ಪೀಸ್ ಮಾಡ್ದ – ಪತ್ರಕರ್ತ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ

    ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ

    ಕಲಬುರಗಿ: ಯುವತಿಯೊಬ್ಬಳ ಮೇಲೆ ಆಕೆಯ ಸ್ನೇಹಿತೆಯ ಸಹೋದರನೇ ಅತ್ಯಾಚಾರ ಎಸಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಆರೋಪಿಯನ್ನು ಸಂದೀಪ್ ಎಂದು ಗುರುತಿಸಲಾಗಿದೆ. ಸ್ನೇಹಿತೆಯ ಮನೆಯ ಬೆಡ್ ರೂಮ್ ನಲ್ಲೆ ಯುವತಿ ಮೇಲೆ ದುಷ್ಕರ್ಮಿ ಕೃತ್ಯ ಎಸಗಿದ್ದಾನೆ. ಸಂತ್ರಸ್ತ ಯುವತಿಯ ಸ್ನೇಹಿತೆ ಕೂಡ ಅತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದಾಳೆ ಎನ್ನಲಾಗಿದೆ. ಯುವತಿ ಕಿರುಚಾಡಿದರೂ ಸಂದೀಪ್ ಬಿಡದೆ ಯುವತಿಯ ಮೇಲೆ ಅತ್ಯಾಚಾರ ಮಾಡುವ ಮೂಲಕ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.

    MARRIAGE GARLAND

    ಸಂದೀಪ್ ಅತ್ಯಾಚಾರ ಎಸಗೋದನ್ನ ಯುವತಿ ಮದುವೆ ಆಗೋ ಹುಡುಗನ ಸ್ನೇಹಿತ ನೋಡಿದ್ದ.ಈ ಹಿನ್ನೆಲೆಯಲ್ಲಿ ಯುವತಿಗೆ ತನ್ನ ಮದುವೆ ಕ್ಯಾನ್ಸಲ್ ಆಗುತ್ತೆ ಅನ್ನೋ ಭಯ ಕಾಡಿದೆ. ಇದೇ ಭಯದಿಂದ ಆಕೆ ರೈಲ್ವೆ ಟ್ರ್ಯಾಕ್ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    MARRIAGE

    ಆತ್ಮಹತ್ಯೆಯ ವೇಳೆ ರೈಲ್ವೆ ಹಳಿಯ ಮೇಲೆ ಒಂದು ಕಾಲು ಕಟ್ ಆಗಿ ಬಿದ್ದಿದೆ. ಆದರೆ ಯುವತಿ ಭಾರೀ ಅಪಾಯದಿಂದ ಪಾರಾಗಿದ್ದು, ಸದ್ಯ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇತ್ತ ಅತ್ಯಾಚಾರ ಎಸಗಿದ ಬಳಿಕ ಕಾಮುಕ ಸಂದೀಪ್ ಎಸ್ಕೇಪ್ ಆಗಿದ್ದಾನೆ.

    ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸೋಶಿಯಲ್ ಮೀಡಿಯಾದಲ್ಲಿ ರಿಕ್ವೆಸ್ಟ್ ಸ್ವೀಕರಿಸದ್ದಕ್ಕೆ ಸ್ನೇಹಿತೆಯನ್ನೆ ಹತ್ಯೆಗೈದ

    ಸೋಶಿಯಲ್ ಮೀಡಿಯಾದಲ್ಲಿ ರಿಕ್ವೆಸ್ಟ್ ಸ್ವೀಕರಿಸದ್ದಕ್ಕೆ ಸ್ನೇಹಿತೆಯನ್ನೆ ಹತ್ಯೆಗೈದ

    ಲಕ್ನೋ: ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತೆಯೊಬ್ಬಳು ರಿಕ್ವೆಸ್ಟ್‌ ಸ್ವೀಕರಿಸದಿದ್ದಕ್ಕಾಗಿ ಆಕೆಯನ್ನು ಕೊಂದು, ಆಕೆಯ ತಾಯಿಗೂ ಚಾಕುವಿನಿಂದ ಇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಮುಜಾಫನಗರ ನಿವಾಸಿ ರವಿ ಆರೋಪಿ. 16 ವರ್ಷದ ಬಾಲಕಿಯ ಮನೆಗೆ ರವಿ ಮದುವೆ ಕಾರ್ಡ್‍ನ್ನು ನೀಡಲು ಬಂದಿದ್ದ. ಆ ಮದುವೆ ಕಾರ್ಡ್‍ನ್ನು ತೆಗೆದುಕೊಳ್ಳಲು ಬಾಲಕಿ ಮುಂದಾಗುತ್ತಿದ್ದಂತೆ ಆತ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಆಕೆಯನ್ನು ರಕ್ಷಿಸಲು ಬಂದ ಆಕೆಯ ತಾಯಿ ಸುನೀತಾಳ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ಚಾಕುವಿನಿಂದ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    Mobile 1

    ಗಾಯಗೊಂಡ ಸುನೀತಾ ಮತ್ತು ರವಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಫರಿದಾಬಾದ್ ಕಾರ್ಖಾನೆಯ ಭದ್ರತಾ ಸಿಬ್ಬಂದಿ ಬಾಲಕಿಯ ತಂದೆ ತೇಜ್ವೀರ್ ಸಿಂಗ್ ದೂರು ನೀಡಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಂದೇ ಬಿಡ್ತು ಎಡಿಟ್ ಬಟನ್ – ಟ್ವಿಟ್ಟರ್ ರೋಲ್‌ಔಟ್ ಪ್ರಾರಂಭ

    crime

    ದೂರಿನಲ್ಲಿ ತಂದೆ ತೇಜ್‍ವೀರ್, ತನ್ನ ಮಗಳು ಫೇಸ್‍ಬುಕ್‍ನಲ್ಲಿ ರವಿಯ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸದ ಕಾರಣ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೆಲಸಕ್ಕೆ ಸೇರಲು ಗರ್ಭಿಣಿಯರು ಅನರ್ಹರು ಎಂದಿದ್ದ ಬ್ಯಾಂಕ್‌ಗೆ ನೋಟಿಸ್

    Live Tv

  • ರಾತ್ರಿಯಿಡೀ ಅಶ್ಲೀಲ ಮೆಸೇಜ್ ಕಳಿಸ್ತಿದ್ದ – ಮಂಗಳೂರು ವಕೀಲನ ವಿರುದ್ಧ ವಿದ್ಯಾರ್ಥಿನಿ ಆರೋಪ

    ರಾತ್ರಿಯಿಡೀ ಅಶ್ಲೀಲ ಮೆಸೇಜ್ ಕಳಿಸ್ತಿದ್ದ – ಮಂಗಳೂರು ವಕೀಲನ ವಿರುದ್ಧ ವಿದ್ಯಾರ್ಥಿನಿ ಆರೋಪ

    ಮಂಗಳೂರು: ಮಂಗಳೂರಿನ ಖ್ಯಾತ ವಕೀಲ ರಾಜೇಶ್ ಭಟ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಮತ್ತು ರಾತ್ರಿ ಅಶ್ಲೀಲ ಮೇಸೆಜ್‍ಗಳನ್ನು ಕಳುಹಿಸುತ್ತಿದ್ದ ಎಂದು ಸಂತ್ರಸ್ತೆ ವಿದ್ಯಾರ್ಥಿನಿ ಆರೋಪಿಸಿದ್ದಾರೆ.

    ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂತ್ರಸ್ತೆ ವಿದ್ಯಾರ್ಥಿನಿ, ಇಂಟರ್ನ್ ಶಿಪ್ ಮಾಡುತ್ತಿದ್ದ ನನ್ನನ್ನು ರಾತ್ರಿ ಎಂಟು ಗಂಟೆಯವರೆಗೂ ಆಫೀಸ್‍ನಲ್ಲಿ ಕೆಲಸ ಮಾಡೋಕೆ ಹೇಳಿದ್ದ, ರಾತ್ರಿ ಅಶ್ಲೀಲ ಮೆಸೇಜ್‍ಗಳನ್ನು ಆತ ನನಗೆ ಕಳುಹಿಸಿದ್ದ, ನಾನು ಆ ಮೆಸೇಜ್‍ಗಳಿಗೆ ರಿಪ್ಲೈ ಮಾಡಿರಲಿಲ್ಲ, ಒಂದು ದಿನ ರಾತ್ರಿ ಎಂಟು ಗಂಟೆಯ ತನಕ ಕೆಲಸ ಮಾಡಿಸಿದ್ದು ಅಂದು ಕಛೇರಿಯಲ್ಲಿ ಯಾರೂ ಇರಲಿಲ್ಲ, ಈ ವೇಳೆ ಛೇಂಬರ್‍ಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದ, ಆ ಬಳಿಕ ಯಾರಿಗೂ ಹೇಳದಂತೆ ಕೊಲೆ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ತನ್ನ ಅಳಲನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಳು ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ- ರಾಜ್ ಕುಂದ್ರಾ ಮಿಸ್ಸಿಂಗ್

    Mangaluru Lawyer

    ಸೆಪ್ಟೆಂಬರ್ 25ರಂದು ವಿದ್ಯಾರ್ಥಿನಿಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದು, ಈ ವಿಚಾರವನ್ನು ಬಹಿರಂಗಗೊಳಿಸದಂತೆ ರಾಜೇಶ್ ಬೆದರಿಕೆಯನ್ನು ಹಾಕಿದ್ದ ಎಂದು ಸಂತ್ರಸ್ತೆ ವಿದ್ಯಾರ್ಥಿನಿ ಆರೋಪಿಸಿದ್ದರು. ಘಟನೆಯ ಬಳಿಕ ವಿದ್ಯಾರ್ಥಿನಿಗೆ ದೂರವಾಣಿ ಕರೆ ಮಾಡಿ ರಾಜೇಶ್ ನನ್ನಿಂದ ತಪ್ಪಾಗಿದೆ ಎಂದು ಗೋಗರೆದಿದ್ದ ಆಡಿಯೋ ಸಹ ವೈರಲ್ ಆಗಿತ್ತು. ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕಾನೂನು ಪಾಠ ಮಾಡಬೇಕಿದ್ದ ವಕೀಲನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    Mangaluru Lawyer 3

    ರಾಜೇಶ್ ಲೈಂಗಿಕ ದೌರ್ಜನ್ಯ ನೀಡಿರುವುದಲ್ಲದೇ ಸಂತ್ರಸ್ತೆಯ ಸ್ನೇಹಿತೆಗೂ ಬೆದರಿಕೆ ಹಾಕಿರುವ ದೂರು ದಾಖಲಾಗಿತ್ತು. ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ರಾಜೇಶ್ ಭಟ್ ಫೋನ್‍ನಲ್ಲಿ ಮಾತನಾಡಿರುವ ಆಡಿಯೋವನ್ನು ಲೀಕ್ ಮಾಡಿದ್ದು, ನೀನೇ ಎಂದು ಆರೋಪಿಸಿ ಈ ಹಿಂದೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಸ್ನೇಹಿತೆಗೆ ತನ್ನ ಕಡೆಯವರಿಂದ ಬೆದರಿಕೆ ಹಾಕಿಸಿದ್ದರು. ಹೀಗಾಗಿ ಸಂತ್ರಸ್ತೆಯ ಸ್ನೇಹಿತೆಯು ಈ ಬಗ್ಗೆ ದೂರು ನೀಡಿದ್ದರು. ಅಲ್ಲದೇ ರಾಜೇಶ್ ಸೇರಿದಂತೆ ಬೆದರಿಕೆ ಹಾಕಿದ ಇತರ ಸಿಬ್ಬಂದಿ ವಿರುದ್ಧವು ಪ್ರಕರಣ ದಾಖಲಿಸಲಾಗಿತ್ತು.

  • ಕಾನೂನು ಪಾಠ ಮಾಡಬೇಕಿದ್ದ ವಕೀಲನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    ಕಾನೂನು ಪಾಠ ಮಾಡಬೇಕಿದ್ದ ವಕೀಲನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    – ಮಂಗಳೂರಿನ ಖ್ಯಾತ ವಕೀಲನ ವಿರುದ್ಧ ದೂರು
    – ಕಚೇರಿಗೆ ಬೀಗ ಹಾಕಿ ಗಣೇಶ್ ನಾಪತ್ತೆ

    ಮಂಗಳೂರು: ಮಂಗಳೂರಿನ ಪ್ರಸಿದ್ದ ವಕೀಲ ಕೆ.ಎಸ್.ಎನ್ ರಾಜೇಶ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.

    ನಗರದ ಕರಂಗಾಲ್ಪಡಿಯ ರಾಜೇಶ್ ಭಟ್ ಕಚೇರಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ಕಾನೂನು ವಿದ್ಯಾರ್ಥಿನಿ ಈ ಆರೋಪವನ್ನು ಮಾಡಿದ್ದು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.  ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ

    ಸೆಪ್ಟೆಂಬರ್ 25ರಂದು ವಿದ್ಯಾರ್ಥಿನಿಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದು, ಈ ವಿಚಾರವನ್ನು ಬಹಿರಂಗಗೊಳಿಸದಂತೆ ರಾಜೇಶ್ ಬೆದರಿಕೆಯನ್ನು ಹಾಕಿದ್ದ ಎಂದು ಸಂತ್ರಸ್ತೆ ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಘಟನೆಯ ಬಳಿಕ ವಿದ್ಯಾರ್ಥಿನಿಗೆ ದೂರವಾಣಿ ಕರೆ ಮಾಡಿರುವ ರಾಜೇಶ್ ನನ್ನಿಂದ ತಪ್ಪಾಗಿದೆ ಎಂದು ಗೋಗರೆದಿದ್ದಾರೆ. ಈ ಆಡಿಯೋ ಸಹ ವೈರಲ್ ಆಗಿದ್ದು, ನಿನ್ನೆ ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜೇಶ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

     Mangaluru Lawyer

    ರಾಜೇಶ್ ಲೈಂಗಿಕ ದೌರ್ಜನ್ಯ ನೀಡಿರುವುದಲ್ಲದೇ ಸಂತ್ರಸ್ತೆಯ ಸ್ನೇಹಿತೆಗೂ ಬೆದರಿಕೆ ಹಾಕಿರುವ ದೂರು ದಾಖಲಾಗಿದೆ. ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ರಾಜೇಶ್ ಭಟ್ ಫೋನ್‍ನಲ್ಲಿ ಮಾತನಾಡಿರುವ ಆಡಿಯೋವನ್ನು ಲೀಕ್ ಮಾಡಿದ್ದು, ನೀನೇ ಎಂದು ಆರೋಪಿಸಿ ಈ ಹಿಂದೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಸ್ನೇಹಿತೆಗೆ ತನ್ನ ಕಡೆಯವರಿಂದ ಬೆದರಿಕೆ ಹಾಕಿಸಿದ್ದಾರೆ. ಹೀಗಾಗಿ ಸಂತ್ರಸ್ತೆಯ ಸ್ನೇಹಿತೆಯು ಈ ಬಗ್ಗೆ ದೂರು ನೀಡಿದ್ದು ರಾಜೇಶ್ ಸೇರಿದಂತೆ ಬೆದರಿಕೆ ಹಾಕಿದ ಇತರ ಸಿಬ್ಬಂದಿ ವಿರುದ್ಧವು ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಶೇ.40 ರಷ್ಟು ಮಹಿಳೆಯರಿಗೆ ಟಿಕೆಟ್ – ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಕ್ರಾಂತಿಕಾರಿ ನಿರ್ಧಾರ

     Mangaluru Lawyer

    ಪ್ರಕರಣ ದಾಖಲಾಗುತ್ತಿದ್ದಂತೆ ತನ್ನ ಕಚೇರಿಗೆ ಬೀಗ ಹಾಕಿ ರಾಜೇಶ್ ನಾಪತ್ತೆಯಾಗಿದ್ದಾರೆ. ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕಚೇರಿ ಇದ್ದ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು ಸಿ.ಸಿ ಕ್ಯಾಮೆರಾ ಫೂಟೇಜ್ ವಶಪಡಿಸುವಂತೆ ಸೂಚನೆ ನೀಡಿದ್ದಾರೆ. ಈ ನಡುವೆ ಆರೋಪಿ ವಕೀಲ ರಾಜೇಶ್ ಭಟ್ ಅಜ್ಞಾತ ಸ್ಥಳದಿಂದ ಸ್ಪಷ್ಟನೆಯ ವೀಡಿಯೋ ರಿಲೀಸ್ ಮಾಡಿದ್ದು ನನ್ನ ವಿರುದ್ಧ ಇಬ್ಬರು ಯುವತಿಯರು ಷಡ್ಯಂತ್ರ ಮಾಡಿದ್ದಾರೆ ಎಂದು ದೂರಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಬೆದರಿಕೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: 45 ವರ್ಷದ ವ್ಯಕ್ತಿಯ ಜೊತೆ 25ರ ಯುವತಿ ಮದುವೆ

  • ಕೆಫೆ ಮುಂದೆ ಕ್ಯಾಮೆರಾಗೆ ಹಾಟ್ ಪೋಸ್ ನೀಡಿದ ಮೌನಿ ರಾಯ್

    ಕೆಫೆ ಮುಂದೆ ಕ್ಯಾಮೆರಾಗೆ ಹಾಟ್ ಪೋಸ್ ನೀಡಿದ ಮೌನಿ ರಾಯ್

    ಮುಂಬೈ: ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ಗೆಳತಿ ಜೊತೆ ಮುಂಬೈ ಬಾಂದ್ರಾದಲ್ಲಿರುವ ಕೆಫೆಯೊಂದರ ಬಳಿ ಕಾಣಿಸಿಕೊಂಡಿದ್ದಾರೆ. ಕಾರಿನಿಂದ ಬಂದ ಮೌನಿ ರಾಯ್ ವೈಟ್ ಕಲರ್ ಶಾರ್ಟ್ ಸ್ಲೀವ್ಸ್ ಲೆಸ್ ಟಾಪ್, ಕ್ರೀಮ್ ಕಲರ್ ಪ್ಯಾಂಟ್, ಸಿಂಪಲ್ ಚೈನ್, ಹಾಗೂ ಬ್ಲಾಕ್ ಕಲರ್ ಗೋಗಾಲ್ ಧರಿಸಿದ್ದರು.

    Mouni Roy

    ಕಾರಿನಿಂದ ಕೆಳಗಿಳಿದು ಕೂಡಲೇ ಡೋರ್ ಹಾಕಿ ಮುಂಗುರುಳು ಸರಿಪಡಿಸಿಕೊಳ್ಳುತ್ತಾ ಹೇರ್ ಫ್ರೀ ಹೇರ್ ಬಿಟ್ಟಿದ್ದ ಮೌನಿ ರಾಯ್ ಬಹಳ ಮುದ್ದು ಮುದ್ದಾಗಿ ಕಾಣುತ್ತಿದ್ದರು. ಇದನ್ನೂ ಓದಿ: ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

    Mouni Roy

    ಈ ಎಲ್ಲದರ ಮಧ್ಯೆ ಮೌನಿ ರಾಯ್ ಬ್ಲಾಕ್ ಕಲರ್ ಮಾಸ್ಕ್ ತೊಟ್ಟು ಕೊರೊನಾ ನಿಯಮವನ್ನು ಕೂಡ ಪಾಲಿಸಿದರು. ಇದನ್ನೂ ಓದಿ: ಸಲ್ವಾರ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಜಿಎಫ್ ಬೆಡಗಿ ಮೌನಿ ರಾಯ್

    Mouni Roy

    ನಂತರ ಗೆಳತಿ ಕೈ ಹಿಡಿದುಕೊಂಡು ಮುಂದೆ ಸಾಗಿದ ಮೌನಿ ರಾಯ್ ಕೆಫೆ ಮುಂಭಾಗ ಕ್ಯಾಮೆರಾಗೆ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದೇ ವೇಳೆ ಕೆಫೆ ಒಳಗೆ ಸಂಕೋಚದಿಂದ ಹೋಗುತ್ತಿದ್ದ ಗೆಳತಿಯನ್ನು ತಡೆದು ಪ್ರೀತಿಯ ಸ್ನೇಹಿತೆ ಜೊತೆ ಕ್ಯಾಮೆರಾಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಬೆಡಗಿ ಮೌನಿರಾಯ್‍ಗೆ ಮದುವೆ

    Mouni Roy

    ಸ್ಯಾಂಡಲ್‍ವುಡ್ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ಹಿಂದಿ ವರ್ಶನ್‍ನಲ್ಲಿ ಗಲಿ ಗಲಿ ಎಂಬ ಐಟಂ ಸಾಂಗ್‍ಗೆ ಮೌನಿ ರಾಯ್ ನಟ ರಾಕಿಂಗ್ ಸ್ಡಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಇನ್ನೂ ಈ ಹಾಡು ಹಿಂದಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದನ್ನೂ ಓದಿ: ಕೆಜಿಎಫ್ ನಟಿ ಮೌನಿ ರಾಯ್ ಹಾಟ್ ಲುಕ್‍ಗೆ ನೆಟ್ಟಿಗರು ಫಿದಾ

    Mouni Roy

    ಇತ್ತೀಚೆಗಷ್ಟೇ ಮೌನಿ ರಾಯ್ ಅವರು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ರಿಲೇಶನ್‍ಶಿಪ್‍ನಲ್ಲಿದ್ದಾರೆ. ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಾಗಲಿ ಅಥವಾ ಮಾಧ್ಯಮದ ಎದುರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅವರು ಹೇಳಿಕೊಂಡಿಲ್ಲ. ಆದರೆ ಅವರ ಪ್ರೇಮ ವಿಚಾರ ಬಿಟೌನ್‍ನಲ್ಲಿ ಹರಿದಾಡುತ್ತಿದ್ದು, ಜನವರಿಯಲ್ಲಿ ಮೌನಿ ಅವರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.

    https://www.youtube.com/watch?v=i2abGi7yQBw

  • ಸ್ನೇಹಿತೆಗೆ ದೋಸೆ ತಿನ್ನಿಸುವಾಗ ತಗ್ಲಾಕ್ಕೊಂಡ ಪತಿ – ಪತ್ನಿಯಿಂದ ಕಂಪ್ಲೆಂಟ್

    ಸ್ನೇಹಿತೆಗೆ ದೋಸೆ ತಿನ್ನಿಸುವಾಗ ತಗ್ಲಾಕ್ಕೊಂಡ ಪತಿ – ಪತ್ನಿಯಿಂದ ಕಂಪ್ಲೆಂಟ್

    ಮುಂಬೈ: ವಿವಾಹಿತನೊಬ್ಬ ಕಾರೊನೊಳಗೆ ತನ್ನ ಸ್ನೇಹಿತೆಗೆ ದೋಸೆ ತಿನ್ನಿಸುವ ವೇಳೆ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಅಪರೂಪದ ನಾಟಕೀಯ ದೃಶ್ಯ ಉತ್ತರ ಪ್ರದೇಶದ ಬಂದನಲ್ಲಿ ನಡೆದಿದೆ. ಪತಿಯ ಅನೇಕ ಅಕ್ರಮ ಸಂಬಂಧಗಳಿಗೆ ಬೇಸತ್ತ ಮಹಿಳೆ ಇದೀಗ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾಳೆ.

    dosa web

    ಮಹಿಳೆಯ ಪತಿ ಉತ್ತರ ಪ್ರದೇಶದ ಸರ್ಕಾರಿ ಜೂನಿಯರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆತ ತನ್ನ ಸ್ನೇಹಿತೆಯನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಹತ್ತಿರದ ಹೋಟೆಲ್ ನಿಂದ ದೋಸೆ ತೆಗೆದುಕೊಂಡು ಬಂದು ಕಾರಿನೊಳಗೆ ಆಕೆಗೆ ತಿನ್ನಿಸಿದ್ದಾನೆ. ಇದೇ ವೇಳೆ ಮಹಿಳೆ ಸಹೋದರನೊಂದಿಗೆ ಸ್ಥಳಕ್ಕೆ ಹೋದಾಗ ಪತಿ ರೆಡ್ ಹ್ಯಾಂಡ್ ಆಗಿ ಸ್ನೇಹಿತೆಯೊಂದಿಗೆ ಸಿಕ್ಕಿಬಿದ್ದಿದ್ದಾನೆ.

    dose masal

    ಪತಿ ಮಾಡಿದ ದ್ರೋಹಕ್ಕೆ ಕೋಪಗೊಂಡ ಪತ್ನಿ ಮತ್ತು ಆಕೆಯ ಸಹೋದರ ಇಬ್ಬರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಕಂಪ್ಲೆಂಟ್ ನೀಡಲು ಮುಂದಾಗಿದ್ದಾರೆ. ಆದರೆ ಭಾರತದಲ್ಲಿ ವ್ಯಭಿಚಾರ ಅಪರಾಧವೇನಲ್ಲ ಎಂದು ತಿಳಿಸಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    masal dose web

    ತನಿಖೆ ವೇಳೆ ತನ್ನ ಪತಿ ನನಗೆ ಮೊದಲ ಬಾರಿಗೆ ಮೋಸ ಮಾಡುತ್ತಿಲ್ಲ. ಮೊದಲಿನಿಂದಲೂ ಈತ ಅನೇಕ ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತಿ ವಿರುದ್ಧ ಮಹಿಳೆ ಆರೋಪಿಸಿದ್ದಾಳೆ.

    ವ್ಯಭಿಚಾರವು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2018ರಂದು ತೀರ್ಪು ನೀಡಿತ್ತು.

  • ರೇಪ್ ಕೇಸ್ ದಾಖಲಿಸಲು 800 ಕಿ.ಮೀ ಪ್ರಯಾಣ ಮಾಡಿದ ಯುವತಿ

    ರೇಪ್ ಕೇಸ್ ದಾಖಲಿಸಲು 800 ಕಿ.ಮೀ ಪ್ರಯಾಣ ಮಾಡಿದ ಯುವತಿ

    – ದುಬೈನಿಂದ ಬಂದು ಹೋಟೆಲಿನಲ್ಲಿ ಅತ್ಯಾಚಾರ
    – ಮತ್ತೆ ಸ್ನೇಹಿತೆಯ ಮನೆಗೆ ಕರ್ಕೊಂಡು ಹೋಗಿ ರೇಪ್

    ಮುಂಬೈ: 22 ವರ್ಷದ ನೇಪಾಳಿ ಯುವತಿಯೊಬ್ಬಳು ಮಹಾರಾಷ್ಟ್ರದ ನಾಗ್ಪುರದಲ್ಲಿ ಅತ್ಯಾಚಾರ ಆರೋಪಿಯ ವಿರುದ್ಧ ಕೇಸ್ ದಾಖಲಿಸಲು ಲಕ್ನೋದಿಂದ ಪ್ರಯಾಣ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಲಕ್ನೋದಲ್ಲಿ ನಡೆದಿದ್ದು, ಆರೋಪಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಬಾರದು ಎಂದು ಬೆದರಿಕೆ ಹಾಕಿದ್ದನು. ಹೀಗಾಗಿ ಸಂತ್ರಸ್ತೆ ಲಕ್ನೋದಿಂದ 800 ಕಿ.ಮೀ ದೂರ ಪ್ರಯಾಣ ಮಾಡಿ ನಾಗ್ಪುರದ ಕೊರಡಿ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‍ಐಆರ್ ದಾಖಲಿಸಿದ್ದಾರೆ. ಯಾವುದೇ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‍ಐಆರ್ ಸಲ್ಲಿಸಬಹುದು. ನಂತರ ಅದನ್ನು ಘಟನೆ ನಡೆದ ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಗೆ ವರ್ಗಾಯಿಸಬಹುದು.

    room

    ಏನಿದು ಪ್ರಕರಣ:
    ಸಂತ್ರಸ್ತೆ ಉದ್ಯೋಗಕ್ಕಾಗಿ 2018ರಲ್ಲಿ ನೇಪಾಳದಿಂದ ಭಾರತಕ್ಕೆ ಬಂದಿದ್ದಳು. ಇದೇ ವರ್ಷದ ಮಾರ್ಚ್ ವರೆಗೂ ಲಕ್ನೋದ ಫೈಜಾಬಾದ್ ರಸ್ತೆಯಲ್ಲಿರುವ ಬಾಡಿಗೆ ಫ್ಲ್ಯಾಟ್‍ನಲ್ಲಿ ಸ್ನೇಹಿತೆಯ ಜೊತೆ ವಾಸಿಸುತ್ತಿದ್ದಳು. ಸ್ನೇಹಿತೆ ದುಬೈನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಲಕ್ನೋ ಮೂಲದ ಆರೋಪಿ ಪ್ರವೀಣ್ ಯಾದವ್‍ನನ್ನು ಸಂತ್ರಸ್ತೆಗೆ ವಿಡಿಯೋ ಕಾಲ್ ಮೂಲಕ ಪರಿಚಯಿಸಿದ್ದನು. ನಂತರ ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡಿದ್ದರು ಎಂದು ಇನ್ಸ್ ಪೆಕ್ಟರ್ ವಜೀರ್ ಶೇಖ್ ತಿಳಿಸಿದ್ದಾರೆ.

    depositphotos 201585596 stock video friendship and love of man

    ನನ್ನ ಸ್ನೇಹಿತೆ 1.5 ಲಕ್ಷ ಹಣವನ್ನು ಇಟ್ಟುಕೊಂಡಿದ್ದಳು. ಹಣವನ್ನು ಹಿಂದಿರುಗಿಸುವಂತೆ ನಾನು ಕೇಳಿದೆ. ಆದರೆ ಆಕೆ ಹಣವನ್ನು ಹಿಂದಿರುಗಿಸಲಿಲ್ಲ, ಅಲ್ಲದೇ ನನ್ನ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಳು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಈ ಬಗ್ಗೆ ಸಂತ್ರಸ್ತೆ ಪ್ರವೀಣ್ ಯಾದವ್‍ಗೆ ದೂರು ನೀಡಿದ್ದಾಳೆ. ಒಂದೆರಡು ದಿನಗಳ ನಂತರ ಆರೋಪಿ ದುಬೈನಿಂದ ಲಕ್ನೋಗೆ ಬಂದಿದ್ದಾನೆ. ನಂತರ ಹೋಟೆಲ್‍ವೊಂದರಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿದ್ದಾನೆ. ಈ ವೇಳೆ ಆರೋಪಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಕೃತ್ಯದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಸಂತ್ರಸ್ತೆಯನ್ನು ಸ್ನೇಹಿತೆಯ ಮನೆಗೆ ಕರೆದುಕೊಂಡು ಹೋಗಿದ್ದು, ಮತ್ತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾನೆ.

    smartphone using social media

    ಒಂದು ವೇಳೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಗ ಸಂತ್ರಸ್ತೆ ಲಕ್ನೋದಿಂದ ತಪ್ಪಿಸಿಕೊಂಡು ಸೆಪ್ಟೆಂಬರ್ 30 ರಂದು ನಾಗ್ಪುರದ ನೇಪಾಳದ ಸ್ನೇಹಿತನ ಮನೆಗೆ ಬಂದಿದ್ದಾಳೆ. ಇಲ್ಲಿ ಕೊರಡಿ ಪೊಲೀಸ್ ಠಾಣೆಗೆ ತೆರಳಿ ಯಾದವ್ ಮತ್ತು ಲಕ್ನೋ ಮೂಲದ ಸಂತ್ರಸ್ತೆಯ ಸ್ನೇಹಿತೆಯ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಶೂನ್ಯ ಎಫ್‍ಐಆರ್ ದಾಖಲಿಸಿದ್ದಾರೆ. ಸದ್ಯಕ್ಕೆ ಈ ದೂರನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ವರ್ಗಾಹಿಸುವ ತಯಾರಿ ನಡೆಯುತ್ತಿದೆ.

    Police Jeep 1

  • ಹುಟ್ಟುಹಬ್ಬದ ದಿನ ಜಾಲಿರೈಡ್ ತಂದ ಆಪತ್ತು – ಬರ್ತ್ ಡೇ ಹುಡುಗಿ ಸಾವು

    ಹುಟ್ಟುಹಬ್ಬದ ದಿನ ಜಾಲಿರೈಡ್ ತಂದ ಆಪತ್ತು – ಬರ್ತ್ ಡೇ ಹುಡುಗಿ ಸಾವು

    – ಸ್ಪೀಡ್ ಬ್ರೇಕರ್ ನೋಡದೆ ಬೈಕ್ ಹಾರಿಸಿದ ಸ್ನೇಹಿತೆ

    ಚಂಡೀಗಢ: ಯುವತಿಯೊಬ್ಬಳು ತನ್ನ 22ನೇ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಸ್ನೇಹಿತೆ ನೊಂದಿಗೆ ಜಾಲಿರೈಡ್‍ಗೆ ಹೋಗಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ.

    ಮೃತಳನ್ನು ಅನು ಎಂದು ಗುರುತಿಸಲಾಗಿದೆ. ಹರಿಯಾಣದ 26ನೇ ವಲಯದ ಐಟಿಬಿಪಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಜಾಲಿ ರೈಡ್‍ಗೆ ಹೋಗಿದ್ದಾಗ ಬೈಕ್‍ನಿಂದ ಬಿದ್ದು ಅನು ಮೃತಪಟ್ಟಿದ್ದಾಳೆ.

    birthday cake

    ವೇಗವಾಗಿ ಬೈಕ್ ಚಾಲನೆ ಮಾಡಿದ್ದೆ ನನ್ನ ಮಗಳ ಸಾವಿಗೆ ಕಾರಣ ಎಂದು ಹೇಳಿ ಮೃತಳ ತಾಯಿ ದೂರು ನೀಡಿದ್ದಾರೆ. ತಾಯಿ ನೀಡಿದ ದೂರಿನ ಮೇರೆಗೆ ಚಂಡೀಗಢದ ಮೌಲಿ ಜಾಗ್ರಾನ್‍ನಲ್ಲಿ ನೆಲೆಸಿರುವ ಅನು ಸ್ನೇಹಿತೆ ಉಸ್ಮಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹರಿಯಾಣದ ಡೇರಾ ಬಸ್ಸಿಯ ಖೇರಿ ಗ್ರಾಮದ ಮೂಲದ ಅನು ಸೆಕ್ಟರ್ 15ರ ಸಲೂನ್‍ನಲ್ಲಿ ಕೆಲಸ ಮಾಡುತ್ತಿದ್ದಳು.

    happy birthday cake

    ಭಾನುವಾರ ಅನು ಹುಟ್ಟುಹಬ್ಬ ಇತ್ತು. ಹೀಗಾಗಿ ಸ್ನೇಹಿತರೆಲ್ಲರೂ ಸೇರಿ ಅನು ಹುಟ್ಟುಹಬ್ಬವನ್ನು ಆಚರಣೆ ಮಾಡಿ ನಂತರ ಜಾಲಿ ರೈಡ್‍ಗೆ ಅಂತ ಬೈಕಿನಲ್ಲಿ ಉಸ್ಮಾನ್ ಕರೆದುಕೊಂಡು ಹೋಗಿದ್ದಾಳೆ. ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದು, ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್ ನೋಡದೆ ಅದರ ಮೇಲೆ ಬೈಕ್ ಹಾರಿಸಿದ್ದಾಳೆ. ಆಗ ಆಯ ತಪ್ಪಿ ಅನು ಕೆಳಗೆ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಅನು ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    download 2

    ಭಾನುವಾರ ರಾತ್ರಿ ಸ್ನೇಹಿತರೆಲ್ಲರೂ ಸೇರಿ ಅನು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದರು. ಪಾರ್ಟಿಗೆ ಆಹ್ವಾನಿಸಲ್ಪಟ್ಟ ಉಸ್ಮಾನ್ ರಾತ್ರಿ 9.30ಕ್ಕೆ ಮಗಳನ್ನು ಬೈಕಿನಲ್ಲಿ ಜಾಲಿ ಡೈಡ್‍ಗೆ ಕರೆದುಕೊಂಡು ಹೋಗಿದ್ದಳು. ಆದರೆ ರಾತ್ರಿ 10.15ಕ್ಕೆ ನನ್ನ ಮಗಳ ಸ್ನೇಹಿತೆ ಆರತಿ ಫೋನ್ ಮಾಡಿ, ಅನುಗೆ ಅಪಘಾತವಾಗಿದೆ, ಆಕೆಯನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಳು ಎಂದು ತಾಯಿ ಉರ್ಮಿಲಾ ದೇವಿ ಪೊಲೀಸರಿಗೆ ತಿಳಿಸಿದ್ದಾರೆ.

    Police Jeep 1 1

    ಅನು ಸಹೋದರಿ ಪ್ರಿಯಾಂಕಾ ಆಸ್ಪತ್ರೆಗೆ ಹೋಗಿ ನೋಡುವಷ್ಟರಲ್ಲಿ ಅನು ಮೃತಪಟ್ಟಿದ್ದಳು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸದ್ಯಕ್ಕೆ ಪಂಚಕುಲ ಪೊಲೀಸರು ಐಪಿಸಿಯ ಸೆಕ್ಷನ್ ಅಡಿಯಲ್ಲಿ ಅನು ಸ್ನೇಹಿತೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಹೋಂ ಕ್ವಾರಂಟೈನ್ ಉಲ್ಲಂಘನೆ – ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿ ದಂಪತಿ ಮೇಲೆ ಕೇಸ್

    ಹೋಂ ಕ್ವಾರಂಟೈನ್ ಉಲ್ಲಂಘನೆ – ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿ ದಂಪತಿ ಮೇಲೆ ಕೇಸ್

    ರಾಯಚೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನ ತಡೆಯಲು ವಿದೇಶದಿಂದ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಹೋಂ ಕ್ವಾರಂಟೈನ್ ಇಲ್ಲವೆ ಆಸ್ಪತ್ರೆ ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗುತ್ತಿದೆ. ಆದರೆ ಜಿಲ್ಲೆಯ ಶಕ್ತಿನಗರದ ಆರ್‌ಟಿಪಿಎಸ್ ಕಾಲೋನಿಯಲ್ಲಿ ಹೊಂ ಕ್ವಾರಂಟೈನ್‍ನಲ್ಲಿದ್ದ ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿ ದಂಪತಿ ಹಾಗೂ ಅವರ ಮಗ ಮತ್ತು ಮಗನ ಸ್ನೇಹಿತೆ ಸ್ವತಃ ವೈದ್ಯೆಯಾಗಿದ್ದರೂ ಹೋಂ ಕ್ವಾರಂಟೈನ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

    ಯರಮರಸ್‍ನ ವೈಟಿಪಿಎಸ್ ಸೂಪರಿಡೆಂಟ್ ಇಂಜನೀಯರ್ ಎಸ್.ಆರ್ ಕಬಾಡೆ ಹಾಗೂ ಅವರ ಪತ್ನಿ ಅನುಪಮ ಆರ್‌ಟಿಪಿಎಸ್ ನಲ್ಲಿ ಅಕೌಂಟ್ ಆಫೀಸರ್ ಆಗಿದ್ದು, ಹೋಂ ಕ್ವಾರಂಟೈನ್ ಅವಧಿಯಲ್ಲಿ ಕಚೇರಿಗೆ ತೆರಳಿ ಕೆಲಸ ಮಾಡಿದ್ದಾರೆ. ಮಾರ್ಕೆಟ್ ಸೇರಿ ಜನಸಂದಣಿ ಸ್ಥಳಗಳಲ್ಲಿ ಓಡಾಡಿದ್ದಾರೆ. ಈ ದಂಪತಿ ಮಗನ ಸ್ನೇಹಿತೆ ಜರ್ಮನಿಯಿಂದ ಶಕ್ತಿನಗರಕ್ಕೆ ಬಂದಿದ್ದಳು. ಈ ವಿಚಾರವನ್ನ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ತಿಳಿಸಿರಲಿಲ್ಲ. ಬಳಿಕ ನಾಲ್ವರನ್ನು ಮಾರ್ಚ 14ರಿಂದ ಮಾರ್ಚ 29ರವರೆಗೆ ಹೋಂ ಕ್ವಾರೆಂಟೈನ್ ಮಾಡಲಾಗಿತ್ತು. ಈ ವೇಳೆ ಇವರು ಮನೆಯಲ್ಲಿರದೆ ಹೊರಗಡೆ ಓಡಾಡಿದ್ದಾರೆ.

    police 1 e1585506284178

    ಜರ್ಮನಿಯಿಂದ ಬಂದಿದ್ದ ದಂಪತಿಯ ಮಗನ ಸ್ನೇಹಿತೆಯ ರಕ್ತ ಹಾಗೂ ಗಂಟಲು ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್ ಬಂದಿದೆ, ಯಾರಲ್ಲೂ ರೋಗ ಲಕ್ಷಣಗಳಿಲ್ಲ. ಆದರೆ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದ್ದರಿಂದ ದೇವಸುಗೂರು ಉಪತಹಶೀಲ್ದಾರ್ ಶಕ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ವೈಟಿಪಿಎಸ್ ಹಿರಿಯ ಅಧಿಕಾರಿ, ಪತ್ನಿ, ಮಗ ಹಾಗೂ ಮಗನ ಸ್ನೇಹಿತೆಯ ವಿರುದ್ಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.