Tag: ಸೇತುವೆ

  • ಚಿತ್ರದುರ್ಗದಲ್ಲಿ ಭಾರೀ ಮಳೆಗೆ ಕೊಚ್ಚಿ ಹೋಯ್ತು ಸೇತುವೆ

    ಚಿತ್ರದುರ್ಗದಲ್ಲಿ ಭಾರೀ ಮಳೆಗೆ ಕೊಚ್ಚಿ ಹೋಯ್ತು ಸೇತುವೆ

    ಚಿತ್ರದುರ್ಗ: ಕೋಟೆನಾಡಿನಲ್ಲಿ ಕಳೆದ 15 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ 3 ತಿಂಗಳ ಹಿಂದಷ್ಟೇ ನಿರ್ಮಾಣವಾಗಿದ್ದ ಸೇತುವೆಯೊಂದು ಕೊಚ್ಚಿ ಹೋಗಿದೆ.

    ಚಳ್ಳಕೆರೆ ತಾಲೂಕಿನ ಯಲಗಟ್ಟೆ, ಗೊಲ್ಲರಹಟ್ಟಿ ರಸ್ತೆ ಸಂಪರ್ಕ ಕಲ್ಪಿಸುವ ಈ ಸೇತುವೆಯನ್ನು 3 ತಿಂಗಳ ಹಿಂದೆಯಷ್ಟೇ ನಿರ್ಮಾಣ ಮಾಡಲಾಗಿತ್ತು. ಇಂದು ಸೇತುವೆ ಕೊಚ್ಚಿಹೋಗಿದ್ದರಿಂದ ಚೆಕ್ಕೇನಹಳ್ಳಿ-ಬೆಳಗೆರೆ ಹಾದು ಹೋಗುವ ರಸ್ತೆ ಮಾರ್ಗ ಕಡಿತಗೊಂಡಿದೆ.

    ಮಳೆ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದ್ದು, ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶಾಸಕ ರಘುಮೂರ್ತಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.

    10 ವರ್ಷಗಳ ನಂತರ ತುಂಬಿತು ಕೆರೆ: ಕಳೆದ ರಾತ್ರಿ ಸತತ ಮೂರು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ರಾಯಭಾಗ ತಾಲೂಕಿನ ಸೌದತ್ತಿ ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿದೆ. ಈ ಕೆರೆಯು ಸುಮಾರು 10 ವರ್ಷಗಳಿಂದ ತುಂಬಿರಲಿಲ್ಲ. ಆದರೆ ಈ ವರ್ಷ ಕೇವಲ ಮೂರೇ ಗಂಟೆಯ ಮಳೆಗೆ ಕೆರೆ ತುಂಬಿದ್ದರಿಂದ ಜನ ಸಂತಸಗೊಂಡಿದ್ದಾರೆ.

    20ಕ್ಕೂ ಹೆಚ್ಚು ಮನೆಗಳಿಗೆ ಕೆರೆಯ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಇಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯ ನೀರು ಹೊರಹಾಕಲು ಗ್ರಾಮಸ್ಥರು ಪಡಬಾರದ ಪಾಡು ಪಡುತ್ತಿದ್ದಾರೆ.

     

    CKD RAIN 2

    CKD RAIN

    CTD RAIN 2

    CTD RAIN

    Raichur Rain 2

    Raichur Rain 1

    Haveri Rain 3

    Haveri Rain 2

    RAIN 5 2

    RAIN 6 2

    Haveri Rain 5

    Haveri Rain 4

    Haveri Rain 1

    Chikkaballapura Rain 16

    Chikkaballapura Rain 15

    Chikkaballapura Rain 14

    Chikkaballapura Rain 9

    Chikkaballapura Rain 8

    Chikkaballapura Rain 6

    Chikkaballapura Rain 12

  • ಹೊಸದುರ್ಗ ಬಳಿ ಮೈಸೂರು ಅರಸರ ಕಾಲದ ಸೇತುವೆ ಕುಸಿಯುವ ಭೀತಿ- ವಾಹನ ಸಂಚಾರ ಸ್ಥಗಿತ

    ಹೊಸದುರ್ಗ ಬಳಿ ಮೈಸೂರು ಅರಸರ ಕಾಲದ ಸೇತುವೆ ಕುಸಿಯುವ ಭೀತಿ- ವಾಹನ ಸಂಚಾರ ಸ್ಥಗಿತ

    ಚಿತ್ರದುರ್ಗ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಸೇತುವೆ ಕುಸಿಯುವ ಭೀತಿಯಿಂದ ವಾಹನ ಸಂಚಾರ ನಿರ್ಬಂಧ ಹೇರಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    vlcsnap 2017 09 29 08h38m48s165

    ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಬಳಿ ವೇದಾವತಿ ನದಿಗೆ ಒಂದು ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆ ಬೆಂಗಳೂರಿನಿಂದ ಹೊಸದುರ್ಗ ಸಂಪರ್ಕಿಸುವ ಮೈಸೂರು ಅರಸರ ಕಾಲದ ಜಯ ಚಾಮರಾಜೇಂದ್ರ ಸೇತುವೆಯಾಗಿದೆ.

    vlcsnap 2017 09 29 08h38m13s576

    ಇದು ದಶಕಗಳ ಸೇತುವೆಯಾಗಿದ್ದರಿಂದ ತುಂಬಾ ಹಳೆಯದಾದ ಹಿನ್ನಲೆಯಲ್ಲಿ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣಕ್ಕಾಗಿ ಹಳ್ಳ ತೋಡಿದ್ದಾರೆ. ಆದರೆ ಈಗ ಅತಿಯಾದ ಮಳೆಯಿಂದ ಇಂದು ಮುಂಜಾನೆಯಿಂದ ವೇದಾವತಿಯಲ್ಲಿ ನೀರು ಹರಿಯುತ್ತಿದ್ದು, ಸೇತುವೆ ಅಕ್ಕಪಕ್ಕದ ಮಣ್ಣು ಕುಸಿಯುತ್ತಿದೆ.

    ಇದರಿಂದ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಹೊಸದುರ್ಗ ಪೊಲೀಸರು ಸಂಚಾರ ನಿರ್ಬಂಧಿಸಿ ಬೇರೆ ಮಾರ್ಗವಾಗಿ ಸಂಚರಿಸಲು ವಾಹನಗಳಿಗೆ ಅನುವು ಮಾಡಿಕೊಟ್ಟಿದ್ದಾರೆ.

  • ಜನ್ರ ಕಣ್ಣಮುಂದೆ ತಂದೆ, ತಾಯಿ, ಮಗು ನೀರಿನಲ್ಲಿ ಕೊಚ್ಚಿ ಹೋದ್ರು: ವಿಡಿಯೋ ನೋಡಿ

    ಜನ್ರ ಕಣ್ಣಮುಂದೆ ತಂದೆ, ತಾಯಿ, ಮಗು ನೀರಿನಲ್ಲಿ ಕೊಚ್ಚಿ ಹೋದ್ರು: ವಿಡಿಯೋ ನೋಡಿ

    ಪಾಟ್ನಾ: ಒಂದು ದಿನದ ಮಳೆಗೆ ಇಡೀ ಬೆಂಗಳೂರು ತೋಯ್ದು ತೊಪ್ಪೆಯಾಗಿರೋದನ್ನು ನೋಡಿದ್ದೀರಿ. ಆದ್ರೆ ನೆರೆ ರಾಜ್ಯಗಳಲ್ಲಂತೂ ಮಳೆರಾಯನ ಅಬ್ಬರ ಇನ್ನೂ ಭಯಾನಕವಾಗಿದೆ. ನೇಪಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಬಿಹಾರದ 14 ಜಿಲ್ಲೆಗಳು ಪ್ರವಾಹದಲ್ಲಿ ಬಹುತೇಕ ಮುಳುಗಿಹೋಗಿವೆ.

    ಅರೇರಿಯಾ ಜಿಲ್ಲೆಯೊಂದರಲ್ಲೇ 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದೇ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದು ಬೀಳುವ ಸ್ಥಿತಿಯಲ್ಲಿದ್ರೂ ದಾಟಲು ಯತ್ನಿಸಿದ ತಂದೆ-ತಾಯಿ ಮತ್ತು ಮಗು ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಅದೃಷ್ಟವಶಾತ್ ತಂದೆ ಪಾರಾಗಿದ್ದು ತಾಯಿ ಮಗು ನೂರಾರು ಜನರ ಕಣ್ಣೆದುರೇ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು ಜನರ ಅಸಹಾಯಕತೆಯನ್ನ ತೋರಿಸ್ತಿದೆ.

    ಇದುವರೆಗೂ ಬಿಹಾರದಲ್ಲಿ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 98ಕ್ಕೆ ಏರಿದ್ದು, 73 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಸಹರ್ಸಾ ಜಿಲ್ಲೆಯಂತೂ ಸಂಪೂರ್ಣ ಮುಳುಗಿಹೋಗಿದೆ.

    https://www.youtube.com/watch?v=cXuvxBoGMVI

    BIHAR FLOOD12

    BIHAR FLOOD11

    BIHAR FLOOD 10

    BIHAR FLOOD 9

    BIHAR FLOOD 8

    BIHAR FLOOD 7

    BIHAR FLOOD 6

    BIHAR FLOOD 5

    BIHAR FLOOD 4

    BIHAR FLOOD 3

    BIHAR FLOOD 2

    BIHAR FLOOD 13

    BIHAR FLOOD 12

  • ದೇಶದ ಅತಿ ಉದ್ದವಾದ ಸೇತುವೆ ಉದ್ಘಾಟಿಸಿ, ಯುಪಿಎ ಸರ್ಕಾರಕ್ಕೆ ಮೋದಿ ಟಾಂಗ್ ನೀಡಿದ್ದು ಹೀಗೆ

    ದೇಶದ ಅತಿ ಉದ್ದವಾದ ಸೇತುವೆ ಉದ್ಘಾಟಿಸಿ, ಯುಪಿಎ ಸರ್ಕಾರಕ್ಕೆ ಮೋದಿ ಟಾಂಗ್ ನೀಡಿದ್ದು ಹೀಗೆ

    ಗುವಾಹಟಿ: ಅಟಲ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿದ್ದರೆ 10 ವರ್ಷದ ಒಳಗಡೆ ಧೋಲಾ – ಸಾದಿಯಾ ಸೇತುವೆ ನಿರ್ಮಾಣವಾಗುತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಯುಪಿಎ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

    ಸರ್ಕಾರದ ಮೂರನೇ ವರ್ಷದ ಸಂಭ್ರಮಾಚರಣೆಯನ್ನು ಈಶಾನ್ಯ ರಾಜ್ಯದಲ್ಲಿ ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಅತ್ಯಂತ ಉದ್ದವಾದ ಸೇತುವೆಯನ್ನು ಉದ್ಘಾಟನೆ ಮಾಡುವ ಮೂಲಕ ಆಚರಣೆ ಮಾಡಿದರು. ಬೆಳಗ್ಗೆ 10 ಗಂಟೆಗೆ ಅಸ್ಸಾಂನ ದಿಬ್ರುಘರ್‍ಗೆ ಬಂದಿಳಿದ ಮೋದಿ ಆ ಬಳಿಕ ರಸ್ತೆ ಮಾರ್ಗವಾಗಿ ಡೋಲಾ ತಲುಪಿ ಸೇತುವೆಯನ್ನು ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಅವರು, 2003ರಲ್ಲಿ ನಮ್ಮ ಶಾಸಕ ಜಗದೀಶ್ ಭುಯನ್ ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ ಸೇತುವೆಯನ್ನು ನಿರ್ಮಿಸುವಂತೆ ಪತ್ರ ಬರೆದಿದ್ದರು. ವಾಜಪೇಯಿ ಅವರು ಈ ಪತ್ರಕ್ಕೆ ಶೀಘ್ರವೇ ಸ್ಪಂದಿಸಿ ಅನುಮೋದನೆ ನೀಡಿದ್ದರು. ಆದರೆ ನಂತರ ಅಧಿಕಾರಕ್ಕೆ ಬಂದ ಸರ್ಕಾರದಿಂದಾಗಿ ಈ ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಯಿತು ಎಂದರು.

    ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದ ಸರ್ಬಾನಂದ ಸೋನೊವಾಲ್‌ ಅವರು ಒಂದು ವರ್ಷದಲ್ಲಿ ಸೇತುವೆ ನಿಮಾಣ ಕಾರ್ಯವನ್ನು ಪೂರ್ಣಗೊಳಿಸಿ ಅಟಲ್ ಕಂಡ ಕನಸನ್ನು ನನಸು ಮಾಡಿದೆ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರವನ್ನು ಹೊಗಳಿದರು.

    ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಅಭಿವೃದ್ಧಿಯಲ್ಲಿ ಈ ಸೇತುವೆ ಮಹತ್ವದ ಪಾತ್ರ ವಹಿಸಲಿದ್ದು, ಈ ಸೇತುವೆಯಿಂದ ಪ್ರತಿ ದಿನ 10 ಲಕ್ಷ ರೂ. ಇಂಧನ ಉಳಿತಾಯವಾಗಲಿದೆ ಎಂದರು.

    ಈಶಾನ್ಯ ಭಾಗದಲ್ಲಿ ರೈಲ್ವೇ ಅಷ್ಟು ಅಭಿವೃದ್ಧಿ ಆಗಿಲ್ಲ. ಮುಂದಿನ ದಿನಗಳಲ್ಲಿ ರೈಲ್ವೇಯನ್ನೂ ಅಭಿವೃದ್ಧಿ ಮಾಡುತ್ತೇವೆ. ಸಂಪರ್ಕದ ಕೊರತೆಯಿಂದಾಗಿ ಈ ಸುಂದರ ಪ್ರದೇಶಕ್ಕೆ ಪ್ರಚಾರ ಸಿಕ್ಕಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಪ್ರದೇಶಗಳನ್ನು ಪ್ರವಾಸೋದ್ಯಮ ಹಬ್‍ಗಳನ್ನಾಗಿ ರೂಪಿಸುತ್ತೇವೆ ಎಂದು ಮೋದಿ ಈ ವೇಳೆ ತಿಳಿಸಿದರು.

    ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಸೇತುವೆಯ ವಿಶೇಷತೆ ಏನು?
    ಬ್ರಹ್ಮಪುತ್ರ ನದಿಯ ಉಪನದಿ ಲೋಹಿತ್‍ಗೆ 9.15 ಕಿಮೀ. ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ. 2,056 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದು, 60 ಟನ್ ತೂಕದ ಯುದ್ಧ ಟ್ಯಾಂಕ್ ಭಾರ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

    ಅಸ್ಸಾಂ ಹಾಗೂ ಅರುಣಾಲ ಪ್ರದೇಶದ ನಡುವಿನ ಸಂಚಾರ ಅವಧಿಯನ್ನು 6 ಗಂಟೆಯಿಂದ 1 ಗಂಟೆಗೆ ಇಳಿಸಲಿದೆ. 10 ವರ್ಷದ ಹಿಂದೆ ಈ ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 7 ವರ್ಷದಿಂದ ಈ ಸೇತುವೆ ಕಾಮಗಾರಿ ಆರಂಭವಾಗಿದ್ದು ಈಗ ಲೋಕಾರ್ಪಣೆಯಾಗಿದೆ.

    https://www.youtube.com/watch?v=78gqC_xsSCU

    bridge 4

    bridge 2

    modi bridge

  • ಸೇತುವೆಗೆ ಡಿಕ್ಕಿ ಹೊಡೆದ ಬೈಕ್: ಇಬ್ಬರ ಸಾವು, ಓರ್ವ ಗಂಭೀರ

    ಸೇತುವೆಗೆ ಡಿಕ್ಕಿ ಹೊಡೆದ ಬೈಕ್: ಇಬ್ಬರ ಸಾವು, ಓರ್ವ ಗಂಭೀರ

    ರಾಯಚೂರು:ಮಾನ್ವಿ ತಾಲೂಕಿನ ನಂದಿಹಾಳ ಗ್ರಾಮದ ಬಳಿ ಸೇತುವೆಗೆ ಬೈಕ್ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿದ್ದ ಇನ್ನೋರ್ವನಿಗೆ ಗಂಭೀರ ಗಾಯಗಳಾಗಿವೆ.

    ನರೇಂದ್ರ (28) ಮತ್ತು ರವಿ (25) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿ ಯುವಕರು. ಇನ್ನೋರ್ವ ಸವಾರ ಸಹದೇವ್‍ಗೆ ಗಂಭೀರ ಗಾಯಗಳಾಗಿದ್ದು, ಮಾನ್ವಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅತಿ ವೇಗದಲ್ಲಿ ಬಂದ ಬೈಕ್ ರಸ್ತೆ ತಿರುವಿನ ವೇಳೆ ನಿಯಂತ್ರಣಕ್ಕೆ ಬರದೇ ಸೇತುವೆಗೆ ಡಿಕ್ಕಿ ಹೊಡೆದಿದೆ. ಯುವಕರು ಸಿಂಧನೂರು ಪಟ್ಟಣದಿಂದ ಮಾನ್ವಿಗೆ ಬರುತ್ತಿದ್ದರು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.