Tag: ಸಿಎಪಿಎಫ್ ಕ್ಯಾಂಟೀನ್

  • ಸಿಎಪಿಎಫ್ ಕ್ಯಾಂಟೀನ್ ಗಳಲ್ಲಿ ದೇಶಿಯ ವಸ್ತುಗಳ ಮಾರಾಟ

    ಸಿಎಪಿಎಫ್ ಕ್ಯಾಂಟೀನ್ ಗಳಲ್ಲಿ ದೇಶಿಯ ವಸ್ತುಗಳ ಮಾರಾಟ

    -ಮೋದಿ ಕರೆ ಬೆನ್ನಲ್ಲೇ ಗೃಹ ಇಲಾಖೆಯಿಂದ ಆದೇಶ

    ನವದೆಹಲಿ : ಸ್ವಾವಲಂಬಿ ಭಾರತಕ್ಕೆ ದೇಶಿಯ ವಸ್ತುಗಳು ಖರೀದಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟ ಬೆನ್ನಲ್ಲೇ ದೇಶದ ಎಲ್ಲ ಸಶಸ್ತ್ರ ಪಡೆಗಳ ಕ್ಯಾಂಟೀನ್ ನಲ್ಲಿ ಸ್ಥಳೀಯ ವಸ್ತುಗಳನ್ನು ಮಾತ್ರ ಮಾರಾಟ ಮಾಡುವಂತೆ ಗೃಹ ಸಚಿವ ಅಮಿತ್ ಶಾ ಆದೇಶಿಸಿದ್ದಾರೆ.

    ಜೂನ್ ಒಂದರಿಂದ ದೇಶ ಎಲ್ಲ ಸಿಎಪಿಎಫ್ ಕ್ಯಾಂಟೀನ್ ಗಳಲ್ಲಿ ಸ್ಥಳೀಯ, ದೇಶೀಯ ವಸ್ತುಗಳ ಮಾರಾಟ ಮಾತ್ರ ಮಾಡಲಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ದೇಶವನ್ನು ಸ್ವಾವಲಂಬಿ ಮಾಡಲು ಸ್ವದೇಶಿ ವಸ್ತುಗಳನ್ನು ಖರೀದಿಸುವಂತೆ ಪ್ರಧಾನಿ ಮೋದಿ ಮಂಗಳವಾರದ ಭಾಷಣದಲ್ಲಿ ಕರೆ ಕೊಟ್ಟಿದ್ದರು. ಮೋದಿ ಕರೆ ಬೆನ್ನಲ್ಲೇ ಗೃಹ ಸಚಿವ ಈ ನಿರ್ಧಾರವನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

    ಸಿಎಪಿಎಫ್ ನ ಎಲ್ಲ ಕ್ಯಾಂಟೀನ್ ಗಳು ಮತ್ತು ಮಳಿಗೆಗಳು 2,800 ಕೋಟಿ ರೂ. ವಹಿವಾಟು ನಡೆಸುತ್ತಿವೆ. 10 ಲಕ್ಷ ಸಿಎಪಿಎಫ್ ಸಿಬ್ಬಂದಿ 50 ಲಕ್ಷ ಕುಟುಂಬ ಸದಸ್ಯರು ಇನ್ಮುಂದೆ ದೇಶಿಯ ಉತ್ಪನ್ನಗಳನ್ನು ಬಳಸಲಿದ್ದಾರೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ಇದೇ ವೇಳೆ ದೇಶಿಯ ವಸ್ತುಗಳನ್ನೇ ಖರೀದಿಸುವಂತೆ ಜನರಿಗೆ ಅಮಿತ್ ಶಾ ಕರೆ ನೀಡಿದರು.