Tag: ಸಿಂಧನೂರು

  • ರಾಯಚೂರು: ಬೈಕ್‍ಗೆ ವಾಹನ ಡಿಕ್ಕಿ- ಸವಾರರಿಬ್ಬರು ಸಾವು

    ರಾಯಚೂರು: ಬೈಕ್‍ಗೆ ವಾಹನ ಡಿಕ್ಕಿ- ಸವಾರರಿಬ್ಬರು ಸಾವು

    ರಾಯಚೂರು: ಅಪರಿಚಿತ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟಿರೋ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಬಾದರ್ಲಿ ಬಳಿ ನಡೆದಿದೆ.

    rcr accident 5

    ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಬೆಳಗ್ಗಿನ ಜಾವ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ಕಡೆಯಿಂದ ಸಿಂಧನೂರಿಗೆ ಬರುತ್ತಿದ್ದ ವೇಳೆ ಬೈಕ್ ಸವಾರರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ವಾಹನದ ಸಮೇತ ಚಾಲಕ ಪರಾರಿಯಾಗಿದ್ದಾನೆ. ಮೃತರು ಹುಬ್ಬಳ್ಳಿ ಮೂಲದವರು ಎನ್ನಲಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ.

    rcr accident 2

    ಘಟನೆ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಗುರುತು ಹಾಗೂ ಡಿಕ್ಕಿ ಹೊಡೆದ ಅಪರಿಚಿತ ವಾಹನ ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    rcr accident 3

    rcr accident 4 rcr accident 1

  • ಶಾರ್ಟ್ ಸರ್ಕ್ಯೂಟ್‍ಗೆ 20 ಲಕ್ಷ ರೂ. ಮೌಲ್ಯದ ಬಟ್ಟೆ ಭಸ್ಮ

    ಶಾರ್ಟ್ ಸರ್ಕ್ಯೂಟ್‍ಗೆ 20 ಲಕ್ಷ ರೂ. ಮೌಲ್ಯದ ಬಟ್ಟೆ ಭಸ್ಮ

    ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಬಟ್ಟೆ ಅಂಗಡಿಗೆ ಬೆಂಕಿ ತಗುಲಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿವೆ.

    rcr fire 3

    ನಗರದ ಗಾಂಧಿವೃತ್ತದ ಬಳಿಯಿರುವ ಅಮಿತ್ ಸೂಪರ್ ಮಾರ್ಕೆಟ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 20 ಲಕ್ಷ ರೂ. ಮೌಲ್ಯದ ಬಟ್ಟೆ ಹಾಗೂ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ.

    rcr fire 4

    ಅಮಿತ್ ಶಾ ಎಂಬುವವರಿಗೆ ಸೇರಿದ ಈ ಅಂಗಡಿಯ ಎರಡನೇ ಮಹಡಿಗೂ ಬೆಂಕಿ ವ್ಯಾಪಿಸಿದ್ದು ಬಟ್ಟೆ, ಪೀಠೋಪಕರಣ ಸಂಪೂರ್ಣ ಕರಕಲಾಗಿವೆ. ಬೇಸಿಗೆ ಹಿನ್ನೆಲೆ ರಾತ್ರಿ ವೇಳೆ ಹಾಕಿದ್ದ ಎಸಿಯನ್ನ ಹಾಗೇ ಬಿಡಲಾಗಿತ್ತು. ಇದರಿಂದಲೇ ಶಾಟ್ ಸರ್ಕ್ಯೂಟ್‍ ಆಗಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಸ್ನಾನಕ್ಕೆ ತೆರಳಿದ್ದ ಬಾಲಕ ಕೆರೆಯಲ್ಲಿ ಸಾವು: ನಾಲ್ವರು ಪಾರು

    ಸ್ನಾನಕ್ಕೆ ತೆರಳಿದ್ದ ಬಾಲಕ ಕೆರೆಯಲ್ಲಿ ಸಾವು: ನಾಲ್ವರು ಪಾರು

    ರಾಯಚೂರು: ಜಿಲ್ಲೆಯ ಸಿಂಧನೂರಿನ ತಾಲೂಕಿನ ಮೂರು ಮೈಲ್ ಕ್ಯಾಂಪ್ ಬಳಿ ಕೆರೆಗೆ ಸ್ನಾನಕ್ಕೆ ತೆರಳಿದ್ದ ಯುವಕ ಜಲಸಮಾಧಿಯಗಿದ್ದಾನೆ.

    ಸಿಂಧನೂರು ಪಟ್ಟಣದ ನಿವಾಸಿ 16 ವರ್ಷದ ಹುಸೇನ್ ಮೃತ ದುರ್ದೈವಿ. ಹುಸೇನ್ ಜೊತೆಯಲ್ಲಿ ಇನ್ನೂ ನಾಲ್ಕು ಜನ ಭಾನುವಾರ ಕೆರೆಗೆ ಸ್ನಾನ ಮಾಡಲು ತೆರಳಿದ್ದರು. ಆದರೆ ಹುಸೇನ್ ಮಾತ್ರ ಕೆರೆಯ ಮದ್ಯದ ಆಳವಾದ ಸ್ಥಳದಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.

    rcr death 1

    ಹುಸೇನ್ ಜಲಸಮಾಧಿ ಆಗಿದ್ರೂ, ಆತನ ಗೆಳೆಯರು ಭಯದಿಂದ ಯಾರಿಗೂ ತಿಳಿಸಿರಲಿಲ್ಲ. ತಮ್ಮ ಮಗ ಕಾಣದೇ ಇದ್ದಾಗ ಹುಸೇನ್ ಪೋಷಕರು ಇಂದು ಆತನ ಗೆಳೆಯರನ್ನು ವಿಚಾರಿಸಿದಾಗ ವಿಷಯ ತಿಳಿದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಹುಸೇನ್ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    rcr death 3

    rcr 2

  • ಚುಡಾಯಿಸಿದ ಪೋಲಿಗೆ ಚಳಿಬಿಡಿಸಿದ ಯುವತಿ: ನೊಂದವಳ ಆಕ್ರೋಶಕ್ಕೆ ಬೆಚ್ಚಿಬಿತ್ತು ಬಸ್ ಸ್ಟ್ಯಾಂಡ್

    ಚುಡಾಯಿಸಿದ ಪೋಲಿಗೆ ಚಳಿಬಿಡಿಸಿದ ಯುವತಿ: ನೊಂದವಳ ಆಕ್ರೋಶಕ್ಕೆ ಬೆಚ್ಚಿಬಿತ್ತು ಬಸ್ ಸ್ಟ್ಯಾಂಡ್

    – ಚಾಕು ಹಿಡಿದು ಬಸ್ ನಿಲ್ದಾಣದ ತುಂಬಾ ಓಡಾಡಿಸಿದಳು
    – ಒಂದು ತಿಂಗಳಿಂದ ಪೀಡಿಸುತ್ತಿದ್ದ ಪೋಲಿ ಪರಾರಿ

    ರಾಯಚೂರು: ಸಿಂಧನೂರು ನಗರದ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳು ಪೋಲಿ ಯುವಕನಿಗೆ ಸರಿಯಾಗೇ ಬುದ್ದಿ ಕಲಿಸಿದ್ದಾಳೆ. ಒಂದು ತಿಂಗಳಿನಿಂದ ಚುಡಾಯಿಸಿ, ಕಾಲು ಕೆರೆದು ಜಗಳ ತೆಗೆಯುತ್ತಿದ್ದ ಇಲ್ಲಿನ ತಿಡಿಗೋಳ ಗ್ರಾಮದ ಯುವಕ ದೇವ ಎಂಬುವವನ ಕಿರುಕುಳಕ್ಕೆ ಬೇಸತ್ತು ಚಾಕು ಹಾಕಲು ಮುಂದಾಗಿರುವ ಘಟನೆ ನಡೆದಿದೆ.

    rcr girl 1

    ಎಂದಿನಂತೆ ಚುಡಾಯಿಸಲು ಮುಂದಾದಾಗ ಯುವತಿ ಪೂಜಾ (ಹೆಸರು ಬದಲಾಯಿಸಲಾಗಿದೆ) ಮೊದಲೇ ಪೂರ್ವ ಸಿದ್ಧತೆ ಮಾಡಿಕೊಂಡು ಹೆಣ್ಣು, ತರಕಾರಿ ಕತ್ತರಿಸುವ ಚಾಕುವಿನಿಂದ ದೇವನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ತಪ್ಪಿಸಿಕೊಂಡ ದೇವ ಇಡೀ ಬಸ್ ನಿಲ್ದಾಣದ ತುಂಬಾ ಓಡಾಡಿದ್ದಾನೆ. ಅಷ್ಟಕ್ಕೇ ಬಿಡದ ಯುವತಿ ಅವನನ್ನ ಅಟ್ಟಾಡಿಸಿಕೊಂಡು ಚಾಕು ಹಾಕಲು ಮುಂದಾಗಿದ್ದಾಳೆ. ಸಹ ಪ್ರಯಾಣಿಕರು ಯುವತಿಯನ್ನ ತಡೆದಿದ್ದು, ದೇವ ಅಲ್ಲಿಂದ ಪರಾರಿಯಾಗಿದ್ದಾನೆ.

    rcr girl 2

    ಪಿಯುಸಿ ಮುಗಿಸಿರುವ ಯುವತಿ ಪ್ರತಿದಿನ ಚಿಕ್ಕಬೇರಗಿ ಗ್ರಾಮದಿಂದ ಸಿಂಧನೂರಿನ ನಗರ ಗ್ರಂಥಾಲಯಕ್ಕೆ ಓದಲು ಬರುತ್ತಿದ್ದಳು. ಸಿಂಧನೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತ್ತಿರುವ ದೇವ ಸಹ ಅದೇ ಮಾರ್ಗದ ತಿಡಿಗೋಳ ಗ್ರಾಮದಿಂದ ಒಂದೇ ಬಸ್ ನಲ್ಲಿ ಬರುತ್ತಿದ್ದ. ಬಸ್ ನಲ್ಲೇ ಚುಡಾಯಿಸಲು ಆರಂಭಿಸಿದ ದೇವ ಬಸ್ ನಿಲ್ದಾಣದಲ್ಲೂ ಜಗಳ ಕಾಯುತ್ತಿದ್ದ, ಇದರಿಂದ ಬೇಸತ್ತು ಚಾಕು ಹಾಕಲು ಮುಂದಾಗಿದ್ದಾಳೆ. ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಯುವತಿಯಿಂದ ಚಾಕು ವಶಕ್ಕೆ ಪಡೆದಿದ್ದಾರೆ.

     

  • ಹುಚ್ಚು ನಾಯಿ ಕಚ್ಚಿ ಮಕ್ಕಳಿಗೆ ಗಂಭೀರ ಗಾಯ

    ಹುಚ್ಚು ನಾಯಿ ಕಚ್ಚಿ ಮಕ್ಕಳಿಗೆ ಗಂಭೀರ ಗಾಯ

    ರಾಯಚೂರು: ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಹುಚ್ಚುನಾಯಿಯೊಂದು ಇಬ್ಬರು ಮಕ್ಕಳಿಗೆ ಕಡಿದು ಗಂಭೀರ ಗಾಯಗೊಳಿಸಿದೆ.

    RCR3

    6 ವರ್ಷದ ಅಜಯ್ ಮತ್ತು 4 ವರ್ಷದ ಕಾವೇರಿ ಹುಚ್ಚು ನಾಯಿ ಕಡಿತಕ್ಕೊಳಗಾಗಿರುವ ಮಕ್ಕಳು. ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ದಾಳಿ ನಡೆಸಿದ ಹುಚ್ಚುನಾಯಿ ಸಿಕ್ಕಸಿಕ್ಕಲ್ಲಿ ಕಚ್ಚಿ ಗಾಯಗೊಳಿಸಿದೆ. ಅಜಯ್‍ನ ಕುತ್ತಿಗೆ ಭಾಗಕ್ಕೆ ಬಲವಾಗಿದೆ ಕಚ್ಚಿದೆ. ಕಾವೇರಿಯ ತಲೆ ಹಾಗೂ ಮುಖಕ್ಕೆ ಕಚ್ಚಿದ್ದು ಮಕ್ಕಳ ಸ್ಥಿತಿ ಗಂಭೀರವಾಗಿದೆ.

    RCR 4

    ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಇಬ್ಬರನ್ನೂ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಹುಚ್ಚುನಾಯಿ ಗ್ರಾಮದ ಸುತ್ತಮುತ್ತ ಇನ್ನೂ ಓಡಾಡಿಕೊಂಡಿದ್ದು ಗ್ರಾಮದ ಜನರು ಭಯಭೀತರಾಗಿದ್ದಾರೆ. ತಕ್ಷಣ ಸಂಬಂಧಪಟ್ಟವರು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

     

  • ಆಕಸ್ಮಿಕ ಬೆಂಕಿ- 15 ಲಕ್ಷ ರೂ. ಮೌಲ್ಯದ ಕಟ್ಟಿಗೆ ಭಸ್ಮ

    ರಾಯಚೂರು: ಕಟ್ಟಿಗೆ ಅಡ್ಡೆಗೆ ಬೆಂಕಿ ತಗುಲಿ ಸುಮಾರು 15 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಸಿಂಧನೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

    RCR 6 2 17 BAMBU FIRE 2

    ಬಸವರಾಜ್ ಎಂಬವರ ಕುಷ್ಟಗಿ ರಸ್ತೆಯಲ್ಲಿರುವ ಕಟ್ಟಿಗೆ ಅಡ್ಡೆ ಬೆಂಕಿಗೆ ಆಹುತಿಯಾಗಿದೆ. ಬಂಬೂ ಸೇರಿದಂತೆ ಹಲವು ಬಿದಿರಿನ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹತ್ತಿರಬಹುದು ಎಂದು ಶಂಕಿಸಲಾಗಿದೆ.

    RCR 6 2 17 BAMBU FIRE 1

    ಅಗ್ನಿಶಾಮಕ ದಳದ ಮೂರು ವಾಹನಗಳು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅಡ್ಡೆಯಲ್ಲಿನ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

  • ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯನ್ನೇ ಕೊಂದಳಾ ಪತ್ನಿ…?

    ರಾಯಚೂರು: ಸಿಂಧನೂರು ತಾಲೂಕಿನ ಕಲ್ಮಂಗಿ ಗ್ರಾಮದಲ್ಲಿ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯನ್ನೇ ಪತ್ನಿ ಕೊಂದಿರುವ ಘಟನೆ ನಡೆದಿದೆ. 43 ವರ್ಷದ ಬಸವನಗೌಡ ಕೊಲೆಯಾಗಿರುವ ವ್ಯಕ್ತಿ. ಪತ್ನಿ ದೇವಮ್ಮ ಗಂಡನನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಅಕ್ಕಪಕ್ಕದ ಮನೆಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ನಿನ್ನೆ ರಾತ್ರಿ ಗಂಡ ಹೆಂಡತಿ ನಡುವೆ ಜಗಳ ಜೋರಾಗಿ ನಡೆದಿದ್ದು ಪತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಕುತ್ತಿಗೆಗೆ ಹಗ್ಗ ಬಿಗಿದು ಬಸವನಗೌಡನನ್ನ ಕೊಲೆ ಮಾಡಲಾಗಿದೆ. ಆದ್ರೆ ಪತ್ನಿ ದೇವಮ್ಮ ಮಾತ್ರ ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನನ್ನು ನಾನೇ ನೇಣಿನ ಕುಣಿಕೆಯಿಂದ ಕೆಳಗಿಳಿಸಿದ್ದೇನೆ ಎಂದು ಹೇಳಿದ್ದಾಳೆ.

    ಬಸವನಗೌಡನ ಕುತ್ತಿಗೆ ಭಾಗದಲ್ಲಿ ಹಗ್ಗದಿಂದ ಬಿಗಿದಿರುವ ಗುರುತುಗಳಿದ್ದು. ಅಸಹಜ ಸಾವು ಅಂತ ಪ್ರಕರಣ ದಾಖಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ತುರ್ವಿಹಾಳ ಪೊಲೀಸರು ದೇವಮ್ಮನನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.