Tag: ಸಾಕ್ಷಿ ಮೇಘನಾ

  • ಮಹಿಳಾ ಪ್ರಧಾನ ‘ಪದ್ಮಾವತಿ’ ಚಿತ್ರದ ಹಾಡು ರಿಲೀಸ್ ಮಾಡಿದ ಲಹರಿ ವೇಲು

    ಮಹಿಳಾ ಪ್ರಧಾನ ‘ಪದ್ಮಾವತಿ’ ಚಿತ್ರದ ಹಾಡು ರಿಲೀಸ್ ಮಾಡಿದ ಲಹರಿ ವೇಲು

    ಲೆ ಬಾಚ್ಕೋಳ್ಳಿ ಪೌಡ್ರು ಹಾಕ್ಕೋಳ್ಳಿ  ಚಿತ್ರದಲ್ಲಿ ನಟಿಸಿ ನಿರ್ಮಾಣ ಮಾಡಿದ್ದ ವಿಕ್ರಂ ಆರ್ಯ ಗ್ಯಾಪ್ ನಂತರ ಮಿಲಿಟರಿ ಅಧಿಕಾರಿಯಾಗಿ ನಾಯಕ ಮತ್ತು ನಾಮದೇವಭಟ್ಟರ್ ಹೆಸರಿನಲ್ಲಿ ನಿರ್ಮಾಪಕರಾಗಿ ಅಭಿನಯಿಸಿರುವ ’ಪದ್ಮಾವತಿ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಲಹರಿವೇಲು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮತ್ತೊಂದು ಮುಖ್ಯ ಪಾತ್ರದಲ್ಲಿ ದಾಮೋದರ್‌ಪಾರಗೆ ಅಭಿನಯ ಹಾಗೂ ನಿರ್ಮಾಣದಲ್ಲಿ ಪಾಲುದಾರರು. ಹಿರಿಯ ನಿರ್ದೇಶಕರುಗಳ ಗರಡಿಯಲ್ಲಿ ಪಳಗಿರುವ ಮಿಥುನ್‌ ಚಂದ್ರಶೇಖರ್ ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ.

    FotoJet 96

    ತಪ್ಪೇ ಮಾಡಬೇಡಿ, ಮಾಡುವ ತಪ್ಪನ್ನು ತಪ್ಪು ತಪ್ಪಾಗಿ ಮಾಡಬೇಡಿ, ತಪ್ಪು ಮಾಡಿದ ಮೇಲೆ ತಪ್ಪದೆ ತಪ್ಪಾಯಿತು ಎಂದು ಒಪ್ಪಿಕೊಳ್ಳಿ. ಎಲ್ಲೋ ಒಂದು ಕಡೆ ತಿಳಿಯದೆ ಇರೋ ವಯಸ್ಸಿನಲ್ಲಿ ತಪ್ಪುಗಳನ್ನು ಮಾಡುವುದು ಸಹಜ. ಅದನ್ನು ಹಲವಾರು ವರ್ಷಗಳ ನಂತರ ಹೆಣ್ಣು ಸರಿಪಡಿಸಿಕೊಳ್ಳುವ ದಾರಿಯಲ್ಲಿ ತನ್ನ ಹಳೆಯ ನೆನಪುಗಳನ್ನು ಕೆದಕಿಕೊಂಡು ಹೋಗುತ್ತಾಳೆ. ಅಲ್ಲಿಂದ ಅವಳ ಹಾದಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಹೇಳಲಾಗಿದೆ. ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಅಂಶಗಳು ಇರಲಿದೆ. ಶಿವಳ್ಳಿಬೆಟ್ಟ, ಸಾಗರ, ಹೊಸನಗರ,ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಕಡೆಗಳಲ್ಲಿ 51 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.  ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    FotoJet 2 58

    ಯುವತಿ, ಮಧ್ಯವಯಸ್ಸಿನ ಮಹಿಳೆ ಮತ್ತು 46 ವರ್ಷದವಳಾಗಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ನಾಯಕಿ ಸಾಕ್ಷಿಮೇಘನಾ ಈಗ ಮೇಘನಾರಾಮ್ ಅಂತ ನಾಮಕರಣ ಮಾಡಿಕೊಂಡಿದ್ದಾರೆ. ಉಳಿದಂತೆ ಸುರೇಶ್‌ಸ್ವಾಮಿರಾವ್, ಕವಿತಪ್ರಿಯಾ, ರಾಘವಕುಮಾರ್,  ಅಭಿಲಾಶ್.ಬಿ.ಹೊಸನಗರ, ಶಿವಮೊಗ್ಗ ರಾಮಣ್ಣ, ಅರ್ಚನಾಶೆಟ್ಟಿ,ರಾಜೇಶ್ವರಿಪಾಂಡೆ, ಶರಣ್‌ಗಿನಕೇರಿ  ಮುಂತಾದವರ ತಾರಗಣವಿದೆ. ಪುಟ್ಟರಾಜಗವಾಯಿ ಆಶ್ರಮದ ವಿದ್ಯಾರ್ಥಿಯಾಗಿದ್ದ ಶರಣ್‌ಕುಮಾರ್ ಗಜೇಂದ್ರಗಡ ನಾಲ್ಕು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಜ್ಯೂ.ಎಸ್.ಜಾನಕಿ ಎಂದೇ ಖ್ಯಾತರಾಗಿರುವ ಕೊಪ್ಪಳದ ಗಂಗಮ್ಮ ಒಂದು ಗೀತೆಗೆ ಧ್ವನಿಯಾಗಿದ್ದಾರೆ. ಸಂಗೀತ ದಿನೇಶ್‌ಕುಮಾರ್, ಛಾಯಾಗ್ರಹಣ ಕೆ.ಎಂ.ಶೋಯಿಬ್‌ಅಹ್ಮದ್, ಕತೆ ಲತಾ.ಎಸ್, ಸಂಕಲನ ಈಶ್ವರ್, ಸಾಹಸ ಥ್ರಿಲ್ಲರ್‌ಮಂಜು, ನೃತ್ಯ  ಸಂಯೋಜಿಸಿರುವ ತ್ರಿಭುವನ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

    Live Tv