Tag: ಸಲೀಲ್ ಪರೇಖ್

  • ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

    ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

    ಬೆಂಗಳೂರು: ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸಲೀಲ್ ಪರೇಖ್ ಈ ವರ್ಷ ತಮ್ಮ ವೇತನವನ್ನು ಬರೋಬ್ಬರಿ ಶೇ.88 ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಹೆಚ್ಚಳದೊಂದಿಗೆ ಪರೇಖ್ ಇದೀಗ ವರ್ಷಕ್ಕೆ 79.75 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

    ಈ ಹಿಂದೆ ಪರೇಖ್ 42 ಕೋಟಿ ರೂ. ವಾರ್ಷಿಕ ವೇತನವನ್ನು ಪಡೆಯುತ್ತಿದ್ದರು. ಇದೀಗ ತಮ್ಮ ಸಂಭಾವನೆಯಲ್ಲಿ ಭಾರೀ ಏರಿಕೆ ಕಂಡಿರುವುದರೊಂದಿಗೆ ದೇಶದಲ್ಲೇ ಅತೀ ಹೆಚ್ಚು ಮೊತ್ತದ ಸಂಭಾವನೆ ಪಡೆಯುವ ಸಿಇಒ ಎನಿಸಿಕೊಂಡಿದ್ದಾರೆ.

    Infosys 1

    ಇನ್ಫೋಸಿಸ್ ತನ್ನ ಷೇರುದಾರರ ವಾರ್ಷಿಕ ವರದಿಯಲ್ಲಿ ಸಿಇಒ ವೇತನದ ವಿವರಗಳನ್ನು ಬಹಿರಂಗಪಡಿಸಿದೆ. ಇತ್ತೀಚೆಗೆ ಇನ್ಫೋಸಿಸ್ ಕಂಪನಿಯ ಉದ್ಯಮದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದ್ದು, ಇದರಲ್ಲಿ ಪರೇಖ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆ ಅವರ ವೇತನವನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮಸ್ಕ್‌ನಿಂದ ಟ್ವಿಟ್ಟರ್ ಖರೀದಿ ಯೋಜನೆ – ಮಂಡಳಿಯಿಂದ ಹೊರನಡೆದ ಮಾಜಿ ಸಿಇಒ

    ಪರೇಖ್ ಇನ್ಫೋಸಿಸ್‌ನ ಸಿಇಒ ಆಗಿ ಮರುನೇಮಕಗೊಂಡ ಕೆಲವೇ ದಿನಗಳಲ್ಲಿ ಅವರ ವೇತನ ಹೆಚ್ಚಳವಾಗಿದೆ. ಪರೇಖ್ 2022 ಜುಲೈ 1 ರಿಂದ 2027 ಮಾರ್ಚ್ 31ರ ವರೆಗೆ 5 ವರ್ಷಗಳ ಕಾಲ ಇನ್ಫೋಸಿಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮುಂದುವರಿಯಲಿದ್ದಾರೆ.

    infosys salil parekhಇತ್ತೀಚಿನ ವರ್ಷಗಳಲ್ಲಿ ಟೆಕ್ ಉದ್ಯಮದಲ್ಲಿ ಪರೇಖ್ ಮಾತ್ರವೇ ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳದೇ, ಹಲವು ಇತರ ಟೆಕ್ ಕಂಪನಿಗಳೂ ತಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿದೆ. ಜಾಗತಿಕವಾಗಿ ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ತಂತ್ರಜ್ಞಾನದ ಉದ್ಯಮದಲ್ಲಿ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಕಂಪನಿಗಳು ಉದ್ಯಮದಲ್ಲಿ ಪ್ರಗತಿ ಕಾಣುತ್ತಿವೆ. ಇದನ್ನೂ ಓದಿ: ಸಿನಿಮಾಗಾಗಿ ಕಂಬಳದ ಕೋಣ ಓಡಿಸಿದ ರಿಯಲ್ ಹೀರೋ ಶ್ರೀನಿವಾಸ್ ಗೌಡ

  • ರಷ್ಯಾದಿಂದ ಹೊರನಡೆದ ಇನ್ಫೋಸಿಸ್

    ರಷ್ಯಾದಿಂದ ಹೊರನಡೆದ ಇನ್ಫೋಸಿಸ್

    ಮಾಸ್ಕೋ: ಉಕ್ರೇನ್‌ನೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ಇನ್ಫೋಸಿಸ್ ಲಿಮಿಟೆಡ್ ಕಂಪನಿ ರಷ್ಯಾದಿಂದ ಹೊರನಡೆದಿದೆ. ಯುದ್ಧದ ಕಾರಣದಿಂದ ಇನ್ಫೋಸಿಸ್ ರಷ್ಯಾದಲ್ಲಿದ್ದ ತನ್ನ ವ್ಯವಹಾರಗಳನ್ನು ಸ್ಥಳಾಂತರಿಸುತ್ತಿದ್ದು, ಪರ್ಯಾಯ ಆಯ್ಕೆಯನ್ನು ಹುಡುಕುತ್ತಿದೆ ಎಂದು ತಿಳಿಸಿದೆ.

    ಒರಾಕಲ್ ಹಾಗೂ ಸ್ಯಾಪ್ ಸೇರಿದಂತೆ ಹಲವಾರು ಇತರ ಐಟಿ ಹಾಗೂ ಸಾಫ್ಟ್‌ವೇರ್ ಕಂಪನಿಗಳು ರಷ್ಯಾದಲ್ಲಿ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿವೆ. ಇದೀಗ ಭಾರತದ ಇನ್ಫೋಸಿಸ್ ರಷ್ಯಾವನ್ನು ತೊರೆಯಲು ನಿರ್ಧರಿಸಿದೆ. ಇದನ್ನೂ ಓದಿ: ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್

    infosys 2

    ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಪರಿಣಾಮದ ಕುರಿತು ಪ್ರಶ್ನೆಗೆ ಉತ್ತರಿಸಿದ ಇನ್ಫೋಸಿಸ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್, ಪರಿಸ್ಥಿತಿಯನ್ನು ನೋಡಿದಾಗ ನಾವು ನಮ್ಮ ವ್ಯವಹಾರಗಳನ್ನು ರಷ್ಯಾದಿಂದ ಬೇರೆಡೆಗೆ ಬದಲಾಯಿಸಲು ಪ್ರಾರಂಭಿಸಿದ್ದೇವೆ ಎಂದರು.

    ರಷ್ಯಾದಲ್ಲಿ ನಮಗೆ ಗ್ರಾಹಕರು ಇಲ್ಲ. ನಾವೀಗ ರಷ್ಯಾದಲ್ಲಿ ಮಾಡುತ್ತಿರುವ ಕೆಲಸಗಳನ್ನು ಜಾಗತಿಕವಾಗಿ ವಿಸ್ತರಿಸಲು ಮುಂದಾಗಿದ್ದೇವೆ. ರಷ್ಯಾ-ಉಕ್ರೇನ್‌ನ ಸಂಘರ್ಷದ ಬಗ್ಗೆ ನಮಗೆ ಚಿಂತೆ ಇದೆ. ಹೀಗಾಗಿ ನಮ್ಮ ಉದ್ಯೋಗಿಗಳನ್ನು ರಷ್ಯಾದಿಂದ ಇತರ ದೇಶಗಳಿಗೆ, ವಿಶೇಷವಾಗಿ ಪೂರ್ವ ಯುರೋಪ್‌ಗೆ ಸ್ಥಳಾಂತರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಳಕೆದಾರರ ಡೇಟಾ ಸಂಗ್ರಹಿಸ್ತಿದ್ದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಗೂಗಲ್

    infosys salil parekh

    ಈ ಹಿಂದೆ ಮಾರ್ಚ್ನಲ್ಲಿ ತ್ರೈಮಾಸಿಕ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪರೇಖ್, ಇನ್ಫೋಸಿಸ್ ರಷ್ಯಾದಲ್ಲಿ ೧೦೦ಕ್ಕಿಂತಲೂ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ ಎಂದು ತಿಳಿಸಿದ್ದರು.

  • ಇನ್ಫಿ ಸಿಇಒ ಸಲೀಲ್ ಪರೇಖ್‍ಗೆ ಹಣಕಾಸು ಸಚಿವಾಲಯದಿಂದ ಸಮನ್ಸ್

    ಇನ್ಫಿ ಸಿಇಒ ಸಲೀಲ್ ಪರೇಖ್‍ಗೆ ಹಣಕಾಸು ಸಚಿವಾಲಯದಿಂದ ಸಮನ್ಸ್

    ನವದೆಹಲಿ: ಇ-ಫೈಲಿಂಗ್ ಪೋರ್ಟಲ್ ನಲ್ಲಿ  ಕಾಣಿಸಿಕೊಂಡ ತಾಂತ್ರಿಕ ದೋಷ ಪರಿಹಾರವಾಗದ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

    ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟನ್  ಲೋಕಾರ್ಪಣೆಗೊಂಡು 2.5 ತಿಂಗಳು ಕಳೆದರೂ ಅದರಲ್ಲಿನ ತಾಂತ್ರಿಕ ದೋಷಗಳು ಇನ್ನೂ ಸರಿಯಾಗದ ಹಿನ್ನೆಲೆಯಲ್ಲಿ ಜನರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದನ್ನೂ ಓದಿ: 107 ಭಾರತೀಯರು ಸೇರಿ ಅಫ್ಘಾನಿಸ್ತಾನದಿಂದ 168 ಜನರ ಆಗಮನ

    Infosys CEO Salil Parekh

    ಜನರಿಂದ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಹಣಕಾಸು ಸಚಿವಾಲಯ ಸೋಮವಾರ ಸಲೀಲ್ ಪರೇಖ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಇದನ್ನೂ ಓದಿ: ಮಧ್ಯರಾತ್ರಿ ಆಪರೇಷನ್ ಇಂಡಿಯನ್ಸ್ – ಕಾಬೂಲ್‍ನಿಂದ ದೋಹಾ ಮೂಲಕ ದೆಹಲಿಗೆ ಭಾರತೀಯರು

    ಆದಾಯ ತೆರಿಗೆ ಸಲ್ಲಿಕೆಯ ನೂತನ ಇ-ಫೈಲಿಂಗ್ ಪೋರ್ಟಲ್ ಅಭಿವೃದ್ಧಿಪಡಿಸಿದ ಇಸ್ಫೋಸಿಸ್ ಸಂಸ್ಥೆಗೆ 2019ರ ಜನವರಿಯಿಂದ 2021ರ ಜೂನ್‍ವರೆಗೆ 164.5 ಕೋಟಿ ರೂ. ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿತ್ತು.

    ಈ ಸಂಬಂಧ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದ ಆರ್ಥಿಕ ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಎಂಎಸ್‍ಪಿ, ಜಿಎಸ್‍ಟಿ, ಬಾಡಿಗೆ,ಪೋಸ್ಟೇಜ್   ಮತ್ತು ಯೋಜನೆ ವ್ಯವಸ್ಥಾಪನೆಯ ವೆಚ್ಚಕ್ಕೆ ಸಂಬಂಧಿಸಿದ 4,241.97 ಕೋಟಿ ರೂ. ವೆಚ್ಚದ ಸಮಗ್ರ ಇ-ಫೈಲಿಂಗ್ ಮತ್ತು ಸಿಪಿಸಿ-2.0 ಯೋಜನೆಯನ್ನು ಇಸ್ಫೋಸಿಸ್‍ಗೆ ವಹಿಸಲಾಗಿತ್ತು. ಈ ಪ್ರಕಾರ ಇದೇ ವರ್ಷದ ಜೂ.7ರಂದು ನೂತನ ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್  ಲೋಕಾರ್ಪಣೆಯಾಗಿತ್ತು.

    ಹೊಸ ತಲೆಮಾರಿನ ಆದಾಯ ತೆರಿಗೆ ಪಾವತಿ ಸಲ್ಲಿಸುವ ವೆಬ್‍ಸೈಟ್ ತೆರೆಯಲು 2019ರಲ್ಲಿ ಇನ್ಫೋಸಿಸ್ ಈ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಐಟಿ ರಿಟರ್ನ್ಸ್  ಸಲ್ಲಿಕೆಯಾದ 63 ದಿನಗಳ ಬಳಿಕ ರಿಫಂಡ್ ಆಗುವುದನ್ನು ತಪ್ಪಿಸಿ ಒಂದೇ ದಿನಕ್ಕೆ ರಿಟರ್ನ್ ಪ್ರಕ್ರಿಯೆ ಪೂರ್ಣಗೊಳಿಸಿ ಬಹಳ ಬೇಗ ಮರು ಪಾವತಿ ಮಾಡುವಂತೆ ವೆಬ್‍ಸೈಟ್ ಸಿದ್ಧಪಡಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.