Tag: ಸರಗಳ್ಳರು

  • ಬೈಕ್ ಅಡ್ಡ ಹಾಕಿದ ಪೊಲೀಸ್ರು – ನಡುರಸ್ತೆಯಲ್ಲಿ ಗನ್ ಹಿಡಿದು ಓಡುತ್ತಾ, ಶಾಲೆಗೆ ನುಗ್ಗಿದ ಸರಗಳ್ಳರು

    ಬೈಕ್ ಅಡ್ಡ ಹಾಕಿದ ಪೊಲೀಸ್ರು – ನಡುರಸ್ತೆಯಲ್ಲಿ ಗನ್ ಹಿಡಿದು ಓಡುತ್ತಾ, ಶಾಲೆಗೆ ನುಗ್ಗಿದ ಸರಗಳ್ಳರು

    ನವದೆಹಲಿ: ಬೈಕ್‍ನಲ್ಲಿ ಹೋಗುತ್ತಿದ್ದ ಸರಗಳ್ಳರನ್ನು ಪೊಲೀಸರು ಅಡ್ಡಹಾಕಿದ್ದಾರೆ. ಈ ವೇಳೆ ಧರಿಸಿದ್ದ ಹೆಲ್ಮೆಟ್ ಅನ್ನು ಎಸೆದು ಆರೋಪಿಗಳು ಕೈಯಲ್ಲಿ ಗನ್ ಹಿಡಿದುಕೊಂಡು ನಡು ಬೀದಿಯಲ್ಲಿ ದಿಕ್ಕಾಪಾಲಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿದ್ದಾರೆ.

    ದರೋಡೆಯನ್ನು ತಡೆಯಲು ರಚಿಸಲಾಗಿದ್ದ ಜಿಲ್ಲಾ ಪೊಲೀಸರ ತಂಡ ಮಂಗಳವಾರ ಬೆಳಗ್ಗೆ 8:55ರ ಸುಮಾರಿಗೆ, ನಂಬರ್ ಪ್ಲೇಟ್ ಇಲ್ಲದೇ ಹೋಗುತ್ತಿದ್ದ ಬೈಕ್ ಅನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರಿಗೆ ಬಂದೂಕು ತೋರಿಸಿ ಬೆದರಿಸಿದ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ – ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಕೆ

    Police Jeep

    ಮೊದಲಿಗೆ ಬೈಕ್ ತಡೆದು ವಿಚಾರಣೆ ಪ್ರಾರಂಭಿಸುತ್ತಿದ್ದಂತೆಯೇ ಹೆಲ್ಮೆಟ್ ಧರಿಸಿದ ಇಬ್ಬರು ಓಡಲು ಆರಂಭಿಸಿದರು. ನಾವು ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಅವರಲ್ಲಿ ಒಬ್ಬ ಪಿಸ್ತೂಲ್ ತೆಗೆದುಕೊಂಡು ಪೊಲೀಸರಿಗೆ ಬೆದರಿಕೆ ಹಾಕಿದ್ದ. ಮತ್ತೊಬ್ಬ ಹತ್ತಿರದ ಶಾಲೆಯೊಂದರ ಗೋಡೆಯನ್ನು ಏರಿ ಶಾಲೆಯೊಳಗೆ ನುಗ್ಗಿದ್ದ. ಈ ವೇಳೆ ಕೂಡ ನಾವು ಆತನನ್ನು ಬಂಧಿಸಿದ್ದೇವೆ ಎಂದು ಶಹದಾರ ಡಿಸಿಪಿ ಆರ್ ಸತ್ಯಸುಂದರಂ ಹೇಳಿದ್ದಾರೆ.

    KILLING CRIME

    ಈ ಘಟನೆಯ ವೀಡಿಯೋ ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದು, ಓಡುತ್ತಾ ಆರೋಪಿಗಳು ಹೆಲ್ಮೆಟ್ ಅನ್ನು ಎಸೆಯುವುದನ್ನು ಕಾಣಬಹುದಾಗಿದೆ. ಅಲ್ಲದೇ ಶಾಲೆಯೊಳಗೆ ಜಿಗಿದವನು ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಗನ್ ತೋರಿಸಿ ಬೆದರಿಕೆಯೊಡ್ಡಿದ್ದಾನೆ. ಆದರೆ ಪೊಲೀಸರು ಆತನನ್ನು ಸದೆಬಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: 1.77 ಕೋಟಿಗೆ ಸೇಲ್ ಆಯ್ತು 1970ರ ದಶಕದ ಸ್ಟೀವ್ ಜಾಬ್ಸ್ ಚಪ್ಪಲಿ

    ಆರೋಪಿಗಳನ್ನು ಇಲ್ಯಾಸ್ ಅಲಿಯಾಸ್ ಫೈಸಲ್ ಮತ್ತು ಇಸ್ಮಾಯಿಲ್ ಎಂದು ಗುರುತಿಸಲಾಗಿದ್ದು, ಅವರ ಬಳಿ ಇದ್ದ ಗನ್ ಮತ್ತು ಕೆಟಿಎಂ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯ ಚಿನ್ನದ ಸರ ಕದ್ದು ಖದೀಮರು ಎಸ್ಕೇಪ್ – ವೀಡಿಯೋ ವೈರಲ್

    ಮಹಿಳೆಯ ಚಿನ್ನದ ಸರ ಕದ್ದು ಖದೀಮರು ಎಸ್ಕೇಪ್ – ವೀಡಿಯೋ ವೈರಲ್

    ಬೀದರ್: ಅಂಗಡಿಯಿಂದ ಹಾಲು ತೆಗೆದುಕೊಂಡು ಬರುವಾಗ ಸರಗಳ್ಳರು ಮಹಿಳೆಯೊಬ್ಬರ ಸರ ಕದ್ದು ಕ್ಷಣಾರ್ಧದಲ್ಲಿ ಪರಾರಿಯಾದ ಘಟನೆ ಜಿಲ್ಲೆಯ ಪ್ರತಾಪ್ ನಗರದಲ್ಲಿ ನಡೆದಿದೆ.

    WhatsApp Image 2022 04 19 at 12.14.14 PM

    ನಗರದಲ್ಲಿ ಸರಗಳ್ಳರ ಹಾವಳಿಗೆ ಮಹಿಳೆಯರು ಬೆಚ್ಚಿ ಬಿದ್ದಿದ್ದು, ಬೈಕ್‍ನಲ್ಲಿ ಬಂದ ಖದೀಮರು ಮಹಿಳೆಯ ಕತ್ತಿನಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದಾರೆ. ಪ್ರತಾಪ ನಗರದ ನಿವಾಸಿ ಶ್ರೀದೇವಿ ಅವರ ಚಿನ್ನದ ಸರ ಕದ್ದು ಖದೀಮರು ಎಸ್ಕೇಪ್ ಆಗುವ ವೀಡಿಯೋ ಭಯಾನಕವಾಗಿದೆ. ಚಿನ್ನದ ಸರ ಎಗರಿಸಿದ ರಭಸಕ್ಕೆ ಮಹಿಳೆ ರಸ್ತೆ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ

    Police Jeep 1

    ಖದೀಮರು ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ನ್ಯೂ ಟೌನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ

  • ನಡು ರಸ್ತೆಯಲ್ಲಿ 8 ತಿಂಗಳ ಗರ್ಭಿಣಿ ಎಳೆದು ಸರ ಕದ್ದ ಖದೀಮರು

    ನಡು ರಸ್ತೆಯಲ್ಲಿ 8 ತಿಂಗಳ ಗರ್ಭಿಣಿ ಎಳೆದು ಸರ ಕದ್ದ ಖದೀಮರು

    ಚೆನ್ನೈ: ನಡುಬೀದಿಯಲ್ಲಿ 8 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ನಡೆಸಿ ಅಪರಿಚಿತ ವ್ಯಕ್ತಿಗಳು ಚಿನ್ನದ ಸರ ಕದ್ದಿರುವ ಆಘಾತಕಾರಿ ಘಟನೆ ಶುಕ್ರವಾರ ಬೆಳಗ್ಗೆ ಚೆನ್ನೈನ ಪಲ್ಲವರಂನಲ್ಲಿ ನಡೆದಿದೆ.

    ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗೀತಾ ಎಂಬ ಮಹಿಳೆಯ ಪಕ್ಕದಲ್ಲಿ ನಿಲ್ಲಿಸಿ, ಸರ ಕದಿಯಲು ಯತ್ನಿಸಿದ್ದಾರೆ. ಈ ವೇಳೆ ಗೀತಾ ವಿರೋಧಿಸಿದಾಗ, ಸರಗಳ್ಳರು ಆಕೆಯನ್ನು ಜೋರಾಗಿ ರಸ್ತೆ ಮಧ್ಯೆ ತಳ್ಳಾಡುತ್ತಾ ಎಳೆದಾಡಿದ್ದಾರೆ. ಆಗ ಮಹಿಳೆ ಜೋರಾಗಿ ಕೂಗಿದನ್ನು ಕೇಳಿ ಅಲ್ಲಿದ್ದ ನೆರೆಹೊರೆಯವರು ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಆ ಹೊತ್ತಿಗೆ ಸರಗಳ್ಳರು ಸರದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.

    FotoJet 11 7

    ಘಟನೆ ವೇಳೆ ಗೀತಾಗೆ ಹಾನಿಯಾಗಿದ್ದು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವಿಚಾರವಾಗಿ ಗೀತಾ, ತನ್ನ ತೋಳು ಹಾಗೂ ಕಾಲಿಗೆ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಮಹಿಳೆಯ ಪತಿ ರಾಮಚಂದ್ರನ್ ಪಲ್ಲವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಮೊದಲಿಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ವೀಡಿಯೋ ವೈರಲ್ ಆಗುತ್ತಿದ್ದಂತೆ ಸೋಮವಾರ ಎಫ್‍ಐಆರ್ ದಾಖಲಿಸಿದ್ದಾರೆ.

    ಈ ಕುರಿತಂತೆ ತನಿಖೆಯನ್ನು ಚುರುಕುಗೊಳಿಸಿ ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಬೈಕ್ ಚೇಸ್ ಮಾಡಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಸರಗಳ್ಳರು!

    ಬೈಕ್ ಚೇಸ್ ಮಾಡಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಸರಗಳ್ಳರು!

    ಬೆಂಗಳೂರು: ಬೆಳ್ಳಂಬೆಳಗ್ಗೆ ಪೊಲೀಸರು ಸರಗಳ್ಳರ ಕಾಲಿಗೆ ಗುಂಡೇಟು ನೀಡಿದ ಘಟನೆ ಬೆಂಗಳೂರಿನ ಇಸ್ಕಾನ್ ದೇವಸ್ಥಾನದ ಬಳಿ ನಡೆದಿದೆ.

    BNG 1

    ರಾಜಾಜಿನಗರ ಇನ್ಸ್ ಪೆಕ್ಟರ್ ವೆಂಕಟೇಶ್, ಇಬ್ಬರು ಸರಗಳ್ಳರ ಕಾಲಿಗೆ ಫೈರ್ ಮಾಡಿ ವಶಕ್ಕೆ ಪಡೆದಿದ್ದಾರೆ.

    ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ ಇಬ್ಬರು ಕಳ್ಳರು ಸರಗಳವು ಮಾಡಿ ಎಸ್ಕೇಪ್ ಆಗುತ್ತಿದ್ದರು. ಈ ವಿಚಾರ ತಿಳಿದ ಪೊಲೀಸರು ಆರೋಪಿಗಳ ಬೈಕ್ ಚೇಸ್ ಮಾಡಿದ್ದಾರೆ.

    BNG 2

    ಇಸ್ಕಾನ್ ದೇವಸ್ಥಾನದ ಬಳಿ ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇಬ್ಬರು ಸರಗಳ್ಳರ ಕಾಲಿಗೆ ಗುಂಡು ಹೊಡೆದು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

  • ಸರಗಳ್ಳರನ್ನು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ಸರಗಳ್ಳರನ್ನು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ತುಮಕೂರು: ಕೈಯಲ್ಲಿ ಚಾಕುಗಳನ್ನು ಹಿಡಿದುಕೊಂಡು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ ಸರ ದೋಚುತ್ತಿದ್ದ ಮೂವರನ್ನು ತುಮಕೂರು ತಾಲೂಕಿನ ಬ್ಯಾತ ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಮೂವರು ಕಿಡಿಗೇಡಿಗಳ ತಂಡ ಸೋಮವಾರ ಮಧ್ಯಾಹ್ನ ತುಮಕೂರು ನಗರದ ಭದ್ರಮ್ಮ ವೃತ್ತದಲ್ಲಿರುವ ಮೊಬೈಲ್ ಟ್ಯಾಂಪರ್ ಗ್ಲಾಸ್ ಹಾಕುವ ಕಾರಿನ ಬಳಿ ಬಂದು ಮೊಬೈಲ್ ಗಳನ್ನು ಕಿತ್ತುಕೊಳ್ಳುವ ಯತ್ನ ಮಾಡಿದ್ದಾರೆ. ಮೊಬೈಲ್ ಕೊಡದೇ ಇದ್ದ ಕಾರಣಕ್ಕೆ ಮನಸ್ಸೋ ಇಚ್ಛೆ ಇರಿದು ಅಲ್ಲಿಂದ ಪರಾರಿಯಾಗಿದ್ದರು. ನಂತರ ಸೋಮೇಶ್ವರ ಬಡಾವಣೆಯಲ್ಲಿ ಕಾರಿನಲ್ಲಿ ಕುಳಿತಿದ್ದ ಶಮಂತ್ ಎಂಬಾತನ ಬಳಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿ ಆತನಿಗೂ ಇರಿದು ಅಲ್ಲಿಂದ ಪರಾರಿಯಾಗಿದ್ದರು.

    POLICE 1

    ಅಲ್ಲಿಂದ ಗ್ರಾಮಾಂತರ ಭಾಗಕ್ಕೆ ಪರಾರಿಯಾಗಿದ್ದ ಈ ಮೂವರನ್ನು ಊರ್ಡಿಗೆರೆ ಸಮೀಪ ಬ್ಯಾತ ಗ್ರಾಮದ ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳಿಂದ ಇರಿತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಕು, ಮೊಬೈಲ್ ಹಾಗೂ ಸರವನ್ನು ವಶಪಡಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

  • ಸರ ಕದ್ದು ಕತ್ತನ್ನೂ ಸೀಳ್ತಾರೆ- ಬೆಂಗ್ಳೂರಿಗೆ ಎಂಟ್ರಿ ಕೊಟ್ಟಿದೆ ರಕ್ತಪಿಪಾಸು ಗ್ಯಾಂಗ್

    ಸರ ಕದ್ದು ಕತ್ತನ್ನೂ ಸೀಳ್ತಾರೆ- ಬೆಂಗ್ಳೂರಿಗೆ ಎಂಟ್ರಿ ಕೊಟ್ಟಿದೆ ರಕ್ತಪಿಪಾಸು ಗ್ಯಾಂಗ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಸರಗಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಮಹಿಳೆಯರ ಸರ ಕದ್ದು ಕತ್ತನ್ನೂ ಸೀಳುವ ರಕ್ತಪಿಪಾಸು ಗ್ಯಾಂಗ್ ಪೊಲೀಸರ ನಿದ್ದೆಗೆಡಿಸಿದೆ.

    ಪೊಲೀಸರು ಸರಗಳ್ಳತನ ತಡೆಯಲು ಎಷ್ಟೇ ಸರ್ಕಸ್ ಮಾಡುತ್ತಿದ್ದರೂ ಸರಗಳ್ಳರ ಹಾವಳಿ ಮಾತ್ರ ಕಡಿಮೆ ಆಗುತ್ತಿಲ್ಲ. ಈಗ ಪೊಲೀಸರಿಗೆ ತಲೆನೋವಾಗಿ ಬೆಂಗಳೂರಿಗೆ ಸರಗಳ್ಳತನ ಮಾಡಿ ಕತ್ತನ್ನೇ ಸೀಳುವ ರಕ್ತಪಿಪಾಸು ಗ್ಯಾಂಗ್ ಎಂಟ್ರಿಕೊಟ್ಟಿದ್ದು, ಈ ಖದೀಮರು ಮಹಿಳೆಯರ ಸರಗಳ್ಳತನ ಮಾಡಿ, ಅವರ ಕತ್ತನ್ನು ಸೀಳಿ ಕೊಲೆ ಮಾಡುತ್ತಾರೆ.

    chain snatching 21

    ತುಮಕೂರಿನ ಕ್ಯಾಂತಸಂದ್ರದಲ್ಲಿ ಇಂತಹದ್ದೆ ಒಂದು ಘಟನೆ ನಡೆದಿದೆ. ಕ್ಯಾತಸಂದ್ರದ ನಿವಾಸಿ ಭಾಗ್ಯಮ್ಮ ಅವರ ಹತ್ಯೆ ನಡೆದಿದ್ದು, ಕೊಲೆಗಾರರು ಯಾರು ಅನ್ನೋದು ಇನ್ನೂ ಪತ್ತೆಯಾಗಿಲ್ಲ. ಆದರೆ ಈ ಕೊಲೆ ಮಾಡಿದ್ದ ಹಂತಕರ ಚಹರೆಯನ್ನು ಹೋಲುವ ವ್ಯಕ್ತಿಗಳು ಬೆಂಗಳೂರಿನ ಹೆಸರುಘಟ್ಟ, ಪೀಣ್ಯ, ಸೋಲದೇವನಹಳ್ಳಿಯ ಕಡೆ ಕಂಡುಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕ್ಯಾತಸಂದ್ರದಲ್ಲಿ ಕೃತ್ಯವೆಸೆಗಿದ್ದ ಗ್ಯಾಂಗ್ ಬೆಂಗಳೂರಿಗೂ ಎಂಟ್ರಿ ಕೊಟ್ಟಿದೆ ಎನ್ನುವ ಅನುಮಾನ ಕಾಡುತ್ತಿದೆ.

    ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಬೆಂಗಳೂರಿನ ಉತ್ತರ ವಿಭಾಗದ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಾರಂಭಿಸಿದ್ದಾರೆ. ಆದರೆ ಇಷ್ಟು ದಿನ ಸರಗಳ್ಳರ ಕಾಟದಿಂದ ಹೆದರುತ್ತಿದ್ದ ಗಾರ್ಡನ್ ಸಿಟಿ ಮಂದಿ ಈಗ ರಕ್ತಪಿಪಾಸು ಗ್ಯಾಂಗ್ ಬಗ್ಗೆ ತಿಳಿದು ಆತಂಕಕ್ಕೊಳಗಾಗಿದ್ದಾರೆ.

  • ಜಾಮೀನಿನ ಮೇಲೆ ಬಂದು ಸರಗಳ್ಳತನಕ್ಕಾಗಿ ಬೈಕ್ ಕದ್ದರು-ಚೈನ್ ಕದ್ದು ಬಂದ ಜಾಗ ಸೇರಿದ್ರು

    ಜಾಮೀನಿನ ಮೇಲೆ ಬಂದು ಸರಗಳ್ಳತನಕ್ಕಾಗಿ ಬೈಕ್ ಕದ್ದರು-ಚೈನ್ ಕದ್ದು ಬಂದ ಜಾಗ ಸೇರಿದ್ರು

    -ಒಂಟೆ ಮಹಿಳೆಯರೇ ಇವರ ಟಾರ್ಗೆಟ್

    ರಾಮನಗರ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬೈಕ್‌ನಲ್ಲಿ ಬಂದು ಸರ ಎಗರಿಸಿ ಪರಾರಿಯಾಗುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ದುಬಾಯ್ ನಗರದ ನಿವಾಸಿ ಯತೀಶ್, ಬೆಂಗಳೂರಿನ ಬಾಪೂಜಿ ನಗರದ ನಿವಾಸಿ ಅರ್ಜುನ ಬಂಧಿತ ಸರಗಳ್ಳರು. ಮನೆಯಲ್ಲಿನ ಒಂಟಿ ಮಹಿಳೆಯರು, ಸಾಯಂಕಾಲ ಹಾಗೂ ಮುಂಜಾನೆಯ ವೇಳೆ ವಾಕಿಂಗ್ ಮಾಡುವ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಂಡು ಇವರಿಬ್ಬರು ಬೈಕ್‌ನಲ್ಲಿ ತೆರಳಿ ಸರಗಳ್ಳತನ ಮಾಡುತ್ತಿದ್ದರು.

    RMG Chain 2

    ಬಂಧಿತರಿಂದ 235 ಗ್ರಾಂ ಚಿನ್ನಾಭರಣ ಹಾಗೂ 4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಡರಹಳ್ಳಿ, ಬಿಡದಿ, ಕಗ್ಗಲೀಪುರ, ಹಾರೋಹಳ್ಳಿ, ಆನೇಕಲ್‌ನ ಅತ್ತಿಬೆಲೆ, ಸರ್ಜಾಪುರ, ಬೆಂಗಳೂರಿನ ಜ್ಙಾನಭಾರತಿ, ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ 10 ಸರಗಳ್ಳತನ ಹಾಗೂ ನಾಲ್ಕು ಬೈಕ್ ಕಳ್ಳತನ ಪ್ರಕರಣಗಳನ್ನು ಭೇಧಿಸುವಲ್ಲಿ ರಾಮನಗರ ಜಿಲ್ಲೆಯ ಬ್ಯಾಡರಹಳ್ಳಿ ಪೊಲೀಸ್‌ರು ಯಶಸ್ವಿಯಾಗಿದ್ದಾರೆ.

    RMG Chain

    ಅಂದಹಾಗೇ ಬಂಧಿತ ಆರೋಪಿಗಳು ಹೆಚ್ಚಿನದಾಗಿ ಬೈಕ್‌ಗಳಲ್ಲಿ ಹೋಗುತ್ತಿದ್ದ ಹಾಗೂ ಒಂಟಿಯಾಗಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡ್ತಿದ್ರು. ಸರಗಳ್ಳತನಕ್ಕಾಗಿ ಈ ಖದೀಮರು ನಾಲ್ಕು ಬೈಕ್‌ಗಳನ್ನು ಕಳ್ಳತನ ಮಾಡಿದ್ದರು. ಕಳ್ಳತನ ಮಾಡಿದ್ದ ಬೈಕ್‌ಗಳಲ್ಲೇ ತೆರಳಿ ಬೈಕ್‌ನಲ್ಲಿ ಹಿಂಬದಿ ಕುಳಿತು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಲ್ಲಿದ್ದ ಸರ, ಮಾಂಗಲ್ಯ ಸರವನ್ನು ಕ್ಷಣ ಮಾತ್ರದಲ್ಲಿ ಕಿತ್ತುಕೊಂಡು ಪರಾರಿಯಾಗುತ್ತಿದ್ರು.

    RMG Chain 1

    ಬಂಧಿತ ಯತೀಶ್ ಈ ಸರಗಳ್ಳರ ಟೀಮ್‌ನಲ್ಲಿ ಪ್ರಮುಖನಾಗಿದ್ದು ಈ ಹಿಂದೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳವು ಮಾಡಿ ಜೈಲು ಸೇರಿದ್ದ. ಆದರೆ ಜಾಮೀನಿನ ಮೇಲೆ ಹೊರಬಂದಿದ್ದ ಯತೀಶ್ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿ ಇದೀಗ ಮತ್ತೆ ಪೊಲೀಸ್‌ರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸರಗಳ್ಳತನ ಮಾಡುವುದನ್ನೇ ಕಾಯಂ ಕಸುಬನ್ನಾಗಿ ಮಾಡಿಕೊಂಡಿದ್ದ ಈ ಗ್ಯಾಂಗ್‌ನ ಚಂದ್ರಶೇಖರ್ ಅಲಿಯಾಸ್ ಮಾಟ ಕೋಲಾರ ಜೈಲಿನಲ್ಲಿದ್ರೆ, ಕಾರ್ತಿಕ್ ಎಂಬಾತ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇದೀಗ ಬಂಧಿತವಾಗಿರೋ ಇಬ್ಬರು ಸರಗಳ್ಳರು ತಮ್ಮ ಜೊತೆಗಾರರ ಜೊತೆ ಜೈಲಿನಲ್ಲಿ ಮುದ್ದೆ ಮುರಿಯೋಕೆ ರೆಡಿಯಾಗಿದ್ದಾರೆ.

  • ಮಗುವಿನೊಂದಿಗೆ ತೆರಳುತ್ತಿದ್ದ ಮಹಿಳೆಯ ಕೊರಳಿಗೆ ಕೈ ಹಾಕಿದ್ರು: ವಿಡಿಯೋ

    ಮಗುವಿನೊಂದಿಗೆ ತೆರಳುತ್ತಿದ್ದ ಮಹಿಳೆಯ ಕೊರಳಿಗೆ ಕೈ ಹಾಕಿದ್ರು: ವಿಡಿಯೋ

    ನವದೆಹಲಿ: ಕೆಲ ದಿನಗಳ ಹಿಂದೆಯಷ್ಟೇ ಸರಗಳ್ಳತನ ಮಾಡಲು ಯತ್ನಿಸಿದ್ದ ಇಬ್ಬರು ದುಷ್ಕರ್ಮಿಗಳನ್ನು ಅಮ್ಮ ಹಾಗೂ ಮಗಳು ಹಿಡಿದು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸುದ್ದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮಗುವಿನೊಂದಿಗೆ ತೆರಳುತ್ತಿದ್ದ ಮಹಿಳೆಯನ್ನು ಟಾರ್ಗೆಟ್ ಮಾಡಿ ಚೈನ್ ಕಿತ್ತುಕೊಂಡು ಹೋದ ಘಟನೆ ದೆಹಲಿಯ ಛವ್ಲಾ ಪ್ರದೇಶದಲ್ಲಿ ನಡೆದಿದೆ.

    ಮಗುವಿನೊಂದಿಗೆ ತೆರಳುತ್ತಿದ್ದ ಮಹಿಳೆಯನ್ನು ಟಾರ್ಗೆಟ್ ಮಾಡಿ ದುಷ್ಕರ್ಮಿಗಳು ಚೈನ್ ಕಿತ್ತುಕೊಂಡು ಪರಾರಿಯಾದ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಓದಿ: ಚೈನ್ ಕಳ್ಳರನ್ನು ಹಿಡಿದು ಥಳಿಸಿದ ಅಮ್ಮ ಮಗಳು: ವಿಡಿಯೋ

    Chain Snatching 2

    ನಡೆದಿದ್ದೇನು?: ಮಹಿಳೆಯೊಬ್ಬರು ಶಾಲೆಯಿಂದ ಮಗುವನ್ನು ಕರೆದುಕೊಂಡು ಕರೆದುಕೊಂಡು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಚೈನ್ ಕಳ್ಳರಿಬ್ಬರು ಮಹಿಳೆಯ ಮುಂದೇ ಸ್ವಲ್ಪ ದೂರ ಹೋಗಿ ನಿಂತರು. ಬಳಿಕ ಬೈಕ್ ರಿವರ್ಸ್ ಮಾಡಿ ನಿಂತಿದ್ದರು. ಈ ವೇಳೆ ಬೈಕಿನಿಂದ ಇಳಿದ ಒಬ್ಬ ಮಹಿಳೆ ಬರುತ್ತಿದಂತೆ ಆಕೆಯ ಕೊರಳಿಗೆ ಕೈ ಹಾಕಿ ಚೈನ್ ಕಿತ್ತುಕೊಂಡಿದ್ದ.

    ಒಂದು ಕೈನಲ್ಲಿ ಮಗು, ಮತ್ತೊಂದು ಕೈನಲ್ಲಿ ಬ್ಯಾಗ್ ಹಿಡಿದಿದ್ದ ಮಹಿಳೆಗೆ ಈ ಘಟನೆ ಶಾಕ್ ನೀಡಿತ್ತು. ಆದರೂ ಕಳ್ಳರನ್ನು ಬೆನ್ನಟ್ಟಿ ಹಿಡಿಯಲು ಯತ್ನಿಸಿದ ಮಹಿಳೆಯ ಪ್ರಯತ್ನ ವಿಫಲವಾಗಿತ್ತು. ಬೈಕಿನಲ್ಲಿ ಇಬ್ಬರು ಕಳ್ಳರು ಎಸ್ಕೇಪ್ ಆಗಲು ಯಶಸ್ವಿಯಾಗಿದ್ದರು. ಶುಕ್ರವಾರ ಸಂಜೆ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯ ಆಧಾರದ ಮೇಲೆ ಪೊಲೀಸರು ಚೈನ್ ಕಳ್ಳರನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.

  • ಸರಗಳ್ಳತನ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್ – ಬರೋಬ್ಬರಿ 13 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

    ಸರಗಳ್ಳತನ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್ – ಬರೋಬ್ಬರಿ 13 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

    ವಿಜಯಪುರ: ನಗರದಲ್ಲಿ ಹೆಚ್ಚುತ್ತಿದ್ದ ಸರಗಳ್ಳತನ ಪ್ರಕರಣಗಳನ್ನು ಬೇಧಿಸಿ ಐದು ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಸುಮಾರು 13 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಎಸ್‍ಪಿ ಪ್ರಕಾಶ ನಿಕ್ಕಂ, ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಜಯಪುರ ನಗರದ ತೌಸೀಫ್ ಖಾಜಾಸಾಬ ಬಾಗವಾನ, ಅಜಮಾನ ತಂ ಹಾಗೂ ಇಮ್ತಿಯಾಜ್ ಖುರೇಷಿಯನ್ನು ಬಂಧಿಸಲಾಗಿದ್ದು, ಆರೋಪಿಗಳ ಬಳಿ 99 ಗ್ರಾಮ ಬಂಗಾರ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಸೇರಿ ಒಟ್ಟು 3 ಲಕ್ಷ 46 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

    bij arrest

    ಹಾಗೆಯೇ ನಗರದಲ್ಲಿ ಸರಗಳ್ಳತನ ಮಾಡ್ತಿದ್ದ ಮತ್ತೊಂದು ತಂಡವೊಂದನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಮಹಮ್ಮದ್ ಖಾಲಿದ್ ಇನಾಮದಾರ, ಅಮೀತ್ ಜಂಬಗಿ, ಮಹ್ಮದ್ ಆರೀಫ್ ಶೇಖ್, ಅಮೀರ ಯರನಾಳ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಸುಮಾರು 309 ಗ್ರಾಂ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ 4 ಬೈಕ್ ಸೇರಿ ಒಟ್ಟು 10 ಲಕ್ಷದ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಒಟ್ಟು 10 ಪ್ರಕರಣಗಳಲ್ಲಿ ಈ ಎರಡು ಖರ್ತನಾಕ್ ಗ್ಯಾಂಗ್ ಭಾಗಿಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

    bij arrest 1

    ಸದ್ಯ ಆರೋಪಿಗಳ ವಿರುದ್ಧ ವಿಜಯಪುರ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗಳಿಗೆ ಎಸ್‍ಪಿ ಪ್ರಕಾಶ್ ಬಹುಮಾನ ವಿತರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv