Tag: ಸಬ್ ರಿಜಿಸ್ಟ್ರಾರ್ ಆಫೀಸ್

  • ಪುತ್ರನ ಹೆಸರಿಗೆ ಆಸ್ತಿ ವರ್ಗಾವಣೆ ಸುಳಿವು ಕೊಟ್ರು ಅಂಬಿ!

    ಪುತ್ರನ ಹೆಸರಿಗೆ ಆಸ್ತಿ ವರ್ಗಾವಣೆ ಸುಳಿವು ಕೊಟ್ರು ಅಂಬಿ!

    ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ತಮ್ಮ ಆಸ್ತಿಯನ್ನು ಪುತ್ರನ ಅಭಿಷೇಕ್ ಹೆಸರಿಗೆ ವರ್ಗಾಯಿಸಲು ಮುಂದಾಗಿದ್ದು, ಗುರುವಾರ ಮದ್ದೂರು ತಾಲೂಕು ಕಚೇರಿಗೆ ಭೇಟಿ ನೀಡಿದ್ದರು.

    ಅಂಬರೀಶ್ ಹುಟ್ಟೂರು ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮ. ಇಲ್ಲಿ ಪಿತ್ರಾರ್ಜಿತ ಆಸ್ತಿಯಿದ್ದು, ಅದನ್ನು ಪುತ್ರ ಅಭಿಷೇಕ್ ಹೆಸರಿಗೆ ವರ್ಗಾಯಿಸಲು ಉಪ ನೋಂದಣಿ ಕಚೇರಿಗೆ (ಸಬ್ ರಿಜಿಸ್ಟ್ರಾರ್ ಆಫೀಸ್) ಅಂಬರೀಶ್ ಬಂದಿದ್ದರು.

    ಅಂಬರೀಶ್ ಆಗಮನ ಗೊತ್ತಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕಚೇರಿಗೆ ಬಂದಿದ್ದರು. ಕಚೇರಿಯಲ್ಲಿ ಇರುವ ಫೋಟೋ ಹಾಗೂ ವಿಡಿಯೋ ತೆಗೆಯಲು ಅಭಿಮಾನಿಗಳು ಮುಂದಾಗಿದ್ದರು. ಇದಕ್ಕೆ ಅಂಬರೀಶ್ ಅವಕಾಶ ನೀಡಲಿಲ್ಲ. ಆದರೆ ಕಚೇರಿಯಿಂದ ಅಂಬರೀಶ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ನಾ ಮುಂದು ತಾ ಮುಂದು ಎಂದು ಬಂದು ಫೋಟೋ ಹಾಗೂ ಸೆಲ್ಫೀ ತೆಗೆದುಕೊಂಡರು.