Tag: ಶ್ರೀಮುರಳಿ

  • ಕೆಜಿಎಫ್ ನಂತರ ಶುರುವಾಗಲಿದೆಯಾ ಉಗ್ರಂ ವೀರಂ?

    ಕೆಜಿಎಫ್ ನಂತರ ಶುರುವಾಗಲಿದೆಯಾ ಉಗ್ರಂ ವೀರಂ?

    ಶ್ರೀಮುರಳಿ ನಟಿಸಿದ್ದ ಉಗ್ರಂ ಚಿತ್ರದ ಮೂಲಕವೇ ನಿರ್ದೇಶಕರಾಗಿ ಸದ್ದು ಮಾಡಿದವರು ಪ್ರಶಾಂತ್ ನೀಲ್. ಆ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿ ಶ್ರೀಮುರಳಿಯ ಅದೃಷ್ಟವನ್ನೇ ಬದಲಿಸಿದ್ದೀಗ ಇತಿಹಾಸ. ಇಂಥಾ ನೀಲ್ ಇಂದು ಕೆಜಿಎಫ್ ಮೂಲಕ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಈ ಹೊತ್ತಿನಲ್ಲಿಯೇ ಕೆಜಿಎಫ್ ನಂತರ ಅವರು ಯಾವ ಚಿತ್ರ ನಿರ್ದೇಶನ ಮಾಡಲಿದ್ದಾರೆಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿತ್ತು. ಅದಕ್ಕೆ ಉತ್ತರದಂಥಾ ಸುದ್ದಿಯೊಂದು ಇದೀಗ ಹರಿದಾಡಲಾರಂಭಿಸಿದೆ!

    srimurali

    ಒಂದು ಮೂಲದ ಪ್ರಕಾರ ಈಗಾಗಲೇ ಪ್ರಶಾಂತ್ ನೀಲ್ ಹೊಸ ಚಿತ್ರಕ್ಕೆ ರೆಡಿಯಾಗಿದ್ದಾರೆ. ಆ ಚಿತ್ರಕ್ಕೆ ಉಗ್ರಂ ವೀರಂ ಎಂಬ ಟೈಟಲ್ಲೂ ಫಿಕ್ಸಾಗಿದೆ ಮತ್ತು ಇದರಲ್ಲಿ ಶ್ರೀಮುರಳಿ ಅವರೇ ನಾಯಕನಾಗಿಯೂ ನಟಿಸಲಿದ್ದಾರೆ!

    ಕೆಜಿಎಫ್ ಚಿತ್ರ ಬರೋಬ್ಬರಿ ಎರಡು ವರ್ಷಗಳ ಕಾಲ ಚಿತ್ರೀಕರಿಸಿಕೊಂಡಿತ್ತಲ್ಲಾ? ಆ ಬ್ಯುಸಿಯ ನಡುವೆಯೂ ಪ್ರಶಾಂತ್ ನೀಲ್ ಉಗ್ರಂ ವೀರಂ ಸ್ಕ್ರಿಪ್ಟ್ ವರ್ಕ್ ಮುಗಿಸಿಕೊಂಡಿದ್ದಾರಂತೆ. ಕೆಜಿಎಫ್ ಚಿತ್ರ ತೆರೆ ಕಾಣುತ್ತಲೇ ಈ ಚಿತ್ರದ ಉಳಿದ ಕೆಲಸ ಕಾರ್ಯಗಳಿಗೂ ಚಾಲನೆ ಕೊಡಲಿದ್ದಾರೆ. ಮುಂದಿನ ವರ್ಷದ ಆರಂಭದ ಹೊತ್ತಿಗೆಲ್ಲಾ ಈ ಚಿತ್ರ ಶುರುವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭರಾಟೆ ಚಿತ್ರದಿಂದ ಛಾಯಾಗ್ರಾಹಕ ಭುವನ್ ಔಟ್?

    ಭರಾಟೆ ಚಿತ್ರದಿಂದ ಛಾಯಾಗ್ರಾಹಕ ಭುವನ್ ಔಟ್?

    ಬೆಂಗಳೂರು: ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿರೋದು ಗೊತ್ತೇ ಇದೆ. ಚಿತ್ರೀಕರಣ ಶುರುವಾದಂದಿನಿಂದ ಇದುವರೆಗೂ ಈ ಚಿತ್ರದ ಕಡೆಯಿಂದ ಪ್ರೇಕ್ಷಕರಿಗೆ ಹಬ್ಬವಾಗುವಂಥಾದ್ದೇ ಸುದ್ದಿಗಳು, ಬೆಳವಣಿಗೆಗಳು ಜಾಹೀರಾಗುತ್ತಾ ಬಂದಿವೆ. ಆದರೀಗ ಈ ಚಿತ್ರದ ಬಹು ಮುಖ್ಯ ಭಾಗವಾಗಿದ್ದವರೊಬ್ಬರು ಚಿತ್ರತಂಡದಿಂದ ಹೊರಬಿದ್ದ ಸುದ್ದಿ ಬಂದಿದೆ!

    ಉಗ್ರಂ ಚಿತ್ರದ ಮೂಲಕ ಛಾಯಾಗ್ರಾಹಕರಾಗಿಯೂ ಹೆಸರು ಮಾಡಿದ್ದವರು ಭುವನ್ ಗೌಡ. ಆ ನಂತರ ಅವರು ರಥಾವರ ಚಿತ್ರದಲ್ಲಿಯೂ ಶ್ರೀಮುರಳಿಯವರಿಗೆ ಸಾಥ್ ನೀಡಿದ್ದರು. ಇದೀಗ ಭರಾಟೆ ಚಿತ್ರದ ಮೂಲಕ ಭುವನ್ ಮತ್ತು ಶ್ರೀಮುರಳಿ ಕಾಂಬಿನೇಷನ್ ಮೂರನೇ ಸಲ ಒಂದಾಗಿತ್ತು. ಆದರೆ ಒಂದಷ್ಟು ಕಾಲ ಚಿತ್ರೀಕರಣ ನಡೆಸಿದ ನಂತರ ಇದೀಗ ಭುವನ್ ಗೌಡ ಏಕಾಏಕಿ ಈ ಚಿತ್ರದಿಂದ ಹೊರ ಬಂದಿದ್ದಾರೆನ್ನಲಾಗಿದೆ.

    Bharate

    ಛಾಯಾಗ್ರಾಹಕರೊಬ್ಬರು ಚಿತ್ರೀಕರಣ ಶುರುವಾದ ಮೇಲೆ ಹೊರ ಬಂದರೆ ಸಹಜವಾಗಿಯೇ ಅಚ್ಚರಿಯುಂಟಾಗುತ್ತದೆ. ಅದರ ಸುತ್ತ ರೂಮರ್‍ಗಳೂ ಶುರುವಾಗುತ್ತವೆ. ಅಂಥಾದ್ದೇ ಒಂದು ರೂಮರನ್ನು ಆಧರಿಸಿ ಹೇಳೋದಾದರೆ ಭುವನ್ ಗೌಡ ಮತ್ತು ನಿರ್ದೇಶಕ ಚೇತನ್ ಅವರ ನಡುವಿನ ವೈಮನಸ್ಸೇ ಈ ಬೆಳವಣಿಗೆಗೆ ಕಾರಣ ಎಂದೂ ಹೇಳಲಾಗುತ್ತಿದೆ.

    ಇದೆಲ್ಲದರ ಹಿಂದಿರೋ ಅಸಲೀ ವಿಚಾರ ಏನೆಂಬುದನ್ನು ಚಿತ್ರ ತಂಡವೇ ಹೇಳಬೇಕಿದೆ. ಆದರೆ ಭುವನ್ ಗೌಡ ಹೊರ ಬಂದಿರೋ ಸುದ್ದಿ ನಿಜಕ್ಕೂ ಶಾಕಿಂಗ್. ಯಶ್ ನಟಿಸಿರೋ ಕೆಜಿಎಫ್‍ನಂಥಾ ಚಿತ್ರಗಳಿಗೂ ಕ್ಯಾಮೆರಾ ಕಣ್ಣಾಗಿರುವ ಭುವನ್ ಗೌಡ ಬಹು ಬೇಡಿಕೆ ಹೊಂದಿರುವವರು. ಇಂಥವರು ಚಿತ್ರತಂಡದಿಂದ ಹೊರ ಬಿದ್ದ ಘಟನೆಯ ಸುತ್ತ ವಿನಾ ಕಾರಣ ಸುದ್ದಿಗಳು ಹರಡಿಕೊಳ್ಳುವ ಮೊದಲೇ ಚಿತ್ರ ತಂಡ ಇದರ ಹಿಂದಿನ ವಾಸ್ತವ ವಿಚಾರಗಳನ್ನು ಹೊರ ಹಾಕ ಬಹುದೇನೋ…?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    BHARATE 1

  • ಮರಳುಗಾಡಿನಲ್ಲಿ ಶ್ರೀಮುರಳಿ ಭರಾಟೆ!

    ಮರಳುಗಾಡಿನಲ್ಲಿ ಶ್ರೀಮುರಳಿ ಭರಾಟೆ!

    ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಶ್ರೀಮುರಳಿ ಬೇರೆಯದ್ದೇ ಗೆಟಪ್ಪಿನಲ್ಲಿರೋ ಸ್ಟಿಲ್ಲುಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇದೀಗ ರಾಜಸ್ಥಾನದ ಮರುಭೂಮಿಯಲ್ಲಿ ಈ ಚಿತ್ರದ ಚಿತ್ರೀಕರಣ ಸಾಂಗವಾಗಿ ನೆರವೇರುತ್ತಿದೆ.

    BHARATE

    ಖುದ್ದು ಶ್ರೀಮುರಳಿಯವರೇ ಮರುಭೂಮಿಯಲ್ಲಿನ ಚಿತ್ರೀಕರಣದ ಬಗ್ಗೆ ಥ್ರಿಲ್ ಆಗಿದ್ದಾರೆ. ನಿರ್ದೇಶಕ ಭರ್ಜರಿ ಚೇತನ್ ಅವರ ಕಾರ್ಯಶೈಲಿ ಮತ್ತು ಲೊಕೇಷನ್ನುಗಳನ್ನು ಹುಡುಕುವ ಚಾಕಚಕ್ಯತೆಯ ಬಗ್ಗೆ ಶ್ರೀಮುರಳಿ ಮನಸೋತಿದ್ದಾರೆ. ಇದುವರೆಗೂ ಮರುಭೂಮಿಯಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣವಾಗಿದೆ. ಆದರೆ ಚೇತನ್ ಈವರೆಗೂ ಕನ್ನಡಿಗರು ನೋಡಿರದ ಆಂಗಲ್ ಗಳಲ್ಲಿ, ಯಾರೂ ಹೆಚ್ಚಾಗಿ ಹೋಗದ ಮರುಭೂಮಿಯ ಪ್ರದೇಶಗಳನ್ನೇ ಚಿತ್ರೀಕರಣಕ್ಕೆ ಆಯ್ದುಕೊಳ್ಳುತ್ತಿದ್ದಾರಂತೆ.

    BHARATE 3

    ನಮ್ಮ ನಿರ್ದೇಶಕರು ಶೂಟಿಂಗ್ ಗೆ ಆಯ್ದುಕೊಳ್ಳುವ ಪ್ರದೇಶಗಳೇ ನಮಗೆಲ್ಲ ಅಚ್ಚರಿ ಹುಟ್ಟಿಸುತ್ತೆ. ಪ್ರತೀ ಕ್ಷಣವೂ ಹೊಸ ಹುಡುಕಾಟ ನಡೆಸೋ ನಿರ್ದೇಶಕರ ಜೊತೆ ಕೆಲಸ ಮಾಡೋದೇ ಸಂತಸದ ವಿಚಾರ ಅಂತ ಒಟ್ಟಾರೆ ಚಿತ್ರೀಕರಣದ ಅನುಭವಗಳನ್ನು ಶ್ರೀ ಮುರಳಿ ತೆರೆದಿಟ್ಟಿದ್ದಾರೆ.

    BHARATE 1

    ಇದೀಗ ರಾಜಸ್ಥಾನದ ಮರುಭೂಮಿಯಲ್ಲಿ ಪ್ರತಿಕೂಲವಾದ ವಾತಾವರಣವಿದೆ. ಅದರ ನಡುವೆಯೂ ಇಡೀ ಚಿತ್ರ ತಂಡ ಅಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಭರ್ಜರಿ ಚೇತನ್ ಕೂಡಾ ಇದಕ್ಕೆ ಪೂರಕವಾಗಿ, ಚಿತ್ರತಂಡಕ್ಕೆ ಹುಮ್ಮಸ್ಸು ತುಂಬುತ್ತಾ ಚಿತ್ರೀಕರಣ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭರಾಟೆಯಲ್ಲಿ ಭಾಗಿಯಾದ್ರು ಅರ್ಜುನ್ ಜನ್ಯ!

    ಭರಾಟೆಯಲ್ಲಿ ಭಾಗಿಯಾದ್ರು ಅರ್ಜುನ್ ಜನ್ಯ!

    ಬೆಂಗಳೂರು: ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರ ಪ್ರಚಾರದ ಭರಾಟೆಯಲ್ಲಿಯೂ ಮುಂದಿದೆ. ಮೊದಲ ಫೋಟೋ ಶೂಟ್ ಅನ್ನೇ ಅದ್ಧೂರಿಯಾಗಿ ಮುಗಿಸಿಕೊಂಡಿರೋ ಚಿತ್ರತಂಡ ಈ ಮೂಲಕವೇ ಎಬ್ಬಿಸಿರೋ ಹವಾ ಸಣ್ಣ ಮಟ್ಟದ್ದೇನಲ್ಲ. ಇಂಥಾ ಅಬ್ಬರದೊಂದಿಗೇ ಈ ಚಿತ್ರತಂಡಕ್ಕೆ ಹೊಸಬರ ಸೇರ್ಪಡೆಯೂ ಮುಂದುವರೆದಿದೆ. ಇದೀಗ ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ!

    ಅರ್ಜುನ್ ಜನ್ಯ ಎಂಟ್ರಿಯ ಮೂಲಕ ಈ ಚಿತ್ರದ ಹಾಡುಗಳಿಗಾಗಿಯೂ ಅಭಿಮಾನಿಗಳು ತುದಿಗಾಲಲ್ಲಿ ಕಾಯುವಂಥಾ ವಾತಾವರಣ ನಿರ್ಮಾಣವಾಗಿದೆ. ಇದಲ್ಲದೇ ಅರ್ಜುನ್ ಎಂಟ್ರಿಯಲ್ಲೊಂದು ವಿಶೇಷವೂ ಇದೆ. ಈವರೆಗೂ ಶ್ರೀಮುರಳಿ ಚಿತ್ರಗಳಿಗೆ ಇವರು ಸಂಗೀತ ನಿರ್ದೇಶನ ಮಾಡಿರಲಿಲ್ಲ. ಇನ್ನುಳಿದಂತೆ ಭರ್ಜರಿ ಚೇತನ್ ಮತ್ತು ಜನ್ಯಾ ಕಾಂಬಿನೇಷನ್ ಕೂಡಾ ಇದೇ ಮೊದಲು. ಈ ಮೂವರೂ ಇದೇ ಮೊದಲ ಬಾರಿ ಒಂದಾಗಿರೋದರಿಂದ ಹಾಡುಗಳೂ ಹೊಸಾ ರೀತಿಯಲ್ಲಿ ಕಮಾಲ್ ಮಾಡೋ ನಿರೀಕ್ಷೆಗಳೆದ್ದಿವೆ.

    ಇದಲ್ಲದೇ ಆಗಸ್ಟ್ ಹದಿನೈದರಂದು ಭರಾಟೆ ಚಿತ್ರದ ವತಿಯಿಂದ ಹುಬ್ಬಳ್ಳಿಯಲ್ಲಿ ವರ್ಣರಂಜಿತವಾದ ಕಾರ್ಯಕ್ರಮವೊಂದು ನಡೆಯಲಿದೆ. ಅದರ ಮೂಲಕವೇ ಭರ್ಜರಿ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಲು ನಿರ್ದೇಶಕ ಚೇತನ್ ಯೋಜನೆ ಹಾಕಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಾರಾಗಣವೂ ಸೇರಿದಂತೆ ಅನೇಕ ವಿಚಾರಗಳನ್ನು ಜಾಹೀರು ಮಾಡಲೂ ಚೇತನ್ ಮುಂದಾಗಿದ್ದಾರೆ.

    ಸದ್ಯಕ್ಕೆ ಅರ್ಜುನ್ ಜನ್ಯ ಹಿಟ್ ಹಾಡುಗಳನ್ನು ಸಾಲು ಸಾಲಾಗಿ ನೀಡುತ್ತಾ ಚಾಲ್ತಿಯಲ್ಲಿರುವ ಸಂಗೀತ ನಿರ್ದೇಶಕ. ಚಿತ್ರದಿಂದ ಚಿತ್ರಕ್ಕೆ ಹೊಸತನಗಳಿಗೆ ಹಾತೊರೆಯುತ್ತಲೇ ಹೊಸಾ ಪ್ರಯೋಗಗಳನ್ನೂ ನಡೆಸುವ ಜನ್ಯಾ ಭರಾಟೆ ಚಿತ್ರದಲ್ಲಿ ಎಂಥಾ ಮೋಡಿ ಮಾಡಲಿದ್ದಾರೆಂಬುದರ ಸುತ್ತಾ ಇದೀಗ ಪ್ರೇಕ್ಷಕರ ಗಮನ ಕೇಂದ್ರೀಕೃತಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಂಎಲ್‍ಎ ಸಿನಿಮಾ ತುಂಬಾ ರೊಮ್ಯಾಂಟಿಕ್ ಚಿತ್ರ-ಶ್ರೀ ಮುರಳಿ

    ಎಂಎಲ್‍ಎ ಸಿನಿಮಾ ತುಂಬಾ ರೊಮ್ಯಾಂಟಿಕ್ ಚಿತ್ರ-ಶ್ರೀ ಮುರಳಿ

    ಬೆಂಗಳೂರು: ಎಂಎಲ್‍ಎ ಸಿನಿಮಾ ತುಂಬಾ ರೊಮ್ಯಾಂಟಿಕ್ ಆಗಿ ಮೂಡಿಬಂದಿದೆ ಅಂತಾ ಖ್ಯಾತ ನಟ ಶ್ರೀಮುರಳಿ ಹೇಳಿದ್ದಾರೆ.

    ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ, ನಟ ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಮ್ಮ ಹುಡುಗ ಪ್ರಥಮ್ ಚಿತ್ರದ ಹಾಡನ್ನು ನಮ್ಮಿಂದಲೇ ಲಾಂಚ್ ಮಾಡ್ಸಿದ್ರು. ನಾನು ಈ ಚಿತ್ರದ ಹಾಡೊಂದನ್ನು ನೋಡಿದ್ದು ಅದು ತುಂಬಾ ರೊಮ್ಯಾಂಟಿಕ್ ಆಗಿ ಮೂಡಿಬಂದಿದೆ. ಹಾಡು ನೋಡಿ ತುಂಬಾನೇ ಖುಷಿ ಆಯ್ತು. ಪ್ರಥಮ್ ರವರಲ್ಲಿ ಒಂದು ರೊಮ್ಯಾಂಟಿಕ್ ಭಾವನೆ ಅಡಗಿದೆ. ಅದನ್ನು ಪರದೆಯ ಮೇಲೆ ತುಂಬಾ ಚೆನ್ನಾಗಿಯೇ ತೋರಿಸಿದ್ದಾರೆ. ಹಾಡುಗಳಲ್ಲಿ ಪ್ರಥಮ್ ನಟನೆಯನ್ನು ನೋಡಿ ನನಗೇ ಶಾಕ್ ಆಯ್ತು ಅಂತಾ ಅಂದ್ರು.

    ಆ ಹಾಡಿನಲ್ಲಿ ಅವರ ಅಭಿನಯ, ವಾಕಿಂಗ್ ಶೈಲಿ, ನೋಟ ಎಲ್ಲವೂ ಸಖತ್ತಾಗಿ ಮೂಡಿಬಂದಿದೆ. ಒಬ್ಬರ ಜೀವನದಲ್ಲಿ ಆಗುವ ಬದಲಾವಣೆ ಅವರನ್ನು ಇನ್ನೂ ಹೆಚ್ಚಿನ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತವೆ. ಆ ಸಾಲಿಗೆ ಪ್ರಥಮ್ ಸೇರುತ್ತಾರೆ. ಅವರ ಆ ಶಕ್ತಿಯೇ ಅವರನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತೆ ಅಂತಾ ಹಾರೈಸಿದರು.

    ಉತ್ತಮ ವಿಚಾರಗಳಿಂದ ಕೂಡಿರುವ ಪ್ರಥಮ್ ವಿಚಾರಗಳು ಅವರನ್ನು ಇನ್ನಷ್ಟು ಬೆಳೆಸುತ್ತವೆ. ಪ್ರಥಮ್ ರ ಈ ಹೊಸ ಪ್ರಯತ್ನವನ್ನು ಕೊಂಡಾಡಿದ ಶ್ರೀಮುರುಳಿ ಎಂಎಲ್‍ಎ ಚಿತ್ರಕ್ಕೆ ಹಾಗೂ ಇಡೀ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದರು.

  • ಶಿವಣ್ಣ ಹೇಳಿದ್ದಕ್ಕೆ `I Love Your Eyes’ ಎಂದು ನಟಿಗೆ ಮೆಸೇಜ್ ಕಳುಹಿಸಿದ ನಟ ಶ್ರೀಮುರಳಿ

    ಶಿವಣ್ಣ ಹೇಳಿದ್ದಕ್ಕೆ `I Love Your Eyes’ ಎಂದು ನಟಿಗೆ ಮೆಸೇಜ್ ಕಳುಹಿಸಿದ ನಟ ಶ್ರೀಮುರಳಿ

    ಬೆಂಗಳೂರು: ನಟ ಶ್ರೀಮುರಳಿ `ಮಫ್ತಿ’ ಸಿನಿಮಾದ ಯಶಸ್ವಿಯ ಖುಷಿಯಲ್ಲಿದ್ದು, ಇತ್ತೀಚೆಗೆ ಕಾರ್ಯಕ್ರಯವೊಂದರಲ್ಲಿ ಶಿವಣ್ಣ ಹೇಳಿದ್ದಕ್ಕೆ ಸ್ಯಾಂಡಲ್ ವುಡ್ ನಟಿಯೊಬ್ಬರಿಗೆ ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ ಎಂದು ಮೆಸೇಜ್ ಕಳುಹಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಭಾನುವಾರ ನಟ ಶ್ರೀಮುರಳಿ ಹಾಗೂ ನಿರ್ದೇಶಕ ನರ್ತನ್ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮೊದಲ ಹಂತದಲ್ಲಿ (ಸತ್ಯನಾ.. ಧೈರ್ಯನಾ..) ಎಂಬ ಆಯ್ಕೆ ಇತ್ತು. ಅದರಲ್ಲಿ ಶ್ರೀಮುರಳಿ `ಧೈರ್ಯ’ ವನ್ನ ಆಯ್ಕೆ ಮಾಡಿಕೊಂಡಿದ್ದರು. ನಂತರ ಶಿವಣ್ಣ ನಿಮ್ಮ ಜೊತೆ ಅಭಿನಯಿಸಿದ ನಟಿಯರಲ್ಲಿ ಯಾವ ಹೀರೋಯಿನ್ ಕಣ್ಣು ನಿಮಗೆ ತುಂಬಾ ಇಷ್ಟ.? ಆ ಹೀರೋಯಿನ್ ಫೋನ್ ಗೆ `ಐ ಲವ್ ಯುವರ್ ಐಸ್’ ಎಂದು ಸಂದೇಶ ಕಳುಹಿಸಬೇಕು ಎಂದು ಹೇಳಿದ್ದಾರೆ.

    manya
    ಶಿವಣ್ಣ ಹೇಳಿದಂತೆ ಮುರಳಿ ಅವರು ಧೈರ್ಯವಾಗಿ “ಐ ಲವ್ ಯುವರ್ ಐಸ್” (ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ) ಎಂದು ನಟಿ ಮಾನ್ಯ ಅವರ ಫೋನ್ ನಂಬರ್ ಗೆ ಮೆಸೇಜ್ ಕಳುಹಿಸಿದ್ದು, ಕಾರ್ಯಕ್ರಮದಲ್ಲಿ ಶಿವಣ್ಣ ಕೊಟ್ಟ ಟಾಸ್ಕ್ ನ ಪೂರ್ಣಗೊಳಿಸಿದ್ದಾರೆ.

    ನಟಿ ಮಾನ್ಯ ಅವರು ಕನ್ನಡದಲ್ಲಿ ದರ್ಶನ್, ಶ್ರೀಮುರಳಿ ಮತ್ತು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜೊತೆ ಅಭಿಯಿಸಿದ್ದಾರೆ. 2005 ರಲ್ಲಿ ತೆರೆಕಂಡ ದಿವಂಗತ ಡಾ.ವಿಷ್ಣುವರ್ಧನ್ ನಟನೆಯ `ವರ್ಷ’, ದರ್ಶನ್ ಅಭಿನಯದ `ಶಾಸ್ತ್ರಿ’ ಮತ್ತು ಶ್ರೀಮುರಳಿ ಅಭಿನಯದ `ಶಂಭು’ ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಮಾನ್ಯ ಅವರು ಸ್ಯಾಂಡಲ್ ವುಡ್ ಮಾತ್ರವಲ್ಲದೇ ಮಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಅಭಿನಯಿಸಿದ್ದಾರೆ.

    SRIMURALI SIVANNA

    ಸದ್ಯಕ್ಕೆ ನಟಿ ಮಾನ್ಯ ಮದುವೆಯಾಗಿ ಮಗುವಿನ ತಾಯಿಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಮಾನ್ಯ ಮತ್ತು ಶ್ರೀಮುರಳಿ ಇಬ್ಬರು ಮಾನ್ಯ ಒಳ್ಳೆಯ ಸ್ನೇಹಿತರು. ಅಷ್ಟೇ ಅಲ್ಲದೇ ಶ್ರೀಮುರಳಿ ಅವರ ಪತ್ನಿ ವಿದ್ಯಾ ಹಾಗೂ ಮಾನ್ಯ ಕೂಡ ಸ್ನೇಹಿತರಾಗಿದ್ದಾರೆ. ಇತ್ತೀಚೆಗಷ್ಟೇ ಶ್ರೀಮುರಳಿ ಪತ್ನಿ ವಿದ್ಯಾ ಅವರು ನ್ಯೂಯಾರ್ಕ್ ಗೆ ಹೋಗಿದ್ದಾಗ ಮಾನ್ಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

  • ಚಿಕ್ಕಬಳ್ಳಾಪುರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಭೇಟಿ

    ಚಿಕ್ಕಬಳ್ಳಾಪುರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಭೇಟಿ

    ಚಿಕ್ಕಬಳ್ಳಾಪುರ: ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರುಳಿ ಸೋಮವಾರ ತಮ್ಮ ಹೊಚ್ಚ ಹೊಸ ಮಫ್ತಿ ಸಿನಿಮಾದ ಪ್ರಮೋಷನ್ ಗಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದರು.

    ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಶ್ರೀಮುರುಳಿ ಹಾಗೂ ನಟ ಶಿವರಾಜ್ ಕುಮಾರ್ ಅಭಿನಯದ ಮಫ್ತಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಸೋಮವಾರ ಸಂಜೆ ನಟ ಶ್ರೀಮುರುಳಿ ಚಲನಚಿತ್ರಮಂದಿರಕ್ಕೆ ಭೇಟಿ ಕೊಟ್ಟು ಆಭಿಮಾನಿಗಳ ಜೊತೆ ಮಾತುಕತೆ ನಡೆಸಿದರು.

    MAFTI HERO VISIT 1

    ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಶ್ರೀಮುರುಳಿಗೆ ಅಭಿಮಾನಿಗಳು ಆದರದ ಸ್ವಾಗತ ಕೋರಿ ಹೂಮಾಲೆ ಹಾಕಿ ಬರಮಾಡಿಕೊಂಡರು. ಇದೇ ವೇಳೆ ನಟ ಶ್ರೀಮುರುಳಿ ಅಭಿಮಾನಿಗಳ ಜೊತೆ ಸೆಲ್ಫೀ ತೆಗೆದುಕೊಂಡು ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ಈ ವೇಳೆ ಮಾತನಾಡಿದ ಶ್ರೀ ಮುರುಳಿ, ಮಫ್ತಿ ಚಲನಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಯಶಸ್ಸು ಅಭಿಮಾನಿಗಳಿಗೆ ಸಲ್ಲಬೇಕು ಎಂದು ಹೇಳಿದರು.

    MAFTI HERO VISIT 5

    MAFTI HERO VISIT 4

    MAFTI HERO VISIT 3

    MAFTI HERO VISIT 2

    MAFTI HERO VISIT 6

    MAFTI HERO VISIT 9

    MAFTI HERO VISIT 8

    MAFTI HERO VISIT 7

  • ಭಯಾನಕ ಭೂಗತ ಲೋಕದ ಕಥೆ ಹೇಳುವ `ಮಫ್ತಿ’ ಟ್ರೇಲರ್ ಔಟ್

    ಭಯಾನಕ ಭೂಗತ ಲೋಕದ ಕಥೆ ಹೇಳುವ `ಮಫ್ತಿ’ ಟ್ರೇಲರ್ ಔಟ್

    ಬೆಂಗಳೂರು: ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀ ಮುರುಳಿ ನಟನೆಯ `ಮಫ್ತಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

    ಈ ಚಿತ್ರದಲ್ಲಿ ಇಬ್ಬರು ನಟರು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಭೂಗತ ಲೋಕದ ಕ್ರೌರ್ಯ, ದ್ವೇಷದ ಕಥೆಯನ್ನು ಸಿನಿಮಾ ಒಳಗೊಂಡಿದೆ. ಈ ಚಿತ್ರದಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ರಹಸ್ಯವನ್ನು ಚಿತ್ರತಂಡ ಚಿತ್ರದ ಟ್ರೇಲರ್ ನಲ್ಲಿ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.

    MAFTI 1

    ಚಿತ್ರದಲ್ಲಿ ಸಾಕಷ್ಟು ಪಂಚಿಂಗ್ ಡೈಲಾಗ್ ಗಳಿದ್ದು, ಶಿವಣ್ಣ ಹಾಗೂ ಮುರಳಿ ಭೂಗತ ಲೋಕದ ವೈರಿಗಳ ಅಥವಾ ಸ್ನೇಹಿತರ ಎಂಬುದರ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಚಿತ್ರದಲ್ಲಿ ಖಳನಾಯಕನಾಗಿ ವಸಿಷ್ಟ ಸಿಂಹ ಕೂಡ ಬಣ್ಣ ಹಚ್ಚಿದ್ದಾರೆ.

    ನವ ನಿರ್ದೇಶಕ ನರ್ತನ್ ಪರಿಕಲ್ಪನೆಯಲ್ಲಿ ಟ್ರೇಲರ್ ಅದ್ಧೂರಿಯಾಗಿ ಮೂಡಿಬಂದಿದೆ. ಶಿವಣ್ಣನವರ ಲುಕ್, ರವಿ ಬಸ್ರೂರ್ ರವರ ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ರಥಾವರ ಚಿತ್ರದ ನಂತರ ಶ್ರೀಮುರುಳಿ ನಟಿಸುತ್ತಿರುವ ಚಿತ್ರ ಇದಾಗಿದ್ದು, ಶ್ರೀ ಮುರುಳಿಗೆ ಜೋಡಿಯಾಗಿ ಶಾನ್ವಿ ಶ್ರೀವಾಸ್ತವ ಕಾಣಿಸಿಕೊಳ್ಳಲಿದ್ದಾರೆ. ಮಫ್ತಿ ಚಿತ್ರ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಇದೇ ತಿಂಗಳು ಡಿಸೆಂಬರ್ 01 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

    MAFTI 39

    MAFTI 38

    MAFTI 37

    MAFTI 36

    MAFTI 35

    MAFTI 34

    MAFTI 33

    MAFTI 32

    MAFTI 31

    MAFTI 30

    MAFTI 29

    MAFTI 28

    MAFTI 27

    MAFTI 26

    MAFTI 25

    MAFTI 24

    MAFTI 23

    MAFTI 22

    MAFTI 21

    MAFTI 20

    MAFTI 19

    MAFTI 17

    MAFTI 18

    MAFTI 16

    MAFTI 15

    MAFTI 14

    MAFTI 13

    MAFTI 12

    MAFTI 11

    MAFTI 10

    MAFTI 9

    MAFTI 8

    MAFTI 7

    MAFTI 6

    MAFTI 5

    MAFTI 4

    MAFTI 3

    MAFTI 2