Tag: ಶ್ರೀನಗರ

  • 1990ರ ಕಾಶ್ಮೀರಿ ಪಂಡಿತ್ ನರ್ಸ್ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿ

    1990ರ ಕಾಶ್ಮೀರಿ ಪಂಡಿತ್ ನರ್ಸ್ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿ

    ಶ್ರೀನಗರ: 1990ರಲ್ಲಿ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಭಟ್ ಅವರ ಹತ್ಯೆಯ ತನಿಖೆ ನಡೆಸುತ್ತಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಮಂಗಳವಾರ ಶ್ರೀನಗರದ (Srinagar) ಎಂಟು ಸ್ಥಳಗಳ ಮೇಲೆ ದಾಳಿ ನಡೆಸಿದೆ.

    ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF)ನೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದ ವ್ಯಕ್ತಿಗಳ ನಿವಾಸಗಳನ್ನು ಗುರಿಯಾಗಿಸಿಕೊಂಡು ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್

    ಜೆಕೆಎಲ್‌ಎಫ್‌ನ ಮಾಜಿ ನಾಯಕ ಪೀರ್ ನೂರುಲ್ ಹಕ್ ಶಾ, ಯಾಸಿನ್ ಮಲಿಕ್, ಜಾವೀದ್ ಮೀರ್ ಮನೆ ಮೇಲೆ ರೇಡ್ ಮಾಡಲಾಗಿದೆ. ದಾಳಿ ವೇಳೆ ದಾಖಲೆಗಳು ಮತ್ತು ಡಿಜಿಟಲ್ ಡೇಟಾ ಸೇರಿದಂತೆ ಅಪರಾಧ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಐಎ ತಿಳಿಸಿದೆ. ಇದನ್ನೂ ಓದಿ: ಎಥೆನಾಲ್‌ ಪೆಟ್ರೋಲ್‌ನಿಂದ ಮೈಲೇಜ್‌ ಕುಸಿತವಾಗಲ್ಲ, ವಿಮೆ ರದ್ದಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    35 ವರ್ಷಗಳ ಹಿಂದೆ ಅನಂತನಾಗ್ ಜಿಲ್ಲೆಯ ಸರಳಾ ಭಟ್ (Sarla Bhat), ಶ್ರೀನಗರದ ಸೌರಾದಲ್ಲಿರುವ ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 1990ರ ಏಪ್ರಿಲ್ 18ರ ರಾತ್ರಿ ಭಯೋತ್ಪಾದಕರು ಆಕೆಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಕ್ಷಿ-ಪುರಾವೆಗಾಗಿ 8 ಕಡೆ ರೇಡ್ ಮಾಡಿರುವ ಎಸ್‌ಐಎ, ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಜೊತೆ ನಂಟು ಹೊಂದಿದ್ದ ಹಲವರ ಮನೆಗಳಲ್ಲಿ ಶೋಧ ನಡೆಸಿದೆ.

  • ಅಮರನಾಥ ಯಾತ್ರೆಗೆ ತೆರಳುತ್ತಿದ್ದ 5 ಬಸ್‌ಗಳ ನಡುವೆ ಸರಣಿ ಅಪಘಾತ – 30ಕ್ಕೂ ಹೆಚ್ಚು ಮಂದಿಗೆ ಗಾಯ

    ಅಮರನಾಥ ಯಾತ್ರೆಗೆ ತೆರಳುತ್ತಿದ್ದ 5 ಬಸ್‌ಗಳ ನಡುವೆ ಸರಣಿ ಅಪಘಾತ – 30ಕ್ಕೂ ಹೆಚ್ಚು ಮಂದಿಗೆ ಗಾಯ

    ಶ್ರೀನಗರ: ಅಮರನಾಥ ಯಾತ್ರೆಗಾಗಿ (Amarnath Yatra) ತೆರಳುತ್ತಿದ್ದ ಐದು ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿ, 30ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಕಾಶ್ಮೀರದ (Kashmir) ರಾಂಬನ್‌ನ (Ramban) ಚಂದರ್‌ಕೋಟ್ ಲಂಗರ್ ಪಾಯಿಂಟ್‌ನಲ್ಲಿ ನಡೆದಿದೆ.

    ಅಮರನಾಥ ಯಾತ್ರೆಗಾಗಿ ಭಕ್ತರು ಐದು ಬಸ್‌ಗಳ ಮೂಲಕ ಪಹಲ್ಗಾಮ್‌ಗೆ ತೆರಳುತ್ತಿದ್ದರು. ಈ ವೇಳೆ ಲಂಗರ್ ಪಾಯಿಂಟ್‌ನಲ್ಲಿ ನಾಲ್ಕು ಬಸ್‌ಗಳು ನಿಂತಿದ್ದವು. ಇದೇ ಸಂದರ್ಭದಲ್ಲಿ ಯಾತ್ರೆಯ ಬೆಂಗಾವಲು ಪಡೆಯ ಬಸ್‌ನ ಬ್ರೇಕ್ ಫೇಲ್ ಆಗಿ, ನಿಯಂತ್ರಣ ಕಳೆದುಕೊಂಡು ಇನ್ನುಳಿದ ಬಸ್‌ಗಳಿಗೆ ಡಿಕ್ಕಿ ಹೊಡೆದಿದೆ.ಇದನ್ನೂ ಓದಿ: ಮದುವೆ ದಿಬ್ಬಣಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತ – ವರ ಸೇರಿ 8 ಮಂದಿ ದುರ್ಮರಣ

    ಅಪಘಾತದಲ್ಲಿ ಗಾಯಗೊಂಡವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಡಿಎಚ್ ರಾಂಬನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಯಾರಿಗೂ ದೊಡ್ಡ ಮಟ್ಟದ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

    ರಾಂಬನ್ ಡಿಸಿ ಮೊಹಮ್ಮದ್ ಅಲಿಯಾಸ್ ಖಾನ್, ಡಿಐಜಿ ಡಿಕೆಆರ್ ಶ್ರೀಧರ್ ಪಾಟೀಲ್, ಎಸ್‌ಎಸ್‌ಪಿ ರಾಂಬನ್ ಕುಲ್ಬೀರ್ ಸಿಂಗ್ ಮತ್ತು ಎಡಿಸಿ ವರುಣ್‌ಜೀತ್ ಸಿಂಗ್ ಚರಕ್ ಆಸ್ಪತ್ರೆಗೆ ಧಾವಿಸಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಚಿಕಿತ್ಸೆ ಬಳಿಕ ಅಮರನಾಥ ಯಾತ್ರೆಗೆ ತೆರಳಲು ಅನುಮತಿಸಲಾಯಿತು ಎಂದು ತಿಳಿದು ಬಂದಿದೆ.

    ಶನಿವಾರ ಬೆಳಿಗ್ಗೆ 6,900ಕ್ಕೂ ಹೆಚ್ಚು ಯಾತ್ರಿಕರ ತಂಡವು ಭಗವತಿ ನಗರದ ಮೂಲಕ ಅಮರನಾಥ ದೇವಾಲಯ (Amarnath) ಭೇಟಿಗೆ ತೆರಳಿದರು. ಬುಧವಾರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಯಾತ್ರೆಗೆ ಚಾಲನೆ ನೀಡಿದ ನಂತರ ಈವರೆಗೂ ಒಟ್ಟು 24,528 ಯಾತ್ರಿಕರು ಜಮ್ಮುವಿನ ಮೂಲ ಶಿಬಿರದಿಂದ ಯಾತ್ರೆಗೆ ತೆರಳಿದ್ದಾರೆ.ಇದನ್ನೂ ಓದಿ: ಟಿಬಿ ಡ್ಯಾಂನಿಂದ 64 ಸಾವಿರ ಕ್ಯೂಸೆಕ್ ನೀರು ಬಿಡುಗಡೆ – ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ ಮುಳುಗಡೆ ಭೀತಿ

  • ಇಬ್ಬರು ಕನ್ನಡಿಗರು ಸೇರಿ 26 ಮೃತ ಪ್ರವಾಸಿಗರ ನೆನಪಿಗೆ ಪಹಲ್ಗಾಮ್‌ನಲ್ಲಿ ಸ್ಮಾರಕ – ಒಮರ್ ಅಬ್ದುಲ್ಲಾ

    ಇಬ್ಬರು ಕನ್ನಡಿಗರು ಸೇರಿ 26 ಮೃತ ಪ್ರವಾಸಿಗರ ನೆನಪಿಗೆ ಪಹಲ್ಗಾಮ್‌ನಲ್ಲಿ ಸ್ಮಾರಕ – ಒಮರ್ ಅಬ್ದುಲ್ಲಾ

    – ಉಗ್ರರ ದಾಳಿಯಲ್ಲಿ ಬಲಿಯಾದವರಿಗೆ ಶಾಶ್ವತ ಗೌರವಕ್ಕೆ ಈ ನಿರ್ಧಾರ ಎಂದ ಸಿಎಂ

    ಶ್ರೀನಗರ: ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ ಮೃತರಾದ 26 ಪ್ರವಾಸಿಗರ ನೆನಪಿಗಾಗಿ ಪಹಲ್ಗಾಮ್‌ನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ (Omar Abdullah) ಘೋಷಿಸಿದ್ದಾರೆ.

    ಪಹಲ್ಗಾಮ್‌ನಲ್ಲಿ (Pahalgam) ನಡೆದ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ಏ.22 ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದಲ್ಲಿ 26 ನಾಗರಿಕರು ಬಲಿಯಾಗಿದ್ದರು. ಈ 26 ಜನರಿಗೆ ಶಾಶ್ವತ ಗೌರವ ಸಲ್ಲಿಸುವ ಸ್ಮರಣಾರ್ಥ ಸ್ಮಾರಕವನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಸಂಪುಟ ಸಭೆ ಬಳಿಕ ನಿರ್ಮಾಣದ ಕೆಲಸ ಪ್ರಾರಂಭಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.ಇದನ್ನೂ ಓದಿ: ಪಂಜಾಬ್‌ ಜೊತೆ ಫೈನಲ್‌ ಫೈಟ್‌ – ಆರ್‌ಸಿಬಿಗೆ ಗಾಯದ ಚಿಂತೆ

    ಉಗ್ರರ ದಾಳಿಯಲ್ಲಿ ಪಾಣತೆತ್ತ 26 ಮುಗ್ಧ ಪ್ರವಾಸಿಗರಿಗೆ ಬೈಸರನ್‌ನಲ್ಲಿ ಸ್ಮಾರಕವನ್ನು ಸ್ಥಾಪಿಸಲಾಗುವುದು. ಇದು ಅವರಿಗೆ ನಾವು ಸಲ್ಲಿಸುತ್ತಿರುವ ಶಾಶ್ವತ ಗೌರವ ಎಂದು ಒತ್ತಿಹೇಳಿದರು. ಭವ್ಯವಾಗಿರುವ ಸ್ಮಾರಕವನ್ನು ನಿರ್ಮಿಸುವ ಮೂಲಕ ಕುಸಿದು ಹೋಗಿರುವ ಕಾಶ್ಮೀರದ ಪ್ರವಾಸೋದ್ಯಮವನ್ನು ಪುನಃ ಮೇಲೆತ್ತಲು ಪ್ರಯತ್ನಿಸುತ್ತೇವೆ ಎಂದರು.

    ಸದ್ಯ ಈ ಸ್ಮಾರಕದ ನಿರ್ಮಾಣ ಕೆಲಸಕ್ಕೆ ತಾತ್ವಿಕ ಅನುಮೋದನೆ ನೀಡಲು ಲೋಕೋಪಯೋಗಿ ಇಲಾಖೆಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಭೀಮಾ ನದಿ ತೀರದಲ್ಲಿ ಪ್ರವಾಹದ ಆತಂಕ – ನದಿಗಿಳಿಯದಂತೆ ಜಿಲ್ಲಾಡಳಿತ ಸೂಚನೆ

  • ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

    ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

    ಶ್ರೀನಗರ: ಪಾಕಿಸ್ತಾನದ (Pakistan) ಬಳಿ ಪರಮಾಣು ಶಸ್ತ್ರಾಸ್ತ್ರಗಳು ಇದ್ದರೆ ಸುರಕ್ಷಿತವೇ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಪ್ರಶ್ನಿಸಿದ್ದಾರೆ.

    ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಕದನ ವಿರಾಮ ಘೋಷಣೆಯಾದ 5 ದಿನಗಳ ಬಳಿಕ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಶ್ರೀನಗರಕ್ಕೆ (Srinagar) ಭೇಟಿ ನೀಡಿದರು. ಶ್ರೀನಗರದಲ್ಲಿರುವ 15 ಕಾರ್ಪ್ಸ್ ಪ್ರಧಾನ ಕಚೇರಿಗಳಿಗೆ ಭೇಟಿ ನೀಡಿ, ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಭೇಟಿ ವೇಳೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಜೊತೆಗಿದ್ದರು.ಇದನ್ನೂ ಓದಿ: ಅವರು ನಮ್ಮ ತಲೆಗೆ ಹೊಡೆದ್ರೆ, ನಾವು ಎದೆ ಬಗೆಯುತ್ತೇವೆ: ಪಾಕ್‌ಗೆ ರಾಜನಾಥ್‌ ಸಿಂಗ್‌ ಖಡಕ್‌ ಸಂದೇಶ

    ಪಾಕ್‌ನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ದಾಳಿಯ ಕುರಿತು ಪರಿಶೀಲನೆ ನಡೆಸುತ್ತಿರುವ ವೇಳೆ ಮಾತನಾಡಿದ ಅವರು, ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವ ಸಾಮರ್ಥ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದು, ಈ ಕುರಿತು ಮೇಲ್ವಿಚಾರಣೆ ನಡೆಸಲು ಅಂತರರಾಷ್ಟ್ರೀಯ ಹಸ್ತಕ್ಷೇಪಕ್ಕೆ ಕರೆ ನೀಡಿದರು. ನಮ್ಮ ಸೇನೆ ಹೊಂದಿರುವ ಗುರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. ಇಂದು ಭಾರತ ಭಯೋತ್ಪಾದನೆಯ ವಿರುದ್ಧ ಪ್ರತಿಜ್ಞೆ ಮಾಡಿದ್ದು, ಅದು ಎಷ್ಟು ದೃಢವಾಗಿದೆ ಎಂದರೆ ನಾವು ಪರಮಾಣು ಬೆದರಿಕೆ ಬಗ್ಗೆಯೂ ತಲೆ ಕೆಡಿಕಿಕೊಳ್ಳುವುದಿಲ್ಲ. ಪಾಕಿಸ್ತಾನ ಎಷ್ಟು ಬೇಜವಾಬ್ದಾರಿಯಿಂದ ಬೆದರಿಕೆ ಹಾಕಿದೆ ಎಂಬುವುದನ್ನು ಇಡೀ ಜಗತ್ತು ನೋಡಿದೆ. ಆದರೆ ಇಂದು ಆ ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಇರುವುದು ಸುರಕ್ಷಿತವೇ ಎನ್ನುವ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ ಎಂದರು.

    ಭದ್ರತೆ, ಭಾರತೀಯ ಸಶಸ್ತ್ರ ಪಡೆಗಳ ಯುದ್ಧ ತಯಾರಿ, ಗಡಿಭಾಗದಲ್ಲಿ ಪಾಕ್ ಶೆಲ್ ದಾಳಿ ನಡೆಸಿದ ಪ್ರದೇಶಗಳನ್ನು ಪರಿಶೀಲಿಸಿ, ಭಯೋತ್ಪಾದನೆ ಹಾಗೂ ಭಯೋತ್ಪಾದಕರ ವಿರುದ್ಧ ಹೋರಾಡುವ ನಮ್ಮ ಯೋಧರಿಗೆ ಹಾಗೂ ಪಹಲ್ಗಾಮ್‌ನಲ್ಲಿ ಪ್ರಾಣ ಕಳೆದುಕೊಂಡ ನಾಗರಿಕರಿಗೆ ನಾನು ತಲೆಬಾಗುತ್ತೇನೆ. ಗಾಯಗೊಂಡ ಸೈನಿಕರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪಾರ್ಥಿಸುತ್ತೇನೆ ಎಂದರು.

    ಆಪರೇಷನ್ ಸಿಂಧೂರ ಇದು ಭಯೋತ್ಪಾದನೆಯ ವಿರುದ್ಧ ಭಾರತದ ಅತಿದೊಡ್ಡ ಕಾರ್ಯಾಚರಣೆ. ಭಯೋತ್ಪಾದನೆಯನ್ನು ಕೊನೆಗೊಳಿಸಲು ನಾವು ಯಾವುದೇ ಹಂತಕ್ಕೂ ಹೋಗಲು ಸಿದ್ಧ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಪಾಕ್ ಧ್ವಜ, ಸರಕುಗಳ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ವಾರ್ನಿಂಗ್

  • ಅವರು ನಮ್ಮ ತಲೆಗೆ ಹೊಡೆದ್ರೆ, ನಾವು ಎದೆ ಬಗೆಯುತ್ತೇವೆ: ಪಾಕ್‌ಗೆ ರಾಜನಾಥ್‌ ಸಿಂಗ್‌ ಖಡಕ್‌ ಸಂದೇಶ

    ಅವರು ನಮ್ಮ ತಲೆಗೆ ಹೊಡೆದ್ರೆ, ನಾವು ಎದೆ ಬಗೆಯುತ್ತೇವೆ: ಪಾಕ್‌ಗೆ ರಾಜನಾಥ್‌ ಸಿಂಗ್‌ ಖಡಕ್‌ ಸಂದೇಶ

    ಶ್ರೀನಗರ: ಅವರು ನಮ್ಮ ತಲೆಗೆ ಹೊಡೆದರೆ, ನಾವು ಎದೆ ಬಗೆಯುತ್ತೇವೆ ಎಂದು ಉಗ್ರರ ಓಲೈಸುವ ಪಾಕಿಸ್ತಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಖಡಕ್‌ ಸಂದೇಶ ರವಾನಿಸಿದ್ದಾರೆ.

    ಭಾರತದ ‘ಆಪರೇಷನ್ ಸಿಂಧೂರ’ (Operation Sindoor) ನಂತರ ಕಣಿವೆಗೆ ರಕ್ಷಣಾ ಸಚಿವರು ಮೊದಲ ಭೇಟಿ ನೀಡಿದರು. ಶ್ರೀನಗರದಲ್ಲಿರುವ (Srinagar) ಸೇನೆಯ 15 ಕಾರ್ಪ್ಸ್ ಪ್ರಧಾನ ಕಚೇರಿಗೆ ತೆರಳಿ ಸೇನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಇದನ್ನೂ ಓದಿ: ಭಾರತದ ದಾಳಿ ನಂತ್ರ ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ಮತ್ತೆ ಜಗತ್ತಿನ ಮುಂದೆ ಬೆತ್ತಲಾದ ಪಾಕ್‌

    ಮೊದಲನೆಯದಾಗಿ, ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡುವಾಗ ವೀರ ಯೋಧರ ತ್ಯಾಗಕ್ಕೆ ನಾನು ನಮಸ್ಕರಿಸುತ್ತೇನೆ. ಅವರ ಸ್ಮರಣೆಗೆ ನಾನು ಗೌರವ ಸಲ್ಲಿಸುತ್ತೇನೆ. ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ ಮುಗ್ಧ ನಾಗರಿಕರಿಗೂ ನಾನು ಗೌರವ ಸಲ್ಲಿಸುತ್ತೇನೆ. ಗಾಯಗೊಂಡ ಸೈನಿಕರ ಶೌರ್ಯಕ್ಕೂ ನಾನು ನಮಸ್ಕರಿಸುತ್ತೇನೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    ಇಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ನಿಮ್ಮೊಂದಿಗೆ ಇರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಆಪರೇಷನ್ ಸಿಂಧೂರ ಸಮಯದಲ್ಲಿ ನಿಮ್ಮೆಲ್ಲರ ಹೋರಾಟಕ್ಕೆ ಇಡೀ ರಾಷ್ಟ್ರವೇ ಹೆಮ್ಮೆಪಡುತ್ತದೆ. ನಿಮ್ಮ ರಕ್ಷಣಾ ಸಚಿವರಾಗುವ ಮೊದಲು, ನಾನು ಭಾರತೀಯ ನಾಗರಿಕ. ರಕ್ಷಣಾ ಸಚಿವರಾಗುವುದರ ಜೊತೆಗೆ, ಭಾರತೀಯ ಪ್ರಜೆಯಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ನಾನು ಇಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ನ 14 ಸೈನಿಕರ ಹತ್ಯೆ – ಪೂರ್ತಿ ವೀಡಿಯೋ ರಿಲೀಸ್‌ ಮಾಡಿದ ಬಲೂಚಿಸ್ತಾನ

    ಪಹಲ್ಗಾಮ್ ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರದ ಜನರು ಪಾಕಿಸ್ತಾನ ಮತ್ತು ಭಯೋತ್ಪಾದಕರ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ನಾನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಮಸ್ಕರಿಸುತ್ತೇನೆ. ಶತ್ರುಗಳನ್ನು ನಾಶಪಡಿಸಿದ ಆ ಶಕ್ತಿಯನ್ನು ಅನುಭವಿಸಲು ನಾನು ಇಲ್ಲಿದ್ದೇನೆ. ಗಡಿಯಾಚೆಗಿನ ಪಾಕಿಸ್ತಾನಿ ಚೌಕಿಗಳನ್ನು ಮತ್ತು ಬಂಕರ್‌ಗಳನ್ನು ನೀವು ನಾಶಪಡಿಸಿದ ರೀತಿ, ಶತ್ರುಗಳು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

  • ಶ್ರೀನಗರ, ಜಮ್ಮು ಸೇರಿ 5 ನಗರಗಳಿಗೆ ಇಂಡಿಗೋ, ಏರ್‌ ಇಂಡಿಯಾ ವಿಮಾನ ಹಾರಾಟ ರದ್ದು

    ಶ್ರೀನಗರ, ಜಮ್ಮು ಸೇರಿ 5 ನಗರಗಳಿಗೆ ಇಂಡಿಗೋ, ಏರ್‌ ಇಂಡಿಯಾ ವಿಮಾನ ಹಾರಾಟ ರದ್ದು

    ನವದೆಹಲಿ: ಇಂಡಿಗೋ (IndiGo) ಮತ್ತು ಏರ್ ಇಂಡಿಯಾ (Air India) ಇಂದು ಶ್ರೀನಗರ, ಜಮ್ಮು, ಅಮೃತಸರ, ಚಂಡೀಗಢ ಮತ್ತು ಇತರ ಮೂರು ಗಡಿ ನಗರಗಳಿಗೆ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ.

    ಜಮ್ಮು, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗಳಿಗೆ ದ್ವಿಮುಖ ವಿಮಾನ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಇಂಡಿಗೋ ಜಮ್ಮು, ಅಮೃತಸರ, ಚಂಡೀಗಢ, ಲೇಹ್, ಶ್ರೀನಗರ ಮತ್ತು ರಾಜ್‌ಕೋಟ್‌ಗಳಿಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸಹ ರದ್ದುಗೊಳಿಸಿದೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧ ಮರಳಿ ಗಡಿಯತ್ತ – ಬೀಳ್ಕೊಟ್ಟ ಗುಬ್ಬಿ ನಾಗರಿಕರು

    Air India Flight

    ಇತ್ತೀಚಿನ ಬೆಳವಣಿಗೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಮೇ 13ರ ಮಂಗಳವಾರ ರದ್ದುಗೊಳಿಸಲಾಗಿದೆ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಿಮಗೆ ಮಾಹಿತಿ ನೀಡುತ್ತೇವೆ ಎಂದು ಏರ್ ಇಂಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

    ಭಾರತ ಮತ್ತು ಪಾಕಿಸ್ತಾನ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದ ವಿಮಾನ ನಿಲ್ದಾಣಗಳು ಸೋಮವಾರ ನಾಗರಿಕ ವಿಮಾನಯಾನಕ್ಕಾಗಿ ಮತ್ತೆ ತೆರೆದಿದ್ದವು. ಕಳೆದ ವಾರ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ 32 ವಿಮಾನ ನಿಲ್ದಾಣಗಳಲ್ಲಿ ಮೇ 15ರ ಬಳಿಕ ನಾಗರಿಕ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಳ್ಳಲಿವೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸೋಮವಾರ ಪ್ರಕಟಿಸಿದೆ. ಇದನ್ನೂ ಓದಿ: ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹೊಡೆಯಬಾರದು: DGMO ಸಭೆಯಲ್ಲಿ ಏನಾಯ್ತು?

    ಅಧಂಪುರ, ಅಂಬಾಲಾ, ಅವಂತಿಪುರ, ಬಟಿಂಡಾ, ಬಿಕಾನೇರ್, ಹಲ್ವಾರ, ಹಿಂಡನ್, ಜೈಸಲ್ಮೇರ್, ಕಾಂಡ್ಲಾ, ಕಂಗ್ರಾ (ಗಗ್ಗಲ್), ಕೆಶೋದ್, ಕಿಶನ್‌ಗಢ್, ಕುಲು ಮನಾಲಿ (ಭುಂಟರ್), ಮುಂದ್ರಾ, ಮುಂದ್ರಾ, ಪಠಾಣ್, ಪಠಾಣ್, ಸಾರ್ವಭೌಮ, ಪಠಾಣ್, ಸಿವಿಲಿಯನ್ ಫ್ಲೈಟ್ ಕಾರ್ಯಾಚರಣೆಯನ್ನು ಪುನರಾರಂಭಿಸಲು ವಿಮಾನ ನಿಲ್ದಾಣಗಳಿಗೆ ಅನುಮತಿಸಲಾಗಿದೆ.

  • ಭಾರತ-ಪಾಕ್ ಸಂಘರ್ಷ: ಶ್ರೀನಗರದಲ್ಲಿ ಸಿಲುಕಿಕೊಂಡಿರುವ 15ಕ್ಕೂ ಹೆಚ್ಚು ಕನ್ನಡಿಗ ವಿದ್ಯಾರ್ಥಿಗಳ ಪರದಾಟ

    ಭಾರತ-ಪಾಕ್ ಸಂಘರ್ಷ: ಶ್ರೀನಗರದಲ್ಲಿ ಸಿಲುಕಿಕೊಂಡಿರುವ 15ಕ್ಕೂ ಹೆಚ್ಚು ಕನ್ನಡಿಗ ವಿದ್ಯಾರ್ಥಿಗಳ ಪರದಾಟ

    ಶ್ರೀನಗರ: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಶ್ರೀನಗರದಲ್ಲಿರುವ (Srinagar) 15ಕ್ಕೂ ಹೆಚ್ಚು ಕನ್ನಡಿಗ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

    ಏ.22 ರಂದು ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಯಿಂದಾಗಿ ಭಾರತ-ಪಾಕ್ ನಡುವಿನ ಕಾದಾಟ ಜೋರಾಗಿದ್ದು, ಇದರ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 6ರ ತಡರಾತ್ರಿ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು.ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

    ಅದಾದ ಬಳಿಕ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಕಳೆದ ಮೂರು ದಿನಗಳಿಂದಲೂ ಡ್ರೋನ್, ಮಿಸೈಲ್ ಸೇರಿ ಶೆಲ್ ದಾಳಿ ನಡೆಸುತ್ತಿದೆ. ಇದರಿಂದ ಕನ್ನಡಿಗ ವಿದ್ಯಾರ್ಥಿಗಳು ಶ್ರೀನಗರದಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ.

    15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಸದ್ಯ ಜಮ್ಮು ಕಾಶ್ಮೀರ ಸರ್ಕಾರ (Jammu Kashmir Govt) ಡ್ರೋನ್ ದಾಳಿ ಭೀತಿ ಹಿನ್ನೆಲೆ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ.ಇದನ್ನೂ ಓದಿ: ಕದನ ವಿರಾಮ ಮೊದಲು ಘೋಷಿಸಿದ್ದು ಅಮೆರಿಕ ಅಧ್ಯಕ್ಷ – ಮೋದಿಗೆ ಪತ್ರ ಬರೆದ ರಾಹುಲ್‌ ಗಾಂಧಿ

  • ಪಾಕ್‌ನಿಂದ ಶೆಲ್ ದಾಳಿ – ಸ್ಥಳಾಂತರಗೊಂಡ ಜನರೊಂದಿಗೆ ಕ್ರಿಕೆಟ್ ಆಡಿದ ಜಮ್ಮು ಸಿಎಂ

    ಪಾಕ್‌ನಿಂದ ಶೆಲ್ ದಾಳಿ – ಸ್ಥಳಾಂತರಗೊಂಡ ಜನರೊಂದಿಗೆ ಕ್ರಿಕೆಟ್ ಆಡಿದ ಜಮ್ಮು ಸಿಎಂ

    ಶ್ರೀನಗರ: ಎಲ್‌ಒಸಿಯಲ್ಲಿ ಪಾಕಿಸ್ತಾನ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಯಿಂದ ಹಾನಿಗೊಳಗಾದ ನಿವಾಸಿಗಳಿಗೆ ಆಶ್ರಯ ನೀಡಲು ಸ್ಥಾಪಿಸಲಾದ ನಿರಾಶ್ರಿತರ ಕೇಂದ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ(Jammu and Kashmir) ಸಿಎಂ ಒಮರ್ ಅಬ್ದುಲ್ಲಾ(Omar Abdullah) ಕ್ರಿಕೆಟ್ ಆಡಿದರು.

    ಸಾಂಬಾದಲ್ಲಿನ(Samba)  ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸ್ಥಳೀಯರನ್ನು ಭೇಟಿಯಾದ ಸಂದರ್ಭದಲ್ಲಿ ಒಮರ್ ಅಬ್ದುಲ್ಲಾ ಅವರು ಪುಟ್ಟ ಬಾಲಕನೊಂದಿಗೆ ಕ್ರಿಕೆಟ್ ಆಡಿದ್ದು, ಅವರು ಬ್ಯಾಟ್ ಬೀಸಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹರಿದಾಡುತ್ತಿವೆ. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಭೀತಿ – ಕುತುಬ್ ಮಿನಾರ್ ಸೇರಿ ದೆಹಲಿಯ ಹಲವು ಐತಿಹಾಸಿಕ ತಾಣಗಳಿಗೆ ಬಿಗಿಭದ್ರತೆ

    ಗುರುವಾರ, ಜಮ್ಮು ಮತ್ತು ಪೂಂಚ್ ಜಿಲ್ಲೆಗಳಲ್ಲಿ ಪಾಕ್ ನಡೆಸಿದ ಡ್ರೋನ್, ಕ್ಷಿಪಣಿ ಹಾಗೂ ಶೆಲ್ ದಾಳಿಯನ್ನು ಒಮರ್ ಅಬ್ದುಲ್ಲಾ ಅವರು ತೀವ್ರವಾಗಿ ಖಂಡಿಸಿದರು. ಈ ಕುರಿತು ಮಾಧ್ಯಮಳೊಂದಿಗೆ ಮಾತನಾಡಿದ ಅವರು, ನಾವು ಈ ಪರಿಸ್ಥಿತಿಯನ್ನು ಸೃಷ್ಟಿಸಲಿಲ್ಲ. ಪಹಲ್ಗಾಮ್‌ನಲ್ಲಿ(Pahalgam Attack) ಪಾಕ್ ಉಗ್ರರು ನಮ್ಮ ಜನರ ಮೇಲೆ ದಾಳಿ ನಡೆಸಿ ಅಮಾಯಕರನ್ನ ಕೊಂದರು. ಅವರ ಈ ದಾಳಿಗೆ ನಾವು ಪ್ರತಿಕ್ರಿಯಿಸಬೇಕಾಯಿತು ಎಂದರು. ಇದನ್ನೂ ಓದಿ: ಭಾರತ-ಪಾಕ್ ನಡುವೆ ಉದ್ವಿಗ್ನ ಹೊತ್ತಲ್ಲೇ ದಿಟ್ಟ ನಿರ್ಧಾರ ಕೈಗೊಂಡ ಕಮಲ್ ಹಾಸನ್

    ಗುರುವಾರ ರಾತ್ರಿ ಪಾಕಿಸ್ತಾನದ ಸಶಸ್ತ್ರ ಪಡೆಗಳು ಡ್ರೋನ್ ಹಾಗೂ ಕ್ಷಿಪಣಿ ದಾಳಿಗೆ ಮುಂದಾಗಿತ್ತು. ಈ ವೇಳೆ ನಮ್ಮ ಸೇನೆಯು ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮತ್ತು ಗುಜರಾತ್‌ನ ಪಟ್ಟಣಗಳಲ್ಲಿ ಸೈರನ್ ಮೊಳಗಿಸಿ ಜನರಿಗೆ ಮುನ್ನೆಚ್ಚರಿಕೆ ನೀಡಿತು. ಅಲ್ಲದೇ ಪಾಕ್‌ನ ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಯಿತು ಎಂದು ಹೇಳಿದರು.

     

  • ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಶ್ರೀನಗರ (ರಾಂಬನ್): ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಎರಡು ಪ್ರಮುಖ ಜಲವಿದ್ಯುತ್ ಯೋಜನೆಗಳಾದ ಸಲಾಲ್ ಮತ್ತು ಬಾಗ್ಲಿಹಾರ್ ಡ್ಯಾಂಗಳಲ್ಲಿ (Salal And Baglihar Dam) ಜಲಾಶಯ ಸಾಮರ್ಥ್ಯವನ್ನು ಹೆಚ್ಚಿಸುವ ಕಾಮಗಾರಿಯನ್ನು ಭಾರತ ಆರಂಭಿಸಿದೆ. ಈ ಕಾಮಗಾರಿಯಿಂದ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

    Salal Dam

    ಸಲಾಲ್ (690 ಮೆಗಾವ್ಯಾಟ್) ಮತ್ತು ಬಾಗ್ಲಿಹಾರ್ (900 ಮೆಗಾವ್ಯಾಟ್) ಜಲವಿದ್ಯುತ್ ಯೋಜನೆಗಳಲ್ಲಿ ಜಲಾಶಯದಲ್ಲಿ ಶೇಖರವಾದ ಹೂಳು ತೆಗೆದುಹಾಕಲು ʻಫ್ಲಶಿಂಗ್ʼ ಪ್ರಕ್ರಿಯೆಯನ್ನು ಮೇ 1 ರಿಂದ 3 ದಿನಗಳ ಕಾಲ ನಡೆಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!

    ಈ ಕಾಮಗಾರಿಯನ್ನು ಭಾರತದ (India) ಅತಿದೊಡ್ಡ ಜಲವಿದ್ಯುತ್ ಕಂಪನಿಯಾದ ರಾಷ್ಟ್ರೀಯ ಜಲವಿದ್ಯುತ್ ನಿಗಮ (NHPC) ಹಾಗೂ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಜಂಟಿಯಾಗಿ ನಿರ್ವಹಿಸಿದ್ದಾರೆ. ಈ ಪ್ರಕ್ರಿಯೆಯಿಂದ ಜಲಾಶಯದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಟರ್ಬೈನ್‌ಗಳಿಗೆ ಹಾನಿಯಾಗದಂತೆ ರಕ್ಷಿಸಿ, ವಿದ್ಯುತ್ ಉತ್ಪಾದನೆಯ ದಕ್ಷತೆಯನ್ನು ಸುಧಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಿದೇಶಿ ಕಂಪನಿಗಳಿಂದಲೂ ಶಾಕ್‌ – ಭಾರತಕ್ಕೆ ಬಿಸಿ ಮುಟ್ಟಿಸಲು ಹೋಗಿ ಕೈ ಸುಟ್ಟುಕೊಂಡ ಪಾಕ್‌!

    india vs pakistan

    ಸಿಂಧೂ ನದಿ ಜಲ ಒಪ್ಪಂದದ ಪ್ರಕಾರ, ಭಾರತವು ಚಿನಾಬ್, ಝೇಲಂ ಮತ್ತು ಸಿಂಧೂ ನದಿಗಳಲ್ಲಿ ಜಲಾಶಯಗಳನ್ನು ಸಂಗ್ರಹಿಸುವ ಡ್ಯಾಂಗಳನ್ನು ನಿರ್ಮಿಸದೆ ಕೇವಲ ʻರನ್-ಆಫ್-ದಿ-ರಿವರ್ʼ ಜಲವಿದ್ಯುತ್ ಯೋಜನೆಗಳನ್ನು (Hydroelectric Projects) ನಿರ್ಮಿಸಬಹುದಾಗಿತ್ತು. ಆದರೆ, ಈ ಒಪ್ಪಂದವನ್ನು ಏಪ್ರಿಲ್ 2025ರಲ್ಲಿ ಭಾರತವು ಸ್ಥಗಿತಗೊಳಿಸಿದ ಬಳಿಕ, ಈ ಯೋಜನೆಗಳಲ್ಲಿ ಫ್ಲಶಿಂಗ್ ಕಾಮಗಾರಿಯನ್ನು ಆರಂಭಿಸಿದೆ. ಇದನ್ನೂ ಓದಿ: ಮೋದಿಯ ಪ್ರತೀಕಾರದ ಶಪಥಕ್ಕೆ ಬೆವರಿದ ಪಾಕ್ – ಭಾರತಕ್ಕೆ ಪರಮಾಣು ದಾಳಿಯ ಗೊಡ್ಡು ಬೆದರಿಕೆ

    ಪಾಕಿಸ್ತಾನದ ಕೃಷಿ ಮತ್ತು ಜಲವಿದ್ಯುತ್ ಉತ್ಪಾದನೆಗೆ ಭಾರತದ ಮೂಲಕ ಹರಿಯುವ ನದಿಗಳು ಅತಿ ಮುಖ್ಯವಾಗಿವೆ. ಒಪ್ಪಂದದ ಸ್ಥಗಿತಗೊಳಿಕೆಯಿಂದಾಗಿ ಪಾಕಿಸ್ತಾನದ 80% ಕೃಷಿ ಭೂಮಿಗೆ ನೀರಿನ ಪೂರೈಕೆ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಪಾಕಿಸ್ತಾನವು ಈ ಕ್ರಮವನ್ನು ಯುದ್ಧದ ಕೃತ್ಯ ಎಂದು ಕರೆದಿದ್ದು, ಅಂತಾರಾಷ್ಟ್ರೀಯ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದೆ.

    ಫ್ಲಶಿಂಗ್ ಪ್ರಕ್ರಿಯೆಯು ಜಲಾಶಯವನ್ನು ಬಹುತೇಕ ಖಾಲಿ ಮಾಡಿ, ಹೂಳು ತೆಗೆದುಹಾಕುವ ಕಾರ್ಯವಾಗಿದೆ. ಈ ಕೆಸರಿನ ಶೇಖರಣೆಯಿಂದಾಗಿ ಸಲಾಲ್ ಮತ್ತು ಬಾಗ್ಲಿಹಾರ್ ಯೋಜನೆಗಳ ವಿದ್ಯುತ್ ಉತ್ಪಾದನೆ ಸಾಮರ್ಥ್ಯವು ಗಣನೀಯವಾಗಿ ಕಡಿಮೆಯಾಗಿತ್ತು. ಈ ಪ್ರಕ್ರಿಯೆಯಿಂದ ವಿದ್ಯುತ್ ಉತ್ಪಾದನೆಯ ದಕ್ಷತೆ ಹೆಚ್ಚಾಗುತ್ತದೆ ಮತ್ತು ಟರ್ಬೈನ್‌ಗಳಿಗೆ ಹಾನಿಯಾಗದಂತೆ ರಕ್ಷಿಸಲಾಗುತ್ತದೆ ಎಂದು ಒಬ್ಬ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ಉಗ್ರರ ದಾಳಿ ಖಂಡಿಸಿ, ತನಿಖೆಗೆ ಸಹಕರಿಸಿ: ಪಾಕ್‌ಗೆ ಬುದ್ದಿಮಾತು ಹೇಳಿದ ಅಮೆರಿಕ

  • ಪಹಲ್ಗಾಮ್‌ ದಾಳಿಗೂ ಮೊದಲೇ ಉಗ್ರರ ದಾಳಿ ಬಗ್ಗೆ ಎಚ್ಚರಿಸಿದ್ದ ಗುಪ್ತಚರ ಇಲಾಖೆ

    ಪಹಲ್ಗಾಮ್‌ ದಾಳಿಗೂ ಮೊದಲೇ ಉಗ್ರರ ದಾಳಿ ಬಗ್ಗೆ ಎಚ್ಚರಿಸಿದ್ದ ಗುಪ್ತಚರ ಇಲಾಖೆ

    ನವದೆಹಲಿ: ಪಹಲ್ಗಾಮ್‌ನಲ್ಲಿ ನರಮೇಧ (Pahalgam Attack) ಮಾಡುವ ಮೊದಲೇ ಉಗ್ರರು ಕಣವೆ ರಾಜ್ಯದಲ್ಲಿ ದಾಳಿ ನಡೆಸಬಹುದು ಎಂದು ಗುಪ್ತಚರ ಇಲಾಖೆ (Intelligence Report) ಎಚ್ಚರಿಕೆ ನೀಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು.ಶ್ರೀನಗರ (Srinagara) ಮತ್ತು ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ (Hotel) ತಂಗಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭದ್ರತಾ ಪಡೆ ಮತ್ತು ಸರ್ಕಾರಕ್ಕೆ ಗುಪ್ತಚರ ಮಾಹಿತಿ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ಕಾತ್ರಾದಿಂದ ಶ್ರೀನಗರವನ್ನು ಸಂಪರ್ಕಿಸುವ ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏ.19 ರಂದು ಚಾಲನೆ ನೀಡಬೇಕಿತ್ತು. ಈ ದಿನವೇ ಉಗ್ರರು ಕೃತ್ಯ ಎಸಗಿಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಕೆಟ್ಟ ಹವಾಮಾನದಿಂದಾಗಿ ನಿಗದಿಯಾಗಿದ್ದ ಈ ಕಾರ್ಯಕ್ರಮ ರದ್ದಾಗಿತ್ತು.  ಇದನ್ನೂ ಓದಿ: ಭಾರತ-ಪಾಕ್‌ ಉದ್ವಿಗ್ನತೆ ನಡುವೆ ಪಾಕ್‌ ರೇಂಜರ್‌ನನ್ನ ಬಂಧಿಸಿದ ಬಿಎಸ್‌ಎಫ್‌

     

    ದಾಳಿಯ ಬೆದರಿಕೆಯನ್ನು ಪರಿಗಣಿಸಿ ಶ್ರೀನಗರದ ದಾಲ್ ಸರೋವರ ಮತ್ತು ಮೊಘಲ್ ಉದ್ಯಾನವನದ ಮೇಲಿರುವ ಜಬರ್ವಾನ್ ಶ್ರೇಣಿಯ ತಪ್ಪಲಿನಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.

    ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಪೊಲೀಸ್ ಅಧಿಕಾರಿಗಳು ದಾಳಿಗೆ ಕೆಲವು ದಿನಗಳ ಮೊದಲು ಕಣಿವೆಯಲ್ಲಿ ಬೀಡುಬಿಟ್ಟಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ಅಧಿಕಾರಿಯೊಬ್ಬರು ಹೇಳಿದರು.

    ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳಿಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಅನ್ವಯ ಪಹಲ್ಗಾಮ್ ದಾಳಿಗೆ 10-15 ದಿನಗಳ ಮೊದಲು ಶ್ರೀನಗರದ ಹೊರವಲಯದಲ್ಲಿರುವ ಡಚಿಗಾಮ್, ನಿಶಾತ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಯಾವುದೇ ಫಲಿತಾಂಶ ಸಿಗದ ಕಾರಣ ಏ. 22ರಂದು ಶೋಧ ಕಾರ್ಯಾಚರಣೆ ನಿಲ್ಲಿಸಲಾಯಿತು. ಅದೇ ದಿನ ಉಗ್ರರು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು.