Tag: ಶೋಭಾ ಶೆಟ್ಟಿ

  • ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿ ಶೋಭಾ ಶೆಟ್ಟಿ

    ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿ ಶೋಭಾ ಶೆಟ್ಟಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಖ್ಯಾತಿಯ ಶೋಭಾ ಶೆಟ್ಟಿ (Shobha Shetty) ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ಭಾವಿ ಪತಿಗೆ ರಿಂಗ್ ತೊಡಿಸಿದ ಫೋಟೋ ಶೇರ್ ಮಾಡಿ ಪ್ರೀತಿಯಿಂದ ವಿಶ್‌ ಮಾಡಿದ್ದಾರೆ. ಇದನ್ನೂ ಓದಿ:ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ – ಒಂದು ವರ್ಷ ಜೈಲೇ ಗತಿ

    shobha shetty

    ಇದೇ ದಿನಾಂಕ ಕಳೆದ ವರ್ಷ ಅವರು ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್ ಆಗಿದ್ದರು. ಇಂದಿಗೆ ನಿಶ್ಚಿತಾರ್ಥವಾಗಿ ಒಂದು ವರ್ಷ ಕಳೆದಿದೆ. ಈ ಖುಷಿಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿ, ಹೇ ಪಾಪು ಮಾ, ನಮ್ಮ ಮೊದಲ ವರ್ಷದ ನಿಶ್ಚಿತಾರ್ಥದ ವಾರ್ಷಿಕೋತ್ಸವ. ನಾವು ಭೇಟಿಯಾಗಿ ಸುಮಾರು 5 ವರ್ಷಗಳಾಗಿವೆ. ಅಂತ್ಯವಿಲ್ಲದ ಪ್ರೀತಿ. ಮೊದಲ ವರ್ಷದ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಶುಭಾಶಯಗಳು ಮೈ ಲವ್ ಎಂದು ಶೋಭಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಡಾ.ರಾಜ್ ಕುಮಾರ್ ಕನ್ನಡದ ಸಂಸ್ಕೃತಿಯ ಪ್ರತೀಕ – ಶಾಸಕ ರಿಜ್ವಾನ್ ಅರ್ಷದ್

    shobha shetty yashwanth

    ಮುದ್ದಾದ ಜೋಡಿ ಯಶವಂತ್ ರೆಡ್ಡಿ ಜೊತೆಗಿನ ಶೋಭಾ ಫೋಟೋ ನೋಡಿ ಫ್ಯಾನ್ಸ್ ಕೂಡ ಶುಭಕೋರಿದ್ದಾರೆ. ನೂರು ಕಾಲ ಜೊತೆಯಾಗಿ ಬಾಳಿ, ಮದುವೆ ಯಾವಾಗ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

    ಕಾರ್ತಿಕ ದೀಪಂ, ಹಲವು ಶಾರ್ಟ್ ಫಿಲ್ಮ್ಂಗಳಲ್ಲಿ ಶೋಭಾ ಮತ್ತು ಯಶವಂತ್ ರೆಡ್ಡಿ ಜೊತೆಯಾಗಿ ನಟಿಸಿದ್ದಾರೆ. ಈ ಸ್ನೇಹವೇ ಪ್ರೀತಿಗೆ ತಿರುಗಿದೆ. ಇಬ್ಬರ ಪ್ರೀತಿಗೆ ಕುಟುಂಬಸ್ಥರ ಸಮ್ಮತಿಯೂ ಇದೆ. ಸದ್ಯದಲ್ಲೇ ಈ ಜೋಡಿ ಕಡೆಯಿಂದ ಮದುವೆ ಡೇಟ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

  • BBK 11: ಆಸ್ಪತ್ರೆಯ ಬೆಡ್‌ನಿಂದಲೇ ಫ್ಯಾನ್ಸ್‌ಗೆ ಶೋಭಾ ಶೆಟ್ಟಿ ಸಂದೇಶ

    BBK 11: ಆಸ್ಪತ್ರೆಯ ಬೆಡ್‌ನಿಂದಲೇ ಫ್ಯಾನ್ಸ್‌ಗೆ ಶೋಭಾ ಶೆಟ್ಟಿ ಸಂದೇಶ

    ‘ಬಿಗ್ ಬಾಸ್ ಕನ್ನಡ 11’ಕ್ಕೆ (Bigg Boss Kannada 11) ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ (Shobha Shetty) ಅನಾರೋಗ್ಯದ ಹಿನ್ನೆಲೆ ಅವರ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ದೊಡ್ಮನೆಯಿಂದ ಎಲಿಮಿನೇಟ್ ಆಗ್ತಿದ್ದಂತೆ ನಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಬೆಡ್ ಮೇಲಿಂದಲೇ ಫ್ಯಾನ್ಸ್‌ಗೆ ನಟಿ ಸಂದೇಶ ಕೊಟ್ಟಿದ್ದಾರೆ.

    shobha shetty

    ಕಳೆದ ವಾರ ‘ಬಿಗ್ ಬಾಸ್’ನಿಂದ ಎಲಿಮಿನೇಷನ್ ಆದ ಬಳಿಕ ಆಸ್ಪತ್ರೆಗೆ ನಟಿ ದಾಖಲಾಗಿದ್ದಾರೆ. ಉತ್ತಮಗೊಳ್ಳುತ್ತಿದ್ದೇನೆ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದು ಶೋಭಾ ಶೆಟ್ಟಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದಾರೆ. ಆಸ್ಪತ್ರೆಯ ಬೆಡ್‌ನಿಂದಲೇ ಅಭಿಮಾನಿಗಳ ಪ್ರೀತಿಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಮೋಹಕ ತಾರೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್-‌ ಉಪೇಂದ್ರ ಜೊತೆ ‘ರಕ್ತ ಕಾಶ್ಮೀರ’ದ ಕಥೆ ಹೇಳಲು ಸಜ್ಜಾದ ರಮ್ಯಾ

    shobha shetty 1

    ಫೈರ್ ಲೇಡಿ ಆಗಿ ಗುರುತಿಸಿಕೊಂಡಿದ್ದ ಶೋಭಾ ಶೆಟ್ಟಿಗೆ ಆರೋಗ್ಯ ಕೈಕೊಟ್ಟಿದ್ದಕ್ಕೆ ವೀಕೆಂಡ್ ಶೋನಲ್ಲಿ ಸುದೀಪ್‌ಗೆ (Sudeep) ಬಿಗ್ ಬಾಸ್ ಆಟ ಕ್ವೀಟ್ ಮಾಡೋದಾಗಿ ಹೇಳಿದರು. ಇದರಿಂದ ಶಿಶಿರ್ ಮತ್ತು ಐಶ್ವರ್ಯಾಗೆ ದೊಡ್ಮನೆ ಆಟ ಆಡಲು ಮತ್ತೊಂದು ಚಾನ್ಸ್ ಸಿಕ್ಕಿತ್ತು. ಫ್ಯಾನ್ಸ್ ವೋಟ್ ಮಾಡಿ ಉಳಿಸಿದರು ಕೂಡ ಆರೋಗ್ಯ ಸಾಥ್ ನೀಡುತ್ತಿಲ್ಲ. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದರು.

    shobha shetty 1 3

    ತೆಲುಗಿನ ಬಿಗ್‌ಬಾಸ್ ಸೀಸನ್ 7ರಲ್ಲಿ ಸಖತ್ ಸೌಂಡು ಮಾಡಿದ್ದ ಶೋಭಾ ಶೆಟ್ಟಿ ಕೊನೆಯವರೆಗೂ ಪ್ರೀತಿ ಗಳಿಸಿ ಉಳಿದುಕೊಂಡಿದ್ದರು. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ತೆಲುಗಿನ ವೀಕ್ಷಕರ ಅಭಿರುಚಿ ಮತ್ತು ಕನ್ನಡ ವೀಕ್ಷಕರ ಅಭಿರುಚಿ ವಿಭಿನ್ನವಾಗಿದೆ ಎಂದು ಶೋಭಾ ಅವರ ಮನಸ್ಸಿಗೆ ಅನಿಸಿತೋ ಗೊತ್ತಿಲ್ಲ. ಅನಾರೋಗ್ಯದ ಹಿನ್ನೆಲೆ ಅವರು ಬಿಗ್ ಬಾಸ್ ಆಟಕ್ಕೆ ಗುಡ್ ಬೈ ಹೇಳಿದರು.

  • BBK 11: ದೊಡ್ಮನೆಯಿಂದ ಹೊರಬಂದು ಸುದೀಪ್‌ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ

    BBK 11: ದೊಡ್ಮನೆಯಿಂದ ಹೊರಬಂದು ಸುದೀಪ್‌ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ

    ನ್ನಡದ ನಟಿ ಶೋಭಾ ಶೆಟ್ಟಿ (Shobha Shetty) ಅವರು ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ತಮ್ಮ ಸ್ವತಃ ನಿರ್ಧಾರದಿಂದ ದೊಡ್ಮನೆಯಿಂದ ನಟಿ ಹೊರಬಂದಿದ್ದಾರೆ. ಬಿಗ್ ಬಾಸ್‌ನಿಂದ ಹೊರಬಂದು ಸುದೀಪ್‌ಗೆ (Sudeep) ನಟಿ ಸುದೀರ್ಘವಾಗಿ ಪತ್ರ ಬರೆದಿದ್ದಾರೆ. ಇದೀಗ ನಟಿಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    shobha shetty 1

    ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ. ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಇದನ್ನೂ ಓದಿ:ನಟ ದರ್ಶನ್‌ಗೆ ಜಾಮೀನು ಜೊತೆ ಆಪರೇಷನ್ ಟೆನ್ಷನ್

    shobha shetty 1 3

    ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ, ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ಪ್ರೀತಿಯ, ಶೋಭಾ ಶೆಟ್ಟಿ ಎಂದು ಸುದೀರ್ಘ ಪತ್ರ ಬರೆದಿದ್ದಾರೆ. ಇನ್ನೂ ಬಹುತೇಕ ಅಭಿಮಾನಿಗಳಿಗೆ ನಟಿ ನಿರ್ಧಾರ ನೋವುಂಟು ಮಾಡಿದೆ. ಬಿಗ್ ಬಾಸ್ ಬಿಟ್ಟು ಬರಬಾರದಿತ್ತು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

    ತೆಲುಗಿನ ಬಿಗ್‌ಬಾಸ್ ಸೀಸನ್ 7ರಲ್ಲಿ (Bigg Boss Telugu 7)  ಸಖತ್ ಸೌಂಡು ಮಾಡಿದ್ದ ಶೋಭಾ ಶೆಟ್ಟಿ ಕೊನೆಯವರೆಗೂ ಪ್ರೀತಿ ಗಳಿಸಿ ಉಳಿದುಕೊಂಡಿದ್ದರು. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ತೆಲುಗಿನ ವೀಕ್ಷಕರ ಅಭಿರುಚಿ ಮತ್ತು ಕನ್ನಡ ವೀಕ್ಷಕರ ಅಭಿರುಚಿ ವಿಭಿನ್ನವಾಗಿದೆ ಎಂದು ಶೋಭಾ ಅವರ ಮನಸ್ಸಿಗೆ ಅನಿಸಿತೋ ಗೊತ್ತಿಲ್ಲ. ಆದರೆ ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

  • BBK 11: ಉಲ್ಟಾ ಹೊಡೆದ ಶೋಭಾ ಶೆಟ್ಟಿ- ‘ಬಿಗ್ ಬಾಸ್’ ನಾನು ಹೊರಗೆ ಹೋಗಲ್ಲ ಎಂದ ನಟಿ

    BBK 11: ಉಲ್ಟಾ ಹೊಡೆದ ಶೋಭಾ ಶೆಟ್ಟಿ- ‘ಬಿಗ್ ಬಾಸ್’ ನಾನು ಹೊರಗೆ ಹೋಗಲ್ಲ ಎಂದ ನಟಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 62 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹೀಗಿರುವಾಗ ಭಾನುವಾರದ ಪಂಚಾಯಿತಿಯಲ್ಲಿ ಜನ ವೋಟ್ ಮಾಡಿ ಶೋಭಾರನ್ನು (Shobha Shetty) ಸೇವ್ ಮಾಡಿದ್ದರೂ ಕೂಡ ತಾವು ದೊಡ್ಮನೆ ಆಟ ಕ್ವೀಟ್ ಮಾಡೋದಾಗಿ ಹೇಳಿದ್ದರು. ಶೋಭಾ ಮನವಿಗೆ ಸುದೀಪ್ (Sudeep) ಸಮ್ಮತಿ ನೀಡಿದರು. ಇದೀಗ ಮತ್ತೆ ನಟಿ ಉಲ್ಟಾ ಹೊಡೆದಿದ್ದಾರೆ. ‘ಬಿಗ್ ಬಾಸ್’ ನಾನು ಹೊರಗೆ ಹೋಗಲ್ಲ ಎಂದು ಹೈಡ್ರಾಮಾ ಮಾಡಿದ್ದಾರೆ.

    shobha shetty

    ಮನೆಯಿಂದ ಹೊರ ಹೋಗಲು ನಿರ್ಧಾರ ಮಾಡಿದ ಶೋಭಾ ಶೆಟ್ಟಿಗೆ ಕಿಚ್ಚ ಸುದೀಪ್, ಬುದ್ಧಿ ಹೇಳಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ನಿರ್ಧಾರದಿಂದ ಹಿಂದೆ ಸರಿಯದ ಕಾರಣ, ಶೋಭಾ ಶೆಟ್ಟಿಗೆ ಬಿಗ್ ಬಾಸ್ ಮನೆಯ ಮುಖ್ಯದ್ವಾರ ಓಪನ್ ಆಗಿದೆ. ಆದರೆ ಕಿಚ್ಚ ಸುದೀಪ್ ಎಪಿಸೋಡ್ ಮುಗಿದ ಮೇಲೆ ಮನೆಯಲ್ಲಿ ಏನೆಲ್ಲ ಆಯ್ತು ಅನ್ನೋ ಕುತೂಹಲ ಹೆಚ್ಚಾಗಿದೆ. ಇದೀಗ ವಾಹಿನಿ ಹೊಸ ಪ್ರೋಮೋವೊಂದು ಶೇರ್ ಮಾಡಿದೆ. ಇದನ್ನೂ ಓದಿ:ಉಪೇಂದ್ರ ನಟನೆಯ ‘ಯುಐ’ ವಾರ್ನರ್‌ ರಿಲೀಸ್

    shobha shetty 1 3

    ಅದರಲ್ಲಿ ಶೋಭಾ ಶೆಟ್ಟಿ ಮತ್ತೆ ಮನೆಯಲ್ಲಿ ಇರುವ ಬಗ್ಗೆ ಮಾತನಾಡಿದ್ದಾರೆ. ಒಂದು ವಾರ ಇದ್ದು ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಲಿಲ್ಲ ಅಂದರೆ ಕ್ಷಮಿಸಿಕೊಳ್ಳಲ್ಲ ಎಂದು ಕಣ್ಣೀರು ಇಟ್ಟಿದ್ದಾರೆ. ಆಗ ಬಿಗ್ ಬಾಸ್, ಶೋಭಾ ನೀವು ಈ ಕೂಡಲೇ ಮನೆಯ ಮುಖ್ಯದ್ವಾರದಿಂದ ಹೊರಬರಬೇಕು ಎಂದು ಆಜ್ಞೆ ಮಾಡಿದ್ದಾರೆ.

    ಕಣ್ಣೀರು ಇಡುತ್ತಲೇ ಹೊರ ಬರುವ ಶೋಭಾ, ಯಾರೆಲ್ಲ ನನಗೆ ವೋಟ್ ಮಾಡಿದ್ದಿರೋ, ನಿಮ್ಮೆಲ್ಲರಿಗೂ ನೋವು ಕೊಡಬೇಕು ಅನ್ನೋ ಉದ್ದೇಶ ನನ್ನದಲ್ಲ. ದಯವಿಟ್ಟು ನನ್ನ ತಪ್ಪನ್ನು ಕ್ಷಮಿಸಿಬಿಡಿ. ಬಿಗ್ ಬಾಸ್ ನನಗೆ ಹೋಗಬೇಕು ಅನಿಸ್ತಿಲ್ಲ ಎಂದು ಬಿಗ್ ಬಾಸ್ ಮನೆಗೆ ನಮಸ್ಕಾರ ಮಾಡಿದ್ದಾರೆ.

  • ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಕಣ್ಣೀರಿಟ್ಟ ಶೋಭಾ- ಕಿಚ್ಚನ ಮಾತಿಗೆ ಡೋರ್ ಓಪನ್

    ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಕಣ್ಣೀರಿಟ್ಟ ಶೋಭಾ- ಕಿಚ್ಚನ ಮಾತಿಗೆ ಡೋರ್ ಓಪನ್

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11)  ಕಾರ್ಯಕ್ರಮವು ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, 62 ದಿನಗಳನ್ನು ಪೂರೈಸಿದೆ. ಸದ್ಯ ಬಿಗ್ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದು, ಇದರಲ್ಲಿ ಒಬ್ಬರು ಇಂದು ಹೊರ ಹೋಗಲಿದ್ದಾರೆ. ಅದು ಯಾರು ಎಂಬುದೇ ಸೀಕ್ರೆಟ್. ಇದರ ನಡುವೆ ಶೋಭಾ ಶೆಟ್ಟಿ (Shobha Shetty) ಪ್ರೇಕ್ಷಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ನನಗೆ ಬಿಗ್ ಬಾಸ್ ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಸುದೀಪ್ ಮುಂದೆ ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಡ್ಯಾನ್ಸ್- ‘ಪುಷ್ಪ 2’ ಪ್ರೋಮೋ ಔಟ್

    shobha shetty 1 2

    ಭಾನುವಾರದ ಎಪಿಸೋಡ್‌ನ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ಶೋಭಾ ಅವರೇ ನೀವು ಸೇಫ್ ಎಂದು ಸುದೀಪ್ (Sudeep) ಹೇಳಿದ್ದಾರೆ. ಆದರೆ ಇದಕ್ಕೆ ಅಳುತ್ತಲೇ ಶೋಭಾ ಶೆಟ್ಟಿ, ಸರ್ ನನಗೆ ಎಲ್ಲೋ ಒಂದು ಕಡೆ ಇಲ್ಲಿ ಇರೋಕೆ ಆಗುತ್ತಿಲ್ಲ ಅನಿಸುತ್ತಿದೆ. ಹೀಗೆ ಹೇಳುತ್ತಿದ್ದಂತೆ ಸ್ಪರ್ಧಿಗೆಲ್ಲಾ ಗಾಬರಿಯಿಂದ ಶೋಭಾರನ್ನು ನೋಡಿದ್ದಾರೆ. ಬಿಗ್ ಬಾಸ್‌ನಿಂದ ನನ್ನನ್ನು ಕಳುಹಿಸಿ ಎಂದು ಕೈ ಮುಗಿದು ಅಂಗಲಾಚಿರುವ ಶೋಭಾ ಕೇಳಿಕೊಂಡಿದ್ದಾರೆ.

    sudeep

    ಅರ್ಥ ಮಾಡಿಕೊಳ್ಳಿ, ಯಾಕೆ ನೀವು ಒಳಗೆ ಹೋಗಿದ್ರಿ. ನಿಮ್ಮನ್ನು ಸೇಫ್ ಮಾಡಿದರಲ್ಲ ಜನ, ಅವರಿಗೆ ಈ ತರ ಉತ್ತರ ಕೊಡೋಕೆ ಆಗಲ್ಲ. ಹೊರಗಡೆ ಹೋಗಬೇಕಾ ಎಂದು ಕೈ ತೋರಿಸುತ್ತ ದೊಡ್ಡ ಧ್ವನಿಯಲ್ಲಿ ಕಿಚ್ಚ ಸುದೀಪ್ ಶೋಭಾಗೆ ಪ್ರಶ್ನಿಸಿದ್ದಾರೆ. ನಿಮಗಾಗಿ ಡೋರ್ ಓಪನ್ ಇದೆ ಎಂದು ಹೇಳಿದ್ದಾರೆ.

    shobha shetty

    ಆದರೆ ಈ ವೇಳೆ ಶೋಭಾ ಶೆಟ್ಟಿ ಕಣ್ಣೀರಲ್ಲೇ ಕೈ ಮುಗಿದು, ನನಗೆ ಕಂಟಿನ್ಯೂ ಮಾಡೋಕೆ ಆಗಲ್ಲ ಅಂತ ಅನಿಸುತ್ತಿದೆ ಸರ್. ಇಲ್ಲಿ ಇರೋರ್ ನಿರೀಕ್ಷೆ ರೀಚ್ ಆಗೋದು ಕಷ್ಟ ಅನಿಸುತ್ತಿದೆ. ಹೋದ ಮೇಲೆ ಪೇಸ್ ಮಾಡುವುದು ಹೇಗಂತ ಗೊತ್ತಾಗುತ್ತಿಲ್ಲ. ಆಡಬೇಕು, ಇರಬೇಕೆಂದು ಇದೆ. ಆದರೆ ಭಯವಾಗುತ್ತಿದೆ ಎಂದಿದ್ದಾರೆ. ಶೋಭಾ ಶೆಟ್ಟಿ ಕಣ್ಣೀರು ಹಾಕುವಾಗ ಚೈತ್ರಾ ಅವರ ಸಮಾಧಾನ ಮಾಡುತ್ತಿದ್ದರು.

    ಶೋಭಾಗೆ ‘ಬಿಗ್ ಬಾಸ್’ ಆಟ ಏನು ಹೊಸದಲ್ಲ. ತೆಲುಗಿನ ‘ಬಿಗ್ ಬಾಸ್ 7’ರಲ್ಲಿ (Bigg Boss Telugu 7) ಫಿನಾಲೆ ಮೆಟ್ಟಿಲು ತಲುಪೋ ಒಂದು ದಿನ ಮುಂಚೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಫೈರ್ ಲೇಡಿಯಾಗಿ, ಖಡಕ್ ಆಟಗರ‍್ತಿ ಗುರುತಿಸಿಕೊಂಡಿದ್ದ ಕನ್ನಡತಿ ಶೋಭಾ, ಈಗ ಕನ್ನಡದ ಬಿಗ್ ಬಾಸ್‌ನಲ್ಲಿ ಸದಾ ಕಣ್ಣೀರು ಸುರಿಸುತ್ತಿರೋದು ನೋಡಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.

  • BBK 11: ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾಗೆ ಕಳಪೆ ಪಟ್ಟ-  ಜೈಲಿಗಟ್ಟಿದ ಮನೆ ಮಂದಿ

    BBK 11: ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾಗೆ ಕಳಪೆ ಪಟ್ಟ- ಜೈಲಿಗಟ್ಟಿದ ಮನೆ ಮಂದಿ

    ‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ (Shobha Shetty) ಈ ವಾರದ ಕಳಪೆ (Kalape) ಪಟ್ಟ ಪಡೆದು ಜೈಲಿಗೆ ಹೋಗಿದ್ದಾರೆ. ಮನೆ ಮಂದಿಯೆಲ್ಲಾ ಸೇರಿ ಕಳಪೆ ಪಟ್ಟ ಕೊಟ್ಟಿರೋದು ಶೋಭಾಗೆ ಶಾಕ್ ಆಗಿದೆ. ಜೈಲು ಪಾಲಾಗಿದ್ದಕ್ಕೆ ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರ ತಾಳಿದ ‘ಟೋಬಿ’ ಬೆಡಗಿ ಚೈತ್ರಾ

    shobha shetty 1 3

    ಈ ವಾರ ನಿಮ್ಮ ಆಟದ ಪ್ರದರ್ಶನ ಕಡಿಮೆ ಎಂದೆನಿಸಿತು. ಅದಕ್ಕೆ ಕಳಪೆ ಪಟ್ಟ ಕೊಡುತ್ತಿದ್ದೇನೆ ಎಂದ ಧನರಾಜ್ ಮಾತಿಗೆ ಶೋಭಾ ಗರಂ ಆಗಿದ್ದಾರೆ. ನೀವ್ಯಾಕೆ ನನ್ನ ಟಾರ್ಗೆಟ್ ಮಾಡುತ್ತಿದ್ದೀರಾ? ಎಂದಿದ್ದಾರೆ. ಜೀವನದಲ್ಲಿ ಏನೇನೋ ಫೇಸ್ ಮಾಡಿದ್ದೇನೆ. ಇದು ಏನು ಅಲ್ಲ ನನಗೆ ಎಂದು ತಿರುಗೇಟು ನೀಡಿದ್ದಾರೆ ಶೋಭಾ. ಇಡೀ ಮನೆ ಅವರಿಗೆ ಕಳಪೆ ಕೊಟ್ಟಿರೋದು ಕೆಲ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದೆ.

    shobha 1

    ಅಮ್ಮಾ ಇವತ್ತು ನಾನು ಜೈಲಿಗೆ ಹೋಗ್ತಾ ಇದ್ದೀನಿ. ಅದನ್ನು ನೋಡಿ ನೀವು ಅಳಬೇಡಿ ಎಂದು ಶೋಭಾ ಕಣ್ಣೀರಿಟ್ಟಿದ್ದಾರೆ. ಇತ್ತ ನನ್ನ ನಿರ್ಧಾರ ತಪ್ಪಾಗಿದ್ಯಾ ಎಂದು ಗೊಂದಲದಲ್ಲಿದ್ದ ಧನರಾಜ್‌ಗೆ ನಿಮ್ಮ ನಿರ್ಧಾರ ಸರಿಯಾಗಿದೆ ಎಂದು ರಜತ್ ಸಲಹೆ ನೀಡಿದ್ದಾರೆ. ಗೋಲ್ಡ್ ಸುರೇಶ್ ಬೆಳ್ಳಗೆ ಇರೋದೆಲ್ಲ ಹಾಲಲ್ಲ ಎಂದು ಶೋಭಾಗೆ ಕುಟುಕಿದ್ದಾರೆ. ಎಲ್ಲರೂ ನನಗೆ ಕಳಪೆ ಕೊಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಶೋಭಾ ಜೈಲಿನಲ್ಲಿ ಗಳಗಳನೆ ಅತ್ತಿದ್ದಾರೆ.

    ಇನ್ನೂ ಶೋಭಾಗೆ ‘ಬಿಗ್ ಬಾಸ್’ ಆಟ ಏನು ಹೊಸದಲ್ಲ. ತೆಲುಗಿನ ‘ಬಿಗ್ ಬಾಸ್ 7’ರಲ್ಲಿ ಫಿನಾಲೆ ಮೆಟ್ಟಿಲು ತಲುಪೋ ಒಂದು ದಿನ ಮುಂಚೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಫೈರ್ ಲೇಡಿಯಾಗಿ, ಖಡಕ್ ಆಟಗಾರ್ತಿ ಗುರುತಿಸಿಕೊಂಡಿದ್ದ ಕನ್ನಡತಿ ಶೋಭಾ, ಈಗ ಕನ್ನಡದ ಬಿಗ್ ಬಾಸ್‌ನಲ್ಲಿ ಸದಾ ಕಣ್ಣೀರು ಸುರಿಸುತ್ತಿರೋದು ನೋಡಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.

  • ನಿಮ್ಮ ಬುದ್ಧಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ: ಶೋಭಾ, ಹನುಮಂತ ನಡುವೆ ಕಿರಿಕ್

    ನಿಮ್ಮ ಬುದ್ಧಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ: ಶೋಭಾ, ಹನುಮಂತ ನಡುವೆ ಕಿರಿಕ್

    ದೊಡ್ಮನೆಯ (Bigg Boss Kannada 11) ಆಟ ರೋಚಕ ತಿರುವುಗಳನ್ನು ಪಡೆದು 60ನೇ ದಿನದತ್ತ ಮುನ್ನುಗ್ಗುತ್ತಿದೆ. ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath Kishen) ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಮೇಲೆ ಆಟ ಇಂಟರೆಸ್ಟಿಂಗ್ ಆಗಿದೆ. ಇದೀಗ ಹನುಮಂತ ನಾಮಿನೇಟ್ ಮಾಡಿದ್ದಕ್ಕೆ ಫೈರ್ ಲೇಡಿ ಶೋಭಾ ಶೆಟ್ಟಿ ಗರಂ ಆಗಿದ್ದಾರೆ. ಈ ವೇಳೆ, ಹನುಮಂತ, ಶೋಭಾ, ಮಂಜು ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ:ಝೈನಾಬ್ ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಅಖಿಲ್ ಅಕ್ಕಿನೇನಿ

    shobha

    ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ, ಶೋಭಾ ಶೆಟ್ಟಿ ಹೆಸರನ್ನು ಹನುಮಂತ ಸೂಚಿಸಿದರು. ಅದಕ್ಕೆ ಕೊಟ್ಟ ಕಾರಣ ಶೋಭಾಗೆ ಸಿಟ್ಟು ತರಿಸಿದೆ. ನೇರವಾಗಿ ಶೋಭಾ ಶೆಟ್ಟಿಗೆ ನಿಮ್ಮ ಕ್ಯಾಪ್ಟನ್ಸಿ ನನಗೆ ಇಷ್ಟ ಆಗಿಲ್ಲ ಎಂದಿದ್ದಾರೆ. ನಿಮ್ಮ ಬುದ್ದಿವಂತಿಕೆಯಿಂದ ನಾವು ಯಾರು ಆಟ ಆಡಲಿಲ್ಲ. ಎಲ್ಲಾ ರಜತ್ ಮತ್ತು ಮಂಜು ಪ್ಲ್ಯಾನ್ ಮಾಡಿದಂತೆ, ಆಟ ಆಡಿದ್ದೇವೆ ಎಂದು ಹನುಮಂತ (Hanumantha) ಹೇಳಿದ್ದಾರೆ. ಹಾಗಾದ್ರೆ ನಿಮ್ಮ ಬುದ್ಧಿವಂತಿಕೆ ಎಲ್ಲಿ ಹೋಗಿತ್ತು ಎಂದು ಹನುಮಂತಗೆ ಶೋಭಾ ತಿರುಗೇಟು ನೀಡಿದ್ದಾರೆ.

    ಸದ್ಯ ಬಿಗ್ ಬಾಸ್ ಸಾಮ್ರಾಜ್ಯದ ರಾಜನಾಗಿರುವ ಉಗ್ರಂ ಮಂಜು ಅವರು ಹನುಮಂತ ಕೊಟ್ಟ ಕಾರಣವನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಶೋಭಾ ರಾಂಗ್ ಆಗಿದ್ದಾರೆ. ಆ ಕಾರಣ ಸೂಕ್ತ ಅನ್ನೋದಾಗಿದ್ರೆ ನಾನು ವಾದನೇ ಮಾಡುತ್ತಿರಲಿಲ್ಲ ಎಂದಿದ್ದಾರೆ. ನಟಿಗೆ ಇದು ‘ಬಿಗ್ ಬಾಸ್’ ಮಹಾಪ್ರಭುಗಳ ಆಜ್ಞೆ ಎಂದು ಮಂಜು ಸಿಟ್ಟಿನಿಂದ ಹೋಗಿ ಕುಳಿತುಕೊಳ್ಳಿ ಎಂದಿದ್ದಾರೆ. ಇಲ್ಲ ನಾನು ಕೂರಲ್ಲ ಮಹಾಪ್ರಭು ಎಂದು ಶೋಭಾ ಕೂಡ ಖಡಕ್ ಆಗಿ ಉತ್ತರಿಸಿದ್ದಾರೆ. ಇಬ್ಬರ ವಾಗ್ವಾದಕ್ಕೆ ಮನೆ ಮಂದಿ ಸೈಲೆಂಟ್ ಆಗಿದ್ದಾರೆ.

  • BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ

    BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ

    ಕಿರುತೆರೆಯ ಜನಪ್ರಿಯ ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್‌ನಲ್ಲಿ ತನು ಪಾತ್ರದ ಮೂಲಕ ಗಮನ ಸೆಳೆದಿದ್ದ ಶೋಭಾ ಶೆಟ್ಟಿ ಆ ನಂತರ ತೆಲುಗು ಕಿರುತೆರೆಯತ್ತ ಮುಖ ಮಾಡಿದರು. ‘ಬಿಗ್ ಬಾಸ್ ತೆಲುಗು 7’ರಲ್ಲಿ ರಂಜಿಸಿದ್ದ ನಟಿ ಇದೀಗ ಮತ್ತೆ ಕನ್ನಡದ ಬಿಗ್ ಬಾಸ್ 11ರಲ್ಲಿ ಫೈರ್ ಲೇಡಿಯಾಗಿ ಅಬ್ಬರಿಸುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿರುವ ಶೋಭಾ ಅವರ ಅಸಲಿ ಮುಖ ಅನಾವರಣ ಆಗಿದೆ.

    SHOBHA SHETTY 5

    ಶೋಭಾ ಶೆಟ್ಟಿ (Shobha Shetty)  ‘ಬಿಗ್ ಬಾಸ್’ನಲ್ಲಿ ಅವರು ಯಾವಾಗಲೂ ಅಗ್ರೆಸ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈಗ ಭಾವನಾತ್ಮಕ ಮುಖವನ್ನು ತೋರಿಸಿದ್ದಾರೆ. ಕುಟುಂಬಸ್ಥರನ್ನು ನೆನೆದು ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

    shobha shetty

    ಕೆಲಸಗಳ ಕಾರಣಕ್ಕೆ ಕಳೆದ 10 ವರ್ಷಗಳಲ್ಲಿ ನಾನು ಕುಟುಂಬಕ್ಕೆ ಹೆಚ್ಚು ಟೈಮ್ ನೀಡೋಕೆ ಆಗಿಲ್ಲ. ನಾನು ಕುಟುಂಬದ ಜೊತೆ ಸಾಕಷ್ಟು ಕನೆಕ್ಟ್ ಆಗಿದ್ದೇನೆ. ನನ್ನ ಮೊದಲ ಆದ್ಯತೆ ಕುಟುಂಬ ಎಂದು ಶೋಭಾ ಭಾವುಕರಾದರು.

    shobha shetty 1 2

    ಸೆಟ್‌ನಲ್ಲಿ ಫ್ಯಾಮಿಲಿಗೆ ಸಂಬಂಧಿಸಿದ ದೃಶ್ಯ ನಡೆದರೆ ಅದು ನನಗೆ ಕನೆಕ್ಟ್ ಆಗುತ್ತದೆ. ಬೇರೆ ಭಾಷೆಯಲ್ಲಿ ನಾವು ಹೋಗಿ ಕೆಲಸ ಮಾಡಬೇಕು ಎಂದರೆ ಅದು ಅಷ್ಟು ಸುಲಭ ಅಲ್ಲ. ನಾನು ಪ್ರತಿ ಕ್ಷಣ ಕುಟುಂಬದವರನ್ನು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇನೆ ಎಂದಿದ್ದಾರೆ ಶೋಭಾ.

    shobha shetty

    ಶೋಭಾ ಶೆಟ್ಟಿ ಇದನ್ನು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಅವರು ಅಳುತ್ತಿರುವುದನ್ನು ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಶೋಭಾಗೆ ಹೀಗೊಂದು ಮುಖ ಇದೆಯೇ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.

    shobha shetty

    ಅಂದಹಾಗೆ, ಶೋಭಾ ಅವರು ‘ಕಾರ್ತಿಕ ದೀಪಂ’ ಸೀರಿಯಲ್‌ನಲ್ಲಿ ನಟಿಸಿದರು. ತಮ್ಮ ಮನೋಜ್ಞ ನಟನೆಯ ಮೂಲಕ ತೆಲುಗು ಪ್ರೇಕ್ಷಕರಿಗೆ ನಟಿ ಹತ್ತಿರವಾಗಿದ್ದಾರೆ.

  • BBK 11: ಟಾಸ್ಕ್ ವೇಳೆ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿಗೆ ಪೆಟ್ಟು

    BBK 11: ಟಾಸ್ಕ್ ವೇಳೆ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿಗೆ ಪೆಟ್ಟು

    ದೊಡ್ಮನೆಯಲ್ಲಿ (BBK 11) ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ (Shobha Shetty) ಮತ್ತು ರಜತ್ (Rajath) ಎಂಟ್ರಿ ಕೊಟ್ಮೇಲೆ ಉಳಿವಿಕೆಗಾಗಿ ಸ್ಪರ್ಧಿಗಳ ಸೆಣಸಾಟ ಜೋರಾಗಿದೆ. ಇನ್ನೂ ಬಿಗ್ ಬಾಸ್ ಕೊಟ್ಟ ಟಾಸ್ಕ್‌ವೊಂದರಲ್ಲಿ ಎತ್ತರದಿಂದ ಶೋಭಾ ಶೆಟ್ಟಿ ಬಿದ್ದಿದ್ದಾರೆ. ಪೆಟ್ಟು ಮಾಡಿಕೊಂಡ ಶೋಭಾರನ್ನು ನೋಡಿ ಸ್ಪರ್ಧಿಗಳು ಗಾಬರಿಯಾಗಿದ್ದಾರೆ. ಇದನ್ನೂ ಓದಿ:‘ಜೀಬ್ರಾ’ಗೆ ‘ಭೀಮ’ ಬೆಂಬಲ- ಡಾಲಿ, ಸತ್ಯದೇವ್ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್

    shobha 1 1

    ‘ಬಿಗ್ ಬಾಸ್’ ಮನೆಯ ಆಟಕ್ಕೆ 50 ದಿನ ಪೂರೈಸಿದೆ. ರೋಚಕ ತಿರುವು ಪಡೆದು ಮುನ್ನುಗ್ಗತ್ತಿದೆ. ಇನ್ನೂ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಅವರು ಉಗ್ರಂ ಮಂಜುಗೆ ತಿರುಗೇಟು ಕೊಟ್ಟಿರುವ ರೀತಿ ನೋಡಿ ಅವರು ಎಂತಹ ಗಟ್ಟಿ ಸ್ಪರ್ಧಿ ಎಂಬುದು ಮನೆ ಮಂದಿ ಗೊತ್ತಾಗಿದೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಮಹಾ ತಿರುವು- ಕಾವೇರಿ ಅಟ್ಟಹಾಸಕ್ಕೆ ಬ್ರೇಕ್‌ ಹಾಕಲು ಬಂದ ಕೀರ್ತಿ

    shobha shetty 6

    ಇಂದಿನ ಸಂಚಿಕೆಯಲ್ಲಿನ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಅದರಲ್ಲಿ ಶೋಭಾ ಮತ್ತು ಭವ್ಯಾ ಗೌಡ ನೇತೃತ್ವದಲ್ಲಿ ಎರಡು ಟೀಮ್‌ಗಳಾಗಿ ವಿಂಗಡಿಸಿದ್ದಾರೆ. ಎದುರಾಳಿ ತಂಡ ಭವ್ಯಾಗಿಂತ (Bhavya Gowda) ವೇಗವಾಗಿ ಟಾಸ್ಕ್ ಪೂರ್ಣಗೊಳಿಸಬೇಕು ಎಂಬ ಆತುರದಲ್ಲಿ ಶೋಭಾ ಆಟ ಆಡುವಾಗ ಎತ್ತರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಸಹಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ.

    ಶೋಭಾಗೆ ತೀವ್ರವಾಗಿ ಪೆಟ್ಟು ಆಗಿದ್ಯಾ? ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ. ನಟಿಗೆ ಏನಾಗಿದೆ ಎಂಬುದನ್ನು ಕಾದುನೋಡಬೇಕಿದೆ.

  • ‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

    ‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

    ಬಿಗ್ ಬಾಸ್‌ಗೆ (Bigg Boss Kannada 11)  ಶೋಭಾ (Shobha Shetty) ಮತ್ತು ರಜತ್ (Rajath) ವೈಲ್ಡ್ ಕಾರ್ಡ್ ಎಂಟ್ರಿ ಬೆನ್ನಲ್ಲೇ ಸ್ಪರ್ಧಿಗಳ ನಡುವಿನ ಫೈಟ್ ಇನ್ನೊಂದು ಹಂತಕ್ಕೆ ತಲುಪಿದೆ. ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್‌ಗೆ ಅವಮಾನಿಸಿದ್ದಾರೆ. ಅದಕ್ಕೆ ತಾವು ಆಟ ಆಡಲ್ಲ. ಬಾಗಿಲು ತೆಗಿಯಿರಿ ಎಂದು ಬಿಗ್ ಬಾಸ್ ಬಳಿ ಸುರೇಶ್ ಮನವಿ ಮಾಡಿಕೊಂಡಿದ್ದಾರೆ.

    bigg boss 1 3

    ಇಂದಿನ ಸಂಚಿಕೆಯಲ್ಲಿ ‘ಬಿಗ್ ಬಾಸ್’ ಟಾಸ್ಕ್ ಒಂದನ್ನು ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ‘ಬಿಗ್ ಬಾಸ್’ ಆಟದ ನಿಯಮದಲ್ಲಿತ್ತು. ಈ ಟಾಸ್ಕ್‌ನಲ್ಲಿ ರಜತ್ ಮತ್ತು ಗೋಲ್ಡ್ ಸುರೇಶ್ (Gold Suresh) ನಡುವೆ ಬಿಗ್ ಫೈಟ್ ನಡೆದಿದೆ. ಇದನ್ನೂ ಓದಿ:ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್

    bigg boss 1 4

    ಅಂತೆಯೇ ಆಟ ಆರಂಭವಾಗಿದೆ. ಈ ವೇಳೆ, ಗೋಲ್ಡ್ ಸುರೇಶ್ ಜೊತೆ ಉಗ್ರಂ ಮಂಜು (Ugramm Manju) ಮಾತುಕತೆ ನಡೆಸುತ್ತಿರುತ್ತಾರೆ. ಇಬ್ಬರ ನಡುವಿನ ವಾಗ್ವಾದಕ್ಕೆ ರಜತ್ ಎಂಟ್ರಿಯಾಗಿ ಕೆಲವು ಪದಗಳನ್ನು ಗೋಲ್ಡ್ ಸುರೇಶ್‌ಗೆ ಬಳಸಿದ್ದಾರೆ. ಗುಗ್ಗು ನನ್ನ ಮಗ, ವೇಸ್ಟ್ ನನ್ನ ಮಗ ಎಂಬ ಪದಗಳನ್ನು ರಜತ್ ಬಳಸಿ ಸುರೇಶ್‌ಗೆ ಕೌಂಟರ್ ಕೊಟ್ಟಿದ್ದಾರೆ. ತಮ್ಮ ಮೇಲೆ ಬಳಕೆ ಆಗಿರುವ ಪದಗಳು ನಿಂದಿಸಿರುವ ರೀತಿ ನನಗೆ ಬೇಸರ ಆಗಿದೆ. ಬಿಗ್ ಬಾಸ್ ಅವರು ನನಗೆ ಮಗನೆ, ಗಿಗನೆ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್ ಬಾಸ್ ನಾನು ಆಟ ಆಡಲ್ಲ. ಬಿಗ್ ಬಾಸ್ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ. ಸುರೇಶ್‌ಗೆ ಶಿಶಿರ್‌, ಮೋಕ್ಷಿತಾ ಅದೆಷ್ಟೇ ಸಮಾಧಾನ ಮಾಡಿದರು ಕೇಳೋ ಪರಿಸ್ಥತಿಯಲ್ಲಿ ಅವರಿಲ್ಲ.

    ಈ ಪ್ರೋಮೋ ನೋಡಿ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಎಪಿಸೋಡ್‌ಗಾಗಿ ಅಭಿಮಾನಿಗಳು ಎದುರು ನೋಡಿದ್ದಾರೆ. ದೊಡ್ಮನೆಗೆ ಬರುತ್ತಿದ್ದಂತೆಯೇ ವೈಲ್ಡ್ ಕಾರ್ಡ್ ಸ್ಪರ್ಧಿಗಳು ವೈಲ್ಡ್ ಆಗಿ ಆಟ ಆಡುತ್ತಿದ್ದಾರೆ.