Tag: ಶಿವಮೂರ್ತಿ ಮುರುಘಾ ಶರಣರು

  • 7 ಷರತ್ತು ವಿಧಿಸಿ ಜಾಮೀನು ಸಿಕ್ಕಿದ್ರೂ  ಮುರುಘಾ ಶ್ರೀಗಳಿಗೆ ಬಿಡುಗಡೆ ಭಾಗ್ಯವಿಲ್ಲ

    7 ಷರತ್ತು ವಿಧಿಸಿ ಜಾಮೀನು ಸಿಕ್ಕಿದ್ರೂ ಮುರುಘಾ ಶ್ರೀಗಳಿಗೆ ಬಿಡುಗಡೆ ಭಾಗ್ಯವಿಲ್ಲ

    ಬೆಂಗಳೂರು: ಕಳೆದ 13 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಶಿವಮೂರ್ತಿ ಶರಣರಿಗೆ (Shivamurthy Murugha Sharanaru) ಕೊನೆಗೂ ಹೈಕೋರ್ಟ್‌ (Karnataka High Court) ಜಾಮೀನು ಮಂಜೂರು ಮಾಡಿದೆ. ಜಾಮೀನು (Bail) ಮಂಜೂರು ಆಗಿದ್ದರೂ ಶ್ರೀಗಳಿಗೆ ಬಿಡುಗಡೆ ಭಾಗ್ಯವಿಲ್ಲ.

    ಪೋಕ್ಸೋ ಪ್ರಕರಣದಲ್ಲಿ(POSCO Case) ಜೈಲು ಸೇರಿದ್ದ ಮುರುಘಾ ಶ್ರೀಗಳಿಗೆ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿದೆ. ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೂ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿಯಿದೆ. ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿದರೆ ಮಾತ್ರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

    HIGH COURT

    ವಿಚಾರಣೆ ಮುಗಿಯುವವರೆಗೂ ಚಿತ್ರದುರ್ಗಕ್ಕೆ ಹೋಗುವಂತಿಲ್ಲ. ಇಬ್ಬರ ಶ್ಯೂರಿಟಿಯನ್ನು ಒದಗಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಎರಡು ಲಕ್ಷ ರೂ. ಬಾಂಡ್ ಶ್ಯೂರಿಟಿ ನೀಡಬೇಕು. ಪಾಸ್‌ಪೋರ್ಟ್‌ ಅನ್ನು ಕೋರ್ಟ್‌ ವಶಕ್ಕೆ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಎಂದು ಷರತ್ತು ವಿಧಿಸಿದೆ. ಇದನ್ನೂ ಓದಿ: ಐವರ ಜಲಸಮಾಧಿ ಬಳಿಕ ಎಚ್ಚೆತ್ತ ಅಧಿಕಾರಿಗಳು – ಆರಂಭವಾಯ್ತು ತಡೆಗೋಡೆ ನಿರ್ಮಾಣ ಕಾರ್ಯ

    ಮೈಸೂರಿನ ನಜರಾಬಾದ್ ಪೊಲೀಸ್‌ ಠಾಣೆಯಿಂದ ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾವಣೆಯಾಗಿದ್ದ ಪ್ರಕರಣದ ಅಡಿ ಮಾತ್ರ ಜಾಮೀನು ಸಿಕ್ಕಿದೆ.

    ಮುರುಘಾ ಶರಣರು ಹಾಸ್ಟೆಲ್‌  ವಾರ್ಡನ್ ರಶ್ಮಿ ಮೂಲಕ ಮಕ್ಕಳನ್ನು ರೂಮಿಗೆ ಕರೆಸಿಕೊಳ್ಳುತ್ತಿದ್ದರು. ಮತ್ತು ಬರಿಸುವ ಚಾಕಲೇಟ್ ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಸಂತ್ರಸ್ತರು ದೂರು ನೀಡಿದ್ದರು. ಇದು ಎರಡನೇ ಪೋಕ್ಸೋ ಪ್ರಕರಣವಾಗಿದ್ದು ಈ ಪ್ರಕಣದ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿದೆ.

  • ಪುನೀತ್  ರಾಜ್‌ಕುಮಾರ್‌ಗೆ  ‘ಬಸವಶ್ರೀ ಪ್ರಶಸ್ತಿ’ ಘೋಷಣೆ

    ಪುನೀತ್ ರಾಜ್‌ಕುಮಾರ್‌ಗೆ ‘ಬಸವಶ್ರೀ ಪ್ರಶಸ್ತಿ’ ಘೋಷಣೆ

    ಚಿತ್ರದುರ್ಗ: ಮುರುಘಾ ಮಠದಿಂದ ನೀಡುವ, 2021ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ನಟ ಪುನೀತ್ ರಾಜ್‍ಕುಮಾರ್ ಅವರಿಗೆ ನೀಡುವುದಾಗಿ ಡಾ.ಶಿವಮೂರ್ತಿ ಮುರುಘಾ ಶರಣರು ಘೋಷಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇರುನಟ ಹಾಗು ಮಾನವೀಯ ಮೌಲ್ಯದ ಗುಣಗಳಿಗೆ ಹೆಸರಾಗಿರುವ ನಟ ಅಪ್ಪುಗೆ ಮರಣೋತ್ತರ ‘ಬಸವಶ್ರೀ ಪ್ರಶಸ್ತಿ’ಯನ್ನು ನೀಡಲು ಚಿತ್ರದುರ್ಗದ ಮುರುಘಾ ಮಠ ನಿರ್ಧರಿಸಿದೆ. ರಾಜ್ಯದ ಪ್ರತಿಷ್ಠಿತ ಪ್ರಶಸ್ತಿ ಎನಿಸಿರುವ ಬಸವಶ್ರೀ ಪ್ರಶಸ್ತಿಯು 5 ಲಕ್ಷ ರೂ. ನಗದು ಸೇರಿದಂತೆ ಬಸವಶ್ರೀ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಬರುವ ಬಸವ ಜಯಂತಿ ದಿನ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

    Chitradurga Muruga Math 1

    ಪ್ರಶಸ್ತಿ ಪ್ರದಾನ ಸಮಾರಂಭ ಚಿತ್ರದುರ್ಗದ ಮುರುಘಾ ಮಠದಲ್ಲಿರುವ ಅನುಭವ ಮಂಟಪದಲ್ಲಿ ನಡೆಯಲಿದೆ. ಪುನೀತ್ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈಗಾಗಲೇ ನಟ ಶಿವರಾಜಕುಮಾರ್ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

    aswhini and puneeth

    ಅಲ್ಲದೇ ನವೆಂಬರ್ 10ರಂದು ಪುನೀತ್ ಮನೆಗೆ ಮುರುಘಾ ಶ್ರೀಗಳು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಮುರುಘಾ ಶರಣರು ನಿರ್ಧರಿಸಿದ್ದಾರೆ. ಪುನೀತ್ ಕುಟುಂಬದವರೊಂದಿಗೆ ಕೋಟೆನಾಡಿನ ಅನೇಕ ಮಠಾಧೀಶರು, ಪುನೀತ್ ಒಡನಾಡಿಗಳು ಭಾಗಿಯಾಗುವರೆಂದು ಶರಣರು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಗಿಫ್ಟ್ ಅಲ್ಲ, ಪೆಟ್ರೋಲ್, ಡೀಸೆಲ್ ಬೆಲೆ ಇನ್ನೂ ಕಡಿಮೆಯಾಗಬೇಕು: ಸತೀಶ್ ಜಾರಕಿಹೊಳಿ