Tag: ವೈಷ್ಣೋದೇವಿ ದೇವಸ್ಥಾನ

  • ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ; ಐವರು ಸಾವು – ಯಾತ್ರೆ ಸ್ಥಗಿತ

    ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ; ಐವರು ಸಾವು – ಯಾತ್ರೆ ಸ್ಥಗಿತ

    ಶ್ರೀನಗರ: ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ (Mata Vaishno Devi) ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ಐವರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ.

    ಈ ಘಟನೆಯ ನಂತರ ಜಮ್ಮು ಮತ್ತು ಕಾಶ್ಮೀರದ (Jammu Kashmir) ರಿಯಾಸಿ ಜಿಲ್ಲೆಯಲ್ಲಿರುವ ಈ ಪವಿತ್ರ ದೇವಾಲಯಕ್ಕೆ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮುವಿನಲ್ಲಿ ಭಾರೀ ಮಳೆ, ಭೂಕುಸಿಕ್ಕೆ ನಾಲ್ವರು ಬಲಿ – ವೈಷ್ಣೋದೇವಿ ಯಾತ್ರೆ ಸ್ಥಗಿತ

    vaishno devi temple jammu kashmir

    ಬೆಟ್ಟದ ತುದಿಯಲ್ಲಿರುವ ದೇವಾಲಯಕ್ಕೆ ಸುಮಾರು 12 ಕಿ.ಮೀ. ಪಾದಯಾತ್ರೆಯ ಅರ್ಧ ದಾರಿಯಲ್ಲೇ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದ ಅಧ್ಕ್ವರಿಯಲ್ಲಿರುವ ಇಂದರ್ಪ್ರಸ್ಥ ಭೋಜನಾಲಯದ ಬಳಿ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ಹಿಮಕೋಟಿ ಚಾರಣ ಮಾರ್ಗದ ಯಾತ್ರೆಯನ್ನು ಈಗಾಗಲೇ ದಿನಪೂರ್ತಿ ಸ್ಥಗಿತಗೊಳಿಸಲಾಗಿತ್ತು. ಮಧ್ಯಾಹ್ನ 1:30 ರ ವರೆಗೆ ಯಾತ್ರಿಕರು ಹಳೆಯ ಮಾರ್ಗದಲ್ಲಿಯೇ ಮುಂದುವರಿದರು. ಆದರೆ, ಧಾರಾಕಾರ ಮಳೆಯಿಂದಾಗಿ ಅಧಿಕಾರಿಗಳು ಅದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಮೇಘಸ್ಫೋಟ – ಹಠಾತ್ ಪ್ರವಾಹಕ್ಕೆ 10ಕ್ಕೂ ಹೆಚ್ಚು ಮನೆಗಳು ನಾಶ

    ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಸತತ ಮೂರು ದಿನಗಳ ಭಾರೀ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಇಂದು ಮುಂಜಾನೆ ದೋಡಾ ಜಿಲ್ಲೆಯಲ್ಲಿ ಮೇಘಸ್ಫೋಟಕ್ಕೆ ನಾಲ್ವರು ಸಾವನ್ನಪ್ಪಿದ್ದು, 24 ಗಂಟೆಗಳಲ್ಲಿ ಒಟ್ಟು ಸಾವುಗಳ ಸಂಖ್ಯೆ 9 ಕ್ಕೆ ತಲುಪಿದೆ. ಹಠಾತ್ ತೀವ್ರವಾದ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಗಿ, ಈ ಪ್ರದೇಶದಲ್ಲಿ 10 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

  • ವೈಷ್ಣೋದೇವಿ ದರ್ಶನಕ್ಕೆ ಮುಖ ಮುಚ್ಚಿಕೊಂಡು ಬಂದ ಶಾರುಖ್ ಖಾನ್

    ವೈಷ್ಣೋದೇವಿ ದರ್ಶನಕ್ಕೆ ಮುಖ ಮುಚ್ಚಿಕೊಂಡು ಬಂದ ಶಾರುಖ್ ಖಾನ್

    ಮ್ಮ ನಟನೆಯ ಪಠಾಣ್ ಸಿನಿಮಾದ ಚೊಚ್ಚಲು ಹಾಡು ರಿಲೀಸ್ ಆದ ಬೆನ್ನಲ್ಲೇ ಬಾಲಿವುಡ್ ನಟ ಶಾರುಖ್ ಖಾನ್ ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬೆಳಗ್ಗೆಯೇ ದೇವಸ್ಥಾನಕ್ಕೆ ಆಗಮಿಸಿದ್ದ ಶಾರುಖ್, ಮುಖ ಮುಚ್ಚಿಕೊಂಡು ದೇವರ ದರ್ಶನ ಪಡೆದಿದ್ದಾರೆ. ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    FotoJet 1 35

    ಬಾಡಿಗಾಡ್ ಜೊತೆ ಕಾರಿನಲ್ಲಿ ಬಂದಿಳಿದ ಶಾರುಖ್, ಕಾರಿನಿಂದ ಇಳಿದು ನೇರವಾಗಿ ವೈಷ್ಣೋದೇವಿ ದೇವಸ್ಥಾನದ ಒಳಗೆ ಹೋಗಿದ್ದಾರೆ. ದೇವಸ್ಥಾನದ ಒಳಗೆ ಬಾಡಿಗಾಡ್ ಜೊತೆ ಹೋಗುತ್ತಿರುವ ಶಾರುಖ್ ವಿಡಿಯೋ ಕೂಡ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಶಾರುಖ್ ಮುಖಕ್ಕೆ ಬಟ್ಟೆಯಿಂದ ಮುಚ್ಚಿದ್ದಾರೆ. ಶಾರುಖ್ ಬಂದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿದ್ದವರು ಅವರನ್ನು ಸುತ್ತುವರೆದಿದ್ದಾರೆ. ಬಾಡಿಗಾಡ್ ಅಲ್ಲಿ ನೆರದಿದ್ದ ಜನರನ್ನು ಸರಿಸುತ್ತಾ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

    ಪಠಾನ್ ಸಿನಿಮಾ ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಈ ಸಿನಿಮಾ, ಮೊದಲ ಹಾಡಿನ ಮೂಲಕ ಪ್ರಚಾರ ಆರಂಭಿಸಲಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿಷೇನ್ ನ ಸಿನಿಮಾ ಇದಾಗಿದ್ದು, ಶುರುವಿನಿಂದ ಈವರೆಗೂ ಕುತೂಹಲವನ್ನು ಕಾಪಾಡಿಕೊಂಡೇ ಬರುತ್ತಿದೆ.

    FotoJet 2 34

    ನಿನ್ನೆ ಹಾಡು ರಿಲೀಸ್ ಆಗುತ್ತಿರುವ ವಿಷಯವನ್ನು ಸ್ವತಃ ಶಾರುಖ್ ಖಾನ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಈ ಹಾಡನ್ನು ನೋಡಲು ತಾವೂ ಕೂಡ ಕಾತರದಿಂದ ಕಾಯುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದರು. ಅಲ್ಲದೇ ಅಭಿಮಾನಿಗಳು ಕೂಡ  ಅಷ್ಟೇ ಕುತೂಹಲದಿಂದಲೇ ಹಾಡಿಗಾಗಿ ಕಾದಿದ್ದರು. ಬಿಡುಗಡೆಯಾದ ಹಾಡಿಗೆ ಅಭಿಮಾನಿಗಳು ಕೂಡ ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    FotoJet 3 25

    ಇದು ಶಾರುಖ್ ಖಾನ್ ವೃತ್ತಿ ಜೀವನದ ಮಹತ್ವದ ಸಿನಿಮಾ ಎನ್ನಲಾಗುತ್ತಿದ್ದು, ಸತತ ಸೋಲಿನ ಬಳಿಕೆ ಬಾಲಿವುಡ್ ಗೆ ಈ ಸಿನಿಮಾ ಶಕ್ತಿ ತುಂಬಲಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಕಾಂಬಿನೇಷನ್ ಇರುವುದರಿಂದ ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಹಿಟ್ ಆಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇಂದು ಬಿಡುಗಡೆ ಆಗಿರುವ ಹಾಡು ಅಂಥದ್ದೊಂದು ಭರವಸೆಯನ್ನೂ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]