Tag: ವಿಶ್ವಬ್ಯಾಂಕ್

  • ಭಾರತ ಮಿಸೈಲ್‌ ದಾಳಿಗೆ ಪಾಕ್‌ ತತ್ತರ – ಭಿಕ್ಷೆ ಬೇಡುತ್ತಿದೆ ʻಭಿಕಾರಿಸ್ತಾನʼ

    ಭಾರತ ಮಿಸೈಲ್‌ ದಾಳಿಗೆ ಪಾಕ್‌ ತತ್ತರ – ಭಿಕ್ಷೆ ಬೇಡುತ್ತಿದೆ ʻಭಿಕಾರಿಸ್ತಾನʼ

    – ಬ್ಯಾಂಕ್‌ಗಳಲ್ಲಿ ಹಣ ಖಾಲಿ, ಎಟಿಎಂ ಮಿತಿ 3,000 ರೂ.ಗೆ ಇಳಿಕೆ

    ಇಸ್ಲಾಮಾಬಾದ್‌: ‌ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಭಾರತ (India) ದಿಟ್ಟ ಉತ್ತರ ನೀಡಿದೆ. ಭಾರತದ ಮಿಲಿಟರಿ ದಾಳಿಗೆ ತತ್ತರಿಸಿರುವ ಪಾಕ್‌ (Pakistan) ಇದೀಗ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದೆ.

    ಭಾರತದ ನಡೆಸಿದ ಮಿಸೈಲ್‌ ದಾಳಿಯಿಂದ ಪಾಕಿಸ್ತಾನದ ವಾಯುನೆಲೆ (Naval Base) ಸೇರಿದಂತೆ ಪಾಕ್‌ನ ಮೂಲಭೂತ ಸೌಕರ್ಯಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಆರ್ಥಿಕ ನಷ್ಟಕ್ಕೆ ತುತ್ತಾಗಿದೆ. ಹೀಗಾಗಿ ಇಸ್ಲಾಮಾಬಾದ್‌ (Islamabad) ಶುಕ್ರವಾರ ತುರ್ತು ಸಾಲ ನೀಡುವಂತೆ ವಿಶ್ವಬ್ಯಾಂಕ್‌ (World Bank) ಸೇರಿದಂತೆ ತನ್ನ ಅಂತರರಾಷ್ಟ್ರೀಯ ಪಾಲುದಾರರಿಗೆ ಮನವಿ ಮಾಡಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

    ತನ್ನ ಎಕ್ಸ್‌ ಖಾತೆಯಲ್ಲಿ ಅಧಿಕೃತ ಸಂದೇಶ ಹಂಚಿಕೊಂಡಿರುವ ಪಾಕಿಸ್ತಾನ ಸರ್ಕಾರವು, ಶತ್ರುಗಳಿಂದ ಉಂಟಾದ ಭಾರೀ ನಷ್ಟದ ನಂತರ ಪಾಕಿಸ್ತಾನ ಸರ್ಕಾರ ಅಂತಾರಾಷ್ಟ್ರೀಯ ಪಾಲುದಾರರಿಗೆ ಹೆಚ್ಚಿನ ಸಾಲಕ್ಕಾಗಿ ಮನವಿ ಮಾಡುತ್ತಿದೆ. ಹೆಚ್ಚುತ್ತಿರುವ ಯುದ್ಧ ಮತ್ತು ಷೇರು ಕುಸಿತದ ಮಧ್ಯೆ, ಆರ್ಥಿಕ ದುಸ್ತರ ಕಡಿಮೆ ಮಾಡಲು ಸಹಾಯ ಮಾಡುವಂತೆ ಪಾಲುದಾರರನ್ನು ಒತ್ತಾಯಿಸುತ್ತೇವೆ. ರಾಷ್ಟ್ರವು ದೃಢವಾಗಿರಲು ಮನವಿ ಮಾಡುತ್ತಿದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

    ಎಟಿಎಂಗಳಲ್ಲಿ ಹಣ ಡ್ರಾ ಮಿತಿ ಇಳಿಕೆ:
    ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ಮಾಸ್ಟರ್‌ ಸ್ಟ್ರೋಕ್‌ ಕೊಟ್ಟಿದೆ. ಪಾಕ್‌ನ 16 ಕಡೆ ಭಾರತದ ದಾಳಿಯಿಂದ ಮೂಲ ಸೌಕರ್ಯಗಳು ನಷ್ಟವಾಗಿದೆ. ಹಲವೆಡೆ ಬ್ಯಾಂಕ್‌ಗಳಲ್ಲೂ ಹಣ ಖಾಲಿಯಾಗಿದ್ದು, ಎಟಿಎಂಗಳಲ್ಲಿ ಹಣದ ಡ್ರಾ ಮಿತಿಯನ್ನು 3 ಸಾವಿರ ಪಾಕಿಸ್ತಾನಿ ರೂಪಾಯಿಗೆ ಇಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ

  • ಬೆಂಗಳೂರು ಅಭಿವೃದ್ಧಿಗೆ 7,000 ಕೋಟಿ ನೆರವು ನೀಡಲು ವಿಶ್ವಬ್ಯಾಂಕ್‌ ಒಪ್ಪಿದೆ: ಸಿಎಂ

    ಬೆಂಗಳೂರು ಅಭಿವೃದ್ಧಿಗೆ 7,000 ಕೋಟಿ ನೆರವು ನೀಡಲು ವಿಶ್ವಬ್ಯಾಂಕ್‌ ಒಪ್ಪಿದೆ: ಸಿಎಂ

    – ಕಳೆದ 100 ವರ್ಷಗಳಲ್ಲಿ ಬೆಂಗಳೂರಿಗೆ 3ನೇ ಅತಿ ದೊಡ್ಡ ಮಳೆ

    ಬೆಂಗಳೂರು: ರಾಜ್ಯದಲ್ಲಿ ಈ ತಿಂಗಳ ಮೊದಲ 25 ದಿನ ವಾಡಿಕೆಗಿಂತ ಶೇ.58ರಷ್ಟು ಹೆಚ್ಚು ಮಳೆಯಾಗಿದೆ. 116 ಎಂಎಂ ಮಳೆ ಆಗಬೇಕಿದ್ದ ಕಡೆ 181 ಮಿಲಿಮೀಟರ್ ಮಳೆ ಬಿದ್ದಿದೆ. ಬೆಂಗಳೂರಲ್ಲಿ 275 ಮಿಲಿಮೀಟರ್ ಮಳೆ (Bengaluru Rains) ಆಗಿದೆ. ಇದು ಶತಮಾನದಲ್ಲೇ 3ನೇ ಗರಿಷ್ಠ ಮಳೆಯಾಗಿದೆ.

    d.k.shivakumar bengaluru rains 2

    ಇನ್ನೂ ರಾಜ್ಯದಲ್ಲಿ ಮಳೆಯಿಂದಾಗಿ 25 ಮಂದಿ ಸಾವನ್ನಪ್ಪಿದ್ದಾರೆ. 2,077 ಮನೆ ಹಾನಿಗೀಡಾಗಿವೆ. 1 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಸಂಭವಿಸಿದೆ. ಶೀಘ್ರ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ಇದೇ ವೇಳೆ, ಬೆಂಗಳೂರಿನ ರಾಜಕಾಲುವೆಗಳ ಅಭಿವೃದ್ಧಿಗೆ 2,000 ಕೋಟಿ ಮತ್ತು ರಸ್ತೆಗಳ ಅಭಿವೃದ್ಧಿಗೆ 5,000 ಕೋಟಿ ನೆರವು ನೀಡಲು ವಿಶ್ವಬ್ಯಾಂಕ್ ಒಪ್ಪಿದೆ. ಮತ್ತೆ ಗುಂಡಿ ಮುಚ್ತೇವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ಅಂದ ಹಾಗೇ, ನವೆಂಬರ್, ಡಿಸೆಂಬರ್‌ನಲ್ಲಿಯೂ ಹೆಚ್ಚು ಮಳೆ ಆಗುವ ನಿರೀಕ್ಷೆ ಇದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಡಿಸಿಗಳಿಗೆ ಸಿಎಂ ಸೂಚಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವರಿಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್‌; 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮಹಿಳೆ ಪೊಲೀಸರಿಗೆ ಲಾಕ್

    bengaluru rain 5

    ಬೆಂಗಳೂರಿನಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ (Siddaramaiah), ಬೆಂಗಳೂರು ನಗರದ ಮಳೆಹಾನಿ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಬೆಂಗಳೂರಲ್ಲಿ ಅತಿ ಹೆಚ್ಚು ಮಳೆ ಆಗಿದೆ. ಸುಮಾರು 275 ಮಿಲಿ ಮೀಟರ್ ಮಳೆ, ನೂರು ವರ್ಷಗಳಲ್ಲಿ 3ನೇ ಅತಿ ಹೆಚ್ಚು ಮಳೆಯಾಗಿದೆ. ಪ್ರತಿ ಸಲ ಹೆಚ್ಚು ಮಳೆ ಬಂದಾಗ, ಪ್ರವಾಹ ಬಂದಾಗ ಹಾನಿ ಆಗುತ್ತಿದೆ. ಹಿಂದೆ ಸಿಎಂ ಆಗಿದ್ದಾಗ ರಾಜಕಾಲುವೆಗಳನ್ನ ಒತ್ತುವರಿ ತೆರವಿಗೆ ಸೂಚಿಸಿದ್ದೆ. 450 ಕಿಮೀ ರಾಜಕಾಲುವೆ ಅಭಿವೃದ್ಧಿ ಆಗಿತ್ತು, 173 ಕಿಮೀ ಉಳಿದುಕೊಂಡಿದೆ, ಅಲ್ಲದೇ 80 ಕಿಮೀ ಉಳಿದ ಕಾಲುವೆಗಳನ್ನ ಸರಿಪಡಿಸಬೇಕಿದೆ. ವಿಶ್ವಬ್ಯಾಂಕ್‌ 7,000 ಕೋಟಿ ರೂ. ಸಾಲ ನೀಡಲು ಒಪ್ಪಿದೆ. 3-4 ತಿಂಗಳಲ್ಲಿ ಅಂತಿಮವಾಗುತ್ತೆ ಎಂದು ಸಿಎಂ ಹೇಳಿದ್ದಾರೆ.

    Chikkamagaluru Rain

    ಮುಂದುವರಿದು, ಕೆರೆಗಳ ಒತ್ತುವರಿ ತೆರವುಗೊಳಿಸಲು ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗಡುವು ವಿಧಿಸಲಾಗಿತ್ತು. ಕೆರೆಗಳ ಒತ್ತುವರಿ ತೆರವುಗೊಳಿಸುವುದು, ಬಳಿಕ ಕೆರೆಗಳ ಹೂಳೆತ್ತುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಸಹ ಇದಕ್ಕೆ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸೂಚನೆ ನೀಡಿದ್ದೇವೆ. ಹೆಚ್ಚುವರಿ ಬಿತ್ತನೆಗೆ ರೈತರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದರೆ ಅದನ್ನು ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ – ಸಿಪಿವೈ

    ರೈತರಿಗೆ ಪರ್ಯಾಯ ಬೆಳೆ ಬೆಳೆಸಲು ಬಿತ್ತನೆ ಬೀಜ ಲಭ್ಯವಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು ಸೂಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಪತ್ರ ಬರೆದಿದ್ದೇನೆ, ಪ್ರವಾಹ ಸ್ಥಳ, ಮಳೆಹಾನಿ ಸ್ಥಳಕ್ಕೆ ಭೇಟಿ ನೀಡಬೇಕು ಅಂತಾ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ – ಹಸಿರು ಪಟಾಕಿಗೆ ಮಾತ್ರ ಅವಕಾಶ ಎಂದ ಸಿಎಂ

  • ಭಾರತ ಮೂಲದ ಅಜಯ್ ಬಂಗಾಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ

    ಭಾರತ ಮೂಲದ ಅಜಯ್ ಬಂಗಾಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ

    ವಾಷಿಂಗ್ಟನ್‌/ನವದೆಹಲಿ:‌ ಮಾಸ್ಟರ್ ಕಾರ್ಡ್‍ನ ಮಾಜಿ ಸಿಇಒ ಭಾರತೀಯ ಮೂಲದ ಅಜಯ್ ಬಂಗಾ (Ajay Banga) ಅವರು ಮುಂದಿನ ವಿಶ್ವಬ್ಯಾಂಕ್‌ (World Bank) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವಿಶ್ವಬ್ಯಾಂಕ್‌ ಬುಧವಾರ ದೃಢಪಡಿಸಿದೆ. ಮುಂದಿನ 5 ವರ್ಷಗಳ ಅವಧಿಗೆ ಬಂಗಾ ವಿಶ್ವಬ್ಯಾಂಕ್‌ನ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

    ajay banga 1

    187 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಬಂಗಾ ಅವರು ಆಯ್ಕೆಯಾಗಿದ್ದು, ಈ ಹುದ್ದೆ ಅಲಂಕರಿಸಿದ ಪ್ರಥಮ ಅನಿವಾಸಿ ಭಾರತೀಯ (NRI) ಎನಿಸಿಕೊಂಡಿದ್ದಾರೆ. ಟ್ರಂಪ್ ಆಡಳಿತದಲ್ಲಿ ನೇಮಕಗೊಂಡ ಹಾಲಿ ವಿಶ್ವಬ್ಯಾಂಕ್‌ ಅಧ್ಯಕ್ಷ ಡೇವಿಡ್ ಮಲ್ಪಾಸ್ (David Malpass) ಅವರ ಅವಧಿ ಜೂನ್‌ 2ಕ್ಕೆ ಅಂತ್ಯಗೊಳ್ಳಲಿದೆ. ನಂತರ ಬಂಗಾ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಇದನ್ನೂ ಓದಿ: Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

    World Bank 2

    ಯಾರು ಈ ಅಜಯ್‌ ಬಂಗಾ?
    ಮಹಾರಾಷ್ಟ್ರದ ಪುಣೆಯಲ್ಲಿ 1959ರ ನವೆಂಬರ್ 10 ರಂದು ಜನಿಸಿದ ಅಜಯ್‌ ಬಂಗಾ ಅವರ ತಂದೆ ಹರ್ಭಜನ್ ಸಿಂಗ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದನ್ನೂ ಓದಿ: ಅಕ್ರಮ ಆಸ್ತಿ ಸಂಪಾದನೆ – ಕೇಂದ್ರದ ಮಾಜಿ ನೌಕರ ಅರೆಸ್ಟ್‌

    ದೆಹಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಅವರು ಮುಂದೆ ಅಹಮದಾಬಾದ್‌ನ ಐಐಎಂನಲ್ಲಿ ಎಂಬಿಎ ಓದಿದ್ದಾರೆ. ಶಿಕ್ಷಣದ ಬಳಿಕ ನೆಸ್ಲೆಇಂಡಿಯಾ ಹಾಗೂ ಸಿಟಿಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದ ಇವರು 1996ರಲ್ಲಿ ಅಮೆರಿಕಕ್ಕೆ ತೆರಳಿ ಪೆಪ್ಸಿಕೋ ಕಂಪನಿಯಲ್ಲಿ 13 ವರ್ಷ ಸೇವೆ ಸಲ್ಲಿಸಿದ್ದರು. 2009ರಲ್ಲಿ ಅಧ್ಯಕ್ಷರಾಗಿ ಮಾಸ್ಟರ್‌ಕಾರ್ಡ್‌ ಕಂಪನಿ ಸೇರಿ ಬಳಿಕ ಅದರ ಸಿಇಒ ಆದರು. 2016ರಲ್ಲಿ ಮೋದಿ ನೇತೃತ್ವದ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

    ajay banga 3

    ಪ್ರಸ್ತುತ ಜನರಲ್ ಅಟ್ಲಾಂಟಿಕ್‍ ಕಂಪನಿಯ ಉಪಾಧ್ಯಕ್ಷರಾಗಿರುವ ಅಜಯ್‌ ಬಂಗಾ ಅವರು ಒಟ್ಟು 30 ವರ್ಷಗಳ ವ್ಯಾಪಾರ ಅನುಭವವನ್ನು ಹೊಂದಿದ್ದಾರೆ. ಬಂಗಾ ಅವರು ಸತತ 12 ವರ್ಷಗಳ ಕಾಲ ಮಾಸ್ಟರ್ ಕಾರ್ಡ್‍ನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿ 2021ನೇ ಡಿಸೆಂಬರ್‌ನಲ್ಲಿ ಹುದ್ದೆಯಿಂದ ಕೆಳಗಿಳಿದಿದ್ದರು. ಸಾಕಷ್ಟು ಪರಿಣತಿ ಹೊಂದಿರುವ ಬಂಗಾ ಅವರು ಅಮೆರಿಕ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿ 2015ರಲ್ಲಿ ವ್ಯಾಪಾರ ನೀತಿ ಮತ್ತು ಮಾತುಕತೆಗಳ ಸಲಹಾ ಮಂಡಳಿಯ ಅಧ್ಯಕ್ಷರನ್ನಾಗಿ ಅಂದಿನ ಅಧ್ಯಕ್ಷ ಬರಾಕ್‌ ಒಬಾಮಾ ನೇಮಿಸಿದ್ದರು.

  • Turkey, Syria Earthquakeː ವರ್ಲ್ಡ್ ಬ್ಯಾಂಕ್‌ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ

    Turkey, Syria Earthquakeː ವರ್ಲ್ಡ್ ಬ್ಯಾಂಕ್‌ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ

    ಅಂಕಾರ: ಸರಣಿ ಭೂಕಂಪಗಳಿಂದ ತತ್ತರಿಸುತ್ತಿರುವ ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶದ ನೆರವಿಗೆ ವಿಶ್ವಬ್ಯಾಂಕ್ (World Bank) ಧಾವಿಸಿದ್ದು, 1.78 ಬಿಲಿಯನ್ ಡಾಲರ್ ನೆರವು ಘೋಷಣೆ ಮಾಡಿದೆ.

    ಟರ್ಕಿ ಹಾಗೂ ಸಿರಿಯಾ ಮತ್ತೆ ಚೇತರಿಕೆ ಕಾಣಲು ಸಹಾಯ ಮಾಡುವ ಸಲುವಾಗಿ ವಿಶ್ವಬ್ಯಾಂಕ್ (World Bank) ನೆರವು ಘೋಷಣೆ ಮಾಡಿದೆ. ತಕ್ಷಣವೇ ಸಹಾಯ ಒದಗಿಸುತ್ತಿದ್ದೇವೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ತಿಳಿಸಿದ್ದಾರೆ. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    World Bank 2

    ಈ ಬೆನ್ನಲ್ಲೇ ಅಮೆರಿಕ (USA) ಸಹ 70.19 ಕೋಟಿ ರೂ. ನೆರವು ಘೋಷಣೆ ಮಾಡಿದೆ. ಲಕ್ಷಾಂತರ ಜನರಿಗೆ ತುರ್ತಾಗಿ ಅಗತ್ಯವಿರುವ ಆಹಾರ, ಆಶ್ರಯ, ಆರೋಗ್ಯ ಸೇವೆಗಳನ್ನು ಪೂರೈಸಲು ನೆರವು ನೀಡಲಾಗುತ್ತಿದೆ ಎಂದು ಹೇಳಿದೆ.

    ಸರಣಿ ಭೂಕಂಪಗಳಿಂದ (Earthquake) ತತ್ತರಿಸುತ್ತಿರುವ ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಮೆರಿಕ, ರಷ್ಯಾ, ಚೀನಾ ಭಾರತದ ರಕ್ಷಣಾ ತಂಡಗಳು ಭಾಗಿಯಾಗಿವೆ. ಬದುಕುಳಿದರ ಶೋಧಕ್ಕಾಗಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ

    USA

    ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ (Drone) ಕ್ಯಾಮೆರಾಗಳು ಮತ್ತು ರೋಬೋಟ್ ಗಳನ್ನು ಬಳಸಲಾಗುತ್ತಿದೆ. ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್‌ಗಳನ್ನ (Oxygen Pipe) ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಕೊಳ್ಳಲಾಗುತ್ತಿದೆ. ಗುರುವಾರ 44 ಗಂಟೆಗಳಿಂದ ಕಟ್ಟಡದ ಅವಶೇಷಗಳ ಅಡಿಯಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

    Earthquake

    ಮೃತರ ಸಂಖ್ಯೆ 21 ಸಾವಿರಕ್ಕೆ ಏರಿಕೆ: ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದೆ. ಸದ್ಯದಮಟ್ಟಿಗೆ ಟರ್ಕಿಯಲ್ಲಿ 17,674 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 3,377 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 70 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಸುಮಾರು 3 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಕಚ್ಚಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕಿಸ್ತಾನಕ್ಕೆ 195 ಮಿಲಿಯನ್‌ ಡಾಲರ್‌ ಸಾಲ ನೀಡಲು ವಿಶ್ವ ಬ್ಯಾಂಕ್‌ ಒಪ್ಪಿಗೆ

    ಪಾಕಿಸ್ತಾನಕ್ಕೆ 195 ಮಿಲಿಯನ್‌ ಡಾಲರ್‌ ಸಾಲ ನೀಡಲು ವಿಶ್ವ ಬ್ಯಾಂಕ್‌ ಒಪ್ಪಿಗೆ

    ವಾಷಿಂಗ್ಟನ್: ಪಾಕಿಸ್ತಾನಕ್ಕೆ 195 ಮಿಲಿಯನ್‌ ಡಾಲರ್‌ ಸಾಲ ನೀಡಲು ವಿಶ್ವ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರ ಮಂಡಳಿ ಒಪ್ಪಿಗೆ ಸೂಚಿಸಿದೆ.

    ವಿದ್ಯುಚ್ಛಕ್ತಿ ವಿತರಣೆ ಸುಧಾರಿಸಲು, ಗ್ರಾಹಕರಿಗೆ ಸೇವೆ ಗುಣಮಟ್ಟ ಹೆಚ್ಚಿಸಲು ಮತ್ತು ಇಂಧನ ಕ್ಷೇತ್ರದಲ್ಲಿ ಸುಧಾರಣೆ ತರಲು ಪಾಕಿಸ್ತಾನಕ್ಕೆ ಈ ಸಾಲ ನೀಡಲಾಗುತ್ತಿದೆ ಎಂದು ವಿಶ್ವ ಬ್ಯಾಂಕ್‌ ತಿಳಿಸಿದೆ.  ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

    imran khan web

    ಎಲೆಕ್ಟ್ರಿಸಿಟಿ ಡಿಸ್ಟ್ರಿಬ್ಯೂಷನ್‌ ಎಫಿಸಿಯೆನ್ಸಿ ಇಂಪ್ರೂವ್‌ಮೆಂಟ್‌ ಪ್ರಾಜೆಕ್ಟ್‌ (ಇಡಿಇಐಪಿ), ವಿದ್ಯುತ್ ಪೂರೈಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ವಿದ್ಯುತ್ ಗ್ರಿಡ್‌ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು, ವಿತರಣಾ ಕಂಪನಿಗಳ ಕಾರ್ಯಾಚರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಆದಾಯ ಸಂಗ್ರಹಣೆ ಹೆಚ್ಚಿಸಲು ಮತ್ತು ನಷ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ತಂತ್ರಜ್ಞಾನ ಮತ್ತು ಮಾಹಿತಿ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ ಕಾರ್ಯಾಚರಣೆಗಳನ್ನು ಆಧುನೀಕರಿಸುತ್ತದೆ. ನಿರ್ದಿಷ್ಟವಾಗಿ ಗ್ರಿಡ್ ಕೇಂದ್ರಗಳು, ಪ್ರಸರಣ ಮಾರ್ಗಗಳು, ವಿತರಣೆ ಮತ್ತು ಉಪಯುಕ್ತತೆ ಸೇವೆಗಳಿಗೆ ನಿರ್ಣಾಯಕವಾಗಿವೆ.

    ವಿದ್ಯುತ್ ಕ್ಷೇತ್ರದ ದೀರ್ಘಾವಧಿಯ ಆರ್ಥಿಕ ಕಾರ್ಯಸಾಧ್ಯತೆಯು ಗ್ರಾಹಕರಿಗೆ ವಿದ್ಯುತ್‌ ಸೇವೆಯನ್ನು ಒದಗಿಸುವ ವಿದ್ಯುಚ್ಛಕ್ತಿ ವಿತರಣಾ ಕಂಪನಿಗಳ ದಕ್ಷತೆಯ ಮೇಲೆ ಅವಲಂಬಿತವಾಗಿದೆ ಎಂದು ವಿಶ್ವಬ್ಯಾಂಕ್‌ನಲ್ಲಿರುವ ಪಾಕಿಸ್ತಾನ ಪ್ರತಿನಿಧಿ ನಜಿ ಬೆನ್ಹಸ್ಸಿನ್ ಹೇಳಿದ್ದಾರೆ. ಇದನ್ನೂ ಓದಿ: 40 ಸಾವಿರ ವರ್ಷಗಳಿಂದ ಭಾರತೀಯರ ಡಿಎನ್‌ಎ ಒಂದೇ ಆಗಿದೆ: ಆರ್‌ಎಸ್‌ಎಸ್‌ ಮುಖ್ಯಸ್ಥ

    Electricity

    ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್‌ ನೀಡಿರುವ ಸಾಲವು ವಿದ್ಯುಚ್ಛಕ್ತಿ ಕ್ಷೇತ್ರದ ಸುಧಾರಣೆ ಉದ್ದೇಶಕ್ಕಾಗಿದೆ.

  • ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಸಣ್ಣ ರೈತರಿಗೆ 10 ಸಾವಿರ – ಕೃಷಿಗೆ ಸಿಕ್ಕಿದ್ದು ಏನು?

    ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಸಣ್ಣ ರೈತರಿಗೆ 10 ಸಾವಿರ – ಕೃಷಿಗೆ ಸಿಕ್ಕಿದ್ದು ಏನು?

    ಬೆಂಗಳೂರು: ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಸಿಎಂ ಬಜೆಟ್ ಮಂಡಿಸಿದ್ದಾರೆ.

    ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಸಿಕ್ಕಿದ್ದೇನು?
    ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪ್ರತಿ ಹೆಕ್ಟೇರಿಗೆ 5000 ರೂ.ಗಳಂತೆ ಗರಿಷ್ಠ 10,000 ರೂ. ನೆರವು. ಹಾಪ್‍ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲು ಕ್ರಮ. ಕೊಳೆತು ಹೋಗಬಹುದಾದ ಹೂವು, ಹಣ್ಣು ತರಕಾರಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬಯಿ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲ್ ಯೋಜನೆಯ ಸೌಲಭ್ಯದ ಬಳಕೆ.

    201810072244356111 Punjab govt notifies Divisional Agriculture Debt Settlement SECVPF

    ನೀರಿನ ಭದ್ರತೆ, ಭೂ ಸಂಚಯ ಮತ್ತು ಸಾಮೂಹಿಕ ಕೃಷಿ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆಗೆ ಉತ್ತೇಜನ ನೀಡಲು ಮತ್ತು ಕೃಷಿ ಹಾಗೂ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಅನುಷ್ಠಾನ.

    “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ” ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4000 ರೂ. ಹೆಚ್ಚುವರಿ ನೆರವು ನೀಡುವ ಯೋಜನೆಯನ್ನು ಮುಂದುವರೆಸಲು 2600 ಕೋಟಿ ರೂ. ಅನುದಾನ. ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ.

    Women Farmers

    ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ರಾಜ್ಯದ ವಿಮಾ ಕಂತಿನ ಪಾಲು ಬಿಡುಗಡೆಗೆ 900 ಕೋಟಿ ರೂ. ರೈತ ಸಿರಿ ಯೋಜನೆಯಡಿ ಟೆಫ್, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳ ಸೇರ್ಪಡೆ.

    ಮಣ್ಣು, ನೀರು ಪರೀಕ್ಷೆ ಮತ್ತು ರೈತರಿಗೆ ತಾಂತ್ರಿಕ ನೆರವು ನೀಡಲು “ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್” ಪ್ರಾರಂಭ. ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ. ಅನುದಾನ. ರೈತರಿಗೆ ಪ್ರದೇಶವಾರು ಸೂಕ್ತ ಬೆಳೆಯನ್ನು ಬೆಳೆಯಲು, ಅಗತ್ಯ ಬೀಜಗಳು, ರಸಗೊಬ್ಬರಗಳು, ಸಣ್ಣ ಪೌಷ್ಟಿಕಾಂಶಗಳ ಬಳಕೆಗೆ ಮಾರ್ಗದರ್ಶನ ನೀಡಲು ಹೊಸ ನೀತಿ ರಚನೆ.

    UDP KRUSHI 4

    ರೈತರ ಸಾಮರ್ಥ್ಯ ಅಭಿವೃದ್ಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳಿಗಾಗಿ 40 ಪ್ರಾತ್ಯಕ್ಷಿಕೆ ಕ್ಷೇತ್ರಗಳ ಅಭಿವೃದ್ಧಿ. ಕೃಷಿ ಮಹಾಮಂಡಳಗಳು, ರಫ್ತುದಾರರು, ಆಹಾರ ಸಂಸ್ಕರಣಾ ಸಂಸ್ಥೆಗಳು ಮತ್ತು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್‍ಗಳ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಕ್ರಮ.

    ವಿಶ್ವಬ್ಯಾಂಕ್ ಪ್ರಾಯೋಜಿತ ಸುಜಲಾ-III ಯೋಜನೆಯನ್ನು ಜಾರಿಗೊಳಿಸಿರುವ 12 ಮಳೆ ಆಶ್ರಿತ ಜಿಲ್ಲೆಗಳ 2500 ಗ್ರಾಮಗಳ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಭೂ ಸಂಪನ್ಮೂಲ ಯಾದಿಯ ತರಬೇತಿ ನೀಡಿ, ಕಾರ್ಡ್ ವಿತರಿಸಲು 10 ಕೋಟಿ ರೂ. ಅನುದಾನ.

    HORTICULTURE 3

    ವಿಶ್ವಬ್ಯಾಂಕ್ ಅನುದಾನಿತ ಹೊಸ ಬಹು-ರಾಜ್ಯ ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ ಮುಂದಿನ ಆರು ವರ್ಷದ ಅವಧಿಗೆ ಕರ್ನಾಟಕ ರಾಜ್ಯ ಭಾಗಿ. ಅಂತರ್ಜಲ ಸ್ಥಿತಿ ಗಂಭೀರವಾಗಿರುವ 76 ತಾಲ್ಲೂಕುಗಳಲ್ಲಿ ಮುಂದಿನ ಮೂರು ವರ್ಷದಲ್ಲಿ ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ 810 ಅತಿ ಸಣ್ಣ ಜಲಾನಯನಗಳಲ್ಲಿ ಜಲಾಮೃತ ಯೋಜನೆ ಅನುಷ್ಠಾನ.

    ಸಾಗರದ ಇರುವಕ್ಕಿ ಗ್ರಾಮದಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಬಾಕಿ ಕಾಮಗಾರಿ ಪೂರ್ಣಗೊಳಿಸಿ, ತರಗತಿ ಪ್ರಾರಂಭಿಸಲು ಕ್ರಮ. ತೋಟಗಾರಿಕೆ ಉತ್ಪನ್ನಗಳ ಸಮರ್ಪಕ ಕೊಯ್ಲೋತ್ತರ ನಿರ್ವಹಣೆಗೆ ವಿವಿಧ ಜಿಲ್ಲೆಗಳ 10 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ 5000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹಗಳ ನಿರ್ಮಾಣ.

  • ಅಮರಾವತಿ ಯೋಜನೆಗೆ 2.5 ಸಾವಿರ ಕೋಟಿ ಸಾಲ ನೀಡಲು ವಿಶ್ವಬ್ಯಾಂಕ್ ಹಿಂದೇಟು

    ಅಮರಾವತಿ ಯೋಜನೆಗೆ 2.5 ಸಾವಿರ ಕೋಟಿ ಸಾಲ ನೀಡಲು ವಿಶ್ವಬ್ಯಾಂಕ್ ಹಿಂದೇಟು

    ಅಮರಾವತಿ: ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಯನ್ನು ವಿಶ್ವಬ್ಯಾಂಕ್ ಕೈ ಬಿಟ್ಟಿದ್ದು, ಇದರಿಂದ ಆಂಧ್ರದ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ಅಡ್ಡಿ ಎದುರಾಗಿದೆ.

    world bank 1

    ಈ ಹಿಂದೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಗೆ ವಿಶ್ವಬ್ಯಾಂಕ್ ಸುಮಾರು 300 ಮಿಲಿಯನ್ ಡಾಲರ್(2.5 ಸಾವಿರ ಕೋಟಿ ರೂ.) ಸಾಲ ನೀಡಲು ಒಪ್ಪಿಕೊಂಡಿತ್ತು. ಆದರೆ ಈಗ ಈ ಯೋಜನೆಯನ್ನು ಕೈಬಿಡಲಾಗಿದೆ ಎಂದು ವಿಶ್ವಬ್ಯಾಂಕ್ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ತೋರಿಸುತ್ತಿದೆ. ಅಲ್ಲದೆ ಯೋಜನೆಗೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್ ಅಧಿಕಾರಿಗಳು ಕೂಡ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ, ಜೊತೆಗೆ ಈ ಬಗ್ಗೆ ಯಾವುದೇ ಕಾರಣವನ್ನು ಸ್ಪಷ್ಟಪಡಿಸಿಲ್ಲ.

    amaravati project 2

    ರಾಜಧಾನಿ ಅಭಿವೃದ್ಧಿಗಾಗಿ ಅಮರಾವತಿ ವಲಯದಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ರೈತರು ದೂರು ದಾಖಲಿಸಿದ್ದರು. ಈ ದೂರನ್ನು ವಿಶ್ವಬ್ಯಾಂಕ್ ಪರಿಗಣನೆಗೆ ತೆಗೆದುಕೊಂಡಿದ್ದು, ಸಾಲ ನೀಡುವ ಒಪ್ಪಂದ ಕೈ ಬಿಡುವ ಬಂದಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

    chandrababu naidu

    ಟಿಡಿಪಿ(ತೆಲುಗು ದೇಶಂ ಪಕ್ಷ) ಸರ್ಕಾರವಿದ್ದಾಗ ಕೃಷ್ಣ ನದಿಗೆ ಹತ್ತಿರವಾಗಿರುವ ಅಮರಾವತಿ ಪ್ರದೇಶ ಅಭಿವೃದ್ಧಿ ಯೋಜನೆಗಾಗಿ ಬಲವಂತವಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದನ್ನು ವಿರೋಧಿಸಿ ಅನೇಕ ಎನ್‍ಜಿಓಗಳು ಹಾಗೂ ಪರಿಸರವಾದಿಗಳು ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿ, ವಿರೋಧ ವ್ಯಕ್ತಪಡಿಸಿದ್ದರು.

    amaravati project 3

    ಚಂದ್ರಬಾಬು ನಾಯ್ಡು ಸರ್ಕಾರವು ಇದನ್ನು ನರೇಂದ್ರ ಮೋದಿ ಸರ್ಕಾರ 2016 ರಲ್ಲಿ ಘೋಷಿಸಿದ ವಿಶೇಷ ಸಹಾಯ ಕ್ರಮಗಳ ಅಡಿಯಲ್ಲಿ, ಬಾಹ್ಯ ನೆರವಿನ ಯೋಜನೆಗಳ ಅಡಿಯಲ್ಲಿ ಪಟ್ಟಿಮಾಡಿದೆ ಎಂದು ವರದಿಯಾಗಿದೆ, ಆದ್ದರಿಂದಾಗಿ ಸಾಲ ಮರುಪಾವತಿ ಹೊರೆಯನ್ನು ಕೇಂದ್ರವು ತೆಗೆದುಕೊಳ್ಳಬೇಕಿತ್ತು.

    amaravati project 1

    ಬಾಹ್ಯ ನೆರವಿನ ಯೋಜನೆಯ ಪ್ರಸ್ತಾವನೆಯಂತೆ ಅಮರಾವತಿ ಯೋಜನೆಗೆ ವಿಶ್ವಬ್ಯಾಂಕ್ 300 ಮಿಲಿಯನ್ ಡಾಲರ್ (ಸುಮಾರು 2.5 ಸಾವಿರ ಕೋಟಿ) ಹಾಗೂ ಎಐಐಬಿ 200 ಮಿಲಿಯನ್ ಡಾಲರ್ ಸಾಲ ನೀಡಲು ಒಪ್ಪಿಗೆ ಸೂಚಿಸಿದ್ದವು. ಆದರೆ ಇತ್ತ ವಿಶ್ವಬ್ಯಾಂಕ್ ಈ ಯೋಜನೆ ಕೈ ಬಿಟ್ಟಿದೆ, ಅತ್ತ ಎಐಐಬಿ ಇನ್ನೂ ತನ್ನ ನಿರ್ಧರದ ಬಗ್ಗೆ ಸ್ಪಷ್ಟಪಡಿಸಿಲ್ಲ. ಹೀಗಾಗಿ ಅಮರಾವತಿ ಯೋಜನೆ ಕಾರ್ಯರೂಪಕ್ಕೆ ಬರುವುದು ಕೊಂಚ ಅನುಮಾನವಾಗಿದೆ.

  • ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ

    ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ

    ನವದೆಹಲಿ: 500, 1 ಸಾವಿರ ರೂ. ನೋಟು ಮತ್ತು ಜಿಎಸ್‍ಟಿಯಿಂದ ದೇಶದ ಅರ್ಥವ್ಯವಸ್ಥೆ ಅಧಃಪತನಗೊಂಡಿದೆ. ಅಭಿವೃದ್ಧಿ ಹಳ್ಳ ಹಿಡಿದಿದೆ ಎಂದು ಮೋದಿ ಸರ್ಕಾರವನ್ನು ಟೀಕಿಸಿದ್ದ ಜನ ಈಗ ಬಾಯಿಮುಚ್ಚಿಕೊಳ್ಳುವ ವರದಿ ಪ್ರಕಟವಾಗಿದೆ.

    ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಉದ್ಯಮ ವಹಿವಾಟುಗಳನ್ನು ಸುಲಭವಾಗಿ ಆರಂಭಿಸಿ ನಿರ್ವಹಿಸಲು ನೆರವಾಗುವ ವಿಷಯದಲ್ಲಿ ಭಾರತ, ಜಾಗತಿಕ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿಕೆಯಾಗಿ 100ನೇ ಸ್ಥಾನಕ್ಕೆ ಜಿಗಿದಿದೆ.

    2015ರಲ್ಲಿ ಭಾರತಕ್ಕೆ 130ನೇ ಸ್ಥಾನ ಸಿಕ್ಕಿತ್ತು. 2016ರಲ್ಲೂ ಭಾರತದ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಏಷ್ಯಾ ರಾಷ್ಟ್ರಗಳ ಪೈಕಿ ಚೀನಾ ಈ ಪಟ್ಟಿಯಲ್ಲಿ 78ನೇ ಸ್ಥಾನ ಸಿಕ್ಕಿದೆ.

    ಉದ್ದಿಮೆ ವಹಿವಾಟು ಆರಂಭಿಸಲು ಅನುಕೂಲತೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಹಲವಾರು ಮಾನದಂಡಗಳನ್ನು ಆಧರಿಸಿ ವಿಶ್ವಬ್ಯಾಂಕ್ 190 ದೇಶಗಳ ಆರ್ಥಿಕತೆಗಳನ್ನು ಲೆಕ್ಕಹಾಕಿ ಪ್ರತಿವರ್ಷ ಶ್ರೇಯಾಂಕ ಪಟ್ಟಿಯನ್ನು ನೀಡುತ್ತದೆ.

    ಯಾವ ವರ್ಷ ಎಷ್ಟನೇ ಶ್ರೇಯಾಂಕ?
    132(2012), 132(2013), 134(2014), 130(2015), 130(2016), 100(2017)

  • ಭಾರತದ ಆರ್ಥಿಕ ಹಿನ್ನಡೆ ತಾತ್ಕಾಲಿಕ: ಮೋದಿಗೆ ವಿಶ್ವಬ್ಯಾಂಕ್ ಬೆಂಬಲ

    ಭಾರತದ ಆರ್ಥಿಕ ಹಿನ್ನಡೆ ತಾತ್ಕಾಲಿಕ: ಮೋದಿಗೆ ವಿಶ್ವಬ್ಯಾಂಕ್ ಬೆಂಬಲ

    ವಾಷಿಂಗ್ಟನ್: ಭಾರತದ ಇತ್ತೀಚಿನ ಆರ್ಥಿಕ ಹಿನ್ನಡೆ ತಾತ್ಕಾಲಿಕ. ಶೀಘ್ರ ಸಹಜ ಸ್ಥಿತಿಗೆ ಮರಳಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

    ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭಾರತದ ಇತ್ತೀಚಿನ ಆರ್ಥಿಕ ಹಿನ್ನಡೆ ತಾತ್ಕಾಲಿಕ. ಸರಕು ಮತ್ತು ಸೇವಾ(ಜಿಎಸ್‍ಟಿ) ಅನುಷ್ಠಾನಕ್ಕೆ ತಂದ ಕಾರಣ ಜಿಡಿಪಿ ಕುಸಿತವಾಗಿದೆ. ಇದು ಕೆಲವೇ ತಿಂಗಳಲ್ಲಿ ಸರಿಯಾಗಲಿರುವ ಸಮಸ್ಯೆ ಎಂದು ಉತ್ತರಿಸಿದರು.

    ಭಾರತದ ಆರ್ಥಿಕ ಹಿನ್ನಡೆಗೆ ಜಿಎಸ್‍ಟಿ ಮತ್ತು ನೋಟು ರದ್ದತಿ ಕಾರಣ ಎಂಬ ವಿರೋಧ ಪಕ್ಷಗಳ ಟೀಕೆಯ ಪ್ರಶ್ನೆಗೆ, ಭಾರತೀಯ ಆರ್ಥಿಕತೆಯ ಮೇಲೆ ಕೆಲವೇ ದಿನಗಳಲ್ಲಿ ಜಿಎಸ್‍ಟಿ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.

    ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಭಾರತದ ಅಭಿವೃದ್ಧಿಗೆ ಬೆಂಬಲ ನೀಡಲಾಗುವುದು. ಅಭಿವೃದ್ಧಿಯತ್ತ ನಡೆಯುತ್ತಿರುವ ರಾಷ್ಟ್ರಗಳು ಹಿಂದೆ ಬೀಳಬಾರದು. ದೇಶದ ಜನರು ಬಂಡವಾಳ ಹೂಡಿಕೆ ಮಾಡಲು ಮುಂದೆ ಬರಬೇಕು. ನೈಸರ್ಗಿಕ ವಿಕೋಪ, ವಾತಾವರಣ ಬದಲಾವಣೆ ಇನ್ನಿತ್ಯಾದಿಗಳಿಂದ ಚೇತರಿಸಿಕೊಂಡು ಪ್ರಗತಿಯನ್ನ ಕಾಣಬೇಕು ಎಂದು ಕಿಮ್ ಸಲಹೆ ನೀಡಿದರು.

    ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವೈಯಕ್ತಿಕವಾಗಿ ತಿಳಿದಿದೆ. ಮೋದಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರ ತರುವುದಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರ ಸೇರಿದಂತೆ ಹಲವು ಸವಾಲುಗಳು ಭಾರತದಲ್ಲಿದೆ ಎಂದರು.

    ವಿಶ್ವಬ್ಯಾಂಕ್ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಡುವಲ್ಲಿ ಯಶಸ್ವಿಯಾಗಿದೆ. ತಂತ್ರಜ್ಞಾನದಿಂದಲೂ, ಹಣಕಾಸಿನಿಂದಲೂ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಸಹಾಯ ಮಾಡುತ್ತಿದೆ. ಅಂತೆಯೇ ಭಾರತಕ್ಕೂ ವಿವಿಧ ಹಂತಗಳಲ್ಲಿ ಸಹಾಯ ಮಾಡಲು ಸಿದ್ದವಿದೆ. ಮೋದಿ ಹಾಗೂ ಭಾರತದ ಬೆನ್ನೆಲುಬಾಗಿ ವಿಶ್ವಬ್ಯಾಂಕ್ ನಿಲ್ಲಲಿದೆ ಎಂದು ಭರವಸೆ ನೀಡಿದರು.

  • ಮೋದಿಯ ನೋಟ್ ಬ್ಯಾನ್ ನಿರ್ಧಾರವನ್ನು ಹೊಗಳಿದ ವಿಶ್ವ ಬ್ಯಾಂಕ್ ಸಿಇಒ

    ಮೋದಿಯ ನೋಟ್ ಬ್ಯಾನ್ ನಿರ್ಧಾರವನ್ನು ಹೊಗಳಿದ ವಿಶ್ವ ಬ್ಯಾಂಕ್ ಸಿಇಒ

    ನವದೆಹಲಿ: ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಜಾಯೋರ್‍ಜಿವಾ ಪ್ರಧಾನಿ ನರೇಂದ್ರ ಮೋದಿ ಅವರ 500-1000 ಮುಖಬೆಲೆಯ ಹಳೆಯ ನೋಟುಗಳ ನಿಷೇಧ ನಿರ್ಧಾರವನ್ನು ಹೊಗಳಿದ್ದಾರೆ.

    ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಕ್ರಿಸ್ಟಾಲಿನಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಆರಂಭದ ದಿನದಲ್ಲಿ ಈ ನಿರ್ಧಾರದಿಂದ ಸಮಸ್ಯೆಯಾದರೂ ಭವಿಷ್ಯದಲ್ಲಿ ಡಿಜಿಟಲ್ ಆರ್ಥಿಕತೆಯ ಮೂಲಕ ದೇಶಕ್ಕೆ ಒಳ್ಳೆದಾಗಲಿದೆ. ಭಾರತದ ಈ ನಡೆಯನ್ನು ಇತರ ದೇಶಗಳು ಕೂಡ ಅಧ್ಯಯನ ಮಾಡಲಿವೆ ಎಂದು ತಿಳಿಸಿದರು.

    ಭ್ರಷ್ಟಾಚಾರ ತಡೆಗಟ್ಟಲು ತೆಗೆದುಕೊಂಡಿರುವ ನೋಟ್ ಬ್ಯಾನ್ ನಿರ್ಧಾರ ಭಾರತದ ಆರ್ಥಿಕತೆಯ ಮೇಲೆ ಉತ್ತಮ ಧನಾತ್ಮಕ ಪರಿಣಾಮ ಬೀರಲಿದೆ. ಇಲ್ಲಿನ ಬೆಳವಣಿಗೆ ಜಗತ್ತಿನ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಕಾರಣ ನಮಗೆ ಭಾರತವು ಮುಖ್ಯವಾಗುತ್ತದೆ ಎಂದು ಹೇಳಿದರು.

    ನೋಟು ಬ್ಯಾನ್ ಆದ ಬಳಿಕ ದೇಶದ ಜಿಡಿಪಿ ಭಾರೀ ಕುಸಿಯಲಿದೆ ಎಂದು ಆರ್ಥಿಕ ಪಂಡಿತರು ವಿಶ್ಲೇಷಿಸಿದ್ದರು. ಆದರೆ ಅಕ್ಟೋಬರ್ ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಶೇ.7.0ರಷ್ಟು ದಾಖಲಿಸಿತ್ತು. ಈ ಮೂಲಕ ಆರ್ಥಿಕ ಅಭಿವೃದ್ಧಿ ದರದಲ್ಲಿ ವಿಶ್ವದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಭಾರತ ಮುಂದುವರಿದಿದೆ. ಈ ಅವಧಿಯಲ್ಲಿ ಚೀನಾ ಜಿಡಿಪಿ ದರ ಶೇ.6.8 ಸಾಧಿಸಿದ್ದು, ಎರಡನೇ ಸ್ಥಾನದಲ್ಲಿ ಮುಂದುವರಿದಿದೆ.

    ಮಂಗಳವಾರ ಕೇಂದ್ರಿಯ ಅಂಕಿ ಅಂಶ ಕಾರ್ಯಾಲಯ(ಸಿಎಸ್‍ಒ) ಜಿಡಿಪಿ ಮಾಹಿತಿಯನ್ನು ಬಿಡುಗಡೆ ಮಾಡಿ, 2017ರ ಮಾರ್ಚ್ ನಲ್ಲಿ ಅಂತ್ಯವಾಗುವ ಹಣಕಾಸು ವರ್ಷಕ್ಕೆ ಜಿಡಿಪಿ ದರ ಶೇ.7.1 ರಷ್ಟು ದಾಖಲಾಗಲಿದೆ ಎಂದು ಅಂದಾಜಿಸಿದೆ.

    2016-17 ಹಣಕಾಸು ವರ್ಷದ ಏಪ್ರಿಲ್- ಜೂನ್‍ನಲ್ಲಿ ಶೇ.7.2, ಜುಲೈ- ಸೆಪ್ಟೆಂಬರ್‍ನಲ್ಲಿ ಶೇ.7.4 ರಷ್ಟು ಜಿಡಿಪಿ ಪ್ರಗತಿ ಸಾಧಿಸಿತ್ತು.

    ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆ ನೋಟುಗಳನ್ನು ನಿಷೇಧಿಸಿದ ಬಳಿಕ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತದ ಜಿಡಿಪಿ ಇಳಿಕೆಯಾಗಲಿದೆ ಎಂದು ಹೇಳಿತ್ತು. 2015 -16ರಲ್ಲಿ ಶೇ. 7.6 ರಷ್ಟಿದ್ದ ಜಿಡಿಪಿ ದರ 2016- 17ರಲ್ಲಿ ಶೇ 6.6 ರಷ್ಟು ಕಡಿಮೆ ಮಟ್ಟದಲ್ಲಿರಲಿದೆ ಎಂದು ಅದು ತಿಳಿಸಿತ್ತು.