Tag: ವಿದ್ಯಾಪೀಠ ಎಕ್ಸ್‌ಪೋ

  • ಪಬ್ಲಿಕ್ ಟಿವಿಯ ವಿದ್ಯಾಪೀಠ 5ನೇ ಆವೃತ್ತಿ – 2ನೇ ದಿನವೂ ಸಕ್ಸಸ್

    ಪಬ್ಲಿಕ್ ಟಿವಿಯ ವಿದ್ಯಾಪೀಠ 5ನೇ ಆವೃತ್ತಿ – 2ನೇ ದಿನವೂ ಸಕ್ಸಸ್

    ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಪಡಿಸಿರುವ ವಿದ್ಯಾಪೀಠ 5ನೇ ಆವೃತ್ತಿ ಎಜುಕೇಶನ್ ಎಕ್ಸ್‌ಪೋಗೆ 2ನೇ ದಿನವಾದ ಶನಿವಾರವೂ ಉತ್ತಮ ಸ್ಪಂದನೆ ದೊರೆಯಿತು.

    Minister

    2ನೇ ದಿನವೂ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿ ಶೈಕ್ಷಣಿಕ ಮಾಹಿತಿ ಪಡೆದುಕೊಂಡಿದ್ದಾರೆ. 500-600 ಕಿ.ಮೀ. ದೂರದಲ್ಲಿರುವ ಬೆಳಗಾವಿ, ವಿಜಯಪುರ ಜಿಲ್ಲೆಗಳಿಂದಲೂ ಬಂದು ವಿದ್ಯಾರ್ಥಿಗಳು, ಪೋಷಕರು ಮಾಹಿತಿ ಪಡೆದುಕೊಂಡಿದ್ದು ವಿಶೇಷ.  ಇದನ್ನೂ ಓದಿ: ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಪಾಕ್ ಕ್ರಿಕೆಟಿಗ ಶೆಹ್‌ಝಾದ್

    EXpo 1

    ಏನೇನು ವಿಶೇಷತೆ?
    ಎಕ್ಸೋನಲ್ಲಿ ಮೊದಲ ದಿನದಂತೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಬೆಳಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಇದಾದ ಬಳಿಕ ಸಿಇಟಿ ಹಾಗೂ ಕಾಮೆಡ್-ಕೆ ಕುರಿತು ಕುಮಾರ್ ಹಾಗೂ ರವಿ ಮಾಹಿತಿ ತಿಳಿಸಿಕೊಟ್ಟರು. ಮಧ್ಯಾಹ್ನ ಚಿಂತಕ ಹಾಗೂ ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ಯಾನಲ್ ಚರ್ಚೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಇದೇ ವೇಳೆ ಭಾರತದ ಸ್ಟಾರ್ಟ್ಅಪ್ ಉದ್ಯಮದ ಬಗ್ಗೆ ತಿಳಿಸಿಕೊಟ್ಟರು. ಬಳಿಕ ಯುವ ಸಾಧಕರನ್ನ ಪರಿಚಯಿಸಿದರು. ಸಂಗೀತ ನಿರ್ದೇಶಕ ಮತ್ತು ಎರಡು ಬಾರಿ ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕ್ಕಿ ಕೇಜ್ ಕೂಡ ವಿದ್ಯಾಪೀಠದ ಹೈಲೈಟ್ ಆಗಿದ್ದರು.

    ಲಕ್ಕಿ ಡಿಪ್ ವಿದ್ಯಾರ್ಥಿಗಳ ಆಕರ್ಷಣೆ: ವಿದ್ಯಾರ್ಥಿಗಳ ಕಲರವದಿಂದ ಕೂಡಿದ್ದ ಎಕ್ಸ್‌ಪೋನಲ್ಲಿ ಸ್ಲೋ ಸೈಕ್ಲಿಂಗ್, ರಸಪ್ರಶ್ನೆ ಕಾರ್ಯಕ್ರಮಗಳನ್ನೂ ನಡೆಸಿಕೊಡಲಾಯಿತು. ಫನ್ ಗೇಮ್ಸ್ನಲ್ಲಿ ಉತ್ಸಾಹದಿಂದಲೇ ಭಾಗವಹಿಸಿದ್ದ ವಿದ್ಯಾರ್ಥಿಗಳು ಬಹುಮಾನ ಗೆದ್ದು ಬೀಗಿದರು. ಮುಖ್ಯವಾಗಿ ಪ್ರತಿ ಅರ್ಧ ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಬಹುಮಾನ ನೀಡುತ್ತಿದ್ದ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರಮುಖ ಆಕರ್ಷಣೆಯಾಗಿತ್ತು.

    ಕೊನೆ ದಿನವಾದ ಭಾನುವಾರ 10:30ರಿಂದ 12 ಗಂಟೆ ವರೆಗೆ ಡಾ.ರಫೀವುಲ್ಲಾ ಬೇಗ್ ಹ್ಯಾಂಡ್ ರೈಟಿಂಗ್ ಅಂಡ್ ಮೆಮೊರಿ ಮಾಹಿತಿ, ಡಾ. ಸುಜಾತ ರಾಥೋಡ್ ರಿಂದ ನೀಟ್ ಕುರಿತು ಸೆಮಿನಾರ್ ಇರಲಿದೆ.

    Live Tv

  • ವಿದ್ಯಾಪೀಠ 5ನೇ ಆವೃತ್ತಿಗೆ ಅದ್ಧೂರಿ ಚಾಲನೆ- ಮೊದಲ ದಿನವೇ ವಿದ್ಯಾರ್ಥಿಗಳು, ಪೋಷಕರ ಸಾಗರ

    ವಿದ್ಯಾಪೀಠ 5ನೇ ಆವೃತ್ತಿಗೆ ಅದ್ಧೂರಿ ಚಾಲನೆ- ಮೊದಲ ದಿನವೇ ವಿದ್ಯಾರ್ಥಿಗಳು, ಪೋಷಕರ ಸಾಗರ

    ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಪಡಿಸಿರುವ ವಿದ್ಯಾಪೀಠ 5ನೇ ಆವೃತ್ತಿ ಎಜುಕೇಶನ್ ಎಕ್ಸ್‌ಪೋ ಗೆ ಶುಕ್ರವಾರ ಅದ್ಧೂರಿ ಚಾಲನೆ ದೊರೆತಿದ್ದು, ಮೊದಲ ದಿನವೇ ಯಶಸ್ವಿಯಾಗಿದೆ.

    ವಿದ್ಯಾಪೀಠ ಎಕ್ಸ್ಪೋ 5ನೇ ಆವೃತ್ತಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಮತ್ತು ಮುಖ್ಯ ಅತಿಥಿಗಳು ಚಾಲನೆ ನೀಡಿದರು. ಗಾರ್ಡನ್ ಸಿಟಿ ವಿವಿಯ ಚಾನ್ಸಲರ್ ಡಾ.ವಿ.ಜೆ.ಜೋಸೆಫ್, ರಾಮಯ್ಯ ಕಾಲೇಜ್ ವಿವಿ ಕುಲಪತಿ ಡಾ.ಕುಲದೀಪ್ ರೈನಾ, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್‌ನ ಅಧ್ಯಕ್ಷ ರಾಜೀವ್ ಗೌಡ, ನಿತಿನ್ ಮೋಹನ್, ಅದ್ವಿತೀಯ ಉದಯ್ ಭಾಗವಹಿಸಿ, ಮೊದಲ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

    EXPO 02

    ಸಾವಿರಾರು ವಿದ್ಯಾರ್ಥಿಗಳು ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಗವಹಿಸಿ ಶೈಕ್ಷಣಿಕ ಮಾಹಿತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ಸಾಗರೋಪಾದಿಯಲ್ಲಿ ಹರಿದುಬಂದರು. ಇದನ್ನೂ ಓದಿ: ವಿದ್ಯಾಪೀಠಕ್ಕೆ ಇಂದು ಚಾಲನೆ – 3 ದಿನಗಳ ಶೈಕ್ಷಣಿಕ ಮೇಳಕ್ಕೆ ಬನ್ನಿ

    ಎಕ್ಸ್‌ಪೋ 5ನೇ ಆವೃತ್ತಿಯಲ್ಲಿ 80ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗವಹಿಸಿವೆ. ವಿವಿಧ ಕೋರ್ಸ್‌ಗಳ ಮಾಹಿತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ತಜ್ಞರು, ಸಾಧಕರಿಂದ ಆತ್ಮಸ್ಥೈಯ ಮೂಡಿಸುವ ಉಪನ್ಯಾಸಗಳನ್ನು ನೀಡಲಾಗಿದೆ.

    EXPO

    ಮೊದಲ ದಿನ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ Build Confidence Through Value Based Education ಕುರಿತು ಉಪನ್ಯಾಸ ನೀಡಿದರು. ನಂತರ ಐಎಎಸ್ ಟಾಪರ್‌ಗಳಾದ ರಾಜೇಶ್ ಪೊನ್ನಪ್ಪ ಹಾಗೂ ಅರುಣ ಅವರು ತಮ್ಮ ಸಾಧನೆಯೊಂದಿಗೆ ವಿದ್ಯಾರ್ಥಿಗಳಿಗೆ ಸಲಹೆಗಳನ್ನೂ ನೀಡಿದರು. ಇದೇ ವೇಳೆ ಎಕ್ಸ್‌ಪೋ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾರ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ರಾಜ್ಯದಲ್ಲಿ ಇಂದು 816 ಮಂದಿಗೆ ಕೊರೊನಾ- ಸಾವಿನ ಪ್ರಕರಣ ಶೂನ್ಯ

    ಸಿನಿ ತಾರೆಯರಿಂದಲೂ ಶುಭಹಾರೈಕೆ: ಎಕ್ಸ್‌ಪೋ ದಲ್ಲಿ ಭಾಗವಹಿಸಿದ್ದ ನಟ, ನಿರ್ದೇಶಕ ರಿಷಭ್ ಶೆಟ್ಟಿ, ನಟ ರಾಜು ಬಿ.ಶೆಟ್ಟಿ, ನಟಿ ಸುಧಾರಾಣಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

    ಒಟ್ಟಾರೆ ಮೊದಲ ದಿನದ ಎಕ್ಸ್‌ಪೋ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನೂ ಎರಡು ದಿನಗಳ ಕಾಲ ಎಕ್ಸ್‌ಪೋ ನಡೆಯಲಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

    Live Tv