Tag: ವಿಕ್ರಮ್ ಸಿನಿಮಾ

  • ರಜನಿಕಾಂತ್ ಮನೆಯಲ್ಲಿ ಕಾಣಿಸಿಕೊಂಡ ಕಮಲ್ ಹಾಸನ್: ಕುತೂಹಲ ಮೂಡಿಸಿದ ಭೇಟಿ

    ರಜನಿಕಾಂತ್ ಮನೆಯಲ್ಲಿ ಕಾಣಿಸಿಕೊಂಡ ಕಮಲ್ ಹಾಸನ್: ಕುತೂಹಲ ಮೂಡಿಸಿದ ಭೇಟಿ

    ರಡು ದಿನಗಳ ಹಿಂದೆಯಷ್ಟೇ ‘ನಾನು ಎಂದಿಗೂ ರಜನಿಕಾಂತ್ ಅವರನ್ನು ದ್ವೇಷಿಸಿಲ್ಲ. ಅವರು ನನ್ನ ವೈರಿಯಲ್ಲ’ ಎಂದು ಕಮಲ್ ಹಾಸನ್ ಹೇಳಿದ ಬೆನ್ನೆಲ್ಲೇ, ರಜನಿ ಮನೆಗೆ ಕಮಲ್ ಹೋಗಿದ್ದಾರೆ. ಮನೆಗೆ ಬಂದ ಅತಿಥಿಯನ್ನು ಆತ್ಮೀಯವಾಗಿಯೇ ಬರಮಾಡಿಕೊಂಡಿದ್ದಾರೆ ರಜನಿ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ : ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ

    kamal and rajani 2

    ರಜನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟೊಟ್ಟಿಗೆ ಸಿನಿಮಾ ರಂಗದಲ್ಲಿ ಬದುಕು ಕಟ್ಟಿಕೊಂಡವರು. ಒಟ್ಟೊಟ್ಟಿಗೆ ಸಿನಿಮಾ ಮಾಡಿದವರು. ಒಂದೇ ದಿನಕ್ಕೆ ಇಬ್ಬರೂ ಸಿನಿಮಾಗಳನ್ನು ರಿಲೀಸ್ ಮಾಡಿ ತೊಡೆತಟ್ಟಿದವರು. ಹೀಗಾಗಿ ಇಬ್ಬರ ಫ್ಯಾನ್ಸ್ ಕೂಡ ಆಗಾಗ್ಗೆ ಫ್ಯಾನ್ಸ್ ವಾರ್ ಮಾಡಿದ್ದಿದೆ. ನಮ್ಮಿಬ್ಬರ ಮಧ್ಯೆ ವೈರತ್ವ ಇಲ್ಲವೆಂದು ಇಬ್ಬರೂ ಹೇಳಿಕೊಂಡರೂ, ಅಭಿಮಾನಿಗಳು ಮಾತ್ರ ಅದನ್ನು ನಂಬಲು ತಯಾರಿಲ್ಲ. ಇದನ್ನೂ ಓದಿ : ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ

    rajanikanth 1 1

    ಸದ್ಯ ಕಮಲ್ ಹಾಸನ್ ನಟನೆಯ ‘ವಿಕ್ರಮ್ ‘ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ವಾರವೇ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ರಜನಿಕಾಂತ್ ಮನೆಗೆ ಕಮಲ್ ಹಾಸನ್ ಭೇಟಿ ನೀಡಿದ್ದಾರೆ. ವಿಕ್ರಮ್ ಸಿನಿಮಾ ನೋಡುವಂತೆ ಆಹ್ವಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ರಜನಿ ಅಭಿಮಾನಿಗಳು ಕೂಡ ವಿಕ್ರಮ್ ಸಿನಿಮಾವನ್ನು ನೋಡಬಹುದು ಎನ್ನುವ ಅಂದಾಜಿದೆ. ಇದನ್ನೂ ಓದಿ : ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾ ಫಸ್ಟ್ ಲುಕ್ ರಿಲೀಸ್

    kamal and rajani 1

    ದಕ್ಷಿಣದಲ್ಲಿ ಕಮಲ್ ನಟನೆಯ ವಿಕ್ರಮ್ ಚಿತ್ರ ರಿಲೀಸ್ ಆಗುತ್ತಿದ್ದರೆ, ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಅವರ ಸಾಮ್ರಾಟ್ ಫೃಥ್ವಿರಾಜ್ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಆ ಸಿನಿಮಾ ಕೂಡ ನಿರೀಕ್ಷೆಯನ್ನು ಹೆಚ್ಚಿಸಿದೆ. ಹೀಗಾಗಿ ಸಹಜವಾಗಿಯೇ ಎರಡೂ ಚಿತ್ರಗಳ ಮಧ್ಯೆ ಪೈಪೋಟಿ ನಡೆಯಲಿದೆ. ಎರಡು ಸಿನಿಮಾಗಳಲ್ಲಿ ಪ್ರೇಕ್ಷಕ ಯಾರಿಗೆ ಒಲಿಯುತ್ತಾನೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

  • ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಖ್ಯಾತ ನಟ ಕಮಲ್ ಹಾಸನ್ ಒಟ್ಟಿಗೆ ಸಿನಿಮಾ ರಂಗಕ್ಕೆ ಬಂದವರು. ಅದರಲ್ಲೂ ಅನೇಕ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅದರಲ್ಲೂ ರಜನಿಯ ಮೊದಲ ಸಿನಿಮಾ ಅಪೂರ್ವ ರಾಗಂಗಳ್ ಚಿತ್ರದಲ್ಲಿ ಕಮಲ್ ಹಾಸನ್ ಕೂಡ ಪಾತ್ರ ನಿರ್ವಹಿಸಿದ್ದಾರೆ. ಇಷ್ಟಿದ್ದೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಎನ್ನುವ ಸುದ್ದಿ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    kamal haasan and rajinikanth 3

    ರಜನಿ ಮತ್ತು ಕಮಲ್ ಹಾಸನ್ ಸಿನಿಮಾಗಳು ಒಟ್ಟಿಗೆ ರಿಲೀಸ್ ಆದಾಗ, ಇಬ್ಬರ ಅಭಿಮಾನಿಗಳು ಹೊಡೆದಾಡಿಕೊಂಡಿದ್ದುಇದೆ. ಫ್ಯಾನ್ಸ್ ವಾರ್ ಗೆ ಹೆಸರಾದ ನಟರು ಇವರು. ಇಂತಿಪ್ಪ ರಜನಿ ಮತ್ತು ಕಮಲ್ ಹಾಸನ್ ಯಾವತ್ತು ವೈರತ್ವ ಸಾಧಿಸಿಲ್ಲ ಎನ್ನುವುದನ್ನು ಕಮಲ್ ಹಾಸನ್ ಹೇಳಿದ್ದಾರೆ. ಅವರ ವಿಕ್ರಮ್ ಸಿನಿಮಾದ ರಿಲೀಸ್ ಇವೆಂಟ್ ನಲ್ಲಿ ಮಾತನಾಡಿದ ಕಮಲ್ ಹಾಸನ್, ‘ನಾನು ಯಾವತ್ತೂ ರಜನಿಯನ್ನು ವೈರಿ ಎಂದು ಪರಿಗಣಿಸಿಲ್ಲ. ವೃತ್ತಿಯಲ್ಲಿ ಸ್ಪರ್ಧೆ ಇರುವುದು ಸಹಜ’ ಎಂದಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    kamal haasan and rajinikanth 2

    ಇಂಥದ್ದೇ ಮಾತನ್ನು ರಜನಿಕಾಂತ್ ಕೂಡ ಈ ಹಿಂದೆ ಹೇಳಿದ್ದರು. ‘ಕಮಲ್ ಹಾಸನ್ ಬಗ್ಗೆ ನಾನ್ಯಾಕೆ ವೈರತ್ವ ಬೆಳೆಸಿಕೊಳ್ಳಲಿ? ಅವರು ನನ್ನ ಉತ್ತಮ ಸ್ನೇಹಿತ. ನಾವಿಬ್ಬರೂ ಒಳ್ಳೆಯ ಬಾಂಧವ್ಯ ಹೊಂದಿದ್ದೇವೆ. ವೈರಿ ಅಂತ ಹೇಳ್ತಿರೋದು ಯಾರು? ನಾವು ಯಾವತ್ತಿಗೂ ಸ್ನೇಹವನ್ನು ಬಿಟ್ಟ ಕೊಡುವುದಿಲ್ಲ’ ಎಂದು ಹೇಳಿದ್ದರು.

    kamal haasan and rajinikanth 1

    ರಜನಿಕಾಂತ್ ಮತ್ತು ಕಮಲ್ ಹಾಸನ್ ಏನೇ ಹೇಳಿದರೂ, ಅಭಿಮಾನಿಗಳು ಮಾತ್ರ ತಮ್ಮ ನಟರೇ ಮೇಲು ಎಂದು ಯಾವಾಗಲೂ ಫ್ಯಾನ್ಸ್ ವಾರ್ ನಡೆಸುತ್ತಲೇ ಇರುತ್ತಾರೆ. ಅಲ್ಲದೇ, ರಾಜಕೀಯ ಭಿನ್ನಾಭಿಪ್ರಾಯಗಳು ಇರುವುದರಿಂದ ಸ್ನೇಹಿತರಾಗಲು ಸಾಧ್ಯವೇ ಇಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

  • ಕಮಲ್ ಹಾಸನ್ ಸಿನಿಮಾದ ಹಾಡಿನಲ್ಲಿ ಕೇಂದ್ರ ಸರಕಾರ ಅಣಕ : ದೂರು ದಾಖಲು

    ಕಮಲ್ ಹಾಸನ್ ಸಿನಿಮಾದ ಹಾಡಿನಲ್ಲಿ ಕೇಂದ್ರ ಸರಕಾರ ಅಣಕ : ದೂರು ದಾಖಲು

    ಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾದ ಹಾಡು ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲೇ ಈ ಹಾಡು ಸಾಕಷ್ಟು ಸದ್ದು ಮಾಡಿತ್ತು. ‘ಪಾತಾಳ.. ಪಾತಾಳ’ ಎಂಬ ಸಾಹಿತ್ಯದಿಂದ ಶುರುವಾಗುವ ಈ ಗೀತೆಗೆ ಕಂಟಕ ಎದುರಾಗಿದೆ. ಈ ಹಾಡಿನಲ್ಲಿ ಕೇಂದ್ರ ಸರಕಾರವನ್ನು ಅಣಕ ಮಾಡಲಾಗಿದೆ ಎಂಬ ಕಾರಣಕ್ಕಾಗಿ ದೂರು ದಾಖಲಾಗಿದೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    kamal haasan vikram film 2

    ಈ ಹಾಡನ್ನು ಸ್ವತಃ ಕಮಲ್ ಹಾಸನ್ ಅವರೇ ಬರೆದಿರುವುದರಿಂದ ಉರಿವ ಬೆಂಕಿಗೆ ತುಪ್ಪ ಹಾಕಿದಂತಾಗಿದೆ. ಅಷ್ಟಕ್ಕೂ ಈ ಹಾಡಿನಲ್ಲಿ ಏನಿದೆ ಎಂದರೆ, ಕೇಂದ್ರ ಸರಕಾರ ಯೋಜನೆ ಮತ್ತು ಕೋವಿಡ್ ನಿಧಿ ಸಂಗ್ರಹದ ಕುರಿತಾಗಿ ನಕಾರಾತ್ಮಕ ಸಾಲುಗಳನ್ನು ಬರೆಯಲಾಗಿದೆ ಎನ್ನುವುದು ಈ ಹಾಡಿನ ಮೇಲಿರುವ ಆರೋಪ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    kamal haasan vikram film 3

    ಖಜಾನೆ ಖಾಲಿ ಖಾಲಿ, ಖಜಾನೆಯಲ್ಲಿ ಹಣವೇ ಇಲ್ಲ. ರೋಗಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಖಜಾನೆ ಖಾಲಿ ಖಾಲಿ. ಅಲ್ಲದೇ, ಕೀ ಕಳ್ಳನ ಬಳಿ ಇದೆ ಎಂದು ಅರ್ಥ ಬರುವ ಸಾಲುಗಳನ್ನು ಹಾಡಾಗಿಸಿದ್ದಾರೆ ಎಂದು ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ಸೆಲ್ವಂ ಅನ್ನುವವರು ಕಮಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    kamal haasan vikram film 5

    ಮೇ 12 ರಂದು ಚೆನ್ನೈ ಪೊಲೀಸ್ ಕಮಿಷ್ನರ್ ಬಳಿ ದೂರು ದಾಖಲಿಸಿರುವ ಸೆಲ್ವಂ, ಪೊಲೀಸ್ ನವರು ಅಗತ್ಯ ಕ್ರಮ ತಗೆದುಕೊಳ್ಳದೇ ಇದ್ದರೆ, ತಾವು ಮದರಾಸ್ ಹೈಕೋರ್ಟ್ ಮೊರೆ ಹೋಗುವುದಾಗಿಯೂ ತಿಳಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ನೋಡುಗರ ಸಂಖ್ಯೆ ಮತ್ತೆ ಹೆಚ್ಚಿದೆ. ಈಗಾಗಲೇ 15 ಮಿಲಿಯನ್ ಗೂ ಹೆಚ್ಚು ಜನರು ಈ ಹಾಡನ್ನು ವೀಕ್ಷಿಸಿದ್ದಾರೆ. ಇದನ್ನೂ ಓದಿ : ಸೀಮಂತದ ಖುಷಿಯಲ್ಲಿ ಸಂಜನಾ: ತಿಂಗಳಾಂತ್ಯಕ್ಕೆ ಮಡಿಲಿಗೆ ಮಗುವಿನ ಆಗಮನ

    kamal haasan vikram film 6

    ಜೂನ್ 3 ರಂದು ತೆರೆಗೆ ಬರಲಿರುವ ವಿಕ್ರಮ್ ಸಿನಿಮಾ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶ್ವರೂಪಮ್ 2 ಸಿನಿಮಾದ ನಾಲ್ಕು ವರ್ಷದ ನಂತರ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ನಿರೀಕ್ಷೆಯಂತೂ ಹೆಚ್ಚಿದೆ.