Tag: ವಸಿಷ್ಠ ಸಿಂಹ

  • `ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ – ಅರ್ಥವೇನು ಗೊತ್ತಾ?

    `ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ – ಅರ್ಥವೇನು ಗೊತ್ತಾ?

    ಸ್ಯಾಂಡಲ್‌ವುಡ್‌ನ `ಸಿಂಹಪ್ರಿಯ’ ಎಂದೇ ಖ್ಯಾತಿ ಪಡೆದ ನಟ ವಸಿಷ್ಠ ಸಿಂಹ (Vasishta Simha) ಹಾಗೂ ನಟಿ ಹರಿಪ್ರಿಯಾ (Haripriya) ತಮ್ಮ ಮುದ್ದಾದ ಮಗನಿಗೆ ವಿಪ್ರಾ ಎನ್ ಸಿಂಹ ಎಂದು ಹೆಸರಿಟ್ಟಿದ್ದಾರೆ.

    Vasishta Simha 2

    ಇದೀಗ `ವಿಪ್ರಾ ಎನ್ ಸಿಂಹ’ (Viprah N Simha) ಎಂಬ ಮಗನ ಹೆಸರಿನ ಅರ್ಥವನ್ನು ಜೋಡಿಯು ಬಿಚ್ಚಿಟ್ಟಿದ್ದು, ವಿಪ್ರಾ ಎನ್ ಸಿಂಹ ಎಂಬ ಹೆಸರು `ವಿ’ ಇಂದ ಪ್ರಾರಂಭವಾಗಿ `ಹೆಚ್’ ಪೂರ್ಣಗೊಳ್ಳುತ್ತದೆ. ಇದು ನಮ್ಮಿಬ್ಬರ ಹೆಸರು ಸಹ ಆಗಿದೆ. ಜೊತೆಗೆ, ವಿಐಪಿ ಎಂಬ ಭಾವನೆಯನ್ನು ಸಂಕೇತಿಸುತ್ತದೆ. ವಿಐ ಎಂದರೆ ವಿಷ್ಣು. ಕೊನೆಯಿಂದ ಹೆಚ್‌ಎಆರ್ ಎಂದರೆ ಹರನೂ ಹೌದು ಹರಿಪ್ರಿಯಾನೂ ಹೌದು. ವಿಷ್ಣು ಹಾಗೂ ಶಿವನ ಸಮಾಗಮವಾಗಿದೆ. ಅವರ ಅನುಗ್ರಹ ಎಂಬುದು ನಮ್ಮ ಭಾವನೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮೀನು ಖರೀದಿಸ್ತೀನಿ ಅಂದವರು ಯಾಕೆ ಖರೀದಿಸಿಲ್ಲ : ಅನಿರುದ್ಧ ಪ್ರಶ್ನೆ ಮಾಡಿದ್ದು ಯಾರಿಗೆ?

    ಬಳಿಕ ನಟಿ ಹರಿಪ್ರಿಯಾ ಮಾತನಾಡಿ, ಮಗುವಿಗೆ ಹೆಸರನ್ನು ಆಯ್ಕೆ ಮಾಡುವುದು ನಮಗೆ ಭಾವನಾತ್ಮಕ ಕ್ಷಣವಾಗಿತ್ತು. ಒಂದು ಜೀವಕ್ಕೆ ಜನ್ಮ ಕೊಟ್ಟು, ಆ ಮಗುವಿಗೆ ಹೆಸರಿಡುವುದು ಬಹಳ ಭಾವನಾತ್ಮಕ ಕ್ಷಣ. ಸಾಂಪ್ರದಾಯಿಕವಾಗಿ ಮನೆಯವರೆಲ್ಲ ಸೇರಿ ನಾಮಕರಣ ಮಾಡಿದ್ವಿ. ಮಗುವಿನ ಕಿವಿಯಲ್ಲಿ ಹೆಸರನ್ನು ಹೇಳುವಾಗ ನಮ್ಮಿಬ್ಬರ ಕಣ್ಣಲ್ಲಿ ನೀರು ತುಂಬಿತ್ತು. ನಮ್ಮ ಮಗ ಚೆನ್ನಾಗಿ ಬೆಳೆಯಲಿ, ಒಳ್ಳೆ ಹೆಸರು ಮಾಡಲೆಂದು ತುಂಬಾ ಖುಷಿಯಲ್ಲಿ ಈ ಹೆಸರಿಟ್ಟಿದ್ದೇವೆ ಎಂದು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ

    `ಸಿಂಹಪ್ರಿಯ’ ಜೋಡಿಯು ತಮ್ಮ ಮುದ್ದಾದ ಮಗನಿಗೆ ಕೃಷ್ಣ ಜನ್ಮಾಷ್ಟಮಿಯಂದೇ ವಿಪ್ರಾ ಎನ್ ಸಿಂಹ ಎಂದು ಹೆಸರಿಟ್ಟಿದ್ದರು. ಮಗುವಿನ ಹೆಸರಿನ ಅರ್ಥದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಕುತೂಹಲ ಮೂಡಿತ್ತು. ಇದೀಗ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಈ ಎಲ್ಲಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

  • ಕೃಷ್ಣ ಜನ್ಮಾಷ್ಟಮಿಯಂದೇ ಮಗನ ನಾಮಕರಣ ಮಾಡಿದ `ಸಿಂಹಪ್ರಿಯ’ ಜೋಡಿ – ಹೆಸರೇನು ಗೊತ್ತಾ?

    ಕೃಷ್ಣ ಜನ್ಮಾಷ್ಟಮಿಯಂದೇ ಮಗನ ನಾಮಕರಣ ಮಾಡಿದ `ಸಿಂಹಪ್ರಿಯ’ ಜೋಡಿ – ಹೆಸರೇನು ಗೊತ್ತಾ?

    `ಸಿಂಹಪ್ರಿಯ’ ಜೋಡಿಯೆಂದೇ ಖ್ಯಾತಿಗಳಿಸಿದ್ದ ನಟ ವಸಿಷ್ಠ ಸಿಂಹ (Vasishta Simha) ಹಾಗೂ ನಟಿ ಹರಿಪ್ರಿಯಾ (Haripriya) ತಮ್ಮ ಮುದ್ದಾದ ಮಗನಿಗೆ ಕೃಷ್ಣ ಜನ್ಮಾಷ್ಟಮಿಯಂದೇ (Krishna Janmashtami) ನಾಮಕರಣ ಮಾಡಿದ್ದಾರೆ.

    Vasishta Simha 2

    ದಂಪತಿಯು ಪುಟ್ಟ ಕೃಷ್ಣನಿಗೆ ವಿಪ್ರಾ ಎನ್ ಸಿಂಹ (Viprah N Simha) ಎಂದು ಹೆಸರಿಟ್ಟಿದ್ದಾರೆ. 2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2025 ಜನವರಿ 26ರಂದು ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

    Vasishta Simha 1

    ಇದೀಗ ದಂಪತಿಗಳು ಮಗನ ನಾಮಕರಣದ ಸಂಭ್ರಮದಲ್ಲಿದ್ದಾರೆ. ಇದೀಗ ಮೂವರು ಹಳದಿ ಬಣ್ಣದ ಸೇಮ್ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ. ಸದ್ಯ ಸಿಂಹಪ್ರಿಯ ಜೋಡಿಯ ಮಗನ ನಾಮಕರಣದ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಮಕರಣ ಕಾರ್ಯಕ್ರಮದಲ್ಲಿ ನಟಿ ಪ್ರಣಿತಾ, ಸೊನಾಲ್, ಕೆಜಿಎಫ್ ಖ್ಯಾತಿಯ ಗರುಡ ರಾಮ್ ಹಾಗೂ ಇನ್ನಿತರ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ

  • ಕ್ಷಮೆ ಕೇಳಲ್ಲ ಅಂದಾಗ ಬಿಸಿ ಮುಟ್ಟಿಸಬೇಕು- ಕಮಲ್ ಹಾಸನ್ ವಿರುದ್ಧ ವಸಿಷ್ಠ ಸಿಂಹ ಆಕ್ರೋಶ

    ಕ್ಷಮೆ ಕೇಳಲ್ಲ ಅಂದಾಗ ಬಿಸಿ ಮುಟ್ಟಿಸಬೇಕು- ಕಮಲ್ ಹಾಸನ್ ವಿರುದ್ಧ ವಸಿಷ್ಠ ಸಿಂಹ ಆಕ್ರೋಶ

    ಮಲ್ ಹಾಸನ್ (Kamal Haasan) ಅವರನ್ನು ಅತಿಯಾಗಿ ಪ್ರೀತಿಸುತ್ತೇವೆ, ಹಾಗಂತ ಅವರು ಹೇಳಿದ್ದನ್ನು ಒಪ್ಪಲು ಆಗಲ್ಲ ಎಂದು ನಟನ ಕನ್ನಡ ವಿವಾದಕ್ಕೆ ವಸಿಷ್ಠ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಕ್ಷಮೆ ಕೇಳಲ್ಲ ಎಂದು ಪಟ್ಟಹಿಡಿದಿರೋ ಕಮಲ್ ಹಾಸನ್ ವಿರುದ್ಧ ವಸಿಷ್ಠ ಸಿಂಹ (Vasishta Simha) ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:ನಾನು ಬೆದರಿಕೆಗೆ ಹೆದರಲ್ಲ, ಕ್ಷಮೆ ಕೇಳಲ್ಲ- ಕಮಲ್ ಹಾಸನ್ ಉದ್ಧಟತನ

    kamal haasanಕಮಲ್ ಹಾಸನ್ ಕನ್ನಡ ವಿವಾದಕ್ಕೆ ವಸಿಷ್ಠ ಮಾತನಾಡಿ, ಪ್ರೀತಿಯಿದ್ದ ಕಡೆ ಕ್ಷಮೆ ಇರಬೇಕು. ಗೌರವನೂ ಇರಬೇಕು. ಅವರು ಆಡಿರುವ ಮಾತಿಗೆ ಕ್ಷಮೆ ಕೇಳಿದ್ರೆ ದೊಡ್ಡವರಾಗುತ್ತಿದ್ದರು. ನಾವೆಲ್ಲರೂ ಅವರನ್ನು ಇಷ್ಟಪಡುತ್ತೇವೆ. ಬೇಡದ ಜಾಗದಲ್ಲಿ ಬೇಡದ ಮಾತುಗಳನ್ನಾಡಬಾರದು. ಅದು ಅವರ ವಿವೇಚನೆಗೆ ಬಿಟ್ಟಿದ್ದು ಎಂದರು. ಇದನ್ನೂ ಓದಿ:ಕನ್ನಡಕ್ಕೆ ಅಪಮಾನ ಮಾಡಿದಾಗ ಶಿವರಾಜ್ ಕುಮಾರ್ ಮಾತಾಡಬೇಕು – ರವಿ ಗಣಿಗ

    vasishta simhaಸಿನಿಮಾ ರಿಲೀಸ್ ವೇಳೆಯೇ ಭಾಷೆಯ ಸೆಂಟಿಮೆಂಟ್‌ನ ಕೆಣಕೋದು ತಪ್ಪು. ಸೂಕ್ಷ್ಮ ವಿಚಾರವನ್ನು ಅಂತಹ ವೇದಿಕೆಯಲ್ಲಿ ಬಳಸಿಕೊಂಡಿದ್ದು ತಪ್ಪು. ಕಮಲ್ ಹಾಸನ್ ಅವರನ್ನು ಅತಿಯಾಗಿ ಪ್ರೀತಿಸುತ್ತೇವೆ. ಹಾಗಂತ ಎಲ್ಲವನ್ನು ಒಪ್ಪೋಕೆ ಆಗಲ್ಲ. ತಪ್ಪು ತಪ್ಪೇ. ಇಷ್ಟು ವರ್ಷಗಳ ಕಾಲ ಸಿನಿಮಾಗಳ ಮೂಲಕ ನಮ್ಮೆಲ್ಲರ ಮನಸ್ಸನ್ನು ಗೆದ್ದಿದ್ದೀರಿ. ಹೀಗಿರುವಾಗ ಭಾಷೆಯ ವಿಚಾರವನ್ನು ಟ್ರಿಗರ್ ಮಾಡುವ ಅವಶ್ಯಕತೆಯಿರಲಿಲ್ಲ. ಪ್ರೀತಿಯನ್ನು ಪಡೆದುಕೊಳ್ಳೋದು, ಕಳೆದುಕೊಳ್ಳೋದು ನಮ್ಮ ಕೈಯಲ್ಲಿಯೇ ಇದೆ ಎಂದಿದ್ದಾರೆ.

    Kamal Haasanಭಾಷೆ ಎಲ್ಲರಿಗೂ ತಾಯಿ ಇದ್ದಂತೆ. ಎಲ್ಲಾ ಭಾಷೆಯನ್ನು ಗೌರವದಿಂದ ಕಾಣಬೇಕು. ಬೆಳೆದ್ಮೇಲೆ ಏನು ಬೇಕಾದರೂ ಮಾತನಾಡಿದ್ರೆ ನಡೆಯುತ್ತದೆ ಅನ್ನೋದಲ್ಲ. ಜವಾಬ್ದಾರಿಯಿಂದ ಮಾತನಾಡಬೇಕು. ನಮ್ಮನ್ನು ಅನುಸರಿಸುವವರಿಗೆ ನಾವು ಮಾದರಿಯಾಗಿರಬೇಕು. ಇದೀಗ ಕ್ಷಮೆ ಕೇಳಲ್ಲ ಅಂದಾಗ ನಾವು ಕೂಡ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು ಎಂದು ವಸಿಷ್ಠ ಸಿಂಹ ಮಾತನಾಡಿದ್ದಾರೆ.

    kamal haasan vikram film 1ಇಂದು (ಮೇ 30) ಚೆನ್ನೈನಲ್ಲಿ ಕಮಲ್ ಹಾಸನ್ ಮಾತನಾಡಿ, ಕ್ಷಮೆ ಕೇಳಲ್ಲ ಎಂದು ಹೇಳಿ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ. ಕಾನೂನು ಹಾಗೂ ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.

    ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮ್ಮ ನಟನೆಯ ಥಗ್ ಲೈಫ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಅವರ ಎದುರೇ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

    ಕಮಲ್ ಹಾಸನ್ ಹೇಳಿಕೆ ಶುದ್ಧ ಸುಳ್ಳು. ಭಾಷಾ ಪ್ರಾವಿಣ್ಯತೆ ಇಲ್ಲದೇ ಈ ರೀತಿಯ ಉದ್ಧಟತನದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಭಾಷಾ ವಿಜ್ಞಾನಿಗಳು ಖಂಡಿಸಿದ್ದಾರೆ. ನಟನ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕೂಡಲೇ ಕನ್ನಡಿಗರ ಕ್ಷಮೆಯಾಚಿಸಿ, ಇಲ್ಲದಿದ್ದರೆ ನಿಮ್ಮ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲಾಗುವುದು ಎಂದು ಹೋರಾಟಗಾರರು ನಟನಿಗೆ ಎಚ್ಚರಿಕೆ ನೀಡಿದ್ದಾರೆ.

  • ನಾವಿಬ್ಬರೂ ಮೂವರಾಗಿ ಇಂದಿಗೆ 3 ತಿಂಗಳು: ಮಗನ ಫೋಟೋ ಹಂಚಿಕೊಂಡ ಹರಿಪ್ರಿಯಾ ದಂಪತಿ

    ನಾವಿಬ್ಬರೂ ಮೂವರಾಗಿ ಇಂದಿಗೆ 3 ತಿಂಗಳು: ಮಗನ ಫೋಟೋ ಹಂಚಿಕೊಂಡ ಹರಿಪ್ರಿಯಾ ದಂಪತಿ

    ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasishta Simha) ದಂಪತಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮಗು ಜನಿಸಿ 3 ತಿಂಗಳು ತುಂಬಿದ ಖುಷಿಯಲ್ಲಿ ಮಗನ ಫೋಟೋವನ್ನು ವಸಿಷ್ಠ ಜೋಡಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ನಟನ ಬಗ್ಗೆ ಹಗುರವಾಗಿ ಮಾತನಾಡಿದ ಮಂಚು ವಿಷ್ಣು- ಪ್ರಭಾಸ್ ಫ್ಯಾನ್ಸ್ ರೆಬೆಲ್

    Vasishta simha and haripriya 2

    ಜ.26ರಂದು ಹರಿಪ್ರಿಯಾ ಮುದ್ದಾದ ಗಂಡು ಮಗನಿಗೆ ಜನ್ಮ ನೀಡಿದರು. ಹೀಗಾಗಿ ಸಿನಿಮಾಗೆ ಬ್ರೇಕ್ ಕೊಟ್ಟು ಮಗನ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಮಗನಿಗೆ 3 ತಿಂಗಳು ತುಂಬಿದ ಖುಷಿಯಲ್ಲಿ ಫೋಟೋವನ್ನು ಮೊದಲ ಬಾರಿಗೆ ಹರಿಪ್ರಿಯಾ ದಂಪತಿ ರಿವೀಲ್ ಮಾಡಿದ್ದಾರೆ.

    ಮಗನೊಂದಿಗಿನ ಬ್ಲ್ಯಾಕ್ & ವೈಟ್ ಫೋಟೋ ಶೇರ್ ಮಾಡಿ, ನಾವಿಬ್ಬರೂ ಮೂವರಾಗಿ ಇಂದಿಗೆ 3 ತಿಂಗಳು ಎಂದು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    vasishta simha haripriya

    2023ರ ಜನವರಿ 26ರಂದು ವಸಿಷ್ಠ ಮತ್ತು ಹರಿಪ್ರಿಯಾ ಮೈಸೂರಿನಲ್ಲಿ ಮದುವೆಯಾದರು. ಇದೇ ದಿನಾಂಕ ಈ ವರ್ಷ ಜ.26ರಂದು ಗಂಡು ಮಗುವಿಗೆ ನಟಿ ಜನ್ಮ ನೀಡಿದರು.

  • ತಮನ್ನಾ ಜೊತೆ ವಸಿಷ್ಠ ಸಿಂಹ ಸಿನಿಮಾ- ‘ಒಡೆಲಾ 2’ ಬಗ್ಗೆ‌ ಹೊರಬಿತ್ತು ಬಿಗ್‌ ಅಪ್‌ಡೇಟ್

    ತಮನ್ನಾ ಜೊತೆ ವಸಿಷ್ಠ ಸಿಂಹ ಸಿನಿಮಾ- ‘ಒಡೆಲಾ 2’ ಬಗ್ಗೆ‌ ಹೊರಬಿತ್ತು ಬಿಗ್‌ ಅಪ್‌ಡೇಟ್

    ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಹಾಗೂ ಕನ್ನಡದ ನಟ ವಸಿಷ್ಠ ಸಿಂಹ (Vasishta Simha) ನಟನೆಯ ‘ಒಡೆಲಾ 2’ (Odela 2) ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ‘ಒಡೆಲಾ 2’ ಚಿತ್ರವನ್ನು ಏಪ್ರಿಲ್‌ನಲ್ಲಿ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.

    odela 2 1

    ಸದಾ ಬೋಲ್ಡ್ ಪಾತ್ರ ಹಾಗೂ ಐಟಂ ಡ್ಯಾನ್ಸ್‌ನಿಂದಲೇ ಸದ್ದು ಮಾಡುತ್ತಿದ್ದ ತಮನ್ನಾ ಅವರು ಇದೀಗ ಸಾದ್ವಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಒಡೆಲಾ 2’ನಲ್ಲಿ ಸಾದ್ವಿ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಇನ್ನೂ ಈ ಚಿತ್ರ ಏ.17ರಂದು ಬಿಡುಗಡೆಯಾಗಲಿದೆ. ಇದನ್ನೂ ಓದಿ:ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಯಾರೂ ಪ್ರಚೋದನೆ ಮಾಡಿಲ್ಲ: ಅಂತಿಮ ವರದಿ ಸಲ್ಲಿಸಲಾಗಿದೆ

    odela 2 2

    ಕನ್ನಡದ ನಟ ವಸಿಷ್ಠ ಸಿಂಹ ಕೂಡ ‘ಒಡೆಲಾ 2’ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ಹೇಗಿರಲಿದೆ ಎಂದು ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರವನ್ನು ಅಶೋಕ ತೇಜ ಅವರು ನಿರ್ದೇಶನ ಮಾಡಿದ್ದಾರೆ.

    Tamannaah

    ಇನ್ನೂ ‘ಒಡೆಲಾ 2’ನಲ್ಲಿ ಯುವ, ನಾಗ ಮಹೇಶ್, ವಂಶಿ, ಸುರೇಂದರ್ ರೆಡ್ಡಿ, ಭೂಪಾಲ್, ಪೂಜಾ ರೆಡ್ಡಿ, ಹೆಬ್ಬಾ ಪಟೇಲ್ ನಟಿಸಿದ್ದಾರೆ. ಡಿ. ಮಧು ಮತ್ತು ಸಂಪತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಕಿರಿಕ್‌ ಪಾರ್ಟಿ’, ‘ಕಾಂತಾರ’ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಅಜನೀಶ್‌ ಲೋಕನಾಥ್‌ ಅವರು ‘ಒಡೆಲಾ 2’ ಸಿನಿಮಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.

  • ಹರಿಪ್ರಿಯಾ ಸೀಮಂತದ ಕಲರ್‌ಫುಲ್ ಫೋಟೋಸ್

    ಹರಿಪ್ರಿಯಾ ಸೀಮಂತದ ಕಲರ್‌ಫುಲ್ ಫೋಟೋಸ್

    ನ್ನಡದ ನಟಿ ಹರಿಪ್ರಿಯಾ (Haripriya) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನಟಿಯ ಸೀಮಂತ ಶಾಸ್ತ್ರದ (Baby Shower) ಕಾರ್ಯಕ್ರಮ ಬೆಂಗಳೂರಿನ  ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಮಾಡಲಾಗಿದೆ. ಕಾರ್ಯಕ್ರಮದ ಸುಂದರ ಫೋಟೋಗಳು ಇಲ್ಲಿದೆ.

    haripriya 1 3

    ನಟಿ ಹರಿಪ್ರಿಯಾ ಅವರು ಹಸಿರು ಬಣ್ಣದ ಸೀರೆಯುಟ್ಟ ಕಂಗೊಳಿಸಿದ್ರೆ, ಪತಿ ವಸಿಷ್ಠ ಸಿಂಹ (Vasishta Simha) ಬಿಳಿ ಬಣ್ಣದ ಉಡುಗೆ ಧರಿಸಿದ್ದಾರೆ. ಫೋಟೋದಲ್ಲಿ ನಟಿಯ ತಾಯ್ತನದ ಕಳೆ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಯಶ್ ‘ಟಾಕ್ಸಿಕ್’ ಚಿತ್ರಕ್ಕಾಗಿ ಕಾಯುತ್ತಿದ್ದೇನೆ ಎಂದ ರಿಷಬ್ ಶೆಟ್ಟಿ

    haripriya

    ಇನ್ನೂ ನಟಿಯ ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಆಗಮಿಸಿದ್ದರು. ಜೊತೆಗೆ ಸ್ಯಾಂಡಲ್‌ವುಡ್ ತಾರೆಯರು ಅನೇಕರು ಬಂದು ಹರಿಪ್ರಿಯಾ ಶುಭಕೋರಿದ್ದರು.

    haripriya 1 4

    ಹಿರಿಯ ನಟಿಯರಾದ ಶ್ರುತಿ, ಮಾಳವಿಕಾ, ತಾರಾ, ಸುಧಾರಾಣಿ, ಗಿರಿಜಾ ಲೋಕೇಶ್ ಆಗಮಿಸಿದ್ದರು. ಹರಿಪ್ರಿಯಾ ಹಣೆಗೆ ಕುಂಕುಮವಿಟ್ಟು ಅಕ್ಷತೆ ಹಾಕಿ ಶುಭಕೋರಿದ್ದರು.

    sudharani

    ಈ ಕಾರ್ಯಕ್ರಮದಲ್ಲಿ ಪತಿ ಜಗದೀಶ್ ಜೊತೆ ನಟಿ ಅಮೂಲ್ಯ ಪಾಲ್ಗೊಂಡಿದ್ದರು. ವಸಿಷ್ಠ ಸಿಂಹ ದಂಪತಿಗೆ ಶುಭಹಾರೈಸಿ ತೆರಳಿದರು.

    FotoJet

    ಇನ್ನೂ ಸೋನಲ್ ಮತ್ತು ಡೈರೆಕ್ಟರ್ ತರುಣ್ ಸುಧೀರ್ ಜೋಡಿ ಆಗಮಿಸಿದ್ದರು. ಇವರೆಲ್ಲರ ಆಗಮನ ಹರಿಪ್ರಿಯಾಗೆ ಖುಷಿ ಕೊಟ್ಟಿದೆ.

    sonal

    ಹಿರಿಯ ನಟ ದೊಡ್ಡಣ್ಣ, ನವೀನ್ ಶಂಕರ್, ತೇಜಸ್ವಿನಿ ಶರ್ಮಾ, ಮೇಘನಾ ಗಾಂವ್ಕರ್, ನಿರಂಜನ್ ದೇಶಪಾಂಡೆ, ಕೆಜಿಎಫ್ ನಟ ಗರುಡ ರಾಮ್ ಆಗಮಿಸಿದ್ದರು.

    haripriya 2

    ಇನ್ನೂ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ 2023ರಲ್ಲಿ ಜ.26ರಂದು ಮೈಸೂರಿನಲ್ಲಿ ಹಸೆಮಣೆ ಏರಿದ್ದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.

  • ಸೀಮಂತದ ಸಂಭ್ರಮದಲ್ಲಿ ಹರಿಪ್ರಿಯಾ

    ಸೀಮಂತದ ಸಂಭ್ರಮದಲ್ಲಿ ಹರಿಪ್ರಿಯಾ

    ನ್ನಡದ ನಟಿ ಹರಿಪ್ರಿಯಾ (Haripriya) ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗ ಹರಿಪ್ರಿಯಾಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಹಸಿರು ಬಣ್ಣದ ಸೀರೆಯುಟ್ಟು ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:BBK 11: 9 ಸ್ಪರ್ಧಿಗಳ ನಡುವೆ ಪೈಪೋಟಿ- ಟಿಕೆಟ್ ಟು ಫಿನಾಲೆ ಪಾಸ್ ಸಿಗೋದು ಯಾರಿಗೆ?

    haripriya

    ವಸಿಷ್ಠ ಸಿಂಹ (Vasishta Simha) ಮತ್ತು ಹರಿಪ್ರಿಯಾ ಜೋಡಿ ಮೊದಲ ಮಗು ಮನೆಗೆ ಎಂಟ್ರಿ ಕೊಡಲಿರುವ ಖುಷಿಯಲ್ಲಿದ್ದಾರೆ. ಸದ್ಯ ತುಂಬು ಗರ್ಭಿಣಿಯಾಗಿರುವ ನಟಿಗೆ ಸೀಮಂತ (Baby Shower) ಶಾಸ್ತ್ರ ಜರುಗಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ತಾರಾ ಕೂಡ ಭಾಗವಹಿಸಿ ಹರಿಪ್ರಿಯಾ ಶುಭಕೋರಿದ್ದಾರೆ. ನಟಿಗೆ ಕುಂಕುಮ ಇಟ್ಟು ಗಿಫ್ಟ್‌ ನೀಡಿ ವಿಶ್‌ ಮಾಡಿದ್ದಾರೆ. ಆ ನಂತರ ವಸಿಷ್ಠ ಪತ್ನಿಗೆ ಮುದ್ದು ಮಾಡಿದ್ದಾರೆ.

    haripriya 1 2

    ಕಳೆದ ವರ್ಷ ಜ.26ರಂದು ಮೈಸೂರಿನಲ್ಲಿ ವಸಿಷ್ಠ ಸಿಂಹ ಜೊತೆ ನಟಿ ಹಸೆಮಣೆ ಏರಿದರು. ಹಲವು ವರ್ಷಗಳು ಪ್ರೀತಿಸಿ ಗುರುಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ಇದೀಗ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳುವ ತವಕದಲ್ಲಿದ್ದಾರೆ.

    ಅಂದಹಾಗೆ, ವಸಿಷ್ಠ ಸಿಂಹ ಕನ್ನಡದ ಜೊತೆ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಪಾತ್ರಗಳ ಮೂಲಕ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಹರಿಪ್ರಿಯಾ ಪ್ರಸ್ತುತ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

  • ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡ ಹರಿಪ್ರಿಯಾ

    ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡ ಹರಿಪ್ರಿಯಾ

    ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ (Haripriya) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್ (Baby Bump) ಮಾಡಿಸಿ ನಟಿ ಮಿಂಚಿದ್ದಾರೆ. ಸುಂದರ ಬೇಬಿ ಬಂಪ್ ಫೋಟೋಶೂಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕುಟುಂಬ ಜೊತೆಗಿನ ಫೋಟೋ ಹಂಚಿಕೊಂಡ ಧ್ರುವ- ಕ್ಯೂಟ್ ಫ್ಯಾಮಿಲಿ ಎಂದ ಫ್ಯಾನ್ಸ್

    haripriya 1

    ನೀಲಿ ಬಣ್ಣದ ಉಡುಗೆ ಧರಿಸಿ ನಟಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಬೇಬಿ ಬಂಪ್ ಲುಕ್ ಶೇರ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಪತಿ ವಸಿಷ್ಠ (Vasishta Simha) ಜೊತೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ವಿವಿಧ ಭಂಗಿಯ ಪೋಸ್ ಈಗ ನೆಟ್ಟಿಗರ ಗಮನ ಸೆಳೆದಿದೆ.

    ಕಳೆದ ವರ್ಷ ಜ.26ರಂದು ಮೈಸೂರಿನಲ್ಲಿ ವಸಿಷ್ಠ ಸಿಂಹ ಜೊತೆ ನಟಿ ಹಸೆಮಣೆ ಏರಿದರು. ಹಲವು ವರ್ಷಗಳು ಪ್ರೀತಿಸಿ ಗುರುಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ಇದೀಗ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳುವ ತವಕದಲ್ಲಿದ್ದಾರೆ.

    ಅಂದಹಾಗೆ, ವಸಿಷ್ಠ ಸಿಂಹ ಕನ್ನಡದ ಜೊತೆ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಪಾತ್ರಗಳ ಮೂಲಕ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಹರಿಪ್ರಿಯಾ ಪ್ರಸ್ತುತ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

  • ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ: ತಾಯ್ತನದ ಖುಷಿಯಲ್ಲಿ ಹರಿಪ್ರಿಯಾ

    ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ: ತಾಯ್ತನದ ಖುಷಿಯಲ್ಲಿ ಹರಿಪ್ರಿಯಾ

    ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ (Haripriya) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯ್ತನದ ಕುರಿತು ನಟಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಮ್ಮನ ಮಡಿಲಲ್ಲಿ ಹರಿಪ್ರಿಯಾ ನಿದ್ದೆ ಮಾಡುತ್ತಿರುವ ವಿಶೇಷ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಗರ್ಲ್‌ಫ್ರೆಂಡ್‌ ರಶ್ಮಿಕಾ ಮಂದಣ್ಣಗೆ ಲಕ್ಕಿ ಚಾರ್ಮ್‌ ಎಂದ ವಿಜಯ್‌ ದೇವರಕೊಂಡ

    haripriya

    ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ ಎಂದು ನಟಿ ಬರೆದುಕೊಂಡಿದ್ದಾರೆ. ಮನೆಗೆ ಆಗಮಿಸಲಿರುವ ಕಂದನ ಮೇಲಿನ ಮತ್ತು ಅಮ್ಮನ ಮೇಲಿನ ಮಮತೆಯನ್ನು ಈ ಫೋಟೋ ಮೂಲಕ ನಟಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಾಗಚೈತನ್ಯ

    ಇನ್ನೂ ನವೆಂಬರ್ 1ರಂದು ವಸಿಷ್ಠ ಸಿಂಹ (Vasishta Simha) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ರಿವೀಲ್ ಮಾಡಿದ್ದರು. ಮದುವೆಯ ಬಳಿಕ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈಗ ಹೊಸ ಅತಿಥಿ ಆಗಮಿಸುತ್ತಿರುವ ಖುಷಿಯಲ್ಲಿದ್ದಾರೆ.

    vasishta simha haripriya

    ಇನ್ನೂ ವಸಿಷ್ಠ ಸಿಂಹ ಜೊತೆ ಹರಿಪ್ರಿಯಾ ಕಳೆದ ವರ್ಷ ಜ.26ರಂದು ಹಸೆಮಣೆ ಏರಿದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.

  • ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ಹರಿಪ್ರಿಯಾ

    ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ಹರಿಪ್ರಿಯಾ

    ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ (Hariprriya) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ ನಟಿ ಬೇಬಿ ಬಂಪ್ (Baby Bump) ಫೋಟೋಶೂಟ್ ಮಾಡಿಸಿದ್ದಾರೆ. ಪತಿ ಜೊತೆ ನಿಂತು ನಟಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:BBK 11: ಧರ್ಮ ಐ ಲೈಕ್ ಯೂ ಎಂದ ಶೋಭಾ ಶೆಟ್ಟಿ

    haripriya

    ಫೋಟೋಶೂಟ್‌ಗೆ ಕನ್ನಡ ಹಬ್ಬದ ಸಲುವಾಗಿ.. ನಾವು ಎಂದು ಹರಿಪ್ರಿಯಾ ದಂಪತಿ ಕ್ಯಾಪ್ಷನ್ ನೀಡಿದ್ದಾರೆ. ನಟಿ ಕೆಂಪು ಬಣ್ಣದ ಚೂಡಿದಾರ್‌ನಲ್ಲಿ ಮಿಂಚಿದ್ದಾರೆ. ಪತ್ನಿಯ ಬೇಬಿ ಬಂಪ್ ಹಿಡಿದು ವಸಿಷ್ಠ ಪೋಸ್ ನೀಡಿದ್ದಾರೆ. ಅವರು ಹಳದಿ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ಈ ಫೋಟೋಶೂಟ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಅಂದಹಾಗೆ, ಹರಿಪ್ರಿಯಾ ಮತ್ತು ವಸಿಷ್ಠ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ಜ.26ರಂದು ಮೈಸೂರಿನಲ್ಲಿ ಮದುವೆಯಾದರು. ಈ ಮದುವೆಗೆ ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್, ಶಿವಣ್ಣ ಸೇರಿದಂತೆ ಹಲವು ಭಾಗಿಯಾಗಿ ವಸಿಷ್ಠ ದಂಪತಿಗೆ ಶುಭಕೋರಿದ್ದರು.