Tag: ಲಾರೆನ್‌ ಪೊವೆಲ್

  • ಕುಂಭಮೇಳದಲ್ಲಿ ಭಾಗಿಯಾಗ್ತಾರೆ ಆ್ಯಪಲ್ ಸಹ-ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ

    ಕುಂಭಮೇಳದಲ್ಲಿ ಭಾಗಿಯಾಗ್ತಾರೆ ಆ್ಯಪಲ್ ಸಹ-ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ

    ಲಕ್ನೋ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ 2025 ರ ಮಹಾ ಕುಂಭಮೇಳದಲ್ಲಿ ದಿವಂಗತ ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಭಾಗವಹಿಸಲಿದ್ದಾರೆ ಎಂದು ಸ್ವಾಮಿ ಕೈಲಾಶಾನಂದ್ ಜಿ ಮಹಾರಾಜ್ ಬುಧವಾರ ದೃಢಪಡಿಸಿದ್ದಾರೆ.

    ಲಾರೆನ್ ಪೊವೆಲ್ ಅವರಿಗೆ ‘ಕಮಲಾ’ ಎಂಬ ಹಿಂದೂ ಹೆಸರನ್ನು ನೀಡಲಾಗಿದೆ. ಅವರು ತನ್ನ ಗುರುಗಳನ್ನು ಭೇಟಿ ಮಾಡಲು ಇಲ್ಲಿಗೆ ಬರುತ್ತಿದ್ದಾರೆ. ನಾವು ಅವರಿಗೆ ಕಮಲಾ ಎಂದು ಹೆಸರಿಟ್ಟಿದ್ದೇವೆ. ಅವರು ನಮಗೆ ಮಗಳಿದ್ದಂತೆ. ಆಕೆ ಭಾರತಕ್ಕೆ ಎರಡನೇ ಬಾರಿ ಬರುತ್ತಿದ್ದಾರೆ. ಕುಂಭಮೇಳಕ್ಕೆ ಎಲ್ಲರಿಗೂ ಸ್ವಾಗತ ಎಂದು ಮಹಾರಾಜ್ ತಿಳಿಸಿದ್ದಾರೆ.

    Maha Kumbh Mela

    ಜಗತ್ತಿನ ಹೆಚ್ಚಿನ ಜನರು ಯಾರೋ ಒಬ್ಬ ಗುರುವಿನ ಮಾರ್ಗದರ್ಶನದಲ್ಲಿದ್ದಾರೆ. ಅನೇಕ ಜನರು ಕುಂಭಮೇಳಕ್ಕೆ ಬರುತ್ತಿದ್ದಾರೆ. ಕೆಲವರು ತಮ್ಮ ವೈಯಕ್ತಿಕ ಕಾರ್ಯಕ್ರಮಕ್ಕಾಗಿ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಇದು ಧಾರ್ಮಿಕ ಮೇಳ. ದೇಶ-ವಿದೇಶಗಳಿಂದ ಜನರು ಆಶೀರ್ವಾದ ಪಡೆಯಲು ಮಹಾ ಕುಂಭಕ್ಕೆ ಭೇಟಿ ನೀಡುತ್ತಾರೆ ಎಂದಿದ್ದಾರೆ.

    ಈ ಬಾರಿ ಭಕ್ತರು ದೈವಿಕ ಮತ್ತು ಭವ್ಯವಾದ ಕುಂಭಮೇಳಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭರವಸೆ ನೀಡಿದ್ದಾರೆ. ಪ್ರಯಾಗರಾಜ್‌ನ ದೈವಿಕ, ಭವ್ಯ, ಹಸಿರು ಕುಂಭಕ್ಕೆ ಬಹಳ ದೈವಿಕ ಮತ್ತು ಭವ್ಯವಾದ ಸಿದ್ಧತೆಗಳನ್ನು ಮಾಡಲಾಗಿದೆ. ನಾವು ಜ.13 ಕ್ಕಾಗಿ ಕಾಯುತ್ತಿದ್ದೇವೆ. ಎಲ್ಲರನ್ನು ಸ್ವಾಗತಿಸಲು ಮತ್ತು ಅವರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಂಪೂರ್ಣ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಂದು ತಿಳಿಸಿದ್ದಾರೆ.