Tag: ರೈಲು ಹಳಿ

  • ಕುಡಚಿಯಲ್ಲಿ ರೈಲು ಹಳಿ ಪಕ್ಕವೇ ಕುಸಿದ ಭೂಮಿ – ಈಗ ಒಂದು ಹಳಿಯಲ್ಲಿ ಮಾತ್ರ ಸಂಚಾರ

    ಕುಡಚಿಯಲ್ಲಿ ರೈಲು ಹಳಿ ಪಕ್ಕವೇ ಕುಸಿದ ಭೂಮಿ – ಈಗ ಒಂದು ಹಳಿಯಲ್ಲಿ ಮಾತ್ರ ಸಂಚಾರ

    ಬೆಳಗಾವಿ: ಚಿಕ್ಕೋಡಿ (Chikkodi) ಉಪ ವಿಭಾಗ ವ್ಯಾಪ್ತಿಯಲ್ಲಿ ಕರ್ನಾಟಕ-ಮಹಾರಾಷ್ಟ್ರ (Karnataka-Maharashtra) ಸಂಪರ್ಕಿಸುವ ರೈಲು ಹಳಿ ಪಕ್ಕ ಭೂ ಕುಸಿತವಾಗಿರುವ ಘಟನೆ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ.

    ಕುಡಚಿ ಪಟ್ಟಣದ ಹೊರವಲಯದ ಹಳಿ ಪಕ್ಕವೇ ಭೂಕುಸಿತವಾಗಿದೆ. ಬೆಳಗಾವಿ (Belagavi) ಜಿಲ್ಲೆಯಾದ್ಯಂತ‌ ನಿರಂತರ ಮಳೆಯಾಗುತ್ತಿದ್ದು (Rain) ಮಂಗಳವಾರ ಸಂಜೆ ದಿಢೀರ್ ‌ಭೂಕುಸಿತದಿಂದ (Landslide) ಒಂದು ಲೈನ್‌ನಲ್ಲಿ ಸಂಚಾರ ಸ್ಥಗಿತಗೊಳಿಸಿ ಮತ್ತೊಂದು ಹಳಿಯ ಮೂಲಕ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇದನ್ನೂ ಓದಿ: ಡಿಕೆಶಿ ನೇತೃತ್ವದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೆ, ಮರಳಿ ಮನೆಗೆ ಬಂದಿದ್ದೇನೆ: ಸಿಪಿ ಯೋಗೇಶ್ವರ್‌

     

    ಈ ಹಳಿಯಲ್ಲಿ ಕಡಿಮೆ ವೇಗದಲ್ಲಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ‌. ಮಹಾರಾಷ್ಟ್ರದ ಮೀರಜ್-ಬೆಳಗಾವಿ ಮಾರ್ಗದಲ್ಲಿ‌ ನಿತ್ಯ ಹಲವು ರೈಲುಗಳು ಸಂಚಾರ ನಡೆಸುತ್ತಿವೆ.

    ದಿಢೀರ್ ‌ಭೂ ಕುಸಿತದಿಂದ‌ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಸ್ಥಳಕ್ಕೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹಳಿ ಮಧ್ಯೆ ಅಗ್ನಿಶಾಮಕ ಸಿಲಿಂಡರ್‌ ಪತ್ತೆ – ರೈಲು ದುಷ್ಕೃತ್ಯಕ್ಕೆ ಸಂಚು; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

    ಹಳಿ ಮಧ್ಯೆ ಅಗ್ನಿಶಾಮಕ ಸಿಲಿಂಡರ್‌ ಪತ್ತೆ – ರೈಲು ದುಷ್ಕೃತ್ಯಕ್ಕೆ ಸಂಚು; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ಹಳಿ ಮೇಲೆ ವಸ್ತುಗಳನ್ನು ಇರಿಸಿ ರೈಲು ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶದ ಕಾನ್ಪುರದಲ್ಲಿ (Kanpur) ರೈಲ್ವೆ ಹಳಿಯಲ್ಲಿ (Train Driver Brakes) ಅನುಮಾನಾಸ್ಪದ ವಸ್ತು ಪತ್ತೆಯಾಗಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಪುಷ್ಪಕ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ಟ್ರ್ಯಾಕ್‌ನಲ್ಲಿ ಕೆಂಪು ಸಿಲಿಂಡರ್ ಬಿದ್ದಿರುವುದನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿ ಸಾವಿರಾರು ಜನರ ಪ್ರಾಣ ಉಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾಷಣ ಮಾಡುತ್ತಲೇ ಮಲ್ಲಿಕಾರ್ಜುನ ಖರ್ಗೆ ಅಸ್ವಸ್ಥ – ಮೋದಿಯನ್ನ ಅಧಿಕಾರದಿಂದ ಕೆಳಗಿಳಿಸುವವರೆಗೆ ಸಾಯಲ್ಲ ಎಂದ ʻಕೈʼನಾಯಕ

    Kanpur 2

    ಇದೇ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ರೈಲ್ವೇ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್‌ ಮತ್ತು ಸಿಮೆಂಟ್ ಬ್ರಿಕ್ಸ್‌ಗಳನ್ನಿರಿಸಿ ರೈಲು ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ಘಟನೆ ಬೆಳಿಕಿಗೆ ಬಂದಿತ್ತು. ಇದಾದ 20 ದಿನಗಳ ಬಳಿಕ ಅಂತಹದ್ದೇ ಮತ್ತೊಂಧು ಘಟನೆ ನಡೆದಿದೆ. ಇದನ್ನೂ ಓದಿ: ತೆಲಂಗಾಣ| 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಸಂತ್ರಸ್ತೆ ಕುಟುಂಬಸ್ಥರಿಂದ ಆರೋಪಿ ಮನೆ, ಕಾರಿಗೆ ಬೆಂಕಿ

    rajasthan train

    ಮುಂಬೈನಿಂದ ಲಕ್ನೋಗೆ ಹೋಗುತ್ತಿದ್ದ ರೈಲು ಗೋವಿಂದಪುರಿ ನಿಲ್ದಾಣದ ಬಳಿ ಹೋಲ್ಡಿಂಗ್ ಲೈನ್‌ಗೆ ತಲುಪಿತ್ತು. ಈ ವೇಳೆ ಸಂಜೆ 4.15ರ ಸುಮಾರಿಗೆ ಹಳಿಗಳ ಮೇಲೆ ಅಗ್ನಿ ಸುರಕ್ಷತಾ ಸಿಲಿಂಡರ್ ಬಿದ್ದಿರುವುದನ್ನು ಕಂಡ ಚಾಲಕ ಆಘಾತಕ್ಕೊಳಗಾಗಿದ್ದಾನೆ. ರೈಲಿನ ವೇಗವು ನಿಧಾನವಾಗಿದ್ದ ಕಾರಣ ತಕ್ಷಣವೇ ಬ್ರೇಕ್‌ ಹಾಕಿ, ಚಾಲಕ ಸಮಯಪ್ರಜ್ಞೆ ಮೆರೆದಿದ್ದಾರೆ. ಬಳಿಕ ನಿಯಂತ್ರಣ ಕೊಠಡಿಗೆ ತಿಳಿಸಿದ ನಂತರ ಚಾಲಕ ಸಿಲಿಂಡರ್ ಅನ್ನು ಕಾನ್ಪುರ ಸೆಂಟ್ರಲ್‌ಗೆ ತಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡಬೇಕು: ಜೈರಾಮ್ ರಮೇಶ್ ಆಗ್ರಹ

  • ರೈಲು ಹಳಿ ಮೇಲೆ ಬಾಂಬ್ ಸ್ಫೋಟ- ಹಳಿ ತಪ್ಪಿದ ಡೀಸೆಲ್ ಲೊಕೋಮೋಟಿವ್

    ರೈಲು ಹಳಿ ಮೇಲೆ ಬಾಂಬ್ ಸ್ಫೋಟ- ಹಳಿ ತಪ್ಪಿದ ಡೀಸೆಲ್ ಲೊಕೋಮೋಟಿವ್

    ರಾಂಚಿ: ರೈಲು ಹಳಿಗಳ ಮೇಲೆ ಬಾಂಬ್ ಸ್ಫೋಟಿಸಲಾಗಿದ್ದು, ಡೀಸೆಲ್ ಲೊಕೋಮೋಟಿವ್ ಹಳಿ ತಪ್ಪಿದೆ ಎಂದು ಧನ್ಬಾದ್ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

     

    train tracker 1

    ಜಾರ್ಖಂಡ್ ನ ಧನ್‍ಬಾದ್ ವಿಭಾಗದ ಗರ್ವಾ ರಸ್ತೆ ಮತ್ತು ಬರ್ಕಾನಾ ನಡುವೆ ಡೀಸೆಲ್ ಲೊಕೋಮೋಟಿವ್ ಚಲಿಸುತ್ತಿದ್ದ ವೇಳೆ ಬಾಂಬ್ ಸ್ಫೋಟಿಸಿದೆ. ರೈಲು ಹಳಿಯ ಒಂದು ಭಾಗವು ಸ್ಫೋಟಗೊಂಡಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

    ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ. ಇದು ನಕ್ಸಲ್ ಸಂಬಂಧಿತ ಘಟನೆ ಎಂದು ಹೇಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಟ್ರ್ಯಾಕ್ ದುರಸ್ತಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

  • ಅತ್ತ ರೈಲು ಬರ್ತಿತ್ತು, ಇತ್ತ ಹಳಿಯಲ್ಲಿ ಸ್ಕೂಟಿ ಸಿಲುಕಿತ್ತು!

    ಅತ್ತ ರೈಲು ಬರ್ತಿತ್ತು, ಇತ್ತ ಹಳಿಯಲ್ಲಿ ಸ್ಕೂಟಿ ಸಿಲುಕಿತ್ತು!

    – ಕ್ಷಣ ಕ್ಷಣಕ್ಕೂ ಆತಂಕ!

    ಗಾಂಧೀನಗರ: ಗುಜರಾತಿನ ಜಮಾನಗರದಲ್ಲಿ ಸಿನಿಮಾ ಶೈಲಿಯ ಶಾಕಿಂಗ್ ವೀಡಿಯೋ ವೈರಲ್ ಆಗಿದೆ. ಒಂದು ಕಡೆ ರೈಲು ಬರುತ್ತಿದ್ರೆ, ಇತ್ತ ಓರ್ವ ವ್ಯಕ್ತಿ ಹಳಿಯಲ್ಲಿ ಸಿಲುಕಿದ್ದ ಸ್ಕೂಟಿ ತೆಗೆಯಲು ಹರಸಾಹಸ ಪಡುತ್ತಿರೋ ವೀಡಿಯೋ ಸ್ಥಳೀಯ ಮಟ್ಟದಲ್ಲಿ ಹರಿದಾಡುತ್ತಿದೆ.

    Scooty Railway Track 3 medium

    ಯುವಕನೋರ್ವ ತನ್ನ ಸ್ಕೂಟಿ ಜೊತೆ ರೈಲ್ವೇ ಹಳಿಯನ್ನ ಕ್ರಾಸ್ ಮಾಡುತ್ತಿದ್ದನು. ಅಷ್ಟರಲ್ಲಿಯೇ ರೈಲು ಆಗಮಿಸುತ್ತಿರೋದು ಕಾಣಿಸಿದೆ. ಯುವಕ ಸಹ ಅವಸರದಲ್ಲಿ ಹಳಿ ಕ್ರಾಸ್ ಮಾಡುವಾಗ ಸ್ಕೂಟರ್ ಅಲ್ಲಿಯೇ ಸಿಲುಕಿಕೊಂಡಿದೆ. ಯುವಕ ಹಳಿಯಿಂದ ಸ್ಕೂಟಿ ಹೊರಗೆ ತೆಗೆಯಲು ಪ್ರಯತ್ನಿಸುತ್ತಿದ್ರೆ, ದೂರದಲ್ಲಿದ್ದ ಜನರ ಎದೆ ಬಡಿತ ಪಕ್ಕದಲ್ಲಿದವರಿಗೂ ಕೇಳಿಸುತ್ತಿತ್ತು.

    Scooty Railway Track 4 medium

    ಯುವಕ 100 ಮೀಟರ್ ಸಮೀಪ ಬರೋವರೆಗೂ ಸ್ಕೂಟಿ ತೆಗೆಯಲು ಪ್ರಯತ್ನಿಸಿದ್ದಾನೆ. ಆದ್ರೆ ಸ್ಕೂಟಿ ಅಲ್ಲಿಯೇ ಸಿಲುಕಿದ ಪರಿಣಾಮ ರೈಲು ಸಮೀಪಕ್ಕೆ ಬರುತ್ತಿದ್ದಂತೆ ಪಕ್ಕಕ್ಕೆ ಜಿಗಿದು ಜೀವ ಉಳಿಸಿಕೊಂಡಿದ್ದಾನೆ. ರೈಲು ಸ್ಕೂಟಿಯನ್ನ ಸುಮಾರು 100 ಮೀಟರ್ ವರೆಗೂ ಎಳೆದೊಯ್ದು ನಿಂತಿದೆ. ರೈಲು ನಿಲ್ಲಿಸಿದ ಬಳಿಕ ಚಾಲಕರು ಅಪ್ಪಚ್ಚಿಯಾಗಿದ್ದ ಸ್ಕೂಟಿಯನ್ನ ತೆಗೆದಿದ್ದಾರೆ.

    Scooty Railway Track 1 medium

    ಈ ಎಲ್ಲ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎದೆ ಝಲ್ಲೆನ್ನಿಸುವ ವೀಡಿಯೋ ಹೆಚ್ಚು ಶೇರ್ ಆಗುತ್ತಿದೆ. ವಾಹನ ಸವಾರರು ಸೂಚಿತ ಮಾರ್ಗದಲ್ಲಿಯೇ ರೈಲು ಹಳಿಯನ್ನ ಕ್ರಾಸ್ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

  • ರೈಲು ಹಳಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಶವ ಪತ್ತೆ

    ರೈಲು ಹಳಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಶವ ಪತ್ತೆ

    ಧಾರವಾಡ: ರೈಲು ಹಳಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾದ ಘಟನೆ ಧಾರವಾಡ ನಗರದ ಬಾರಾಕೊಟ್ರಿ ಬಳಿಯ ಹಳಿಗಳ ಮೇಲೆ ನಡೆದಿದೆ.

    ಶ್ರೀಕರ ಮುತಾಲಿಕ್ ದೇಸಾಯಿ (21) ಮೃತಪಟ್ಟ ವಿದ್ಯಾರ್ಥಿ. ಶ್ರೀಕರ ಧಾರವಾಡ ಬಾರಾಕೊಟ್ರಿ ಬಳಿ ಪವನ ಶಾಲೆಯ ಎದುರಿನ ನಿವಾಸಿಯಾಗಿದ್ದಾನೆ. ಹುಬ್ಬಳ್ಳಿ ಜೈನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ಶ್ರೀಕರ, ಸೋಮವಾರ ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಹೋಗಿದ್ದನು. ಪರೀಕ್ಷೆ ಬರೆಯಲು ಹೋದ ಶ್ರೀಕರ ಕಾಲೇಜಿನಿಂದ ಮನೆಗೆ ವಾಪಸ್ಸಾಗಿರಲಿಲ್ಲ.

    Police Jeep 1

    ರಾತ್ರಿ ಶ್ರೀಕರ ಪೋಷಕರು ಆತನ ಮೊಬೈಲಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಈ ವೇಳೆ ಘಟನೆ ನಡೆದ ಸ್ಥಳದಲ್ಲಿ ಯುವಕನ ಮೊಬೈಲ್ ರಿಂಗ್ ಆಗುವುದನ್ನು ನೋಡಿದ ಸ್ಥಳೀಯರು ಕರೆ ಸ್ವೀಕರಿಸಿ ಮಾತಾಡಿದಾಗ ಘಟನೆ ಬೆಳಕಿಗೆ ಬಂದಿದೆ.

    ಸೋಮವಾರ ರಾತ್ರಿ ಹುಬ್ಬಳ್ಳಿ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಜಿಲ್ಲಾಸ್ಪತ್ರೆ ರವಾನೆ ಮಾಡಿದ್ದಾರೆ. ಶ್ರೀಕರ ಹಳಿ ಪಕ್ಕದಲ್ಲಿ ಕಾಲೇಜು ಬ್ಯಾಗ್ ಹಾಗೂ ಮೊಬೈಲ್ ಇಟ್ಟು ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.