Tag: ರೂಪಾ ಮೌದ್ಗಿಲ್‌

  • ವರ್ತಿಕಾ ಕಟಿಯಾರ್ ದೂರು ನೀಡಿದ ಬೆನ್ನಲ್ಲೇ ಐಎಸ್‌ಡಿಯಿಂದ ಡಿ.ರೂಪಾ ವರ್ಗಾವಣೆ

    ವರ್ತಿಕಾ ಕಟಿಯಾರ್ ದೂರು ನೀಡಿದ ಬೆನ್ನಲ್ಲೇ ಐಎಸ್‌ಡಿಯಿಂದ ಡಿ.ರೂಪಾ ವರ್ಗಾವಣೆ

    ಬೆಂಗಳೂರು: ಇತ್ತೀಚಿಗಷ್ಟೇ ಡಿ.ರೂಪಾ ವಿರುದ್ಧ ವರ್ತಿಕಾ ಕಟಿಯಾರ್ ಸಿಎಸ್‌ಗೆ ದೂರು ನೀಡಿದ್ದರು. ದೂರು ನೀಡಿದ ಬೆನ್ನಲ್ಲೇ ಇದೀಗ ಐಜಿಪಿ ಡಿ.ರೂಪಾರನ್ನು ಐಎಸ್‌ಡಿಯಿಂದ ವರ್ಗಾವಣೆ ಮಾಡಿದೆ.

    ರಾಜ್ಯದಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳ ಸಂಘರ್ಷ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಫ್ರೆ.೨೦ ರಂದು ವರ್ತಿಕಾ ಕಟಿಯಾರ್ ೨೦೦೦ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಡಿ.ರೂಪಾ ವಿರುದ್ಧ ಸಿಎಸ್‌ಗೆ ದೂರು ನೀಡಿದ್ದರು. ಕಳೆದ ವರ್ಷದ ಸೆ.೬ರಂದು ತಮ್ಮ ಅನುಮತಿಯಿಲ್ಲದೇ ಚೇಂಬರ್‌ನಿಂದ ಮಹತ್ವದ ಕಡತಗಳನ್ನು ಪೊಲೀಸ್ ಸಿಬ್ಬಂದಿಯಿಂದ ಡಿ. ರೂಪಾ ತರಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಎರಡು ದಿನಗಳ ಹಿಂದೆಯಷ್ಟೇ ವರ್ತಿಕಾ ಕಟಿಯಾರ್‌ನ್ನು ಗೃಹರಕ್ಷಕ ಮತ್ತು ಪೌರ ರಕ್ಷಣಾ ದಳದ ಡಿಐಜಿ ಹುದ್ದೆಗೆ ಸರ್ಕಾರ ವರ್ಗಾವಣೆ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಡಿ.ರೂಪಾರನ್ನು ಐಎಸ್‌ಡಿಯಿಂದ ಕರ್ನಾಟಕ ಸಿಲ್ಕ್‌ ಬೋರ್ಡ್‌ ಎಂಡಿ ಹುದ್ದೆಗೆ ವರ್ಗ ಮಾಡಿದೆ.ಇದನ್ನೂ ಓದಿ: ಐಜಿಪಿ ರೂಪಾ ವಿರುದ್ಧ ಸಿಎಸ್‌ಗೆ ಡಿಐಜಿ ವರ್ತಿಕಾ ಕಟಿಯಾರ್ ದೂರು

    ಈ ಹಿಂದೆ ಹಿರಿಯ ಅಧಿಕಾರಿಗಳ ಮುಂದೆಯೇ ಸಭೆ ಕೊಠಡಿಯಲ್ಲಿ ಗಲಾಟೆ ಮಾಡಿಕೊಂಡಿದ್ದ ಐಎಸ್‌ಡಿ ಐಜಿಪಿ ರೂಪಾ ಮೌದ್ಗಿಲ್ ಮತ್ತು ಡಿಐಜಿ ವರ್ತಿಕಾ ಕಟಿಯಾರ್ ಸುದ್ದಿ ಆಗಿದ್ರು. ಇತ್ತೀಚಿಗಷ್ಟೇ ಒಂದು ಹಂತ ಮುಂದೆ ಹೋಗಿ ಐಜಿಪಿ ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರ್ತಿಕಾ ಕಟಿಯಾರ್ ದೂರು ನೀಡಿದ್ದರು.

    ರೂಪಾ ಅವರು ನನ್ನ ಕೊಠಡಿಯಲ್ಲಿ ಕೆಳಹಂತದ ಸಿಬ್ಬಂದಿ ಬಳಸಿಕೊಂಡು ದಾಖಲೆಗಳನ್ನು ಇರಿಸಿದ್ದಾರೆ. ಅಲ್ಲದೇ ಆ ದಾಖಲೆಗಳನ್ನು ಬಳಸಿ ನನ್ನ ವಿರುದ್ಧ ಷಡ್ಯಂತ್ರ ಹೇರುವ ಸಾಧ್ಯತೆ ಇದೆ ಎಂದು ವರ್ತಿಕಾ ಕಟಿಯಾರ್ ದೂರಿದ್ದರು.ಇದನ್ನೂ ಓದಿ: ಭಾರತಕ್ಕೂ ತೆರಿಗೆ ಶಾಕ್‌ – ಪ್ರತಿ ಸುಂಕದ ಘೋಷಣೆ ಮಾಡಿದ ಟ್ರಂಪ್

  • ಐಜಿಪಿ ರೂಪಾ ವಿರುದ್ಧ ಸಿಎಸ್‌ಗೆ ಡಿಐಜಿ ವರ್ತಿಕಾ ಕಟಿಯಾರ್ ದೂರು

    ಐಜಿಪಿ ರೂಪಾ ವಿರುದ್ಧ ಸಿಎಸ್‌ಗೆ ಡಿಐಜಿ ವರ್ತಿಕಾ ಕಟಿಯಾರ್ ದೂರು

    ಬೆಂಗಳೂರು: ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಈ ಶಿಸ್ತಿನ ಇಲಾಖೆಯಲ್ಲಿ ಮಹಿಳಾ ಅಧಿಕಾರಿಗಳ ಜಟಾಪಟಿ ಮುಗಿಯೋ ಲಕ್ಷಣಗಳೇ ಕಾಣುತ್ತಿಲ್ಲದಂತಾಗಿದೆ. ಐಪಿಎಸ್‌ ಅಧಿಕಾರಿ‌ ರೂಪಾ (Roopa Moudgil) ವಿರುದ್ಧ ಮತ್ತೋರ್ವ ಮಹಿಳಾ ಅಧಿಕಾರಿ ದೂರು ನೀಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

    ಈ ಹಿಂದೆ ಹಿರಿಯ ಅಧಿಕಾರಿಗಳ ಮುಂದೆಯೇ ಸಭೆ ಕೊಠಡಿಯಲ್ಲಿ ಗಲಾಟೆ ಮಾಡಿಕೊಂಡಿದ್ದ ಐಎಸ್‌ಡಿ ಐಜಿಪಿ ರೂಪಾ ಮೌದ್ಗಿಲ್‌ ಮತ್ತು ಡಿಐಜಿ ವರ್ತಿಕಾ ಕಟಿಯಾರ್ (Vartika Katiyar) ಸುದ್ದಿ ಆಗಿದ್ರು. ಈಗ ಒಂದು ಹಂತ ಮುಂದೆ ಹೋಗಿದ್ದು ಐಜಿಪಿ ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ. ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ – ವಿಧಾನಸೌಧ, ರಾಜಭವನ ಸೇರಿ 258 ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿ ನೋಟೀಸ್

    D Roopa 2 1

    ರೂಪಾ ಅವರು ನನ್ನ ಕೊಠಡಿಯಲ್ಲಿ ಕೆಳಹಂತದ ಸಿಬ್ಬಂದಿ ಬಳಸಿಕೊಂಡು ದಾಖಲೆಗಳನ್ನು ಇರಿಸಿದ್ದಾರೆ. ಅಲ್ಲದೇ  ಆ ದಾಖಲೆಗಳನ್ನು ಬಳಸಿ  ನನ್ನ ವಿರುದ್ಧ ಷಡ್ಯಂತ್ರ ಹೇರುವ ಸಾಧ್ಯತೆ ಇದೆ ಎಂದು ವರ್ತಿಕಾ ಕಟಿಯಾರ್ ದೂರಿದ್ದಾರೆ. ಇದನ್ನೂ ಓದಿ: ಹೃದಯಾಘಾತದಿಂದ ಕಾರಿನಲ್ಲೇ ವ್ಯಕ್ತಿ ಸಾವು – ಕೈ ಮೇಲೆ ಗಾಯ ನೋಡಿ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು

    Vartika Katiyar

    ವರ್ತಿಕಾ ಕಟಿಯಾರ್ ದೂರಿನಲ್ಲಿ ಏನಿದೆ?
    ಸದ್ಯ ರೂಪಾ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ. ಕೆಳಹಂತದ ಮೂವರು ಅಧಿಕಾರಿಗಳನ್ನ (ಮಲ್ಲಿಕಾರ್ಜುನ್, ಮಂಜುನಾಥ್ ಮತ್ತು ಕಿರಣ್) ಬಳಸಿ ದಾಖಲೆಗಳನ್ನು ನನ್ನ ಕೊಠಡಿಯಲ್ಲಿ ಇರಿಸಿದ್ದಾರೆ.  ವಾಟ್ಸಪ್‌ ಮೂಲಕ ಫೋಟೋ ತೆಗೆಸಿದ್ದಾರೆ. ಕಂಟ್ರೋಲ್‌ ರೂಮ್‌ನಿಂದ ಕೀ ತಂದು ಕೊಠಡಿ ತೆರೆಯಲಾಗಿದೆ. ದುರುದ್ದೇಶದಿಂದ ಫೋಟೋ ತೆಗೆಸಲಾಗಿದ್ದು, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ವರ್ತಿಕಾ ಕಟಿಯಾರ್‌ ಆರೋಪಿಸಿದ್ದಾರೆ. ಇದನ್ನೂ ಓದಿ: ವರ್ಷದ ಪ್ರಯತ್ನದ ಫಲ, `ಕಾಜೂರು ಕರ್ಣ’ ಸೆರೆ – ರೈತರ ಗುಂಡಿನ ದಾಳಿಯಿಂದ ಆನೆ ನರಳಾಟ

  • ರೋಹಿಣಿ-ರೂಪಾ ಗಲಾಟೆ ಪ್ರಕರಣ; ಸಿಂಧೂರಿಗೆ ರಿಲೀಫ್ ನೀಡಿದ ಹೈಕೋರ್ಟ್

    ರೋಹಿಣಿ-ರೂಪಾ ಗಲಾಟೆ ಪ್ರಕರಣ; ಸಿಂಧೂರಿಗೆ ರಿಲೀಫ್ ನೀಡಿದ ಹೈಕೋರ್ಟ್

    ಬೆಂಗಳೂರು: ಮಾನನಷ್ಟ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್ ದಾಖಲಿಸಿದ್ದ ಕೇಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಹೈಕೋರ್ಟ್‌ ವಿಚಾರಣೆ ಮುಂದೂಡಿದೆ.

    ಮಾ.12 ರ ವರೆಗೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿಕೆ ಮಾಡಿದೆ. ಅರ್ಜಿ ವಿಚಾರಣಾ ಸಂದರ್ಭದಲ್ಲಿ ರಾಜಿ ಸಂಧಾನಕ್ಕೆ ಪ್ರಯತ್ನಿಸುವಂತೆ ನ್ಯಾ.ಮೊಹಮ್ಮದ್ ನವಾಜ್ ಸಲಹೆ ನೀಡಿದ್ದಾರೆ.

    ಈ ಮೊದಲು ಬೆಂಗಳೂರಿನ 7 ನೇ ಎಸಿಎಂಎಂ ಕೋರ್ಟ್‌ಗೆ ರೂಪಾ‌ ಖಾಸಗಿ ದೂರು ಸಲ್ಲಿಸಿದ್ದರು. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಕೋರ್ಟ್ ನೋಟಿಸ್ ನೀಡಿತ್ತು. 2023ರ ಫೆ.19 ರಂದು ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆ ನೀಡಿದ್ದಾರೆ. ನಂತರ ಅದನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹೇಳಿಕೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಆರೋಪ ಮಾಡಿದ್ದಾರೆ. ಈ ಹೇಳಿಕೆಯನ್ನು 1.8 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ರೋಹಿಣಿ ಸಿಂಧೂರಿ ಅವರ ಅವಹೇಳನಕಾರಿ ಹೇಳಿಕೆ ನಂತರ ತಮ್ಮ ವರ್ಗಾವಣೆಯಾಗಿದೆ. 6 ತಿಂಗಳ ವರೆಗೆ ಸಂಬಳ ನೀಡದೇ ಹುದ್ದೆ ಇಲ್ಲದೇ ವರ್ಗಾಯಿಸಿದ್ದರು. ಈ ಹೇಳಿಕೆಯಿಂದ ನನ್ನ ತಂಗಿ, ಪತಿ, ಮಕ್ಕಳೂ ಮಾನಸಿಕ ಯಾತನೆ ಅನುಭವಿಸಿದ್ದಾರೆ ಎಂದು ರೋಹಿಣಿ ವಿರುದ್ಧ ರೂಪಾ ಮಾನನಷ್ಟ ಮೊಕದ್ದಮೆ ಹೂಡಿದ್ದರು.

  • ಮಾನಹಾನಿ ಕೇಸ್ ರದ್ದು ಕೋರಿ ಡಿ.ರೂಪಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

    ಮಾನಹಾನಿ ಕೇಸ್ ರದ್ದು ಕೋರಿ ಡಿ.ರೂಪಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

    ಬೆಂಗಳೂರು: ತಮ್ಮ ವಿರುದ್ಧ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿದ್ದ ಮಾನಹಾನಿ ಕೇಸ್‌ ರದ್ದುಗೊಳಿಸುವಂತೆ ಕೋರಿದ್ದ ಡಿ. ರೂಪಾ ಮೌದ್ಗಿಲ್ (Roopa Moudgil) ಅವರ ಅರ್ಜಿಯನ್ನ ಹೈಕೋರ್ಟ್‌ ವಜಾಗೊಳಿಸಿದೆ.

    ಐಪಿಎಸ್‌ ಅಧಿಕಾರಿ ಡಿ. ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣದ ಅರ್ಜಿಯನ್ನು ಹೈಕೋರ್ಟ್‌ ಸೋಮವಾರ (ಆ.21) ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆದರೆ ಪ್ರಕರಣ ರದ್ದು ಕೋರಿದ್ದ ಡಿ.ರೂಪಾ‌ ಮೌದ್ಗಿಲ್ ಅರ್ಜಿ ವಜಾಗೊಳಿಸಿದೆ. ಈ ಮೂಲಕ ಹೈಕೋರ್ಟ್ ನಲ್ಲಿ ರೂಪಾ ಮೌದ್ಗಿಲ್ ಗೆ ಹಿನ್ನಡೆ ಉಂಟಾಗಿದ್ದು, ಮತ್ತೆ ಸಂಕಷ್ಟ ಎದುರಾಗಿದೆ. ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ಹೈಕೋರ್ಟ್ ನಕಾರ ಮಾಡಿದೆ.

    ROOPA ROHINI SINDHURI

    ಪ್ರಕರಣದ ಹಿನ್ನೆಲೆ ಏನು?
    ರೂಪಾ ಮೌದ್ಗಿಲ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ (Rohini Sindhuri) ಅವರು ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಕೋರ್ಟ್ ರೂಪಾ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು, ಆ ನಂತರ ಕೋರ್ಟ್‌ಗೆ ಹಾಜರಾಗಿ ರೂಪಾ ಜಾಮೀನು ಪಡೆದಿದ್ದರು. ಇದನ್ನೂ ಓದಿ: ಇಬ್ಬರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ- ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆ

    ಏನಿದು ವಿವಾದ?
    ಸೋಷಿಯಲ್‌ ಮೀಡಿಯಾ ಮತ್ತು ಮಾಧ್ಯಮಗಳ ಮೂಲಕ ಐಎಎಸ್‌ ಅಧಿಕಾರಿ (IAS Officer) ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಅವರು ಬಹಿರಂಗವಾಗಿ ಕಿತ್ತಾಟಕ್ಕೆ ಇಳಿದಿದ್ದರು. ರೋಹಿಣಿ ವಿರುದ್ಧ ರೂಪಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ ಮಾಡಿದ್ದರು. ಬಳಿಕ ಇಬ್ಬರ ನಡುವೆ ಕಿತ್ತಾಟ ಜೋರಾಗಿತ್ತು. ಮುನೀಶ್‌ ಮೌದ್ಗಿಲ್‌ ಹೆಸರನ್ನೂ ರೂಪಾ ಆರೋಪಗಳಲ್ಲಿ ಉಲ್ಲೇಖಿಸಿದ್ದರು. ಅಧಿಕಾರಿಗಳು ಹೀಗೆ ಬಹಿರಂಗವಾಗಿ ಕಿತ್ತಾಡಬಾರದು ಎಂದು ಹಿರಿಯ ಅಧಿಕಾರಿಗಳು, ಸಚಿವರು ಸಲಹೆ ನೀಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಇಬ್ಬರಿಗೂ ಯಾವುದೇ ಹುದ್ದೆ ತೋರಿಸದೇ ವರ್ಗಾವಣೆ ಮಾಡಲಾಗಿತ್ತು. ಇದನ್ನೂ ಓದಿ: ಡಿ.ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IAS ವರ್ಸಸ್‌ IPS: ರೂಪಾ ಮೌದ್ಗಿಲ್‌ಗೆ ಜಾಮೀನು

    IAS ವರ್ಸಸ್‌ IPS: ರೂಪಾ ಮೌದ್ಗಿಲ್‌ಗೆ ಜಾಮೀನು

    ಬೆಂಗಳೂರು: ತನ್ನ ವಿರುದ್ಧ ಐಎಎಸ್‌ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದ ಐಪಿಎಸ್‌ (IPS) ಅಧಿಕಾರಿ ರೂಪಾ ಮೌದ್ಗಿಲ್‌ಗೆ (Roopa Moudgil) ಜಾಮೀನು ಸಿಕ್ಕಿದೆ.

    ರೂಪಾ ಮೌದ್ಗಿಲ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ರೋಹಿಣಿ ಸಿಂಧೂರಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ತನ್ನ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಬೇಕು ಎಂದು ರೂಪಾ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಇದನ್ನೂ ಓದಿ: ರೋಹಿಣಿ ಜೊತೆ ಕಿತ್ತಾಟ – ಮಾತನಾಡದಂತೆ ರೂಪಾಗೆ ನೀಡಿದ್ದ ತಡೆ ತೆರವು

    ROHINI SINDHURI ROOPA

    ಪ್ರಕರಣಕ್ಕೆ ಸಂಬಂಧಿಸಿದಂತೆ 24 ನೇ ಎಸಿಎಂಎಂ ಕೋರ್ಟ್ ಹಾಲ್‌ಗೆ ಇಂದು ಐಪಿಎಸ್‌ ಅಧಿಕಾರಿ ರೂಪಾ ಹಾಜರಾದರು. ಕೋರ್ಟ್‌ಗೆ ಹಾಜರಾಗಿ ಜಾಮೀನು ರೂಪಾ ಜಾಮೀನು ಪಡೆದುಕೊಂಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜೂನ್ 22 ಕ್ಕೆ ಮುಂದೂಡಲಾಗಿದೆ.

    ಸೋಷಿಯನ್‌ ಮೀಡಿಯಾ ಮತ್ತು ಮಾಧ್ಯಮಗಳ ಮೂಲಕ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಅವರು ಬಹಿರಂಗವಾಗಿ ಕಿತ್ತಾಟಕ್ಕೆ ಇಳಿದಿದ್ದರು. ರೋಹಿಣಿ ವಿರುದ್ಧ ರೂಪಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ ಮಾಡಿದ್ದರು. ಬಳಿಕ ಇಬ್ಬರ ನಡುವೆ ಕಿತ್ತಾಟ ಜೋರಾಗಿತ್ತು. ಮುನೀಶ್‌ ಮೌದ್ಗಿಲ್‌ ಹೆಸರನ್ನೂ ರೂಪಾ ಆರೋಪಗಳಲ್ಲಿ ಉಲ್ಲೇಖಿಸಿದ್ದರು. ಅಧಿಕಾರಿಗಳು ಹೀಗೆ ಬಹಿರಂಗವಾಗಿ ಕಿತ್ತಾಡಬಾರದು ಎಂದು ಹಿರಿಯ ಅಧಿಕಾರಿಗಳು, ಸಚಿವರು ಸಲಹೆ ನೀಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಇಬ್ಬರಿಗೂ ಯಾವುದೇ ಹುದ್ದೆಯನ್ನು ತೋರಿಸದೇ ವರ್ಗಾವಣೆ ಮಾಡಲಾಗಿತ್ತು. ಇದನ್ನೂ ಓದಿ: ರೂಪಾ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಿದ ರೋಹಿಣಿ

    ರೂಪಾ ಪತಿ ಮುನೀಶ್‌ ಮೌದ್ಗಿಲ್‌ ಅವರನ್ನು ಸಹ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು.