Tag: ರಾಜಮೌಳಿ

  • ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

    ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

    ಎಸ್‌ಎಸ್ ರಾಜಮೌಳಿ ಹಾಗೂ ಮಹೇಶ್‌ಬಾಬು (Mahesh Babu) ಕಾಂಬಿನೇಷನ್‌ನ ಎಸ್‌ಎಸ್‌ಎಂಬಿ29 ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸವು ಭರ್ಜರಿಯಾಗಿ ಸಾಗಿವೆ. ಸಿನಿಮಾಗೆ ಪಾತ್ರಗಳ ಆಯ್ಕೆ ಕೂಡಾ ಅಷ್ಟೇ ಬಿರುಸಿನಿಂದ ಸಾಗಿದೆ. ಮಹೇಶ್ ಬಾಬು ಅವರ ತಂದೆ ಪಾತ್ರಕ್ಕಾಗಿ ಚಿತ್ರತಂಡ ತಮಿಳು ನಟ ಚಿಯಾನ್ ವಿಕ್ರಂ ಅವರನ್ನ ಆಯ್ಕೆ ಮಾಡಿಕೊಂಡಿತ್ತು. ಈ ಸಿನಿಮಾದಲ್ಲಿ ನಟಿಸುವಂತೆ ಚಿಯಾನ್ ವಿಕ್ರಂ (Chiyaan Vikram) ಅವರನ್ನು ಕೇಳಿದಾಗ ಅವರು ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ.

    ತಮಿಳು ನಟ ಚಿಯಾನ್ ವಿಕ್ರಂ ಯಾಕೆ ನಟಿಸುವುದಿಲ್ಲ ಅನ್ನೋದಕ್ಕೆ ಕಾರಣ ಕೂಡಾ ಇದೆ. ಹೌದು, ವೀರ ಧೀರ ಸೂರನ್ ಸಿನಿಮಾದ ನಟ ವಿಕ್ರಂ ಎರಡು ಸಿನಿಮಾಗಳ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಾಜಮೌಳಿ ಸಿನಿಮಾದಲ್ಲಿ ನಟಿಸಲು ಡೇಟ್ ಕ್ಲ್ಯಾಶ್ ಆಗುವ ಕಾರಣದಿಂದ ಮಹೇಶ್ ಬಾಬು ತಂದೆ ಪಾತ್ರದಲ್ಲಿ ನಟಿಸೋಕೆ ಸಾಧ್ಯವಾಗುವುದಿಲ್ಲ ಎಂದು ನಟ ವಿಕ್ರಂ ಹೇಳಿದ್ದಾರಂತೆ. ಹೀಗಾಗಿ ಚಿತ್ರತಂಡ ಮಾಧವನ್ ಅವರನ್ನ ಸೂಪರ್ ಸ್ಟಾರ್ ತಂದೆ ಪಾತ್ರದಲ್ಲಿ ನಟಿಸುವಂತೆ ಅಪ್ರೋಚ್ ಮಾಡಿದೆ ಎನ್ನಲಾಗ್ತಿದೆ. ಇದನ್ನೂ ಓದಿ: `ಕಾಮದ ಬಣ್ಣ ಕೆಂಪು’ ಎಂದ ಯೋಗರಾಜ್ ಭಟ್

    ಇನ್ನು ಎಸ್‌ಎಸ್‌ಎಂಬಿ29 ಹೆಸರಿನ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಆರ್‌ಆರ್‌ಆರ್ ಸಿನಿಮಾ ಬಳಿಕ ನಿರ್ದೇಶಕ ರಾಜಮೌಳಿ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದೆ. ಹೀಗಾಗಿ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ಇದನ್ನೂ ಓದಿ: ಬಹುಭಾಷಾ ನಟ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಪ್ರಕಾಶ್ ರೈಗೆ ಕುಟುಕಿದ ಎಂಬಿ ಪಾಟೀಲ್‌

    ಜೊತೆಗೆ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಮೊದಲ ಬಾರಿಗೆ ಒಂದಾಗ್ತಿದೆ. ಇನ್ನು ಈ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಈ ಭಾಗದ ಕೆಲ ಸಾಹಸ ದೃಶ್ಯಗಳನ್ನ ಕೀನ್ಯಾದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯ ಸೀರಿಯಲ್ ಫಸ್ಟ್ ಲುಕ್ ಔಟ್

    ಅಂದಹಾಗೆ ಚಿಯಾನ್ ವಿಕ್ರಂ ರಿಜೆಕ್ಟ್ ಮಾಡಿದ ನಂತರ ಆರ್.ಮಾಧವನ್ ಅವರನ್ನ ಈ ಪಾತ್ರಕ್ಕಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರಂತೆ. ಇನ್ನು ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಈ ಬಗ್ಗೆ ನಿರ್ದೇಶಕರಾಗಲಿ ಅಥವಾ ಚಿತ್ರತಂಡವಾಗಲಿ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ. ಮಾಧವನ್ ಇಂತಹ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾರೆ ಎನ್ನುವ ನಿರ್ಧಾರ ನಿರ್ದೇಶಕರದ್ದಾಗಿದೆ. ಈ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಚಿತ್ರತಂಡವೇ ಹೇಳಬೇಕಿದೆ.

  • ಆರ್ಮಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಬೇಡಿ: ರಾಜಮೌಳಿ ಮನವಿ

    ಆರ್ಮಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಬೇಡಿ: ರಾಜಮೌಳಿ ಮನವಿ

    ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯ ನಡುವೆ ಫ್ಯಾನ್ಸ್‌ಗೆ ಸಂದೇಶವೊಂದನ್ನು ರಾಜಮೌಳಿ (Rajamouli) ಹಂಚಿಕೊಂಡಿದ್ದಾರೆ. ಭಾರತೀಯ ಸೇನೆಗೆ ಸಂಬಂಧಿಸಿದ ಯಾವುದೇ ಫೋಟೋ, ವಿಡಿಯೋಗಳನ್ನು ಶೇರ್ ಮಾಡಬೇಡಿ. ಇದರಿಂದ ಶತ್ರುಗಳಿಗೆ ಸಹಾಯವಾಗಬಹುದು ಎಂದು ರಾಜಮೌಳಿ ಎಚ್ಚರಿಸಿದ್ದಾರೆ. ಇದನ್ನೂ ಓದಿ:ಭಾರತ-ಪಾಕ್ ನಡುವೆ ಉದ್ವಿಗ್ನ ಹೊತ್ತಲ್ಲೇ ದಿಟ್ಟ ನಿರ್ಧಾರ ಕೈಗೊಂಡ ಕಮಲ್ ಹಾಸನ್

    Rajamouliಭಾರತೀಯ ಸೇನೆಗೆ ಸಂಬಂಧಪಟ್ಟ ಯಾವುದೇ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಬೇಡಿ. ಅವುಗಳನ್ನು ಹಂಚಿಕೊಳ್ಳಬೇಡಿ. ಇದರಿಂದ ಶತ್ರುಗಳಿಗೆ ಸಹಾಯವಾಗಬಹುದು. ಪರಿಶೀಲಸದೇ ಯಾವುದೇ ಸುದ್ದಿಗಳನ್ನು ಶೇರ್ ಮಾಡೋದನ್ನು ನಿಲ್ಲಿಸಿ. ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸೋಣ. ಶಾಂತವಾಗಿ, ಜಾಗೃತೆಯಾಗಿ, ಸಕರಾತ್ಮಕವಾಗಿರೋಣ. ಗೆಲುವು ನಮ್ಮದೇ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ ಜೊತೆ ಹಸೆಮಣೆ ಏರಿದ ‘ಸೀತಾ ವಲ್ಲಭ’ ನಟಿ ಸುಪ್ರೀತಾ

    ನಮ್ಮ ದೇಶವನ್ನು ಭಯೋತ್ಪಾದನೆಯಿಂದ ರಕ್ಷಿಸುವಲ್ಲಿ ಅಚಲ ಧೈರ್ಯ ತೋರಿದ ನಮ್ಮ ಭಾರತೀಯ ಸಶಸ್ತ್ರ ಪಡೆಗಳಿಗೆ ನಮನಗಳು. ಶಾಂತಿ ಮತ್ತು ಏಕತೆಗಾಗಿ ಒಂದು ರಾಷ್ಟ್ರವಾಗಿ ಒಟ್ಟಾಗಿ ನಿಲ್ಲೋಣ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

    ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ಭಾರತ ಈಗ ಪಾಕ್‌ಗೆ ತಕ್ಕ ಪಾಠ ಕಲಿಸುತ್ತಿದೆ.

  • ಮೂರು ಭಾಗಗಳಲ್ಲಿ ಬರಲಿದೆ ‘ಮಹಾಭಾರತ’- ರಾಜಮೌಳಿ ಕನಸಿಗೆ ನಾನಿ ಸಾಥ್

    ಮೂರು ಭಾಗಗಳಲ್ಲಿ ಬರಲಿದೆ ‘ಮಹಾಭಾರತ’- ರಾಜಮೌಳಿ ಕನಸಿಗೆ ನಾನಿ ಸಾಥ್

    ತೆಲುಗಿನ ಖ್ಯಾತ ಡೈರೆಕ್ಟರ್ ರಾಜಮೌಳಿ (Rajamouli) ಅವರು ಮಹೇಶ್ ಬಾಬುಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದರ ನಡುವೆ ಮುಂದಿನ ಚಿತ್ರದ ಬಗ್ಗೆ ಅವರು ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ಮಹಾಭಾರತ’ (Mahabharat) ಸಿನಿಮಾ ಮಾಡೋದಾಗಿ ‘ಬಾಹುಬಲಿ’ ಡೈರೆಕ್ಟರ್ ರಾಜಮೌಳಿ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ‘ನನ್ನರಸಿ ರಾಧೆ’ ನಟಿ

    Rajamouli

    ನ್ಯಾಚುರಲ್ ಸ್ಟಾರ್ ನಾನಿ ಮತ್ತು ಶ್ರೀನಿಧಿ ಶೆಟ್ಟಿ ನಟನೆಯ ‘ಹಿಟ್ 3’ ಸಿನಿಮಾ ಮೇ 1ರಂದು ರಿಲೀಸ್ ಆಗಲಿದೆ. ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಾಜಮೌಳಿ ಮಾತನಾಡಿ, ‘ಮಹಾಭಾರತ’ 3 ಭಾಗಗಳಲ್ಲಿ ಬರಲಿದೆ. ಪ್ರತಿಯೊಂದು ಭಾಷೆಯ ಪ್ರೇಕ್ಷಕರು ನೋಡಬೇಕು. ಹಾಗಾಗಿ ಬಹುಭಾಷೆಗಳಲ್ಲಿ ಮಹಾಭಾರತ ಚಿತ್ರ ಮಾಡೋದಾಗಿ ಹೇಳಿದ್ದಾರೆ. ಇದನ್ನೂ ಓದಿ:ದರ್ಶನ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ- ವಾವ್ ಎಂದ ಫ್ಯಾನ್ಸ್

    rajamouli

    ನಾನಿ ಕೂಡ ‘ಮಹಾಭಾರತ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸೋದಾಗಿ ರಾಜಮೌಳಿ ತಿಳಿಸಿದ್ದಾರೆ. ಯಾವ ಪಾತ್ರ ಎಂಬುದನ್ನು ಅವರು ಬಿಟ್ಟು ಕೊಟ್ಟಿಲ್ಲ. ತಂದೆ ವಿಜೇಂದ್ರ ಪ್ರಸಾದ್ ಅವರು 3 ಭಾಗಗಳಲ್ಲಿ ‘ಮಹಾಭಾರತ’ ತರಲು ಪ್ಲ್ಯಾನ್ ಮಾಡಿದ್ದಾರೆ. ಇದರ ಸ್ಕ್ರೀಪ್ಟ್‌ ಕೆಲಸವು ಕೆಲವು ವರ್ಷಗಳಿಂದ ನಡೆಯುತ್ತಿದೆ ಎಂದಿದ್ದಾರೆ ರಾಜಮೌಳಿ.

    nani

    ಅಂದಹಾಗೆ, ಇತ್ತೀಚೆಗೆ ‘ಮಹಾಭಾರತ’ ಸಿನಿಮಾ ಮಾಡೋದು ನನ್ನ ಕನಸು ಎಂದು ಆಮೀರ್ ಖಾನ್ ಹೇಳಿದ್ದರು. ಇದೀಗ ರಾಜಮೌಳಿ ಕೂಡ ‘ಮಹಾಭಾರತ’ ಬರುವ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಹಾಗಾದ್ರೆ ಎರಡೆರಡು ಮಹಾಭಾರತ ಹೆಸರಿನಲ್ಲಿ ಸಿನಿಮಾ ಬರ‍್ತಾವಾ? ಎಂದು ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ. ರಾಜಮೌಳಿ ಮತ್ತು ಆಮೀರ್ ನಡೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಈ ಬಗ್ಗೆ ಇಬ್ಬರೂ ಕ್ಲ್ಯಾರಿಟಿ ಕೊಡ್ತಾರಾ ಕಾಯಬೇಕಿದೆ.

  • ಮಹೇಶ್ ಬಾಬು ಜೊತೆ ನಟಿಸಲು ಪ್ರಿಯಾಂಕಾ ಚೋಪ್ರಾಗೆ 30 ಕೋಟಿ ಸಂಭಾವನೆ

    ಮಹೇಶ್ ಬಾಬು ಜೊತೆ ನಟಿಸಲು ಪ್ರಿಯಾಂಕಾ ಚೋಪ್ರಾಗೆ 30 ಕೋಟಿ ಸಂಭಾವನೆ

    ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಸ್ಟಾರ್ ನಟಿಯರಾದ ಆಲಿಯಾ ಭಟ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ನಯನತಾರಾರನ್ನೇ ಹಿಂದಿಕ್ಕಿದ್ದಾರೆ. ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ 30 ಕೋಟಿ ರೂ. ಸಂಭಾವನೆಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಸ್ಟಾರ್ ನಟಿಯರಿಗೆ ಪ್ರಿಯಾಂಕಾ ಸೆಡ್ಡು ಹೊಡೆದಿದ್ದಾರೆ.

    priyanka chopra

    ಕಿಯಾರಾ, ಆಲಿಯಾ, ದೀಪಿಕಾ ಪಡುಕೋಣೆ ಸೇರಿದಂತೆ ಕೆಲ ಟಾಪ್ ನಟಿಯರು ಒಂದು ಸಿನಿಮಾಗೆ 5ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗ 30 ಕೋಟಿ ರೂ. ಸಂಭಾವನೆಯನ್ನು ಪ್ರಿಯಾಂಕಾ ಪಡೆಯುವ ಮೂಲಕ ಎಲ್ಲರ ಹುಬ್ಬೆರಿಸಿದ್ದಾರೆ. ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆದ ಭಾರತದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

    mahesh babu

    ಕಳೆದ ಕೆಲವು ವರ್ಷಗಳಿಂದ ದೇಸಿ ಗರ್ಲ್ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಮಹೇಶ್ ಬಾಬು (Mahesh Babu) ನಟನೆಯ 29ನೇ ಚಿತ್ರಕ್ಕೆ (SSMB29) ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ಒಡಿಶಾ, ವಿಶಾಖಪಟ್ಟಣಂ, ಹೈದರಾಬಾದ್‌ನಲ್ಲಿ ಈಗಾಗಲೇ ಶೂಟಿಂಗ್ ನಡೆಯುತ್ತಿದ್ದು, ನಟಿ ಕೂಡ ಭಾಗಿಯಾಗಿದ್ದಾರೆ. ಈ ಸಿನಿಮಾವನ್ನು ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ:‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್

    priyanka chopra 1 1

    ಈ ಹಿಂದೆ ರಾಮ್ ಚರಣ್, ದಳಪತಿ ವಿಜಯ್ ಜೊತೆ ತೆಲುಗು ಸಿನಿಮಾಗಳಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ಈಗ ಮಹೇಶ್ ಬಾಬುಗೆ ನಾಯಕಿಯಾಗಿ ಬರೋಬ್ಬರಿ 20 ವರ್ಷಗಳ ಬಳಿಕ ಸೌತ್ ಸಿನಿಮಾರಂಗಕ್ಕೆ ನಟಿ ಕಮ್ ಬ್ಯಾಕ್ ಆಗ್ತಿದ್ದಾರೆ.

  • ಹೊಕ್ಕಳಿಗೆ 2.7 ಕೋಟಿ ಮೌಲ್ಯದ ಡೈಮಂಡ್ ರಿಂಗ್ ಧರಿಸಿದ ಪ್ರಿಯಾಂಕಾ ಚೋಪ್ರಾ- ಬೆಲೆ ಕೇಳಿ ಫ್ಯಾನ್ಸ್‌ ಶಾಕ್

    ಹೊಕ್ಕಳಿಗೆ 2.7 ಕೋಟಿ ಮೌಲ್ಯದ ಡೈಮಂಡ್ ರಿಂಗ್ ಧರಿಸಿದ ಪ್ರಿಯಾಂಕಾ ಚೋಪ್ರಾ- ಬೆಲೆ ಕೇಳಿ ಫ್ಯಾನ್ಸ್‌ ಶಾಕ್

    ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಮಹೇಶ್ ಬಾಬು ನಟನೆಯ ಸಿನಿಮಾಗಾಗಿ ಭಾರತಕ್ಕೆ ಬಂದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಹೊಕ್ಕಳಿಗೆ ಧರಿಸಿದ 2.7 ಕೋಟಿ ರೂ. ಮೌಲ್ಯದ ಡೈಮಂಡ್ ರಿಂಗ್ ವಿಚಾರವಾಗಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇದನ್ನೂ ಓದಿ:ಶಿವಣ್ಣ ನಿವಾಸಕ್ಕೆ ಯಶ್‌ ದಂಪತಿ ಭೇಟಿ

    priyanka chopra 1

    ಮುಂಬೈ ಏರ್‌ಪೋರ್ಟ್‌ನಿಂದ ಹೊರಬರುವಾಗ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಕೋ-ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲೀಶ್ ಲುಕ್ ಫ್ಯಾನ್ಸ್ ಗಮನ ಸೆಳೆದಿದೆ. ಅದರಲ್ಲೂ ಪ್ರಿಯಾಂಕಾ ಹೊಕ್ಕಳಿಗೆ ಧರಿಸಿದ ಬೆಲ್ಲಿ ಬಟನ್ ಡೈಮಂಡ್ ಪಿನ್ ಇದರ ಬೆಲೆ ಕೇಳಿ ಗಾಬರಿಯಾಗಿದ್ದಾರೆ. ಇದರ ಬೆಲೆ ಬರೋಬ್ಬರಿ 2.7 ಕೋಟಿ ರೂ. ಮೌಲ್ಯದಾಗಿದೆ ಎಂದು ಕೇಳಿಯೇ ಅಭಿಮಾನಿಗಳು ದಂಗಾಗಿದ್ದಾರೆ.

    ಇನ್ನೂ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಲೀಡ್ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಎಂದೂ ನಟಿಸಿರದ ವಿಭಿನ್ನ ಪಾತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ತಿದ್ದಾರೆ.

    priyanka

    ಈಗಾಗಲೇ ಹೈದರಾಬಾದ್, ಒಡಿಶಾ, ವಿಶಾಖಪಟ್ಟಣಂ ಸೇರಿದಂತೆ ಹಲವೆಡೆ ಚಿತ್ರೀಕರಣದಲ್ಲಿ ನಟಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ನಡೆಯುತ್ತಿದೆ.‌ ಸಿನಿಮಾದ ಹೆಚ್ಚಿನ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

  • ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ (S S Rajamouli)ಮೇಲೆ ಗಂಭೀರ ಆರೋಪ ಮಾಡಿ, ಆತ್ಮಹತ್ಯೆಗೆ ಶರಣಾಗಿದ್ದಾರೆ ಖ್ಯಾತ ನಿರ್ಮಾಪಕ ಶ್ರೀನಿವಾಸ್ ರಾವ್. ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಯಮದೊಂಗ (Yamadonga) ಸಿನಿಮಾವನ್ನು ಶ್ರೀನಿವಾಸ್ ರಾವ್  (Srinivas Rao)ನಿರ್ಮಾಣ ಮಾಡಿದ್ದರು.

    Rajamouli

    ಎಸ್.ಎಸ್ ರಾಜಮೌಳಿಯ ಆತ್ಮಿಯ ಸ್ನೇಹಿತನೂ ಆಗಿದ್ದ ಶ್ರೀನಿವಾಸ್ ರಾವ್‍ ಡೆತ್ ನೋಟ್ ಮತ್ತು ಸಾಯುವ ಮುನ್ನ ವಿಡಿಯೋವೊಂದನ್ನು ಮಾಡಿ, ತನ್ನ ಸಾವಿಗೆ ರಾಜಮೌಳಿ ಮತ್ತು ಅವರ ಪತ್ನಿ ರಮಾ ಕಾರಣ ಅಂತ ಹೇಳಿಕೊಂಡಿದ್ದಾರೆ. ಜೊತೆಗೆ ರಾಜಮೌಳಿ ಮತ್ತು ತನ್ನ ನಡುವಿನ ಲವ್ ಸ್ಟೋರಿಯನ್ನು ಶ್ರೀನಿವಾಸ್ ಹಂಚಿಕೊಂಡಿದ್ದಾರೆ.

    rajamouli

    ರಾಜಮೌಳಿ ಮತ್ತು ನಾನು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದೆವು.  ಆ ಹುಡುಗಿಯನ್ನು ರಾಜಮೌಳಿ ತ್ಯಾಗ ಮಾಡುವಂತೆ ನನಗೆ ಹೇಳಿದ. ಹಾಗಾಗಿ ನಾನು ಆ ಹುಡುಗಿಯನ್ನು ರಾಜಮೌಳಿಗೆ ಬಿಟ್ಟು ಕೊಟ್ಟೆ. ಅಲ್ಲಿಂದ ನಾನು ಮದುವೆ ಆಗಿಲ್ಲ. ರಾಜಮೌಳಿಗೂ ನನಗೂ 34 ವರ್ಷದ ಸ್ನೇಹ.  ಇತ್ತೀಚೆಗೆ ಸಣ್ಣ ಮನಸ್ತಾಪ ಆಯಿತು. ನಾನು ನಮ್ಮ ಲವ್ ಸ್ಟೋರಿಯನ್ನು ಸಿನಿಮಾ ಮಾಡೋದಾಗಿ ಹೇಳಿದೆ. ಅಲ್ಲಿಂದ ರಾಜಮೌಳಿ ನಿರಂತರವಾಗಿ ನನಗೆ ಟಾರ್ಚರ್ ಮಾಡಲು ಶುರು ಮಾಡಿದ ಅಂತ ಡೆತ್ ನೋಟ್ ನಲ್ಲಿ  ಶ್ರೀನಿವಾಸ್ ರಾವ್ ಬರೆದಿದ್ದಾರೆ.

    ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರಾಜಮೌಳಿ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಈವರೆಗೂ ಶ್ರೀನಿವಾಸ್ ರಾವ್ ಅವರ ಮೃತದೇಹ ಸಿಕ್ಕಿಲ್ಲ ಅನ್ನೋ ಮಾಹಿತಿಯೂ ಇದೆ.

  • ದೇಸಿ ಗರ್ಲ್ ಈಗ ದುಬಾರಿ- ರಾಜಮೌಳಿ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

    ದೇಸಿ ಗರ್ಲ್ ಈಗ ದುಬಾರಿ- ರಾಜಮೌಳಿ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

    ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಹಿಂದಿ ಸಿನಿಮಾದಲ್ಲಿ ನಟಿಸದೇ ಹಲವು ವರ್ಷಗಳೇ ಕಳೆದಿದೆ. ಹಾಲಿವುಡ್ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿರುವ ನಟಿ ಈಗ ಮತ್ತೆ ಸೌತ್ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಾಜಮೌಳಿ (Rajamouli) ನಿರ್ದೇಶನದಲ್ಲಿ ಮಹೇಶ್ ಬಾಬು (Mahesh Babu) ಜೊತೆ ನಟಿಸಲು 30 ಕೋಟಿ ರೂ. ಸಂಭಾವನೆಯನ್ನು ನಟಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    priyanka chopra

    ಪ್ರಿಯಾಂಕಾಗೆ 42 ವರ್ಷವಾದ್ರೂ ನಟಿಯ ಚಾರ್ಮ್ ಇನ್ನೂ ಕಮ್ಮಿಯಾಗಿಲ್ಲ. ಅವರಿಗೆ ಇನ್ನೂ ಬೇಡಿಕೆಯಿದೆ. ಹಾಲಿವುಡ್‌ನಲ್ಲಿ ಆ್ಯಕ್ಷನ್ ಕ್ವೀನ್ ಆಗಿ ಮಿಂಚುತ್ತಿದ್ದಾರೆ. ಹೀಗಿರುವಾಗ ಬಹುನಿರೀಕ್ಷಿತ ಸಿನಿಮಾ ರಾಜಮೌಳಿ ಮತ್ತು ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ 30 ಕೋಟಿ ರೂ. ಕೇಳಿದ್ದಾರೆ. ಅದಕ್ಕೆ ಚಿತ್ರತಂಡ ಕೂಡ ಸಮ್ಮತಿ ಸೂಚಿಸಿದೆ ಎನ್ನಲಾದ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ.

    mahesh babu

    ಇನ್ನೂ ಭಾರತದ ಯಾವುದೇ ನಟಿ ಇಷ್ಟು ಸಂಭಾವನೆ ಪಡೆದಿಲ್ಲ. ಹಾಗಾಗಿ ಪ್ರಿಯಾಂಕಾ ಭಾರತದ ಅತ್ಯಂತ ದುಬಾರಿ ನಟಿ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಅನಿಮಲ್’ ನಿರ್ದೇಶಕನ ಜೊತೆ ಪ್ರಭಾಸ್ ಸಿನಿಮಾ ಶುರುವಾಗೋದು ಯಾವಾಗ?- ಸಿಕ್ತು ಅಪ್‌ಡೇಟ್

    ಮಹೇಶ್ ಬಾಬು ಈ ಸಿನಿಮಾಗೆ ಕಳೆದ 2 ವರ್ಷಗಳಿಂದ ತಯಾರಿ ನಡೆಯುತ್ತಿದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನೆರವೇರಿದೆ. ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ.

  • ‘ಬಾಹುಬಲಿ 3’ಗಾಗಿ ಮತ್ತೆ ಒಂದಾಗ್ತಾರಾ ರಾಜಮೌಳಿ, ಪ್ರಭಾಸ್?

    ‘ಬಾಹುಬಲಿ 3’ಗಾಗಿ ಮತ್ತೆ ಒಂದಾಗ್ತಾರಾ ರಾಜಮೌಳಿ, ಪ್ರಭಾಸ್?

    ‘ಬಾಹುಬಲಿ’ (Bahubali) ಪಾರ್ಟ್‌ 1 ಮತ್ತು 2ರ ಮೂಲಕ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ಪ್ರಭಾಸ್ ಮತ್ತು ರಾಜಮೌಳಿ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ‘ಬಾಹುಬಲಿ 3’ ಕುರಿತು ಫ್ಯಾನ್ಸ್‌ಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಇದನ್ನೂ ಓದಿ:ಖಡಕ್ ಲುಕ್‌ನಲ್ಲಿ ಬಂದ ಪುಷ್ಪರಾಜ್- ‘ಪುಷ್ಪ 2’ ಪೋಸ್ಟರ್ ಔಟ್

    bahubali

    ಇತ್ತೀಚೆಗೆ ‘ಕಂಗುವ’ (Kanguva) ಚಿತ್ರದ ನಿರ್ಮಾಪಕ ಕೆ.ಇ ಜ್ಞಾನವೇಲ್ ರಾಜ ಸಂದರ್ಶನವೊಂದರಲ್ಲಿ ಮಾತನಾಡಿ, ‘ಬಾಹುಬಲಿ 3’ (Bahubali 3) ಚಿತ್ರ ಮಾಡುವ ಕುರಿತು ಪ್ಲ್ಯಾನ್ ನಡೆಯುತ್ತಿದೆ ಎಂದಿದ್ದಾರೆ. ಬಾಹುಬಲಿ 1 ಮತ್ತು 2 ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದರು. ಈಗ ಗ್ಯಾಪ್ ನಂತರ ಬಾಹುಬಲಿ ಪಾರ್ಟ್ 3ಗಾಗಿ ಪ್ಲ್ಯಾನಿಂಗ್ ನಡೆಯುತ್ತಿದೆ ಎಂದಿದ್ದಾರೆ.

    FotoJet 18

    ‘ಬಾಹುಬಲಿ 3’ ಮಾಡುವ ಕುರಿತು ರಾಜಮೌಳಿ (Rajamouli) ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಬಾಹುಬಲಿ 3’ಗಾಗಿ ಪ್ರಭಾಸ್ (Prabhas) ಮತ್ತು ರಾಜಮೌಳಿ ಜೊತೆಯಾಗಿ ಮತ್ತೆ ಕೆಲಸ ಮಾಡುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದಿದೆ.

    bahubali box office 1

    ಇನ್ನೂ ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆಗಿನ ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಪ್ರಭಾಸ್ ಅವರು ‘ಕಣ್ಣಪ್ಪ’ ಮತ್ತು ‘ದಿ ರಾಜ ಸಾಬ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಬಾಹುಬಲಿ ಸೀಕ್ವೆಲ್ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.

  • ಪ್ರಿನ್ಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ರಾಜಮೌಳಿ ಜೊತೆಗಿನ ಮಹೇಶ್ ಬಾಬು ಚಿತ್ರಕ್ಕೆ ಮುಹೂರ್ತ ಫಿಕ್ಸ್

    ಪ್ರಿನ್ಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ರಾಜಮೌಳಿ ಜೊತೆಗಿನ ಮಹೇಶ್ ಬಾಬು ಚಿತ್ರಕ್ಕೆ ಮುಹೂರ್ತ ಫಿಕ್ಸ್

    ‘ಗುಂಟೂರು ಖಾರಂ’ ಸಿನಿಮಾದ ಸಕ್ಸಸ್ ನಂತರ ಮಹೇಶ್ ಬಾಬು (Mahesh Babu) ಅವರು ‘ಬಾಹುಬಲಿ’ (Bahubali) ಖ್ಯಾತಿಯ ರಾಜಮೌಳಿ (Rajamouli) ಜೊತೆ ಕೈಜೋಡಿಸಿದ್ದಾರೆ. ಇದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇಬ್ಬರ ಕಾಂಬಿನೇಷನ್ ಸಿನಿಮಾ ಶುರುವಾಗೋದು ಯಾವಾಗ ಎಂಬ ಪ್ರಶ್ನೆಗೆ ಈಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ಸಂದೇಶ್ ಪ್ರೊಡಕ್ಷನ್ಸ್ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್

    mahesh babu

    ರಾಜಮೌಳಿ ಜೊತೆಗಿನ ಸಿನಿಮಾಗಾಗಿ ಮಹೇಶ್ ಬಾಬು ಭರ್ಜರಿ ಸಿದ್ಧತೆ ಮಾಡಿಕೊಳ್ತಿದ್ದಾರೆ. ಸಿನಿಮಾಗಾಗಿ ಕೆಲ ತಿಂಗಳುಗಳ ಹಿಂದೆ ಮಹೇಶ್ ಬಾಬು ಜರ್ಮನಿಗೆ ಹೋಗಿದ್ದರು. ಈಗಲೂ ಈ ಚಿತ್ರದ ತಯಾರಿ ಮುಗಿದಿಲ್ಲ. ಎಲ್ಲಾ ಪಕ್ಕಾ ಆದ್ಮೇಲೆಯೇ ಅಖಾಡಕ್ಕೆ ಇಳಿಯಲು ಮಹೇಶ್ ಬಾಬು ನಿರ್ಧರಿಸಿದ್ದಾರೆ. ಹಾಗಾಗಿ ಆಗಸ್ಟ್ ವೇಳೆಗೆ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ.

    FotoJet 6 5

    ಮೂಲಗಳ ಪ್ರಕಾರ, ಈ ಸಿನಿಮಾ ಹೆಚ್ಚು ಕಮ್ಮಿ ಇಪ್ಪತ್ತು ದೇಶಗಳಲ್ಲಿ ಇದರ ಶೂಟಿಂಗ್ ನಡೆಯಲಿದೆ. ಬಹುತೇಕ ಕಾಡಿನಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಅದಷ್ಟೇ ಅಲ್ಲ, 8 ಗೆಟಪ್‌ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ. ಪಾತ್ರ ಹೀಗೆ ಬರಬೇಕು ಅದಕ್ಕೆ ಏನೆಲ್ಲಾ ಮಾಡಬೇಕೋ ಅದರ ತಯಾರಿಯಲ್ಲಿದ್ದಾರೆ. ಅದು ಎಲ್ಲೆಲ್ಲಿ ಎನ್ನುವುದು ನಿಗೂಢ. ಹೀಗಾಗಿ ಮಹೇಶ್ ಬಾಬು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. ಅದಕ್ಕೆ ಏನೇನು ಮಸಾಲೆ ಬೇಕು ರಾಜಮೌಳಿ ತುಂಬಿದ್ದಾರೆ. ಭರ್ತಿ ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಷ್ಟು ಕೋಟಿ ಖರ್ಚು ಮಾಡುತ್ತಿರುವುದು ಇದೇ ಮೊದಲು. ಗ್ಲೋಬಲ್ ಸಿನಿಮಾ ಎನ್ನುವ ಹೆಗ್ಗಳಿಕೆ ಕೂಡ ಇದೆ. ಇದರಲ್ಲಿ ಹೀರೋ ಬಿಟ್ಟರೆ ಇನ್ಯಾರ ಹೆಸರೂ ಗೊತ್ತಾಗಿಲ್ಲ. ಅದಕ್ಕೂ ಅಂತಿಮ ತೆರೆ ಬೀಳುವ ದಿನ ದೂರ ಇಲ್ಲ.

  • ರಾಜಮೌಳಿ, ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್

    ರಾಜಮೌಳಿ, ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್

    ಮಾಲಿವುಡ್ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran)  ಸದ್ಯ ‘ಸಲಾರ್’, ‘ಆಡುಜೀವಿತಂ’ ಸಿನಿಮಾದ ಮೂಲಕ ಜನರ ಮನಗೆದ್ದಿದ್ದಾರೆ. ಹೀಗಿರುವಾಗ ಅವರ ಮುಂದಿನ ಸಿನಿಮಾದ ಅಪ್‌ಡೇಟ್‌ವೊಂದು ಸಿಕ್ಕಿದೆ. ತೆಲುಗಿನ ನಟ ಮಹೇಶ್ ಬಾಬು ಮುಂಬರುವ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಅಬ್ಬರಿಸಲಿದ್ದಾರೆ.

    prithviraj sukumaran 1

    ಮಲಯಾಳಂ ಸಿನಿಮಾರಂಗದ ಪ್ರತಿಭಾನ್ವಿತ ನಟ ಪೃಥ್ವಿರಾಜ್ ಸುಕುಮಾರನ್ ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ಕಲಾವಿದ. ವಿಭಿನ್ನ ಕಂಟೆಂಟ್‌ಗಳ ಮೂಲಕ ಪೃಥ್ವಿರಾಜ್ ಸುಕುಮಾರನ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗಾಗಿ ಮಲಯಾಳಂನಲ್ಲಿ ಸೀಮಿತವಾಗದೇ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಗಮನ ಸೆಳೆದಿದ್ದಾರೆ. ಈಗ ಮಹೇಶ್ ಬಾಬು ಜೊತೆಗಿನ ಸಿನಿಮಾ ಮೂಲಕ ‘ಸಲಾರ್’ ನಟ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಸಣ್ಣ ವಯಸ್ಸಿನಲ್ಲಿಯೇ ನನ್ನ ಫೋಟೋ ಅಶ್ಲೀಲ ವೆಬ್‌ಸೈಟ್‌ಗೆ ಹಾಕಿದ್ರು ಎಂದ ಜಾನ್ವಿ ಕಪೂರ್

    mahesh babuಮಹೇಶ್ ಬಾಬು ನಟನೆಯ 29ನೇ ಚಿತ್ರಕ್ಕೆ ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಪೃಥ್ವಿರಾಜ್‌ರನ್ನು ಚಿತ್ರತಂಡ ಸಂಪರ್ಕಿಸಿದೆ. ಮಹೇಶ್ ಬಾಬು ಮುಂದೆ ವಿಲನ್ ಆಗಿ ನಟಿಸಲು ಪೃಥ್ವಿರಾಜ್‌ಗೆ ಚಾನ್ಸ್ ಸಿಕ್ಕಿದೆ. ಎಂದೂ ಕಾಣಿಸಿಕೊಂಡಿರದ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ.

    ಒಂದು ವೇಳೆ, ಈ ಸುದ್ದಿ ನಿಜವಾಗಿದ್ದಲ್ಲಿ ಪೃಥ್ವಿರಾಜ್ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ಕೊಡೋದು ಗ್ಯಾರಂಟಿ.