Tag: ರಾಗಿಣಿ

  • ರಾಗಿಣಿ ಜೊತೆ ‘ಸಿಂಧೂರಿ’ ಕಥೆ ಹೇಳಲು ಬಂದ ಧರ್ಮ ಕೀರ್ತಿರಾಜ್

    ರಾಗಿಣಿ ಜೊತೆ ‘ಸಿಂಧೂರಿ’ ಕಥೆ ಹೇಳಲು ಬಂದ ಧರ್ಮ ಕೀರ್ತಿರಾಜ್

    ಸ್ಯಾಂಡಲ್‌ವುಡ್ ನಟ ಧರ್ಮ ಕೀತೀರಾಜ್ ಅವರು (Dharma Kirthiraj) ‘ಬಿಗ್ ಬಾಸ್ ಕನ್ನಡ 11’ರ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರು ತುಪ್ಪದ ಬೆಡಗಿ ರಾಗಿಣಿ (Ragini Dwivedi) ಜೊತೆ ‘ಸಿಂಧೂರಿ’ ಎಂಬ ಕಥೆ ಹೇಳಲು ರೆಡಿಯಾಗಿದ್ದಾರೆ.

    dharma kirthiraj 1 1

    ‘ಸಿಂಧೂರಿ’ (Sindhoori) ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಮತ್ತು ರಾಗಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧರ್ಮ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಗಿಣಿ ಪಾತ್ರಕ್ಕೂ ಚಿತ್ರದಲ್ಲಿ ತೂಕವಿದೆ. ಇಬ್ಬರೂ ಇದೀಗ 1990ರ ಕಥೆ ಹೇಳಲು ಸಜ್ಜಾಗಿದ್ದಾರೆ. ಈ ಸಿನಿಮಾಗೆ ಶಂಕರ್ ಕೋನಮಾನಹಳ್ಳಿ ಎಂಬುವವರು ನಿರ್ದೇಶನ ಮಾಡ್ತಿದ್ದಾರೆ. ಇದನ್ನೂ ಓದಿ:ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾದ ದೀಪಿಕಾ ಪಡುಕೋಣೆ

    ragini

    ಏ.30ರಂದು ಅಕ್ಷಯ ತೃತೀಯ ಹಿನ್ನೆಲೆ ‘ಸಿಂಧೂರಿ’ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ನಾಳೆ ಈ ಸಿನಿಮಾ ಬಗ್ಗೆ ಮತ್ತಷ್ಟು ಅಪ್‌ಡೇಟ್ ಹೊರಬೀಳಲಿದೆ. ಇದನ್ನೂ ಓದಿ: ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಉಗ್ರರ ದಾಳಿ ಖಂಡಿಸಿದ ಶ್ರೀನಿಧಿ ಶೆಟ್ಟಿ

    ಟಕೀಲಾ, ಅಮರಾವತಿ ಪೊಲೀಸ್ ಸ್ಟೇಷನ್, ತೆಲುಗು ಬ್ಲಡ್ ರೋಸಸ್, ನಯನ ಮಧುರ, ವಸುಂಧರ ದೇವಿ ಸೇರಿದಂತೆ ಹಲವು ಸಿನಿಮಾಗಳು ಧರ್ಮ ಕೀರ್ತಿರಾಜ್ ಕೈಯಲ್ಲಿವೆ.

  • ರಾಗಿಣಿಗೆ ಬಿಗ್‌ ರಿಲೀಫ್‌ – ಸಾಕ್ಷ್ಯಾಧಾರಗಳ ಕೊರತೆ, ಡ್ರಗ್ಸ್‌ ಕೇಸ್‌ ರದ್ದು

    ರಾಗಿಣಿಗೆ ಬಿಗ್‌ ರಿಲೀಫ್‌ – ಸಾಕ್ಷ್ಯಾಧಾರಗಳ ಕೊರತೆ, ಡ್ರಗ್ಸ್‌ ಕೇಸ್‌ ರದ್ದು

    ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ (Drugs Case) ನಟಿ ರಾಗಿಣಿ ದ್ವಿವೇದಿಗೆ (Ragini Dwivedi) ಬಿಗ್ ರಿಲೀಫ್ ಸಿಕ್ಕಿದೆ. ನಟಿಯ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಕೇಸ್ ಖುಲಾಸೆ ಮಾಡಿ ಹೈಕೋರ್ಟ್ (High Court) ಆದೇಶ ಪ್ರಕಟಿಸಿದೆ.

    ಯಾವುದೇ ಸಾಕ್ಷ್ಯಾಧಾರ ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬ ಕಾರಣ ನೀಡಿದ ಹೈಕೋರ್ಟ್ ಎ2 ರಾಗಿಣಿ ವಿರುದ್ಧದ ಪ್ರಕರಣವನ್ನು ರದ್ದು ಮಾಡಿದೆ.

    ಈ ಪ್ರಕರಣಕ್ಕೆ ಸಂಬಧಿಸಿದಂತೆ ನಟಿ ರಾಗಿಣಿಯನ್ನು 2020ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ಹಲವು ದಿನ ಜೈಲುವಾಸವನ್ನೂ ಅನುಭವಿಸಿದ್ದರು. ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ ಆರೋಪ ರಾಗಿಣಿ ಮೇಲೆ ಇತ್ತು. ಪಾರ್ಟಿ ಆಯೋಜಿಸಿ ಡ್ರಗ್ಸ್ ಬಳಕೆಗೂ ಅವರು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿತ್ತು.

    RAGINI 12

    ರಿಲೀಫ್‌ ಸಿಕ್ಕಿದ ಬೆನ್ನಲ್ಲೇ ನಟಿ ರಾಗಿಣಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ಅಧ್ಯಾಯ ಆರಂಭವಾಗಿದೆ. ಸತ್ಯಮೇವ ಜಯತೆ. ಮೌನ ಮುರಿಯುವ ಸಮಯ ಇದಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಎಲ್ಲಾ ಹೀರೋಗೂ ಒಂದು ಟೈಮ್‌ಲೈನ್‌ ಇರುತ್ತದೆ: ರಿಟೈರ್‌ಮೆಂಟ್‌ ಬಗ್ಗೆ ಸುದೀಪ್‌ ಮಾತು

    ರಾಗಿಣಿ ಜೊತೆ ಸೇರಿ ಮೋಜು ಕೂಟ ಆಯೋಜಿಸಿದ್ದ ಆರೋಪ ಎದುರಿಸುತ್ತಿದ್ದ ಎ4 ಪ್ರಶಾಂತ್ ರಂಕಾ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.

     

  • ಸಂಜು ವೆಡ್ಸ್ ಗೀತಾ 2 : ಮಂಗ್ಲಿ ಹಾಡಿಗೆ ಸೊಂಟ ಬಳುಕಿಸಿದ ರಾಗಿಣಿ

    ಸಂಜು ವೆಡ್ಸ್ ಗೀತಾ 2 : ಮಂಗ್ಲಿ ಹಾಡಿಗೆ ಸೊಂಟ ಬಳುಕಿಸಿದ ರಾಗಿಣಿ

    ವಿತ್ರಾ  ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರು ನಿರ್ಮಿಸಿರುವ  ಕನ್ನಡದ ಬಹು ನಿರೀಕ್ಷಿತ  ಸಂಜು ವೆಡ್ಸ್  ಗೀತಾ-2  (Sanju Weds Geetha 2) ಚಿತ್ರದ  ಹಾಡಿನ ಬಿಡುಗಡೆ ಸಮಾರಂಭ ಅಂಬೇಡ್ಕರ್ ಭವನದ ಸುಂದರ ವೇದಿಕೆಯಲ್ಲಿ  ನೆರವೇರಿತು. ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅಭಿನಯದ ಈ ಹಾಡನ್ನು ಛಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಅವರು ಬಿಡುಗಡೆ ಮಾಡಿದರು. ಜೊತೆಗೆ ಬಸನಾಗಿ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು.

    Sanju Weds Geetha 2 2

    ಇದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ಛಲವಾದಿ  ಮಹಾಸಭಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡುತ್ತ ‘ನಮ್ಮ ಸಹೋದರ ಕುಮಾರ್ ಈಗ ಸಿನಿಮಾ ರಂಗದಲ್ಲಿ ನಿರ್ಮಾಪಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ, ತುಂಬಾ  ಖರ್ಚು ಮಾಡಿ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ, ಅಲ್ಲದೆ ನಮ್ಮವರೇ ಆದ ನಾಗಶೇಖರ್  ಇದಕ್ಕೆ ನಿರ್ದೇಶನ ಮಾಡಿದ್ದಾರೆ. ಸಮಾಜದ ನ್ಯೂನತೆಗಳನ್ನು  ತೊಡೆದು ಹಾಕೋ ಕೆಲಸವನ್ನು ನಮ್ಮ  ಸಿನಿಮಾಗಳು ಮಾಡಲಿ, ಈ ಚಿತ್ರವು  ಅತ್ಯಂತ ಯಶಸ್ವಿಯಾಗಲಿ ಅಂತ ಹಾರೈಸುತ್ತೇನೆ ಎಂದು ಶುಭ ಹಾರೈಸಿದರು.   ನಾಗಶೇಖರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಿರೂಪಿಸಿದ್ದಾರೆ. ಈ ಚಿತ್ರದಲ್ಲಿ ಒಬ್ಬ ರೇಶ್ಮೆ ಬೆಳೆಗಾರನಾಗಿ  ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು,  ನಾಯಕಿಯಾಗಿ ರಚಿತಾರಾಮ್ ಅಭಿನಯಿಸಿದ್ದಾರೆ.

    Sanju Weds Geetha 2 1

    ನಂತರ ನಡೆದ ಪತ್ರಿಕಾ ಗೋಷ್ಟಿಯಲ್ಲಿ  ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಡಿಪರೆಂಟ್ ಪ್ಯಾಟ್ರನ್‌ನಲ್ಲಿ ಮೂಡಿಬಂದಿರುವ, ರಾಗಿಣಿ ಅಭಿನಯದ  ಈ ಹಾಡನ್ನು  ನಮ್ಮ  ನಾರಾಯಣಸ್ವಾಮಿ ಅವರ ಕೈಲೇ  ರಿಲೀಸ್ ಮಾಡಿಸಬೇಕೆಂದಿತ್ತು, ಹಾಡು ಅದ್ಭುತವಾಗಿ ಮೂಡಿಬಂದಿದೆ. ಇದು ಅಪ್ಪಟ ಪ್ಯಾಮಿಲಿ ಸ್ಟೋರಿ, ಡಾ.ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೆನಪಿಸುತ್ತೆ, ರಚಿತಾರಾಮ್, ರಂಗಾಯಣ ರಘು, ಸಾಧುಕೋಕಿಲ, ತಬಲಾನಾಣಿ ಸಂಪತ್ ಹೀಗೆ ಎಲ್ಲಾ ದೊಡ್ಡ ದೊಡ್ಡ ಕಲಾವಿದರೇ ಅಭಿನಯಿಸಿದ್ದಾರೆ ಎಂದು ಹೇಳಿದರು.

    Sanju Weds Geetha 2 1

    ನಿರ್ದೇಶಕ  ನಾಗಶೇಖರ್ ಮಾತನಾಡುತ್ತ ,  ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್  ಹೀಗೆ  ಅದ್ಭುತವಾದ ಲೊಕೇಶನ್‌ಗಳಲ್ಲಿ  72 ದಿನಗಳ ಕಾಲ  ಚಿತ್ರೀಕರಿಸಿದ್ದೇವೆ, ಇವತ್ತು ಇಂಥ ದೊಡ್ಡ ವೇದಿಕೆಯಲ್ಲಿ  ನಮ್ಮ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರವೀಗ ರಿರೆಕಾರ್ಡಿಂಗ್ ಹಂತದಲ್ಲಿದ್ದು,  ಇನ್ನೊಂದು ತಿಂಗಳಲ್ಲಿ  ಚಿತ್ರದ ಫಸ್ಟ್ ಕಾಪಿ ಹೊರಬರಲಿದೆ, ಖುಷಿಯ ವಿಚಾರ  ಏನೆಂದರೆ  ಬಿಡುಗಡೆಗೂ ಮುನ್ನವೇ ಗೋಕುಲ್ ಪಿಲಂಸ್‌ನವರು  ನಮ್ಮ ಚಿತ್ರವನ್ನು ಖರೀದಿ ಮಾಡಿದ್ದಾರೆ. ರಿಲೀಸ್ ಡೇಟ್ ಅನೌನ್ಸ್ ಮಾಡಲು ನಾವಂತೂ  ರೆಡಿ  ಇದ್ದೇವೆ. ಚಿತ್ರದಲ್ಲಿ 5 ಹಾಡುಗಳಿದ್ದು, ಒಂದು ಹಾಡಿಗೆ ಲಹರಿ ಸಂಸ್ಥೆಯ ಅನುಮತಿ ಬೇಕಿದೆ, ನಮ್ಮ ಮಣ್ಣಿನ ಕಥೆ ಮಾಡಲು ಹೊರಟಾಗ ಶಿಡ್ಲಘಟ್ಟದಲ್ಲಿ ರೈತರು ಎದುರಿಸುತ್ತಿರೋ  ಸಮಸ್ಯೆ ಕಣ್ಣಮುಂದೆ ಬಂತು, ಅಲ್ಲಿನ ಕಪ್ಪುಮಣ್ಣಿನ  ಕಥೆಯನ್ನು  ಚಿತ್ರದಲ್ಲಿ  ಹೇಳಹೊರಟಿದ್ದೇವೆ, ಇದರಲ್ಲಿ ಎಲ್ಲವೂ ಹೊಸದಾಗಿರುತ್ತೆ. ನಿರ್ಮಾಪಕ ಕುಮಾರ್ ಅವರು ನೀಡಿದ  ಸಹಕಾರದಿಂದ ಚಿತ್ರದ ಇಷ್ಟು ಅದ್ದೂರಿಯಾಗಿ ಬಂದಿದೆ.  ಈಗಿನ  ಕಾಲದ ಲವ್‌ಸ್ಟೋರಿ  ಜೊತೆಗೆ ಒಂದು ಸರ್‌ ಪ್ರೈಸ್ ಕೂಡ  ಚಿತ್ರದಲ್ಲಿದೆ ಎಂದರು.

     

    ನಾಯಕ ಶ್ರೀನಗರ ಕಿಟ್ಟಿ ಮಾತನಾಡುತ್ತ  ಮೊದಲಬಾರಿಗೆ  ಒಬ್ಬ ರೇಶ್ಮೆ ಬೆಳೆಗಾರನಾಗಿ ಈ ಚಿತ್ರದಲ್ಲಿ  ಕಾಣಿಸಿಕೊಂಡಿದ್ದೇನೆ. ಇಂದು ಮೊದಲ ಹಾಡು ರಿಲೀಸಾಗಿದೆ. ನಾಗಶೇಖರ್ ಅವರ ಪ್ಯಾಟ್ರನ್ ಅಲ್ಲದೆ ಇರುವ ಈ ಹಾಡಲ್ಲಿ ನಾನು, ರಚಿತಾರಾಮ್, ರಾಗಿಣಿ ದ್ವಿವೇದಿ  ಅಭಿನಯಿಸಿದ್ದೇವೆ, ರಾಜ್ಯಾದ್ಯಂತ ಆಗಮಿಸಿರುವ ನಾಯಕರೆಲ್ಲರ ಸಮ್ಮುಖದಲ್ಲಿ ಈ ಹಾಡನ್ನು ರಿಲೀಸ್ ಮಾಡಿದ್ದೇವೆ ಎಂದು ಹೇಳಿದರು. ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ, ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್‌ಕುಮಾರ್ ಸೇರಿದಂತೆ  ಸಾಕಷ್ಟು  ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ

  • ‘ಓ ಏ ಲಡ್ಕಿ’ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ ನಟಿ ರಾಗಿಣಿ

    ‘ಓ ಏ ಲಡ್ಕಿ’ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ ನಟಿ ರಾಗಿಣಿ

    ತ್ತೀಚಿನ ದಿನಗಳಲ್ಲಿ ಆಲ್ಬಂ ಸಾಂಗ್ ಹೆಚ್ಚು ಜನಪ್ರಿಯವಾಗುತ್ತಿದೆ. ಅಧೀರ ಸಂತು  ಅವರು ಬಾಲಿವುಡ್  ಸ್ಟೈಲ್ ನಲ್ಲಿ  ಕನ್ನಡ ಆಲ್ಬಂ ಸಾಂಗ್ ಮಾಡಿದ್ದಾರೆ. ಅದರ ಹೆಸರು ಕೂಡ ವಿಭಿನ್ನವಾಗಿದೆ. ತುಂಬಾ ಸ್ಟೈಲಿಶ್ ಆಗಿ ಮೂಡಿಬಂದಿರುವ ‘ಓ ಏ ಲಡ್ಕಿ’ (OY YEAH LADK) ಎಂಬ ಕ್ಯಾಚಿ ಟೈಟಲ್ ಹೊಂದಿರೋ  ಈ ಹಾಡನ್ನು ನಟಿ ರಾಗಿಣಿ ದ್ವಿವೇದಿ (Ragani) ಅವರು  ಬಿಡುಗಡೆ ಮಾಡಿದರು.  ವಿಶೇಷವಾಗಿ ಈ ಹಾಡಲ್ಲಿ ಉಗ್ರಂ ರವಿ ಖಳನಾಯಕನಾಗಿ ನಟಿಸಿದ್ದಾರೆ. ಎನ್ನಾರೈ ಯುವತಿಯಾಗಿ ಅಮೃತ, ಡಿಲವರಿ ಬಾಯ್ ಆಗಿ  ಸಮೀರ್ ನಗರದ್ ಅಭಿನಯಿಸಿದ್ದಾರೆ. ಈ ಹಾಡಿನ ಜೊತೆಗೆ  ಇದರ ಲಿರಿಕಲ್ ವಿಡಿಯೋ ಹಾಗೂ ರೀಮಿಕ್ಸ್ ವರ್ಷನ್ ಪ್ರದರ್ಶಿಸಲಾಯಿತು. ನಿರ್ದೇಶಕ ಅಧೀರ ಸಂತು ಅವರೇ ಈ ಹಾಡಿನ ಸಾಹಿತ್ಯ ರಚಿಸಿ, ತಾವೇ ನಂತರ ಹಾಡಿದ್ದಾರೆ. ಆಕಾಶ್ ಆಡಿಯೋ ಮೂಲಕ ‘ಓ ಏ ಲಡ್ಕಿ’ ಹಾಡು ಬಿಡುಗಡೆಯಾಗಿದೆ.

    OY YEAH LADK 2

    ಈ ಹಾಡಲ್ಲಿ ಸಾಮಾನ್ಯ  ಡೆಲಿವರಿ ಬಾಯ್ ಒಬ್ಬ ತನ್ನ ನೃತ್ಯ ಪ್ರತಿಭೆಯ ಮೂಲಕ  ಎನ್.ಆರ್.ಐ. ಹುಡುಗಿಯನ್ನು ಹೇಗೆ  ಪಟಾಯಿಸಿದ  ಎಂಬುದನ್ನು ಹೇಳಲಾಗಿದೆ.  ಆ ಡೆಲಿವರಿ ಬಾಯ್ ಒಮ್ಮೆ ಖಳನಾಯಕನಿಗೆ ಡೆಲಿವರಿ ಕೊಡಲು ಬಂದು, ವಾಪಸ್ ಹೋಗುವಾಗ ಖಳನಾಯಕನ ಕಾ‌ರಿನಲ್ಲಿ ಕುಳಿತ ಓರ್ವ ಸುಂದರ NRI ಯುವತಿಯನ್ನ ನೋಡುತ್ತಾ ಮೈಮರೆಯುತ್ತಾನೆ. ಅದನ್ನ ಕಂಡ ಖಳನಾಯಕ ಆತನನ್ನ ಗದರಿ ಅವನ ಬಗ್ಗೆ ಕೀಳಾಗಿ ಮಾತಾಡುತ್ತಾನೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ನಾಯಕ, 5 ನಿಮಿಷದಲ್ಲಿ ಆ  ಯುವತಿ ತನ್ನತ್ತ ಓಡಿ ಬರೋಹಾಗೆ ಮಾಡ್ತಿನಿ ಅಂತ ಸವಾಲ್ ಹಾಕಿ, ತನ್ನ ಆಪದ್ಬಾಂಧವನಿಗೆ (ನಿರ್ದೇಶಕ) ಕರೆ ಮಾಡಿ ಸಹಾಯ ಕೋರುತ್ತಾನೆ. ರಾಕ್‌ಸ್ಟಾರ್ ಆಗಿಬಂದ ಡೆಲಿವರಿ ಬಾಯ್‌, ಕನ್ನಡ ನೆಲ, ಭಾಷೆಯ ತಾಕತ್ತನ್ನ ಹಾಡಿನ ಮೂಲಕ ಹೇಳಿ ಆ ಯುವತಿಯ  ಮನಸನ್ನು ಗೆಲ್ಲುತ್ತಾನೆ. ಎಂಎಸ್. ತ್ಯಾಗರಾಜ್ ಈ ಹಾಡಿಗೆ ಮ್ಯೂಸಿಕ್ ಮಾಡಿದ್ದು, ಎಸ್. ಹಾಲೇಶ್ ಇದನ್ನು ಸೆರೆ ಹಿಡಿದಿದ್ದಾರೆ.

    OY YEAH LADK 3

    ಈ ವಿಶೇಷ ಹಾಡಿನ  ಕುರಿತಂತೆ  ಮಾತನಾಡಿದ ನಿರ್ಮಾಪಕ, ನಿರ್ದೇಶಕ  ಅಧೀರ ಸಂತು, ನಾನು ಇಂಡಸ್ಟ್ರಿಗೆ ಹೊಸಬನೇನಲ್ಲ, ಉಪ್ಪಿ ಅವರ ಐವತ್ತನೇ ಚಿತ್ರವನ್ನು ನಾನೇ ಮಾಡಬೇಕಿತ್ತು. ಅವರು ಕಥೆ ಕೇಳಿ ಒಪ್ಪಿ ಡೇಟ್ಸ್ ಕೂಡ ಕೊಟ್ಟಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ಡ್ರಾಪ್ ಆಯ್ತು. ಸ್ನೇಹಿತರ ಸಹಕಾರದಿಂದ ಈ ಸಾಂಗ್ ನಿರ್ದೇಶನ ಮಾಡಿದ್ದೇನೆ. ನಟಿ ರಾಗಿಣಿ ಅವರನ್ನೇ ಇನ್‌ಸ್ಪೈರ್ ಆಗಿ ತೆಗೆದುಕೊಂಡು ಮಾಡಿದ ಹಾಡಿದು. ಅವರು ಬ್ಯುಸಿ ಇದ್ದದ್ದರಿಂದ ಬೇರೆಯವರ ಕೈಲಿ ಮಾಡಿಸಬೇಕಾಯ್ತು. ಮುಂದೆ ಅವರನ್ನು ಇಟ್ಟುಕೊಂಡು ಇಂಟರ್ ನ್ಯಾಷನಲ್ ಲೆವೆಲ್ ಸಾಂಗ್ ಮಾಡುವ ಯೋಜನೆಯಿದೆ ಎಂದು ಹೇಳಿದರು.

     

    ನಟಿ ರಾಗಿಣಿ ಮಾತನಾಡುತ್ತ, ಸಂತು ನನಗೆ ಬಹಳ ದಿನಗಳಿಂದ ಪರಿಚಯ. ಹಾಡು ತುಂಬಾ ಚೆನ್ನಾಗಿ ಬಂದಿದೆ. ಸಂತು ಅವರ ವಿಜನ್ ತೆರೆಯ ಮೇಲೆ ಕಾಣುತ್ತಿದೆ. ಒಳ್ಳೊಳ್ಳೆ ಲೊಕೇಶನ್ ಗಳಲ್ಲಿ ಹಾಡನ್ನು ಶೂಟ್ ಮಾಡಿದ್ದಾರೆ. ನನಗೂ ಅವರ ಜೊತೆ ಕೆಲಸ ಮಾಡಬೇಕೆಂದು ತುಂಬಾ ಆಸಕ್ತಿಯಿದೆ ಎಂದು ಹೇಳಿದರು. ನಂತರ ಉಗ್ರಂ ರವಿ ಮಾತನಾಡಿ ವಿಲನ್ ಆಗಿದ್ದ ನಾನು ಮೊದಲಬಾರಿಗೆ ಇಂಥ ಹಾಡಲ್ಲಿ ಕಾಣಿಸಿಕೊಂಡಿದ್ದೇನೆ. ಇದರ ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ. ಸಂತುಗೆ ಮುಂದೆ ಒಳ್ಳೇ ಫ್ಯೂಚರ್ ಇದೆ ಎಂದು ಹೇಳಿದರು. ಮತ್ತೊಬ್ಬ ಅತಿಥಿಯಾಗಿ ಸುನಿಲ್ ಕಂಬಾರ್ ವೇದಿಕೆಯಲ್ಲಿದ್ದರು. ನಾಯಕ ಸಮೀರ್, ನಾಯಕಿ ಅಮೃತ ಕೂಡ ತಮ್ಮ ಪರಿಚಯ ಮಾಡಿಕೊಂಡರು.

  • ಕಿಟ್ಟಿ ಜೊತೆ ಕುಣಿದ ರಚ್ಚು-ರಾಗಿಣಿ : ಮಂಗ್ಲಿ ದನಿಯಲ್ಲಿ ಸಾಂಗ್

    ಕಿಟ್ಟಿ ಜೊತೆ ಕುಣಿದ ರಚ್ಚು-ರಾಗಿಣಿ : ಮಂಗ್ಲಿ ದನಿಯಲ್ಲಿ ಸಾಂಗ್

    ಕಾಡುವಂಥ  ಪ್ರೇಮಕಥೆಗಳನ್ನು  ತೆರೆಮೇಲೆ ಮೂಡಿಸಿದ ನಿರ್ದೇಶಕ ನಾಗಶೇಖರ್ ಇದೀಗ ಕನ್ನಡ ಸಿನಿರಸಿಕರಿಗಾಗಿ  ಮತ್ತೊಂದು ಅದ್ಭುತ ಲವ್ ಸ್ಟೋರಿಯನ್ನು ಹೇಳಹೊರಟಿದ್ದಾರೆ. ದಶಕದ ಹಿಂದೆ ತಮ್ಮದೇ ನಿರ್ದೇಶನದಲ್ಲಿ ತೆರೆಕಂಡು, ಜನಮನ ಸೂರೆಗೊಂಡು ಯಶಸ್ವಿಯಾಗಿದ್ದ ಸಂಜು ವೆಡ್ಸ್  ಗೀತಾ‌ ಚಿತ್ರದ  ಟೈಟಲ್ ಇಟ್ಟುಕೊಂಡು ನವನವೀನ ಪ್ರೇಮಕಥೆ  ಹೆಣೆದು ಸಂಜು ವೆಡ್ಸ್ ಗೀತಾ-2 (Sanju Weds Geeta 2) ಚಿತ್ರವನ್ನು  ತೆರೆಗೆ ತರುತ್ತಿದ್ದಾರೆ.  ಶ್ರೀನಗರ ಕಿಟ್ಟಿ (Srinagar Kitty) ಹಾಗೂ ಗುಳಿಕೆನ್ನೆ ಬೆಡಗಿ  ರಚಿತಾರಾಮ್ (Rachita Ram) ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನಡೆಯಿತು. ನಾಯಕ ಸಂಜು ಹಾಗೂ ನಾಯಕಿ ಗೀತಾ ಇಬ್ಬರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬರುವ ಪಾರ್ಟಿ ಸಾಂಗ್ ಅದಾಗಿದ್ದು, ವಿಶೇಷವಾಗಿ ಈ ಹಾಡಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇವರಿಬ್ಬರ ಜೊತೆ ಸ್ಟೆಪ್ಸ್ ಹಾಕಿದ್ದಾರೆ.

    Sanju Weds Geeta 2 3

    ಕುಂಬಳಗೋಡಿನ ಬಿಜಿಎಸ್ ಹೈಸ್ಕೂಲಿನ ಗ್ಲಾಸ್ ಹೌಸ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಿತು. 200 ರಿಂದ 250 ಜನ ಡಾನ್ಸರ್ಸ್ ಈ ಹಾಡಲ್ಲಿ ಹೆಜ್ಜೆ ಹಾಕಿದ್ದಾರೆ. ಖ್ಯಾತ ಗಾಯಕಿ ಮಂಗ್ಲಿ ಈ ಹಾಡಿಗೆ ದನಿಯಾಗಿದ್ದು, ಭಜರಂಗಿ ಮೋಹನ್ ಅವರು ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವರ್ಷದ ಸೂಪರ್ ಹಿಟ್ ಸಾಂಗ್ ಇದಾಗಲಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, 2 ಫೈಟ್ಸ್, ಒಂದು ಹಾಡಿನ ಪ್ಯಾಚ್ ವರ್ಕ್  ಮಾತ್ರವೇ ಬಾಕಿಯಿದೆ. ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ  ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಥೆ ಈ ಚಿತ್ರದಲ್ಲಿದೆ.

    Sanju Weds Geeta 2 2

    ಈಗಾಗಲೇ ಚಿತ್ರದ ಎಡಿಟಿಂಗ್ ಮುಗಿದು, ಡಬ್ಬಿಂಗ್ ಕೂಡ  ಕೊನೇ ಹಂತದಲ್ಲಿದೆ. ಚಿತ್ರಕ್ಕೆ  ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ  ಮೂರನೇ ಹಂತದ ಚಿತ್ರೀಕರಣ ನಡೆಸಲಾಗಿದೆ.  ಅಲ್ಲದೆ 50 ಲಕ್ಷ ರೂ.ಗಳ  ವೆಚ್ಚದಲ್ಲಿ ಕುಣಿಗಲ್ ನ ಯುಬಿ ಸ್ಟೆಡ್ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳವರೆಗೆ  ಅದ್ದೂರಿಯಾಗಿ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಹೀಗೆ ಚಿತ್ರಕಥೆಯಷ್ಟೇ ಪ್ರಾಮುಖ್ಯತೆಯನ್ನು ಚಿತ್ರದ ಹಾಡುಗಳಿಗೂ ಸಹ  ನೀಡಲಾಗಿದ್ದು, ಒಂದು ಸಿನಿಮಾಗಾಗುವಷ್ಟು ಖರ್ಚನ್ನು ನಿರ್ಮಾಪಕ ಛಲವಾದಿ ಕುಮಾರ್ ಅವರು ಹಾಡುಗಳಿಗೇ ಮಾಡುವ ಮೂಲಕ ಅದ್ದೂರಿತನಕ್ಕೆ ಎಲ್ಲೂ ಕೊರತೆ ಬಾರದಂತೆ ನೋಡಿಕೊಂಡಿದ್ದಾರೆ. ಅಲ್ಲದೆ ಹಾಡುಗಳನ್ನು ಹಾಸನ ಮತ್ತು ಹಾವೇರಿಯಲ್ಲಿ  ಅದ್ದೂರಿ ಸಮಾರಂಭದಲ್ಲಿ

     

    ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.    ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ  ನಿರ್ಮಾಪಕ  ಛಲವಾದಿ ಕುಮಾರ್ ಅವರು ಈ  ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್ ಅವರ  ಕಥೆ, ಚಿತ್ರಕಥೆ ನಿರ್ದೇಶನ ಚಿತ್ರಕ್ಕಿದ್ದು   ಶ್ರೀಧರ ವಿ. ಸಂಭ್ರಮ್  ೫ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ. ರಾಗಿಣಿ ದ್ವಿವೇದಿ, ಚೇತನ್ ಚಂದ್ರ,(ಕೆಮಿಯೋ), ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ  ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ.

  • ಮತದಾನ ಮಾಡಿದ ಸ್ಯಾಂಡಲ್‌ವುಡ್ ನಟಿಮಣಿಯರು

    ಮತದಾನ ಮಾಡಿದ ಸ್ಯಾಂಡಲ್‌ವುಡ್ ನಟಿಮಣಿಯರು

    ಲೋಕಸಭಾ ಚುನಾವಣೆಯ ಮತದಾನ (Lok Sabha Elections 202) ಪ್ರಕ್ರಿಯೆಯಲ್ಲಿ ಸ್ಯಾಂಡಲ್‌ವುಡ್ ನಾಯಕಿಯರು (Sandalwood Actress) ಭಾಗಿಯಾಗಿ ವೋಟ್ ಮಾಡಿದ್ದಾರೆ. ತಪ್ಪದೇ ವೋಟ್ ಮಾಡಿ ಎಂದು ಮತದಾರರಿಗೆ ಸಂದೇಶ ಕೂಡ ನೀಡಿದ್ದಾರೆ.

    Saptami Gowda‘ಕಾಂತಾರ’ (Kantara) ನಟಿ ಸಪ್ತಮಿ ಗೌಡ (Sapthami Gowda) ಮತದಾನ ಮಾಡಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ. ಜೆಪಿ ನಗರದಲ್ಲಿ ನಟಿ ಮತದಾನ ಮಾಡಿದ್ದಾರೆ. ಇದನ್ನೂ ಓದಿ:ಕುಟುಂಬ ಸಮೇತ ಬಂದು ಮತದಾನ ಮಾಡಿದ ಡಾಲಿ ಧನಂಜಯ್

    SAPTHAMI GOWDA

    ‘ಟೋಬಿ’ ನಟಿ ಚೈತ್ರಾ ಆಚಾರ್ (Chaithra Achar) ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ವೋಟ್ ಮಾಡಿದ್ದಾರೆ. ನಾನು ಮತದಾನ ಮಾಡಿದೆ. ನೀವು ಮಾಡಿದ್ರಾ? ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಾರೆ.

    bharathiಹಿರಿಯ ನಟಿ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಜಯನಗರದಲ್ಲಿ ಮತದಾನ ಮಾಡುವ ಮೂಲಕ ಮತದಾರರಿಗೆ ತಪ್ಪದೇ ವೋಟ್ ಮಾಡಿ ಎಂದು ಕರೆ ನೀಡಿದ್ದಾರೆ. ಮತದಾನ ನಮ್ಮೆಲ್ಲರ ಹಕ್ಕು. ಮತದಾನ ಮಾಡುವುದರಿಂದ ತಪ್ಪಿಸಿಕೊಳ್ಳಬೇಡಿ. ಯೋಚಿಸಿ ಸೂಕ್ತ ವ್ಯಕ್ತಿಗೆ ಮತದಾನ ಮಾಡಿ. ಮತಕ್ಕೆ ತುಂಬಾ ಬೆಲೆ ಇದೆ. ಅದನ್ನು ವ್ಯರ್ಥ ಮಾಡಬೇಡಿ ಎಂದು ನಟಿ ಮನವಿ ಮಾಡಿದ್ದಾರೆ.

    NIDHI

    ನಟಿ ಕಾರುಣ್ಯ ರಾಮ್ (Actress Karunya Ram) ಮತದಾನ ಮಾಡಿ ಬಂದಿದ್ದಾರೆ. ವೋಟರ್ ಐಡಿ ತೋರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    NAMRATHA 3

    ಪಂಚರಂಗಿ ನಟಿ ನಿಧಿ ಸುಬ್ಬಯ್ಯ ತಮ್ಮ ಕುಟುಂಬದ ಜೊತೆ ಮತದಾನ ಮಾಡಿ ಕ್ಯಾಮೆರಾಗೆ ಮುದ್ದಾಗಿ ನಗು ಬೀರಿದ್ದಾರೆ. ತುಪ್ಪದ ಬೆಡಗಿ ರಾಗಿಣಿ ಯಲಹಂಕದ ಜುಡಿಷಿಯಲ್‌ ಲೇಔಟ್‌ನಲ್ಲಿ ಮತದಾನ ಮಾಡಿದ್ದಾರೆ. ಇದನ್ನೂ ಓದಿ:ಮದುವೆ ಗೌನ್‍ ಕತ್ತರಿಸಿದ ನಟಿ ಸಮಂತಾ

    RAGINI 1

    ‘ಬಿಗ್ ಬಾಸ್’ (Bigg Boss Kannada) ಬೆಡಗಿ ನಮ್ರತಾ ಗೌಡ (Namratha Gowda) ತಮ್ಮ ಕುಟುಂಬದ ಜೊತೆ ಆಗಮಿಸಿ ಬಸವೇಶ್ವರ ನಗರದ ವಾಣಿ ಪಬ್ಲಿಕ್ ಸ್ಕೂಲ್‌ನಲ್ಲಿ ಮತದಾನ ಮಾಡಿದ್ದು, ಅಭಿಮಾನಿಗಳಿಗೆ ಎಲ್ಲರೂ ವೋಟ್ ಮಾಡುವಂತೆ ಮನವಿ ಮಾಡಿದ್ದಾರೆ.

    ನಟಿ ಕಮ್ ನಿರೂಪಕಿ ಶ್ವೇತಾ ಚಂಗಪ್ಪ, ಶ್ವೇತಾ ಶ್ರೀವಾಸ್ತವ್, ರಾಧಿಕಾ ಚೇತನ್, ತೇಜಸ್ವಿನಿ ಶರ್ಮಾ ವೋಟ್ ಮಾಡಿದ್ದು, ಅಭಿಮಾನಿಗಳಿಗೆ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

  • ಯುಗಾದಿ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಸ್

    ಯುಗಾದಿ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಸ್

    ಯುಗಾದಿ (Ugadi Festival) ಎಂದರೆ ಹೊಸ ಆರಂಭ. ನಾಡಿನೆಲ್ಲೆಡೆ ಯುಗಾದಿ ಹಬ್ಬವನ್ನ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಿಂದೂಗಳ ಪಾಲಿಗೆ ಯುಗಾದಿ ಅಂದ್ರೆ ಹೊಸ ಸಂವತ್ಸರದ ಆರಂಭ. ಯುಗಾದಿ ಹಬ್ಬದಂದು ಬೇವು ಬೆಲ್ಲ ಸವಿದು ಕಷ್ಟ ಸುಖವನ್ನ ಸಮವಾಗಿ ಸ್ವೀಕರಿಸಲು ಎಲ್ಲರೂ ಸಜ್ಜಾಗುತ್ತಾರೆ. ಸ್ಯಾಂಡಲ್‌ವುಡ್ ತಾರೆಯರು (Sandalwood Stars) ಕೂಡ ತಮ್ಮ ಮನೆಯಲ್ಲೂ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

    radhika pandit 2

    ನ್ಯಾಷನಲ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಮನೆಯಲ್ಲಿ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಕುಟುಂಬದ ಜೊತೆ ಖುಷಿಯಿಂದ ಸೆಲೆಬ್ರೇಟ್ ಮಾಡಿದ್ದಾರೆ. ಜೋಡಿಯ ಸುಂದರ ಫೋಟೋವನ್ನು ಶೇರ್ ಮಾಡಿ ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಶುಭಕೋರಿದ್ದಾರೆ.

    ashika ranganth

    ಕನ್ನಡತಿ, ಟಾಲಿವುಡ್‌ನಲ್ಲಿ ಮಿಂಚುತ್ತಿರುವ ‘ರ‍್ಯಾಂಬೋ’ ಬೆಡಗಿ ಆಶಿಕಾ ರಂಗನಾಥ್ ಮನೆಯಲ್ಲೂ ಕೂಡ ಹಬ್ಬದ ಸಂಭ್ರಮ ಮನೆ ಮಾಡಿದೆ. ಶೂಟಿಂಗ್‌ಗೆ ಬ್ರೇಕ್ ಯುಗಾದಿ ಹಬ್ಬವನ್ನು ನಟಿ ಆಚರಿಸಿದ್ದಾರೆ.

    FotoJet 13

    ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮನೆಯಲ್ಲಿಯೂ ಕೂಡ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ. ಮನೆ ಮಂದಿಯ ಜೊತೆ ಹಬ್ಬದೂಟ ಮಾಡಿ ಸಂಭ್ರಮಿಸಿದ್ದಾರೆ.

    FotoJet 1 4

    ಹೊಸ ಜೋಡಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಭುವನ್ ಅವರಿಗೂ ಈ ವರ್ಷ ಯುಗಾದಿ ಸಖತ್ ಸ್ಪೆಷಲ್. ಹಬ್ಬದ ನಡುವೆ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಬೇವು ಬೆಲ್ಲದಂತೆ ಜೀವನದಲ್ಲಿ ಬರುವ ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸೋಣ. ಯುಗಾದಿ ಹಬ್ಬದ ಶುಭಾಶಯಗಳು ಎಂದು ಕಾಟೇರ ನಟಿ ಆರಾಧನಾ ರಾಮ್ (Aradhana Ram) ಶುಭ ಕೋರಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ದಿವ್ಯಾ ಉರುಡುಗ

    nabha

    ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ನೂತನ ವರ್ಷ ನಿಮಗೆ ಹೆಚ್ಚು ಆನಂದ ಮತ್ತು ಸಮೃದ್ಧಿಯನ್ನು ತಂದಿರಲಿ. ಹೊಸ ಪ್ರಾರಂಭಗಳಿಗೆ ಹಾಗೂ ಹೊಸ ಅನುಭವಗಳಿಗೆ ಮುಂದೆ ಸಿದ್ಧವಾಗಿರಿ. ಹೊಸ ಸಂವತ್ಸರದ ಹಾರೈಕೆಯೊಂದಿಗೆ ನಮ್ಮ ಯುಗಾದಿ ಹಬ್ಬದ ಶುಭಾಶಯಗಳು ಎಂದು ನಭಾ ನಟೇಶ್ (Nabha Natesh) ಹಾರೈಸಿದ್ದಾರೆ.

    ragini

    ಯುಗಾದಿಯ ಶುಭಾಶಯಗಳು. ಈ ಹಬ್ಬದಲ್ಲಿ ನಿಮ್ಮ ಜೀವನಕ್ಕೆ ಸಮೃದ್ಧಿ, ಆನಂದ ಮತ್ತು ಆಶೀರ್ವಾದಗಳು ಬರಲಿ. ಹೊಸ ವರ್ಷವನ್ನು ಸಮೃದ್ಧಿಯಿಂದ ಸ್ವಾಗತಿಸೋಣ ಎಂದು ತುಪ್ಪದ ಬೆಡಗಿ ರಾಗಿಣಿ (Ragini) ಶುಭಹಾರೈಸಿದ್ದಾರೆ.

  • ’ಸತ್ಯಮಂಗಳ’ನಾಗಿ ಬಂದ ಅಗ್ನಿಸಾಕ್ಷಿ ಖಳನಾಯಕ

    ’ಸತ್ಯಮಂಗಳ’ನಾಗಿ ಬಂದ ಅಗ್ನಿಸಾಕ್ಷಿ ಖಳನಾಯಕ

    ಹೀರೋ ಅಂದ್ರೆ ಹ್ಯಾಂಡ್ಸಮ್ ಆಗಿ ಇರಬೇಕು, ಜಿಮ್ ಮಾಡಿ ಫಿಟ್ ಆಗಿ ಇರಬೇಕು. ಈ ಗುಣಗಳಿದ್ದವನೂ ಮಾತ್ರ ಹೀರೋ ಆಗೋದಿಕ್ಕೆ ಸಾಧ್ಯ ಎಂಬ ಕಾಲವೆಲ್ಲಾ ಹೋಗಿ ಆಯ್ತು. ಈಗ ಯಾರ್ ಬೇಕಾದ್ರೂ ಹೀರೋ ಆಗಬಹುದು. ಆದ್ರೆ ನಟನಾ ಪ್ರತಿಭೆ ಇರಬೇಕು ಅಷ್ಟೇ. ಈಗ ಯಾಕೆ ಈ ಮಾತು ಅಂತೀರಾ? ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮುರುಗನಾಗಿ ಖಳನಾಯಕನ ಪಾತ್ರ ಮಾಡಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಮುನಿಕೃಷ್ಣ (Munikrishn) ಮತ್ತೊಮ್ಮೆ ನಿಮ್ಮ ಮುಂದೆ ಬರ್ತಿದ್ದಾರೆ. ಕೊಡೆಮುರುಗ ಎಂಬ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಅವರೀಗ ಸತ್ಯಮಂಗಳ ಸಿನಿಮಾದಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ಮುನಿಕೃಷ್ಣಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಕ್ಕೆ ಕಾರಣ ಏನು ಅನ್ನೋದನ್ನು ನಿರ್ದೇಶಕರು ತಿಳಿಸಿದ್ದಾರೆ. ಪ್ರತಿ ಸೂಪರ್ ಸ್ಟಾರ್ ಅವರ ಮೊದಲ ಸಿನಿಮಾ ಬೆಂಬಲ ಕೊಟ್ಟಿದ್ದಕ್ಕೆ ಸ್ಟಾರ್ ಆಗಿರ್ತಾರೆ. ಅದೇ ರೀತಿ ಮುನಿಕೃಷ್ಣಅವರ ಸಿನಿಮಾ ಮೇಲಿನ ಪ್ರೀತಿ, ಡೆಡಿಕೇಷನ್ ದೊಡ್ಡದಿದೆ ಅನ್ನೋದು ನಿರ್ದೇಶಕರ ಮಾತು.

    Satyamangala 3

    ಸತ್ಯಮಂಗಳ (Satyamangala) ಸಿನಿಮಾದ ಟೈಟಲ್ (Title) ಬಿಡುಗಡೆಯಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಚಿಕ್ಕ ಹಳ್ಳಿಯೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಗಿಣಿ ವಿಶೇಷ ಅತಿಥಿಯಾಗಿ ಆಗಮಿಸಿ, ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಸತ್ಯಮಂಗಳ ಸಿನಿಮಾಗೆ ಆರ್ಯನ್ ಪ್ರತಾಪ್ ಸಾರಥಿ. ಕಾರಂಜಿ ಹಾಗೂ ಚೆಲುವೆಯೇ ನಿನ್ನ ನೋಡಲು ಚಿತ್ರಗಳಿಗೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರುವ, ಕನ್ನಡ 90/11, ತಮಿಳಿನ ಹೇರ್ ಕೆನಾರ್ ಕಿರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರ ಏಳು ಅಂತರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದೆ. ಮಣಿರತ್ನಂ ಸಾರಥ್ಯದ  ಅಲೈ ಪಾಯುತೇ, ರಾವಣ್ ಗೆ ಅಸಿಸ್ಟೆಂಟ್ ಡೈರೆಕ್ಷರ್ ಆಗಿ, ಹಾಲಿವುಡ್ ವಿಲ್ ಸ್ಮಿತ್ ಬಳಗದಲ್ಲಿಯೂ ದುಡಿದಿರುವ ಆರ್ಯನ್ ಪ್ರತಾಪ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸತ್ಯಮಂಗಳ ಸಿನಿಮಾಗೆ ಅವ್ರೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಫಸ್ಟ್ ಫಿಲ್ಮಂ ಎವರ್ ಮೇಡ್ ಸ್ಕ್ರಿಪ್ಟ್ ಸೀನ್ ಸಾಹಸಕ್ಕೆ ಗಿನ್ನಿಸ್ ಬುಕ್ ರೆಕಾರ್ಡ್ ಕೂಡ ತಮ್ಮದಾಗಿಸಿಕೊಂಡಿದ್ದಾರೆ.

    Satyamangala 2

    ಅಡ್ವೆಂಚರ್ಸ್ ಥ್ರಿಲ್ಲಿಂಗ್ ಕಹಾನಿಯ ಸತ್ಯಮಂಗಳ ಸಿನಿಮಾದಲ್ಲಿ ದಿ ಗ್ರೇಟ್ ಖಲಿ, ಬಾಲಿವುಡ್ ಅರ್ಬಾಜ್ ಖಾನ್, ಕನಕ್ ಪಾಂಡೆ, ಶರಣ್ಯ, ಸಂಜಯ್ ಕುಮಾರ್ ರವಿ ಕಹಳೆ, ವಿಜಯ್ ಚಿಂದೂರ್, ಮಂತೇಶ್ ಹಿರೇಮಠ್, ಜಿಜಿ ತಾರಾಬಳಗದಲ್ಲಿದ್ದಾರೆ. ಹೂವಿನ ಹಡಗಲಿ ಶಾಸಕರಾದ ಕೃಷ್ಣ ನಾಯಕ್ ಅರ್ಪಿಸ್ತಿರುವ ಈ ಚಿತ್ರವನ್ನು ASA ಪ್ರೊಡಕ್ಷನ್ ಮತ್ತು ಐರಾ ಪ್ರೊಡಕ್ಷನ್ ನಡಿ ಶಂಕರ್ ಬಿ ಹಾಗೂ ಮುನಿಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರಶೇಖರ್ ಕೆಎಸ್ ಕ್ಯಾಮೆರಾ, ವೀರ್ ಸಮರ್ಥ್ ಸಂಗೀತ, ಎಂಎನ್ ವಿಶ್ವ ಸಂಕಲನ, ಪೀಟರ್ ಹೈನ್ಸ್ ಸ್ಟಂಟ್, ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

    ಸತ್ಯಮಂಗಳ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ದಾಂಡೇಲಿ, ಮಲೆ ಮಹಾದೇಶ್ವರ ಬೆಟ್ಟ, ಶ್ರೀಲಂಕಾ, ಕಟ್ಮುಂಡು, ಬ್ಯಾಂಕಕ್ ಭಾಗದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಈಗಾಗಲೇ ಚಿತ್ರತಂಡ 10 ದಿನಗಳ ಕಾಲ ಬ್ಯಾಂಕಕ್ ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿದೆ. ವಿಶೇಷ ಅಂದರೆ ಸತ್ಯಮಂಗಳ ಸಿನಿಮಾದಲ್ಲಿ ಪಾಂಡಿಚೇರಿ ಮುಖ್ಯಮಂತ್ರಿ ಎನ್,. ರಂಗಸ್ವಾಮಿ ನಟಿಸಿದ್ದಾರೆ.  ಯಾವ ಪಾತ್ರ ಅನ್ನೋದನ್ನು ಚಿತ್ರತಂಡ ಗುಟ್ಟುಬಿಟ್ಟು ಕೊಟ್ಟಿಲ್ಲ.

  • ‘ಆಪಲ್ ಕಟ್’ ಚಿತ್ರದ ಟೀಸರ್ ರಿಲೀಸ್: ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್

    ‘ಆಪಲ್ ಕಟ್’ ಚಿತ್ರದ ಟೀಸರ್ ರಿಲೀಸ್: ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್

    ಸಾನ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿಲ್ಪ ಪ್ರಸನ್ನ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧುಗೌಡ ನಿರ್ದೇಶನದ “ಆಪಲ್ ಕಟ್ ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು.  ನಿರ್ದೇಶಕ ಯೋಗರಾಜ್ ಭಟ್ (Yogaraj Bhatt) ಹಾಗೂ ನಟಿ ರಾಗಿಣಿ (Ragin) ಟೀಸರ್ ಬಿಡುಗಡೆ ಮಾಡಿದರು.  ನಟಿ, ನಿರ್ದೇಶಕಿ, ನಿರ್ಮಾಪಕಿಯರಾದ ಪ್ರಿಯಾ ಹಾಸನ್ ಹಾಗೂ ರೂಪ ಅಯ್ಯರ್, ನಿರ್ದೇಶಕ ಗಡ್ಡ ವಿಜಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಲ್ಲಾ ಗಣ್ಯರು “ಆಪಲ್ ಕಟ್” ಯಶಸ್ವಿಯಾಗಲಿ ಎಂದು ಮನಸ್ಸಾರೆ ಹಾರೈಸಿದರು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ಚಿತ್ರದ ಟೀಸರ್ ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.  ನಂತರ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾತನಾಡಿದರು.

    Apple cut 1

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿ ಸಿಂಧು ಗೌಡ, ನಾನು ಯಾರ ಬಳಿಯೂ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿಲ್ಲ. ನಮ್ಮ ಅಪ್ಪನ ಕಾರ್ಯವೈಖರಿ ನೋಡಿ ನನಗೆ ನಿರ್ದೇಶನದ ಆಸೆ ಹುಟ್ಟಿತ್ತು. ಕಿರುತೆರೆಯಲ್ಲಿ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕಿಯಾಗಿ ಇದು ಮೊದಲ ಚಿತ್ರ. ನಾನೇ ಈ  ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ.  ‘ಆಪಲ್ ಕಟ್’,  ಐದು ಜನ ಗೆಳೆಯರ ಸುತ್ತ ನಡೆಯುವ ಕಥೆ. ಜೊತೆಗೆ ನಾನು ಮಾನವಶಾಸ್ತ್ರ ಓದಿದ್ದು, ಚಿತ್ರದಲ್ಲಿ ಮಾನವಶಾಸ್ತ್ರದ ಒಂದು ಅಂಶ ಸೇರಿಸಲಾಗಿದೆ. ಶವವೊಂದನ್ನು ಸಹ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು. ನಮ್ಮ ಮೊದಲ ಪ್ರಯತ್ನಕ್ಕೆ ನಿಮ್ಮ ಹಾರೈಕೆ ಇರಲಿ ಎಂದರು.

    Apple cut 3

    ಇನ್ನು ಚಿತ್ರವನ್ನು ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೊದಲಬಾರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಮಾರ್ಚ್ ನಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದೇವೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಎಲ್ಲಾ‌ ಗಣ್ಯರಿಗೂ ನನ್ನ ಧನ್ಯವಾದ ಎಂದರು ನಿರ್ಮಾಪಕಿ ಶಿಲ್ಪ ಪ್ರಸನ್ನ. ನಾನು ಈ ಚಿತ್ರದಲ್ಲಿ ಸತ್ಯ ಹೆಸರಿನ ಮಾನವಶಾಸ್ತ್ರ ಪ್ರೊಫೆಸರ್ ಪಾತ್ರ ಮಾಡಿದ್ದೇನೆ ಎಂದು ನಾಯಕ ಸೂರ್ಯ ಗೌಡ ತಿಳಿಸಿದರು.

    ‘ನಾನು ಮೂಲತಃ ಬಾಗೆಪಲ್ಲಿ ಹುಡುಗಿ. ಒಳ್ಳೆ ಕಂಟೆಂಟ್ ಇರುವ ಮರ್ಡರ್ ಮಿಸ್ಟರಿ ಸಿನಿಮಾದಲ್ಲಿ ಸೈಕಾಲಜಿ ಸ್ಟೂಡೆಂಟ್ ಆಗಿ ನಟಿಸಿದ್ದೇನೆ” ಎಂದು ನಾಯಕಿ ಅಶ್ವಿ‌ನಿ ಪೋಲೆಪಲ್ಲಿ ಹೇಳಿದರು. ಚಿತ್ರದಲ್ಲಿ ನಟಿಸಿರುವ  ಅಪ್ಪಣ್ಣ, ಅಮೃತ,  ಮೀನಾಕ್ಷಿ, ಬಾಲ ರಾಜವಾಡಿ ಹಾಗೂ ಸಂಗೀತ ನಿರ್ದೇಶಕ ವೀರ ಸಮರ್ಥ್ “ಆಪಲ್ ಕಟ್” ಚಿತ್ರದ ಕುರಿತು ಮಾತನಾಡಿದರು.

  • ಕನ್ನಡ ರಾಜ್ಯೋತ್ಸವ ಹಾಡಿಗೆ ಹೆಜ್ಜೆ ಹಾಕಿದ ನಟಿ ರಾಗಿಣಿ ದ್ವಿವೇದಿ

    ಕನ್ನಡ ರಾಜ್ಯೋತ್ಸವ ಹಾಡಿಗೆ ಹೆಜ್ಜೆ ಹಾಕಿದ ನಟಿ ರಾಗಿಣಿ ದ್ವಿವೇದಿ

    ವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಶುಭದಿನ. ಇಡೀ ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ಆಚರಿಸುವ ವಾಡಿಕೆ ಇದೆ. ಈ ಕನ್ನಡ ಮಾಸದ ಕೊನೆಯ ದಿನ(ನವೆಂಬರ್ 30) ದಂದು ರಾಗಿಣಿ ದ್ವಿವೇದಿ (Ragini) ಅಭಿನಯದ  ‘ರಾಜ್ಯೋತ್ಸವ ದಿ ಆಂಥಮ್’ (Kannada Rajyotsava) ಎಂಬ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

    Kannada Rajyotsava 3

    ಪುನೀತ್ ರಾಜ್‍ಕುಮಾರ್ ಅಭಿನಯದ ವಂಶಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ವಿಜಯ್ ಕೌಂಡಿನ್ಯ ಅವರ ಸಹೋದರ ವಿಕ್ರಮ್ ಶ್ರೀನಿವಾಸ್ ಈ ವಿಡಿಯೋ ಸಾಂಗ್ ನಿರ್ಮಾಣ‌ ಮಾಡಿದ್ದಾರೆ. ವಿಕ್ರಮ್ ಅವರ ತಂದೆ ಶ್ರೀನಿವಾಸ್ ಅವರು ಕೂಡ ರಾಜಕುಮಾರ್ ಅವರ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಈಗ ವಿಕ್ರಮ್ ಶ್ರೀನಿವಾಸ್ twelve 12 ಎಂಟರ್ಟೈನ್ಮೆಂಟ್ ಎಂಬ ಸಂಸ್ಥೆ ಆರಂಭಸಿದ್ದಾರೆ. ಆ ಸಂಸ್ಥೆ ಮೂಲಕ ಮೊದಲ ಪ್ರಯತ್ನವಾಗಿ ರಾಜ್ಯೋತ್ಸವ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗೆ ಈ ಹಾಡನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿ ಶುಭ ಹಾರೈಸಿದರು.

    Kannada Rajyotsava 1

    ನನ್ನ ಸಹೋದರ ವಿಕ್ರಮ್ ಶ್ರೀನಿವಾಸ್ twelve 12 ಎಂಟರ್ಟೈನ್ಮೆಂಟ್ ಎಂಬ ನೂತನ ಸಂಸ್ಥೆ ಆರಂಭಿಸಿದ್ದಾರೆ. ಮೊದಲ ಹೆಜ್ಜೆಯಾಗಿ ರಾಜ್ಯೋತ್ಸವ ಎಂಬ ವಿಡಿಯೋ ಸಾಂಗ್ ನಿರ್ಮಾಣ ಮಾಡಿದ್ದಾರೆ. ಹಾಡು ಬಿಡುಗಡೆ ಮಾಡಿಕೊಟ್ಟ ಶ್ರೀಮುರಳಿ ಅವರಿಗೆ ಧನ್ಯವಾದ. ಮುಂದೆ ಅನೇಕ ಗೀತೆಗಳನ್ನು ಹಾಗೂ ಚಿತ್ರಗಳನ್ನು ನಿರ್ಮಾಣ‌ ಮಾಡುವ ಇರಾದೆ ವಿಕ್ರಮ್ ಶ್ರೀನಿವಾಸ್ ಅವರಿಗಿದೆ ಎಂದು ವಿಜಯ್ ಕೌಂಡಿನ್ಯ ತಿಳಿಸಿದರು.

    Kannada Rajyotsava 2

    ಕನ್ನಡಿಗರಿಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ ಎಂದು ಮಾತು ಆರಂಭಿಸಿದ ನಟಿ ರಾಗಿಣಿ ದ್ವಿವೇದಿ, ನನ್ನನ್ನು ಎಲ್ಲರೂ ಗುರುತಿಸುತ್ತಿದ್ದಾರೆ ಎಂದರೆ ಅದು ಕನ್ನಡ ಚಿತ್ರಗಳಿಂದ. ನಾನು ಎಲ್ಲೇ ಹೋದರು ಕನ್ನಡತಿಯಾಗಿಯೇ ಗುರುತಿಸಿಕೊಳ್ಳುತ್ತೇನೆ‌. ವಿಕ್ರಮ್ ಶ್ರೀನಿವಾಸ್ ನಿರ್ಮಾಣ ಮಾಡಿರುವ ಈ ಹಾಡಿನಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಶ್ರೀಮುರಳಿ ಅವರಿಗೆ ಹಾಗೂ ಐಪ್ಲೆಕ್ಸ್ ಸಂಸ್ಥೆಗೆ ಧನ್ಯವಾದ ಎಂದರು.ನಮ್ಮ ಐಪ್ಲೆಕ್ಸ್ ಸಂಸ್ಥೆ ಇಪ್ಪತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಈಗ ಮ್ಯೂಸಿಕ್ ಸಂಸ್ಥೆ ಕೂಡ ಆರಂಭಿಸಿದ್ದೇವೆ‌. ರಾಜ್ಯೋತ್ಸವದ ಹಾಡು ಚೆನ್ನಾಗಿದೆ ಎಂದರು ಐಪ್ಲೆಕ್ಸ್ ಸಂಸ್ಥೆಯ ಮುಖ್ಯಸ್ಥ ಗಿರೀಶ್ ಕುಮಾರ್.

    ಸಂಗೀತ ನೀಡಿರುವ ಕಿಶನ್ ಮೂರ್ತಿ ಹಾಗೂ ಹಾಡಿನ ನಿರ್ಮಾಣಕ್ಕೆ ಸಾಕಷ್ಟು ಸಲಹೆ ನೀಡಿರುವ ಕೃಷ್ಣ ಚೈತನ್ಯ ಅವರು ರಾಜ್ಯೋತ್ಸವದ ಹಾಡಿನ ಬಗ್ಗೆ ಮಾತನಾಡಿದರು. ಮಧು ಅವರು ಬರೆದಿರುವ ಈ ಹಾಡನ್ನು ಮೇಘನಾ ಭಟ್ (Meghana Bhatt) ಹಾಡಿದ್ದಾರೆ