Tag: ಯಲಹಂಕ ವಾಯುನೆಲೆ

  • ಗಮನಿಸಿ – ಏರ್‌ ಶೋ ಹಿನ್ನೆಲೆ ಬೆಂಗಳೂರು ಏರ್‌ಪೋರ್ಟ್‌ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ‌

    ಗಮನಿಸಿ – ಏರ್‌ ಶೋ ಹಿನ್ನೆಲೆ ಬೆಂಗಳೂರು ಏರ್‌ಪೋರ್ಟ್‌ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ‌

    ಬೆಂಗಳೂರು: ದೇಶದ 15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼ (Aero India 2025) ಇಂದಿನಿಂದ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru International Airport) ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

    Aero India

    ಇಂದು (ಸೋಮವಾರ) ಬೆಳಗ್ಗೆ 9 ರಿಂದ ಮಧ್ಯಾಹ್ನ 12ರ ವರೆಗೆ, ಮಧ್ಯಾಹ್ನ 2 ರಿಂದ ಸಂಜೆ 4ರ ವರೆಗೆ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಫೆಬ್ರವರಿ 11 ಮತ್ತು 12 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3ರ ವರೆಗೆ, ಫೆಬ್ರವರಿ 13 ಮತ್ತು 14ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರ ವರೆಗೆ, ಮಧ್ಯಾಹ್ನ 2 ರಿಂದ ಸಂಜೆ 5ರ ವರೆಗೆ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೂಲಗಳು ತಿಳಿಸಿವೆ. ಏರ್‌ಶೋನಲ್ಲಿ ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: Aero India 2025 | ವೈಮಾನಿಕ ಪ್ರದರ್ಶನಕ್ಕಿಂದು ಚಾಲನೆ – ರಷ್ಯಾ, ಅಮೆರಿಕ ಸೇರಿ 90 ದೇಶಗಳು ಭಾಗಿ

    Aero India 3

    ಯಲಹಂಕ ವಾಯುನೆಲೆಯಲ್ಲಿ ಇಂದು ಬೆಳಗ್ಗೆ 9:30ರ ವೇಳೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ದೇಶ – ವಿದೇಶಗಳ ಪ್ರಮುಖ ನಾಯಕರು, ರಕ್ಷಣಾ ವಿಭಾಗದ ಅಧಿಕಾರಿಗಳು ಏರ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. ಫೆಬ್ರವರಿ 14ರ ವರೆಗೆ ನಡೆಯಲಿರುವ ಏರ್ ಶೋನಲ್ಲಿ ಅಮೆರಿಕ, ರಷ್ಯನ್‌ ಸೇರಿದಂತೆ ವಿವಿಧ ದೇಶಗಳ ಯುದ್ಧ ವಿಮಾನಗಳು ಭಾಗಿಯಾಗಲಿವೆ. ಇದನ್ನೂ ಓದಿ: Hassan | ಮದುವೆಯಾಗಲು ಪ್ರಿಯತಮೆ ನಿರಾಕರಣೆ – ವಿಷ ಸೇವಿಸಿ ಯುವಕ ಆತ್ಮಹತ್ಯೆ

    Aero India 2

    ಈ ಬಾರಿಯ ವಿಶೇಷತೆ ಏನು? 
    ಈ ಬಾರಿ 42,438 ವಿಸ್ತೀರ್ಣದಲ್ಲಿ ಏರ್ ಶೋ ನಡೆಯುತ್ತಿದ್ದು, ವಿವಿಧ 30 ದೇಶಗಳ ರಕ್ಷಣಾ ಸಚಿವರು, ವಿವಿಧ ದೇಶಗಳ 43 ಮಂದಿ ಸೇನಾ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಒಟ್ಟಾರೆ 90 ದೇಶಗಳು ಏರೋ ಇಂಡಿಯಾದವನ್ನು ಪ್ರತಿನಿಧಿಸಲಿವೆ. 70 ಯುದ್ಧ ವಿಮಾನಗಳು, ಸರಕು, ತರಬೇತಿ ವಿಮಾನಗಳು, 30 ವಿಮಾನಗಳು, ಹೆಲಿಕಾಫ್ಟರ್‌ ಹೃದಯ ಬಡಿತ ಹೆಚ್ಚಿಸುವ ಕಸರತ್ತು ನಡೆಸಲಿವೆ. ರಷ್ಯನ್ & ಅಮೆರಿಕನ್ ಯುದ್ಧ ವಿಮಾನಗಳು ಈ ಪ್ರದರ್ಶನದ ಆಕರ್ಷಣೆಯಾಗಿವೆ. ಇದನ್ನೂ ಓದಿ: IND vs ENG, 2nd ODI: ರೋಹಿತ್‌ ಅಬ್ಬರದ ಶತಕ, ಜಡೇಜಾ ಸ್ಪಿನ್‌ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

    Aero India 4

    ಅಲ್ಲದೇ ವಿವಿಧ ದೇಶಗಳ 900ಕ್ಕೂ ಹೆಚ್ಚು ಉತ್ಪಾದಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಎಐ, ಡ್ರೋನ್‌, ಸೈಬರ್ ಸೆಕ್ಯೂರಿಟಿ, ಗ್ಲೋಬರ್ ಏರೋಸ್ಪೇಸ್, ನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಿದ್ದಾರೆ. ಆತ್ಮನಿರ್ಭರ ಭಾರತ ಉತ್ಪನ್ನಗಳು ಈ ಬಾರಿಯ ಶೋನಲ್ಲಿ ಇರಲಿವೆ. 100 ವಿವಿಧ ಕಂಪನಿಗಳ ಸಿಇಒಗಳು, 50 ವಿದೇಶಿ ಓಎಂಎಸ್ ಭಾಗಿಯಾಗಲಿದ್ದಾರೆ. ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯದ ಬಗ್ಗೆ ಚರ್ಚೆ ನಡೆಯಲಿದೆ. 10 ವಿವಿಧ ವಿಷಯಗಳನ್ನ ಒಳಗೊಂಡ ಸೆಮಿನಾರ್‌ಗಳು ಇರಲಿದೆ. 70ಕ್ಕೂ ಹೆಚ್ಚು ಫ್ಲೈಯಿಂಗ್ ಡಿಸ್‌ಪ್ಲೇಗಳು ಏರ್ ಶೋನಲ್ಲಿ ಇರಲಿವೆ. 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.

  • Aero India 2025 | ವೈಮಾನಿಕ ಪ್ರದರ್ಶನಕ್ಕಿಂದು ಚಾಲನೆ – ರಷ್ಯಾ, ಅಮೆರಿಕ ಸೇರಿ 90 ದೇಶಗಳು ಭಾಗಿ

    Aero India 2025 | ವೈಮಾನಿಕ ಪ್ರದರ್ಶನಕ್ಕಿಂದು ಚಾಲನೆ – ರಷ್ಯಾ, ಅಮೆರಿಕ ಸೇರಿ 90 ದೇಶಗಳು ಭಾಗಿ

    – 70 ಯುದ್ಧ ವಿಮಾನ, 100ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ
    – ಏರ್‌ಪೋರ್ಟ್‌ ಸುತ್ತಮುತ್ತ ಹಲವು ರಸ್ತೆಗಳ ಸಂಚಾರದಲ್ಲಿ ಮಾರ್ಪಾಡು

    ಬೆಂಗಳೂರು: ನೋಡುಗರ ಹೃದಯ ಬಡಿತ ಹೆಚ್ಚಿಸುವ ವೈಮಾನಿಕ ಕಸರತ್ತು, ವೈಮಾನಿಕ ಹಾಗೂ ಬಾಹ್ಯಾಕಾಶ ಉದ್ದಿಮೆ, ಉದ್ಯಮಿಗಳ ಮುಖಾಮುಖಿಗೆ ವೇದಿಕೆಯಾಗಲಿರುವ ದೇಶದ 15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼ (Aero India 2025) ಸೋಮವಾರ ಶುರುವಾಗಲಿದೆ.

    Aero India 2

    ಯಲಹಂಕ ವಾಯುನೆಲೆಯಲ್ಲಿ (Yelahanka Air Base) ಇಂದು ಬೆಳಗ್ಗೆ 9:30ರ ವೇಳೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ದೇಶ – ವಿದೇಶಗಳ ಪ್ರಮುಖ ನಾಯಕರು, ರಕ್ಷಣಾ ವಿಭಾಗದ ಅಧಿಕಾರಿಗಳು ಏರ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. ಇಂದಿನಿಂದ ಫೆಬ್ರವರಿ 14ರ ವರೆಗೆ ನಡೆಯಲಿರುವ ಏರ್ ಶೋನಲ್ಲಿ ಅಮೆರಿಕ, ರಷ್ಯನ್‌ ಸೇರಿದಂತೆ ವಿವಿಧ ದೇಶಗಳ ಯುದ್ಧ ವಿಮಾನಗಳು ಭಾಗಿಯಾಗಲಿವೆ. ಇದನ್ನೂ ಓದಿ: IND vs ENG, 2nd ODI: ರೋಹಿತ್‌ ಅಬ್ಬರದ ಶತಕ, ಜಡೇಜಾ ಸ್ಪಿನ್‌ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

    Aero India

    ಈ ಬಾರಿ ʻರನ್ ವೇ ಟು ಬಿಲಿಯನ್ ಆಪರ್ಚುನಿಟಿ ಟ್ಯಾಗ್ ಲೈನ್ʼನಲ್ಲಿ ಏರ್ ಶೋ ಜರುಗಲಿದೆ. 100ಕ್ಕೂ ಹೆಚ್ಚು ದೇಶಗಳ, 900ಕ್ಕೂ ಹೆಚ್ಚು ಉತ್ಪಾದಕರು ಭಾಗಿಯಾಗುತ್ತಿದ್ದು, ಎಐ, ಡ್ರೋನ್‌, ಗ್ಲೋಬಲ್ ಏರೋ ಸ್ಪೇಸ್, ಸೇರಿದಂತೆ ನೂತನ ತಂತ್ರಜ್ಞಾನದ ವಿವಿಧ ವಸ್ತುಪ್ರದರ್ಶನಗಳನ್ನ ಕಣ್ತುಂಬಿಕೊಳ್ಳುವ ಅವಕಾಶ ಇರಲಿದೆ. ಕೊನೆಯ ಎರಡು ದಿನ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ.

    Aero India 3

    ಈ ಬಾರಿಯ ವಿಶೇಷತೆ ಏನು?
    ಈ ಬಾರಿ 42,438 ವಿಸ್ತೀರ್ಣದಲ್ಲಿ ಏರ್ ಶೋ ನಡೆಯುತ್ತಿದ್ದು, ವಿವಿಧ 30 ದೇಶಗಳ ರಕ್ಷಣಾ ಸಚಿವರು, ವಿವಿಧ ದೇಶಗಳ 43 ಮಂದಿ ಸೇನಾ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಒಟ್ಟಾರೆ 90 ದೇಶಗಳು ಏರೋ ಇಂಡಿಯಾದವನ್ನು ಪ್ರತಿನಿಧಿಸಲಿವೆ. 70 ಯುದ್ಧ ವಿಮಾನಗಳು, ಸರಕು, ತರಬೇತಿ ವಿಮಾನಗಳು, 30 ವಿಮಾನಗಳು, ಹೆಲಿಕಾಫ್ಟರ್‌ ಹೃದಯ ಬಡಿತ ಹೆಚ್ಚಿಸುವ ಕಸರತ್ತು ನಡೆಸಲಿವೆ. ರಷ್ಯನ್ & ಅಮೆರಿಕನ್ ಯುದ್ಧ ವಿಮಾನಗಳು ಈ ಪ್ರದರ್ಶನದ ಆಕರ್ಷಣೆಯಾಗಿವೆ. ಇದನ್ನೂ ಓದಿ: ಫೆ.11ರಂದು ‘ಇನ್ವೆಸ್ಟ್‌ ಕರ್ನಾಟಕ 2025’ಕ್ಕೆ ಚಾಲನೆ – ಹೂಡಿಕೆ ಉತ್ಸವಕ್ಕೆ ಮುನ್ನುಡಿ: ಎಂ.ಬಿ.ಪಾಟೀಲ್‌

    ಅಲ್ಲದೇ ವಿವಿಧ ದೇಶಗಳ 900ಕ್ಕೂ ಹೆಚ್ಚು ಉತ್ಪಾದಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಎಐ, ಡ್ರೋನ್‌, ಸೈಬರ್ ಸೆಕ್ಯೂರಿಟಿ, ಗ್ಲೋಬರ್ ಏರೋಸ್ಪೇಸ್, ನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಿದ್ದಾರೆ. ಆತ್ಮನಿರ್ಭರ ಭಾರತ ಉತ್ಪನ್ನಗಳು ಈ ಬಾರಿಯ ಶೋನಲ್ಲಿ ಇರಲಿವೆ. 100 ವಿವಿಧ ಕಂಪನಿಗಳ ಸಿಇಒಗಳು, 50 ವಿದೇಶಿ ಓಎಂಎಸ್ ಭಾಗಿಯಾಗಲಿದ್ದಾರೆ. ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯದ ಬಗ್ಗೆ ಚರ್ಚೆ ನಡೆಯಲಿದೆ. 10 ವಿವಿಧ ವಿಷಯಗಳನ್ನ ಒಳಗೊಂಡ ಸೆಮಿನಾರ್‌ಗಳು ಇರಲಿದೆ. 70ಕ್ಕೂ ಹೆಚ್ಚು ಫ್ಲೈಯಿಂಗ್ ಡಿಸ್‌ಪ್ಲೇಗಳು ಏರ್ ಶೋನಲ್ಲಿ ಇರಲಿವೆ. 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.

    Traffic Jam 02

    ಏರ್‌ಪೋರ್ಟ್ ರಸ್ತೆಯ ಸವಾರರಿಗೆ ಟ್ರಾಫಿಕ್ ಬಿಸಿ:
    ಇನ್ನೂ ಇಂದಿನಿಂದ ಏರ್ ಶೋ ಆರಂಭ ಹಿನ್ನೆಲೆ 5 ದಿನಗಳ ಕಾಲ ಏರ್‌ಪೋರ್ಟ್ ರಸ್ತೆಯ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆ ಇದೆ. ವಿದೇಶಿ ಗಣ್ಯರು ಆಗಮಿಸುವ ಕಾರಣ ಎಲಿವೇಟೆಡ್ ರಸ್ತೆಯ ಓಡಾಟವನ್ನ ಕೆಲ ಕಾಲ ಬಂದ್ ಮಾಡಲಾಗುತ್ತೆ. ಸರ್ವೀಸ್ ರಸ್ತೆಯಲ್ಲೇ ಸಂಚಾರ ಮಾಡಬೇಕಿರೋ ಕಾರಣ ಆ ಭಾಗದ ವಾಹನ ಸವಾರರು 5 ದಿನಗಳ ಕಾಲ ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇನ್ನೂ, ಏರ್ ಪೋರ್ಟ್ ರಸ್ತೆ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಿ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ. ಇದನ್ನೂ ಓದಿ: Hassan | ಮದುವೆಯಾಗಲು ಪ್ರಿಯತಮೆ ನಿರಾಕರಣೆ – ವಿಷ ಸೇವಿಸಿ ಯುವಕ ಆತ್ಮಹತ್ಯೆ

    ಯಾವೆಲ್ಲ ವಾಹನಗಳಿಗೆ ಸಂಚಾರ ನಿಷೇಧ
    * ಲಾರಿ, ಟ್ರಕ್, ಬಸ್, ಸರಕು ಸಾಗಾಣಿಕೆ ವಾಹನಗಳಿಗೆ ಸಂಚಾರ ನಿರ್ಬಂಧ
    * ಮೇಖ್ರಿ ವೃತ್ತದಿಂದ-ಎಂವಿಐಟಿ ಕ್ರಾಸ್‌ವರೆಗೆ ಸಂಚಾರ ನಿಷೇಧ
    * ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ವರೆಗೆ ನಿಷೇಧ
    * ನಾಗವಾರ ಜಂಕ್ಷನ್‌ನಿಂದ ರೇವಾ ಕಾಲೇಜ್ ಜಂಕ್ಷನ್‌ವರೆಗೆ ಸಂಚಾರ ನಿಷೇಧ
    * ಹೆಸರಘಟ್ಟ, ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರ ನಿಷೇಧ
    * ಜಿಕೆವಿಕೆ ಕ್ಯಾಂಪಸ್‌ನಲ್ಲಿ ಸಾರ್ವಜನಿಕರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ

  • Aeroindia 2025 | ಬೆಂಗಳೂರಿಗೆ ಬಂದಿಳಿದ ಅಮೆರಿಕ – ರಷ್ಯಾ ಜೆಟ್

    Aeroindia 2025 | ಬೆಂಗಳೂರಿಗೆ ಬಂದಿಳಿದ ಅಮೆರಿಕ – ರಷ್ಯಾ ಜೆಟ್

    ಬೆಂಗಳೂರು: 15ನೇ ಆವೃತ್ತಿಯ ಏರೋ ಇಂಡಿಯಾ (Aero India 2025) ವೈಮಾನಿಕ ಪ್ರದರ್ಶನ ಫೆ.10ರ ಸೋಮವಾರದಿಂದ ಸಿಲಿಕಾನ್‌ ಸಿಟಿಯಲ್ಲಿ ಆರಂಭವಾಗಲಿದೆ. ಈಗಾಗಲೇ ಅಮೆರಿಕದ ಎಫ್-35, ರಷ್ಯಾದ ಎಸ್‌ಯು-35 ಯುದ್ಧ ವಿಮಾನ (Fighter Jet) ಯಲಹಂಕದ ವಾಯುನೆಲೆಗೆ ಬಂದಿಳಿದಿವೆ.

    Aeroindia 2025

    ಶತ್ರುಗಳ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಸಬಲ್ಲ 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನಗಳು ಈ ಬಾರಿಯ ಏರ್ ಶೋ ನಲ್ಲಿ ಗಮನ ಸೆಳೆಯಲಿವೆ. ಈಗಾಗಲೇ ತಾಲೀಮು ಆರಂಭಿಸಿರುವ ಎಸ್‌ಯು 57 ಜೊತೆಗೆ ಇಂದಿನಿಂದ ಎಫ್-35 ಮತ್ತು ಎರಡು ಎಫ್-16 ವಿಮಾನಗಳು ತಾಲೀಮು ನಡೆಸಲಿವೆ. ಇದನ್ನೂ ಓದಿ: ನಾಳೆಯಿಂದ ಏರೋ ಇಂಡಿಯಾ ಶೋ – ಬಾನಂಗಳದಲ್ಲಿ ಮೋಡಿ ಮಾಡಲಿವೆ ಲೋಹದ ಹಕ್ಕಿಗಳು

    ಅಮೆರಿಕ ಮತ್ತು ರಷ್ಯಾ ತಮ್ಮ ಅತ್ಯಾಧುನಿಕ ಯುದ್ಧ ವಿಮಾನಗಳನ್ನ ಭಾರತಕ್ಕೆ ಮಾರಾಟ ಮಾಡಲು ಉತ್ಸುಕವಾಗಿವೆ. ಕಳೆದ ಬಾರಿಯ ಏರ್ ಶೋ ನಲ್ಲಿಯೂ ಎಫ್-35, ಎಫ್‌-16 ಭಾಗವಹಿಸಿತ್ತು. ಅದ್ರ ಜೊತೆಗೆ SU-57 ಮೊದಲ ಬಾರಿಗೆ ಭಾಗವಹಿಸುತ್ತಿದ್ದು, ಕುತೂಹಲ ಹೆಚ್ಚಿಸಿದೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಬೇಕಾ – ಬೇಡ್ವಾ?; ಸಾರ್ವಜನಿಕರಿಂದ ಸಲಹೆಗೆ ಆಹ್ವಾನ

    ಬಾನಂಗಳದಲ್ಲಿ ತನ್ನ ಸಾಮಾರ್ಥ್ಯ ತೋರಿಸಿ ನೋಡುಗರಿಗೆ ಸಖತ್ ಥ್ರಿಲ್ ನೀಡುವ ಜೊತೆಗೆ ರಕ್ಷಣಾ ವ್ಯವಸ್ಥೆಯ ಬಲಿಷ್ಟತೆಗೆ ಸಾಕ್ಷಿಯಾಗಲಿವೆ. ಇದನ್ನೂ ಓದಿ: Exclusive | ಮುಡಾ ಕೇಸ್‌ನಲ್ಲಿ ಸಿಎಂ & ಕುಟುಂಬಸ್ಥರೇ ಸಂತ್ರಸ್ತರು – ನಟೇಶ್‌ ಪ್ರಮುಖ ಆರೋಪಿ ಎಂದ ʻಲೋಕಾʼ

  • ಫೆ.10 ರಿಂದ ಬೆಂಗಳೂರಿನಲ್ಲಿ `ಏರೋ ಇಂಡಿಯಾ 2025′ – ಏಷ್ಯಾದ ಅತಿದೊಡ್ಡ ಏರ್‌ ಶೋ!

    ಫೆ.10 ರಿಂದ ಬೆಂಗಳೂರಿನಲ್ಲಿ `ಏರೋ ಇಂಡಿಯಾ 2025′ – ಏಷ್ಯಾದ ಅತಿದೊಡ್ಡ ಏರ್‌ ಶೋ!

    ಬೆಂಗಳೂರು: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ, 15ನೇ ಆವೃತ್ತಿಯ ಏರೋ ಇಂಡಿಯಾ-2025ಕ್ಕೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 10 ರಿಂದ 14ರ ವರೆಗೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿದೆ.

    ‘ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್’- ಬಿಲಿಯನ್ ಅವಕಾಶಗಳಿಗೆ ರನ್ ವೇ ಎಂಬ ವಿಶಾಲ ಧೇಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮ ವಿದೇಶಿ ಮತ್ತು ಭಾರತೀಯ ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ರೂಪಿಸಲು ಮತ್ತು ಜಾಗತಿಕ ಮೌಲ್ಯ ಸರಣಿಯಲ್ಲಿ ದೇಶೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲು ಹೊಸ ಮಾರ್ಗಗಳ ಅನ್ವೇಷಣೆಗೆ ವೇದಿಕೆಯನ್ನು ಒದಗಿಸುತ್ತದೆ.

    Air show 3

    ಕಾರ್ಯಕ್ರಮದ ಮೊದಲ ಮೂರು ದಿನಗಳು (ಫೆಬ್ರವರಿ 10, 11 ಮತ್ತು 12) ವ್ಯವಹಾರದ ದಿನಗಳಾಗಿರುತ್ತವೆ. ಆದರೆ 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮ ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ ಮತ್ತು ಸ್ಥಿರ ಪ್ರದರ್ಶನಗಳನ್ನು ಒಳಗೊಂಡಿದೆ.

    ಇದರಲ್ಲಿ ಪೂರ್ವಭಾವಿ ಕಾರ್ಯಕ್ರಮ (ಕರ್ಟನ್ ರೈಸರ್ ಈವೆಂಟ್), ಉದ್ಘಾಟನಾ ಕಾರ್ಯಕ್ರಮ, ರಕ್ಷಣಾ ಸಚಿವರ ಸಮಾವೇಶ, ಸಿಇಒಗಳ ದುಂಡು ಮೇಜಿನ ಸಭೆ, ಮಂಥನ್ ಸ್ಟಾರ್ಟ್-ಅಪ್ ಕಾರ್ಯಕ್ರಮ, ಉಸಿರು ಬಿಗಿಹಿಡಿದು ನೋಡುವ ಮೈನವಿರೇಳಿಸುವ ಏರ್ ಶೋಗಳಿವೆ, ಜತೆಗೆ ಇಂಡಿಯಾ ಪೆವಿಲಿಯನ್ ಅನ್ನು ಒಳಗೊಂಡಿರುವ ದೊಡ್ಡ ಪ್ರದರ್ಶನ ಪ್ರದೇಶ ಮತ್ತು ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳವನ್ನು ಒಳಗೊಂಡಿದೆ.

    Air show 4

    ಮಿತ್ರ ರಾಷ್ಟ್ರಗಳೊಂದಿಗೆ ಕಾರ್ಯತಂತ್ರದ ಸಹಭಾಗಿತ್ವದೆಡೆಗೆ ಮಾತುಕತೆಯನ್ನು ಸುಲಭಗೊಳಿಸಲು, ಭಾರತವು ‘ಬ್ರಿಡ್ಜ್-ಅಂತಾರಾಷ್ಟ್ರೀಯ ರಕ್ಷಣೆ ಮತ್ತು ಜಾಗತಿಕ ಪಾಲುದಾರಿಕೆ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು’ ಎಂಬ ವಿಷಯದ ಮೇಲೆ ರಕ್ಷಣಾ ಸಚಿವರ ಸಮಾವೇಶವನ್ನು ಆಯೋಜಿಸುತ್ತದೆ. ಇದು ಭೌಗೋಳಿಕ ರಾಜಕೀಯ ಪರಿಸ್ಥಿತಿಗಳನ್ನು ಸಕ್ರಿಯಗೊಳಿಸಲಿದೆ ಮತ್ತು ಪರಸ್ಪರ ಸಮೃದ್ಧಿಯ ಹಾದಿಗೆ ಅನುವು ಮಾಡಿಕೊಡಲಿದೆ. ಅಲ್ಲದೆ, ಇದು ಭದ್ರತೆ ಮತ್ತು ಅಭಿವೃದ್ಧಿಯ ಹಂಚಿಕೆಯ ದೂರದೃಷ್ಟಿಗಳೊಂದಿಗೆ ರಾಷ್ಟ್ರಗಳ ನಡುವಿನ ಸಹಕಾರಕ್ಕೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.

    ಏರ್ ಶೋ ನೇಪಥ್ಯದಲ್ಲಿ ರಕ್ಷಣಾ ಸಚಿವರು, ರಕ್ಷಣಾ ಖಾತೆ ರಾಜ್ಯ ಸಚಿವರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಮತ್ತು ಕಾರ್ಯದರ್ಶಿಗಳ ಮಟ್ಟದಲ್ಲಿ ಹಲವಾರು ದ್ವಿಪಕ್ಷೀಯ ಸಭೆಗಳನ್ನು ಆಯೋಜಿಸಲಾಗಿದೆ. ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಹೊಸ ಮಾರ್ಗಗಳನ್ನು ಅನ್ವೇಷಿಸುವ ಮೂಲಕ ಸ್ನೇಹಪರ ದೇಶಗಳೊಂದಿಗೆ ರಕ್ಷಣಾ ಮತ್ತು ವೈಮಾನಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವತ್ತ ಗಮನಹರಿಸಲಾಗುವುದು.

    Aero India 2023 AirShow 2

    ಸಿಇಒ ಗಳ ದುಂಡುಮೇಜಿನ ಸಭೆ, ವಿದೇಶಿ ಮೂಲ ಸಲಕರಣೆ ತಯಾರಕರಿಗೆ (ಒಇಎಂ ಗಳು) ಭಾರತದಲ್ಲಿ ಉತ್ಪಾದನೆಗೆ ಅನುಕೂಲಕರ ವೇದಿಕೆಯನ್ನು ಒದಗಿಸುವ ನಿರೀಕ್ಷೆಯಿದೆ. ಜಾಗತಿಕ ಸಿಇಒಗಳು, ದೇಶೀಯ ಪಿಎಸ್‌ಯುಗಳ ಸಿಎಂಡಿಗಳು ಮತ್ತು ಭಾರತದ ಪ್ರಧಾನ ಖಾಸಗಿ ರಕ್ಷಣಾ ಮತ್ತು ವೈಮಾನಿಕ ಉತ್ಪಾದನಾ ಕಂಪನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

    ಇಂಡಿಯಾ ಪೆವಿಲಿಯನ್ ತನ್ನ ಮೇಕ್-ಇನ್-ಇಂಡಿಯಾ ಉಪಕ್ರಮಕ್ಕೆ ಸ್ಥಳೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳ ವೃದ್ಧಿ ಮತ್ತು ಭವಿಷ್ಯದ ಸಂಭನೀಯಗಳು ಸೇರಿದಂತೆ ಜಾಗತಿಕ ಹಂತಕ್ಕೆ ಸಿದ್ಧವಾಗಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಮೂಲಕ ಭಾರತದ ಬದ್ಧತೆಯನ್ನು ಬಿಂಬಿಸುತ್ತದೆ. ಭಾರತೀಯ ನವೋದ್ಯಮಗಳ ಪ್ರಚಾರಕ್ಕಾಗಿ ಏರೋ ಇಂಡಿಯಾ 2025ರಲ್ಲಿ ಪೋಕಸ್ ಏರಿಯಾ (ಕೇಂದ್ರೀಕೃತ ಪ್ರದೇಶ)ವನ್ನು ಹೊಂದಿರಲಿದೆ ಮತ್ತು ನವೋದ್ಯಮಗಳನ್ನು ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ತಂತ್ರಜ್ಞಾನಗಳು/ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ವಿಶೇಷ ಐಡೆಕ್ಸ್ ಪೆವಿಲಿಯನ್‌ನಲ್ಲಿ ಪ್ರದರ್ಶಿಸಲಾಗುವುದು.

    ಇದಲ್ಲದೆ, ಡೈನಾಮಿಕ್ ಏರೋಬ್ಯಾಟಿಕ್ ಪ್ರದರ್ಶನಗಳು ಮತ್ತು ಲೈವ್ ತಂತ್ರಜ್ಞಾನ ಪ್ರದರ್ಶನಗಳು ವಿಶಿಷ್ಟ ಅನುಭವವನ್ನು ಒದಗಿಸುತ್ತವೆ, ಆಧುನಿಕ ಏರೋಸ್ಪೇಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ತಂತ್ರಜ್ಞಾನಗಳ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಕಾರ್ಯಕ್ರಮದ ಭಾಗವಾಗಿ ವಿವಿಧ ಪ್ರಮುಖ ವಿಷಯಗಳ ಕುರಿತು ಹಲವು ವಿಚಾರಸಂಕಿರಣಗಳನ್ನೂ ಸಹ ಆಯೋಜಿಸಲಾಗಿದೆ.

  • Aero India-2023 ಏರ್‌ಶೋಗೆ ಪ್ರಧಾನಿ ಮೋದಿ ಅದ್ಧೂರಿ ಚಾಲನೆ

    Aero India-2023 ಏರ್‌ಶೋಗೆ ಪ್ರಧಾನಿ ಮೋದಿ ಅದ್ಧೂರಿ ಚಾಲನೆ

    ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ 5 ದಿನಗಳ ಕಾಲ ನಡೆಯುವ ವಿಶ್ವದ ಗಮನ ಸೆಳೆಯುವ ಏರೋ ಇಂಡಿಯಾ-2023 (Aero India 2023) ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧಿಕೃತ ಚಾಲನೆ ನೀಡಿದರು.

    ದೇಶದ 32 ದೇಶದ ರಕ್ಷಣಾ ಸಚಿವರು, 29 ರಾಷ್ಟ್ರಗಳ ವಾಯುಪಡೆಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಾರಂಗ್, ಸೂರ್ಯಕಿರಣ್, ವೈಮಾನಿಕ ಪ್ರದರ್ಶನ ತಂಡ, ಸುಖೋಯ್, ರಫೆಲ್ (Rafale Jet), ತೆಜಸ್ ಸೇರಿದಂತೆ ಒಟ್ಟು 67 ವಿಮಾನಗಳಿಂದ ಸಾಹಸ ಪ್ರದರ್ಶನ ನಡೆಯಲಿದೆ. ಕಳೆದ ಬಾರಿ 44 ವಿಮಾನಗಳು ಪ್ರದರ್ಶನ ತೋರಿದ್ದವು. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

    AeroIndia2023 3

    ಏರ್ ಶೋನ (Air Show) ಮೊದಲ ಮೂರು ದಿನ ವಹಿವಾಟಿಗೆ ಸೀಮಿತಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಫೆ.16, 17 ರಂದು ಮಾತ್ರ ವೈಮಾನಿಕ ಪ್ರದರ್ಶನ ನೋಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

    ಇಂಡಿಯನ್ ಪೆವಿಲಿಯನ್ ವಿಶೇಷ ಹೇಗಿದೆ ಗೊತ್ತಾ?
    ಭಾರತ ನಿರ್ಮಿತ ಯುದ್ಧ ವಿಮಾನ (Fighter Jet), ಹೆಲಿಕಾಪ್ಟರ್ ಹಾಗೂ ತಂತ್ರಜ್ಞಾನಗಳ ಪ್ರದರ್ಶನಕ್ಕಾಗಿಯೇ ಪ್ರತ್ಯೇಕವಾಗಿ ಇಂಡಿಯನ್ ಪೆವಿಲಿಯನ್ ನಿರ್ಮಾಣ ಮಾಡಲಾಗಿದೆ. ಅದರಲ್ಲಿ 115 ಕಂಪನಿಗಳು, 227 ಉತ್ಪನ್ನಗಳ ಪ್ರದರ್ಶನಕ್ಕಿಡಲಾಗುತ್ತಿದೆ. 149 ಉತ್ಪನ್ನಗಳನ್ನ ಭೌತಿಕವಾಗಿಯೇ ಪ್ರದರ್ಶಿಸಲಾಗಿದೆ. ಇದನ್ನೂ ಓದಿ: ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ

    AeroIndia2023 4

    ಏರೋ ಇಂಡಿಯಾ 2023ರ ವಿಶೇಷತೆ:
    2023ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ 98 ದೇಶಗಳಿಂದ 809 ಪ್ರದರ್ಶಕರು ಪಾಲ್ಗೊಂಡಿದ್ದು, 67 ವಿಮಾನಗಳನ್ನ ಪ್ರದರ್ಶಿಸಲಾಗುತ್ತಿದೆ. ಒಟ್ಟು 75 ಸಾವಿರ ಕೋಟಿ ರೂ. ಗಳ 251 ಒಪ್ಪಂದಗಳು ನಡೆಯಲಿವೆ. 32 ವಿದೇಶಿ ರಕ್ಷಣಾ ಸಚಿವರು ಹಾಗೂ ವಿವಿಧ ದೇಶಗಳ 29 ವಾಯುಪಡೆ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

    ಏರ್ ಶೋ ಮುಖ್ಯಾಂಶಗಳೇನು?
    ಈ ಬಾರಿ ಏರ್ ಶೋನಲ್ಲಿ ಏರ್ ಬಸ್, ಬೋಯಿಂಗ್, ಡಸಾಲ್ಟ್ ಏವಿಯೇಷನ್, ಲಾಕ್ಹೀಡ್ ಮಾರ್ಟಿನ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌, ಬ್ರಹ್ಮೋಸ್ ಏರೋಸ್ಪೇಸ್, ಆರ್ಮಿ ಏವಿಯೇಷನ್, ಹೆಚ್.ಸಿ ರೋಬೋಟಿಕ್ಸ್, ಎಸ್‌ಎಎಬಿ, ಸಫ್ರಾನ್, ರೋಲ್ಸ್ ರಾಯ್ಸ್, ಲಾರ್ಸನ್ ಮತ್ತು ಟೂಬ್ರೊ, ಭಾರತ್ ಫೋರ್ಜ್ ಲಿಮಿಟೆಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL), ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ (BEL), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ಮತ್ತು ಬಿಇಎಂಎಲ್ ಲಿಮಿಟೆಡ್ ಪ್ರಮುಖ ಪ್ರದರ್ಶಕರು ಪಾಲ್ಗೊಂಡಿದ್ದಾರೆ.

    01

    ಭವಿಷ್ಯದ ತಂತ್ರಜ್ಞಾನಗಳ ಪ್ರದರ್ಶನ:
    ಭವಿಷ್ಯದಲ್ಲಿ ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಲಘು ಯುದ್ಧ ವಿಮಾನ (LCA) -ತೇಜಸ್, HIT-40, ಡಾರ್ನಿಯರ್ ಲಘು ಯುಟಿಲಿಟಿ ಹೆಲಿಕಾಪ್ಟರ್ (LUH), ಲಘು ಯುದ್ಧ ಹೆಲಿಕಾಪ್ಟರ್ (LCH) ಮತ್ತು ಮುಂದುವರಿದ ಲಘು ಹೆಲಿಕಾಪ್ಟರ್ (ALH) ನಂತಹ ದೇಶೀಯ ವಾಯು ವೇದಿಕೆಗಳ ರಫ್ತನ್ನು ಉತ್ತೇಜಿಸುವ ಗುರಿಯನ್ನು ಏರ್ ಶೋ ಹೊಂದಿದೆ.

    ಏರ್ ಶೋ ನಲ್ಲಿ 100ಕ್ಕೂ ಅಧಿಕ ಮಿತ್ರ ರಾಷ್ಟ್ರಗಳು ಭಾಗಿಯಾಗಲಿದ್ದು, ಕಳೆದ ಎಲ್ಲಾ ವರ್ಷಗಳ ದಾಖಲೆಯನ್ನ ಈ ಬಾರಿ ಏರ್ ಶೋ ಮುರಿಯುವ ವಿಶ್ವಾಸವಿದೆ ಅಂತಾ ರಕ್ಷಣಾ ಸಚಿವರು ಹೇಳಿದ್ದಾರೆ. ಒಟ್ಟಿನಲ್ಲಿ 5 ದಿನಗಳ ಕಾಲ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಚಮತ್ಕಾರ, ಕಮಾಲ್ ನೋಡಿ, ಪ್ರೇಕ್ಷಕರ ಮಸ್ತ್ ಎಂಜಾಯ್ ಮಾಡಬಹುದು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಂದಿನಿಂದ ಅದ್ಧೂರಿ Aero India 2023 ಏರ್ ಶೋ

    ಇಂದಿನಿಂದ ಅದ್ಧೂರಿ Aero India 2023 ಏರ್ ಶೋ

    ಬೆಂಗಳೂರು: ವಿಶ್ವದ ಗಮನ ಸೆಳೆಯುವ ಏರೋ ಇಂಡಿಯಾ-2023 (Aero India 2023) ಏರ್‌ಶೋ ಇಂದಿನಿಂದ (ಫೆ.13) ಆರಂಭಗೊಳ್ಳುತ್ತಿದೆ. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ (Bengaluru Yalahanka Airfield) 5 ದಿನಗಳ ಕಾಲ ನಡೆಯುವ ವೈಮಾನಿಕ ಪ್ರದರ್ಶನಕ್ಕಿಂದು ಪ್ರಧಾನಿ ಮೋದಿ (Narendra Modi) ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

    NARENDRA MODI 1

    ವಿಶ್ವದ ಗಮನ ಸೆಳೆಯುವ 14ನೇ ಆವೃತಿಯ ಏರ್ ಶೋಗೆ (Air Show) ಕೌಂಟ್ ಡೌನ್ ಶುರುವಾಗಿದೆ. 5 ದಿನಗಳ ಕಾಲ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನಕ್ಕೆ ಈಗಾಗಲೇ ಯಲಹಂಕ ವಾಯನೆಲೆ ಸಜ್ಜಾಗಿದ್ದು, ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಸೇರಿ ಹಲವು ಗಣ್ಯರು ಬೆಂಗಳೂರಿಗೆ ಆಗಮಿಸಿದ್ದಾರೆ. ಏರ್ ಶೋ ಹಿನ್ನೆಲೆ ಫೆ.14ರಂದು ಬೆಳಗ್ಗೆ 7.30 ರಿಂದ ಏರ್ ಪೋರ್ಟ್ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಭಂಧ ವಿಧಿಸಲಾಗಿದೆ. ಇದನ್ನೂ ಓದಿ: ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ

    AeroIndia2023 2

    ಈ ಬಾರಿಯ ಏರ್ ಶೋನಲ್ಲಿ 35,000 ಚದರ ಅಡಿಗಳಲ್ಲಿ ಎಕ್ಸಿಬಿಷನ್ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಜಿಕೆವಿಕೆ ಹಾಗೂ ಜಕ್ಕೂರಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಫೆಬ್ರವರಿ 14ರಂದು ನಡೆಯುವ ಕಾರ್ಯಕ್ರಮಕ್ಕೆ 4 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಇಂಡಿಯಾ ಪೆವಿಲಿಯನ್ನಲ್ಲಿ 115 ಕಂಪನಿಗಳು ಭಾಗಿಯಾಗುತ್ತಿದ್ದು, 227 ಉತ್ಪನ್ನಗಳ ಪ್ರದರ್ಶನ ಇರಲಿದೆ.

    ಏರ್‌ಶೋಗೆ ಏನೇನು ಸಿದ್ಧತೆ?: 35 ಸಾವಿರ ಚದರ ಅಡಿಯಲ್ಲಿ ಎಕ್ಸಿಬಿಷನ್ ಆಯೋಜನೆ ಮಾಡಲಾಗಿದೆ. 67 ಫ್ಲೈಯಿಂಗ್‌ ಡಿಸ್‌ಪ್ಲೇ, 36 ಸ್ಟ್ಯಾಂಡಿಂಗ್‌ ಡಿಸ್‌ಪ್ಲೇ ಅಳವಡಿಕೆ ಮಾಡಲಾಗಿದೆ. 809 ಪ್ರದರ್ಶಕರು, 98 ವಿದೇಶಿ ಕಂಪನಿಗಳು ಭಾಗಿಯಾಗಿವೆ. ಫೆಬ್ರವರಿ 14 ರಂದು 32 ದೇಶಗಳ ರಕ್ಷಣಾ ಸಚಿವರು ಏರ್‌ಶೋ ನಲ್ಲಿ ಭಾಗಿಯಾಗಲಿದ್ದಾರೆ.

    HEBBAL FLYOVER

    ದೇಶಿಯ, ಅಂತರಾಷ್ಟ್ರೀಯ ಯುದ್ಧ ವಿಮಾನಗಳ ಸಾಹಸ ಪ್ರದರ್ಶನ ಹಾಗೂ ವಿಮಾನಯಾನ ಉದ್ಯಮಕ್ಕೆ ಉತ್ತೇಜನ ಕೊಡುವ ವಿವಿಧ ಸ್ಟಾಲ್ ಗಳು ಕೂಡ ಜನರನ್ನ ಆಕರ್ಷಿಸಲಿವೆ. ಇದನ್ನೂ ಓದಿ: ಜೆಡಿಎಸ್‍ನಲ್ಲಿ ಮುಗಿಯದ ಟಿಕೆಟ್ ಗೊಂದಲ- ಅರಸೀಕೆರೆಗೆ ಬಾಣಾವರ ಅಶೋಕ್ ಫಿಕ್ಸ್

    ಏರ್ ಶೋ ನಲ್ಲಿ 100ಕ್ಕೂ ಅಧಿಕ ಮಿತ್ರ ರಾಷ್ಟ್ರಗಳು ಭಾಗಿಯಾಗಲಿದ್ದು, ಕಳೆದ ಎಲ್ಲಾ ವರ್ಷಗಳ ದಾಖಲೆಯನ್ನ ಈ ಬಾರಿ ಏರ್ ಶೋ ಮುರಿಯುವ ವಿಶ್ವಾಸವಿದೆ ಅಂತಾ ರಕ್ಷಣಾ ಸಚಿವರು ಹೇಳಿದ್ದಾರೆ. ಒಟ್ಟಿನಲ್ಲಿ 5 ದಿನಗಳ ಕಾಲ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಚಮತ್ಕಾರ, ಕಮಾಲ್ ನೋಡಿ, ಪ್ರೇಕ್ಷಕರ ಮಸ್ತ್ ಎಂಜಾಯ್ ಮಾಡಬಹುದು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k