Tag: ಮೈತ್ರಿ

  • ಡಿಎಂಕೆ, ಬಿಜೆಪಿ ಯಾವುದೇ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ – ಟಿವಿಕೆ ವಿಜಯ್ ಘೋಷಣೆ

    ಡಿಎಂಕೆ, ಬಿಜೆಪಿ ಯಾವುದೇ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ – ಟಿವಿಕೆ ವಿಜಯ್ ಘೋಷಣೆ

    ಚೆನ್ನೈ; ಟಿವಿಕೆ (TVK) ಪಕ್ಷ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ, ಡಿಎಂಕೆ (DMK) ಹಾಗೂ ಬಿಜೆಪಿ (DMK) ಯಾವ ಪಕ್ಷದ ಜೊತೆಗೂ ಕೈಜೋಡಿಸಲ್ಲ ಎಂದು ನಟ, ರಾಜಕಾರಣಿ ತಮಿಳಿಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಮುಖ್ಯಸ್ಥ ವಿಜಯ್ (Vijay) ಘೋಷಣೆ ಮಾಡಿದ್ದಾರೆ.

    ಮಧುರೈ (Madhurai) ಜಿಲ್ಲೆಯ ಪರಪತಿಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಎರಡನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಡಿಎಂಕೆ ಹಾಗೂ ಬಿಜೆಪಿ ನಡುವೆ ಹೋರಾಡಲಿದೆ. ಡಿಎಂಕೆ ನಮಗೆ ರಾಜಕೀಯ ಬದ್ದ ವೈರಿ, ಬಿಜೆಪಿಯ ಜೊತೆಗೂ ಕೈಜೋಡಿಸಲ್ಲ. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ದೆಹಲಿ ಸಿಎಂಗೆ ಕಪಾಳಮೋಕ್ಷ ಕೇಸ್ – ಆರೋಪಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

    ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ತಮಿಳುನಾಡಿನಲ್ಲಿರುವ 234 ಕ್ಷೇತ್ರಗಳಲ್ಲಿಯೂ ಟಿವಿಕೆ ಪಕ್ಷ ಸ್ಪರ್ಧಿಸಲಿದೆ. ನಾನು ಪೂರ್ವ ಮಧುರೈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಡಿಎಂಕೆ ಸರ್ಕಾರವು ಚುನಾವಣೆ ಪೂರ್ವದಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಬುಧವಾರದಿಂದ (ಆ.20) ನಡೆಯುತ್ತಿರುವ ಈ ಸಮಾವೇಶದಲ್ಲಿ ಮೊದಲ ದಿನವೇ ಕಾಲ್ತುಳಿತ ಉಂಟಾಗಿ, ಓರ್ವ ಸಾವನ್ನಪ್ಪಿದ್ದಾನೆ. ಜೊತೆಗೆ ಕ್ರೇನ್ ಕಟ್ಟಾಗಿ ಧ್ವಜಸ್ತಂಭ ಬಿದ್ದು, ಕಾರೊಂದು ಜಖಂ ಆಗಿದೆ.ಇದನ್ನೂ ಓದಿ: ಜಿಎಸ್‌ಟಿ ಪರಿಷ್ಕರಣೆ – 12%, 28% ಸ್ಲ್ಯಾಬ್‌ ತೆಗೆಯಲು ಸಚಿವರ ಸಮಿತಿ ಒಪ್ಪಿಗೆ

  • ಸುಮಲತಾಗೆ ಟಿಕೆಟ್ ನೀಡಿದ್ರೆ ಮಂಡ್ಯ ಗೆಲುವು ಸುಲಭ – ಅಮಿತ್ ಶಾ ಎದುರು ಬಿಜೆಪಿ ನಾಯಕರ ಬ್ಯಾಟಿಂಗ್

    ಸುಮಲತಾಗೆ ಟಿಕೆಟ್ ನೀಡಿದ್ರೆ ಮಂಡ್ಯ ಗೆಲುವು ಸುಲಭ – ಅಮಿತ್ ಶಾ ಎದುರು ಬಿಜೆಪಿ ನಾಯಕರ ಬ್ಯಾಟಿಂಗ್

    – ಮೈತ್ರಿ ಧರ್ಮ ಪಾಲಿಸಿ, ಸಂಘಟನೆಗೆ ಒತ್ತು ನೀಡುವಂತೆ ಶಾ ವಾರ್ನಿಂಗ್

    ಮಂಡ್ಯ: ಈಗಾಗಲೇ 2024ರ ಲೋಕಸಭಾ ಚುನಾವಣೆಗೆ (Lok Sabha Elections) ಸಿದ್ಧತೆ ನಡೆಸಿರುವ ಬಿಜೆಪಿ ಸತತ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಭರ್ಜರಿ ತಾಲೀಮು ನಡೆಸಿದೆ.

    ಅದರಲ್ಲೂ ಕಾಂಗ್ರೆಸ್ (Congress) ಆಡಳಿತದಲ್ಲಿರುವ ಕರ್ನಾಟಕವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಗೆಲುವಿನೊಂದಿಗೆ ಅತಿಹೆಚ್ಚು ಲೀಡ್ ಗಳಿಸುವತ್ತ ನಿಗಾ ವಹಿಸಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿಗೆ ಆಗಮಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೈವೋಲ್ಟೇಜ್ ಸಭೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಿನ ಲೀಡ್‌ನೊಂದಿಗೆ ಗೆಲುವು ಸಾಧಿಸುವತ್ತ ಗಮನ ಹರಿಸುವಂತೆ ಪಕ್ಷದ ವರಿಷ್ಠರಿಗೆ ಸೂಚನೆ ನೀಡಿದ್ದಾರೆ.

    BJP 1

    ಸುಮಲತಾ ಪರ ಬ್ಯಾಟಿಂಗ್:
    ಭಾನುವಾರ ಅಮಿತ್ ಶಾ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹೈವೋಲ್ಟೇಜ್ ಕಣವಾಗಿರುವ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಕೆಲ ಬಿಜೆಪಿ ನಾಯಕರು ಪಟ್ಟು ಹಿಡಿದಿರುವ ಪ್ರಸಂಗವೂ ಕೇಳಿಬಂದಿದೆ. ಹಾಲಿ ಸಂಸದೆ ಸುಮಲತಾ (umalatha Ambareesh) ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ಸಲಹೆಗಳೂ ಕೇಳಿಬಂದಿವೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ; ರಾಜ್ಯದ ನಾರಾಯಣ ಕೃಷ್ಣನಾಸ ಭಾಂಡಗೆಗೆ ಬಿಜೆಪಿ ಟಿಕೆಟ್‌

    SUMALATHA AMBAREESH

    ಸುಮಲತಾ ಅಂಬರೀಶ್ ಅವರಿಗೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಇದೆ. ಅವರಿಗೆ ಮೈತ್ರಿ (BJP-JDS Alliance) ಟಿಕೆಟ್ ನೀಡಿದ್ರೆ ಗೆಲುವು ಸುಲಭ. ಹಾಗಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಪಟ್ಟು ಹಿಡಿದಿದ್ದಾರೆ. ಇದೆಲ್ಲವನ್ನು ಸಮಾಧಾನವಾಗಿಯೇ ಕೇಳಿಸಿಕೊಂಡ ಅಮಿತ್ ಶಾ ಅವರು ನೀವು ಕೂತಲ್ಲಿ ನಿಂತಲ್ಲಿ ನಿಮ್ಮ ಅಭಿಪ್ರಾಯ ಹೇಳಬೇಡಿ. ನಿಮ್ಮ ಮಾತಿನಿಂದ ಮೈತ್ರಿ ಧರ್ಮಕ್ಕೆ ಚೂರು ಧಕ್ಕೆಯಾದರೂ ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮೈತ್ರಿ ಧರ್ಮ ಪಾಲಿಸಿ: ಬಿಜೆಪಿ ನಾಯಕರಿಗೆ ಅಮಿತ್‌ ಶಾ ಸೂಚನೆ

    ನಿಮ್ಮ ಅಭಿಪ್ರಾಯ ಹೇಳೋದನ್ನು ಬಿಟ್ಟು ಕೊಟ್ಟಿರುವ ಟಾಸ್ಕ್ ಮಾಡಿ, ಇನ್ನೂ 15 ದಿನಗಳಲ್ಲಿ ಅಭ್ಯರ್ಥಿ ಘೋಷಣೆಯಾಗುತ್ತೆ. ಮೈತ್ರಿ ಸಂಘಟನೆಗೆ ಒತ್ತು ನೀಡಿ ಎಂದು ಮಂಡ್ಯದ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣು ವಿಗ್ರಹ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರ

  • ಸರಿಯಾದ ಸಮಯದಲ್ಲಿ ಆಯ್ಕೆ – ಹೆಚ್‌ಡಿಡಿ ಭೇಟಿಯಾದ ವಿಜಯೇಂದ್ರ

    ಸರಿಯಾದ ಸಮಯದಲ್ಲಿ ಆಯ್ಕೆ – ಹೆಚ್‌ಡಿಡಿ ಭೇಟಿಯಾದ ವಿಜಯೇಂದ್ರ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿವೈ ವಿಜಯೇಂದ್ರ (BY Vijayendra) ಅವರು ಸೋಮವಾರ ಮಾಜಿ ಪ್ರಧಾನಿ ದೇವೇಗೌಡ (HD Deve Gowda) ಅವರನ್ನು ಭೇಟಿಯಾಗಿ ದೀಪಾವಳಿ ಶುಭಾಶಯ ಕೋರಿ ಆಶೀರ್ವಾದ ಪಡೆದಿದ್ದಾರೆ. ವಿಜಯೇಂದ್ರ ಅವರಿಗೆ ಹೆಚ್‌ಡಿಡಿ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ.

    HD Deve Gowda BY Vijayendra 1

    ಮಾಜಿ ಪ್ರಧಾನಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಚಿಕ್ಕ ವಯಸ್ಸಿನಲ್ಲೇ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ದೇವೇಗೌಡರು ತುಂಬಾ ಖುಷಿ ಪಟ್ಟರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಸೇರಿಕೊಂಡು ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಲು ಸೂಚನೆ ನೀಡಿದ್ದಾರೆ. ಜೆಡಿಎಸ್-ಬಿಜೆಪಿ ಎರಡೂ ಒಟ್ಟಿಗೆ ಕೆಲಸ ಮಾಡಬೇಕು. ಏನೇ ಇದ್ರೂ ಸರಿ ಮಾಡಿಕೊಂಡು ಹೋಗಬೇಕು ಎಂದಿದ್ದಾರೆ ಎಂದು ತಿಳಿಸಿದರು.

    HD Deve Gowda BY Vijayendra 2

    ತಂದೆಯವರಂತೆ ನೀನು ಯಶಸ್ಸು ಕಾಣುತ್ತೀಯ, ಅವರ ದಾರಿಯಲ್ಲಿ ಹೋಗು ನಿನಗೂ ಒಳ್ಳೆಯ ಯಶಸ್ಸು ಸಿಗುತ್ತದೆ ಎಂದು ಹಾರೈಸಿದ್ದಾರೆ. ದೇವೇಗೌಡರ ಮಾತಿನಿಂದ ನನಗೆ ತುಂಬಾ ಸಂತೋಷ ಆಗಿದೆ. ಭೇಟಿ ವೇಳೆ ಅವರು ತಮ್ಮ ಹೋರಾಟ ಮತ್ತು ನಮ್ಮ ತಂದೆಯವರ ಹೋರಾಟಗಳನ್ನು ನೆನಪು ಮಾಡಿಕೊಂಡರು. ಪಾದಯಾತ್ರೆ ಮತ್ತು ಹೋರಾಟ ಅಂದರೆ ನೆನಪು ಆಗೋದೇ ಎರಡು ಹೆಸರು. ಅದು ಯಡಿಯೂರಪ್ಪ ಮತ್ತು ದೇವೇಗೌಡರ ಹೆಸರು. ಅವರ ಸಲಹೆಗಳನ್ನು ನಾನು ಅಳವಡಿಸಿಕೊಂಡು ಪಕ್ಷದಲ್ಲಿ ಕೆಲಸ ಮಾಡುತ್ತೇನೆ ಎಂದು ವಿಜಯೇಂದ್ರ ನುಡಿದರು. ಇದನ್ನೂ ಓದಿ: ವಿಜಯೇಂದ್ರಗೆ ಬೆಂಗಾವಲು ವಾಹನ, ಪೊಲೀಸ್‌ ಭದ್ರತೆ ಕಲ್ಪಿಸಿದ ಸರ್ಕಾರ

    ಈ ವೇಳೆ ದೇವೇಗೌಡರು ವಿಜಯೇಂದ್ರಗೆ ಶುಭಾಶಯ ತಿಳಿಸಿ, ಸರಿಯಾದ ಸಮಯದಲ್ಲಿ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. 3 ದಿನದ ಹಿಂದೆ ಒಂದು ಲೆಕ್ಕ, ಇಂದಿನಿಂದ ಒಂದು ಲೆಕ್ಕ ಎಂದು ಹೆಚ್‌ಡಿಡಿ ಹೇಳಿದ್ದಾರೆ.

    ಈ ವೇಳೆ ಉಪಸ್ಥಿತರಿದ್ದ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಲೋಕಸಭಾ ಚುನಾವಣೆಗೆ ಯೂತ್ ಡೈನಾಮಿಕ್ ಲೀಡರ್ ಬೇಕಿತ್ತು. ಅದಕ್ಕೆ ವಿಜಯೇಂದ್ರ ಅಣ್ಣ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ನಾವೆಲ್ಲ ಸೇರಿಕೊಂಡು ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲು ದುಡಿಯುತ್ತೇವೆ. ಲೋಕಸಭೆಯಲ್ಲಿ ಈ ಸಲ 22 ರಿಂದ 24 ಸೀಟ್‌ಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿನ್ನ ನೇತೃತ್ವದಲ್ಲಿ ಪಕ್ಷಕ್ಕೆ ಶಕ್ತಿ ತುಂಬೋಣ – ಬೊಮ್ಮಾಯಿ ಆಶೀರ್ವಾದ ಪಡೆದ ವಿಜಯೇಂದ್ರ

  • ಮೈತ್ರಿ ಮಾತುಕತೆಗೆ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಅನ್ನೋದು ಸಿಎಂ ಇಬ್ರಾಹಿಂ ಸಿಟ್ಟು: ಜಿಟಿ ದೇವೇಗೌಡ

    ಮೈತ್ರಿ ಮಾತುಕತೆಗೆ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಅನ್ನೋದು ಸಿಎಂ ಇಬ್ರಾಹಿಂ ಸಿಟ್ಟು: ಜಿಟಿ ದೇವೇಗೌಡ

    ಬೆಂಗಳೂರು: ಬಿಜೆಪಿ (BJP) ನಾಯಕರ ಜೊತೆ ಕುಮಾರಸ್ವಾಮಿ ಮಾತನಾಡಲು ಹೋದಾಗ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಎಂಬ ಸಿಟ್ಟಿನಿಂದ ಸಿಎಂ ಇಬ್ರಾಹಿಂ (CM Ibrahim) ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಜೆಡಿಎಸ್ (JDS) ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (GT Devegowda) ತಿಳಿಸಿದ್ದಾರೆ.

    ಒರಿಜಿನಲ್ ಜೆಡಿಎಸ್ ನಮ್ಮದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್‌ನಲ್ಲಿ ಯಾವುದೇ ಬಂಡಾಯ ಇಲ್ಲ. ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಇಬ್ರಾಹಿಂ ರಾಜೀನಾಮೆ ಕೊಟ್ಟರು. ಪಕ್ಷ ಸೋತಿದೆ ಅಂತ ರಾಜೀನಾಮೆ ಕೊಟ್ಟಿದ್ದರು. ರಾಷ್ಟ್ರೀಯ ಅಧ್ಯಕ್ಷರು ರಾಜೀನಾಮೆ ಬೇಡ ಅಧ್ಯಕ್ಷನಾಗಿ ಮುಂದುವರಿ ಅಂತ ಹೇಳಿದ್ದರು. ಪ್ರೀತಿಯಿಂದ ಮುಂದುವರಿಯಿರಿ ಅಂತ ಹೇಳಿದ್ರು. ಮೈತ್ರಿ (Alliance) ವಿಚಾರವಾಗಿ ಜೆಪಿ ನಗರ ಮನೆಯಲ್ಲಿ ದೇವೇಗೌಡರು ಸಭೆ ಕರೆದಿದ್ದರು. ಅ ಸಭೆಗೆ ಇಬ್ರಾಹಿಂ ಬಂದು ಸಹಿ ಹಾಕಿದ್ರು. ಬಳಿಕ ಅರಮನೆ ಮೈದಾನದಲ್ಲಿ ನಡೆದ ಸಭೆಗೆ ಹಾಜರಿ ಇದ್ದರು, ಸಹಿ ಹಾಕಿದ್ರು. ದೇವೇಗೌಡರು ಘೋಷಣೆ ಮಾಡಿದ್ರು. ಅವತ್ತು ದೇವೇಗೌಡರ ನಿರ್ಧಾರಕ್ಕೆ ಬದ್ಧ ಅಂತ ಹೇಳಿದ್ರು ಎಂದು ಮಾಹಿತಿ ನೀಡಿದರು.

    CM IBRAHIM

    ಅರಮನೆ ಮೈದಾನದ ಸಭೆಯಲ್ಲಿ ಬಿಜೆಪಿ ಜೊತೆ ಹೋಗೋಕೆ ವಿರೋಧ ಇಲ್ಲ ಅಂದ್ರು. ಆದರೆ ಅಧಿಕಾರ ಹಂಚಿಕೆ ವಿಚಾರ ಹೇಗೆ ಇರಬೇಕು ಅಂತ ನಿರ್ಧಾರ ಮಾಡಿ ಎಂಬ ಸಲಹೆ ಕೊಟ್ಟಿದ್ದರು. ಆದರೆ ಈಗ ಹೀಗೆಲ್ಲ ಮಾತನಾಡುತ್ತಿದ್ದಾರೆ. ದೇವೇಗೌಡರು ಹೇಳಿದ್ದಾರೆ. ನಾನೇ ಇಬ್ರಾಹಿಂ ಜೊತೆ ಮಾತನಾಡುತ್ತೇನೆ ಅಂತ. ಹೀಗಾಗಿ ಇಬ್ರಾಹಿಂ ಜೊತೆ ದೇವೇಗೌಡರು ಮಾತನಾಡುತ್ತಾರೆ ಎಂದರು.

    ಇಬ್ರಾಹಿಂ ನನಗೂ ಕರೆ ಮಾಡಿ ನಾನೇ ದೇವೇಗೌಡರನ್ನು ಭೇಟಿ ಆಗುತ್ತೇನೆ ಎಂದು ಹೇಳಿದ್ದರು. ಸಭೆಗೆ ಶಾಸಕರಿಗೂ ಕರೆ ಮಾಡಿ ಕರೆದಿದ್ದರು. ಆದರೆ ಯಾರೂ ಹೋಗಿಲ್ಲ. ಮಹಿಮಾ ಪಟೇಲ್, ನಾಡಗೌಡರು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಅಂತ ಹೋಗಿದ್ದರು ಅನ್ನಿಸುತ್ತೆ ಎಂದರು.

    gt devegowda

    ವಿಧಾನಸಭೆ ಚುನಾವಣೆ ಒಳಗೆ ನಮ್ಮನ್ನು ಮುಗಿಸಬೇಕು ಅಂತ ಎರಡು ರಾಷ್ಟ್ರೀಯ ಪಕ್ಷಕ್ಕೆ ಇತ್ತು. ಚುನಾವಣೆ ಆದ ಮೇಲೆ ಕಾಂಗ್ರೆಸ್ ಹೇಗಾದ್ರು ಮಾಡಿ ಜೆಡಿಎಸ್ ಮುಗಿಸಬೇಕು ಅಂತ ಕೆಲಸ ಮಾಡ್ತಿದೆ. ಆದರೆ ನಮ್ಮ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ. ನಾನು ಜಿಲ್ಲಾ ಪ್ರವಾಸ ಹೋದಾಗ ಬಿಜೆಪಿ ಜೊತೆ ಮೈತ್ರಿಗೆ ಒಪ್ಪಿಗೆ ಇದೆ ಅಂತ ಕಾರ್ಯಕರ್ತರು ಹೇಳಿದ್ದಾರೆ. ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಮಾಡಿದ್ದೇ ದೇವೇಗೌಡರು. ಅಲ್ಪಸಂಖ್ಯಾತ ನಾಯಕರನ್ನು ಬೆಳೆಸಬೇಕು ಅಂತ ರಾಜ್ಯಾಧ್ಯಕ್ಷ ಮಾಡಿದ್ದಾರೆ. ಇಬ್ರಾಹಿಂಗೆ ಒಂದು ಸಿಟ್ಟು ಇದೆ. ದೆಹಲಿಗೆ ನನ್ನನ್ನು ಕರೆದುಕೊಂಡು ಹೋಗಿಲ್ಲ ಅಂತ. ಅ ಸಿಟ್ಟಿನಿಂದ ಇಬ್ರಾಹಿಂ ಹೀಗೆ ಮಾತಾಡಿದ್ದಾರೆ ಅಷ್ಟೆ ಎಂದರು. ಇದನ್ನೂ ಓದಿ: ಒರಿಜಿನಲ್ ಅಂತ ಸಿಎಂ ಇಬ್ರಾಹಿಂ ಬೋರ್ಡ್ ಹಾಕಿಕೊಳ್ಳಲಿ: ಹೆಚ್‍ಡಿಕೆ

    ಈಗ ಕೇವಲ ಮೈತ್ರಿ ಆಗಿದೆ ಅಷ್ಟೇ. ಸೀಟು ಹಂಚಿಕೆ ಇನ್ನು ಆಗಿಲ್ಲ. ನಾನೇ ಇಬ್ರಾಹಿಂ ಜೊತೆ ಮಾತಾಡ್ತೀನಿ. ನಾನೇ ಇಬ್ರಾಹಿಂ ಮನೆಗೆ ಹೋಗಿ ಪಕ್ಷದಲ್ಲಿ ಉಳಿಯಬೇಕು ಅಂತ ಮನವಿ ಮಾಡ್ತೀನಿ. ಪಕ್ಷ ಸಂಕಷ್ಟದಲ್ಲಿ ಇದೆ. ಈ ಸಮಯದಲ್ಲಿ ಈ ನಿರ್ಧಾರ ಬೇಡ. ನೀವೆ ಅಧ್ಯಕ್ಷರಾಗಿ ಇರಿ ಅಂತ ಮನವಿ ಮಾಡ್ತೀವಿ. ಜೆಡಿಎಸ್ ಯಾವುದೇ ಕಾರಣಕ್ಕೂ ಇಬ್ಭಾಗ ಆಗಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ.. ನನ್ನದು ಒರಿಜಿನಲ್ ಜೆಡಿಎಸ್: ಸಿಎಂ ಇಬ್ರಾಹಿಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವೇಗೌಡರ ಮೈತ್ರಿ ನಿರ್ಧಾರಕ್ಕೆ ನನ್ನ ಒಪ್ಪಿಗೆ ಇದೆ: ಜಫ್ರುಲ್ಲಾ ಖಾನ್

    ದೇವೇಗೌಡರ ಮೈತ್ರಿ ನಿರ್ಧಾರಕ್ಕೆ ನನ್ನ ಒಪ್ಪಿಗೆ ಇದೆ: ಜಫ್ರುಲ್ಲಾ ಖಾನ್

    ಬೆಂಗಳೂರು: ಜೆಡಿಎಸ್ (JDS) ಬಿಜೆಪಿ (BJP) ಜೊತೆ ಮೈತ್ರಿ (Alliance) ಮಾಡಿಕೊಂಡರೂ ಪಕ್ಷದ ಸಿದ್ಧಾಂತ ಬಿಡುವುದಿಲ್ಲ. ದೇವೇಗೌಡರ (HD Deve Gowda) ನಿರ್ಧಾರ ಜೊತೆ ನಾನು ಇರುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ (Zafrullah Khan) ತಿಳಿಸಿದ್ದಾರೆ.

    ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಮುಸ್ಲಿಂ ಸಮುದಾಯದ ನಾಯಕರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರ ಮನೆಗೆ ನಾನು ಮೊದಲ ಬಾರಿಗೆ ಹೋದ ಕೂಡಲೇ ನನ್ನನ್ನು ಆಯ್ಕೆ ಮಾಡಿದ್ದರು. ದೇವೇಗೌಡರಿಗೆ ನಿಷ್ಠೆಯಾಗಿ ಇರುತ್ತೇನೆ ಅಂತ ಅವತ್ತೇ ನಾನು ಹೇಳಿದ್ದೆ. ಈಗಲೂ ನಾನು ದೇವೇಗೌಡರ ಜೊತೆ ಇರುತ್ತೇನೆ. ಅವರಿಗೆ ನಿಷ್ಠೆಯಾಗಿ ಇರುತ್ತೇನೆ. ದೇವೇಗೌಡರ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇದೆ ಎಂದರು. ಇದನ್ನೂ ಓದಿ: ತ.ನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಕೇಂದ್ರ ನಿರ್ದೇಶನ ನೀಡಬೇಕು: ವಿಧಾನಸಭೆಯಲ್ಲಿ ಸ್ಟಾಲಿನ್‌ ನಿರ್ಣಯ ಮಂಡನೆ

    ಅನೇಕ ಬಾರಿ ಅನೇಕರ ಜೊತೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ನಮ್ಮ ಸಿದ್ಧಾಂತ ಬಿಟ್ಟಿಲ್ಲ. ಈಗ ಮೈತ್ರಿಗೆ ಅಸಮಾಧಾನ ಆಗಿ ಕೆಲವರು ಬಿಟ್ಟು ಹೋಗಿರಬಹುದು. ಅವರ ಜೊತೆ ಮಾತನಾಡಿ ಅವರನ್ನು ವಾಪಸ್ ಕರೆದುಕೊಂಡು ಬರೋ ಕೆಲಸ ಮಾಡ್ತೀನಿ. ಜೆಡಿಎಸ್ ಮೈತ್ರಿ ಆದರೂ ನಮ್ಮ ಸಿದ್ಧಾಂತ ನಾವು ಬಿಟ್ಟು ಹೋಗಲ್ಲ. ಈ ಬಾರಿ ಗ್ಯಾರಂಟಿ ಅಂತ ಕಾಂಗ್ರೆಸ್ (Congress) ಮತ ಪಡೆದಿದೆ. ಇದೆಲ್ಲ ಜಾಸ್ತಿ ದಿನ ಕಾಂಗ್ರೆಸ್ ಜೊತೆ ಇರಲ್ಲ. ಮತ್ತೆ ನಮ್ಮ ಸಮುದಾಯ ನಮ್ಮ ಜೊತೆ ಬರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೆಆರ್‌ಎಸ್‌ ಡ್ಯಾಂನಿಂದ ತಮಿಳುನಾಡಿಗೆ ಮುಂದುವರಿದ ನೀರು ಬಿಡುಗಡೆ; ಈಗ ನೀರು ಎಷ್ಟಿದೆ?

    ನಾನು ದೇವೇಗೌಡರಿಗೆ ಮೋಸ ಮಾಡಿದರೆ ನನ್ನ ಸಮುದಾಯಕ್ಕೆ ಮಾಡಿದ ಮೋಸ ಆಗುತ್ತದೆ. ಕಾಂಗ್ರೆಸ್ ಅವರು ನಾವು ಜಾತ್ಯಾತೀತ ಎಂದು ಹೇಳುತ್ತಾರೆ. ಹಾಗಾದರೆ ಶಿವಸೇನೆಯ ಮೈತ್ರಿ ಕಿತ್ತು ಹಾಕಲಿ ನೋಡೋಣ. ಅವರು ಶಿವಸೇನೆ ಜೊತೆ ಮೈತ್ರಿ ಆಗಬಹುದು. ನಾವು ಬಿಜೆಪಿ ಜೊತೆ ಆಗಬಾರದಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಇಂದು ಪ್ರಕಟ

    ಮೈತ್ರಿಗೆ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಮೈತ್ರಿ ಆದರು ನಮ್ಮ ಪಕ್ಷದ ಸಿದ್ಧಾಂತ ಬಿಡುತ್ತಿಲ್ಲ. ಇದು ಇಬ್ರಾಹಿಂ ಅವರಿಗೂ ಗೊತ್ತಿರಬೇಕು ಅಲ್ಲವಾ? ಅವರಿಗೆ ಇದು ಗೊತ್ತಿಲ್ಲ ಅಂದರೆ ನಾನೇನು ಮಾಡಲಿ. ನಾನು ದೇವೇಗೌಡರ ಜೊತೆ ಇರುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರ್ಯಕರ್ತರಲ್ಲಿ ಸಾಮರಸ್ಯ ಮೂಡದಿದ್ರೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಂಘರ್ಷವಾಗಲಿದೆ: ರೇಣುಕಾಚಾರ್ಯ

    ಕಾರ್ಯಕರ್ತರಲ್ಲಿ ಸಾಮರಸ್ಯ ಮೂಡದಿದ್ರೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಂಘರ್ಷವಾಗಲಿದೆ: ರೇಣುಕಾಚಾರ್ಯ

    – ಸ್ವಪಕ್ಷದ ವಿರುದ್ಧವೇ ಮಾಜಿ ಸಚಿವ ಗುಡುಗು

    ಚಿತ್ರದುರ್ಗ: ಬಿಜೆಪಿ, ಜೆಡಿಎಸ್ ಮೈತ್ರಿ (Alliance) ಕೇವಲ ರಾಷ್ಟ್ರೀಯ ನಾಯಕರ ಮಧ್ಯೆ ಚರ್ಚೆ ಆಗಿದೆ. ಆದರೆ ಕಾರ್ಯಕರ್ತರಲ್ಲಿ ಸಾಮರಸ್ಯ ಮೂಡದಿದ್ದರೆ ಎರಡು ಪಕ್ಷಗಳ ಮಧ್ಯೆ ಸಂಘರ್ಷವಾಗಲಿದೆ ಎಂದು ಮಾಜಿ ಸಚಿವ ಬಿಜೆಪಿ ಮುಖಂಡ ರೇಣುಕಾಚಾರ್ಯ (MP Renukacharya) ಭವಿಷ್ಯ ನುಡಿದಿದ್ದಾರೆ.

    ಚಿತ್ರದುರ್ಗದ (Chitradurga) ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ರೇಣುಕಾಚಾರ್ಯ ಮಾತನಾಡಿದರು. ನಿನ್ನೆಯಷ್ಟೇ ಸ್ವಪಕ್ಷಿಯರ ವಿರುದ್ಧ ಮಾಜಿ ಸಚಿವ ಸೋಮಣ್ಣ ಗುಡುಗಿದ್ದರು. ಇದರ ಬೆನ್ನಲ್ಲೆ ಬಿಜೆಪಿ ನಾಯಕರ ವಿರುದ್ಧ ಮತ್ತೋರ್ವ ಮಾಜಿ ಸಚಿವ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಅವರಲ್ಲಿರುವ ಅಸಮಾಧಾನವನ್ನು ಹೊರಹಾಕಿದ್ದಾರೆ.

    MP RENUKACHARYA

    ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಕೇವಲ ರಾಷ್ಟ್ರೀಯ ನಾಯಕರ ಮಧ್ಯೆ ಚರ್ಚೆ ಆಗಿದೆ. ಮೈತ್ರಿ ಎಂದರೆ ಕಾರ್ಯಕರ್ತರ ಮಧ್ಯೆ ಸಾಮರಸ್ಯವಿರಬೇಕು. ಆದರೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಸಂಘರ್ಷವಿದೆ. ಈ ಮೈತ್ರಿ ಬೂತ್ ಮಟ್ಟ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಆಗಬೇಕು. ಈ ಹಿಂದೆ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡದೇ ಮೋಸ ಮಾಡಿದ ವಚನಭ್ರಷ್ಟರೊಂದಿಗೆ ಮೈತ್ರಿ ಎಷ್ಟು ಸರಿ ಎಂದು ಜನ ಕೇಳುತ್ತಿದ್ದಾರೆ ಎಂದರು.

    ನಮ್ಮ ರಾಜ್ಯ ನಾಯಕರು, ಯಡಿಯೂರಪ್ಪ ಅವರನ್ನು ಹೊರಗಿಟ್ಟು ಮಾಡಿಕೊಳ್ಳಯವ ಮೈತ್ರಿ ಅಪೂರ್ಣವಾಗಲಿದೆ. ಯಡಿಯೂರಪ್ಪ ಮತ್ತು ರಾಜ್ಯನಾಯಕರನ್ನು ಕತ್ತಲಕೋಣೆಯಲ್ಲಿಟ್ಟು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮೈತ್ರಿ ಮಾಡಿಕೊಳ್ಳೋದು ಸರಿಯಲ್ಲ. ಹಾಗೆಯೇ ಇಂತಹ ಮೈತ್ರಿ ಸಾಮರಸ್ಯ ಆಗಲ್ಲ. ಇದು ಇನ್ನಷ್ಟು ಸಂಘರ್ಷಕ್ಕೆ ದಾರಿಯಾಗಲಿದೆ ಎಂದು ತಿಳಿ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಬಂದ್ಮೇಲೆ ಮುಸ್ಲಿಮರು ಚಿಗುರಿಕೊಂಡಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ಕಾರ್ಯಕರ್ತರ ವಿಶ್ವಾಸವನ್ನೇ ತೆಗೆದುಕೊಳ್ತಿಲ್ಲ. ಇಂತಹ ಬಿಜೆಪಿ, ಜೆಡಿಎಸ್ ಮೈತ್ರಿ ಎಷ್ಟರಮಟ್ಟಿಗೆ ಯಶಸ್ವಿ ಆಗುತ್ತದೆ? ಇನ್ನು ಮೈತ್ರಿ ಎರಡನೇ ಭಾಗ. ಈ ವರೆಗೆ ರಾಜ್ಯಾಧ್ಯಕ್ಷರು ಮತ್ತು ವಿಪಕ್ಷ ನಾಯಕರ ಆಯ್ಕೆಯೇ ಆಗಿಲ್ಲ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ನೋವಿನಿಂದ ಮಾತಾಡುತ್ತಿದ್ದಾರೆ. ಬೇರೆಯವರಿಗೆ ಟೀಕೆ ಮಾಡಲು ನಮಗೆ ಯಾವ ನೈತಿಕತೆ ಇದೆ? ಮೊದಲು ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಲೋಕಸಭೆ ಚುನಾವಣೆ ಪೂರ್ವದಲ್ಲೇ ಆಗಬೇಕು ಎಂದು ಒತ್ತಾಯಿಸಿದರು.

    ದಾವಣಗೆರೆ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗುವ ಅಪೇಕ್ಷೆ ಹೇಳಿದ್ದೇನೆ. ಆದರೆ ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ. ನಾನು ಸಂಘಟನೆಯಿಂದ ಬಂದವನು. ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ. ಆದರೂ ನಮ್ಮದೇ ಪಕ್ಷದ ಕೆಲವರು ಹಾಗೇ ಅಪಪ್ರಚಾರ ಮಾಡುತ್ತಿದ್ದು, ವಿಧಾನಸಭೆಯಲ್ಲೂ ಕೂಡಾ ಬಿಜೆಪಿ ಸೋಲಿಗೆ ನಮ್ಮ ನಾಯಕರ ದೌರ್ಬಲ್ಯವೇ ಕಾರಣ ಎಂದು ಬಿಜೆಪಿ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ:ಪ್ರಯಾಣಿಕರಿಗೆ ಗುಡ್‌ನ್ಯೂಸ್- ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ-ಜೆಡಿಎಸ್ ಮೈತ್ರಿ ಅನೈತಿಕ ಸಂಬಂಧ: ಕೆಹೆಚ್ ಮುನಿಯಪ್ಪ

    ಬಿಜೆಪಿ-ಜೆಡಿಎಸ್ ಮೈತ್ರಿ ಅನೈತಿಕ ಸಂಬಂಧ: ಕೆಹೆಚ್ ಮುನಿಯಪ್ಪ

    ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಅನೈತಿಕ ಸಂಬಂಧ. ಬಿಜೆಪಿ-ಜೆಡಿಎಸ್ ಎಷ್ಟೇ ಮೈತ್ರಿ ಮಾಡಿಕೊಂಡರೂ ಕಾಂಗ್ರೆಸ್ (Congress) 20+ ಸೀಟು ಗೆಲ್ಲುತ್ತದೆ ಎಂದು ಸಚಿವ ಮುನಿಯಪ್ಪ (KH Muniyappa) ಟೀಕೆ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೈತ್ರಿಯಿಂದ ಅಸಮಾಧಾನವಾಗಿ ಜೆಡಿಎಸ್‌ನಿಂದ ಅನೇಕ ಜನ ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ದೇವೇಗೌಡರು ಜಾತ್ಯತೀತ ನಿಲುವಿನಿಂದ ಈಗ ಆಚೆ ಬಂದಿದ್ದಾರೆ. ಹೀಗಾಗಿ ಅನೇಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಇದೊಂದು ಅನೈತಿಕ ಸಂಬಂಧ ಆಗುತ್ತಿದೆ ಎಂದು ಕಿಡಿಕಾರಿದರು.

    KH MUNIYAPPA

    ಕುಮಾರಸ್ವಾಮಿ ತುಂಬಾ ಮುಂದೆ ಹೋಗುತ್ತಿದ್ದಾರೆ. ಜಾತ್ಯತೀತವಾಗಿ ನಡೆದುಕೊಂಡು ಬಂದ ಮೇಲೆ ಹಾಗೇ ಇರಬೇಕು. ಆದರೆ ಅವರು ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಆದರೂ ಅದು ಅವರ ಪಕ್ಷದ ನಿರ್ಧಾರ. ಆದರೆ ಜಾತ್ಯತೀತ ನಿಲುವು ಇರೋ ಕಾರ್ಯಕರ್ತರು, ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಇನ್ನೂ ಬರುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೀದರ್ ಏರ್‌ಬೇಸ್‌ಗೆ ಆಗಮಿಸಿದ ಪ್ರಧಾನಿ ಮೋದಿ

    ಬಿಜೆಪಿ-ಜೆಡಿಎಸ್ ಒಂದಾದರೂ ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ಪಕ್ಷಗಳು ಒಂದಾಗುತ್ತಿವೆ. ಮೋದಿ ಆಡಳಿತದಿಂದ ಯಾವ ವರ್ಗವೂ ನೆಮ್ಮದಿಯಿಂದ ಇಲ್ಲ. ಎಲ್ಲಾ ವರ್ಗಗಳಲ್ಲೂ ಮೋದಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯಕ್ಕೆ ಬರ ಬಂತು ಎಂದು ಸಿಎಂ ಪತ್ರ ಬರೆದಿದ್ದಾರೆ. ಆದರೆ ಮೋದಿ ಇದುವರೆಗೂ ಒಂದು ತಂಡವನ್ನು ಕಳುಹಿಸಿ ಸಮೀಕ್ಷೆ ಮಾಡುವ ಕೆಲಸ ಮಾಡಿಲ್ಲ. ಇದು ಜನರ ಮೇಲೆ ಮೋದಿ ಸರ್ಕಾರಕ್ಕೆ ಇರುವ ಆಸಕ್ತಿ ಎಂದು ಕಿಡಿಕಾರಿದರು.

    ರಾಜ್ಯದ ಕಷ್ಟ ಸುಖಕ್ಕಿಂತ ಮತ್ತೆ ಅಧಿಕಾರಕ್ಕೆ ಬರೋ ಕಡೆ ಮೋದಿ ಯೋಚನೆ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಬಿಜೆಪಿ ಹೊರತುಪಡಿಸಿ ಸರ್ಕಾರ ಮಾಡಬೇಕು ಅಂತ ಹೋರಾಟ ನಡೆಯುತ್ತಿದೆ. ಬಿಜೆಪಿ ಕೋಮು ಗಲಭೆ ಮಾಡುತ್ತಾರೆ. ಅಭಿವೃದ್ಧಿ ಕಡೆ ಗಮನ ಕೊಡಲ್ಲ. ರೈತರನ್ನು ನೋಡಲ್ಲ. ಮನಮೋಹನ್ ಸಿಂಗ್ ಸರ್ಕಾರ 70 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು. ಈ ಮೋದಿ ಸರ್ಕಾರ ಒಂದು ರೂ. ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಕಷ್ಟಕ್ಕೆ ಬೆಲೆ ಕೊಡಲಿಲ್ಲ. ರೈತರ ಕಷ್ಟಕ್ಕೆ ಬಂದಿಲ್ಲ. ಮೋದಿ ಅವರಿಗೆ ಅಧಿಕಾರ ಹಿಡಿಯೋದು ಮಾತ್ರ ಮುಖ್ಯ. 2024ರಲ್ಲಿ ಬಿಜೆಪಿ ಹೊರತಾದ ಸರ್ಕಾರ ದೇಶದಲ್ಲಿ ಬರಲಿದೆ ಎಂದು ಭವಿಷ್ಯ ನುಡಿದರು.

    ಸಿಎಂ ಇಬ್ರಾಹಿಂ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. ಇದನ್ನೂ ಓದಿ: ಉಳ್ಳಾಲ ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ ಮೆರೆದ ಯುವಕರಿಗೆ ನೋಟಿಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಮಲ-ದಳ ಮೈತ್ರಿಗೆ ಕೇರಳ ಜೆಡಿಎಸ್ ನಾಯಕರ ವಿರೋಧ

    ಕಮಲ-ದಳ ಮೈತ್ರಿಗೆ ಕೇರಳ ಜೆಡಿಎಸ್ ನಾಯಕರ ವಿರೋಧ

    ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆ ಕಾಂಗ್ರೆಸ್ (Congress) ಹಾಗೂ ವಿರೋಧ ಪಕ್ಷಗಳ ಇಂಡಿಯಾ ಕೂಟಕ್ಕೆ ಟಕ್ಕರ್ ನೀಡಲು ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ (BJP-JDS Alliance) ಮಾಡಿಕೊಂಡಿವೆ. ಆದರೆ ಈ ಮೈತ್ರಿಗೆ ಕೇರಳದ ಜೆಡಿಎಸ್ (Kerala JDS) ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

    kerala jds 1

    ಇದಕ್ಕೆ ಸಂಬಂಧಿಸಿದಂತೆ ಭಾನುವಾರ ಕೇರಳ ಜೆಡಿಎಸ್ ಅಧ್ಯಕ್ಷ ಮ್ಯಾಥ್ಯೂಸ್ ಮಾಜಿ ಪ್ರಧಾನಿ ದೇವೇಗೌಡ (HD Devegowda) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಿನ್ನೆ ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡ ಅವರೊಂದಿಗೆ ಕೇರಳದ ನಾಯಕರು ಚರ್ಚೆ ನಡೆಸಿದ್ದಾರೆ. ಈ ವೇಳೆ ಬಿಜೆಪಿಯೊಂದಿಗಿನ ಮೈತ್ರಿಗೆ ತಮ್ಮ ವಿರೋಧ ಇದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಅಕ್ಟೋಬರ್ 7ಕ್ಕೆ ಸಭೆ ಮಾಡಿ ಅಂತಿಮ ನಿರ್ಧಾರ ತಿಳಿಸುವುದಾಗಿ ದೇವೇಗೌಡರಿಗೆ ಜೆಡಿಎಸ್ ನಾಯಕರು ತಿಳಿಸಿದ್ದಾರೆ.

    H.D DEVEGOWDA

    ಲೋಕಸಭಾ ಚುನಾವಣೆಗೆ ದೇಶಾದ್ಯಂತ ಪಕ್ಷಗಳು ತಯಾರಿ ನಡೆಸುತ್ತಿವೆ. ಕಾಂಗ್ರೆಸ್ ನೇತೃತ್ವದಲ್ಲಿ 26 ವಿರೋಧ ಪಕ್ಷಗಳು ಇಂಡಿಯಾ ಒಕ್ಕೂಟವನ್ನು ರಚಿಸಿವೆ. ಇದರಲ್ಲಿ ಟಿಎಂಸಿ, ಡಿಎಂಕೆ, ಆಪ್, ಜೆಡಿಯು, ಆರ್‌ಜೆಡಿ, ಸಮಾಜವಾದಿ ಪಕ್ಷಗಳು ಸೇರಿವೆ. ಇದನ್ನೂ ಓದಿ: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಖರ್ಗೆ ಅಳಿಯ ಸ್ಪರ್ಧೆ ಸಾಧ್ಯತೆ: ಚಿಂಚನಸೂರು

    ಇದರ ಬೆನ್ನಲ್ಲೇ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಗೆ ಮುಂದಾಗಿತ್ತು. ಆದರೆ ಪಕ್ಷದಲ್ಲಿ ಮೊದಲು ಭಿನ್ನಮತ ಸ್ಫೋಟಗೊಂಡಿತ್ತು. ಭಾನುವಾರ ಈ ಬಗ್ಗೆ ರಾಮನಗರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರೇ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದರು. ಜೆಡಿಎಸ್ ಹಾಲಿ ಶಾಸಕರು, ವಿಧಾನಪರಿಷತ್ ಸದಸ್ಯರ ಸಭೆ ಕರೆದಿದ್ದು, ಈ ವೇಳೆ ಮೈತ್ರಿಗೆ ಸರ್ವಾನುಮತದಿಂದ ಒಪ್ಪಿಗೆ ಪಡೆದಿದ್ದಾರೆ.

    ಕರ್ನಾಟಕದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯ ಉದ್ದೇಶದ ಕುರಿತು ಪಕ್ಷದ ನಾಯಕರ ಮನವೊಲಿಸುವ ದೇವೇಗೌಡ ಹಾಗೂ ಹೆಚ್‌ಡಿ ಕುಮಾರಸ್ವಾಮಿ ಅವರ ಪ್ರಯತ್ನ ಸಕ್ಸಸ್ ಆಗಿದೆ. ಆದರೆ ಕೇರಳದ ಜೆಡಿಎಸ್ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮುಂದೆ ಏನಾಗಬಹುದು ಕಾದು ನೋಡಬೇಕಿದೆ. ಇದನ್ನೂ ಓದಿ: ಮಹಾತ್ಮ ಗಾಂಧಿ ಪ್ರಭಾವ ಜಾಗತಿಕವಾಗಿದೆ: ಪ್ರಧಾನಿ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಜಿ. ಪರಮೇಶ್ವರ್

    ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಜಿ. ಪರಮೇಶ್ವರ್

    ಬೆಂಗಳೂರು: ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಕಾಂಗ್ರೆಸ್‌ಗೆ (Congress) ಬಂದರೆ ಅವರನ್ನು ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwara) ತಿಳಿಸಿದ್ದಾರೆ.

    ಬಿಜೆಪಿ-ಜೆಡಿಎಸ್ ಮೈತ್ರಿಯಿಂದ (BJP-JDS Alliance) ಸಿಎಂ ಇಬ್ರಾಹಿಂ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಬ್ರಾಹಿಂ ಈಗಾಗಲೇ ಹೇಳಿದ್ದಾರೆ. ನನ್ನ ಗಮನಕ್ಕೆ ಬಾರದೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.ನಾನು ಅಧ್ಯಕ್ಷ ಇದ್ದೇನೆ. ನನ್ನ ಗಮನಕ್ಕೆ ಬಾರದೇ ತೀರ್ಮಾನ ಮಾಡಿಕೊಂಡಿದ್ದಾರೆ. ನನಗೆ ಬೇಸರ ಇದೆ ಅಂತ ಹೇಳಿದ್ದಾರೆ. ಅಕ್ಟೋಬರ್ 16 ಕ್ಕೆ ಸಭೆ ಕರೆದಿದ್ದೇನೆ. ಏನಾದರೂ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲಿಯವರೆಗೂ ಕಾದು ನೋಡೋಣ ಎಂದರು.

    G PARAMESHWAR

    ಇಬ್ರಾಹಿಂ ಅವರು ಕಾಂಗ್ರೆಸ್‌ಗೆ ಬರೋದಾದರೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವರು ವಾಪಸ್ ಬರ್ತೀನಿ, ಕಾಂಗ್ರೆಸ್‌ನಲ್ಲಿ ಮುಂದುವರಿಯುತ್ತೇನೆ ಅಂದರೆ ನನ್ನ ಹೈಕಮಾಂಡ್ ಪರಿಶೀಲನೆ ಮಾಡಿ ಅವರಿಗೊಂದು ಅವಕಾಶ ಕೊಡಬಹುದು. ನಾವು ಯಾವತ್ತು ವಿರೋಧ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ಸ್ವಚ್ಛಾಂಜಲಿ ಅರ್ಪಿಸಿದ ಮೋದಿ

    ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರು ನಾವು ವಿರೋಧ ಮಾಡಲ್ಲ. ಕಾಂಗ್ರೆಸ್ ಸಿದ್ಧಾಂತಕ್ಕೆ ಹೊಂದಿಕೊಳ್ಳಬೇಕು. ನಾವು ಬಡವರ ಪರವಾಗಿ ಸಾಮಾಜಿಕ ನ್ಯಾಯದ ಪರ ಕಾಂಗ್ರೆಸ್ ಇದೆ. ಅದನ್ನು ಒಪ್ಪಿ ಯಾರೇ ಬಂದರು ಅವರಿಗೆ ಸ್ವಾಗತ ಮಾಡುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಇಬ್ರಾಹಿಂಗೆ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಿದರು. ಇದನ್ನೂ ಓದಿ: ಕಂಬಳದಲ್ಲಿ ಭಾಗವಹಿಸಲು 100ಕ್ಕೂ ಅಧಿಕ ಜೊತೆ ಕೋಣಗಳು ಬೆಂಗಳೂರಿಗೆ: ಅಶೋಕ್ ರೈ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವದುರ್ಗ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೊಂದಾಣಿಕೆ ಇಲ್ಲ: ಕರೆಮ್ಮ ನಾಯಕ್

    ದೇವದುರ್ಗ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೊಂದಾಣಿಕೆ ಇಲ್ಲ: ಕರೆಮ್ಮ ನಾಯಕ್

    ರಾಯಚೂರು: ನನ್ನ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಹೊಂದಾಣಿಕೆ ಆಗಲ್ಲ ಎಂದು ರಾಯಚೂರಿನ (Raichur) ದೇವದುರ್ಗ (Devadurga) ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ (Karemma Nayak) ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇವದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಸತತವಾಗಿ ನನಗೆ ಕಾಟ ನೀಡಿದ್ದಾರೆ. ನನ್ನ ಮೇಲೆ ಮತ್ತು ನನ್ನ ಮಗಳ ಮೇಲೆ ಅಟ್ಯಾಕ್ ಮಾಡಿದ್ರು. ಜೆಡಿಎಸ್ ಕಾರ್ಯಕರ್ತರಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಹೇಳಿದ್ರು ಎಂದು ಆರೋಪಿಸಿದರು.

    ದೇವದುರ್ಗದಲ್ಲಿ ಬಿಜೆಪಿಯವರು ಏನೇನೋ ಕಷ್ಟ ನೀಡಿದ್ದಾರೆ ಎಂಬುವುದು ನನ್ನ ವರಿಷ್ಠರಿಗೆ ಗೊತ್ತಿದೆ. ದೇವೇಗೌಡರು ನನಗೆ ಮಗಳ ಸಮಾನವಾಗಿ ನೋಡಿದ್ದಾರೆ. ನನಗೆ ನೋವು ಆದಾಗ ಅವರು ಕಷ್ಟ ಮತ್ತು ನೋವು ಪಟ್ಟಿದ್ದಾರೆ. ನನ್ನ ಪಾರ್ಟಿ ಯಾವತ್ತೂ ನನಗೆ ಟಾರ್ಗೆಟ್ ಮಾಡಲ್ಲ. ನೀನು ಹೇಗೆ ಇರಬೇಕಂತೀಯೋ ಹಾಗೇ ಇರಮ್ಮ ಎಂದು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿ ಜೊತೆ ಮೈತ್ರಿ – ಜೆಡಿಎಸ್‌ನಲ್ಲಿಅಸಮಾಧಾನವಿಲ್ಲ ಎಂದ ಖಾಶೆಂಪೂರ್

    ಕುಮಾರಣ್ಣನಿಗೆ ಕೆಟ್ಟದಾಗಿ ಬೈದ ವ್ಯಕ್ತಿ ಇಲ್ಲಿದ್ದಾನೆ. ದೇವೇಗೌಡರ ಕುಟುಂಬಕ್ಕೆ ಬೈದ ವ್ಯಕ್ತಿಯ ಪಕ್ಷದೊಂದಿಗೆ ನಾನು ಹೊಂದಾಣಿಕೆ ಆಗಬೇಕಾ? ಎಂದು ಪರೋಕ್ಷವಾಗಿ ಮಾಜಿ ಶಾಸಕ ಶಿವನಗೌಡ ನಾಯಕ್ ವಿರುದ್ಧ ಕಿಡಿಕಾರಿದರು. ರಾಷ್ಟ್ರೀಯ ಪಕ್ಷದ ಬಗ್ಗೆ ನಾನು ಏನು ಮಾತನಾಡಲ್ಲ. ಅವರದೇ ಆದ ಸಿದ್ಧಾಂತ ಇರುತ್ತದೆ. ಕ್ಷೇತ್ರದ ಜನರ ಮನಸ್ಸಿಗೆ ಧಕ್ಕೆ ಆಗದಂತೆ ನಾನು ನಡೆದುಕೊಳ್ಳುವೆ ಎಂದು ಶಾಸಕಿ ಕರೆಮ್ಮ ನಾಯಕ್ ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಬಿಜೆಪಿ-ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ದಾರೆ: ಡಿಕೆಶಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]