Tag: ಮುಡಾ ಅಕ್ರಮ

  • MUDA Scam| ಒಂದೇ ದಿನದಲ್ಲಿ ಒಬ್ಬನ ಹೆಸರಿಗೆ 31 ಸೈಟ್ ರಿಜಿಸ್ಟರ್ – ಇಡಿಯಿಂದ 160 ಸೈಟ್‌ ಜಪ್ತಿ

    MUDA Scam| ಒಂದೇ ದಿನದಲ್ಲಿ ಒಬ್ಬನ ಹೆಸರಿಗೆ 31 ಸೈಟ್ ರಿಜಿಸ್ಟರ್ – ಇಡಿಯಿಂದ 160 ಸೈಟ್‌ ಜಪ್ತಿ

    – 50:50 ಸೈಟು ಪಡೆದ ಫಲಾನುಭವಿಗಳಿಗೆ ಬಿಗ್ ಶಾಕ್

    ಮೈಸೂರು: ಜಾರಿ ನಿರ್ದೇಶನಾಲಯ(ED) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ MUDA) 50:50 ಅನುಪಾದಲ್ಲಿ ಸೈಟು ಪಡೆದಿದ್ದ ಫಲಾನುಭವಿಗಳಿಗೆ‌ ಬಿಗ್‌ ಶಾಕ್‌ ಕೊಟ್ಟಿದೆ. ಬರೋಬ್ಬರಿ 160 ಸೈಟುಗಳ ಜಪ್ತಿ ಮಾಡಿ ಇಡಿ ಆದೇಶ ಪ್ರಕಟಿಸಿದೆ.

    ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಅಡಿಯಲ್ಲಿ ಎಲ್ಲಾ ಸೈಟುಗಳ ಜಪ್ತಿಗೆ ಇಡಿ ಅಧಿಕೃತ ಆದೇಶ ಪ್ರಕಟಿಸಿದ್ದು, ಈ ಆದೇಶ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

    50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಸೈಟುಗಳ ವಹಿವಾಟಿನಲ್ಲಿ ಬೇನಾಮಿ ಮತ್ತು ಅಕ್ರಮ ಹಣದ ವ್ಯವಹಾರ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಇಡಿ ಎಲ್ಲಾ ಸೈಟುಗಳ ಜಪ್ತಿಗೆ ಆದೇಶ ಹೊರಡಿಸಿದೆ. ಆದೇಶ ಪತ್ರವನ್ನು ಸಬ್ ರಿಜಿಸ್ಟ್ರಾರ್‌ಗೆ ಕಳುಹಿಸಿದೆ. ಇದನ್ನೂ ಓದಿ: MUDA Scam | ಅಕ್ರಮವಾಗಿ ಮಾರಾಟ, ಸಹಕಾರಿ ಸಂಘ ಬಳಸಿ ದುರ್ಬಳಕೆ, 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

    MUDA Scam 1

    ಸರ್ಕಾರದ ಮಾರ್ಗಸೂಚಿ ಪ್ರಕಾರ ಆ ಸೈಟುಗಳ ಮೌಲ್ಯ 81 ಕೋಟಿ ರೂ. ಆಗಿದೆ. ಆದರೆ ಮಾರುಕಟ್ಟೆ ಮೌಲ್ಯ 300 ಕೋಟಿ ರೂ.ಗಿಂತಲೂ ಅಧಿಕ ಇದೆ ಎನ್ನಲಾಗಿದೆ.

    ಯಾರ‍್ಯಾರ ಸೈಟುಗಳು ಜಪ್ತಿ?
    – ರವಿ ಅವರ 31 ಸೈಟ್, ಅಬ್ದುಲ್ ವಾಹಿದ್ ಹೆಸರಿನಲ್ಲಿದ್ದ 41 ಸೈಟ್, ಕ್ಯಾಥಡ್ರಾಲ್ ಸೊಸೈಟಿಯ 40 ಸೈಟ್, ಇತರರಿಗೆ ಸೇರಿದ 48 ಸೈಟ್ ಗಳನ್ನು ಜಪ್ತಿ ಮಾಡಿದೆ. ಇದನ್ನೂ ಓದಿ: MUDA ಅಕ್ರಮದಲ್ಲಿ ʼಕೋಕನಟ್‌ʼ ಡೀಲ್‌ – 50, 100 ಕೋಕನಟ್‌ ಕಳುಹಿಸಿ ಸಿಕ್ಕಿಬಿದ್ದ ಬಿಲ್ಡರ್‌

    MUDA Scam 2

    ಒಂದೇ ದಿನದಲ್ಲಿ 31 ಸೈಟ್:
    ಮುಡಾ ಬ್ರಹ್ಮಾಂಡ್‌ ಭ್ರಷ್ಟಾಚಾರ ಕೇಸ್‌ ಬೆನ್ನು ಹತ್ತಿರುವ ಇಡಿ ಇಂಚಿಂಚೂ ಮಾಹಿತಿಯನ್ನು ಬಟಾಬಯಲು ಮಾಡುತ್ತಿದೆ. ಮುಡಾದಲ್ಲಿ ಒಂದೇ ದಿನದಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 31 ಸೈಟು ರಿಜಿಸ್ಟರ್ ಮಾಡಿರುವುದು ಬೆಳಕಿಗೆ ಬಂದಿದೆ.

    2023ರ ಅಕ್ಟೋಬರ್‌ 11ರಂದು ರವಿ ಎಂಬುವವರ ಹೆಸರಿಗೆ 31 ಸೈಟುಗಳು ನೋಂದಣಿ ಆಗಿರುವುದು ಇಡಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಮೈಸೂರು ನಗರದ ಹೃದಯ ಭಾಗ ಕುವೆಂಪುನಗರದಲ್ಲಿ 12 ಸೈಟ್, ದಟ್ಟಗಳ್ಳಿ ಮತ್ತು ವಿಜಯನಗರದಲ್ಲಿ 19 ಸೈಟುಗಳು ನೋಂದಣಿ ಆಗಿವೆ. ಇದಲ್ಲದೇ ಅಬ್ದುಲ್ ವಾಹಿದ್ ಹೆಸರಿನಲ್ಲಿ 2023ರ ಮಾರ್ಚ್‌ 8 ರಂದು 25 ಸೈಟ್‌ ನೋಂದಣಿಯಾಗಿದ್ದರೆ 2023ರ ಅ.1ರಂದು 3 ಸೈಟ್‌ ನೋಂದಣಿ ಆಗಿದೆ.

     

  • ಮುಡಾದಲ್ಲಿ ನಡೆದಿರೋದು 4-5 ಸಾವಿರ ಕೋಟಿ ಹಗರಣ: ಆರ್‌. ಅಶೋಕ್‌ ಬಾಂಬ್‌

    ಮುಡಾದಲ್ಲಿ ನಡೆದಿರೋದು 4-5 ಸಾವಿರ ಕೋಟಿ ಹಗರಣ: ಆರ್‌. ಅಶೋಕ್‌ ಬಾಂಬ್‌

    ನವದೆಹಲಿ: ರಾಜ್ಯದಲ್ಲಿ ಮುಡಾ (MUDA) ಪ್ರಚಲಿತದಲ್ಲಿದೆ. ಮುಡಾ ಮುಚ್ಚಿ ಹಾಕಲು ಸಮಾವೇಶ ಮಾಡುತ್ತಿದ್ದಾರೆ. ನಾನು ದಾಖಲೆ ಮಾಹಿತಿ ಕೋರಿದ್ದೇನೆ ಇನ್ನು ಕೊಟ್ಟಿಲ್ಲ. ಇದು 4-5 ಸಾವಿರ ಕೋಟಿಯ ಹಗರಣ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ಹೊಸ ಬಾಂಬ್‌ ಸಿಡಿಸಿದ್ದಾರೆ.

    ಶಾಸಕ ಯತ್ನಾಳ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತಿನ ಸಂಘರ್ಷದ ನಡುವೆ ವಿಪಕ್ಷ ನಾಯಕ ಅಶೋಕ್‌ ಬುಧವಾರ ಬೆಳಗ್ಗೆ ದೆಹಲಿಗೆ ತೆರಳಿದ್ದರು. ಈ ವೇಳೆ ಪಕ್ಷದ ಬೆಳವಣಿಗೆಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಹಣ ಡಬಲ್‌, ಬಿಎಂಡಬ್ಲ್ಯೂ ಕಾರು ಕೊಡಿಸುವ ಆಸೆ ತೋರಿಸಿ ವಂಚನೆ – ಯುವತಿ ಆತ್ಮಹತ್ಯೆ

    ರಾಜ್ಯದಲ್ಲಿ ಮುಡಾ ಪ್ರಚಲಿತದಲ್ಲಿದೆ. ಮುಡಾ ಮುಚ್ಚಿ ಹಾಕಲು ಸಮಾವೇಶ ಮಾಡುತ್ತಿದ್ದಾರೆ. ಸ್ವಾಭಿಮಾನ ಸಮಾವೇಶ ಹೋಗಿ ಡಿಕೆ ಶಿವಕುಮಾರ್ ಸಮಾವೇಶ ಆಗಿದೆ. ಅಗ್ರಿಮೆಂಟ್ ಬಗ್ಗೆಯೂ ಚರ್ಚೆ ಆಗುತ್ತಿದೆ. ದೇವೇಗೌಡರಿಗೆ ಟಾಂಗ್ ಕೊಡಲು ಹೋಗಿ ಪರಸ್ಪರ ಟಾಂಗ್ ಕೊಡ್ತಿದ್ದಾರೆ. ನಾನು ದಾಖಲೆ ಮಾಹಿತಿ ಕೋರಿದ್ದೇನೆ ಇನ್ನು ಕೊಟ್ಟಿಲ್ಲ. ಇದು 4-5 ಸಾವಿರ ಕೋಟಿಯ ಹಗರಣ ಎಂದು ಬಾಂಬ್‌ ಸಿಡಿಸಿದ್ದಾರೆ.

    17 ತಿಂಗಳ ಆಡಳಿತ ಕಾಂಗ್ರೆಸ್ ಸರ್ಕಾರದ ಹದಿನೇಳು ಅವತಾರ ಆಗಿದೆ. 18ನೇ ತಿಂಗಳಿಗೆ ಹೊರ ಅವತಾರ ಬರಲಿದೆ. ದಾಖಲೆಗಳು ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಹಂಚಿಕೊಳ್ಳುವುದು ಪರಸ್ಪರ ಪ್ರಕ್ರಿಯೆ. ಯಾವುದು ಅಕ್ರಮವಾಗಿ ಹಂಚಿಕೆಯಾಗಿದೆ ಅದನ್ನು ಸೀಜ್ ಮಾಡಿ. ಯಾರೇ ಮಾಡಿದರೂ ಸೀಜ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Ballari | ಐವಿ ದ್ರಾವಣ ಪೂರೈಕೆ ಮಾಡಿದ ಕಂಪನಿ ವಿರುದ್ಧ ಕೇಸ್ ದಾಖಲಿಸಲು ತಾಕೀತು

    ಇನ್ನೂ ಯತ್ನಾಳ್ ವಿಚಾರ ಕುರಿತು ಮಾತನಾಡಿ, ಯತ್ನಾಳ್‌ ವಿಚಾರ ಹೈಕಮಾಂಡ್ ಅಂಗಳದಲ್ಲಿದೆ, ಇದು ಸುಖಾಂತ್ಯವಾಗಲಿದೆ. ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳಲಿದೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ಪಾಲಿಸುವುದು ನನ್ನ ಕೆಲಸ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಸೆಕ್ಯೂರಿಟಿಯಿಂದ ಶೂಟ್

  • ಮುಡಾ ಅಕ್ರಮ ಪ್ರಕರಣದಲ್ಲಿ ಇಡಿ ಎಂಬ ಸೀಳು ನಾಯಿಯನ್ನು ನಮ್ಮ‌ಮೇಲೆ ಬಿಟ್ಟಿದ್ದಾರೆ – ಕೃಷ್ಣಭೈರೇಗೌಡ ಲೇವಡಿ

    ಮುಡಾ ಅಕ್ರಮ ಪ್ರಕರಣದಲ್ಲಿ ಇಡಿ ಎಂಬ ಸೀಳು ನಾಯಿಯನ್ನು ನಮ್ಮ‌ಮೇಲೆ ಬಿಟ್ಟಿದ್ದಾರೆ – ಕೃಷ್ಣಭೈರೇಗೌಡ ಲೇವಡಿ

    ಗದಗ: ಮುಡಾ ಹಗರಣ (MUDA Scam) ವಿಚಾರದಲ್ಲಿ ಇಡಿ ಎಂಬ ಸೀಳು ನಾಯಿಯನ್ನು ನಮ್ಮ‌ಮೇಲೆ ಬಿಟ್ಟಿದ್ದಾರೆ. ಇದು ಪೊಲಿಟಿಕಲ್ ಅಟ್ಯಾಕ್ ಅಂತ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದರು.

    ಬುಧವಾರ ನಗರದ ತೋಂಟದಾರ್ಯ ಶಿವಾನುಭವ ಮಂಟಪದಲ್ಲಿ ನಡೆದ ರಾಜಕೀಯ ಸಂತ ಡಿ.ಆರ್ ಪಾಟೀಲ ಗ್ರಂಥ ಬಿಡುಕಡೆ ಕಾರ್ಯಕ್ರಮ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಇಡಿ ಎಂಬುದು ಜಾರಿ ನಿರ್ದೇಶನಾಲಯ (ED) ಅಲ್ಲ, ಅದು ರಾಜಕೀಯವಾಗಿ ವಿಚಂಟಿಂಗ್ ಏಜೆನ್ಸಿ ಅದು. ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡೋಕೆ. ವಿರೋಧ ಪಕ್ಷದ ನಾಯಕರನ್ನು ಬಲಿಯಾಕಲಿಕ್ಕೆ ಅಷ್ಟೇ ಇಡಿ ಇರುವ ಉದ್ಯೋಗ ಎಂದು ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಅವರು ಇಲ್ಲಿಯವರಗೆ ಯಾರ ಮೇಲೆ ಕೇಸ್ ಹಾಕಿದ್ದಾರೆ? ಬರೀ ರಾಜಕೀಯ ವಿರೋಧಿಗಳ ಮೇಲೆ ಕೇಸ್ ಹಾಕಿದ್ದಾರೆ. ಶ್ರೀಮಂತರ ಮೇಲೆ, ಕಪ್ಪುಹಣ ಇದ್ದವರ ಮೇಲೆ ಕೇಸ್ ಹಾಕಿದ್ದಾರಾ? ಸ್ವಿಸ್ ಬ್ಯಾಂಕ್‌ನಲ್ಲಿ ದುಡ್ಡು ಇಟ್ಟವರ ಮೇಲೆ ಕೇಸ್ ಹಾಕಿದ್ದಾರಾ? ಇಂತಹ ಒಬ್ಬರ ಮೇಲೆ ಇಡಿ ಕೇಸ್ ಹಾಕಿರುವುದನ್ನು ತೋರಿಸಿ ಅಂತ ಪ್ರಶ್ನೆ ಮಾಡಿದರು. ಇಡಿ ಎಂಬುದು ಬಿಜೆಪಿಯ ಒಂದು ಅಂಗ ಸಂಸ್ಥೆ. ಈ ಅಂಗ ಸಂಸ್ಥೆ ಕೆಲಸ, ರಾಜಕೀಯ ವಿರೋಧಿಗಳನ್ನು ಬಲಿಯಾಗುವುದು. ಇಡೀ ದೇಶದಲ್ಲಿ ಬಿಜೆಪಿವರು ಅದನ್ನೆ ಮಾಡಿದ್ದಾರೆ. ರಾಜಕೀಯ ವಿರೋಧಿಗಳಿಗೆ ಹಿಟ್ ಆಂಡ್ ರನ್ ಮಾಡೋದು ಇವರ ಕೆಲಸವಾಗಿದೆ ಎಂದು ಆರೋಪಿಸಿದರು.

    ಕರ್ನಾಟಕ ಉಪಚುನಾವಣೆಯಲ್ಲಿ 3 ಸ್ಥಾನ ಕಾಂಗ್ರೆಸ್ ಗೆದ್ದ ಮೇಲೆ, ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಕಳೆದ ವಿಧಾನ ಸಭೆ ಹಾಗೂ ಉಪ ಚುನಾವಣೆಯಲ್ಲೂ ನಮ್ಮನ್ನು ಸೋಲಿಸಲು ಆಗಲಿಲ್ಲ. ಅದಕ್ಕೆ ಇಡಿ ಎಂಬ ಸೀಳು ನಾಯಿಯನ್ನು ನಮ್ಮ‌ ಮೇಲೆ ಬಿಟ್ಟಿದಾರೆ. ಇದು ಪೊಲಿಟಿಕಲ್ ಅಟ್ಯಾಕ್. ಬಿಜೆಪಿನವರು ಜನಗಳ ಬಳಿ ಮತ ಪಡೆದು ಗೆಲ್ಲಲಾಗದೇ ನಿರಾಸೆಯಲ್ಲಿ ಇಡಿಯನ್ನ ಛೂ ಬಿಟ್ಟಿದಾರೆ. ಅವರನ್ನು ನಾವು ಲೀಗಲ್ ಆಗಿ ಎದುರಿಸುತ್ತೆವೆ, ಜನತಾ ನ್ಯಾಯಾಲಯದಲ್ಲಿ ಪ್ರಜಾಪ್ರಭುತ್ವ ಮುಖಾಂತರ ಎದುರಿಸುತ್ತೆವೆ. ಅವರದ್ದು ಬರೀ ಬೋಗಸ್ಸು, ಸುಳ್ಳು, ಜನರನ್ನು ಬೇರೆಕಡೆ ಸೆಳೆಯಲು 6 ತಿಂಗಳಿಂದ ಪ್ರಯತ್ನ ಮಾಡ್ತಿದ್ದಾರೆ. ಫೇಲ್ ಆದ್ರೂ ಬಿಡ್ತಿಲ್ಲ. ಇದೊಂದು ರಾಜಕೀಯ ಪಿತೂರಿ ಅದು ಅಂದ್ರು.

    ಇನ್ನು ವಕ್ಫ್ ಬೋರ್ಡ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಮ್ ಪ್ರತ್ಯೇಕ ಹೋರಾಟ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಯಾವುದೋ ವಿಷಯ ತೆಗೆದುಕೊಂಡು. ಒಬ್ಬರ ಮೇಲೆ ಒಬ್ಬರು ಕೈ ಸಾಧಿಸಲು ಅವರ ಆಂತರಿಕ ರಾಜಕೀಯ ಕಚ್ಚಾಟವದು. ಬಿಜೆಪಿನವರ ಅವಧಿಯಲ್ಲಿ ಸುಮಾರು 4 ಸಾವಿರ ಆಸ್ತಿ ವಕ್ಫ್ ಖಾತೆಗೆ ಮಾಡಿಕೊಟ್ಟಿದ್ದಾರೆ. ಆಗ ಇವರೆಲ್ಲಾ ಎಲ್ಲಿ ಹೋಗಿದ್ರು? ಬಿಜೆಪಿನವರು ಹೋರಾಟ ಮಾಡ್ತಿರುವುದು ಜನ್ರನ್ನು ಯಾಮಾರಿಸಲು. ಕಾಂಗ್ರೆಸ್ ಸರ್ಕಾರದ ಮೇಲೆ ಇರುವ ಜನ್ರ ಅಭಿಮಾನ ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಜನರ ಮನಸ್ಸು ಬೇರೆಕಡೆ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ ಎಂಧು ಕಿಡಿ ಕಾರಿದರು.

  • ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!

    ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!

    ಮೈಸೂರು: ಮುಡಾ ಸೈಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡ್ಡಾ ಬೆಂಬಲಿಗ ರಾಕೇಶ್ ಪಾಪಣ್ಣ (Rakesh Papanna) ಅವರ ಮೈಸೂರಿನ ನಿವಾಸ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ (DB Natesh) ಅವರ ಬೆಂಗಳೂರಿನ ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ.

    ಸಿಎಂ ಆಪ್ತನ ಮನೆ ಮೇಲೂ ಇ.ಡಿ ತಲಾಶ್:
    ಸಿಎಂ ಆಪ್ತ ರಾಕೇಶ್ ಪಾಪಣ್ಣಗೂ ಶಾಕ್ ನೀಡಿರುವ ಜಾರಿ ನಿರ್ದೇಶನಾಲಯ (ED) ಮೈಸೂರಿನ ಹಿನಕಲ್ ನಿವಾಸದ ಮೇಲೆ ದಾಳಿ ನಡೆಸಿ, ತೀವ್ರ ಶೋಧ ನಡೆಸಿದೆ. ಅಲ್ಲದೇ ರಾಕೇಶ್ ಪಾಪಣ್ಣ ಅವರನ್ನೂ ವಿಚಾರಣೆಗೆ ಒಳಪಡಿಸಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಮಲ್ಲೇಶ್ವರದ 10ನೇ ಕ್ರಾಸ್‌ನಲ್ಲಿರುವ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಅವರ ನಿವಾಸದ ಮೇಲೂ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ದಾಳಿ ನಡೆಸಿದ ಅಧಿಕಾರಿಳು ತೀವ್ರ ಶೋಧ ನಡೆಸುತ್ತಿದ್ದಾರೆ. ವಿವಿಧ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರಾಕೇಶ್ ಪಾಪಣ್ಣಗೆ ಯಾಕೆ ಇಡಿ ಬಿಸಿ?
    ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗನಾದ ರಾಕೇಶ್ ಪಾಪಣ್ಣಗೆ ಇದೇ ವರ್ಷದ ಜೂನ್ ನಲ್ಲಿ ಅಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ 50:50 ಅನುಪಾತದಲ್ಲಿ ಒಟ್ಟು 98,850 ಚದರ ಅಡಿ ಜಾಗವನ್ನು ಪರಿಹಾರ ರೂಪದಲ್ಲಿ ನೀಡಿದ್ದರು. ಅಲ್ಲದೇ ಕೆಲವು 50:50 ಅನುಪಾತದ ನಿವೇಶನ ಹಂಚಿಕೆಯಲ್ಲೂ ರಾಕೇಶ್ ಪಾಪಣ್ಣ ಮಧ್ಯಸ್ಥಿಕೆ ಇದೆ ಎಂಬ ಆರೋಪ ಕೇಳಿಬಂದಿದೆ.

    MUDA Case 3

    ಡಿ.ಬಿ ನಟೇಶ್‌ ಮೇಲಿನ ಆರೋಪಗಳೇನು?
    ಡಿ.ಬಿ ನಟೇಶ್, 2020 ರಿಂದ 2022ರವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೇ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿಗೆ 50:50 ಅನುಪಾತದಲ್ಲಿ ವಿಜಯನಗರದಲ್ಲಿ 14 ಸೈಟ್ ಮಂಜೂರು ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ನಟೇಶ್ ಅವಧಿಯಲ್ಲೇ 50:50 ಅನುಪಾತದ ಅಡಿ 500ಕ್ಕೂ ಹೆಚ್ಚು ನಿವೇಶನ ಹಂಚಲಾಗಿದೆ. ಬದಲಿ ನಿವೇಶನಗಳು ಕೂಡ ಇದೇ ವೇಳೆಯ ಹಂಚಿಕೆ ಆಗಿದೆ ಎಂಬ ಆರೋಪ ಇವರ ಮೇಲೆ ಇರುವುದಾಗಿ ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    MUDA G T Dinesh Kumar

    ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಮೇಲಿನ ಆರೋಪ ಏನು?
    ನಟೇಶ್ ಅವರ ನಂತರ 2022ರ ಮೇ ನಿಂದ 2024ರ ಜುಲೈ ವರೆಗೆ ದಿನೇಶ್ ಕುಮಾರ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರು. ಇವರ ಅವಧಿಯಲ್ಲಿ ಅತ್ಯಧಿಕ ಅಂದರೆ 1 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಲಾಗಿತ್ತು. ಅಲ್ಲದೇ ನೂರಾರು ಸೈಟ್‌ಗಳ ಮೂಲ ವಾರುಸದಾರರಿಗೆ ಪರಿಹಾರ ಹೋಗಿದ್ದರೂ ಮತ್ತೆ ಪರಿಹಾರ ರೂಪದಲ್ಲಿ ನಿವೇಶನ ನೀಡಲಾಗಿದೆ. ಬಹಳಷ್ಟು ನಿವೇಶನಗಳ ವಾರಸುದಾರರನ್ನ ಸೃಷ್ಟಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಇವರ ಮೇಲಿದೆ.

    ಅಲ್ಲದೇ ಸಿಎಂ ಪತ್ನಿಯ ದಾಖಲೆ ಮೇಲೆ ವೈಟ್ನರ್ ಹಾಕಿರುವ ಪ್ರಕರಣದಲ್ಲೂ ಇವರ ಹೆಸರು ಕೇಳಿ ಬಂದಿದೆ.

  • ನೂರು ಜನ ಸಿದ್ದರಾಮಯ್ಯ ಬಂದ್ರೂ ನನ್ನನ್ನ ಬಂಧಿಸಲು ಸಾಧ್ಯವಿಲ್ಲ – ಹೆಚ್‌ಡಿಕೆ ಸವಾಲ್

    ನೂರು ಜನ ಸಿದ್ದರಾಮಯ್ಯ ಬಂದ್ರೂ ನನ್ನನ್ನ ಬಂಧಿಸಲು ಸಾಧ್ಯವಿಲ್ಲ – ಹೆಚ್‌ಡಿಕೆ ಸವಾಲ್

    ಬೆಂಗಳೂರು: ನೂರು ಜನ ಸಿದ್ದರಾಮಯ್ಯನಂತಹವರು (Siddaramaiah) ಬಂದರೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲ ಅಂತ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಸವಾಲ್ ಹಾಕಿದರು.

    ಅಗತ್ಯ ಬಿದ್ದರೆ ಕುಮಾರಸ್ವಾಮಿ ಅವರನ್ನ ಬಂಧನ ಮಾಡುತ್ತೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಸಹಿಯನ್ನೇ ತಿರುಚಲಾಗಿದೆ, 1 ದಿನವಾದ್ರೂ ಜೈಲಿಗೆ ಹಾಕಲು ಪ್ಲ್ಯಾನ್‌ ನಡೆಯುತ್ತಿದೆ: ಹೆಚ್‌ಡಿಕೆ ಕಿಡಿ

    ನನ್ನ ಬಂಧನ ಮಾಡೋಕೆ ನೂರು ಜನ ಸಿದ್ದರಾಮಯ್ಯ ಬಂದರೂ ಆಗೊಲ್ಲ. ನನಗೆ ಭಯ ಶುರುವಾಗಿದೆ ಅಂತ ಸಿಎಂ ಹೇಳ್ತಾರೆ. ನನಗೆ ಭಯ ಶುರುವಾಗಿದೆಯಾ? ನನ್ನನ್ನ ನೋಡಿದ್ರೆ ಹಾಗೆ ಅನ್ನಿಸುತ್ತಾ ಅಂತ ಪ್ರಶ್ನೆ ಮಾಡಿದ್ರು.

    ಸಿದ್ದರಾಮಯ್ಯ ಅವರು ಒಂದು ವಾದದಿಂದ ಹೇಗೆ ನಡೆದುಕೊಂಡಿದ್ದಾರೆ ಅಂತ ಜನ ನೋಡಿದ್ದಾರೆ. ಮೈಸೂರಿನ ದಾಖಲೆಗಳೇ ಇವೆಯಲ್ಲ. ಮುಡಾ ಆಸ್ತಿ (MUDA Property) ನನ್ನ ಆಸ್ತಿ ಅಂತ ಹೇಳ್ತಿದ್ದಾರೆ. ಇಂತಹ ಭಂಡತನ ಮುಖ್ಯಮಂತ್ರಿ ನಾನು ನೋಡಿಲ್ಲ ಅಂತ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಪತಿ-ಪತ್ನಿ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಹೆಂಡತಿ ಶವ ಪತ್ತೆ – ಕೆರೆಗೆ ಹಾರಿ ಗಂಡ ಆತ್ಮಹತ್ಯೆ

  • ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ರೆ ಮುಂದೇನು?

    ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ರೆ ಮುಂದೇನು?

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಸೈಟ್‌ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.

    ಈ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ರಾಜಭವನದ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಚಿವರು ಮುಗಿಬಿದ್ದಿದ್ದಾರೆ. ಬಿಜೆಪಿಗರು (BJP) ಪ್ರತಿದಾಳಿಗೆ ನಿಂತಿದ್ದಾರೆ. ಮುಡಾ ಅಕ್ರಮ ವಿಚಾರದಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಾಸಿಕ್ಯೂಶನ್‌ಗೆ ಅನುಮತಿ ಕೋರಿ ಪತ್ರ ಬರೆದಿದ್ದರು. ಇದನ್ನೇ ಆಧರಿಸಿ ವಿವರಣೆ ಕೋರಿ ರಾಜ್ಯಪಾಲರು ನೋಟಿಸ್‌ ನೀಡಿದ್ದಾರೆ.

    ಪ್ರಾಸಿಕ್ಯೂಷನ್ ಅನುಮತಿ ನೀಡಿದ್ರೆ ಮುಂದೇನು?
    ದೂರುದಾರ ಟಿ ಜೆ ಅಬ್ರಾಹಂ (TJ Abraham) ನೇರವಾಗಿ ಪಿಸಿಆರ್ ದಾಖಲು ಮಾಡಬಹುದು. ಖಾಸಗಿ ದೂರು ದಾಖಲು ಮಾಡಿ ಕೋರ್ಟ್‌ ಎಫ್‌ಐಆರ್‌ ದಾಖಲಿಸುವಂತೆ ಲೋಕಾಯುಕ್ತಕ್ಕೆ (Lokayukta) ನಿರ್ದೇಶನ ನೀಡಬೇಕು. ಇದನ್ನೂ ಓದಿ: ಕರ್ನಾಟಕದಲ್ಲಿ ವಿರೋಧ ಪಕ್ಷಗಳ ಸ್ಟಾರ್ ಚೆನ್ನಾಗಿಲ್ಲ: ಡಿವಿಎಸ್‌

    ಕೋರ್ಟ್ ನಿರ್ದೇಶನ ಮೇರೆಗೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲು ಮಾಡಬೇಕಾಗುತ್ತದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ತನಿಖೆ ಮಾಡಬೇಕು. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ಲೋಕಾಯುಕ್ತ ಮಾಡಬಹುದು.


    3 ತಿಂಗಳು ಕಾಲಾವಕಾಶ:
    ಮುಖ್ಯಮಂತ್ರಿಗಳ ವಿರುದ್ಧ ಒಬ್ಬರು ದೂರು ನೀಡಿದರೆ ಆ ದೂರನ್ನು ಇತ್ಯರ್ಥ ಮಾಡಲು ರಾಜ್ಯಪಾಲರಿಗೆ 3 ತಿಂಗಳು ಕಾಲಾವಕಾಶ ಇರಲಿದೆ. ಈಗಾಗಲೇ ದೂರು ಸ್ವೀಕರಿಸಿದ ರಾಜ್ಯಪಾಲರು ಮುಖ್ಯಮಂತ್ರಿ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ಸ್ವೀಕರಿಸಿರುವ ಸಿಎಂ ಸಿದ್ದರಾಮಯ್ಯ 15 ದಿನದ ಒಳಗೆ ಉತ್ತರ ಅಥವಾ ಸಮಜಾಯಿಷಿ ನೀಡಬೇಕು. 15 ದಿನ ಕಳೆದರೂ ಸಮಜಾಯಿಷಿ ನೀಡದೇ ಇದ್ದರೆ ರಾಜ್ಯಪಾಲರು ಮುಂದಿನ ಕ್ರಮ ತೆಗೆದುಕೊಳ್ಳಬಹುದು. ರಾಜ್ಯಪಾಲರು ಜುಲೈ 27 ರಂದು ಸಿಎಂಗೆ ನೋಟಿಸ್‌ ನೀಡಿದ್ದಾರೆ. ಇಂದಿಗೆ (ಆಗಸ್ಟ್‌ 01) ಒಟ್ಟು 6 ದಿನ ಕಳೆದಿದ್ದು ಇನ್ನು 9 ದಿನ ಮಾತ್ರ ಸಿಎಂಗೆ ಅವಕಾಶ ಇದೆ.