Tag: ಮಲ್ಲಿಗೆ

  • ಉತ್ತರಕಾಂಡ ಚಿತ್ರದಲ್ಲಿ ‘ಮಲ್ಲಿಗೆ’ಯಾದ ದೂದ್ ಪೇಡಾ ದಿಗಂತ್

    ಉತ್ತರಕಾಂಡ ಚಿತ್ರದಲ್ಲಿ ‘ಮಲ್ಲಿಗೆ’ಯಾದ ದೂದ್ ಪೇಡಾ ದಿಗಂತ್

    ಟ ದೂದ್ ಪೇಡಾ ದಿಗಂತ್ (Diganth) ಉತ್ತರಕಾಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಿರ್ಚಿ ಮಲ್ಲಿಗೆ ಎಂಬ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ನಲ್ಲಿನ ಅವರ ಖಡಕ್ ಲುಕ್ ಮೂಲಕ ಕುತೂಹಲ ಕೆರಳಿಸಿದ್ದಾರೆ.

    Diganth 1

    ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಶಿವರಾಜ್ ಕುಮಾರ್ ಕಾಂಬಿನೇಷನ್ ನ ಉತ್ತರ ಕಾಂಡ (Uttarkanda) ಸಿನಿಮಾದಲ್ಲಿ ಚೈತ್ರಾ ಆಚಾರ್ಯ್ (Chaitra Acharya)  ಕೂಡ ನಟಿಸುತ್ತಿದ್ದಾರೆ. ಚೈತ್ರ ಆಚಾರ್ ಉತ್ತರಕಾಂಡ ತಾರಾಬಳಗಕ್ಕೆ ಸೇರ್ಪಡೆ ಆಗಿದ್ದು, ಇಂದು ಚಿತ್ರೀಕರಣದಲ್ಲೂ ಪಾಲ್ಗೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ಲಚ್ಚಿ (Lacchi) ಎಂಬ ಒಂದು ಮುಖ್ಯ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ.

    Uttarkanda

    ಉತ್ತರಕಾಂಡ’ದ ಮುಹೂರ್ತ 2022ರಲ್ಲಿ ಆಗಿದ್ದು, ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ, ಹಾಗೂ ಚಿತ್ರವು ಉತ್ತರ ಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರಕ್ಕೆ ನಿಖರವಾದ ಸಂಶೋಧನೆ ಮತ್ತು ಪ್ಲ್ಯಾನಿಂಗ್ ಅಗತ್ಯವಿತ್ತು. ಈ ಕಾರಣದಿಂದ ಮತ್ತು ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಚಿತ್ರೀಕರಣ ವಿಳಂಬಗೊಂಡಿತು. ಆದರೆ ಇದೀಗ ಸರ್ವ ಸಿದ್ಧತೆಗಳೊಂದಿಗೆ ಏ.15 ರಿಂದ ಚಿತ್ರೀಕರಣ ಆರಂಭಗೊಂಡಿದ್ದು, ಚಿತ್ರತಂಡದವರು ಉತ್ಸುಕರಾಗಿದ್ದಾರೆ.

    ಉತ್ತರಕಾಂಡ ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದು, ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.

  • ಶಾಲೆಗೆ ರಜೆ – ಮಲ್ಲಿಗೆ ಹೂವಿನಿಂದ ಬದುಕು ಕಟ್ಟಿಕೊಳ್ಳುತ್ತಿರುವ ಮಕ್ಕಳು

    ಶಾಲೆಗೆ ರಜೆ – ಮಲ್ಲಿಗೆ ಹೂವಿನಿಂದ ಬದುಕು ಕಟ್ಟಿಕೊಳ್ಳುತ್ತಿರುವ ಮಕ್ಕಳು

    ಕೊಪ್ಪಳ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಕುಟುಂಬಗಳು ಸಂಕಷ್ಟವನ್ನು ಎದುರಿಸುತ್ತಿವೆ. ಕುಟುಂಬಗಳನ್ನು ನಡೆಸಲು ಆಗದಂತ ಪರಿಸ್ಥಿತಿಯಲ್ಲಿ ಪಾಲಕರಿದ್ದಾರೆ. ಆದರೆ ಇಲ್ಲಿನ ಕೆಲ ಮಕ್ಕಳ ಗುಂಪು ಪ್ರತಿ ದಿನವೂ ರಾಜ್ಯ ಹೆದ್ದಾರಿಯಲ್ಲಿ ಮಲ್ಲಿಗೆ ಹೂ ಮಾರಿಕೊಂಡು ಬರುವ ಲಾಭದಲ್ಲಿಯೇ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.JASMINE 1 medium

    ಕೊಪ್ಪಳದ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಈ ಮಕ್ಕಳು ಹೂ ಮಾರುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದ ಈ ಮಕ್ಕಳು ಸದ್ಯ ಶಾಲೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಹಾಗೂ ಲಾಕ್‍ಡೌನ್ ಇರುವ ಕಾರಣ ಕುಟುಂಬದ ಹೊಣೆ ಹೊರಲು ಮುಂದಾಗಿದ್ದಾರೆ. ಪ್ರತಿ ದಿನ ಗ್ರಾಮದಿಂದ 20ಕ್ಕೂ ಅಧಿಕ ಮಕ್ಕಳು ಮಲ್ಲಿಗೆ ಹೂ ಮಾರಲು ಗ್ರಾಮದಿಂದ 15 ಕಿ.ಮೀ ದೂರವಿರುವ ದಾಸನಾಳ ಗ್ರಾಮ ಸಮೀಪದ ರಾಜ್ಯ ಹೆದ್ದಾರಿಗೆ ಆಗಮಿಸುತ್ತಾರೆ.

    MONEY medium

    ಆಗೋಲಿ ಗ್ರಾಮದಲ್ಲಿಯೇ ಇರುವ ಮಲ್ಲಿಗೆ ಹೂ ತೋಟದಲ್ಲಿ ಮಾಲೀಕರಿಂದ ಕೆ.ಜಿಗಳ ಆಧಾರದ ಬಿಡಿಯಾಗಿರುವ ಮಲ್ಲಿಗೆ ಹೂವನ್ನು ಖರೀದಿಸಿ ನಂತರ ಬಿಡಿಯಾಗಿರುವ ಹೂವನ್ನು ಕಟ್ಟಿಕೊಂಡು ಬೆಳಗ್ಗಿನ ಜಾವದಲ್ಲಿಯೇ ಆಗೋಲಿ ಗ್ರಾಮವನ್ನು ಬಿಟ್ಟು, ಬೆಳಗ್ಗೆ 9 ಗಂಟೆಗಾಗಲೇ ದಾಸನಾಳ ಗ್ರಾಮದ ರಸ್ತೆಗಳಲ್ಲಿ ಹೂ ಮಾರಲು ಮುಂದಾಗುತ್ತಾರೆ. ರಸ್ತೆಯಲ್ಲಿ ಹಾದು ಹೋಗುವ ಕಾರು, ಲಾರಿ, ಬೈಕ್‍ಗಳನ್ನು ತಡೆದು ಹೂ ಮಾರುವ ಕಾಯಕವನ್ನು ಮಕ್ಕಳು ಮಾಡುತ್ತಿದ್ದಾರೆ. ಈಗಾಗಲೇ ಕಳೆದ 40 ದಿನಗಳಿಂದ ಹೂ ಮಾರಾಟ ಮಾಡುತ್ತಿದ್ದು, ಪ್ರತಿ ದಿನ ದೊರೆಯುವ ಕೊಂಚ ಲಾಭದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

    JASMINE medium

    150 ರೂಗಳಿಗೆ ಕೆ.ಜಿ. ಹೂ: ನೇರವಾಗಿ ಹೂ ತೋಟಗಳಿಗೆ ಭೇಟಿ ನೀಡುವ ಈ ಮಕ್ಕಳು ಪ್ರತಿ ಕೆ.ಜಿ. ಹೂವಿಗೆ 150 ರೂಗಳನ್ನು ನೀಡಿ, ಖರೀದಿ ಮಾಡಿಕೊಂಡು ಆಗಮಿಸುತ್ತಾರೆ. ಅವುಗಳನ್ನು ಮನೆಯಲ್ಲಿ ಕಟ್ಟಿಕೊಂಡು, ಮಲ್ಲಿಗೆ ಹೂವಿಗೆ ಅಲಂಕಾರಕ್ಕಾಗಿ ಬಣ್ಣವನ್ನು ಹಾಕಿಕೊಂಡು ಬುಟ್ಟಿಯಲ್ಲಿ ಮಾರಲು ಆಗಮಿಸುತ್ತಾರೆ. ಪ್ರತಿ ಕೆ.ಜಿ. ಮಲ್ಲಿಗೆ 40 ರಿಂದ 45 ಮೊಳ ಹೂ ದೊರೆಯುತ್ತಿದ್ದು, ಪ್ರತಿ ಮೊಳಕ್ಕೆ 5 ರೂ.ಗಳಂತೆ ಮಾರಾಟ ಮಾಡುತ್ತಾರೆ. 1 ಕೆ.ಜಿ. ಮಲ್ಲಿಗೆ ಹೂ ಮಾರಾಟ ಮಾಡಿದರೆ ಮಕ್ಕಳಿಗೆ ಖರ್ಚು ತೆಗೆದು 80 ರಿಂದ 100 ರೂ.ಗಳ ಲಾಭ ಗಳಿಸುತ್ತಾರೆ. ಹೀಗೆ ಪ್ರತಿ ದಿನ ಮಕ್ಕಳು ಮಲ್ಲಿಗೆ ಹೂ ಮಾರಾಟ ಮಾಡುವ ಮೂಲಕ ಕುಟುಂಬ ಕಷ್ಟಗಳ ನಿವಾರಣೆಗೆ ಅಳಿಲು ಸೇವೆಯನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ ಬಾಗಿನ, ಚಿನ್ನದ ಮೂಗುತಿ ಗಿಫ್ಟ್ ಕೊಟ್ಟ ಯುವಕ

  • ಮಲ್ಲಿಗೆ ಬೆಲೆಯಲ್ಲಿ ಭಾರೀ ಕುಸಿತ- ಬೆಳೆಗಾರರು ಕಂಗಾಲು

    ಮಲ್ಲಿಗೆ ಬೆಲೆಯಲ್ಲಿ ಭಾರೀ ಕುಸಿತ- ಬೆಳೆಗಾರರು ಕಂಗಾಲು

    ಬಳ್ಳಾರಿ: ಮಲ್ಲಿಗೆ ಅಂದ್ರೆ ಸುವಾಸನೆ ಭರಿತ ವಾಸನೆ ಅಂತಾರೆ. ಆದೆ ಘಮ ಘಮ ಅನ್ನೋ ಮಲ್ಲಿಗೆ ಬೆಳೆದ ರೈತರ ಬಾಳಲ್ಲಿ ಸುವಾಸನೆ ಇಲ್ಲದಾಗಿದೆ.

    ಹೌದು. ಕಷ್ಟಪಟ್ಟು ಮಲ್ಲಿಗೆ ಬೆಳೆದ ರೈತರಿಗೆ ಸರಿಯಾದ ಪ್ರತಿಫಲ ಸಿಗ್ತಿಲ್ಲ. ಹೂ ಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಕೆ.ಜಿಗೆ 200 ರೂಪಾಯಿಂದ 500 ರೂಪಾಯಿಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಹೂವಿನ ಬೆಲೆ ಇದೀಗ ಅಕ್ಷರಶ ಪಾತಾಳಕ್ಕೆ ಕುಸಿದಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಸಿಲು ಇದ್ರೂ ಬಳ್ಳಾರಿ ತಾಲೂಕಿನ ವೈ ಕಗ್ಗಲ್ ಗ್ರಾಮದ ಪ್ರತಿಯೊಬ್ಬ ರೈತರು ತಮ್ಮ ಜಮೀನುಗಳಲ್ಲಿ ಮಲ್ಲಿಗೆ ಬೆಳೆಯನ್ನ ಬೆಳೆಯುತ್ತಾರೆ. ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ ಸೇರಿದಂತೆ ವಿವಿಧ ರೀತಿಯ ಸುವಾಸನೆ ಭರಿತ ಮಲ್ಲಿಗೆ ಹೂಗಳನ್ನು ಬೆಳೆಯುತ್ತಾರೆ.

    vlcsnap 2018 06 22 10h38m23s174

    ಇದೂವರೆಗೂ ಮಲ್ಲಿಗೆ ಹೂವಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುತ್ತಿದ್ದ ಪರಿಣಾಮ ರೈತರು ಲಾಭ ಗಳಿಸುತ್ತಿದ್ದರು. ಆದ್ರೆ ಈ ಬಾರಿ ಮಲ್ಲಿಗೆ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಕೆ.ಜಿ ಮಲ್ಲಿಗೆಗೆ ಕೇವಲ 15-30 ರೂಪಾಯಿ ಬೆಲೆ ಸಿಗುತ್ತಿರುವುದರಿಂದ ಸಾಲ ಸೋಲ ಮಾಡಿ ಬೆಳೆ ಬೆಳೆದ ರೈತರು ಇದೀಗ ಅಕ್ಷರಶಃ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

    ಒಟ್ಟಿನಲ್ಲಿ ಬಳ್ಳಾರಿಯ ವೈ ಕಗ್ಗಲ್ ಗ್ರಾಮದ ರೈತರು ಬೆಳೆದ ಮಲ್ಲಿಗೆ ಬೆಳೆ ಎಲ್ಲರ ತೋಟಗಳಲ್ಲಿ ಅರಳಿದ್ರೂ, ರೈತರ ಬದುಕು ಮಾತ್ರ ಅರಳದಂತಾಗಿದೆ. ರೈತರು ಯಾಕಪ್ಪ ಮಲ್ಲಿಗೆ ಹೂ ಬೆಳೆದೆ ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಆದ್ರೂ ತೋಟಗಾರಿಕೆ ಇಲಾಖೆ ಮಾತ್ರ ಮಲ್ಲಿಗೆ ಬೆಳೆಗೆ ಬೆಲೆ ಕುಸಿತವಾದ್ರೂ ರೈತರ ನೆರವಿಗೆ ಧಾವಿಸದಿರುವುದು ರೈತರನ್ನು ಮತ್ತಷ್ಟೂ ಕಂಗಾಲು ಮಾಡಿದೆ.

    vlcsnap 2018 06 22 10h38m05s252