Tag: ಮಮತಾ ಬ್ಯಾನರ್ಜಿ

  • ನನ್ನ ಮೊಬೈಲ್ ನಂಬರ್ ರದ್ದುಗೊಳಿಸಿದ್ರೂ ಆಧಾರ್ ಲಿಂಕ್ ಮಾಡಲ್ಲ: ಮಮತಾ ಬ್ಯಾನರ್ಜಿ

    ನನ್ನ ಮೊಬೈಲ್ ನಂಬರ್ ರದ್ದುಗೊಳಿಸಿದ್ರೂ ಆಧಾರ್ ಲಿಂಕ್ ಮಾಡಲ್ಲ: ಮಮತಾ ಬ್ಯಾನರ್ಜಿ

    ಕೊಲ್ಕತ್ತಾ: ನನ್ನ ಮೊಬೈಲ್ ನಂಬರ್ ರದ್ದುಗೊಳಿಸಿದರೂ, ನಾನು ಆಧಾರ್ ಸಂಖ್ಯೆಯನ್ನು ಮೊಬೈಲ್ ನಂಬರ್‍ಗೆ ಲಿಂಕ್ ಮಾಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಮೊಬೈಲ್ ನಂಬರ್‍ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಉದ್ದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟೆಲಿಕಾಂ ಇಲಾಖೆಯ ಈ ನಿಯಮವನ್ನು ನಾನು ಪಾಲಿಸುವುದಿಲ್ಲ, ನನ್ನ ಮೊಬೈಲ್ ನಂಬರ್ ರದ್ದುಗೊಳಿಸಿದರೂ ಸರಿ, ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದಿಲ್ಲ ಎಂದು ತಿಳಿಸಿದರು.

    ಈ ಹಿಂದೆಯು ಸಿಎಂ ಮಮತಾ ಬ್ಯಾನರ್ಜಿ ಬ್ಯಾನರ್ಜಿ ಅವರು ಆಧಾರ್ ಅನ್ನೂ ಕಡ್ಡಾಯಗೊಳಿಸುವ ಕುರಿತು ಪ್ರಶ್ನಿಸಿ, ಇದು ವ್ಯಕ್ತಿಯ ಗೌಪ್ಯತೆಗೆ ಹಾಗೂ ಹಕ್ಕುಗಳ ವಿರುದ್ಧವಾಗಿದೆ. ಕೇಂದ್ರ ಸರ್ಕಾರವು ನಿರಂಕುಶ ಆಡಳಿತವನ್ನು ನಡೆಸುತ್ತಿದ್ದು ಆದರ ವಿರುದ್ಧ ಯಾರು ಪ್ರತಿಭಟನೆ ಮಾಡದಿದ್ದರೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

    ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಮಂದಿ ಆಧಾರ್ ಜೋಡಣೆಗೆ ಸಂಬಂಧಿಸಿದಂತೆ ಪ್ರಶ್ನಿಸಿ ಸುಪ್ರೀಂ ಕೊರ್ಟ್ ಮೆಟ್ಟಿಲು ಏರಿದ್ದು, ಆಧಾರ್‍ಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಅಕ್ಟೋಬರ್ 30ರಿಂದ ಆರಂಭವಾಗಲಿದೆ.

    aadhaar

    sim aadhar

    617047 aadharcard

    aadhar pan

    aadhaar and pan card

    aadhar card

  • ಮಮತಾ ಬ್ಯಾನರ್ಜಿ ತಲೆಗೆ 11 ಲಕ್ಷ ರೂ. ಬಹುಮಾನ ಘೋಷಿಸಿದ ಬಿಜೆಪಿ ಮುಖಂಡ

    ಮಮತಾ ಬ್ಯಾನರ್ಜಿ ತಲೆಗೆ 11 ಲಕ್ಷ ರೂ. ಬಹುಮಾನ ಘೋಷಿಸಿದ ಬಿಜೆಪಿ ಮುಖಂಡ

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತಲೆ ಕಡಿದವರಿಗೆ ರೂ.11 ಲಕ್ಷ ಬಹುಮಾನ ನೀಡುತ್ತೇನೆಂದು ಎಂದು ಬಿಜೆಪಿ ಯುವ ಮೋರ್ಚಾ ಮುಖಂಡ ಯೋಗೇಶ್ ವಾರ್ಶ್‍ನೇ ಎಂಬವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಭಾನುವಾರದಂದು ಹನುಮಾನ್ ಜಯಂತಿ ಪ್ರಯುಕ್ತ ಬಿರ್ಭುಮ್ ಜಿಲ್ಲೆಯಲ್ಲಿ ನಡೆದ ಮೆರವಣಿಗೆ ವೇಳೆ ಪೊಲೀಸರ ಲಾಠಿ ಚಾರ್ಜ್ ವಿರೋಧಿಸಿ ಯೋಗೇಶ್ ಈ ಹೇಳಿಕೆ ನೀಡಿದ್ದಾರೆ.

    ಲಾಠಿಜಾರ್ಜ್ ವೇಳೆ ಪೊಲೀಸರು ಜನರನ್ನ ಅಮಾನುಷವಾಗಿ ಹೊಡೆದಿದ್ದಾರೆಂದು ಆರೋಪಿಸಿದ ಯೋಗೇಶ್, ಮಮತಾ ಅವರನ್ನು ರಾಕ್ಷಸಿ ಎಂದು ಕರೆದಿದ್ದಾರೆ. ವಿಡಿಯೋ ನೋಡಿದಾಗ ನನಗೆ ಅನ್ನಿಸಿದ್ದು ಒಂದೇ. ಯಾರಾದ್ರೂ ಮಮತಾ ಬ್ಯಾನರ್ಜಿ ತಲೆ ಕಡಿದು ತಂದ್ರೆ ನಾನು ಅವರಿಗೆ 11 ಲಕ್ಷ ರೂ. ಕೊಡ್ತೀನಿ ಅಂತ ಯೋಗೇಶ್ ಹೇಳಿದ್ದಾರೆ.

    ಮೆರವಣಿಗೆಯಲ್ಲಿ ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದು ಭಕ್ತರೇ ಹೊರತು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಮಮತಾ ಬ್ಯಾನರ್ಜಿ ಹಿಂದೂಗಳನ್ನ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಯೋಗೇಶ್ ಆರೋಪಿಸಿದ್ದಾರೆ.

    ಭಾನುವಾರದಂದು ಹನುಮಾನ್ ಜಯಂತಿ ಪ್ರಯುಕ್ತ ಬಿರ್ಭುಮ್ ಜಿಲ್ಲೆಯಲ್ಲಿ ಮೆರವಣಿಗೆ ಹಮ್ಮಿಕೊಳ್ಳಲು ಪೊಲೀಸರು ಅನುಮತಿ ನಿರಾಕರಿಸಿದ್ದರು. ಮೆರವಣಿಗೆ ಮದ್ರಾಸಾ ರೋಡ್ ಬೀದಿ ಪ್ರವೇಶಿದುತ್ತಿದ್ದಂತೆ ಲಾಠಿ ಚಾರ್ಜ್ ಮಾಡಲಾಯಿತು ಎಂದು ವರದಿಯಾಗಿದೆ.