Tag: ಮತ ಏಣಿಕೆ

  • NDA vs I.N.D.I.A ನೆಕ್‌ ಟು ನೆಕ್‌ ಫೈಟ್‌ – ಎನ್‌ಡಿಎ 295 ಕ್ಷೇತ್ರಗಳಲ್ಲಿ ಮುನ್ನಡೆ

    NDA vs I.N.D.I.A ನೆಕ್‌ ಟು ನೆಕ್‌ ಫೈಟ್‌ – ಎನ್‌ಡಿಎ 295 ಕ್ಷೇತ್ರಗಳಲ್ಲಿ ಮುನ್ನಡೆ

    ನವದೆಹಲಿ: 2024ರ ಲೋಕಸಭಾ ಚುನಾವಣೆಯ (Lok Sabha Elections) ಮತ ಎಣಿಕೆಯಲ್ಲಿ ಸದ್ಯ ಎನ್‌ಡಿಎ ಹಾಗೂ ಇಂಡಿಯಾ (NDA vs I.N.D.I.A) ಒಕ್ಕೂಟದ ನಡುವೆ ಟಫ್‌ ಫೈಟ್‌ ಶುರುವಾಗಿದೆ.

    ಬೆಳಗ್ಗೆ 9:45ರ ವೇಳೆಗೆ ಎನ್‌ಡಿಎ 295, ಇಂಡಿಯಾ ಒಕ್ಕೂಟ 214 ಹಾಗೂ ಇತರೇ ಪಕ್ಷಗಳು 29 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇದನ್ನೂ ಓದಿ: ಅಂಚೆ ಮತದಾನದಲ್ಲಿ ಎನ್‌ಡಿಎ 304, ಇಂಡಿಯಾ ಕೂಟ 167, ಇತರೆ 30 ಕ್ಷೇತ್ರಗಳಲ್ಲಿ ಮುನ್ನಡೆ

    ಉತ್ತರ ಪ್ರದೇಶದ (Uttar Pradesh) ಹೈವೋಲ್ಟೇಜ್‌ ಕ್ಷೇತ್ರಗಳಾಗಿದ್ದ ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರು ಸತತವಾಗಿ ಹಿನ್ನಡೆ ಅನುಭವಿಸಿದ್ದರೆ, ರಾಯ್‌ ಬರೇಲಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ ಯುಪಿನಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ ಗುಜಜರಾತ್‌, ರಾಜಸ್ಥಾನ, ಹರಿಯಾಣ ಹಾಗೂ ಒಡಿಶಾ ರಾಜ್ಯಗಳಲ್ಲಿ ಎನ್‌ಡಿಎ ಆರಂಭಿಕ ಮುನ್ನಡೆಯಲ್ಲಿದ್ದು, ಇಂಡಿಯಾ ಕೂಟ ಸಹ ಟಫ್‌ ಫೈಟ್‌ ನೀಡುತ್ತಿದೆ.

    ಕರ್ನಾಟಕದಲ್ಲಿ (Karnataka) ಬಿಜೆಪಿ 19, ಜೆಡಿಎಸ್‌ 3 ಹಾಗೂ ಕಾಂಗ್ರೆಸ್‌ 6 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: ಸಾಕ್ಷ್ಯಗಳಿದ್ದ 9 ಫೋನ್‌ ನಾಶ – ಸ್ಟಾರ್‌ ಹೋಟೆಲ್‌ನಲ್ಲಿ 10 ಲಕ್ಷ ರೂ. ಮೌಲ್ಯದ ರೂಮ್‌ನಲ್ಲಿ ವಾಸ!

  • ಜನ ಕೆಲಸಕ್ಕೆ ಮನ್ನಣೆ ನೀಡ್ತಾರೆ, ಹಣಕ್ಕಲ್ಲ: ದಿನೇಶ್ ಗುಂಡೂರಾವ್ ಗೆ ಐಶ್ವರ್ಯ ಟಾಂಗ್

    ಜನ ಕೆಲಸಕ್ಕೆ ಮನ್ನಣೆ ನೀಡ್ತಾರೆ, ಹಣಕ್ಕಲ್ಲ: ದಿನೇಶ್ ಗುಂಡೂರಾವ್ ಗೆ ಐಶ್ವರ್ಯ ಟಾಂಗ್

    ಬೆಂಗಳೂರು: ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ನಾಗರಾಜ್ ಅವರು 1,939 ಮತಗಳ ಅಂತರದಲ್ಲಿ ಜಯಸಾಧಿಸಿದ್ದಾರೆ.

    ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ಅವರು 7,188 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಅವರು 5,243 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಬಿಜೆಪಿಯ ಚಾಮುಂಡೇಶ್ವರಿ ಅವರು 2,445 ಮತಗಳನ್ನು ಪಡೆದಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರ ಅಧೀನದಲ್ಲಿದ್ದ ಬಿನ್ನಿಪೇಟೆ ವಾರ್ಡ್, ಈ ಬಾರಿ ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದನ್ನು ಓದಿ: ಇಂದು ಬಿನ್ನಿಪೇಟೆ ವಾರ್ಡ್ ಉಪಚುನಾವಣೆ ಫಲಿತಾಂಶ

    ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಐಶ್ವರ್ಯ ನಾಗರಾಜ್ ಅವರು, ನಮ್ಮ ತಾಯಿ ಈ ಗೆಲುವಿನ ಮೂಲಕ ಜೀವಂತವಾಗಿದ್ದಾರೆ ಎನ್ನುತ್ತ ದಿವಂಗತ ಮಹದೇವಮ್ಮ ಅವರನ್ನು ನೆನೆದು ಭಾವುಕರಾದರು. ಈ ಗೆಲುವನ್ನು ಜೆಡಿಎಸ್ ವರಿಷ್ಠ ದೇವೇಗೌಡ, ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಕ್ಷೇತ್ರದ ಜನತೆಗೆ ಅರ್ಪಿಸುತ್ತೇನೆ. ನನ್ನ ತಂದೆ-ತಾಯಿ ಅವರ ಸೇವೆಯನ್ನು ಜನ ಗುರುತಿಸಿದ್ದಾರೆ ಎಂದು ನೆನೆಪಿಸಿಕೊಂಡರು.

    ಜನ ಕೆಲಸಕ್ಕೆ ಮನ್ನಣೆ ನೀಡುತ್ತಾರೆ, ಹಣಕ್ಕೆ ಅಲ್ಲ ಎನ್ನುವ ಸಂದೇಶವನ್ನು ಮತದಾರರು ತಿಳಿಸಿದ್ದಾರೆ. ಬಿನ್ನಿಪೇಟೆ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಇಲ್ಲದೆ ಬಿನ್ನಿಪೇಟೆ ಇಲ್ಲ ಎಂದು ದಿನೇಶ್ ಗುಂಡೂರಾವ್ ಭಾವಿಸಿದ್ದರು. ಅದರೆ ಈಗ ಬಿನ್ನಿಪೇಟೆ ಅಂದ್ರೆ ಬಿಟಿಎಸ್ ನಾಗರಾಜ್ ಅಂತಾ ಜನ ಉತ್ತರಿಸಿದ್ದಾರೆ ಎಂದು ಗುಂಡೂರಾವ್ ವಿರುದ್ಧ ಐಶ್ವರ್ಯ ವಾಗ್ದಾಳಿ ನಡೆಸಿದರು.

    https://youtu.be/NjT2yLFgZZ4