Tag: ಮಂಗಳೂರು

  • ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್

    ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್

    ಬೆಂಗಳೂರು/ಮಂಗಳೂರು: ತಲೆಬುರುಡೆ ರಹಸ್ಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ ಎಂದು ಯೂಟ್ಯೂಬರ್ ಸಮೀರ್ (Youtuber Sameer) ಪ್ರತಿಕ್ರಿಯಿಸಿದ್ದಾರೆ.

    `ಪಬ್ಲಿಕ್ ಟಿವಿ’ (PUBLiC TV) ಜೊತೆ ಎಸ್‌ಐಟಿ ನೋಟಿಸ್ (SIT Notice) ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಈವರೆಗೂ ಎಸ್‌ಐಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನನಗೆ ಬೆಳ್ತಂಗಡಿ ಠಾಣಾ ಪೊಲೀಸರಿಂದ (Belthangady)  ನೋಟಿಸ್ ಬಂದಿತ್ತು. ಅದಕ್ಕಾಗಿ ಮೂರು ದಿನ ಬೆಳ್ತಂಗಡಿ ಠಾಣೆಗೆ ವಿಚಾರಣೆಗಾಗಿ ಹೋಗಿದ್ದೆ. ಅದು ಮುಗಿದಿದೆ. ಎಲ್ಲ ವಿಷಯವಾಗಿ ಶೀಘ್ರದಲ್ಲೇ ಕ್ಲ್ಯಾರಿಟಿ ಕೊಡ್ತೀನಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಚಿಕ್ಕಮಗಳೂರು | ಗಣೇಶ ಉತ್ಸವದಲ್ಲಿ ಡ್ಯಾನ್ಸ್ ಮಾಡ್ತಿದ್ದ ಯುವತಿಯರ ಮೇಲೆ ನೋಟು ತೂರಿ ದರ್ಪ

    ಇನ್ನೂ ವಿದೇಶದಿಂದ ಫಂಡಿಂಗ್ ಮಾಡಿದ್ದಾರೆ ಎಂಬ ವಿಚಾರವಾಗಿ ಮಾತನಾಡಿ, ನಾನು ಆ ವಿಚಾರವಾಗಿ ಮಾತಾನಾಡಲ್ಲ. ಪೊಲೀಸರ ತನಿಖೆ ನಡೆಯುತ್ತಿದೆ, ಬಳಿಕ ಸತ್ಯ ಹೊರಗಡೆ ಬರುತ್ತೆ. ಆರೋಪಗಳಿಗೆಲ್ಲಾ ಉತ್ತರ ಕೊಟ್ಟುಕೊಂಡು ಕೂರಕ್ಕೆ ಆಗಲ್ಲ. ಪೊಲೀಸರು ವಿಚಾರಣೆ ಮಾಡ್ತಿದ್ದಾರಲ್ಲ, ಅವರೇ ಎಲ್ಲವನ್ನೂ ಬಹಿರಂಗ ಮಾಡ್ತಾರೆ ಎಂದು ಹೇಳಿದ್ದಾರೆ

    ಇದೇ ವೇಳೆ ಅನನ್ಯಾ ಭಟ್ ವಿಚಾರವಾಗಿ ಮಾತನಾಡಿ, ನಾನು ನನ್ನ ಯೂಟ್ಯೂಬ್ ಚಾನೆಲ್ ಮೂಲಕ ಶೀಘ್ರದಲ್ಲೇ ಎಲ್ಲ ವಿಷಯಗಳಿಗೂ ಕ್ಲ್ಯಾರಿಟಿ ಕೊಡುತ್ತೇನೆ ಎಂದಿದ್ದಾರೆ.ಇದನ್ನೂ ಓದಿ: Exclusive: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ರೂ. ದಂಡ

  • ಧರ್ಮಸ್ಥಳ ಕೇಸ್-‌ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಎಸ್‌ಐಟಿ ಕಸ್ಟಡಿ ನಾಳೆಗೆ ಅಂತ್ಯ

    ಧರ್ಮಸ್ಥಳ ಕೇಸ್-‌ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಎಸ್‌ಐಟಿ ಕಸ್ಟಡಿ ನಾಳೆಗೆ ಅಂತ್ಯ

    * ಕೋರ್ಟ್‌ನಲ್ಲಿ 10-15 ದಿನ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ

    ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿದಂತೆ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನ (Chinnayya) ಎಸ್‌ಐಟಿ ಕಸ್ಟಡಿ ಬುಧವಾರಕ್ಕೆ ಅಂತ್ಯ ಆಗಲಿದೆ. ನಾಳೆ ಚಿನ್ನಯ್ಯನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು.

    ಚಿನ್ನಯ್ಯ ಕಳೆದ 10 ದಿನಗಳಿಂದ ಎಸ್‌ಐಟಿ ಕಸ್ಟಡಿಯಲ್ಲಿದ್ದ. ನಾಳೆ ಆರೋಪಿಯನ್ನು ಬೆಳ್ತಂಗಡಿ ಕೋರ್ಟಿಗೆ ಹಾಜರುಪಡಿಸಲಾಗುವುದು. ಚಿನ್ನಯ್ಯ ವಾಸವಿದ್ದ ಮಂಡ್ಯ-ತಮಿಳುನಾಡು ಸ್ಥಳ ಮಹಜರು ಬಾಕಿ ಇದೆ. ಹೀಗಾಗಿ, ಮತ್ತೆ 10 ರಿಂದ 15 ದಿನ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಇದನ್ನೂ ಓದಿ: ಧರ್ಮಸ್ಥಳ ಪರ ಬಿಜೆಪಿ `ಧರ್ಮ’ ಸಮರ – ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹ

    Dharmasthala Chinnayya 2

    ನಿನ್ನೆ ಕೂಡ ಸಂಜೆ 7 ಗಂಟೆ ಬಳಿಕ ಎಸ್‌ಐಟಿ ಸ್ಥಳ ಮಹಜರು ನಡೆಸಿತ್ತು. ಮತ್ತೆ ವಶಕ್ಕೆ ಪಡೆದು ಮಂಡ್ಯ-ತಮಿಳುನಾಡು ಭೇಟಿ ಸಾಧ್ಯತೆ ಇದೆ. ಇವತ್ತು ಚಿನ್ನಯ್ಯನನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಲಿದೆ.

    ಧರ್ಮಸ್ಥಳದ ಭಾಗದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನ ವಿಚಾರಣೆ ನಡೆದಿತ್ತು. ಆತ ತೋರಿಸಿದ ಸ್ಥಳಗಳಲ್ಲಿ ಶವಗಳ ಉತ್ಖನನ ನಡೆದಿತ್ತು. ಎರಡು ಸ್ಥಳಗಳಲ್ಲಿ ಬಿಟ್ಟರೆ, ಇನ್ಯಾವ ಕಡೆಯೂ ಯಾವುದೇ ಕುರುಹು ದೊರೆಯಲಿಲ್ಲ. ಇದಾದ ಬಳಿಕ ಹೆಚ್ಚಿನ ವಿಚಾರಣೆಗೆ ಚಿನ್ನಯ್ಯನನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ

  • ಅಧಿಕಾರಿ ಹೆಸರಲ್ಲಿ ಸುಳ್ಳು ಮಾಹಿತಿ ಆರೋಪ – ಮಟ್ಟಣ್ಣನವರ್‌, ತಿಮರೋಡಿ ಸೇರಿ ಮೂವರ ವಿರುದ್ಧ FIR

    ಅಧಿಕಾರಿ ಹೆಸರಲ್ಲಿ ಸುಳ್ಳು ಮಾಹಿತಿ ಆರೋಪ – ಮಟ್ಟಣ್ಣನವರ್‌, ತಿಮರೋಡಿ ಸೇರಿ ಮೂವರ ವಿರುದ್ಧ FIR

    ಮಂಗಳೂರು: ವ್ಯಕ್ತಿಯೊಬ್ಬರನ್ನ ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಂತ ಪರಿಚಯಿಸಿ‌ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಗಿರೀಶ್‌ ಮಟ್ಟಣ್ಣನವರ್‌ (Girish Mattannavar) ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

    ಶ್ರೀಕ್ಷೇತ್ರ ಧರ್ಮಸ್ಥಳದ (Dharmasthala) ಭಕ್ತ ಪ್ರವೀಣ್ ಕೆ.ಆರ್ ಎಂಬುವವರು ನೀಡಿದ ದೂರಿನಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (Belthangady Police Station) ಎಫ್‌ಐಆರ್‌ ದಾಖಲಾಗಿದೆ. ಮಟ್ಟಣ್ಣನವರ್, ತಿಮರೋಡಿ, ಮದನ್ ಬುಗುಡಿ ವಿರುದ್ಧ ಕೇಸ್‌ ದಾಖಲಾಗಿದೆ.

    ಈ ಹಿಂದೆ ಮಟ್ಟಣ್ಣನವರ್‌ ಮಾಧ್ಯಮಗಳ ಎದುರು ಮಾತನಾಡುವ ವೇಳೆ ಮದನ್ ಬುಗುಡಿಯನ್ನ ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಪರಿಚಯಿಸಿದ್ದರು. ಇದು ಸುಳ್ಳು ಎಂದು ಆರೋಪಿಸಿ ಪ್ರವೀಣ್‌ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ 204, 319(2), 353(2) ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.

    ಈಗಾಗಲೇ ಬುರುಡೆ ಗ್ಯಾಂಗ್ ಬೆನ್ನತ್ತಿರುವ ಎಸ್‌ಐಟಿ ಅಧಿಕಾರಿಗಳು ತನಿಖೆಯ ಹಂತವಾಗಿ ಬೆಂಗಳೂರಿಗೆ ಬಂದು ತನಿಖೆ ನಡೆಸಿದ್ದಾರೆ. ಹೀಗಾಗಿ ಮಂಡ್ಯ, ತಮಿಳುನಾಡಿಗೂ ಹೋಗಿ ವಿಚಾರಣೆ ನಡೆಸುತ್ತಾ ಅನ್ನೋ ಪ್ರಶ್ನೆಗಳು ಮೂಡಿವೆ. ಬೆಂಗಳೂರಲ್ಲಿ ನಿನ್ನೆ ಇವತ್ತು ತೀವ್ರ ಶೋಧ ನಡೆಸಿದ್ದು ಮಂಡ್ಯ, ತಮಿಳುನಾಡಿಗೂ `ಬುರುಡೆ’ ತನಿಖೆ ವಿಸ್ತರಣೆ ಆಗೋ ಸಾಧ್ಯತೆ ಇದೆ.

    ಚಿನ್ನಯ್ಯನ ಹುಟ್ಟೂರು ಮಂಡ್ಯದ ಚಿಕ್ಕಬಳ್ಳಿ, 2ನೇ ಪತ್ನಿ ಜೊತೆ ಚಿನ್ನಯ್ಯ ವಾಸವಿದ್ದ ತಮಿಳುನಾಡಲ್ಲೂ ತನಿಖೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರಂತೆ.ಇನ್ನು ಬುರುಡೆಗೆ ಗ್ಯಾಂಗ್‌ನ ಎ1 ಚಿನ್ನಯ್ಯನ ಪೊಲೀಸ್ ಕಷ್ಟಡಿ ನಾಳೆ ಅಂತ್ಯವಾಗಲಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ನಾಳೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಚಿನ್ನಯ್ಯನನ್ನು ಹಾಜರುಪಡಿಸಲಿದ್ದಾರೆ. ಮತ್ತೆ ಕಸ್ಟಡಿಗೆ ಪಡೆದು ಮಂಡ್ಯ ಹಾಗೂ ತಮಿಳುನಾಡಿನಲ್ಲಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.

  • ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ಅಪಮಾನ, ಅಪಪ್ರಚಾರವನ್ನು ಬಿಜೆಪಿ ಸಹಿಸುವುದಿಲ್ಲ: ಕ್ಯಾ.ಬ್ರಿಜೇಶ್ ಚೌಟ

    ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ಅಪಮಾನ, ಅಪಪ್ರಚಾರವನ್ನು ಬಿಜೆಪಿ ಸಹಿಸುವುದಿಲ್ಲ: ಕ್ಯಾ.ಬ್ರಿಜೇಶ್ ಚೌಟ

    ಬೆಂಗಳೂರು/ಮಂಗಳೂರು: ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ಅಪಮಾನ, ಅಪಪ್ರಚಾರ ಮಾಡುವುದನ್ನು ಬಿಜೆಪಿ (BJP) ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇಡೀ ರಾಜ್ಯ ಮತ್ತು ದೇಶಕ್ಕೆ ನಾಳೆ (ಸೆ.1) ನಡೆಯುವ ‘ಧರ್ಮಸ್ಥಳ ಚಲೋ’ (Dharmasthala Chalo) ಸಮಾವೇಶದಲ್ಲಿ ನೀಡಲಿದ್ದೇವೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ (Captain Brijesh Chowta) ತಿಳಿಸಿದ್ದಾರೆ.

    ಶ್ರೀ ಕ್ಷೇತ್ರ ಧರ್ಮಸ್ಥಳಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಯಾವಾಗಲೂ ಸನಾತನ ಧರ್ಮದ ಸಂಸ್ಕೃತಿ ಮತ್ತು ಜೊತೆಗೆ ಹಿಂದೂ ಶ್ರದ್ಧಾ ಕೇಂದ್ರಗಳ ಜೊತೆಗೆ, ಹಿಂದೂ ಸಮಾಜದ ಜೊತೆಗೆ ಇದ್ದೇವೆ ಎಂದು ತೋರಿಸುವ ಪ್ರಯತ್ನದಲ್ಲಿ ನಾಳೆ ‘ಧರ್ಮಸ್ಥಳ ಚಲೋ’ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಕು. ಶೋಭಾ ಕರಂದ್ಲಾಜೆ, ಬಿಜೆಪಿ ಕರ್ನಾಟಕ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಬಿಜೆಪಿ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಹಾಗೂ ಲಕ್ಷಾಂತರ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ನಮ್ಮ ಇಡೀ ಕುಟುಂಬ ಧರ್ಮಸ್ಥಳದಲ್ಲಿ ಹುಟ್ಟಿ ಬಹಳ ಪುಣ್ಯ ಮಾಡಿದೆ: ಡಿ.ವೀರೇಂದ್ರ ಹೆಗ್ಗಡೆ

    ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪುಣ್ಯಕ್ಷೇತ್ರದ ವಿರುದ್ಧ ಹಲವಾರು ಅಪಪ್ರಚಾರಗಳು, ಆರೋಪ ಮಾಡಲಾಗುತ್ತಿದೆ. ಸುಳ್ಳು ಆಪಾದನೆಗಳು, ಯಾವುದೇ ಸಾಕ್ಷ್ಯಾಧಾರವಿಲ್ಲದೆ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ನಡೆಯಲಿದೆ. ಕ್ಷೇತ್ರದ ಪಾವಿತ್ರ‍್ಯಕ್ಕೆ ಯಾವುದೇ ಧಕ್ಕೆಯಾಗಬಾರದು. ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ನಂಬಿಕೊಂಡಿರುವ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ಆಗಬಾರದು. ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಅಪಪ್ರಚಾರ ಆಗಬಾರದು ಎಂಬ ಉದ್ದೇಶದಿಂದ ಸಮಾವೇಶವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಈದ್ ಮಿಲಾದ್ ಬಗ್ಗೆ ಮಾತ್ರ ಯಾಕೆ ಮಕ್ಕಳು ಅಧ್ಯಯನ ಮಾಡಬೇಕು – ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

    ಬಿಜೆಪಿಯು ಕಾನೂನು, ಸಂವಿಧಾನ ಮತು ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ನಂಬಿಕೆ ಮತ್ತು ಶ್ರದ್ಧೆಯನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಒಂದು ಪಕ್ಷ. ಧರ್ಮಸ್ಥಳದ ಎಸ್‌ಐಟಿ ತನಿಖೆಯನ್ನು ಬಿಜೆಪಿ ಸ್ವಾಗತಿಸಿತ್ತು. ಆದರೆ ತನಿಖೆ ಯಾವ ರೀತಿ ಹೋಗುತ್ತಿದೆ ಎಂಬ ಸಂಶಯವಿದೆ. ಕಮ್ಯುನಿಸ್ಟರು, ಎಸ್‌ಡಿಪಿಐ, ಮತ್ತು ಪಿಎಫ್‌ಐ ಸಂಘಟನೆಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಇದನ್ನೂ ಓದಿ: ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ: ಸಿದ್ದರಾಮಯ್ಯ

    ಷಡ್ಯಂತ್ರ ನಡೆಸಿದವರ ವಿರುದ್ಧ ಕ್ರಮಕ್ಕೆ ತಮ್ಮೇಶ್ ಗೌಡ ಆಗ್ರಹ:
    ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರುವವರ ಮೇಲೆ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಅವರು ಆಗ್ರಹಿಸಿದರು. ಎಸ್‌ಐಟಿ ತನಿಖೆಯ ದಿಕ್ಕು ಸರಿಯಿಲ್ಲ ಎಂದು ಆಕ್ಷೇಪಿಸಿದರು. ಧರ್ಮಸ್ಥಳ ಪ್ರಕರಣ ಸಂಬಂಧ ಕೇರಳ ರಾಜ್ಯದಲ್ಲಿ, ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ, ಚರ್ಚೆಯಾಗುತ್ತದೆ. ತಮಿಳುನಾಡಿನ ಸಂಸದರು ಕೂಡ ಈ ಪ್ರಕರಣದಲ್ಲಿ ಭಾಗವಹಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸುತ್ತಿದೆ. ಎಲ್ಲಾ ಆಯಾಮಗಳ ಹಿನ್ನೆಲೆಯಲ್ಲಿ ಧರ್ಮಸ್ಥಳ ಪ್ರಕರಣವನ್ನು ಎನ್‌ಐಗೆ ವಹಿಸಲು ಆಗ್ರಹಿಸಿದರು. ಇದನ್ನೂ ಓದಿ: ಪೊಲೀಸ್‌ ಅಧಿಕಾರಿಗಳನ್ನೂ ಬಿಡದ ಸೈಬರ್‌ ವಂಚಕರು – ಕೆಜಿಎಫ್‌ ಎಸ್ಪಿ ಫೇಸ್‌ಬುಕ್‌, ಇನ್‌ಸ್ಟಾ ಖಾತೆ ನಕಲು

    ರಾಜ್ಯ ಸರ್ಕಾರ ಅನಾಮಿಕ ವ್ಯಕ್ತಿಯ ಪೂರ್ವಪರ ವಿಚಾರಣೆ ನಡೆಸಲಿಲ್ಲ. ಅನಾಮಿಕ ವ್ಯಕ್ತಿ ತಂದು ಕೊಟ್ಟ ಬುರುಡೆಯನ್ನು ತನಿಖೆಗೂ ಮುನ್ನ ಪರಿಶೀಲಿಸಿಲ್ಲ. ನೂರಾರು ಶವ ಹೂತುಹಾಕಿ ಅಪರಾಧ ಮಾಡಿರುವ ವ್ಯಕ್ತಿಯನ್ನು ರಾಜ ಮರ್ಯಾದೆ ನೀಡಿ ನಡೆಸುತ್ತಿರುವ ಎಸ್‌ಐಟಿ ತನಿಖೆಯ ಕುರಿತು ಹಲವಾರು ಸಂಶಯಗಳು ಕಾಣುತ್ತಿವೆ ಎಂದು ಆರೋಪಿಸಿದರು. ಇದನ್ನೂ ಓದಿ: 22 ವರ್ಷದ ಯುವತಿ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ

    ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು ದೇಶಾದ್ಯಾಂತ ಮತ್ತು ರಾಜ್ಯಾದ್ಯಾಂತ ಇದ್ದಾರೆ. ಹಿಂದೂ ಧಾರ್ಮಿಕ ಕ್ಷೇತ್ರದ ಮೇಲೆ ಯಾರೋ ವ್ಯಕ್ತಿಗಳು ಆರೋಪ ಮಾಡಿದಾಗ ಅದನ್ನು ಪರಿಶೀಲಿಸಬೇಕಾಗಿರುವ ಜವಾಬ್ದಾರಿಯನ್ನು ಈ ಸರ್ಕಾರ ಮಾಡಿದೆಯೇ ಎಂದು ಪ್ರಶ್ನಿಸಿದರು. ಧರ್ಮಸ್ಥಳ ಪ್ರಕರಣವು ಎಡಪಂಥೀಯರ, ನಗರ ನಕ್ಸಲರ, ಅಂತರಾಷ್ಟ್ರೀಯ ಮಟ್ಟದ ಏಜೆಂಟ್‌ಗಳ ಮತ್ತು ಸರ್ಕಾರ ಪ್ರಭಾವಿ ವ್ಯಕ್ತಿಗಳ ಪ್ರಭಾವದಿಂದ ಆಗಿದೆಯೋ ಎನ್ನುವುದು ಎನ್‌ಐಎ ತನಿಖೆಯಲ್ಲಿ ತಿಳಿಯಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಚಿನ್ನಯ್ಯ ಈಗ ಡಬಲ್‌ ಗೇಮ್‌ ಆಡುತ್ತಿದ್ದಾನೆ: ಜಯಂತ್‌

    ರಾಜ್ಯ ಸರ್ಕಾರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿಚಾರವಾಗಿ ಯಾರಾದರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದರೆ ಅವರ ಮೇಲೆ ಸಂಜೆಯೊಳಗೆ ಎಫ್‌ಐಆರ್ ದಾಖಲಿಸಿ ಬಂಧಿಸುತ್ತಾರೆ. ಒಬ್ಬ ಅನ್ಯ ಧರ್ಮೀಯ ವ್ಯಕ್ತಿ ಹಿಂದೂ ಧರ್ಮದ ದೇವಸ್ಥಾನದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾನೆ. ಅವನಿಗೆ ನೋಟಿಸ್ ನೀಡುವ ನೆಪದಲ್ಲಿ ಅವನ ಮೇಲೆ ಎಫ್‌ಐಆರ್ ಹಾಕಲಾಗಿದೆ. ಹಾಗಿದ್ದಲ್ಲಿ ಸರ್ಕಾರದ ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನೆಲಮಂಗಲ ಹಾಸನ ಟೋಲ್‌ನಲ್ಲಿ ವಾಹನ ಸವಾರರಿಗೆ ಬರೆ – ಸೆ.1 ರಿಂದ ದರ ಏರಿಕೆ

    ಹಿಂದೂ ಧರ್ಮೀಯ ಇನ್ನೊಂದು ಧರ್ಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗ ಧಾರ್ಮಿಕ ಗಲಭೆ, ಧಾರ್ಮಿಕ ಪ್ರಚೋದನೆ ಉಂಟಾಗುತ್ತದೆ ಎಂದು ಕೇಸ್ ಹಾಕುತ್ತಾರೆ. ಹಾಗಿದ್ದರೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿರುವ ಸಮೀರ್ ವ್ಯಕ್ತಿಯ ಮೇಲೆ ಯಾವ ಕಾರಣಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದರು. ಇದನ್ನೂ ಓದಿ: ಮಹಾರಾಷ್ಟ್ರ | ಮತ್ತೊಬ್ಬಳನ್ನು ಮದುವೆಯಾಗುವ ಆಸೆಗೆ ಪ್ರೇಯಸಿಯನ್ನೇ ಕೊಂದ ಪ್ರಿಯಕರ

    ಈ ವೇಳೆ ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಬಿಜೆಪಿ ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡಂಜಿ, ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು. ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಜೆಡಿಎಸ್ ಸತ್ಯ ಯಾತ್ರೆ

  • ವೇಗವಾಗಿ ಬಂದು ಆಟೋಗೆ ಗುದ್ದಿದ KSRTC; ಮತ್ತೆ ರಿವರ್ಸ್‌ ಆಗಿ ಪ್ರಯಾಣಿಕರು, ಆಟೋಗೆ ಡಿಕ್ಕಿ – ತಲಪಾಡಿ ಆಕ್ಸಿಡೆಂಟ್‌ ಹೇಗಾಯ್ತು?

    ವೇಗವಾಗಿ ಬಂದು ಆಟೋಗೆ ಗುದ್ದಿದ KSRTC; ಮತ್ತೆ ರಿವರ್ಸ್‌ ಆಗಿ ಪ್ರಯಾಣಿಕರು, ಆಟೋಗೆ ಡಿಕ್ಕಿ – ತಲಪಾಡಿ ಆಕ್ಸಿಡೆಂಟ್‌ ಹೇಗಾಯ್ತು?

    – ಬಸ್‌ ಚಾಲಕನ ಅತಿ ವೇಗ, ಅಜಾಗರೂಕತೆ ಅಪಘಾತಕ್ಕೆ ಕಾರಣ: ಕೆಎಸ್‌ಆರ್‌ಟಿಸಿ ಸ್ಪಷ್ಟನೆ

    ಬೆಂಗಳೂರು/ಮಂಗಳೂರು: ತಲಪಾಡಿಯಲ್ಲಿ ಸಂಭವಿಸಿದ ಅಪಘಾತದಲ್ಲಿ 6 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್‌ ಚಾಲಕನ ಅತಿವೇಗ, ಅಜಾಗರೂಕತೆಯೇ ಕಾರಣ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ.

    ಕೆಎಸ್‌ಆರ್‌ಟಿಸಿ ಸ್ಪಷ್ಟನೆ ಏನು?
    ಬಸ್‌ ಚಾಲಕ ನಿಜಲಿಂಗಪ್ಪ ಚಲವಾದಿಯ ಅಜಾಗರೂಕತೆಯಿಂದ ಅಪಘಾತವಾಗಿದೆ. ಕಾಸರಗೋಡಿನಿಂದ ಹೊರಟಿದ್ದ ಬಸ್‌ (ನಂ. KA19F3407), ತಲಪಾಡಿ ಟೋಲ್‌ಗಿಂತ 150 ಮೀಟರ್‌ ಹಿಂದೆಯೇ ಅಪಘಾತವಾಗಿದೆ. ನಿಗಮದ ಚಾಲಕರು ತಮ್ಮ ವಾಹನವನ್ನು ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬರುವ ಸಮಯದಲ್ಲಿ ಏಕಾಏಕಿ ರಸ್ತೆಗೆ ಆಟೋವೊಂದು ಅಡ್ಡ ಬಂದಿದೆ. ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಬ್ರೇಕ್ ಹಾಕಿದ್ದಾರೆ. ಅಷ್ಟರಲ್ಲಿ ಬಸ್ ಆಟೋಗೆ ಹೊಡೆದಿದೆ. ಆ ಸಂದರ್ಭದಲ್ಲಿ ಬಸ್‌ ಡಿಕ್ಕಿಯಾಗಿ ಹಠಾತ್ತನೆ ಸ್ಜೀಡ್ ಆಗಿ ತಿರುಗಿದೆ. ಚಾಲಕರು ಚಾಲನಾ ಸೀಟಿನಿಂದ ಜಿಗಿದು ಎಸ್ಕೇಪ್‌ ಆಗಿದ್ದಾರೆ. ವಾಹನವು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದೆ.

    ಅಪಘಾತದಲ್ಲಿ ಮುಂದಿನಿಂದ ಡಿಕ್ಕಿ ಹೊಡೆದ ಆಟೋದಲ್ಲಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದ ಆಟೋ ಚಾಲಕ ಸೇರಿ 4 ಜನ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರೂ ಮೃತಪಟ್ಟಿರುತ್ತಾರೆ.‌ ಹಿಂಬದಿಯಿಂದ ಡಿಕ್ಕಿಯಾಗಿದ್ದ ಇಬ್ಬರು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವಾದ ಬಸ್‌ನ್ನು 2025ರ ಆ.27 ರಂದು ಮಾರ್ಗಸಂಖ್ಯೆಗೆ ನಿಯೋಜಿಸಿದ್ದು, ಅಪಘಾತ ಸಮಯದ ವರೆಗೆ 10 ಸುತ್ತುವಳಿಯಲ್ಲಿ ಒಟ್ಟಾರೆ 540 ಕಿಮೀ ಪ್ರಯಾಣ ಮಾಡಿದೆ. ಅಲ್ಲದೇ ಈ ವಾಹನವು ಆ.26 ರಂದು FC ನವೀಕರಣ ಆಗಿ ಬಂದಿದ್ದು, ಯಾವುದೇ ತಾಂತ್ರಿಕ ದೋಷದಿಂದ ಅಪಘಾತವು ಸಂಭವಿಸಲು ಸಾಧ್ಯವಿಲ್ಲ. ಸದರಿ ಚಾಲಕರು ಸುಮಾರು 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಮಾರ್ಗದಲ್ಲಿಯೇ ಸುಮಾರು 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.

    ಗಾಯಗೊಂಡ ಇತರೆ ಸಾರ್ವಜನಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ. ನಿಗಮವು ಈ ಅಪಘಾತಕ್ಕೆ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ. ಅಪಘಾತ ತಪ್ಪಿಸಲು‌ ನಿರಂತರ ತರಬೇತಿ, ತಿಳುವಳಿಕೆ ಮತ್ತು ಜಾಗೃತ‌ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾಗ್ಯೂ ಸಹ, ಈ‌ ರೀತಿಯ ಅಪಘಾತಗಳು ಸಂಭವಿಸಿರುವುದು ಅತ್ಯಂತ ದುಃಖಕರ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ‌ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು‌ ಕಲ್ಪಿಸಲೆಂದು ನಿಗಮವು ಪ್ರಾರ್ಥಿಸುತ್ತದೆ. ತಪ್ಪಿತಸ್ಥ ಚಾಲಕನ ಮೇಲೆ ವಿಚಾರಣೆ ನಡೆಸಿ ಕಠಿಣ ಕ್ರಮ‌‌ ಜರುಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ – ಆ.29ಕ್ಕೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ – ಆ.29ಕ್ಕೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ (ಆ.29) ರೆಡ್‌ ಅಲರ್ಟ್‌ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಅಂಗನವಾಡಿಯಿಂದ ದ್ವಿತೀಯ ಪಿಯುಸಿ ವರೆಗೆ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೆಚ್‌.ವಿ.ದರ್ಶನ್‌ ತಿಳಿಸಿದ್ದಾರೆ.

    ಜಿಲ್ಲೆಯ ಹಲವೆಡೆ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಸೆ.2 ರ ವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು, ಮಾವೋವಾದಿ, ಜಿಹಾದಿಗಳಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು, ಮಾವೋವಾದಿ, ಜಿಹಾದಿಗಳಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    – ಮಸೀದಿಯಲ್ಲಿ ನಡೆಯೋ ಅತ್ಯಾಚಾರ ಕೇಸ್ ಬಗ್ಗೆ ಮಾತೆತ್ತದ ಮುಸಲ್ಮಾನ ಇಲ್ಲಿ ಯಾಕೆ ಬಂದ: ವಾಗ್ಮಿ ಪ್ರಶ್ನೆ
    – ದಸರಾ ಉದ್ಘಾಟನೆಗೆ ಮುಸಲ್ಮಾನರನ್ನು ಕರೆತಂದಿದ್ದಾರೆ: ಸರ್ಕಾರದ ವಿರುದ್ಧ ಟೀಕೆ

    ಕಾರವಾರ: ಬುರುಡೆ ಗ್ಯಾಂಗ್ ಸಮೀರ್ (Sameer) ಹಿಂದೆ ಎಡಪಂಥೀಯರು, ಮಾವೋವಾದಿಗಳು, ಜಿಹಾದಿಗಳು ಇದ್ದಾರೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಗಂಭೀರ ಆರೋಪ ಮಾಡಿದ್ದಾರೆ.

    ಸಿದ್ದಾಪುರ ತಾಲೂಕಿನ ಮಾವಿನಗುಂಡಿಯಲ್ಲಿ ಮಾತನಾಡಿದ ಅವರು, 2012 ರಲ್ಲಿ ಗಿರೀಶ್ ಮಟ್ಟಣ್ಣನವರ್ ಮೊದಲು ಸೌಜನ್ಯ ಪ್ರರಣದಲ್ಲಿ ಹಿಡಿದುಕೊಂಡು ಬಂದ ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಗಲಾಟೆ ಮಾಡಿದ್ದ. ಇದೇ 2013 ರಲ್ಲಿ ಹಿಡಿದುಕೊಂಡ ವ್ಯಕ್ತಿ ಆರೋಪಿ ಅಲ್ಲ ಎಂದು ಹೇಳುತ್ತಾನೆ. ಇದರಲ್ಲಿ ವೀರೇಂದ್ರ ಹೆಗ್ಗಡೆ ಪರಿವಾರದವರ ಹೆಸರು ಸೇರಿಸುತ್ತಾನೆ. ಧರ್ಮಸ್ಥಳವನ್ನು ಕಿತ್ತುಕೊಳ್ಳಬೇಕು ಎಂಬ ಹುಳ ಅವರಲ್ಲಿ ಹೊಕ್ಕಿದೆ. 2023 ಸಂತೋಷ್ ರಾವ್ ಹೊರ ಬರುತ್ತಾನೆ. ಸ್ಟ್ಯಾನ್ಲಿ ಒಡನಾಡಿ ಸಂಸ್ಥೆ ಮೂಲಕ ಎಂಟ್ರಿಯಾಗಿ ಮನೆ ಮನೆಗೂ ಹೋಗಿ ಪ್ರಚಾರ ಮಾಡುತ್ತಾನೆ. ಸೌಜನ್ಯ ಪ್ರಕರಣದಲ್ಲಿ ಔಟ್‌ಪುಟ್ ಹೊರಗೆ ಬರದೇ ಇದ್ದುದರಿಂದ ಮಾವೂ ವಾದಿಗಳ ಮುಖವಾಡ ಕಳಚಿ ಅವರ ಹಿಂದೆ ಬಂದು ಗಿರೀಶ್ ಮಟ್ಟಣ್ಣನವರ್ ಎಂಟ್ರಿಯಾಗುತ್ತದೆ. ಗಿರೀಶ್ ಮಟ್ಟಣ್ಣನವರ್ ಎಂಟ್ರಿ ಆದ್ಮೇಲೆ ಅವರ ಪೊಲೀಸ್ ಬುದ್ದಿ ಬಳಸಿಕೊಂಡು ಇಲ್ಲಿ ನಡೆಯುವ ಪ್ರತಿಯೊಂದು ಸಾವನ್ನೂ ಧರ್ಮಸ್ಥಳಕ್ಕೆ ಟ್ಯಾಗ್ ಮಾಡುವ ಪ್ರಯತ್ನ ಮಾಡುತ್ತಾರೆ. ಸೌಜನ್ಯ ಪ್ರಕರಣದಿಂದ ಹೊರಬಂದ ಸಂತೋಷ್ ರಾವ್ ಮುಂದಿಟ್ಟುಕೊಂಡು ಧರ್ಮಸ್ಥಳವನ್ನು ಮುಗಿಸುವ ಧಾವಂತ ಇತ್ತು. ಆಗ ಸಮೀರ್‌ನನ್ನು ಕರೆತಂದರು. ಅಲ್ಲಿಗೆ ಜಿಹಾದಿ ಎಲಿಮಿನೇಟ್‌ಗಳ ಎಂಟ್ರಿ ಆಗುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದರು, ಡಿಕೆಶಿ ಹೇಳಿಕೆ ವಾಪಸ್ ಪಡೆಯಲಿ: ವಿ.ಸೋಮಣ್ಣ

    Sameer 1

    ಒಬ್ಬ ಮುಸಲ್ಮಾನ ಬಂದ ಎಂದರೇ ಇದರಲ್ಲಿ ಏನೋ ಇರಬೇಕು. ಒಬ್ಬ ಮುಸಲ್ಮಾನ ತನ್ನ ಮಸೀದಿಯಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತೆತ್ತದವನು ಸೌಜನ್ಯ ಪ್ರಕರಣ ಹಿಡಿದುಕೊಂಡು ಇಲ್ಲಿಗೆ ಏಕೆ ಬಂದ? ಎಐ ವಿಡಿಯೋ ಮಾಡಲು ದುಡ್ಡು ಎಲ್ಲಿಂದ ಬಂತು? ಧರ್ಮಸ್ಥಳದ ಪರ ಹೋರಾಟಗಾರರು ಎಲ್ಲಿ ಬಂದರೂ, ಬೇರೆ ದಾರಿ ಇಲ್ಲದೇ ಎಸ್‌ಡಿಪಿಐ ಎಂಟ್ರಿ ಆಗಿದೆ. ಮೊದಲು ಎಡಪಂಥೀಯರು ಬಂದರು. ಅದರ ಹಿಂದೆ ಇವಾಂಜಿಲಿಸ್ಟ್‌ಗಳು ಬಂದರು, ಅವರ ಹಿಂದೆ ಜಿಹಾದಿಗಳು ಬಂದರು. ಜಿಹಾದಿ ಎಲಿಮಿನೇಟ್ ಮೂಲಕ ಮೊದಲ ಹೆಜ್ಜೆಯಾಗಿ ಸಮೀರ್ ಮುಂದಕ್ಕೆ ಬಂದಿದ್ದಾನೆ. ಸಮೀರ್‌ನ ಹಿಂದೆ ಪೂರ್ತಿ ಬ್ಯಾಕಪ್ ಎಡಪಂಥೀಯರದ್ದು ಇತ್ತು. ಸಮೀರ್ ವಿಡಿಯೋ ಆದ ನಂತರ ಎಲ್ಲರಿಗೂ ಹಂಚಲಾಗಿದೆ ಎಂದು ಆರೋಪಿಸಿದ್ದಾರೆ.

    ಜನರನ್ನು ಬಡಕಾಯಿಸುವುದು ಸಾಮಾನ್ಯ ಯೂಟ್ಯೂಬರ್ ತಲೆಯಲ್ಲ. ಇದರ ಹಿಂದೆ ಯಾರೋ ದೊಡ್ಡದಾಗಿ ಪ್ರಯತ್ನ ಮಾಡುತ್ತಿದ್ದವರು ಇದ್ದಾರೆ. ದಸರಾ ಉದ್ಘಾಟನೆಗೆ ಮುಸಲ್ಮಾನರನ್ನು ಕರೆದುಕೊಂಡು ಬಂದಿದ್ದಾರೆ. ದಸರಾ ಹಿಂದೂಗಳ ಧಾರ್ಮಿಕ ಹಬ್ಬವಾಗಿ ಸೆಲಬ್ರೇಟ್ ಮಾಡುತ್ತೇವೆ. ನಿಸಾರ್ ಅಹ್ಮದ್ ಬಂದಾಗ ಗಲಾಟೆ ಮಾಡಲಿಲ್ಲ. ಏಕೆಂದರೆ ನಿಸಾರ್ ಅಹ್ಮದ್ ಅವರನ್ನು ಬೇರೆಯವರು ಎಂದು ನಾವು ಗಮನಿಸಿಲ್ಲ. ನಮಗೆ ಹಿಂದೂ ಮುಸ್ಮಿಂ ಪ್ರಾಬ್ಲಮ್ ಅಲ್ಲ. ನಮಗೆ ಧರ್ಮ ಶ್ರದ್ಧೆಯನ್ನು ವಿರೋಧಿಸುವವರ ಕುರಿತು ಇರುವ ಪ್ರಾಬ್ಲಂ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಎಲ್ಲರ ಆಸ್ತಿ ಅನ್ನೋದು ಸರಿ ಅಲ್ಲ, ಡಿಕೆಶಿ ಕ್ಷಮೆ ಕೇಳ್ಬೇಕು: ಆರ್.ಅಶೋಕ್

    ಕನ್ನಡ ಭಾಷೆಯನ್ನು ದೇವಿ ರೂಪದಲ್ಲಿ ನೋಡಿದರೆ ಸಹಿಸಲಾಗದವರು, ಚಾಮುಂಡಿ ತಾಯಿ ಪೂಜೆ ಎಂದರೆ ಹೇಗೆ ಸಹಿಸುತ್ತಾರೆ? ಹಿಂದೂಗಳನ್ನು ಅವಮಾನಿಸಬೇಕು, ಕಿರಿಕಿರಿ ಉಂಟು ಮಾಡಬೇಕು. ನೀವು ಕರ್ನಾಟಕದಲ್ಲಿ ಸೆಕೆಂಡರಿ ಸಿಟಿಜನ್ ಎಂದು ಪದೇ ಪದೇ ಹೇಳಬೇಕು. ನಿಮ್ಮ ವೋಟು ಅವಶ್ಯಕತೆ ಇಲ್ಲ ಎಂದು ಹೇಳುವ ಪ್ರಯತ್ನವನ್ನು ಸಿದ್ದರಾಮಯ್ಯ ಹಿಂದೆಯೂ ಮಾಡಿದ್ದಾರೆ. ಇಂದೂ ಸಹ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಧರ್ಮಸ್ಥಳ ಕೇಸ್‌ನಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದರು, ಡಿಕೆಶಿ ಹೇಳಿಕೆ ವಾಪಸ್ ಪಡೆಯಲಿ: ವಿ.ಸೋಮಣ್ಣ

    ಧರ್ಮಸ್ಥಳ ಕೇಸ್‌ನಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದರು, ಡಿಕೆಶಿ ಹೇಳಿಕೆ ವಾಪಸ್ ಪಡೆಯಲಿ: ವಿ.ಸೋಮಣ್ಣ

    – ನಾನು ರಾಜಕೀಯ ನಿವೃತ್ತಿ ತಗೋತೀನಿ ಅಂತಾ ಹೇಳಿಲ್ಲ: ಕೇಂದ್ರ ಸಚಿವ ಸ್ಪಷ್ಟನೆ

    ಬೆಂಗಳೂರು: ಧರ್ಮಸ್ಥಳ ಕೇಸ್ (Dharmasthala Case) ವಿಚಾರದಲ್ಲಿ ಕಾಂಗ್ರೆಸ್ ಅನವಶ್ಯಕವಾಗಿ ಮಾಡಿರುವ ತಪ್ಪಿಗಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸ್ತಾರೆ. ತಾವೇ ತೋಡಿದ ಹಳ್ಳಕ್ಕೆ ಬಿದ್ದರು ಅಂತ ಕೇಂದ್ರ ಸಚಿವ ವಿ.ಸೋಮಣ್ಣ (V.Somanna) ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿದವರು ಅಲ್ಲ. ಧರ್ಮಸ್ಥಳಕ್ಕೆ ಇತಿಹಾಸ ಇದೆ. ಧಾರ್ಮಿಕ, ನಂಬಿಕೆ ಸ್ಥಳ. ಈ ಸ್ಥಳವನ್ನ ಅಸ್ಥಿರಗೊಳಿಸುವ ಪ್ರಯತ್ನ ಮಾಡ್ತಿದ್ದಾರೆ. ಯಾರೋ ಒಬ್ಬ ದೂರು ಕೊಟ್ಟ ಅಂತೇಳಿ ಕಾಂಗ್ರೆಸ್ ಎಸ್‌ಐಟಿ ಮಾಡಿದ್ರು. ಅವರಿವರ ಮಾತು ಕೇಳಿ ಎಸ್‌ಐಟಿ ಮಾಡಿದ್ರು ಅಂತಾ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ರಾಜಕೀಯ ಬೇಡ, ವರದಿ ಬರುವವರೆಗೆ ಕಾಯೋಣ – ಶಿವಾನಂದ ಪಾಟೀಲ್

    DKShivakumar

    ಇದೇ ವೇಳೆ ಚಾಮುಂಡೇಶ್ವರಿ ದೇವಸ್ಥಾನದ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರು ಈ ರೀತಿ ಮಾತನಾಡಬಾರದಿತ್ತು. ಇದು ಅಕ್ಷ್ಯಮ ಅಪರಾಧ. ಆರ್‌ಎಸ್‌ಎಸ್ ಬಗ್ಗೆ ಮಾತಾಡಿದಾಗ ಪರವಾಗಿಲ್ಲ ಶಿವಕುಮಾರ್ ಅಂದ್ಕೊಂಡಿದ್ವಿ. ರಾಣಿ ಪ್ರಮೋದದೇವಿ ಅವರು ಹೇಳಿರೋದು ಸರಿ ಇದೆ. ನಾವು ಮಸೀದಿಗೆ ಹೋಗಿ ನಮ್ಮದು ಅನ್ನೋದಕ್ಕೆ ಆಗುತ್ತಾ? ಚಾಮುಂಡೇಶ್ವರಿ ಭಾರತಕ್ಕೆ ದೇವತೆ. ಭಗವಂತ ನಿಮ್ಮನ್ನ ಮೆಚ್ಚುವುದಿಲ್ಲ. ಡಿಕೆಶಿ ಅವರ ಕುಟುಂಬವನ್ನ ಹತ್ತಿರದಿಂದ ನೋಡಿದ್ದೇನೆ. ಭಕ್ತಿ, ಪೂಜೆ ಮಾಡ್ತಾರೆ. ಡಿಕೆಶಿ ನಿಮ್ಮ ಹೇಳಿಕೆಯನ್ನ ವಾಪಸ್ ಪಡೆಯುವುದು ಒಳ್ಳೆಯದು ಎಂದು ಆಗ್ರಹಿಸಿದರು.

    ನಾನು ರಾಜಕೀಯ ನಿವೃತ್ತಿ ಅಂತೇಳಿಲ್ಲ. ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಅಂತೇಳಿದ್ದೇನೆ. ನಾನು ಆಕಸ್ಮಿಕವಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಹಾಗಾಗಿ ಮುಂದೆ ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿಲ್ಲ ಎಂದಿದ್ದೇನೆ. ಅಲ್ಲದೆ ಸದಸ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಈಗ ಖಾಲಿ ಇಲ್ಲ. ಮೋದಿ ಅವರ ನೇತೃತ್ವದಲ್ಲಿ ಸೇವೆ ಮಾಡ್ತಾ ಇದೀನಿ, ಕೆಲಸ ಮಾಡ್ತೀನಿ ಅಂತೇಳಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡ್ತಾನೆ: ಹೆಚ್‌ಡಿಕೆ

    ಇನ್ನು ಕಾಂಗ್ರೆಸ್‌ಲ್ಲಿ ಕ್ರಾಂತಿಯೂ ಆಗುತ್ತೆ, ಕೆಲ ನಾಯಕರಿಗೆ ವಾಂತಿಯೂ ಆಗುತ್ತೆ. ಹೀಗೆ ಹೋಗ್ತಿದ್ರೆ ಕಾಂಗ್ರೆಸ್ ಅವರು ನಾಮಾವಶೇಷ ಆಗ್ತಾರೆ ಅಂತಾ ವ್ಯಂಗ್ಯವಾಡಿದರು.

  • ತಲಪಾಡಿ; ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಬಾಲಕಿ ಸೇರಿ ಆರು ಮಂದಿ ಸಾವು

    ತಲಪಾಡಿ; ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಬಾಲಕಿ ಸೇರಿ ಆರು ಮಂದಿ ಸಾವು

    ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಬಾಲಕಿ ಸೇರಿ ಆರು ಮಂದಿ ಸಾವನ್ನಪ್ಪಿದ್ದು, 7 ಜನರು ಗಾಯಗೊಂಡಿರುವ ದುರ್ಘಟನೆ ಕರ್ನಾಟಕ-ಕೇರಳ ಗಡಿ ಭಾಗದ ತಲಪಾಡಿಯಲ್ಲಿ ನಡೆದಿದೆ.

    ಕೆಎಸ್‌ಆರ್‌ಟಿಸಿ ಬಸ್‌ ಬ್ರೇಕ್‌ ಫೇಲ್‌ ಆಗಿದೆ. ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಂತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಲ್ಲೇ ನಿಂತಿದ್ದ ಆಟೋಗೂ ಕೂಡ ಬಸ್‌ ಡಿಕ್ಕಿಯಾಗಿದೆ. ಪರಿಣಾಮವಾಗಿ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.

    ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಹಾಗೂ ಒಬ್ಬ ಬಾಲಕಿ ಸಾವಿಗೀಡಾಗಿದ್ದಾರೆ. ಅಪಘಾತದ ಸಮಯದಲ್ಲಿ ಕೆಲವರು ತುಂಗುದಾಣ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾದೊಳಗೆ ಕುಳಿತಿದ್ದರು.

    ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರನಿಗೆ ಜೈಲಲ್ಲಿ ಇಡಿ ಡ್ರಿಲ್

    ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರನಿಗೆ ಜೈಲಲ್ಲಿ ಇಡಿ ಡ್ರಿಲ್

    ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ (Mangaluru Cooker Blast) ಪ್ರಕರಣದ ರೂವಾರಿ, ತುಂಗಾ ತೀರದಲ್ಲಿ ಬಾಂಬ್ ಟ್ರಯಲ್ ಪ್ರಕರಣದ ರೂವಾರಿ ಶಾರಿಕ್‌ನನ್ನ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ.

    ಪರಪ್ಪನ ಅಗ್ರಹಾರ (Parappana Agrahara) ಜೈಲಲ್ಲಿ ಶಾರಿಕ್‌ನನ್ನು ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಉಗ್ರರಿಗೆ ಅಕ್ರಮ ಹಣ ಸಂದಾಯ ಆಗಿರುವ ಬಗ್ಗೆ ತನಿಖೆಯಲ್ಲಿ ಗೊತ್ತಾಗಿದೆ. ಕೆಲ ಮುಸ್ಲಿಂ ರಾಷ್ಟ್ರಗಳಿಂದ ಆರೋಪಿಗಳಿಗೆ ಹಣ ಸಂದಾಯ ಆಗಿರೋದು ಎನ್‌ಐಎ ಹಾಗೂ ಇ.ಡಿ ತನಿಖೆ ವೇಳೆ ಅಕ್ರಮ ಹಣದ ವ್ಯವಹಾರ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ – ಆ.30ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

    ಈ ಸಂಬಂಧ ಶಂಕಿತ ಉಗ್ರ ಶಾರಿಕ್ ಹಾಗೂ ಪ್ರಕರಣದ ಇತರ ಆರೋಪಿಗಳ ವಿಚಾರಣೆ ನಡೆಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಜೈಲಿಗೆ ಭೇಟಿ ನೀಡಿದ ಇಡಿ ಅಧಿಕಾರಿಗಳು ಜೈಲಿನಲ್ಲಿ ಶಂಕಿತ ಉಗ್ರರ ವಿಚಾರಣೆ ನಡೆಸಿ ಹೋಗಿದ್ದಾರೆ. ಇದನ್ನೂ ಓದಿ: ಪ್ರವಾಹದಲ್ಲಿ ಸಿಲುಕಿದ್ದ 22 ಸಿಆರ್‌ಪಿಎಫ್‌ ಸಿಬ್ಬಂದಿ ರಕ್ಷಿಸಿದ ಸೇನಾ ಹೆಲಿಕಾಪ್ಟರ್‌