Tag: ಭರತ್ ಭೂಷಣ್

  • Pahalgam Terror Attack – ಮೃತ ಭರತ್ ಭೂಷಣ್ ಪತ್ನಿ ಹೇಳಿಕೆ ದಾಖಲಿಸಿಕೊಂಡ ಎನ್‌ಐಎ

    Pahalgam Terror Attack – ಮೃತ ಭರತ್ ಭೂಷಣ್ ಪತ್ನಿ ಹೇಳಿಕೆ ದಾಖಲಿಸಿಕೊಂಡ ಎನ್‌ಐಎ

    ಬೆಂಗಳೂರು: ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಯ (Pahalgam Terrorist Attack) ತನಿಖೆಯನ್ನ ಎನ್‌ಐಎ (National Investigation Agency) ವಹಿಸಿಕೊಂಡಿದೆ. ಅಧಿಕೃತ ತನಿಖೆಯ ಆದೇಶಕ್ಕೂ ಮೊದಲು ಎನ್‌ಐಎ ಫೀಲ್ಡ್‌ಗಡ ಇಳಿದು ತನಿಖೆ ಆರಂಭಿಸಿದೆ. ಕಳೆದ ಶುಕ್ರವಾರ ಮೃತ ಭರತ್ ಭೂಷಣ್‌ರ (Bharath Bhushan) ಮನೆಗೆ ತೆರಳಿದ್ದ ಎನ್‌ಐಎ, ಸುಧೀರ್ಘ 8 ಗಂಟೆಗಳ ಕಾಲ ಪತ್ನಿ ಡಾ.ಸುಜಾತಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.

    ನೀವೂ ಕಾಶ್ಮೀರಕ್ಕೆ (Kashimir) ಯಾವಾಗ ಹೋಗಿದ್ರಿ, ಎಷ್ಟೋತ್ತಿಗೆ ತಲುಪಿದ್ರಿ? ಉಗ್ರರು ಬಂದಾಗ ನೀವು ಎಲ್ಲಿ ಇದ್ರಿ, ಭರತ್ ಭೂಷಣ್ ಎಲ್ಲಿದ್ರು? ಉಗ್ರರು ಬಂದಾಗ ಯಾವ ಭಾಷೆ ಮಾತಾಡಿದ್ರು. ಅವರ ಮುಖದ ಮೇಲೆ ಏನಾದ್ರು ಮಾರ್ಕ್ ಇತ್ತಾ. ಅವರ ಮುಖ ಚಹರೆ, ವೇಷ ಭೂಷಣ ಇವೆಲ್ಲದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಮೇಲೆ ಡಿಜಿಟಲ್‌ ಸ್ಟ್ರೈಕ್‌ – ಬಿಬಿಸಿಗೂ ಬಿಸಿ ಮುಟ್ಟಿಸಿದ ಸರ್ಕಾರ

    ಅಲ್ಲದೇ ಉಗ್ರರ ಸ್ಕೆಚ್ ತೋರಿಸಿ ಕೂಡ ಮಾಹಿತಿ ಪಡೆದಿರುವ ಎನ್‌ಐಎ, ಅವರ ಬಳಿಯಿದ್ದ ಗನ್ ನೋಡಿದ್ರಾ? ಅದು ಯಾವ ರೀತಿ ಇತ್ತು. ಅವರು ನಿಮ್ಮ ಬಳಿ ಏನಾದ್ರು ಮಾತಾಡಿದ್ರಾ? ನೀವು ಅವರಿಗೆ ಏನಾದ್ರು ಉತ್ತರ ಕೊಟ್ರಾ ಹೀಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಎನ್‌ಐಎ ಭರತ್ ಭೂಷಣ್ ಅವರ ಪತ್ನಿ ಹೇಳಿಕೆಯನ್ನು ದಾಖಲು ಮಾಡಿಕೊಂಡು ಹೋಗಿದೆ.

  • Pahalgam Attack | ಭರತ್ ಭೂಷಣ್ ಅಂತಿಮ ದರ್ಶನ ಪಡೆದ ಗೆಹ್ಲೋಟ್

    Pahalgam Attack | ಭರತ್ ಭೂಷಣ್ ಅಂತಿಮ ದರ್ಶನ ಪಡೆದ ಗೆಹ್ಲೋಟ್

    – ಭಾರತ ಸರ್ಕಾರ ಈ ದುರ್ಘಟನೆಯ ಪ್ರತೀಕಾರ ತೆಗೆದುಕೊಳ್ಳಲಿದೆ

    ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಪಹಲ್ಗಾಮ್‌ನಲ್ಲಿ (Pahalgam) ಉಗ್ರರ ಗುಂಡೇಟಿಗೆ ಬಲಿಯಾದ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ (Bharath Bhushan) ಅವರ ಮೃತದೇಹದ ಅಂತಿಮ ದರ್ಶನ ಪಡೆದರು.

    ಬಳಿಕ ಬರಿಗಾಲಿನಲ್ಲೇ ಬಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ (Pakistan) ಮೇಲೆ ನಮ್ಮವರು ದಾಳಿ ಮಾಡಬಹುದು. ದೇಶದ ಜನರ ಆಕ್ರೋಶ ಅರ್ಥ ಮಾಡಿಕೊಂಡು ಕೇಂದ್ರ ಕಠಿಣ ಕ್ರಮಕ್ಕೆ ಮುಂದಾಗುವುದಂತೂ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ, ಎಲ್ಲಾ ಉಗ್ರ ತಾಣಗಳನ್ನು ನಾಶಪಡಿಸಬೇಕು: ಸಿಎಂ

    ಎಂಥಾ ಕಠಿಣ ಕ್ರಮಕ್ಕೆ ಕೇಂದ್ರ ಮುಂದಾಗುತ್ತದೆ ಅಂದರೆ ಮತ್ತೊಮ್ಮೆ ಪಾಕಿಸ್ತಾನ ನಮ್ಮ ದೇಶದ ಮೇಲೆ ಉಗ್ರ ಚಟುವಟಿಕೆ ನಡೆಸಲು ಹೆದರಬೇಕು. ಬುಧವಾರ ಕೇಂದ್ರ ಕೈಗೊಂಡ ಕಠಿಣ ನಿರ್ಣಯಗಳು ಪಾಕಿಸ್ತಾನದ ದುಗುಡ ಹೆಚ್ಚಿಸಿದೆ. ಮುಂದೆಯೂ ಪಾಕಿಸ್ತಾನದ ಮೇಲೆ ದಾಳಿ ನಡೆಯುವ ವಿಶ್ವಾಸ ನನಗೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್‌ ಸೇನಾಧಿಕಾರಿ ಮುನೀರ್‌ ಉಗ್ರ – ಲಾಡೆನ್‌ನಂತೆ ಈತನ ಅಂತ್ಯವಾಗಬೇಕು: ಪೆಂಟಗನ್‌ ಮಾಜಿ ಅಧಿಕಾರಿ

    ಇಂದು ಸರ್ವಪಕ್ಷ ಸಭೆ ನಡೆಯಲಿದೆ. ಎಲ್ಲಾ ಪಕ್ಷಗಳೂ ಕಠಿಣ ನಡೆಗೆ ಒತ್ತಾಯಿಸುವ ಸಾಧ್ಯತೆ ಇದೆ. ಭಾರತವೂ ಪಾಕಿಸ್ತಾನದ ವಿಚಾರದಲ್ಲಿ ಕಠಿಣ ಹೆಜ್ಜೆ ಇಡಲಿದೆ. ಭಾರತ ಸರ್ಕಾರ ಈ ದುರ್ಘಟನೆಯ ಪ್ರತೀಕಾರ ತೆಗೆದುಕೊಳ್ಳಲಿದೆ. ಕರ್ನಾಟಕದ ಪ್ರವಾಸಿಗರು ರಕ್ಷಣೆ ಮಾಡಿ ಕಾಶ್ಮೀರದಿಂದ ರಾಜ್ಯ ಸರ್ಕಾರ ವಾಪಸ್ ಕರೆತರುತ್ತಿದೆ. ಸರ್ಕಾರದ ಈ ನಡೆ ಶ್ಲಾಘನೀಯ ಎಂದರು. ಇದನ್ನೂ ಓದಿ: ಉಗ್ರರ ಗುಂಡಿಗೆ ಬಲಿಯಾದ ಭರತ್‌ ಭೂಷಣ್‌ ಅಂತಿಮ ದರ್ಶನ – ಮಗು ಮುಖ ನೋಡಿ ಸಿಎಂ ಭಾವುಕ

    ಮೃತ ಭರತ್ ಭೂಷಣ್ ಅಂತಿಮ ದರ್ಶನ ಪಡೆದ ರಾಜ್ಯಪಾಲರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಭರತ್ ಭೂಷಣ್ ಅವರ ಅಣ್ಣ ಪ್ರೀತಂರಿಂದ ಘಟನೆಯ ಕುರಿತು ಮಾಹಿತಿ ಪಡೆದರು.

  • ಮಗು ಇದೆ ಬಿಟ್ಟು ಬಿಡಿ ಅಂದ್ರೂ ಶೂಟ್‌ ಮಾಡಿದ್ರು – ಬಿಕ್ಕಿಬಿಕ್ಕಿ ಅತ್ತ ಸುಜಾತ

    ಮಗು ಇದೆ ಬಿಟ್ಟು ಬಿಡಿ ಅಂದ್ರೂ ಶೂಟ್‌ ಮಾಡಿದ್ರು – ಬಿಕ್ಕಿಬಿಕ್ಕಿ ಅತ್ತ ಸುಜಾತ

    – ನಮ್ಮ ಮಕ್ಕಳು ಅಲ್ಲಿ ಸಾಯುತ್ತಿದ್ದಾರೆ
    – ನೀವು ಇಲ್ಲಿ ಇಷ್ಟು ಖುಷಿಯಿಂದ ಹೇಗೆ ಇರಲು ಸಾಧ್ಯ?
    – ಸತ್ತ ಮೇಲೂ ಮತ್ತೆ 3-4 ಬಾರಿ ಗುಂಡಿನಿಂದ ದಾಳಿ
    – ಪಬ್ಲಿಕ್‌ ಟಿವಿಯಲ್ಲಿ ಉಗ್ರರ ಕ್ರೌರ್ಯ ಬಿಚ್ಚಿಟ್ಟ ಸುಜಾತ

    ಬೆಂಗಳೂರು: “ಸಣ್ಣ ಮಗು ಇದೆ ಬಿಟ್ಟುಬಿಡಿ ಅಂತ ಕೈ ಮುಗಿದರೂ ಉಗ್ರರು ನನ್ನ ಪತಿ ಮೇಲೆ ಶೂಟ್‌ ಮಾಡಿದರು. ನೀವು ಇಲ್ಲಿ ಇಷ್ಟು ಖುಷಿಯಿಂದ ಹೇಗೆ ಇರಲು ಸಾಧ್ಯ ಅಂತ ಪ್ರಶ್ನಿಸಿ‌ ಉಗ್ರರು ಜನರ ಮೇಲೆ ಗುಂಡು ಹಾರಿಸುತ್ತಿದ್ದರು” – ಇದು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಭರತ್‌ ಭೂಷಣ್‌ (Bharath Bhushan) ಪತ್ನಿ ಡಾ.ಸುಜಾತ ಅವರ ಮಾತುಗಳು.

    ಇಂದು ಬೆಳಗ್ಗೆ ಭರತ್‌ ಭೂಷಣ್‌ ಪಾರ್ಥಿವ ಶರೀರ ಇಂಡಿಗೋ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಅಲ್ಲಿಂದ ಅಬುಲೆನ್ಸ್‌ನಲ್ಲಿ ಶವವನ್ನು ಮತ್ತೀಕೆರೆಯಲ್ಲಿರುವ ಸುಂದರ ನಗರಕ್ಕೆ ತರಲಾಯಿತು. ಮನೆಗೆ ಬಂದ ಬಳಿಕ ಸುಜಾತ (Dr. Sujatha) ಅವರು ಪಬ್ಲಿಕ್‌ ಟಿವಿಯಲ್ಲಿ (Pahalgam Terror Attack) ಉಗ್ರರ ಕರಾಳ ಮುಖವನ್ನು ಅನಾವರಣ ಮಾಡಿ ಕೊನೆಯ ಭಯಾನಕ ಕ್ಷಣಗಳನ್ನ ನೆನೆದು ಬಿಕ್ಕಿಬಿಕ್ಕಿ ಅತ್ತರು.

    ಸುಜಾತ ಹೇಳಿದ್ದೇನು?
    ನಾವು ಏ.18ಕ್ಕೆ ಕಾಶ್ಮೀರಕ್ಕೆ (Jammu Kashmir) ಹೋಗಿದ್ದೆವು. ಏ.22 ನಮ್ಮ ಪ್ರವಾಸದ ಕೊನೆಯ ದಿನ ಅಂದು ನಾವು ಪಹಲ್ಗಾಮ್ ಭೇಟಿ ನೀಡಿದ್ದೆವು. ಪಹಲ್ಗಾಮ್ ಬೈಸರನ್‌ ಹುಲ್ಲುಗಾವಲು ಇರುವ ಸುಂದರ ಪ್ರದೇಶವನ್ನು ಮಿನಿ ಸ್ವಿಜ್ಜರ್ಲ್ಯಾಂಡ್ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕೆ ನಾವು ಆ ಜಾಗಕ್ಕೆ ಹೋಗಿದ್ದೆವು.

    ಪಹಲ್ಗಾವ್‌ನಿಂದ 3-4 ಕಿ.ಮೀ ದೂರದವರೆಗೆ ಕುದುರೆಯಲ್ಲಿ ಬೈಸರನ್‌ಗೆ ಹೋಗಿದ್ದೆವು. ಆ ಬಯಲು ಪ್ರದೇಶದಲ್ಲಿ ಕುಳಿತು ಮಗುವಿನ ಜೊತೆ ಆಟ ಆಡುತ್ತಾ ಕುಳಿತಿದ್ದೆವು. ಮೈದಾನದಲ್ಲಿ ಇದ್ದ ಟೆಂಟ್‌ನಲ್ಲಿ ಕಾಶ್ಮೀರದ ದಿರಿಸು ಧರಿಸಿ ಫೋಟೋ ತೆಗೆಯಬಹುದಿತ್ತು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – 65 ಸಾವಿರಕ್ಕೇರಿಸಿದ್ದ ಪ್ರಯಾಣ ದರ 15,000ಕ್ಕೆ ಇಳಿಕೆ

    ನಾನು ಮತ್ತು ಇನ್ನೊಂದು ಕುಟುಂಬದವರು ಕೊನೆಯ ಎರಡು ದಿನದಿಂದ ಜೊತೆಯಾಗಿ ಓಡಾಡುತ್ತಿದ್ದೆವು. ಫೋಟೋ ಎಲ್ಲಾ ತೆಗೆದು ಮುಗಿಯುಷ್ಟರಲ್ಲಿ ಮಧ್ಯಾಹ್ನ 1:30 – 1:45 ಆಗಿರಬಹುದು. ಮಧ್ಯಾಹ್ನ ಆಗಿರುವ ಕಾರಣ ಊಟ ಮಾಡಲು ಮತ್ತೆ ಕೆಳಗೆ ಹೋಗಬೇಕಿತ್ತು. ಹೀಗಾಗಿ ನಾವು ಬೈಸರನ್‌ನಿಂದ ಹೊರಡಲು ಮುಂದಾಗುತ್ತಿದ್ದಾಗ ಜೋರಾಗಿ ಗುಂಡಿನ ಶಬ್ಧ ಕೇಳಿಸಿತು.

    ಈ ಶಬ್ದ ಕೇಳಿದಾಗ ಪಕ್ಷಿ, ಪ್ರಾಣಿ ಓಡಿಸಲು ಗನ್‌ನಿಂದ ಶೂಟ್‌ ಮಾಡುತ್ತಿರಬಹುದು ಎಂದು ಭಾವಿಸಿದೆವು. ಆದರೆ ಶಬ್ಧದ ತೀವ್ರತೆ ಜಾಸ್ತಿ ಆಗುತ್ತಿದ್ದಂತೆ ಹತ್ತಿರದಲ್ಲೇ ಏನೋ ದಾಳಿ ನಡೆಯುತ್ತಿದೆ ಎನ್ನುವುದು ಗೊತ್ತಾಗಿ ನಾನು, ಪತಿ, ಮಗು ಟೆಂಟ್‌ ಹಿಂಭಾಗದಲ್ಲಿ ಅಡಗಿ ಕುಳಿತೆವು. ಹಿಂಭಾಗದಲ್ಲಿ ಅಡಗಿ ಕುಳಿತಿದ್ದಾಗ 100 ಅಡಿ ದೂರದಲ್ಲಿ ಉಗ್ರ ಒಬ್ಬರನ್ನು ಮಾತನಾಡಿಸಿ ಶೂಟ್‌ ಮಾಡಿದ. ನಂತರ ಒಬ್ಬರು ಹಿರಿಯರನ್ನು ಹಿಂದಿಯಲ್ಲಿ ಮಾತನಾಡಿಸಿ, “ನೀವು ಹೇಗೆ ಖುಷಿಯಲ್ಲಿ ಇದ್ದೀರಿ. ಅಲ್ಲಿ ನಮ್ಮ ಮಕ್ಕಳು ಸಾಯುತ್ತಿದ್ದಾರೆ. ಇಲ್ಲಿ ನೀವು ಮಕ್ಕಳೊಂದಿಗೆ ಹೇಗೆ ಆಟ ಆಡುತ್ತಾ ಖುಷಿಯಾಗಿದ್ದೀರಿ” ಎಂದು ಪ್ರಶ್ನಿಸಿದ. ಅದಕ್ಕೆ ಅವರು,”ನಾನು ಏನು ಮಾಡಬೇಕು? ಯಾವ ರೀತಿ ಸಹಾಯ ಮಾಡಬೇಕು” ಎಂದು ಕೇಳಿದರು. ಅವರ ಮಾತನ್ನು ಕೇಳದೇ ಅವನು ಶೂಟ್‌ ಮಾಡಿ ನೂಕಿದ. ಶೂಟ್‌ ಮಾಡಿದ ಬಳಿಕ ಮತ್ತೆ ಮೂರು-ನಾಲ್ಕು ಬಾರಿ ಗುಂಡು ಹಾರಿಸಿದ.

    ನಮ್ಮ ಟೆಂಟ್‌ ಬಳಿ ಬಂದಾಗ ನಾನು ಮಗುವನ್ನು ಬಚ್ಚಿಟ್ಟುಕೊಂಡೆ. “ಸಣ್ಣ ಮಗು ಇದೆ ಬಿಟ್ಟುಬಿಡಿ ಅಂತ ಕೈ ಮುಗಿದು ನಮ್ಮನ್ನು ಏನು ಮಾಡಬೇಡಿ” ಎಂದು ಬೇಡಿಕೊಂಡೆ. ಉಗ್ರರು ನನ್ನ ಪತಿ ಭೂಷಣ್‌ ಮೇಲೆ ಶೂಟ್‌ ಮಾಡಿ ಹೋದ. ಉಗ್ರ ಹೋಗುತ್ತಿದ್ದಂತೆ ಅಲ್ಲಿದ್ದವರು ಓಡಿ ಹೋಗಲು ಮುಂದಾದರು. ನಾನು ಮಗುವನ್ನು ಎತ್ತಿಕೊಂಡು ಓಡಲು ಆರಂಭಿಸಿದೆ. ಇದನ್ನೂ ಓದಿ: ಏ.16ಕ್ಕೆ ಮದುವೆ, 22ಕ್ಕೆ ಪತಿ ಸಾವು – ಮದ್ವೆಯಾಗಿ ವಾರ ಕಳೆದಿಲ್ಲ, ಮೆಹಂದಿ ಬಣ್ಣ ಮಾಸಿಲ್ಲ: ಇದು ವಿನಯ್ ನರ್ವಾಲ್ – ಹಿಮಾಂಶಿ ದುರಂತ ಕಥೆ

    ನಾನು ಓಡಿ ಬರುವಾಗ ಅಲ್ಲಿ ಹೆಣಗಳ ರಾಶಿ ಇತ್ತು. ನಮ್ಮನ್ನು ಅಟ್ಟಿಸಿಕೊಂಡು ಬಂದು ದಾಳಿ ಮಾಡಬಹುದು ಎಂಬ ಭಯದಿಂದ ನಾನು ಮಗುವನ್ನು ಎತ್ತಿಕೊಂಡು ಓಡತೊಡಗಿದೆ. ಈ ವೇಳೆ ಹಲವು ಮಂದಿ ಓಡಿಕೊಂಡು ಬರುತ್ತಿದ್ದರು. ಕೊನೆಗೆ ಕುದುರೆ ಸಿಕ್ಕಿತು. ಕುದುರೆಯಲ್ಲಿ ಕುಳಿತು ಸಿಆರ್‌ಪಿಎಫ್‌ ಮೆಸ್‌ಗೆ ಬಂದೆ.

     

    ಮಗುವನ್ನು ಬಚ್ಚಿಟ್ಟುಕೊಂಡೆ:
    ಕೊನೆಯದಾಗಿ ಭೂಷಣ್‌ ಅವರು ಏನು ಹೇಳಿದರು ಎಂದು ಕೇಳಿದ್ದಕ್ಕೆ, ಏನು ಆಗಲ್ಲ, ಧೈರ್ಯವಾಗಿರು ಎಂದು ನಮಗೆ ಧೈರ್ಯ ತುಂಬುತ್ತಿದ್ದರು. ಉಗ್ರರು ಪತಿಯ ಮೇಲೆ ಗುಂಡಿನ ದಾಳಿ ಮಾಡಿದ ಬಳಿಕ ನಾನು ತಲೆ ಎತ್ತಲೇ ಇಲ್ಲ. ಮಗುವನ್ನು ಬಚ್ಚಿಟ್ಟುಕೊಂಡೆ. ನನಗೆ ಬೇಕಾದರೆ ಗುಂಡು ಹೊಡೆಯಲಿ ಮಗುವಿಗೆ ಏನು ಆಗದೇ ಇರಲಿ ಎಂದು ಆತನನ್ನು ಕಾಪಾಡಲು ಮುಂದಾದೆ. ಉಗ್ರರು ಪತಿಯ ತಲೆಗೆ ಗುಂಡು ಹಾರಿಸಿದ್ದರು. ನಾನು ವೈದ್ಯೆಯಾಗಿರುವ ಕಾರಣ ಭೂಷಣ್‌ ಇನ್ನು ಬದುಕುವುದಿಲ್ಲ ಎನ್ನುವುದು ಗೊತ್ತಾಯಿತು. ಹೀಗಾಗಿ ನನ್ನ ಮೂರು ವರ್ಷದ ಮಗುವನ್ನು ಉಳಿಸಲು ನಾನು ಅಲ್ಲಿಂದ ಓಡಿಕೊಂಡು ಬಂದೆ ಎಂದು ಹೇಳಿ ಭಾವುಕರಾದರು.

  • ಉಗ್ರರ ಗುಂಡಿಗೆ ಬಲಿಯಾದ ಭರತ್‌ ಭೂಷಣ್‌ ಅಂತಿಮ ದರ್ಶನ – ಮಗು ಮುಖ ನೋಡಿ ಸಿಎಂ ಭಾವುಕ

    ಉಗ್ರರ ಗುಂಡಿಗೆ ಬಲಿಯಾದ ಭರತ್‌ ಭೂಷಣ್‌ ಅಂತಿಮ ದರ್ಶನ – ಮಗು ಮುಖ ನೋಡಿ ಸಿಎಂ ಭಾವುಕ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪಹಲ್ಗಾಮ್‌ನಲ್ಲಿ (Pahalgam Attack) ಉಗ್ರರಿಂದ ಹತ್ಯೆಯಾದ ನಗರದ ಭರತ್ ಭೂಷಣ್ (Bharath Bhushan) ಅವರ ಅಂತಿಮ ದರ್ಶನ ಪಡೆದರು.

    ಸಿಎಂ ಭೇಟಿಯ ವೇಳೆ, ಮಗುವನ್ನು ತೋರಿಸಿ ಘಟನೆಯ ಭೀಕರತೆಯನ್ನು ಹೇಳಿ ಭರತ್‌ ಪತ್ನಿ ಸುಜಾತ ಅವರು ಕಣ್ಣಿರಿಟ್ಟರು. ಸಿಎಂ ಮುಂದೆ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದು, ಮಗುವಿನ ಮುಖ ನೋಡಿ ಸಿಎಂ ಸಹ ಭಾವುಕರಾದರು. ಭರತ್ ಪತ್ನಿ, ಸೋದರಮಾವ ಸೀತಾರಾಮ್ ಹಾಗೂ ಭರತ್ ತಂದೆಯವರಿಗೆ ಸಿಎಂ ಸಾಂತ್ವನ ಹೇಳಿದರು. ಇದನ್ನೂ ಓದಿ: ಜೆಪಿ ಪಾರ್ಕ್ ವಾರ್ಡ್‌ನಲ್ಲಿರುವ ಉದ್ಯಾನವನಕ್ಕೆ ಭರತ್ ಭೂಷಣ್ ಹೆಸರು

    ಸಿದ್ದರಾಮಯ್ಯ ಅವರ ಜೊತೆ ಸಚಿವ ರಾಮಲಿಂಗಾರೆಡ್ಡಿಯವರು ಸಹ ಭರತ್‌ ಅವರ ಅಂತಿಮ ದರ್ಶನ ಪಡೆದಿದ್ದಾರೆ.

    ಬೆಳಗ್ಗೆ 5:30ರ ವೇಳೆಗೆ ಭರತ್ ಭೂಷಣ್ ಮೃತದೇಹ ಸುಂದರ ನಗರಕ್ಕೆ ಆಗಮಿಸಿತು. ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭರತ್ ಭೂಷಣ್ ನಿವಾಸದ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಿಎಂ ಜೊತೆ ಹಲವು ಗಣ್ಯರು ಆಗಮನ ಹಿನ್ನೆಲೆ ವಿವಿಐಪಿ ದರ್ಶನದ ವ್ಯವಸ್ಥೆ ಕೂಡ ಮಾಡಲಾಗಿದೆ.

    ಭರತ್ ಸ್ಮರಣೆಗಾಗಿ ಪಾರ್ಕ್‌ಗೆ ಭರತ್ ಭೂಷಣ್ ಪಾರ್ಕ್ (Bharath Bhushan Park) ಎಂದು ನಾಮಕರಣ ಮಾಡಲಾಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ವಾರ್ಡ್‌ನ ಪಾರ್ಕ್ ಇದಾಗಿದ್ದು, ಭರತ್ ಭೂಷಣ್ ನಿವಾಸದ ಬಳಿ ಇದೆ. ಅಲ್ಲದೇ ಭರತ್ ಭೂಷಣ್ ಇದೇ ಪಾರ್ಕ್‌ನಲ್ಲಿ ಪ್ರತಿದಿನ ವಾಕಿಂಗ್ ಮಾಡುತ್ತಿದ್ದರು. ಪಾರ್ಕ್ ಒಳಗಿನ ಸಬಾಂಗಣದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಭರತ್ ಅದರಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಈಗ ಭರತ್ ಸ್ಮರಣೆಗಾಗಿ ಶಾಸಕ ಮುನಿರತ್ನ (Muniratna) ಅವರು ಭರತ್ ಹೆಸರನ್ನೇ ಪಾರ್ಕ್‌ಗೆ ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ: Pahalgam Terror Attack: ಶಿವಮೊಗ್ಗ ತಲುಪಿದ ಮಂಜುನಾಥ್‌ ಮೃತದೇಹ

  • ಜೆಪಿ ಪಾರ್ಕ್ ವಾರ್ಡ್‌ನಲ್ಲಿರುವ ಉದ್ಯಾನವನಕ್ಕೆ ಭರತ್ ಭೂಷಣ್ ಹೆಸರು

    ಜೆಪಿ ಪಾರ್ಕ್ ವಾರ್ಡ್‌ನಲ್ಲಿರುವ ಉದ್ಯಾನವನಕ್ಕೆ ಭರತ್ ಭೂಷಣ್ ಹೆಸರು

    ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Attack) ಭರತ್ ಭೂಷಣ್ ಹತ್ಯೆ ಹಿನ್ನೆಲೆ ವಾರ್ಡ್ ನಂ.17 ಜೆಪಿ ಪಾರ್ಕ್ ವಾರ್ಡ್‌ನಲ್ಲಿರುವ ಉದ್ಯಾನವನಕ್ಕೆ ಭರತ್ ಭೂಷಣ್  ಹೆಸರನ್ನು ನಾಮಕರಣ ಮಾಡಲಾಗಿದೆ.

    ಭರತ್ ಸ್ಮರಣೆಗಾಗಿ ಪಾರ್ಕ್‌ಗೆ ಭರತ್ ಭೂಷಣ್ ಪಾರ್ಕ್ (Bharath Bhushan Park) ಎಂದು ನಾಮಕರಣ ಮಾಡಲಾಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ವಾರ್ಡ್‌ನ ಪಾರ್ಕ್ ಇದಾಗಿದ್ದು, ಭರತ್ ಭೂಷಣ್ ನಿವಾಸದ ಬಳಿ ಇದೆ. ಅಲ್ಲದೇ ಭರತ್ ಭೂಷಣ್ ಇದೇ ಪಾರ್ಕ್‌ನಲ್ಲಿ ಪ್ರತಿದಿನ ವಾಕಿಂಗ್ ಮಾಡುತ್ತಿದ್ದರು. ಪಾರ್ಕ್ ಒಳಗಿನ ಸಬಾಂಗಣದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಭರತ್ ಅದರಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಈಗ ಭರತ್ ಸ್ಮರಣೆಗಾಗಿ ಶಾಸಕ ಮುನಿರತ್ನ (Muniratna) ಅವರು ಭರತ್ ಹೆಸರನ್ನೇ ಪಾರ್ಕ್‌ಗೆ ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ಸಚಿವ ಸಂಪುಟ ಸಭೆ – 8 ಜಿಲ್ಲೆಗಳಿಗೆ ಬಂಪರ್‌?

    ಬೆಳಗ್ಗೆ 5:30ರ ವೇಳೆಗೆ ಭರತ್ ಭೂಷಣ್ ಮೃತದೇಹ ಸುಂದರ ನಗರಕ್ಕೆ ಆಗಮಿಸಿತು. ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭರತ್ ಭೂಷಣ್ ನಿವಾಸದ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಿಎಂ ಜೊತೆ ಹಲವು ಗಣ್ಯರು ಆಗಮನ ಹಿನ್ನೆಲೆ ವಿವಿಐಪಿ ದರ್ಶನದ ವ್ಯವಸ್ಥೆ ಕೂಡ ಮಾಡಲಾಗಿದೆ. ಇದನ್ನೂ ಓದಿ: ಕಾಶ್ಮೀರ ಭಾರತದ ಮುಕುಟ ಮಣಿ, ಭಯೋತ್ಪಾದನೆ ಮೂಲಕ ಸತ್ಯ ಮುಚ್ಚಿಹಾಕಲು ಸಾಧ್ಯವಿಲ್ಲ: ಕ್ಯಾ.ಬ್ರಿಜೇಶ್ ಚೌಟ

  • ಕಾಶ್ಮೀರದಲ್ಲಿ ನರಮೇಧ – ಬೆಂಗಳೂರಿಗೆ ಆಗಮಿಸಿದ ಮೃತದೇಹ, ಕುಟುಂಬಸ್ಥರಿಗೆ ಹಸ್ತಾಂತರ

    ಕಾಶ್ಮೀರದಲ್ಲಿ ನರಮೇಧ – ಬೆಂಗಳೂರಿಗೆ ಆಗಮಿಸಿದ ಮೃತದೇಹ, ಕುಟುಂಬಸ್ಥರಿಗೆ ಹಸ್ತಾಂತರ

    ಬೆಂಗಳೂರು: ಕಾಶ್ಮೀರದ ಪಹಲ್ಗಾವ್‌ನಲ್ಲಿ (Pahalgam ) ಉಗ್ರರ ಗುಂಡೇಟಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹ ರಾಜ್ಯಕ್ಕೆ ಆಗಮಿಸಿದೆ.

    ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಬೆಳಗ್ಗೆ 3:30ಕ್ಕೆ ಬೆಂಗಳೂರಿನ (Bengaluru) ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್ ಪಾರ್ಥಿವ ಶರೀರ ಆಗಮಿಸಿತು.


    ಈ ವಿಮಾನದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಮತ್ತು‌ ಮೃತರ ಕುಟುಂಬಸ್ಥರು ಆಗಮಿಸಿದ್ದರು.

    ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ (Somanna) ಅವರು ಮೃತದೇಹವನ್ನು ಬರಮಾಡಿಕೊಂಡು ಅಂತಿಮ ನಮನ ಸಲ್ಲಿಸಿದರು. ವಿಮಾನ ನಿಲ್ಥಾಣದ ಒಳಗಡೆ ಸಚಿವ ಸೋಮಣ್ಣ ಮತ್ತು ಅಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


    ವಿಮಾನ ನಿಲ್ದಾಣದಲ್ಲಿ ಗೌರವ ಸಲ್ಲಿಸಿದ ಬಳಿಕ ಸರ್ಕಾರ ಕುಟುಂಬಸ್ಥರಿಗೆ ಎರಡು ಮೃತ ದೇಹಗಳ ಹಸ್ತಾಂತರ ಮಾಡಿತು. ಒಂದು ಅಂಬುಲೆನ್ಸ್‌ನಲ್ಲಿ ಬೆಂಗಳೂರಿನ ಮತ್ತಿಕೇರೆಯಲ್ಲಿರುವ ಸುಂದರನಗರಕ್ಕೆ ಭರತ್‌ ಭೂಷಣ್‌ ಶವ ಮತ್ತೊಂದು ಅಂಬುಲೆನ್ಸ್‌ನಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್‌ ಅವರ ಪಾರ್ಥಿವ ಶವವವನ್ನು ಕಳುಹಿಸಲಾಯಿತು.

    ಬೆಳಗ್ಗೆ 5:30ರ ವೇಳೆಗೆ ಭರತ್‌ ಭೂಷಣ್‌ ಶವ ಸುಂದರ ನಗರಕ್ಕೆ ಆಗಮಿಸಿತು. ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

  • Pahalgam Attack | ಉಗ್ರರ ಅಟ್ಟಹಾಸಕ್ಕೆ ಪತ್ನಿ ಕಣ್ಣೆದುರೇ ಬೆಂಗಳೂರಿನ ಟೆಕ್ಕಿ ಸಾವು

    Pahalgam Attack | ಉಗ್ರರ ಅಟ್ಟಹಾಸಕ್ಕೆ ಪತ್ನಿ ಕಣ್ಣೆದುರೇ ಬೆಂಗಳೂರಿನ ಟೆಕ್ಕಿ ಸಾವು

    ಬೆಂಗಳೂರು: ಕಾಶ್ಮೀರದಲ್ಲಿ (Jammu And Kashmir) ಮಂಗಳವಾರ ನಡೆದ ಭೀಕರ ಉಗ್ರರ ಅಟ್ಟಹಾಸಕ್ಕೆ ಬೆಂಗಳೂರು (Bengaluru) ಮೂಲದ ಟೆಕ್ಕಿ (Techie) ಭರತ್ ಭೂಷಣ್ ಪ್ರಾಣ ಕಳೆದುಕೊಂಡಿದ್ದಾರೆ.

    ಕಾಶ್ಮೀರದ ಆನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ (Pahalgam Terrorist Attack) ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ. ಬೆಂಗಳೂರು ಮೂಲದ ಟೆಕ್ಕಿ ಭರತ್ ಭೂಷಣ್ ಕೂಡ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿ, ಉಗ್ರರ ಅಟ್ಟಹಾಸಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಶುಕ್ರವಾರ ಬೆಂಗಳೂರಿನಿಂದ ವೆಕೆಷನ್‌ಗಾಗಿ ಭರತ್ ಭೂಷಣ್, ಪತ್ನಿ, ಹಾಗೂ ಮೂರು ವರ್ಷದ ಮಗ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ನಾಲ್ಕೈದು ದಿನಕ್ಕೆ ಪ್ರವಾಸಕ್ಕೆ ತೆರಳಿದ್ದ ಕುಟುಂಬ ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಆದರೆ ಮಂಗಳವಾರ ನಡೆದ ಉಗ್ರರ ಗುಂಡಿನ ದಾಳಿಯಿಂದ ಭರತ್ ಭೂಷಣ್ ಪ್ರಾಣಪಕ್ಷಿ ಹಾರಿಹೋಗಿದೆ. ಇದನ್ನೂ ಓದಿ: Pahalgam Terror Attack | ಉಗ್ರರ ದಾಳಿಗೆ ಬೆಂಗಳೂರಿನ ಮಧುಸೂದನ್‌ ಬಲಿ

    ಪಹಲ್ಗಾಮ್‌ನಲ್ಲಿ ಪ್ರವಾಸದಲ್ಲಿದ್ದ ವೇಳೆ ಮಂಗಳವಾರ ಮಧ್ಯಾಹ್ನ ಏಕಾಏಕಿ ಉಗ್ರರ ದಾಳಿ ನಡೆದಿದೆ. ಈ ವೇಳೆ ದಾಳಿಯಾದ ಸ್ಥಳದಲ್ಲೇ ಇದ್ದ ಭೂಷಣ್ ಕುಟುಂಬ, ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿಹೋಗಿದ್ದಾರೆ. ಅಲ್ಲೇ ಇದ್ದ ಮರವೊಂದರ ಬಳಿ ಮಗು ಜೊತೆ ಅವಿತುಕುಳಿತಿದ್ದ ಭರತ್ ಭೂಷಣ್‌ಗೆ ಉಗ್ರರು ನೇರ ಶೂಟ್ ಮಾಡಿದ್ದಾರೆ. ಬುಲೆಟ್ ನೇರ ಭೂಷಣ್ ತಲೆಗೆ ಬಿದ್ದಿದ್ದು, ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೂಡಲೇ ಭೂಷಣ್ ಪರಿಶೀಲಿಸಿದ ಪತ್ನಿ, ಭೂಷಣ್ ಸಾವನ್ನಪ್ಪಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪುತ್ರನಿಗೆ ದ್ವಿತೀಯ ಪಿಯುಸಿಯಲ್ಲಿ 97% ಅಂಕ – ಸಂಭ್ರಮಾಚರಣೆಗೆ ಕಾಶ್ಮೀರಕ್ಕೆ ತೆರಳಿದ್ದ ಮಂಜುನಾಥ್ ಕುಟುಂಬ

    ಭರತ್ ಕಳೆದ ಎಂಟು ವರ್ಷದ ಹಿಂದೆ ಮತ್ತಿಕೆರೆ ಮೂಲದ ಯುವತಿಯನ್ನು ಮದುವೆಯಾಗಿದ್ದರು. ಟೆಕ್ಕಿಯಾಗಿದ್ದ ಭರತ್ ಇತ್ತೀಚಿಗೆ ಕೆಲಸ ಬಿಟ್ಟು ಬಿಸಿನೆಸ್ ಆರಂಭಿಸುವ ಚಿಂತನೆಯಲ್ಲಿದ್ದರು. ಅದರಂತೆ ಕೆಲಸ ಬಿಟ್ಟಿದ್ದ ಕಾರಣ ರಜೆಯಿದ್ದಿದ್ದರಿಂದ ಮಗುವಿಗೆ ಕಾಶ್ಮೀರ ತೋರಿಸಬೇಕೆಂಬ ಕಾರಣಕ್ಕೆ ಪ್ರವಾಸ ಕೈಗೊಂಡಿದ್ದರು. ಆದರೆ ದುರಾದೃಷ್ಟವಶಾತ್ ಉಗ್ರರ ಬಂದೂಕಿನ ಗುಂಡೇಟಿಗೆ ಭರತ್ ಉಸಿರು ಚೆಲ್ಲಿದ್ದಾರೆ. ಇದನ್ನೂ ಓದಿ: ಕಲಿಮಾ ಹೇಳದ್ದಕ್ಕೆ ತಂದೆಯ ತಲೆಗೆ ಗುಂಡೇಟು – ಕಣ್ಣೀರಿಟ್ಟ ಪುತ್ರಿ