Tag: ಬಸನಗೌಡ ತುರ್ವಿಹಾಳ

  • ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳಗೆ ಮಾತೃ ವಿಯೋಗ

    ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳಗೆ ಮಾತೃ ವಿಯೋಗ

    ರಾಯಚೂರು: ಜಿಲ್ಲೆಯ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳಗೆ ಮಾತೃ ವಿಯೋಗವಾಗಿದೆ.

    Basanagouda Turvihal 1

    ಶಾಸಕ ತುರ್ವಿಹಾಳ ತಾಯಿ ಫಕೀರಮ್ಮ (85) ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ತುರ್ವಿಹಾಳ ಗ್ರಾಮದ ಮನೆಯಲ್ಲಿ ಫಕೀರಮ್ಮ ಅವರು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವೈಟ್‍ಲಿಫ್ಟರ್ ‘ಅಚಿಂತಾ ಶೆಯುಲಿ’ – ಮೋದಿಯಿಂದ ಅಭಿನಂದನೆ

    ಮಸ್ಕಿ ತಾಲೂಕಿನ ಸ್ವಗ್ರಾಮ ರಾಗಲಪರ್ವಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಆಗಸ್ಟ್ 1ರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಅಗಲಿದ ಹಿರಿಯ ಜೀವಕ್ಕೆ ಜಿಲ್ಲೆಯ ಗಣ್ಯರು , ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಡ್ರಗ್ ಮಾಫಿಯಾಗೆ ಪ್ರೋತ್ಸಾಹ ಕೊಡುತ್ತಿದೆ: ರಾಹುಲ್ ಗಾಂಧಿ ವಾಗ್ದಾಳಿ

    Live Tv
    [brid partner=56869869 player=32851 video=960834 autoplay=true]

  • 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವು

    25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವು

    ಮಸ್ಕಿ: ಕಾಂಗ್ರೆಸ್‍ನ ಬಸನಗೌಡ ತುರ್ವಿಹಾಳ ಅವರು ಬಿಜೆಪಿಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

     ಆರಂಭದಿಂದಲೂ ಮುನ್ನಡೆ ಉಳಿಸಿಕೊಂಡು ಬಂದಿದ್ದ ಅವರು ವಿಜಯಿಯಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಚುನಾವಣಾ ಮತ ಎಣಿಕೆಯ ಹಲವು ಸುತ್ತುಗಳು ಬಾಕಿ ಇರುವಾಗಲೇ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಸೋಲು ಒಪ್ಪಿಕೊಂಡಿದ್ದರು. ಅದರಂತೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ನಗೆಯನ್ನು ಬೀರಿದ್ದಾರೆ.

     ನಮ್ಮವರೇ ನಮಗೆ ಮೋಸ ಮಾಡಿದರು. ಈ ಪರಿಸ್ಥಿತಿ ಕಾಂಗ್ರೆಸ್ ಗೆ ಅನುಕೂಲವಾಗಿದೆ. ಕ್ಷೇತ್ರದಲ್ಲಿ ನನ್ನ ಮೇಲೆ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಪ್ರತಾಪ್ ಗೌಡ ಪಾಟೀಲ್ ದೂರಿದ್ದರು.

    basanagouda turvihal2

    2018ರ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಅವರು 60,387 ಮತಗಳನ್ನು ಪಡೆದಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಅವರಿಗೆ 60,174 ಮತಗಳು ಬಿದ್ದಿತ್ತು. 213 ಮತಗಳ ಅಂತರದಿಂದ ಪ್ರತಾಪ್ ಗೌಡ ಪಾಟೀಲ್ ಗೆದ್ದಿದ್ದರು. ನಂತರ ನಡೆದ ಆಪರೇಷನ್ ಕಮಲದಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ಕಾಂಗ್ರೆಸ್ ಸೇರಿದ್ದರು.

     ಕೋವಿಡ್ ಹಿನ್ನಲೆ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇಲ್ಲ. ಆದರೂ ಬಣ್ಣ ಎರಚಿಕೊಂಡ ಕೈ ಕಾರ್ಯಕರ್ತರು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ ಬೆಂಬಲಿಗರಿಂದ ಸಂಭ್ರಮಾಚರಣೆ ಮಾಡಿದ್ದಾರೆ. ರಸ್ತೆಯಲ್ಲಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

  • ಮಸ್ಕಿ ಉಪಚುನಾವಣಾ ಕಣದಲ್ಲಿ ಕೋಟ್ಯಧೀಶ ಅಭ್ಯರ್ಥಿಗಳು

    ಮಸ್ಕಿ ಉಪಚುನಾವಣಾ ಕಣದಲ್ಲಿ ಕೋಟ್ಯಧೀಶ ಅಭ್ಯರ್ಥಿಗಳು

    ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣದಲ್ಲಿ ಕೋಟ್ಯಧೀಶರಾಗಿರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿಯ ಪ್ರತಾಪಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ನ ಬಸನಗೌಡ ತುರವಿಹಾಳ ಇಬ್ಬರು ಕೋಟ್ಯಾಧೀಶರು.

    ಪ್ರತಾಪಗೌಡ ಪಾಟೀಲ್ ಒಟ್ಟು 5.92 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಪ್ರತಾಪಗೌಡ ಹೆಸರಿನಲ್ಲಿ 30.33 ಎಕರೆ ಕೃಷಿ ಭೂಮಿ, ಪತ್ನಿ ಹೆಸರಿನಲ್ಲಿ 26 ಎಕರೆ ಜಮೀನು ಹೊಂದಿದ್ದಾರೆ. 33 ಲಕ್ಷ ಸಾಲ ಹೊಂದಿದ್ದಾರೆ. 8.45 ಲಕ್ಷ ನಗದು, ಬ್ಯಾಂಕ್ ಗಳಲ್ಲಿ 1.19 ಕೋಟಿ ರೂಪಾಯಿ ಎಫ್ ಡಿ ಇಟ್ಟಿದ್ದಾರೆ. ವಿವಿಧ ಕಂಪನಿಗಳಲ್ಲಿ 39.48 ಲಕ್ಷ ರೂಪಾಯಿ ಷೇರು ಹೊಂದಿದ್ದಾರೆ. 62.71 ಲಕ್ಷ ರೂಪಾಯಿ ಮೌಲ್ಯದ 3 ಕಾರುಗಳಿವೆ. ಪ್ರತಾಪಗೌಡ ಬಳಿ 275 ಗ್ರಾಂ, ಪತ್ನಿ 650 ಗ್ರಾಂ ಚಿನ್ನ ಹೊಂದಿದ್ದಾರೆ. ಒಟ್ಟು ಸ್ಥಿರಾಸ್ತಿ 3.22 ಕೋಟಿ ರೂಪಾಯಿ.

    Pratapgowda Patil Basanagowda Turvihala

    ಇನ್ನೂ ಬಸನಗೌಡ ತುರ್ವಿಹಾಳ ಒಟ್ಟು 1.45 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಸ್ವಂತ ಹೆಸರಿನಲ್ಲಿ 19.13 ಎಕರೆ ಜಮೀನು, ಪತ್ನಿ ಹೆಸರಿನಲ್ಲಿ 5.34 ಎಕರೆ ಭೂಮಿ ಹೊಂದಿದ್ದಾರೆ. ಬಸನಗೌಡ 2 ಲಕ್ಷ ರೂಪಾಯಿ ತಮ್ಮ ಬಳಿ, ಮಕ್ಕಳ ಬ್ಯಾಂಕ್ ಖಾತೆಗಳಲ್ಲಿ ಒಂದು ಲಕ್ಷ ನಗದು ಹೊಂದಿದ್ದಾರೆ. 26 ಲಕ್ಷ ರೂಪಾಯಿ ಮೌಲ್ಯದ ಒಂದು ಕಾರು, 150 ಗ್ರಾಂ ಚಿನ್ನ ಹಾಗೂ ಒಂದು ಕೆಜಿ ಬೆಳ್ಳಿಯಿದೆ. ತುರ್ವಿಹಾಳದ ಯುಕೋ ಬ್ಯಾಂಕಿನಲ್ಲಿ 2.72 ಲಕ್ಷ ರೂಪಾಯಿ ಸಾಲ, 3.67 ಲಕ್ಷ ರೂಪಾಯಿ ಬೆಳೆ ಸಾಲ ಮಹೇಂದ್ರ ಫೈನಾನ್ಸ್ ನಲ್ಲಿ 7 ಲಕ್ಷ ರೂಪಾಯಿ ಸಾಲ ಸೇರಿ ಒಟ್ಟು 19.39 ಲಕ್ಷ ರೂಪಾಯಿ ಸಾಲ ಹೊಂದಿದ್ದಾರೆ.

    Pratap Gowda Patil

    ನಿನ್ನೆ ಇಬ್ಬರು ಅಭ್ಯರ್ಥಿ ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಉಮೇದುವಾರಿಕೆ ಸಲ್ಲಿಸುವಾಗ ನೀಡಿದ ಆಸ್ತಿ ವಿವರ ಪ್ರಕಾರ ಇಬ್ಬರೂ ಅಭ್ಯರ್ಥಿಗಳು ಕೋಟ್ಯಧಿಪತಿಗಳು ಆಗಿದ್ದಾರೆ.

  • ಕೇಸ್ ವಾಪಸ್ – ಅನರ್ಹ ಶಾಸಕ ಪ್ರತಾಪ್‍ಗೌಡ ಬೇಡಿಕೆ ಈಡೇರಿಸಿದ ಬಿಜೆಪಿ

    ಕೇಸ್ ವಾಪಸ್ – ಅನರ್ಹ ಶಾಸಕ ಪ್ರತಾಪ್‍ಗೌಡ ಬೇಡಿಕೆ ಈಡೇರಿಸಿದ ಬಿಜೆಪಿ

    ರಾಯಚೂರು: ಅನರ್ಹ ಶಾಸಕ ಪ್ರತಾಪ್‍ಗೌಡ ಅವರ ಬೇಡಿಕೆಯನ್ನು ಈಡೇರಿಸಲು ಬಿಜೆಪಿ ಯಶಸ್ವಿಯಾಗಿದ್ದು, ಅವರ ವಿರುದ್ಧ ಹೂಡಲಾಗಿದ್ದ ಬೋಗಸ್ ಮತದಾನ ಪ್ರಕರಣವನ್ನು ಬಸನಗೌಡ ತುರ್ವಿಹಾಳ ಅವರು ವಾಪಸ್ ಪಡೆದಿದ್ದಾರೆ.

    2018ರ ಚುನಾವಣೆ ವೇಳೆ ತುರ್ವಿಹಾಳ ಅವರು ಮಸ್ಕಿ ಮತಕ್ಷೇತ್ರದಲ್ಲಿ ಬೋಗಸ್ ಮತದಾನ ನಡೆದಿದೆ ಎಂದು ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅನರ್ಹರಾಗಿದ್ದ ಪ್ರತಾಪ್‍ಗೌಡ ಅವರ ಮಸ್ಕಿ ಕ್ಷೇತ್ರಕ್ಕೆ ಚುನಾವಣೆ ನಡೆದಿರಲಿಲ್ಲ. ಆದರೆ ಸದ್ಯ ಏಕಾಏಕಿ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿದ್ದು, ಪ್ರತಾಪ್‍ಗೌಡ ಅವರ ಹಾದಿ ಸದ್ಯ ಸುಗಮವಾಗಿದೆ.

    Pratapgowda Patil Basanagowda Turvihala Case

    ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ತುರ್ವಿಹಾಳ ಅವರು 213 ಮತಗಳ ಅಂತರದಲ್ಲಿ 2ನೇ ಸ್ಥಾನವನ್ನು ಪಡೆದಿದ್ದರು. ಈ ಹಿಂದೆ ಪ್ರಕರಣವನ್ನು ವಾಪಸ್ ಪಡೆಯಲು ಹಿಂದೇಟು ಹಾಕಿದ್ದ ತುರ್ವಿಹಾಳ ಅವರು ಸರ್ಕಾರ ನೀಡಿದ್ದ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಅಲ್ಲದೇ ನಾವು ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಆದರೆ ಉಪಚುನಾವಣೆ ಫಲಿತಾಂಶದ ಬಳಿಕ ತಮ್ಮ ಮನಸ್ಸು ಬದಲಿಸಿದ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿರುವುದರಿಂದ ಮಸ್ಕಿ ಉಪಚುನಾವಣೆಗೆ ಹಾದಿ ಸುಗಮವಾಗಿದೆ. ಮಸ್ಕಿ ಪ್ರಕರಣ ಇತ್ಯರ್ಥವಾದ ಕಾರಣದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಚುನಾವಣಾ ಪ್ರಕರಣವೂ ಸುಲಭವಾಗಿ ಇತ್ಯರ್ಥವಾಗುವ ಸಾಧ್ಯತೆಯಿದೆ.

    BSY AMITH

    ಸದ್ಯ ಬಿಜೆಪಿ ಹೈಕಮಾಂಡ್ ಎದುರು ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ತುರ್ವಿಹಾಳ ಅವರು, ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಒಪ್ಪಿಗೆಯಾಗದ ಕಾರಣ ಇದೇ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಅಲ್ಲದೇ ಪಕ್ಷದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎನ್ನಲಾಗಿದೆ.

    ಏನಿದು ಪ್ರಕರಣ: ಬೋಗಸ್ ಮತದಾನ ಪ್ರಕರಣ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿರಲಿಲ್ಲ. ಪ್ರತಾಪ್‍ಗೌಡ ಪಾಟೀಲ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ 213 ಮತದ ಅಂತರದಿಂದ ಸೋತಿದ್ದ ಬಸನಗೌಡ ತುರ್ವಿಹಾಳ ಅವರು ಕೋರ್ಟಿನಲ್ಲಿ ದೂರು ದಾಖಲಿಸಿದ್ದರು. ಪ್ರತಾಪ್ ಗೌಡ ಪುತ್ರಿ ವಿದೇಶದಲ್ಲಿದ್ದರು ಕೂಡ ಅವರ ಮತ ಚಲಾವಣೆಯಾಗಿತ್ತು. ಹೀಗಾಗಿ ಶಾಸಕತ್ವ ಅಸಿಂಧುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿಯಿದ್ದ ಕಾರಣ ಪ್ರತಾಪ್‍ಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಕೂಡ ಉಪಚುನಾವಣೆ ನಡೆದಿರಲಿಲ್ಲ.