Tag: ಫೊಟೋ

  • ದಿಶಾ ಪಟಾನಿ ಬಿಕಿನಿ ಫೋಟೋಗೆ ಪಡ್ಡೆಗಳು ಫಿದಾ

    ದಿಶಾ ಪಟಾನಿ ಬಿಕಿನಿ ಫೋಟೋಗೆ ಪಡ್ಡೆಗಳು ಫಿದಾ

    ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಬೀಚ್‍ನಲ್ಲಿ ಕುಳಿತು ಫೊಟೋ ಪೋಸ್ ಕೊಟ್ಟ ಹಾಟ್ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    disha patani2 medium

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದಿಶಾ ಪಟಾನಿಯ ಇನ್‍ಸ್ಟಾಗ್ರಾಮ್‍ನಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬೀಚ್‍ನಲ್ಲಿ ಬಿಕಿನಿ ಧರಿಸಿ ದಿಶಾ ಪಟಾನಿ ತೆಗೆಸಿಕೊಂಡಿರುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.

    ಎಂ.ಎಸ್. ಧೋನಿ, ರಾಧೆ ಸಿನಿಮಾ ಖ್ಯಾತಿಯ ದಿಶಾ ಪಟಾನಿಗೆ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಕೊರೊನಾ ಹಾವಳಿಯಿಂದಾಗಿ ಶೂಟಿಂಗ್‍ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ನಡುವೆ ಹಾಟ್ ಫೋಟೋಶೂಟ್ ಪೋಸ್ ಕೊಟ್ಟ ಫೋಟೋಗಳು ಮಾತ್ರ ಸಖತ್ ವೈರಲ್ ಆಗುತ್ತಿವೆ.

    ಉತ್ತರಾಖಂಡ ಮೂಲದ ದಿಶಾ ಪಟಾನಿ ಹುಟ್ಟಿದ್ದು ಉತ್ತರ ಪ್ರದೇಶದ ಬರೇಲಿಯಲ್ಲಿನ ರಜಪೂತ್ ಮನೆತನದಲ್ಲಾಗಿದೆ. ದಿಶಾ ಪಟಾನಿ ಅವರ ತಂದೆ ಪೊಲೀಸ್ ಆಫೀಸರ್ ಆಗಿದ್ದಾರೆ. ದಿಶಾ ಪಟಾನಿ ಮೊದಲು ಅಭಿನಯಿಸಿದ ಸಿನಿಮಾ ತೆಲುಗು ಭಾಷೆಯ ಲೋಫರ್. ವರುಣ್ ತೇಜ ಜೊತೆ ನಾಯಕಿಯಾಗಿ ದಿಶಾ ಅಭಿನಯಿಸಿದ ಈ ಸಿನಿಮಾ ಆಕೆಗೆ ಭಾರೀ ಹೆಸರು ತಂದುಕೊಟ್ಟಿತು.

    ಎಂ.ಎಸ್. ಧೋನಿ, ಅನ್‍ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೋಡಿಯಾಗಿ ನಟಿಸಿದ ದಿಶಾ ಪಟಾನಿಗೆ ಆ ಸಿನಿಮಾ ದೊಡ್ಡ ಬ್ರೇಕ್ ನೀಡಿತು. ಜಾಕಿ ಚಾನ್ ಅವರ ಕುಂಗ್ ಫು ಯೋಗ ಸಿನಿಮಾದಲ್ಲಿ ದಿಶಾ ಪಟಾನಿ ಸೋನು ಸೂದ್‍ಗೆ ಜೊತೆಯಾಗಿ ನಟಿಸಿದ್ದಾರೆ. ಬಾಘಿ ಸಿನಿಮಾದಲ್ಲಿ ಟೈಗರ್ ಶ್ರಾಫ್ ಜೊತೆ ತೆರೆ ಹಂಚಿಕೊಂಡಿದ್ದ ದಿಶಾ ಪಟಾನಿ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಸಿನಿಮಾಗಳ ಮೂಲಕವಾಗಿ ಸುದ್ದಿ ಮಾಡುವ ದಿಶಾ ಪಟಾನಿ ಇದೀಗ ಹಾಟ್ ಫೋಟೋ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.

  • ಅಭಿಮಾನಿಗಾಗಿ ನೀಡಿದ ಒಂದು ಸೆಲ್ಫಿಯಿಂದಾಗಿ ಟಾಲಿವುಡ್‍ ನಲ್ಲಿ ಸುದ್ದಿಯಾದ ಪ್ರಭಾಸ್!

    ಅಭಿಮಾನಿಗಾಗಿ ನೀಡಿದ ಒಂದು ಸೆಲ್ಫಿಯಿಂದಾಗಿ ಟಾಲಿವುಡ್‍ ನಲ್ಲಿ ಸುದ್ದಿಯಾದ ಪ್ರಭಾಸ್!

    ಹೈದರಾಬಾದ್: ಬಾಹುಬಲಿ ಸಿನಿಮಾದ ನಂತರ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅವರಿಗೆ ಭಾರತದಾದ್ಯಂತ ಅಪಾರವಾದ ಅಭಿಮಾನಿಗಳಿದ್ದು, ಈಗ ಒಂದು ಫೋಟೋದಿಂದ ಟಾಲಿವುಡ್‍ನಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.

    ಪ್ರಭಾಸ್ ಅವರ ಅಭಿನಯ ಮಾತ್ರವಲ್ಲದೇ ಅವರ ಮೃದು ಸ್ವಭಾವವನ್ನು ಅಪಾರ ಅಭಿಮಾನಿಗಳು ಪ್ರೀತಿಸುತ್ತಾರೆ. ಇತ್ತೀಚೆಗೆ ಪ್ರಭಾಸ್ ಒಂದು ಕಾರ್ಯಕ್ರಮದಲ್ಲಿ ಅಂಗವಿಕಲ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಆ ವ್ಯಕ್ತಿ ಪ್ರಭಾಸ್ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕೆಂದು ಇಷ್ಟಪಟ್ಟಿದ್ದಾರೆ.

    PRABHAS FAN

    ಈ ವೇಳೆ ಅಭಿಮಾನಿ ತನ್ನ ಎರಡು ಕಾಲುಗಳ ಮೇಲೆ ನಿಂತುಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಪ್ರಭಾಸ್ ಅವರ ಪಕ್ಕದಲ್ಲಿ ತಾವೇ ತಮ್ಮ ಮೊಣಕಾಲನ್ನು ನೆಲದ ಮೇಲೆ ಊರಿ ನಂತರ ಅಭಿಮಾನಿಯೊಂದಿಗೆ ಒಂದು ಸೆಲ್ಫಿ ತೆಗೆಸಿಕೊಂಡಿದ್ದಾರೆ.

    ಪ್ರಭಾಸ್ ಅಭಿಮಾನಿಗಾಗಿ ತಾವೇ ನೆಲದ ಮೇಲೆ ಮೊಣಕಾಲು ಊರಿ ಫೋಟೋ ತೆಗೆಸಿಕೊಂಡಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪ್ರಸ್ತುತ ಪ್ರಭಾಸ್ `ಸಾಹೋ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಟಿ ಶ್ರದ್ಧಾ ಕಪೂರ್ ಅಭಿನಯಿಸಿತ್ತಿದ್ದಾರೆ. ಈ ಚಿತ್ರ ಸುಜೀತ್ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ.

    https://twitter.com/ActorPRABHA/status/978635882138828800