Tag: ಫಿಲ್ಮ್ ಫೇರ್

  • ಅವಾರ್ಡ್ ಕಾರ್ಯಕ್ರಮಕ್ಕೆ ವಿಭಿನ್ನ ಕಾಸ್ಟ್ಯೂಮ್ ನಲ್ಲಿ ಬಂದ ಜಾಕ್ವೆಲಿನ್

    ಅವಾರ್ಡ್ ಕಾರ್ಯಕ್ರಮಕ್ಕೆ ವಿಭಿನ್ನ ಕಾಸ್ಟ್ಯೂಮ್ ನಲ್ಲಿ ಬಂದ ಜಾಕ್ವೆಲಿನ್

    ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡಿಗೆ ಮೈಚಳಿ ಬಿಟ್ಟು ಕುಣಿದಿರುವ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಇತ್ತೀಚೆಗಷ್ಟೇ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ವಿಭಿನ್ನ ರೀತಿಯ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

    Jacqueline Fernandez 7

    ಈ ಪ್ರಶಸ್ತಿ ಸಮಾರಂಭಕ್ಕಾಗಿಯೇ ಕಾಸ್ಟ್ಯೂಮ್ ಸಿದ್ಧಪಡಿಸಿಕೊಂಡಿದ್ದ ಜಾಕ್ವೆಲಿನ್ ಬುಡಕಟ್ಟು ರಾಣಿಯ ವೇಷದಲ್ಲಿ ಕಾಣಿಸಿಕೊಂಡು ಕುತೂಹಲಕ್ಕೆ ಕಾರಣವಾದರು. ಅದೇ ಡ್ರೆಸ್ ನಲ್ಲೇ ಹತ್ತಾರು ಫೋಟೋಗಳು ಪೋಸ್ (Photoshoot)  ಕೂಡ ನೀಡಿದ್ದಾರೆ.

    Jacqueline Fernandez 4

    ಕರ್ನಾಟಕ ಮೂಲದ ಸುಖೇಶ್ ಚಂದ್ರಶೇಖರ್ (Sukhesh Chandrasekhar) ಸ್ನೇಹದಿಂದಾಗಿ ನಾನು ನೆಮ್ಮದಿ ಕಳೆದುಕೊಂಡೆ ಎಂದಿದ್ದರು ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez). ಬಹುಕೋಟಿ ವಂಚನೆಯ ಆರೋಪಿ ಆಗಿರುವ ಸುಖೇಶ್ ಚಂದ್ರಶೇಖರ್ ಕಡೆಯಿಂದ ದುಬಾರಿ ಬೆಲೆಯ ಗಿಫ್ಟ್ ಪಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಜಾಕ್ವೆಲಿನ್ ಇಡಿ ವಿಚಾರಣೆಯನ್ನು ಎದುರಿಸಿದ್ದರು.

    Jacqueline Fernandez 5

    ಕೋರ್ಟ್ ಮುಂದೆ ಹಾಜರಾಗಿದ್ದ ಜಾಕ್ವೆಲಿನ್ ಕಣ್ಣೀರಿಟ್ಟು ಆತನ ಸ್ನೇಹದಿಂದಾಗಿ ನೆಮ್ಮದಿ ಕಳೆದುಕೊಂಡೆ ಹಾಗೂ ಅವನು ನನ್ನ ಭಾವನೆಗಳೊಂದಿಗೆ ಆಟವಾಡಿ, ಜೀವನವನ್ನೇ ನರಕ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದರು. ಜೀವನವನ್ನು ಮಾತ್ರವಲ್ಲ, ವೃತ್ತಿ ಜೀವನವನ್ನೇ ಅವನು ಹದಗೆಡಿಸಿಬಿಟ್ಟಿದ್ದಾನೆ ಎಂದೂ ದೂರಿದ್ದರು. ಸುಖೇಶ್ ತಮಗೆ ಪರಿಚಯವಾಗಿದ್ದು ಪಿಂಕಿ ಇರಾನಿ ಎನ್ನುವ ಮಹಿಳೆಯಿಂದ ಎಂದು ಅವರು ಹೇಳಿಕೆ ಕೊಟ್ಟಿದ್ದರು.

    Jacqueline Fernandez 1

    ಸುಕೇಶ್ ಮತ್ತು ಜಾಕ್ವೆಲಿನ್ ಡೇಟಿಂಗ್ ವಿಚಾರ ಹಲವು ತಿಂಗಳಿಂದ ನಡೆಯುತ್ತಿದ್ದರೂ, ಅದು ಬೆಳಕಿಗೆ ಬಂದಿದ್ದು ಸುಕೇಶ್ ಬಂಧನವಾದ ನಂತರ. ವಂಚನೆಯ ಹಣವನ್ನು ಈತ ಯಾರಿಗೆಲ್ಲ ಖರ್ಚು ಮಾಡಿದ್ದಾನೆ ಎಂದು ತನಿಖೆಗೆ ಇಳಿದಾಗ ಅದರಲ್ಲಿ ಜಾಕ್ವೆಲಿನ್ ಹೆಸರು ಪತ್ತೆಯಾಗಿತ್ತು. ಹಲವು ದುಬಾರಿ ವಸ್ತುಗಳನ್ನು ಈಕೆಗೆ ಸುಕೇಶ್ ನೀಡಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದರು.

    Jacqueline Fernandez 3

    ತಾನು ಸುಕೇಶ್‌ನನ್ನು ಭೇಟಿಯಾಗಿದ್ದು ಕಡಿಮೆ. ಆತ ನನಗೇನೂ ಕೊಡಿಸಿಲ್ಲ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದರೂ, ತಾನು ಆತನನ್ನು ಪ್ರೀತಿಸುತ್ತಿಲ್ಲ ಎಂದು ಪದೇ ಪದೇ ಹೇಳಿಕೆ ಕೊಡುತ್ತಿದ್ದರೂ, ಸುಕೇಶ್ ಮಾತ್ರ ಅದನ್ನು ಒಪ್ಪುತ್ತಿಲ್ಲ. ಈಗಲೂ ಜಾಕ್ವೆಲಿನ್‌ಳನ್ನು ಪ್ರೀತಿಸುತ್ತಿದ್ದೇನೆ ಎಂದು ಜೈಲಿನಿಂದಲೇ ಸಂದೇಶ ಕಳುಹಿಸುತ್ತಿದ್ದಾನೆ. ಅಲ್ಲದೇ ಪ್ರೇಮಿಗಳ ದಿನದಂದು ಅವನು ವಿಶ್ ಮಾಡಿದ್ದ.

    Jacqueline Fernandez 6

    ಈಗಲೂ ಜಾಕ್ವೆಲಿನ್ ರನ್ನು ಸುಕೇಶ್ ಪ್ರೀತಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಜೈಲಿನಿಂದಲೇ ಅವನು ಅನೇಕ ಪತ್ರಗಳನ್ನು ಬರೆದಿದ್ದಾನೆ. ‘ಜಾಕ್ವೆಲಿನ್ ಜೊತೆ ನನ್ನ ಸ್ನೇಹ ಮುರಿಯಬೇಕು ಎಂದು ಹಲವಾರು ಬಾರಿ ನೋರಾ ಪ್ರಯತ್ನಿಸಿದಳು. ಜಾಕ್ವೆಲಿನ್ ಜೊತೆ ನಾನು ಇರುವುದು ಆಕೆಗೆ ಇಷ್ಟವಿರಲಿಲ್ಲ. ಜಾಕ್ವೆಲಿನ್ ಜೊತೆ ಹೋಗಲು ನೋರಾ ಬಿಡುತ್ತಿರಲಿಲ್ಲ. ನಾನು ಕಾಲ್ ರಿಸೀವ್ ಮಾಡದೇ ಇದ್ದರೆ ಪದೇ ಪದೇ ಕಾಲ್ ಮಾಡುತ್ತಿದ್ದಳು. ಜಾಕ್ವೆಲಿನ್ ಜೊತೆಗಿನ ಸ್ನೇಹವನ್ನು ಮುರಿದುಕೋ ಎಂದು ಹೇಳುತ್ತಿದ್ದಳು’ ಎಂದು ಪತ್ರದಲ್ಲಿ ಸುಕೇಶ್ ಬರೆದಿದ್ದ.

  • ಫಿಲ್ಮ್ ಫೇರ್: ಆ್ಯಕ್ಟ್ 1978 ಚಿತ್ರಕ್ಕೆ ನಾಲ್ಕು ಪ್ರಶಸ್ತಿ, ಅತ್ಯುತ್ತಮ ನಟ ಧನಂಜಯ್, ನಟಿ ಯಜ್ಞಾ

    ಫಿಲ್ಮ್ ಫೇರ್: ಆ್ಯಕ್ಟ್ 1978 ಚಿತ್ರಕ್ಕೆ ನಾಲ್ಕು ಪ್ರಶಸ್ತಿ, ಅತ್ಯುತ್ತಮ ನಟ ಧನಂಜಯ್, ನಟಿ ಯಜ್ಞಾ

    ದಕ್ಷಿಣ ಭಾರತದ ಫಿಲ್ಮ್ ಫೇರ್ (Filmfare) ಪ್ರಶಸ್ತಿ ಪ್ರದಾನ ಸಮಾರಂಭವು ನಿನ್ನೆ ಬೆಂಗಳೂರಿನಲ್ಲಿ ನಡೆದಿದ್ದು, 2020 ಹಾಗೂ 2021ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ 67ನೇ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ನೀಡಲಾಗಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಿಗೆ ಪ್ರತ್ಯೇಕವಾಗಿ ಈ ಪ್ರಶಸ್ತಿಗಳನ್ನು ನೀಡಲಾಗಿದ್ದು, ನಾಲ್ಕು ಸಿನಿಮಾ ರಂಗದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    FotoJet 1 35

    ಎರಡು ವರ್ಷಗಳಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ (Mansore) ಅವರ ಆ್ಯಕ್ಟ್ 1978 ಸಿನಿಮಾಗೆ ಅತೀ ಹೆಚ್ಚು ಪ್ರಶಸ್ತಿಗಳು ದೊರೆತದ್ದು, ಇದೇ ಸಿನಿಮಾದ ನಟನೆಗಾಗಿ ಯಜ್ಞಾ ಶೆಟ್ಟಿ ಅವರು ಅತ್ಯುತ್ತಮ ನಟಿಯಾಗಿ ಹೊರ ಹೊಮ್ಮಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಯು ಡಾಲಿ ಧನಂಜಯ್ (Dhananjay) ಬಡವ ರಾಸ್ಕಲ್ ಸಿನಿಮಾದ ನಟನೆಗಾಗಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್‌ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ

    ASHWINI PUNEETH RAJKUMAR 1

    ಈ ಬಾರಿ ಜೀವ ಮಾನ ಸಾಧನೆಗಾಗಿ ಪುನೀತ್ (Puneeth Rajkumar) ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಘೋಷಿಸಿದ್ದು, ಈ ಪ್ರಶಸ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪಡೆದುಕೊಂಡಿದ್ದಾರೆ. ಡಾ.ರಾಜ್ ಕುಟುಂಬದ ಕುಡಿ, ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ಅವರಿಗೆ ನಿನ್ನ ಸನಿಹಕೆ ಚಿತ್ರಕ್ಕಾಗಿ ಅತ್ಯುತ್ತಮ ಡೆಬ್ಯೂ ನಟಿ ಪ್ರಶಸ್ತಿಯು ದೊರೆತಿರುವುದು ಮತ್ತೊಂದು ವಿಶೇಷ.

    FotoJet 3 21

    ಆ್ಯಕ್ಟ್ 1978 ಸಿನಿಮಾಗೆ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಿ.ಸುರೇಶ್ ಪಡೆದುಕೊಂಡಿದ್ದರೆ, ಅತ್ಯುತ್ತಮ ಗೀತ ಸಾಹಿತ್ಯಕ್ಕಾಗಿ ಜಯಂತ್ ಕಾಯ್ಕಿಣಿ ಪ್ರಶಸ್ತಿ  ಸ್ವೀಕರಿಸಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯಲು ಯಜ್ಞಾ ಗೈರಾದ ಕಾರಣದಿಂದಾಗಿ ಅವರ ಪರವಾಗಿ ನಿರ್ದೇಶಕ ಮಂಸೋರೆ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅತ್ಯುತ್ತಮ ಚಿತ್ರದ ಪ್ರಶಸ್ತಿಯನ್ನು ನಿರ್ಮಾಪಕ ದೇವರಾಜ್ ಆರ್ ಪಡೆದುಕೊಂಡರು.

    FotoJet 2 31

    ಅತ್ಯುತಮ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ (ಯುವರತ್ನ), ಅತ್ಯುತಮ ಛಾಯಾಗ್ರಾಹಕ ಶ್ರೀಶ ಕುಡುವಳ್ಳಿ (ರತ್ನನ ಪ್ರಪಂಚ), ಅತ್ಯುತಮ ಹಿನ್ನೆಲೆ ಗಾಯಕಿ ಅನುರಾಧ ಭಟ್ (ಧೀರ ಸಮ್ಮೋಹಗಾರ-ಬಿಚ್ಚುಗತ್ತಿ), ಅತ್ಯುತಮ ಹಿನ್ನೆಲೆ ಗಾಯಕ ರಘು ದೀಕ್ಷಿತ್ (ನಿನ್ನ ಸನಿಹಕೆ), ಅತ್ಯುತಮ ಸಂಗೀತ ನಿರ್ದೇಶಕ ವಾಸುಕಿ ವೈಭವ್ (ಬಡವ ರಾಸ್ಕಲ್), ಅತ್ಯುತಮ ನಟಿ (ಕ್ರಿಟಿಕ್ಸ್) ಮಿಲನ ನಾಗರಾಜ್ (ಲವ್ ಮಾಕ್ಟೇಲ್), ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್), ಅತ್ಯುತ್ತಮ ನಟ (ಕ್ರಿಟಿಕ್ಸ್) ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್) ಸಿನಿಮಾಗಳಿಗಾಗಿ ಪಡೆದಿದ್ದಾರೆ. ಗರುಡ ಗಮನ ವೃಷಭ ವಾಹನ ಚಿತ್ರದ ನಿರ್ದೇಶನಕ್ಕಾಗಿ ರಾಜ್ ಬಿ ಶೆಟ್ಟಿ (Raj B Shetty) ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯು ಸಂದಿದೆ.

    Live Tv
    [brid partner=56869869 player=32851 video=960834 autoplay=true]