Tag: ಪ್ರೇಮ್

  • ಎಮ್ಮೆ ಕೊಡಿಸೋದಾಗಿ KD ನಿರ್ದೇಶಕನಿಗೆ ಲಕ್ಷ ಲಕ್ಷ ವಂಚನೆ – ಪ್ರೇಮ್ ಹೇಳಿದ್ದೇನು..?

    ಎಮ್ಮೆ ಕೊಡಿಸೋದಾಗಿ KD ನಿರ್ದೇಶಕನಿಗೆ ಲಕ್ಷ ಲಕ್ಷ ವಂಚನೆ – ಪ್ರೇಮ್ ಹೇಳಿದ್ದೇನು..?

    ʻಕೆಡಿʼ ಚಿತ್ರದ ನಿರ್ದೇಶಕ, ನಟ ಪ್ರೇಮ್‌ಗೆ (Prem) ಎಮ್ಮೆ ಕೊಡಿಸೋದಾಗಿ ಹೇಳಿ ಗುಜರಾತ್‌ ಮೂಲದ ವ್ಯಕ್ತಿಯೊಬ್ಬ ಲಕ್ಷ ಲಕ್ಷ ಹಣ ವಂಚನೆ ಮಾಡಿದ್ದಾರೆಂದು ತಿಳಿದುಬಂದಿದೆ.

    ಕೆಡಿ ಸಿನಿಮಾ ನಿರ್ದೇಶಕ ಪ್ರೇಮ್ ಹೈನುಗಾರಿಕೆಗಾಗಿ ಗುಜರಾತ್ ಮೂಲದ ಎರಡು ಎಮ್ಮೆಗಳನ್ನ ಖರೀದಿಸಲು ಮುಂಗಡವಾಗಿ 25,000 ಹಣ ನೀಡಿದ್ದರು. ಬಳಿಕ ಗುಜರಾತ್ ಮೂಲದ ವನರಾಜ್ ಭಾಯ್ ಎಮ್ಮೆ ವಿಡಿಯೋ ಹಾಗೂ ಫೋಟೋಗಳನ್ನ ವಾಟ್ಸಪ್ ಮೂಲಕ ಕಳಿಸಿದ್ದರು. ತದನಂತರ 3,75,000 ರೂ.ಗಳನ್ನ ಪ್ರೇಮ್‌ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದರು. ಇದಾದ 1 ವಾರದೊಳಗೆ ಎಮ್ಮೆ ಕಳುಹಿಸುವುದಾಗಿ ಹೇಳಿದ್ದ ವ್ಯಕ್ತಿ ಮತ್ತೆ 50,000 ಹಣ ವರ್ಗಾವಣೆ ಮಾಡುವಂತೆ ಹೇಳಿದ್ದು, ಒಟ್ಟು 4.5ಲಕ್ಷ ಹಣವನ್ನ ನಿರ್ದೇಶಕ ಪ್ರೇಮ್ ವನರಾಜ್ ಎಂಬಾತನಿಗೆ ವರ್ಗಾಯಿಸಿದ್ದರು. ಆದ್ರೆ ಹಣ ಪಡೆದ ಬಳಿಕ ಎಮ್ಮ ಕೊಡಿಸ್ತೀನಿ ಅಂದವನು ನಾಪತ್ತೆಯಾಗಿದ್ದಾನೆ.

    Director Prem

    ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ವನರಾಜ್ ಭಾಯ್ ವಿಳಾಸಕ್ಕೆ ನಿರ್ದೇಶಕ ಪ್ರೇಮ್ ತಮ್ಮ ಹುಡುಗರನ್ನ ಕಳುಹಿಸಿ ಹುಡುಕಾಡಿಸಿದ್ದರು. ಆದ್ರೆ ಹಣ ಪಡೆದ ವನರಾಜ್ ಕೈಗೆ ಸಿಕ್ಕಿಲ್ಲ ಎಂದು ದೂರು ನೀಡಿದ್ದರು. ಹಣ ಪಡೆದ ವನರಾಜ್ ಭಾಯ್ ಎಮ್ಮೆಯನ್ನೂ ನೀಡದೇ ಹಣವನ್ನ ಮರಳಿ ಕೊಡದೇ ವಂಚಿಸಿದ್ದಾರೆಂದು ಆರೋಪ ಮಾಡಲಾಗಿತ್ತು. ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರೇಮ್ ಅವರು ಮ್ಯಾನೇಜರ್ ದಶಾವರ ಚಂದ್ರು ಮುಖಾಂತರ ದೂರು ದಾಖಲಿಸಿದ್ದರು.

    ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಎರಡು ಎಮ್ಮೆಗಳನ್ನ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗ್ತಿದೆ. ಜುಲೈ 22ರಿಂದ ಜುಲೈ 24ರ ಮಧ್ಯೆ ಹಣ ಕಳುಹಿಸಿದ್ದ ನಿರ್ದೇಶಕ ಪ್ರೇಮ್‌ಗೆ ಕಳೆದೊಂದು ವಾರದ ಹಿಂದೆ ಎರಡು ಎಮ್ಮೆಗಳನ್ನ ಕಳುಹಿಸಿಕೊಟ್ಟಿದ್ದಾರೆ ಎಂದು ʻಪಬ್ಲಿಕ್ ಟಿವಿʼಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನು ಮ್ಯಾನೇಜರ್ ದಶಾವರ ಚಂದ್ರು ಕೂಡಾ ಸ್ಪಷ್ಟನೆ ನೀಡಿದ್ದು, ವನರಾಜ್ ಎಂಬುವವರ ಫೋನ್ ಸ್ವಿಚ್ ಆಫ್ ಆಗಿತ್ತು, ತದನಂತರ ಎಮ್ಮೆ ಕಳುಹಿಸಿಕೊಟ್ಟಿದ್ದಾರೆ ಎಂದಿದ್ದಾರೆ. ಇನ್ನು ಪ್ರೇಮ್ ಆಪ್ತ ಮೂಲಗಳ ಮಾಹಿತಿ ಪ್ರಕಾರ ಹಣ ವಾಪಾಸ್ ಕೊಡೋದಾಗಿ ಗುಜರಾತ್ ಮೂಲದ ವನರಾಜ್ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

    ನಿರ್ದೇಶಕ ಪ್ರೇಮ್ ಚಿತ್ರರಂಗದಲ್ಲಿ ಬ್ಯುಸಿ ಶೆಡ್ಯೂಲ್ ನಡುವೆಯೂ ತೋಟಗಾರಿಕೆ, ಹೈನುಗಾರಿಕೆ, ಹಳ್ಳಿಯ ಆಚರಣೆಗಳನ್ನ ಮಾತ್ರ ಸಿನಿಮಾದ ಜೊತೆ ಜೊತೆಗೆ ಮಾಡುತ್ತಾ ಬರುತ್ತಿದ್ದಾರೆ. ಹೀಗಾಗಿ ತಮ್ಮ ತೋಟದ ಮನೆಯಲ್ಲಿ ಹೈನುಗಾರಿಕೆಗಾಗಿ ಗುಜರಾತ್‌ನ ಗಿರ್ ತಳಿಯ ಎರಡು ಎಮ್ಮೆಯನ್ನ ಕೊಂಡುಕೊಳ್ಳಲು ಮುಂದಾಗಿದ್ದಾಗ ವಂಚನೆ ಆರೋಪ ಕೇಳಿ ಬಂದಿತ್ತು. ಸದ್ಯಕ್ಕೆ ಸ್ವತಃ ನಿರ್ದೇಶಕ ಪ್ರೇಮ್ ಹಾಗೂ ಅವರ ಮ್ಯಾನೇಜರ್ ಚಂದ್ರು ಸ್ಪಷ್ಟಪಡಿಸಿದ ಹಾಗೆ ಎಲ್ಲವೂ ಬಗೆಹರಿದಿದೆ ಎಂದಿದ್ದಾರೆ. ಸದ್ಯ ಕೆಡಿ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ನಿರ್ದೇಶಕ ಪ್ರೇಮ್.

  • ಕೆಡಿ ಟೀಸರ್ ಡೇಟ್ ಘೋಷಣೆ – ಪ್ರಚಾರದ ವೈಖರಿಯಲ್ಲಿದೆ ಮಿಸ್ಟರಿ!

    ಕೆಡಿ ಟೀಸರ್ ಡೇಟ್ ಘೋಷಣೆ – ಪ್ರಚಾರದ ವೈಖರಿಯಲ್ಲಿದೆ ಮಿಸ್ಟರಿ!

    ಧ್ರುವ ಸರ್ಜಾ (Dhruva Sarja) ನಟಿಸಿರುವ ಪ್ರೇಮ್ (Prem) ನಿರ್ದೇಶಿರುವ ಬಹುನಿರೀಕ್ಷಿತ ಚಿತ್ರವೇ `ಕೆಡಿ’. ಚಿತ್ರದ ಎರಡು ಹಾಡುಗಳು ಈಗಾಗ್ಲೇ ರಿಲೀಸ್ ಆಗಿ ವೈರಲ್ ಆಗಿದೆ. ಇದೀಗ ಟೀಸರ್ ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ.

    ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಚಿತ್ರಗಳ ಟೀಸರ್, ಟ್ರೇಲರ್‌ ಏಕಕಾಲದಲ್ಲಿ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತವೆ. ಆದರೆ ಕೆಡಿ (KD) ಟೀಮ್ ಟೀಸರ್ ರಿಲೀಸ್ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ನಡೆಸಲು ಪ್ಲ್ಯಾನ್‌ ಮಾಡಿಕೊಂಡಿದೆ.ಒಂದೊಂದು ಭಾಷೆಯಲ್ಲಿ ಒಂದೊಂದು ದಿನ ಟೀಸರ್‌ ರಿಲೀಸ್ ಆಗಲಿದೆ.  ಇದನ್ನೂ ಓದಿ: ದರ್ಶನ್ ಫ್ಯಾಮಿಲಿ ಕುಡಿ ಶೀಘ್ರದಲ್ಲೇ ಹೀರೋ ಆಗಿ ಎಂಟ್ರಿ?

    dhruva sarja reeshma nanaiah

    ಆರಂಭಿಕವಾಗಿ ಇದೇ ಗುರುವಾರ ಮುಂಬೈನಲ್ಲಿ ಹಿಂದಿ ಭಾಷೆಯ ಟೀಸರ್ ಮಧ್ಯಾಹ್ನ ರಿಲೀಸ್ ಆಗುತ್ತೆ. ಅದೇ ದಿನ ಹೈದ್ರಾಬಾದ್‌ನಲ್ಲಿ ತೆಲುಗು ಭಾಷೆಯ ಟೀಸರ್ ರಿಲೀಸ್ ಆಗುತ್ತೆ. ಕನ್ನಡದಲ್ಲಿ ಯಾವಾಗ ಎಂದು ಕಾಯುತ್ತಿದ್ದ ಫ್ಯಾನ್ಸ್ ಕುತೂಹಲಕ್ಕೆ ಇದುವರೆಗೂ ಉತ್ತರ ಕೊಟ್ಟಿಲ್ಲ ಕೆಡಿ ಟೀಮ್. ಇದನ್ನೂ ಓದಿ: `ಎಕ್ಕ’ ಸಿನಿಮಾ ರಿಲೀಸ್‌ಗೆ ದಿನಗಣನೆ – ಮಂತ್ರಾಲಯ ರಾಯರ ದರ್ಶನ ಪಡೆದ ಯುವ ರಾಜ್‌ಕುಮಾರ್

    ಪ್ರೇಮ್ ಸಿನಿಮಾ ಅಂದ್ಮೇಲೆ ಪ್ರಚಾರ ಹೈಪು ದೊಡ್ಡಮಟ್ಟಕ್ಕಿರಲೇಕು. ಅದರಂತೆ ವಿವಿಧ ಊರುಗಳಲ್ಲಿ ಒಂದೊಂದು ದಿನ ಗ್ಯಾಪ್ ತೆಗೆದುಕೊಂಡು ಟೀಸರ್ ರಿಲೀಸ್ ಮಾಡಲಿದೆ ಟೀಮ್. ಘೋಷಣೆಯೂ ಮೂರು ದಿನ ನಡೆಯಲಿದ್ದು ಭಾನುವಾರ ಪೂರ್ತಿ ದಿನ ಅಭಿಮಾನಿಗಳು ಕಾದರೂ ಕನ್ನಡ (Kannada) ಭಾಷೆಯ ಟೀಸರ್ ಡೇಟ್ ಘೋಷಣೆ ಆಗಲಿಲ್ಲ. ಆದರೆ ಸೀಕ್ರೇಟ್ ಏನ್ ಗೊತ್ತಾ ಎಲ್ಲಾ ಭಾಷೆಯ ಬಳಿಕ ಕೊನೆಯಲ್ಲಿ ಬೆಂಗಳೂರಿನಲ್ಲಿ ಮೂಲ ಭಾಷೆ ಕನ್ನಡದಲ್ಲಿ ಟೀಸರ್ ರಿಲೀಸ್ ಆಗುತ್ತೆ. ಇದು ಕೆಡಿ ಪ್ಲ್ಯಾನ್‌. ಕೆಡಿ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ಕನ್ನಡದ ಕೆವಿಎನ್ ಫಿಲಂಸ್ ನಿರ್ಮಿಸಿದೆ.

  • ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು – ಉಗ್ರರ ದಾಳಿ ಖಂಡಿಸಿದ ಪ್ರೇಮ್

    ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು – ಉಗ್ರರ ದಾಳಿ ಖಂಡಿಸಿದ ಪ್ರೇಮ್

    – ಮೋದಿ 100% ಹ್ಯಾಂಡಲ್ ಮಾಡ್ತಾರೆ ಎಂದ ನಿರ್ದೇಶಕ

    ಬೆಂಗಳೂರು: ಪಾಕಿಸ್ತಾನದ ಉಗ್ರರು ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು ಎಂದು ನಿರ್ದೇಶಕ ಪ್ರೇಮ್ (Director Prem) ಪೆಹಲ್ಗಾಮ್ ಉಗ್ರರ ದಾಳಿಯನ್ನು (Pahalgam Terror Attack) ತೀವ್ರವಾಗಿ ಖಂಡಿಸಿದ್ದಾರೆ.

    ಉಗ್ರರ ದಾಳಿಯ ಕುರಿತು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಉಗ್ರರಿಗೆ ಸೆಂಟಿಮೆಂಟ್ ತೊರಿಸಲು ಹೋಗಲೇಬಾರದು. ಏನಿದ್ರೂ ಹೊಡಿ, ಕಡಿ ಅಷ್ಟೇ. ಅಮಾಯಕ ಜೀವಗಳನ್ನ ತೆಗೆದಿದ್ದಾರೆ ಅಂದ್ರೆ ಅವರನ್ನೆಲ್ಲ ಕತ್ತರಿಸಿ, ಪೀಸ್ ಮಾಡಿ ಎಸೆಯಬೇಕು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಗನ್ ಹಿಡಿದು ‘ಕಿಲ್ಲರ್’ ಕಥೆ ಹೇಳೋಕೆ ಸಜ್ಜಾದ ಜ್ಯೋತಿ ರೈ

    ಅವರದ್ದು ಹೇಡಿತನ, ಅವರ ಮೇಲೆ ಎಮೋಷನ್ಸ್ ಬೇಡ. ಕೆಲವರು ಯುದ್ಧ ಬೇಡ ಅಂತಾ ಹೇಳ್ತಾರಲ್ಲ. ಆದರೆ ಸ್ವಾಮಿ ಯುದ್ಧ ಮಾಡ್ಬೇಕು. ನಾವು ಬದುಕಬೇಕು ಅಂದ್ರೆ ಯುದ್ಧ ಮಾಡಲೇಬೇಕು. ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವು ಯುದ್ಧ ಮಾಡಬೇಕು. ಇದು ಉಗ್ರರ ಹೀನಕೃತ್ಯ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಂತ್ರವಾದಿ ಗೆಟಪ್‌ನಲ್ಲಿ ಬಂದ ಸಮಂತಾ- ಏನಿದು ಹೊಸ ಅವತಾರ?

    ಪ್ರಧಾನಿ ಮೋದಿಯವ್ರು (Narendra Modi) ಇದ್ದಾರೆ. 100% ಅವರು ಇದನ್ನು ಹ್ಯಾಂಡಲ್ ಮಾಡ್ತಾರೆ. ನಮ್ಮವರು ಏನೂ ಕಮ್ಮಿ ಇಲ್ಲ. ಆ ಉಗ್ರರನ್ನು ಸುಮ್ನೆ ಬಿಡಲ್ಲ, ಹೊಡಿತಾರೆ. ಹೊಡಿಲಿ ಅಂತಾನೇ ನಾನು ಕಾಯ್ತಿದ್ದೀನಿ ಎಂದು ಹೇಳಿದರು. ಇದನ್ನೂ ಓದಿ: ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್

    ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದು, 1 ವಿದೇಶಿ ಪ್ರವಾಸಿಗ ಸೇರಿ 26 ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದರು. ಈ ದಾಳಿಗೆ ದೇಶದಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿದ್ದು, ಎಲ್ಲೆಡೆ ಪ್ರತೀಕಾರದ ಕೂಗು ಕೇಳಿಬರುತ್ತಿದೆ.

  • KD ಚಿತ್ರದ ಸ್ಪೆಷಲ್‌ ವಿಡಿಯೋ ಔಟ್- ಮಸ್ತ್ ಆಗಿದೆ ಮಚ್ಚಲಕ್ಷ್ಮಿಯ ಅವತಾರ

    KD ಚಿತ್ರದ ಸ್ಪೆಷಲ್‌ ವಿಡಿಯೋ ಔಟ್- ಮಸ್ತ್ ಆಗಿದೆ ಮಚ್ಚಲಕ್ಷ್ಮಿಯ ಅವತಾರ

    ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯಗೆ (Reeshma Nanaiah) ಇಂದು (ಏ.28) 23ನೇ ವರ್ಷದ ಜನ್ಮದಿನದ (Birthday) ಸಂಭ್ರಮ. ಈ ಹಿನ್ನೆಲೆ ‘ಕೆಡಿ’ ಚಿತ್ರದ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿ ನಾಯಕಿ ರೀಷ್ಮಾಗೆ ಡೈರೆಕ್ಟರ್ ಪ್ರೇಮ್ (Prem) ಶುಭಕೋರಿದ್ದಾರೆ. ಇದನ್ನೂ ಓದಿ:ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು

    reeshma

    ಧ್ರುವ ಸರ್ಜಾ ನಟನೆಯ ‘ಕೆಡಿ’ (KD) ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದು, ಈ ಚಿತ್ರದ ಶೂಟಿಂಗ್ ಸಮಯದಲ್ಲಿ ತೆಗೆದಿರುವ ವಿಡಿಯೋ ಕ್ಲೀಪ್‌ಗಳನ್ನು ಡೈರೆಕ್ಟರ್ ಶೇರ್ ಮಾಡಿ, ನಟಿಗೆ ವಿಶೇಷವಾಗಿ ನಿರ್ದೇಶಕ ಪ್ರೇಮ್ ಶುಭಕೋರಿದ್ದಾರೆ. ಹ್ಯಾಪಿ ಬರ್ತ್ಡೇ ಮಗನೇ ಎಂದು ರೀಷ್ಮಾಗೆ ಹಾರೈಸಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ: ಉಗ್ರರ ದಾಳಿ ಬಗ್ಗೆ ರಾಗಿಣಿ ಕಿಡಿ

     

    View this post on Instagram

     

    A post shared by Prem❣️s (@directorprems)

    ರೀಷ್ಮಾ ನಾಣಯ್ಯ ಅವರು ಧ್ರುವಗೆ (Dhruva Sarja) ಜೋಡಿಯಾಗಿ ನಟಿಸಿದ್ದಾರೆ. ಮಚ್ಚಲಕ್ಷ್ಮಿ ಎಂಬ ರಗಡ್ ಆಗಿರೋ ಪಾತ್ರದಲ್ಲಿ ಅವರು ಜೀವ ತುಂಬಿದ್ದಾರೆ. ಸದ್ಯ ಸೆಟ್‌ನಲ್ಲಿ ತೆಗೆದಿರುವ ನಟಿಯ ವಿಡಿಯೋ ತುಣುಕುಗಳು ಕ್ಯೂಟ್ ಆಗಿ ಮೂಡಿ ಬಂದಿದೆ.

    REESHMA NANAIAH

    ಈ ಚಿತ್ರದಲ್ಲಿ ಧ್ರುವ, ರೀಷ್ಮಾ ಜೊತೆ ಶಿಲ್ಪಾ ಶೆಟ್ಟಿ, ರವಿಚಂದ್ರನ್, ಸಂಜಯ್ ದತ್, ರಮೇಶ್ ಅರವಿಂದ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರೇಮ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

    reeshma

    ಅಂದಹಾಗೆ, ‘ಕೆಡಿ’ ಸಿನಿಮಾದ ಜೊತೆ ಡಾಲಿಗೆ ನಾಯಕಿಯಾಗಿ ‘ಅಣ್ಣ ಇನ್ ಮೆಕ್ಸಿಕೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್ ಪುತ್ರನಿಗೆ ರಂಜನಿ ರಾಘವನ್ ಆ್ಯಕ್ಷನ್ ಕಟ್

    ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್ ಪುತ್ರನಿಗೆ ರಂಜನಿ ರಾಘವನ್ ಆ್ಯಕ್ಷನ್ ಕಟ್

    ಕಿರುತೆರೆ ಫೇಮಸ್ ನಟಿ ರಂಜನಿ ರಾಘವನ್ (Ranjani Raghavan) ಅವರು ನಿರ್ದೇಶಕಿಯಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ನಟಿಯ ನಿರ್ದೇಶನದ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಪುತ್ರ ವಿಹಾನ್ (Vihaan) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

    prem vihaan

    ರಂಜನಿ ರಾಘವನ್ ಅವರು ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡಿದ್ರೂ ಕೂಡ ಭಿನ್ನವಾಗಿರೋ ಕಥೆಯನ್ನೇ ಬರೆದಿದ್ದಾರೆ. ತಂದೆ ಹಾಗೂ ಮಗನ ಬಾಂಧವ್ಯದ ಮನಮುಟ್ಟುವ ಕಥೆ ಹೇಳೋಕೆ ಬರುತ್ತಿದ್ದಾರೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್‌ ಸದ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಚೊಚ್ಚಲ ಚಿತ್ರಕ್ಕೆ ವಿಭಿನ್ನವಾಗಿರೋ ಹೆಸರನ್ನೇ ನಟಿ ಆಯ್ಕೆ ಮಾಡಿದ್ದಾರೆ. ‘ಡಿ ಡಿ ಢಿಕ್ಕಿ’ ಎಂದು ಹೆಸರಿಟ್ಟಿದ್ದಾರೆ. ಪ್ರೇಮ್ ಮತ್ತು ಗಣೇಶ್ ಪುತ್ರ ವಿಹಾನ್ ಸಿನಿಮಾದಲ್ಲಿ ತಂದೆ ಮತ್ತು ಮಗನಾಗಿ ನಟಿಸಿದ್ದಾರೆ. ಈಗಾಗಲೇ ಶೇ.60ರಷ್ಟು ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ‘ಕಾಟೇರ’ ರೈಟರ್ ಜಡೇಶ್ ಅವರು ಹಂಪಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣಕ್ಕಿಳಿದಿದ್ದಾರೆ. ರಾಮಕೃಷ್ಣ ಹಾಗೂ ಆನಂದ್ ಕುಮಾರ್ ಜೊತೆ ನಿರ್ಮಾಣಕ್ಕೆ ಜಡೇಶ್ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಗುಡ್‌ ನ್ಯೂಸ್‌ ಕೊಟ್ರು ರಂಜನಿ ರಾಘವನ್

    ranjani raghavan

    ರಂಜನಿ ಬರೆದ ಕಥೆ ಇಷ್ಟವಾಗಿ ತಂಡದ ಜೊತೆ ಪ್ರೇಮ್ ಕೈಜೋಡಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜನೆಗೆ ಸಾಥ್‌ ನೀಡಿದ್ದಾರೆ. ಈ ಮೂವರ ಕಾಂಬಿನೇಷನ್‌ನಲ್ಲಿ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

  • ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ್‌, ಶರಣ್ಯ ಶೆಟ್ಟಿ

    ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ್‌, ಶರಣ್ಯ ಶೆಟ್ಟಿ

    ವ್ಲಿ ಸ್ಟಾರ್ ಪ್ರೇಮ್ (Prem) ಮತ್ತು ಶರಣ್ಯ ಶೆಟ್ಟಿ (Sharanya Shetty) ಉಡುಪಿ ಶ್ರೀಕೃಷ್ಣ ದೇಗುಲಕ್ಕೆ (Sri Krishna Temple) ಭೇಟಿ ನೀಡಿದ್ದಾರೆ. ಚಿತ್ರತಂಡದ ಜೊತೆ ಪ್ರೇಮ್ ಹಾಗೂ ಶರಣ್ಯ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಅಂಬಿ ಮೊಮ್ಮಗನ ನಾಮಕರಣ ಸಂಭ್ರಮ: ಕಿಚ್ಚ ಸುದೀಪ್‌ ಭಾಗಿ

    prem sharanya shetty

    ಪ್ರೇಮ್ ನಟನೆಯ ಹೊಸ ಸಿನಿಮಾಗೆ ಶರಣ್ಯ ಶೆಟ್ಟಿ ನಾಯಕಿಯಾಗಿದ್ದಾರೆ. ಹಾಗಾಗಿ ಈ ಸಿನಿಮಾದ ಶೂಟಿಂಗ್‌ಗೆ ಚಾಲನೆ ಸಿಗುವ ಮುನ್ನ ಚಿತ್ರತಂಡದೊಂದಿಗೆ ಉಡುಪಿಯ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.

    ಅಂದಹಾಗೆ, ಲವ್ಲಿ ಸ್ಟಾರ್ ಪ್ರೇಮ್ ಹೊಸ ಸಿನಿಮಾಗೆ ತೇಜಸ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರದಲ್ಲಿ ಪ್ರೇಮ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶರಣ್ಯ ಅವರಿಗೂ ಉತ್ತಮ ಪಾತ್ರ ಸಿಕ್ಕಿದೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಈಗಾಗಲೇ ನೆರವೇರಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.

  • ಪ್ರೇಮ್‌ ಜೊತೆ ಸಿನಿಮಾ ಮಾಡೇ ಮಾಡ್ತೀನಿ: ದರ್ಶನ್

    ಪ್ರೇಮ್‌ ಜೊತೆ ಸಿನಿಮಾ ಮಾಡೇ ಮಾಡ್ತೀನಿ: ದರ್ಶನ್

    ಟ ದರ್ಶನ್ (Darshan) ಫೆ.16ರಂದು ಬರ್ತ್‌ಡೇ ಸಂಭ್ರಮವಾಗಿದ್ದು, ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡಲ್ಲ ಎಂದು ವಿಡಿಯೋ ಮೂಲಕ ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ. ಇದರೊಂದಿಗೆ ಡೈರೆಕ್ಟರ್ ಪ್ರೇಮ್ ಜೊತೆ ದರ್ಶನ್ ಸಿನಿಮಾ ಬರಲಿದೆಯಾ ಎಂಬ ಪ್ರಶ್ನೆಗೆ ವಿಡಿಯೋ ಮೂಲಕ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಪ್ರೇಮ್‌ (Prem) ಜೊತೆ ಸಿನಿಮಾ ಮಾಡೋದು ನನ್ನ ಗುರುಗಳು ಹಾಗೂ ಸ್ನೇಹಿತೆ ರಕ್ಷಿತಾ (Rakshitha Prem) ಆಸೆ ಎಂದಿದ್ದಾರೆ.

    DARSHAN 1 1

    ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆ ಈ ವರ್ಷ ಬರ್ತ್‌ಡೇಗೆ ನಾನು ಸಿಗೋದಿಲ್ಲ. ತುಂಬಾ ಹೊತ್ತು ನಿಂತುಕೊಳ್ಳೋಕೆ ಆಗಲ್ಲ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ದರ್ಶನ್ ಸೆಲೆಬ್ರಿಟಿಗಳಿಗೆ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ:ಆರೋಗ್ಯ ಸಮಸ್ಯೆ ಇದೆ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಸೆಲೆಬ್ರಿಟಿಗಳಿಗೆ ದರ್ಶನ್‌ ಮನವಿ

    rakshita darshan

    ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. 101% ಹೌದು ನಾನು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ದುಡ್ಡು ವಾಪಸ್ ಕೊಟ್ಟಿದ್ದೇನೆ. ನನ್ನ ಹತ್ತಿರ ಸಿನಿಮಾಗೆ ಬರುವಾಗಲೇ ಅವರಿಗೆ ಸಿಕ್ಕಾಪಟ್ಟೆ ಕಮಿಟ್‌ಮೆಂಟ್ ಇತ್ತು. ಹಾಗಾಗಿ ವಾಪಸ್ ಕೊಟ್ಟೆ. ಮುಂದೆ ನಾವಿಬ್ಬರೂ ಸಿನಿಮಾ ಮಾಡೇ ಮಾಡ್ತೀವಿ ಎಂದಿದ್ದಾರೆ. ಅದಷ್ಟೇ ಅಲ್ಲ, ಮುಂದೆ ನಾನು ಪ್ರೇಮ್ ಒಟ್ಟಾಗಿ ಸಿನಿಮಾ ಮಾಡೇ ಮಾಡುತ್ತೇವೆ. ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆಯ ಆಸೆ ಅದು. ಕೆವಿಎನ್ ಪ್ರೊಡಕ್ಷನ್‌ನವರು ಅವರು ಬೇರೆ ಸಿನಿಮಾ ಮಾಡ್ತಿದ್ದಾರೆ. ಮತ್ತೊಂದು ಪ್ರೊಡಕ್ಷನ್ ಅಂದಾಗ ಅವರಿಗೂ ಕಷ್ಟ ಆಗುತ್ತೆ. ಅದಕ್ಕೆ ಯಾರು ಯಾವುದೇ ಪ್ರೊಡಕ್ಷನ್ ಇಲ್ಲದೇ ಸುಮ್ಮನೆ ಇರತಾರಲ್ಲ ಅವರಿಗೆ ಅವಕಾಶ ಕೊಡೋಣ ಅಂತ ಎಂದಿದ್ದಾರೆ.

    ನಿಮ್ಮ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನ ಮೇಲೆ ಇರೋದಕ್ಕೆ ಯಾವಾಗಲೂ ಚಿರಋಣಿಯಾಗಿರುತ್ತೇನೆ. ಇದನ್ನು ನಾನೆಂದೂ ತೀರಿಸೋಕೆ ಆಗಲ್ಲ ಎಂದಿದ್ದಾರೆ. ಈ ವೇಳೆ, ನಾನು 3 ಜನರಿಗೆ ಥ್ಯಾಂಕ್ಸ್ ಹೇಳಬೇಕು. ಧನ್ವೀರ್ ಯಾವಾಗಲೂ ಪಾಪ ನನ್ನ ಜೊತೆಯಲಿಯೇ ಇರುತ್ತಿದ್ದರು. ನನ್ನ ದೊಡ್ಡ ಬೆಂಬಲವಾಗಿ ನಿಂತರು. ‘ಬುಲ್ ಬುಲ್’ ರಚಿತಾ ರಾಮ್‌ಗೂ ಥ್ಯಾಂಕ್ಯೂ. ನನ್ನ ಪ್ರಾಣ ಸ್ನೇಹಿತೆ ಆಗಿರುವ ರಕ್ಷಿತಾಗೂ ಥ್ಯಾಂಕ್ಸ್. ನನ್ನ ಎಲ್ಲಾ ಸೆಲೆಬ್ರಿಟಿಗಳಿಗೂ ಧನ್ಯವಾದಗಳು ಎಂದಿದ್ದಾರೆ.

    ದರ್ಶನ್‌ ಹಾಗೂ ನಟಿ ರಕ್ಷಿತಾ ಪ್ರೇಮ್‌ ಹಲವು ವರ್ಷಗಳಿಂದ ಸ್ನೇಹಿತರು. ಆದರೆ ಇತ್ತೀಚೆಗೆ ದರ್ಶನ್‌ ಜೊತೆ ಪ್ರೇಮ್‌ ಸಿನಿಮಾ ಬರಲಿದ್ಯಾ? ಎಂದು ಅನುಮಾನ ವ್ಯಕ್ತಪಡಿಸಿದವರಿಗೆ ದರ್ಶನ್‌ ವಿಡಿಯೋ ಮೂಲಕ ಕ್ಲ್ಯಾರಿಟಿ ನೀಡಿದ್ದಾರೆ.

  • ದರ್ಶನ್‌ಗೆ ಸಿನಿಮಾ ಮಾಡೇ ಮಾಡ್ತೀನಿ: ಡೈರೆಕ್ಟರ್‌ ಪ್ರೇಮ್‌

    ದರ್ಶನ್‌ಗೆ ಸಿನಿಮಾ ಮಾಡೇ ಮಾಡ್ತೀನಿ: ಡೈರೆಕ್ಟರ್‌ ಪ್ರೇಮ್‌

    ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿ’ (KD) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವ ಡೈರೆಕ್ಟರ್ ಪ್ರೇಮ್ (Director Prem) ಅವರು ಮುಂದಿನ ದಿನಗಳಲ್ಲಿ ದರ್ಶನ್ ಜೊತೆ ಸಿನಿಮಾ ಮಾಡೇ ಮಾಡ್ತೀನಿ ಎಂದಿದ್ದಾರೆ. ದರ್ಶನ್‌ ಜೊತೆ ಸಿನಿಮಾ ಮಾಡೋದು ಗ್ಯಾರಂಟಿ ಎಂದಿದ್ದಾರೆ. ಇದನ್ನೂ ಓದಿ:BBK 11: ರಜತ್‌ಗೆ ಟಾರ್ಗೆಟ್‌- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್‌ ಫಿಕ್ಸಿಂಗ್‌

    Actor Darshan

    ದರ್ಶನ್ ನನ್ನ ಬದ್ರರ್, ನನ್ನ ಕುಟುಂಬವಿದ್ದಂತೆ. ಹೋದ ವರ್ಷ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ಮಾಡುವ ಕುರಿತು ಪ್ಲ್ಯಾನ್ ಮಾಡಿದ್ದೇವು. ಕೆಡಿ ಸಿನಿಮಾದ ಕೆಲಸ ಮುಗಿದ್ಮೇಲೆ ದರ್ಶನ್ (Darshan) ಜೊತೆ ಸಿನಿಮಾ ಮಾಡೇ ಮಾಡುತ್ತೇನೆ. ಇನ್ನೂ ರೆಗ್ಯೂಲರ್ ಬೇಲ್ ಸಿಕ್ಮೇಲೆ ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ. ಯಾವಾಗಲೂ ಮಾತನಾಡುತ್ತಿರುತ್ತೇವೆ. ಸಿನಿಮಾ ಬಿಟ್ಟು ನಾವು ಎಮೋಷನಲಿ ಕನೆಕ್ಟ್ ಆಗಿದ್ದೇವೆ ಎಂದಿದ್ದಾರೆ.

    prem

    ಆಗ ನಾವು ‘ಕರಿಯ’ ಸಿನಿಮಾ ಮಾಡಬೇಕಾದರೆ ಮೀನಾ ತೂಗುದೀಪ ಅವರು ಅಡುಗೆ ಮಾಡಿ ಹಾಕೋರು. ಕೈ ತುತ್ತು ಕೊಡುತ್ತಿದ್ದರು. ಅವರ ಮನೆಯಲ್ಲಿ ಅನ್ನ ತಿಂದಿದ್ದೇವೆ. ಒಂದು ಕುಟುಂಬದ ಹಾಗೇಯೇ ಇರುತ್ತೇವೆ. ಮೊನ್ನೆಯಷ್ಟೇ ಭೇಟಿಯಾದೆ, ಈಗ ಅವರು ಚೇತರಿಸಿಕೊಳ್ತಿದ್ದಾರೆ ಎಂದಿದ್ದಾರೆ. ಇನ್ನೂ ದರ್ಶನ್‌ಗೆ ಬೆನ್ನು ನೋವಿದೆ. ಸ್ವಲ್ಪ ಹುಷಾರ್ ಆದ್ಮೇಲೆ ‘ಡೆವಿಲ್’ (Devil) ಶೂಟಿಂಗ್ ಮಾಡುತ್ತಾರೆ. 100% ‘ಡೆವಿಲ್’ ಸಿನಿಮಾ ಬಂದೇ ಬರುತ್ತದೆ. ಈ ವರ್ಷ ಸಿನಿಮಾ ಮಾಡುತ್ತಾರೆ. ಈ ಸಿನಿಮಾಗೆ ಒಳ್ಳೆಯದಾಗಲಿ.

    ಮನುಷ್ಯ ಅಂದ್ಮೇಲೆ ಎಡವುತ್ತೇವೆ. ಅವರಿಗೆ ಅವರೇ ಎದ್ದು ನಿಂತಿದ್ದಾರೆ. ಫೈಟ್ ಮಾಡುತ್ತಿದ್ದಾರೆ. ಇದರ ಹಿಂದಿನ ಘಟನೆ ಬಗ್ಗೆ ಏನೂ ಗೊತ್ತಿಲ್ಲ. ಕೇಸ್ ಕೋರ್ಟ್‌ನಲ್ಲಿದೆ. 100% ನ್ಯಾಯ ಸಿಗುತ್ತದೆ ಎಂದು ನಂಬಿಕೆ ಇದೆ. ಒಳ್ಳೆಯವರಿಗೆ ಯಾವತ್ತಿಗೂ ಒಳ್ಳೆಯದಾಗುತ್ತದೆ ಎಂದು ಮಾತನಾಡಿದ್ದಾರೆ. ಈ ವರ್ಷ ದರ್ಶನ್ ಬರ್ತ್‌ಡೇಗೆ ಹೋಗುತ್ತೇನೆ. ಆಚರಣೆ ಮಾಡುತ್ತೇವೆ ಎಂದಿದ್ದಾರೆ ನಿರ್ದೇಶಕ ಪ್ರೇಮ್.

  • ಭಗವಂತ ನನ್ನಷ್ಟೂ ಆಯಸ್ಸನ್ನ ಶಿವಣ್ಣನಿಗೇ ಕೊಡಲಿ: ಧ್ರುವ ಸರ್ಜಾ

    ಭಗವಂತ ನನ್ನಷ್ಟೂ ಆಯಸ್ಸನ್ನ ಶಿವಣ್ಣನಿಗೇ ಕೊಡಲಿ: ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್‌ಗೆ (Shivarajkumar) ಇಂದು (ಡಿ.24) ಅಮೆರಿಕದಲ್ಲಿ ಸರ್ಜರಿ ನಡೆಯಲಿದ್ದು, ಈ ಕುರಿತು ಧ್ರುವ ಸರ್ಜಾ ರಿಯಾಕ್ಟ್ ಮಾಡಿದ್ದಾರೆ. ಶಿವಣ್ಣ ನಮ್ಮ ಇಂಡಸ್ಟ್ರಿಗೆ ಗಾಡ್ ಫಾದರ್, ಅವರ ಆರೋಗ್ಯ ಸುಧಾರಿಸಲಿ ಎಂದು ನಟ ಮಾತನಾಡಿದ್ದಾರೆ. ಇದನ್ನೂ ಓದಿ:ಡಿ.24ರಂದು ಶಿವಣ್ಣಗೆ ಸರ್ಜರಿ ಹಿನ್ನೆಲೆ ವಿಶೇಷ ಪೂಜೆ

    dhruva sarja

    ಕಾರ್ಯಕ್ರಮವೊಂದರಲ್ಲಿ ಧ್ರುವ ಸರ್ಜಾ (Dhruva Sarja) ಮಾತನಾಡಿ, ಲಿವಿಂಗ್ ಲೆಜೆಂಡ್ ಶಿವಣ್ಣಗೆ ಆಪರೇಷನ್ ನಡೆಯುತ್ತಿದೆ. ಆ ಭಗವಂತ ನನಗೆಷ್ಟು ಆಯಸ್ಸು ಕೊಟ್ಟಿದ್ದಾನೋ ಅಷ್ಟೂ ಅವರಿಗೆ ಕೊಡಲಿ ಎಂದಿದ್ದಾರೆ. ಅವರು ನಮ್ಮ ಇಂಡಸ್ಟ್ರಿಗೆ ಗಾಡ್ ಫಾದರ್, ಅವರ ಆರೋಗ್ಯ ಸುಧಾರಿಸಲಿ ಎಂದು ಮಾತನಾಡಿದ್ದಾರೆ.

    dhruva sarja 1 1

    ಇದೇ ವೇಳೆ ಡೈರೆಕ್ಟರ್ ಪ್ರೇಮ್ ಮಾತನಾಡಿ, ಯುಎಸ್‌ನಲ್ಲಿ ಶಿವಣ್ಣನ ಆಪರೇಷನ್ ಇದೆ. ಅವರಿಗೆ ಒಳ್ಳೆಯದಾಗಲಿ. ಅವರು ಮತ್ತೆ ಎನರ್ಜಿಟಿಕ್ ಆಗಿ ಬರಬೇಕು ಎಂದಿದ್ದಾರೆ. ಇದೇ ವೇಳೆ ದರ್ಶನ್‌ ಜೊತೆಗಿನ ಸಿನಿಮಾ ಕುರಿತು ಮಾತನಾಡಿ, ಅವರೊಂದಿಗೆ ಸಿನಿಮಾ ಮಾಡೇ ಮಾಡ್ತೀನಿ. ಅದರಲ್ಲೇನು ಡೌಟ್‌ ಇಲ್ಲ ಎಂದರು.

    ಅಂದಹಾಗೆ, ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಲಿರುವ ಶಿವರಾಜ್‌ಕುಮಾರ್‌ಗೆ ಅಲ್ಲಿ ಭಾರತ ಮೂಲದ ಮುರುಗೇಶ್ ನೇತೃತ್ವದ ತಜ್ಞವೈದ್ಯರ ತಂಡದಿಂದ ಚಿಕಿತ್ಸೆ ನಡೆಯಲಿದೆ. ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ ನೆಕ್ಸ್ಟ್‌ ಜನರೇಶನ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಾಗಿದ್ದು, ವೈದ್ಯಕೀಯ ಆರೈಕೆ, ಸಂಶೋಧನೆ, ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.

    https://youtu.be/GAux59LoD7k?si=ezxndRDWVtMWh9os

    ವಿಶ್ವಮಾನ್ಯತೆ ಪಡೆದ ಆಂಕೋಲಾಜಿಸ್ಟ್‌ಗಳೆಂದು ಕರೆಯಲಾಗುವ ತಜ್ಞ ವೈದ್ಯರ ತಂಡ ಇದೆ. ಇವರು ಜಗತ್ತಿನ ಉನ್ನತ ಕ್ಯಾನ್ಸರ್ ಕೇಂದ್ರಗಳಿಂದ ನೇಮಕಗೊಂಡ ವೈದ್ಯರುಗಳಾಗಿದ್ದು, ಇಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣವಾಗುವ ಪ್ರಮಾಣ ಹೆಚ್ಚಿದೆ. ಈ ಕಾರಣಕ್ಕೆ ಹಲವು ದೇಶಗಳಿಂದ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ. ಅತ್ಯಾಧುನಿಕ ಸುಧಾರಿತ ಲೇಸರ್ ತಂತ್ರಜ್ಞಾನ ಒಂದೇ ಸ್ಥಳದಲ್ಲಿ ಲಭ್ಯವಿದ್ದು ಪ್ರತಿಯೊಂದು ವಿಧದ ಕ್ಯಾನ್ಸರ್ ಚಿಕಿತ್ಸೆಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾರಣಕ್ಕೆ ಶಿವರಾಜ್‌ಕುಮಾರ್ ಭರ್ತಿ ಒಂದು ತಿಂಗಳುಗಳ ಕಾಲ ಅಲ್ಲೇ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಮರಳಲಿದ್ದಾರೆ.

  • ನಿರ್ಮಾಣಕ್ಕೆ ಮುಂದಾದ ನಟಿ ಸೀತಾ ಹರ್ಷವರ್ಧನ್

    ನಿರ್ಮಾಣಕ್ಕೆ ಮುಂದಾದ ನಟಿ ಸೀತಾ ಹರ್ಷವರ್ಧನ್

    ತ್ತೀಚಿಗೆ  ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ  ಚಿತ್ರಗಳು  ಸೆಟ್ಟೇರಿತ್ತಿವೆ. ಇದೀಗ ಅದರ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಎರಡು ಭಾಷೆಯಲ್ಲಿ ಬೇರೆ ಬೇರೆ  ಶೀರ್ಷಿಕೆಯಲ್ಲಿ ಚಿತ್ರ ಮೂಡಿ ಬರಲಿದೆ. ಕನ್ನಡದಲ್ಲಿ ‘ಯಾಕೆ’ (Yaake) ಎನ್ನುವ ಶೀರ್ಷಿಕೆ ಇಟ್ಟಿದ್ದು ತೆಲುಗಿನಲ್ಲಿ `ಸಿಂಹಾಸನಂ’ ಎಂದು ಹೆಸರು ಇಡಲಾಗಿದೆ. ಎರಡು ಭಾಷೆಯಲ್ಲಿ ಸೀತಾ ಹರ್ಷವರ್ಧನ್ (Seetha Harshvardhan) ಚಿತ್ರ ನಿರ್ಮಾಣ ಮಾಡುತ್ತಿದ್ದು ಪ್ರೇಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ.

    Yaake 1

    ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿರುವ ಎರಡು ಚಿತ್ರಗಳ ಶೀರ್ಷಿಕೆ ಅನಾವರಣ ಮತ್ತು ಸಿರಿ ಸಿನಿಮಾಸ್ ಹೊಸ ನಿರ್ಮಾಣ ಸಂಸ್ಥೆಯ ಉದ್ಘಾಟನಾ ಸಮಾರಂಭ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಿತು. ನಟರಾದ ಒರಟ ಪ್ರಶಾಂತ್ ಶ್ರೀನಗರ ಕಿಟ್ಟಿ , ನಿರ್ಮಾಪಕ ಟಿಪಿ ಸಿದ್ದರಾಜ್, ಕಲಾವಿದೆ ಅಂಬುಜಾ ಸೇರಿದಂತೆ ಹಲವು ಕಂಡಿರುವ ಆಗಮಿಸಿ ಶೀರ್ಷಿಕೆ ಅನಾವರಣ ಮಾಡಿ ತಂಡಕ್ಕೆ ಶುಭ ಹಾರೈಸಿದರು.

    Yaake 3

    ನಿರ್ಮಾಪಕಿ ಸೀತಾ ಹರ್ಷವರ್ಧನ್ ಮಾತನಾಡಿ ಕನ್ನಡದ ಹಲವು ಚಿತ್ರಗಳು ಮತ್ತು ಧಾರಾವಾಹಿಯಲ್ಲಿ ನಟಿಸಿದ್ದೇನೆ ಜೊತೆಗೆ ತೆಲುಗು ದಾರವಾಹಿಗಳಲ್ಲೂ ನಟಿಸಿದ್ದೇನೆ ಈ ನಡುವೆ ನಿರ್ದೇಶಕ ಪ್ರೇಮ್ ಅವರು ಹೇಳಿದ ಕಥೆ ಇಷ್ಟವಾಯಿತು ಹೀಗಾಗಿ ನಿರ್ಮಾಣಕ್ಕೆ ಮುಂದಾಗಿದ್ದೇವೆ ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು ಮುಂದಿನ ವರ್ಷ ಏಪ್ರಿಲ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

    Yaake 4

    ನಮ್ಮ ಪ್ರಯತ್ನಕ್ಕೆ ಅಮೆಜಾನ್ ಮತ್ತು ಹೈದರಾಬಾದಿನ ಖುಷಿ ಸಿನಿಮಾ ಸಂಸ್ಥೆ ಜೊತೆಗೂಡಿದೆ ಇದರಿಂದಾಗಿ ಚಿತ್ರ ನಿರ್ಮಾಣಕ್ಕೆ ಮತ್ತಷ್ಟು ಬಲ ಬಂದಿದೆ ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಉದ್ದೇಶ ನಮ್ಮದು ಎಂದು ಅವರು ಹೇಳಿದರು. ನಿರ್ದೇಶಕ ಪ್ರೇಮ್ ಮಾತನಾಡಿ ಕನ್ನಡದಲ್ಲಿ ಮೊದಲ ಚಿತ್ರ ಒಳ್ಳೆಯ ಕಂಟೆಂಟ್ ಇದೆ ನವಂಬರ್ ಮಧ್ಯಭಾಗದಿಂದ ಚಿತ್ರಿಕರಣ ಆರಂಭ ಮಾಡುತ್ತೇವೆ ಎಲ್ಲರಿಗೂ ಇಷ್ಟವಾಗುವ ಕಥೆಯನ್ನು ಚಿತ್ರ ಒಳಗೊಂಡಿದೆ ಎಂದು ಮಾಹಿತಿ ನೀಡಿದರು

    ಇದೇ ಸಂದರ್ಭದಲ್ಲಿ ಖುಷಿ ಸಿನಿಮಾ ಸಂಸ್ಥೆಯ ಪಾಲುದಾರರು ಚಿತ್ರದ ಬಗ್ಗೆ ಮಾಹಿತಿ ನೀಡಿ ಹೊಸ ವರ್ಷ ಕಂಟೆಂಟ್ ಗಳು ಬಂದರೆ ಅವುಗಳನ್ನು ಚಿತ್ರ ನಿರ್ಮಾಣ ಮಾಡಲು ಸಂಸ್ಥೆ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು