Tag: ಪ್ರಜ್ವಲ್ ರೇವಣ್ಣ

  • `ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು’

    `ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು’

    – ಸರ್ಕಾರಿ ಕಾರು ಬಳಸಿದ ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿ ಟ್ವೀಟ್
    – ಪ್ರಜ್ವಲ್ ವಿರುದ್ಧ ಸಾರ್ವಜನಿಕರ ಆಕ್ರೋಶ

    ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರು ಇಂದು ಜಿಲ್ಲೆಯ ವಿವಿಧ ವಾರ್ಡ ಗಳಿಗೆ ಸರ್ಕಾರಿ ಕಾರಿನಲ್ಲಿ ಸುತ್ತಾಡಿದ್ದು, ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಪ್ರಜ್ವಲ್ ರೇವಣ್ಣ ಕಾರಿನಲ್ಲಿ ಸುತ್ತಾಡುತ್ತಿರುವ ವಿಡಿಯೋವನ್ನು ಕರ್ನಾಟಕ ಬಿಜೆಪಿ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ, ಯಾರದೋ ಟ್ಯಾಕ್ಸ್ ದುಡ್ಡು, ದೇವೆಗೌಡ್ರ ಮೊಮ್ಮಕ್ಕಳ ಮೋಜು ಎಂದು ಬರೆದು ಟೀಕಿಸಿದೆ.

    ವೈಯಕ್ತಿಕ ಜೀವನಕ್ಕೆ ಸರ್ಕಾರಿ ಕಾರನ್ನು ಹೇಗೆ ಬಳಕೆ ಮಾಡುತ್ತಿದ್ದಾರೆ ಎನ್ನುವುದನ್ನು ಇದೊಂದು ಉತ್ತಮ ಉದಾಹರಣೆ. ವಂಶಪಾರಂಪರ್ಯ ರಾಜಕಾರಣಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಸಾರ್ವಜನಿಕರ ತೆರಿಗೆ ಹಣಕ್ಕೆ ದೇವೇಗೌಡರ ಕುಟುಂಬದವರಿಂದ ಅವಮಾನ ಎಂದು ಬಿಜೆಪಿ ತನ್ನ ಖಾತೆಯಲ್ಲಿ ಬರೆದುಕೊಂಡಿದೆ.

    ಏನಿದು ಘಟನೆ?
    ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬೆನ್ನಲ್ಲೇ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇಂದು ಸರ್ಕಾರಿ ಇನ್ನೋವಾ ಕಾರಿನಲ್ಲಿ ವಿವಿಧ ವಾರ್ಡ್‍ಗಳಿಗೆ ಸುತ್ತಾಡಿದ್ದಾರೆ. ಅಲ್ಲದೇ ಸರ್ಕಾರಿ ಕಾರಿನಲ್ಲಿಯೇ ಪಕ್ಷದ ಕಾರ್ಯಕರ್ತರ ಸಭೆಗೆ ಬಂದಿದ್ದಾರೆ. ಹೀಗಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಸರ್ಕಾರಿ ಕಾರು ದುರ್ಬಳಕೆ ಮಾಡಿದ್ದಕ್ಕೆ ಭಾರೀ ಟೀಕೆ ಕೇಳಿಬಂದಿದೆ.

    ಕೆಎ 01 ಜಿಎ 8009 ನಂಬರಿನ ಸರ್ಕಾರಿ ಇನ್ನೋವಾ ಕಾರ್ ಬಳಸಿದ ಪ್ರಜ್ವಲ್ ರೇವಣ್ಣ, ತಮ್ಮ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಜೊತೆ ನಗರದಾದ್ಯಂತ ಸಂಚಾರ ಮಾಡಿದ್ದಾರೆ. ಇದೀಗ ಪ್ರಜ್ವಲ್ ಸರ್ಕಾರಿ ಹುದ್ದೆಯಲ್ಲಿ ಇಲ್ಲ. ಹೀಗಿದ್ದರೂ ಹೇಗೆ ಸರ್ಕಾರಿ ಕಾರ್ ಬಳಸಿದ್ರು ಅನ್ನೋದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    https://www.youtube.com/watch?v=Pkpa8R4wRqQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ- ಎಚ್‍ಡಿಡಿ ಸುಳಿವು

    ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ- ಎಚ್‍ಡಿಡಿ ಸುಳಿವು

    – ಪ್ರಧಾನಿ ಮೋದಿ ಬಗ್ಗೆ ತಮಾಷೆ ಮಾಡಬೇಡಿ

    ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ಸ್ಪರ್ಧಿಸಲಿರುವ ವಿಚಾರದ ಬಗ್ಗೆ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಲೋಕಸಭಾ ಅಭ್ಯರ್ಥಿ ಅಂತ ಮುಂದಿನ ಕಾರ್ಯಕರ್ತರ ಸಭೆಯಲ್ಲಿ ತಿಳಿಸುತ್ತೇನೆ ಎಂದು ಪರೋಕ್ಷವಾಗಿ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇದೇ ವೇಳೆ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ ದೇವೇಗೌಡ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಾಷೆ ಮಾಡಬೇಡಿ ಎಂದು ಸಿಎಂ ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಕ್ಕೆ ತಿರುಗೇಟು ನೀಡಿದರು.

    HD Deve Gowda

    ಹಾಸನದಲ್ಲಿ ಕಳೆದ 56 ವರ್ಷಗಳಿಂದ ನನ್ನನ್ನು ರಾಜಕೀಯವಾಗಿ ಬೆಳೆಸಿರುವಿರಿ. ನನಗೆ ಯಾರೂ ಶತ್ರುಗಳಿಲ್ಲ. ನಾನು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ಯಾರ ಮನಸ್ಸನ್ನೂ ನೋಯಿಸಲ್ಲ. ಪಕ್ಷ ನನ್ನ ಮನೆಯ ಆಸ್ತಿಯಲ್ಲ, ಇದು ಎಲ್ಲರಿಗೂ ಸೇರಿದ ಪಕ್ಷ ಎಂದ ಅವರು, ಕುಮಾರಸ್ವಾಮಿ 38 ಜನರನ್ನು ಕಟ್ಟಿಕೊಂಡು ಸಿಎಂ ಆಗಿ ಅವರ ನೋವೇನು ಎಂದು ನನಗೆ ಗೊತ್ತಿದೆ. ಕಾಂಗ್ರೆಸ್‍ನ 78 ಜನ ಶಾಸಕರನ್ನು ಕಟ್ಟಿಕೊಂಡು ಸರ್ಕಾರ ನಡೆಸಬೇಕು ಎಂದರು.

    HDd SIDDARAMAIAH 3 1

    ದೇವೇಗೌಡರದ್ದು ಅಪ್ಪ ಮಕ್ಕಳ ಪಕ್ಷ ಅಂತ ಕೆಲವು ಟೀಕೆ ಮಾಡುತ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿದ್ದಾಗ ಅವರಿಗೆ ಸ್ಥಾನ ಮಾನಕೊಡಲಿಲ್ಲವೇ ಎಂದ ಅವರು, ಬೆಂಗಳೂರಿನಲ್ಲಿ ಜನವರಿ 17 ಜೆಡಿಎಸ್ ಅಲ್ಪ ಸಂಖ್ಯಾತರ ಬೃಹತ್ ಸಮಾವೇಶ ನಡೆಯಲಿದೆ. ಕುಮಾರಸ್ವಾಮಿ ಸಿಎಂ ಆದ ಬಳಿಕ ಏನು ಮಾಡಿದ್ದಾರೆ ಅಂತ ತಿಳಿಸುವ ಜವಾಬ್ದಾರಿ ನನ್ನ ಮೇಲಿದೆ. ಇದೇ ತಿಂಗಳ 29-30 ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಜನವರಿ 30 ರಂದು ಪಕ್ಷದ ಕಾರ್ಯಕರ್ತರ ಸಮಾವೇಶದ ಬಗ್ಗೆ ಚಿಂತನೆ ಮಾಡಿದ್ದೇನೆ. ಪಕ್ಷ ಉಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ನಮ್ಮಲ್ಲಿ ಹೊಂದಾಣಿಕೆಗೆ ಹಲವಾರು ಸಮಸ್ಯೆಗಳಿವೆ. ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಇದೆ ಎನ್ನುವುದು ಪರೋಕ್ಷವಾಗಿ ಉಲ್ಲೇಖಿಸಿದರು.

    ಮಹಿಳಾ ಅಭಿವೃದ್ಧಿ ನಮ್ಮ ಪ್ರಮುಖ ಆಧ್ಯತೆ ಅಂತ ಪ್ರಧಾನಿ ಮೋದಿ ಭಾಷಣ ಮಾಡುತ್ತಾರೆ. ಆದರೆ ಮಹಿಳೆಯರ ಅಭಿವೃದ್ಧಿ ಎಲ್ಲಿಯಾಗಿದೆ. ಭಾಷಣ ಮಾಡಲು ನಮಗೂ ಬರುತ್ತದೆ ಎಂದು ಕುಟುಕಿದರು.

    prajwal revanna

    ಸಿದ್ದರಾಮಯ್ಯ ಅವರು ನಾನು ಮಾಡಿದ ಯಾವುದೇ ಕಾರ್ಯಕ್ರಮಕ್ಕೆ ಅಡ್ಡಿಮಾಡಬಾರದು ಅಂತ ಹೇಳಿದ್ದಾರೆ. ಅದನ್ನು ಮುಂದುವರಿಸಿ ಸಾಲ ಮನ್ನಾ ಮಾಡುವುದು ಸುಲಭದ ಮಾತಲ್ಲ. ಕುಮಾರಸ್ವಾಮಿ ಅವರನ್ನು ಸಿದ್ದರಾಮಯ್ಯ ಅವರೇ ಮೇಲೆ ಬಿದ್ದು ಸಿಎಂ ಮಾಡಿದರು ಎಂದ ಅವರು, ಈ ಹಿಂದೆ ಬಿಜೆಪಿಯವರ ಜೊತೆ ಕುಮಾರಸ್ವಾಮಿ ಹೋಗುವ ಸಂದರ್ಭ ಸೃಷ್ಟಿಸಿದ್ದು ಯಾರು? ಕಾಂಗ್ರೆಸ್‍ನವರು ಮಾಡಿದರಾ? ಅಥವಾ ಬೇರೇ ಯಾರೋ ಮಾಡಿದರಾ ಎನ್ನುವ ಪ್ರಶ್ನೆಗೆ ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಹೇಳಿದರು.

    ನನಗೆ ಯಾರ ಬಗ್ಗೆಯೂ ಭಯವಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗಲು ನಾನು ಬಿಡುವುದಿಲ್ಲ. ಈ ವಿಚಾರವಾಗಿ ಸಿದ್ದರಾಮಯ್ಯ ಅವರ ಜೊತೆಗೆ ಎರಡು ದಿನ ಚರ್ಚೆ ಮಾಡಿದ್ದೇನೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಜ್ವಲ್ ರೇವಣ್ಣ ಮಾಲೀಕತ್ವದ ಕಟ್ಟಡ ತೆರವು

    ಪ್ರಜ್ವಲ್ ರೇವಣ್ಣ ಮಾಲೀಕತ್ವದ ಕಟ್ಟಡ ತೆರವು

    ಹಾಸನ: ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಿದ್ದ ಲೋಕೋಪಯೋಗಿ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮಾಲೀಕತ್ವದ ಕಟ್ಟಡಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಇಂದು ತೆರವುಗೊಳಿಸಲಾಯಿತು.

    ನಗರದ ಬಿಎಂ ರಸ್ತೆಯಲ್ಲಿ ಸುಮಾರು 40 ಕಟ್ಟಡಗಳು ನಿರ್ಮಾಣ ಮಾಡಲಾಗಿತ್ತು. ಈ ಸಂಬಂಧ ನಗರಸಭೆ ಈ ಹಿಂದೆಯೇ ಎಲ್ಲಾ ಕಟ್ಟದ ಮಾಲೀಕರಿಗೂ ನೋಟಿಸ್ ಜಾರಿ ಮಾಡಿತ್ತು. 1ನೇ ವಾರ್ಡ್ ವ್ಯಾಪ್ತಿಯ ಬಿಎಂ ರಸ್ತೆಗೆ ಹೊಂದಿಕೊಂಡಂತೆ ಇರುವ ಆಸ್ತಿಯಲ್ಲಿ, 6 ಮೀಟರ್ ಕಟ್ಟಡ ರೇಖೆಯನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಲಾಗಿತ್ತು.

    HSN REVANNA 1 1

    ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಅತಿಕ್ರಮಿಸಿದ ಜಾಗದ ತೆರವುಗೊಳಿಸಬೇಕು ಇಲ್ಲವೇ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ನಗರಸಭೆಗೆ ಹಾಜರು ಪಡಿಸಬೇಕು ಉಲ್ಲೇಖಿಸಲಾಗಿತ್ತು. ಹಾಸನ ನಗರ ಹೃದಯ ಭಾಗದಲ್ಲಿ ಈ ಕಟ್ಟಡಗಳು ನಿರ್ಮಾಣ ಮಾಡಲಾಗಿದ್ದು, ಇಲ್ಲಿನ ನಿವೇಶನಕ್ಕೆ ಹೆಚ್ಚಿನ ಬೆಲೆ ಇದೆ. ಆದ್ದರಿಂದ ನಗರ ಸಭೆ ನೋಟಿಸ್ ನೀಡಿದ ಬಳಿಕ ತೆರವು ಕಾರ್ಯಾಚರಣೆ ತಡೆ ನೀಡುವಂತೆ ತಡೆಯಾಜ್ಞೆ ತರುವ ಪ್ರಯತ್ನವೂ ನಡೆದಿತ್ತು.ಆದರೆ ಅಧಿಕಾರಿಗಳು ದಿಟ್ಟಕ್ರಮ ಕೈಗೊಳ್ಳುವ ಮೂಲಕ ಇಂದು ಬೆಳಗ್ಗೆಯೇ ಜೆಸಿಬಿ ಯಂತ್ರಗಳ ಮೂಲಕ ಸ್ಥಳಕ್ಕೆ ಆಗಮಿಸಿದ್ದರು. ಪೊಲೀಸ್ ಭದ್ರತೆಯ ನಡುವೆ 10 ಗಂಟೆಗಳ ವೇಳೆಗೆ ತೆರವು ಕಾರ್ಯಾಚರಣೆ ಆರಂಭವಾಗಿತ್ತು. ಸುಮಾರು 40 ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವುದರಿಂದ ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ.

    HSN REVANNA NAGARASABHE 1

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭಾ ಚುನಾವಣೆಗೆ ವರಿಷ್ಠರ ಗ್ರೀನ್ ಸಿಗ್ನಲ್ – ಸಂತಸ ವ್ಯಕ್ತಪಡಿಸಿದ ಪ್ರಜ್ವಲ್ ರೇವಣ್ಣ

    ಲೋಕಸಭಾ ಚುನಾವಣೆಗೆ ವರಿಷ್ಠರ ಗ್ರೀನ್ ಸಿಗ್ನಲ್ – ಸಂತಸ ವ್ಯಕ್ತಪಡಿಸಿದ ಪ್ರಜ್ವಲ್ ರೇವಣ್ಣ

    ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಪಕ್ಷದ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿರುವುದಕ್ಕೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ರೇವಣ್ಣ, ಹಾಸನ ಕ್ಷೇತ್ರದ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧನಿದ್ದು, ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಸಂತೋಷವಾಗಿದೆ. ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

    JDS MEETING

    ಕಳೆದ ನಾಲ್ಕು ತಿಂಗಳುಗಳಿಂದ ಜಿಲ್ಲೆಯ ಬೇಲೂರು, ಹೊಳೇನರಸಿಪುರ ಸೇರಿದಂತೆ ಕ್ಷೇತ್ರ ಹಲವೆಡೆ ಪ್ರವಾಸ ಮಾಡುತ್ತಿದ್ದೇನೆ. ನಮ್ಮ ಸರ್ಕಾರದ ಹಲವು ಇಲಾಖೆಗಳಿಂದ ಆಗುತ್ತಿರುವ ಅಭಿವೃದ್ದಿ ಕೆಲಸಗಳಿಂದಾಗಿ ಒಳ್ಳೆಯ ವಿಶ್ವಾಸ ಇದೆ. ಚುನಾವಣೆ ಸ್ಪರ್ಧೆ ಕುರಿತು ಹಿರಿಯರಾದ, ಮಾಜಿ ಪ್ರಧಾನಿ ದೇವೇಗೌಡರು ಎಲ್ಲರೊಂದಿಗೆ ಚರ್ಚೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷದ ಹಿರಿಯರ ಮನೆಗಳಿಗೆ ಭೇಟಿ ನೀಡಿ ಎಲ್ಲರ ಆಶೀರ್ವಾದ ಪಡೆಯುತ್ತೇನೆ ಎಂದರು.

    ಜಿಲ್ಲೆಯ ಜನತೆ ನನ್ನನು ಒಬ್ಬ ಮಗನಾಗಿ ಸ್ವೀಕರಿಸಿದ್ದಾರೆ. ನಾನೂ ಕೂಡ ಕೆಲಸ ಮಾಡಬೇಕು ಎನ್ನುವ ದೂರ ದೃಷ್ಟಿ ಇಟ್ಟುಕೊಂಡಿದ್ದೇನೆ. ಜಿಲ್ಲೆಯಲ್ಲಿ ಜೆಡಿಎಸ್ ಮಾಡಿರುವ ಅಭಿವೃದ್ಧಿ ಕೆಲಸಗಳು ನನ್ನ ಕೈ ಹಿಡಿಯಲಿವೆ. ಪಕ್ಷದ ಒಮ್ಮತದ ಅಭ್ಯರ್ಥಿಯಾದರೆ, ನಾನು ಸ್ಪರ್ಧಿಸಲು ಹಿಂಜರಿಯುವುದಿಲ್ಲ. ಜಿಲ್ಲೆಯ ಲೋಕಸಭಾ ಅಭ್ಯರ್ಥಿ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಒಪ್ಪಂದ ಕುರಿತು ರಾಹುಲ್ ಗಾಂಧಿ ಮತ್ತು ದೇವೇಗೌಡರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ನಾಯಕರ ಆಕ್ಷೇಪದ ಬಗ್ಗೆ ದೊಡ್ಡವರು ನೋಡಿಕೊಳ್ಳುತ್ತಾರೆ. ಅವರ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

    HDD RAHUL GANDHI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧೆ – ಇಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಸಾಧ್ಯತೆ

    ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧೆ – ಇಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಸಾಧ್ಯತೆ

    ಬೆಂಗಳೂರು: ಲೋಕಸಭೆ ಚುನಾವಣೆಗೆ ಜೆಡಿಎಸ್ ಸಿದ್ಧತೆ ಆರಂಭಿಸಿದ್ದು, ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ, ಜೆಡಿಎಸ್ ವರಿಷ್ಠ ದೇವೇಗೌಡ, ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ನೇತೃತ್ವದಲ್ಲಿ ಜೆಪಿ ಭವನದಲ್ಲಿ ಇಂದು ಸಭೆ ನಡೆಯಲಿದೆ.

    ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸೀಟು ಹಂಚಿಕೆ, ಮೈತ್ರಿ ವಿಚಾರ ಕುರಿತು ಮುಖಂಡರ ಅಭಿಪ್ರಾಯವನ್ನ ಜೆಡಿಎಸ್ ವರಿಷ್ಠ ದೇವೇಗೌಡ ಸಂಗ್ರಹಿಸಲಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ : ಎಚ್‍ಡಿಡಿ

    prajwal revanna hdd

    ಇದೇ ವೇಳೆ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡುವ ವಿಚಾರ ಅಂತಿಮಗೊಳ್ಳುವ ಸಾಧ್ಯತೆ ಇದೆ. ಇನ್ನೂ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ಎಚ್.ವಿಶ್ವನಾಥ್ ಮನವಿ ಮಾಡಿದ್ದು, ಇದಕ್ಕೆ ದೇವೇಗೌಡರು ಒಪ್ಪುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ನೀವೇ ಮಂದುವರಿಯಿರಿ ಎಂದು ವಿಶ್ವನಾಥ್ ಅವರಿಗೆ ದೇವೇಗೌಡರು ಸಲಹೆ ನೀಡುವ ಸಾಧ್ಯತೆಯೇ ಹೆಚ್ಚಿದೆ.

    ಈ ಹಿಂದೆಯೇ ಪ್ರಜ್ವಲ್ ರೇವಣ್ಣ ಕಳೆದ ಎಂಟು ವರ್ಷದಿಂದ ಹಾಸನ ಜಿಲ್ಲೆಯಲ್ಲಿ ಓಡಾಡುತ್ತಿದ್ದಾನೆ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಕಾರ್ಯದಲ್ಲಿ ತೊಡಗಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಕ್ಷೇತ್ರವನ್ನ ಆತನಿಗೆ ಬಿಟ್ಟುಕೊಡುತ್ತೇನೆ ಎಂದು ಎಚ್.ಡಿ ದೇವೇಗೌಡ ಈ ಹಿಂದೆ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಪ್ರಧಾನಿ ದೇವೇಗೌಡರ ಫ್ಯಾಮಿಲಿಯ ಬಿಗ್ ನ್ಯೂಸ್!

    ಮಾಜಿ ಪ್ರಧಾನಿ ದೇವೇಗೌಡರ ಫ್ಯಾಮಿಲಿಯ ಬಿಗ್ ನ್ಯೂಸ್!

    ಬೆಂಗಳೂರು: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಹೊಸ ವ್ಯಾಖ್ಯಾನ ಬರೆಯಲು ಹೊರಟಿದ್ದು, ಕುಟುಂಬದಲ್ಲಿ ರಾಜಕೀಯಾಸಕ್ತಿರುವ ಎಲ್ಲರನ್ನೂ ಪೊಲಿಟಿಷಿಯನ್ ಮಾಡಲು ಪ್ಲಾನ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ಲೋಕಸಭಾ ಚುನಾವಣೆಗೆ ದೇವೇಗೌಡರು ಚಾಣಕ್ಯ ತಂತ್ರ ಹೆಣೆಯುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಈ ಕುಟುಂಬದಿಂದ ಲೋಕಸಭೆ ಚುನಾವಣಾ ಕಣಕ್ಕೆ ಮೂವರು ಸ್ಪರ್ಧೆ ಮಾಡುತ್ತಿದ್ದಾರೆ. ಮೂವರ ಪೈಕಿ ಮೊದಲನೇಯವರೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಇವರು ಈ ಹಿಂದೆ ರಾಜಕೀಯ ಸನ್ಯಾಸ ಕೈಗೊಳ್ಳುತ್ತೀನಿ ಎಂದು ಹೇಳಿದ್ದರು. ಆದರೆ ಈಗ ಮುಂಬರುವ ಲೋಕಸಭೆ ಸಮರದಲ್ಲಿ ಖುದ್ದು ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ನಿಲ್ಲಲಿದ್ದಾರೆ ಎನ್ನಲಾಗಿದೆ.

    HDD2

    ಸಿಎಂ ಕುಮಾರಸ್ವಾಮಿ 2014ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈಗ ಮಗ ಸೋತಿದ್ದ ಕ್ಷೇತ್ರದಲ್ಲಿ ಈ ಬಾರಿ ಕಣಕ್ಕೆ ಜಿಗಿಯಲಿದ್ದು, ಚಿಕ್ಕಬಳ್ಳಾಪುರದಲ್ಲಿ ಮಗನ ಸೋಲನ್ನೇ ಮೆಟ್ಟಿ ನಿಂತು ಜಯಿಸಲು ದೇವೇಗೌಡು ನಿರ್ಧಾರ ಮಾಡಿದ್ದಾರೆ. ದೇವೇಗೌಡರ ಸ್ಪರ್ಧೆಯಿಂದ ಕಾಂಗ್ರೆಸ್ಸಿನಲ್ಲಿ ಕುತೂಹಲ ಹುಟ್ಟಿಸಿದ್ದು, ಗೌಡರ ಸ್ಪರ್ಧೆಯಿಂದ ವೀರಪ್ಪ ಮೊಯ್ಲಿಗೆ ಟಿಕೆಟ್ ತಪ್ಪಿಸಲಾಗುತ್ತಾ?, ಗೌಡರ ಸ್ಪರ್ಧೆಗೆ ವೀರಪ್ಪ ಮೊಯ್ಲಿ ಸುಲಭವಾಗಿ ಒಪ್ಪಿಕೊಂಡು ಬಿಡ್ತಾರಾ? ಎನ್ನುವಂತಹ ಪ್ರಶ್ನೆ ಮೂಡಿದೆ. ಆದರೆ ದೇವೇಗೌಡರು ಚಿಕ್ಕಬಳ್ಳಾಪುರ ಟಿಕೆಟ್‍ಗೆ ಈಗಿನಿಂದಲೇ ಲೆಕ್ಕಾಚಾರ ಶುರುವಾಗಿದೆ ಎಂದ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

    HDD 1

    ಹಾಸನ ಮತ್ತು ಮಂಡ್ಯದಲ್ಲಿ ಮೊಮ್ಮಕ್ಕಳನ್ನು ಕಣಕ್ಕೆ ಇಳಿಸಲು ದೇವೇಗೌಡರು ನಿರ್ಧಾರ ಮಾಡಿದ್ದು, ಹಾಸನ ಲೋಕಸಭೆ ಕ್ಷೇತ್ರದಲ್ಲಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮತ್ತು ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಒಕ್ಕಲಿಗ ಮತದಾರರು ಇರುವ ಲೋಕಸಭಾ ಕ್ಷೇತ್ರಗಳಲ್ಲಿ ಮೊಮ್ಮಕ್ಕಳನ್ನು ನಿಲ್ಲಿಸಲು ಗೌಡರು ಚಿಂತನೆ ಮಾಡಿದ್ದಾರೆ. ಈ ಮೂಲಕ ಮೊಮ್ಮಕ್ಕಳನ್ನು ಗೆಲ್ಲಿಸಿ, ತಾವೂ ಗೆದ್ದು ಸಂಸತ್ ಪ್ರವೇಶಕ್ಕೆ ದೇವೇಗೌಡರು ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಲಾಗಿದೆ.

    HDD

    ಅಷ್ಟೇ ಅಲ್ಲದೇ ಇದರ ಆಚೆಗೂ ದೇವೇಗೌಡರು ರಾಜಕೀಯ ತಂತ್ರ ಹೆಣೆದಿದ್ದಾರೆ. ಇಬ್ಬರು ಸೊಸೆಯಂದಿರಿಗೂ ರಾಜ್ಯ ರಾಜಕೀಯದಲ್ಲಿ ಗಟ್ಟಿ ವೇದಿಕೆ ಹಾಕಿಕೊಡಲು ಪ್ಲಾನ್ ಮಾಡಿದ್ದು, ಸಿಎಂ ಕುಮಾರಸ್ವಾಮಿ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿಗೆ ರಾಮನಗರ ಫಿಕ್ಸ್ ಆಗಿದೆ. ಹಾಗಾಗಿ ರಾಮನಗರದಲ್ಲಿ ರಾಜಕೀಯ ಭವಿಷ್ಯ ಗಟ್ಟಿಗೊಳಿಸಿಕೊಳ್ಳಲು ದೇವೇಗೌಡರು ರಣತಂತ್ರ ರೂಪಿಸಿದ್ದಾರೆ.

    ಅನಿತಾ ಕುಮಾರಸ್ವಾಮಿ ಅಷ್ಟೇ ಅಲ್ಲ ಸಚಿವ ರೇವಣ್ಣರ ಪತ್ನಿ ಭವಾನಿ ರೇವಣ್ಣರಿಗೂ ರಾಜಕೀಯ ಪ್ರವೇಶಕ್ಕೆ ವೇದಿಕೆ ಮಾಡಿ ಕೊಡಲು ಗೌಡರು ಪ್ಲಾನ್ ಮಾಡಿದ್ದಾರೆ. ಮೊದಲ ಸೊಸೆಗೆ ರಾಜಕೀಯ ಅಸ್ತಿತ್ವ ಕೊಡಿಸಲು ಸೂಕ್ತ ಸನ್ನಿವೇಶಕ್ಕೆ ಕಾಯುತ್ತಿದ್ದಾರೆ. ಸದ್ಯ ಭವಾನಿ ರೇವಣ್ಣರಿಗೆ ರಾಜಕೀಯ ನೆಲೆ ಸಿಕ್ಕಿಬಿಟ್ಟರೆ ಗೌಡರ ಚಾಣಕ್ಯ ತಂತ್ರಕ್ಕೆ ಅಲ್ಪ ವಿರಾಮ ಸಿಗಲಿದೆ ಎಂಬುದಾಗಿ ತಿಳಿದುಬಂದಿದೆ.

    https://www.youtube.com/watch?v=0P2QdVxxhfM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಕ್ಸರ್, ಬೌಂಡರಿ ಸಿಡಿಸಿ ಮಿಂಚಿದ ಪ್ರಜ್ವಲ್ ರೇವಣ್ಣ!

    ಸಿಕ್ಸರ್, ಬೌಂಡರಿ ಸಿಡಿಸಿ ಮಿಂಚಿದ ಪ್ರಜ್ವಲ್ ರೇವಣ್ಣ!

    ಹಾಸನ: ಲೋಕೋಪಯೋಗಿ ಸಚಿವ ರೇವಣ್ಣ ಅವವರ ಪುತ್ರ, ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಭಾನುವಾರದಂದು ಜಿಲ್ಲೆಯ ಹೊಳೆನರಸೀಪುರದ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಮ್ಯಾಚ್ ಆಡಿ ಖುಷಿ ಪಟ್ಟಿದ್ದಾರೆ.

    ಪ್ರಜ್ವಲ್ ಅವರು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ಮಾಜಿ ಪ್ರದಾನಿ ದೇವೇಗೌಡರ ಮೊಮ್ಮಗ. ಒಟ್ಟು ಆರು ಓವರ್ ಮ್ಯಾಚ್ ಆಡಲಾಗಿತ್ತು. ಅದರಲ್ಲಿ ಎದುರಾಳಿ ತಂಡ 63 ರನ್ ಗಳಿಸಿತ್ತು. ಆದರೆ ಪ್ರಜ್ವಲ್ ಟೀಂ ಕೂಡ ಪಂದ್ಯಾವಳಿಯಲ್ಲಿ 63 ರನ್ ಹೊಡೆದಿದ್ದರು ಮ್ಯಾಚ್ ಟೈ ಆಗಿತ್ತು.

    hsn prajwal revanna 1

    ಪ್ರಜ್ವಲ್ ಅವರು ಮೂರು ಸಿಕ್ಸರ್ ಹಾಗು ಎರಡು ಬೌಂಡರಿಯೊಂದಿಗೆ 30 ರನ್ ಸಿಡಿಸಿ ಎಲ್ಲರ ಗಮನ ಸೆಳೆದರು. ಕಳೆದ ಐದಾರು ವರ್ಷಗಳಿಂದ ರಾಜಕೀಯದಲ್ಲಿ ಕ್ರಿಯಾಶೀಲರಾಗಿರುವ ಪ್ರಜ್ವಲ್ ಎಲ್ಲವನ್ನೂ ಮರೆತು ಭಾನುವಾರದಂದು ಗೆಳೆಯರೊಂದಿಗೆ ಸಾಮಾನ್ಯನಂತೆ ಕ್ರಿಕೆಟ್ ಆಡಿ ಎಂಜಾಯ್ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವಕಾಶ ಸಿಕ್ಕರೆ ಖಂಡಿತ ಎಚ್‍ಡಿಡಿ ಆಸೆ ನೆರವೇರಿಸುತ್ತೇನೆ- ಪ್ರಜ್ವಲ್ ರೇವಣ್ಣ

    ಅವಕಾಶ ಸಿಕ್ಕರೆ ಖಂಡಿತ ಎಚ್‍ಡಿಡಿ ಆಸೆ ನೆರವೇರಿಸುತ್ತೇನೆ- ಪ್ರಜ್ವಲ್ ರೇವಣ್ಣ

    ಹಾಸನ: ಲೋಕಸಭೆಗೆ ಸ್ಪರ್ಧಿಸುವ ಕುರಿತು ಎಚ್‍ಡಿಡಿ ಅವರು ನನ್ನ ಬಳಿ ಏನೂ ಹೇಳಿಲ್ಲ. ದೇವರ ಪೂಜೆ ಮಾಡಿಸಿ ಹೊರ ಬರುತ್ತಿದ್ದಂತೆಯೇ ಒಳ್ಳೆಯ ಸುದ್ದಿ ಕೇಳಿದ್ದೇನೆ. ಒಂದು ವೇಳೆ ಅಂತಹ ಸಂದರ್ಭ ಬಂದ್ರೆ ಖಂಡಿತವಾಗಿಯೂ ಅವರ ಆಸೆ ನೆರವೇರಿಸುತ್ತೇನೆ ಅಂತ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

    ನಗರದ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರ ಎನ್ನುವುದರ ಕುರಿತು ಇದುವರೆಗೂ ಯಾವುದೇ ಚರ್ಚೆ ಆಗಿಲ್ಲ. ಯಾವ ಕ್ಷೇತ್ರವೇ ಆಗಲಿ. ದೇವೇಗೌಡ ಅವರು ಏನು ಆಶೀರ್ವಾದ ಮಾಡುತ್ತಾರೆಯೋ ಅದನ್ನು ಸ್ವೀಕರಿಸಲು ನಾನು ತಯಾರಾಗಿದ್ದೇನೆ. ಅವರು ಏನೇ ಅವಕಾಶ ಕೊಟ್ಟರೂ ಈ ರಾಜ್ಯದ ಜನತೆಗೋಸ್ಕರ ದುಡಿಯುತ್ತೇನೆ ಅಂದ್ರು.

    HDD

    ಪುರಸಭೆ ಚುನಾವಣೆಯಲ್ಲಿ ಅತೀ ಹೆಚ್ಚಿನ ಸೀಟುಗಳನ್ನು ಪಡೆದು ಬಹುತ ಸಾಧಿಸಬೇಕೆಂಬುದು ನಮ್ಮ ಆಶಯವಾಗಿದೆ. ಪ್ರತಿಯೊಂದು ಚುನಾವಣೆಯೂ ನಮಗೆ ಅತಿ ಮುಖ್ಯವಾದುದಾಗಿದೆ. ವಿಧಾಸನಭೆ, ಪುರಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅಥವಾ ಸಂಸದರ ಚುನಾವಣೆಯೇ ಇರಬಹುದು. ಹೀಗೆ ಪ್ರತಿಯೊಂದು ಚುನಾವಣೆಯೂ ಬಹುಮುಖ್ಯವಾಗಿದ್ದು, ಇದಕ್ಕಾಗಿ ಶ್ರಮ ವಹಿಸುತ್ತೇನೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಸಮರ – ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ನಿಶ್ಚಿತ

    PRAJWAL 1

    ಇದೇ ವೇಳೆ ಮಂಡ್ಯದಲ್ಲಿ ಜನರು ಪ್ರಜ್ವಲ್ ರೇವಣ್ಣ ಅವರು ಇಲ್ಲೇ ಸ್ಪರ್ಧಿಸಬೇಕೆಂದು ಕೇಳಿಕೊಳ್ಳುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ಜನತೆಗೆ ಮೊದಲು ನಾನು ಧನ್ಯವಾದ ತಿಳಿಸುತ್ತೇನೆ. ಯಾಕಂದ್ರೆ ನಾನು ಆ ಜಿಲ್ಲೆಗೆ ಅಥವಾ ಕ್ಷೇತ್ರಕ್ಕೆ ಸಂಬಂಧಪಡದೇ ಇದ್ದರೂ ಕೂಡ ಅಲ್ಲಿನ ಜನತೆ 7 ಸೀಟು ಕೊಟ್ಟು ಇಂದು ನಮಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಆ ಜಿಲ್ಲೆಯ ಜನತೆಗೆ ನಾನು ಯಾವತ್ತೂ ಚಿರಋಣಿಯಾಗಿರುತ್ತೇನೆ. ಒಂದು ವೇಳೆ ಅದೇ ಕ್ಷೇತ್ರದಲ್ಲಿ ಅವಕಾಶ ಸಿಕ್ಕರೇ ಅದು ನನ್ನ ಪುಣ್ಯ, ಖಂಡಿತವಾಗಿಯೂ ಅದನ್ನು ನಾನು ಸ್ವೀಕರಿಸುತ್ತೇನೆ ಅಂತ ಹೇಳಿದ್ರು.

    ಒಟ್ಟಿನಲ್ಲಿ ದೊಡ್ಡವರ ನಿರ್ಧಾರಕ್ಕೆ ನಾನು, ನಮ್ಮ ನಾಯಕರು ಹಾಗೂ ಕಾರ್ಯಕರ್ತರೆಲ್ಲರೂ ಬದ್ಧರಾಗಿರುತ್ತೇವೆ ಅಂತ ಅವರು ತಿಳಿಸಿದ್ರು. ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=PPxd3hiJGY4

  • ಲೋಕಸಭಾ ಚುನಾವಣೆ ಸಮರ – ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ನಿಶ್ಚಿತ

    ಲೋಕಸಭಾ ಚುನಾವಣೆ ಸಮರ – ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ನಿಶ್ಚಿತ

    ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದೋ ನಿಶ್ಚಿತವಾಗಿದೆ.

    ಹರದನಹಳ್ಳಿಯಲ್ಲಿ ಈಶ್ವರ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಎಚ್‍ಡಿಡಿ ಮಾತನಾಡಿದ್ದಾರೆ. ಹಾಸನದಿಂದ ಮಾಜಿ ಪ್ರಧಾನಿ ಸ್ಪರ್ಧೆ ಮಾಡ್ತಾರೆ ಅಂತ ಹೇಳಲಾಗುತ್ತಿತ್ತು. ಆದ್ರೆ ಇದೀಗ ಮಾಜಿ ಪ್ರಧಾನಿಯವರು ಪ್ರಜ್ವಲ್ ರೇವಣ್ಣ ಅವರು ಕಣಕ್ಕಿಳಿಯುವ ಕುರಿತು ಸುಳಿವು ನೀಡಿದ್ದಾರೆ.

    ಕುಮಾರಸ್ವಾಮಿ ಈಗಾಗಲೇ ರಾಷ್ಟ್ರ ರಾಜಕಾರಣಕ್ಕೆ ಏಕೆ ಹೋಗ್ತಾರೆ..? ಇನ್ನೂ 10 ವರ್ಷ ಇಲ್ಲೇ ಇರ್ತಾರೆ ಮುಂದೆ ನೋಡೋಣ ಅಂತಾ ದೇವೇಗೌಡ್ರು ಹೇಳಿಕೆ ನೀಡಿದ್ದು, ಪ್ರಜ್ವಲ್ ರೇವಣ್ಣ ಲೋಕಸಭೆ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಆದ್ರೆ ಪ್ರಜ್ವಲ್ ರೇವಣ್ಣ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಅನ್ನೋದನ್ನ ಮುಂದೆ ನಿರ್ಧಾರ ಮಾಡೋದಾಗಿ ತಿಳಿಸಿದ ಅವರು, ಸಮ್ಮಿಶ್ರ ಸರ್ಕಾರ ಚೆನ್ನಾಗಿಯೇ ನಡೀತಾ ಇದೆ. ಯಾವುದೇ ಸಮಸ್ಯೆಗಳಿಲ್ಲ. ಅಲ್ಲದೇ ಯಾವುದೇ ಗೊಂದಲಗಳಿಲ್ಲ ಅಂತ ಹೇಳಿದ್ದಾರೆ.

    prajwal revanna 1

    ಇಂದು ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಎಚ್‍ಡಿಡಿ ಕುಟುಂಬದ ಮನೆ ದೇವರು ಹೊಳೆನರಸೀಪುರದ ಹರದನಹಳ್ಳಿ ಈಶ್ವರ ದೇವಾಲಯ, ಅವರ ತಂದೆಯ ಮೆಚ್ಚಿನ ದೈವ ಮಾವಿನ ಕೆರೆ ಬೆಟ್ಟದ ರಂಗನಾಥಸ್ವಾಮಿ ಸೇರಿದಂತೆ ಅವರ ಕುಲದೈವದ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ನಂತರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಪೂಜೆಗೆ ಸಿಎಂ ಕುಮಾರಸ್ವಾಮಿ ತೆರಳಲಿದ್ದಾರೆ. ಸಂಜೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಕೂಡ ಭೇಟಿ ನೀಡಲಿದ್ದಾರೆ. ಕುಮಾರಸ್ವಾಮಿ ಸ್ವಾಮಿ ಜೊತೆ ತಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಸಹೋದರ ಸಚಿವ ಹೆಚ್ ಡಿ ರೇವಣ್ಣ ಪಾಲ್ಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪ್ರಜ್ವಲ್ ರೇವಣ್ಣ ಸ್ಪರ್ಧೆ: ಪರೋಕ್ಷವಾಗಿ ಗುಟ್ಟು ಬಿಚ್ಚಿಟ್ಟ ಸಚಿವ ಪುಟ್ಟರಾಜು

    ಪ್ರಜ್ವಲ್ ರೇವಣ್ಣ ಸ್ಪರ್ಧೆ: ಪರೋಕ್ಷವಾಗಿ ಗುಟ್ಟು ಬಿಚ್ಚಿಟ್ಟ ಸಚಿವ ಪುಟ್ಟರಾಜು

    ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಕಣಕ್ಕೆ ಇಳಿಯುತ್ತಾರಾ ಇಲ್ಲವೋ ಎನ್ನುವುದರ ಬಗ್ಗೆ ಚರ್ಚೆ ಆರಂಭವಾಗಿದ್ದು, ಈಗ ಮಂಡ್ಯದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವ ಬಗ್ಗೆ ಉಸ್ತುವಾರಿ ಸಚಿವ ಪುಟ್ಟರಾಜು ಸುಳಿವು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಇಲ್ಲವಾದರೆ ಮತ್ತೆ ನಾನೇ ಮಂಡ್ಯ ಲೋಕಸಭೆಗೆ ಸ್ಫರ್ಧಿಸಬಹುದು ಅಥವಾ ಪ್ರಜ್ವಲ್ ರೇವಣ್ಣ ನಿಲ್ಲುತ್ತಾರೋ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ ಎಂದರು.

    ದೇವೇಗೌಡರು ಮತ್ತು ಪ್ರಜ್ವಲ್ ರೇವಣ್ಣ ಇಬ್ಬರ ಹೆಸರನ್ನು ಹೇಳುವ ಮೂಲಕ ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ಪುಟ್ಟರಾಜು ಗುಟ್ಟು ಬಿಚ್ಚಿಟ್ಟರು. ಅಂಬರೀಷ್ ನಿಲ್ಲತ್ತಾರೆ ಅಂದರೂ ಅವಕಾಶ ನೀಡುತ್ತೇವೆ. ಬಹಳ ಜನ ಅಭ್ಯರ್ಥಿಗಳು ಪಕ್ಷದಲ್ಲಿದ್ದಾರೆ ಅಂತಿಮವಾಗಿ ಯಾರು ಅಭ್ಯರ್ಥಿ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews