Tag: ಪೋಕ್ಸೋ

  • ಬಾಲ್ಯ ವಿವಾಹದ ವಿರುದ್ಧ ಅಸ್ಸಾಂ ಸರ್ಕಾರ ಸಮರ – ಪತಿ, ಪುತ್ರರ ಬಂಧನ ವಿರೋಧಿಸಿ ಬೀದಿಗಿಳಿದ ಮಹಿಳೆಯರು

    ಬಾಲ್ಯ ವಿವಾಹದ ವಿರುದ್ಧ ಅಸ್ಸಾಂ ಸರ್ಕಾರ ಸಮರ – ಪತಿ, ಪುತ್ರರ ಬಂಧನ ವಿರೋಧಿಸಿ ಬೀದಿಗಿಳಿದ ಮಹಿಳೆಯರು

    ದಿಸ್ಪುರ್: ಬಾಲ್ಯವಿವಾಹ (Child Marriage) ತಡೆಗೆ ಅಸ್ಸಾಂ ಸರ್ಕಾರ ಕಠಿಣ ಕಾರ್ಯಾಚರಣೆ ಕೈಗೊಂಡಿದೆ. ಬಾಲ್ಯ ವಿವಾಹದ ವಿರುದ್ಧ ಸಮರ ಸಾರಿರುವ ಪೊಲೀಸರು (Assam Police) 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಈ ಕ್ರಮ ವಿರೋಧಿಸಿ ರಾಜ್ಯದ ವಿವಿಧೆಡೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ (Protest) ನಡೆಸುತ್ತಿದ್ದಾರೆ.

    ತಮ್ಮ ಪತಿ ಹಾಗೂ ಪುತ್ರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ. ಕುಟುಂಬ ಆರ್ಥಿಕ ನಿರ್ವಹಣೆಗೆ ಬೇರೆ ದಾರಿಯಿಲ್ಲ, ಪುರುಷರನ್ನು ಮಾತ್ರ ಏಕೆ ಬಂಧಿಸಬೇಕು? ನಾವು ನಮ್ಮ ಮಕ್ಕಳು ಬದುಕುವುದಾದರೂ ಹೇಗೆ? ಎಂದು ಮಹಿಳೆಯರು ಪ್ರಶ್ನಿಸುತ್ತಿದ್ದಾರೆ.

    Himanta Biswa Sarma

    ಇದೇ ವೇಳೆ ಮಹಿಳೆಯೊಬ್ಬರು `ನನ್ನ ಮಗ ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋಗಿದ್ದಾನೆ. ಅವನು ತಪ್ಪು ಮಾಡಿದ್ದಾನೆ ನಿಜ. ಅದಕ್ಕಾಗಿ ನನ್ನ ಗಂಡನನ್ನ ಏಕೆ ಬಂಧಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಕೊಟ್ಟ `ಮೌರ್ಯ’ ನಾಯಕಿ ಮೀರಾ ಜಾಸ್ಮಿನ್

    ಇದೇ ವೇಳೆ ಹೇಸರು ಹೇಳಲಿಚ್ಚಿಸದ ಮಹಿಳೆ, ನನ್ನ ಸೊಸೆ ಮದುವೆಯಾದಾಗ 17 ವರ್ಷ, ಈಗ ಅವಳಿಗೆ 19 ವರ್ಷವಾಗಿದೆ. ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ (Pregnant Women). ಪತಿಯನ್ನ ಜೈಲಿಗೆ ಎಳೆದುಕೊಂಡು ಹೋದ್ರೆ ಅವಳನ್ನ ಯಾರು ನೋಡಿಕೊಳ್ತಾರೆ ಎಂದಿದ್ದಾರೆ.

    Assam

    ಬಾಲ್ಯ ವಿವಾಹ ತಡೆಗೆ ಕಠಿಣ ಕಾರ್ಯಾಚರಣೆ ಕೈಗೊಂಡಿರುವ ಅಸ್ಸಾಂ ಪೊಲೀಸರು ಈಗಾಗಲೇ 2000ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಿದ್ದಾರೆ. ಜನವರಿ 23ರಂದು ಸಚಿವ ಸಂಪುಟದಲ್ಲಿ ಅಸ್ಸಾಂ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, 10 ದಿನಗಳಲ್ಲೇ 4,004 ಕೇಸ್‌ಗಳು ದಾಖಲಾಗಿವೆ. 8 ಸಾವಿರ ಆರೋಪಿ ಪಟ್ಟಿಗಳನ್ನು ಹೊಂದಿರುವ ಪೊಲೀಸರು ಒಬ್ಬೊಬ್ಬರನ್ನೂ ಬಂಧಿಸುತ್ತಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಅಧಿಕ ಮಂದಿಯನ್ನ ಜೈಲಿಗಟ್ಟಿದ್ದಾರೆ. ಅವರಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ವಿವಾಹ ಕಾರ್ಯಕ್ರಮ ನಡೆಸಿದ 51 ಪುರೋಹಿತರೂ ಇದ್ದಾರೆ.

    Assam 2

    14 ವರ್ಷದೊಳಗಿನ ಹುಡುಗಿಯರನ್ನ ಮದುವೆಯಾದವರ ವಿರುದ್ಧ ಪೋಕ್ಸೋ (POCSO) ಕೇಸ್ ಹಾಗೂ 14 ರಿಂದ 18 ವರ್ಷದೊಳಗಿನ ಹುಡುಗಿಯರನ್ನು ಮದುವೆಯಾಗಿದ್ರೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಅಡಿಯಲ್ಲಿ ಪ್ರಕರಣ ದಾಖಲಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಇದನ್ನೂ ಓದಿ: ತುಮಕೂರಿನ HAL ಭಾರತದಲ್ಲೇ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಕೇಂದ್ರ – ಏನಿದರ ವೈಶಿಷ್ಟ್ಯ?

    ಅಸ್ಸಾಂನಲ್ಲಿ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಲು ಬಾಲ್ಯವಿವಾಹವು ಪ್ರಾಥಮಿಕ ಕಾರಣವಾಗಿದೆ. ರಾಜ್ಯದಲ್ಲಿ ನೋಂದಣಿಯಾದ ಶೇ.31ರಷ್ಟು ವಿವಾಹಗಳು ನಿಷೇಧಿತ ವಯೋಮಿತಿಯಲ್ಲಿವೆ ಎಂದು ಗುರುತಿಸಲಾಗಿದೆ. ಇನ್ನೂ 6 ದಿನಗಳ ಕಾಲ ಈ ಕಾರ್ಯಾರಣೆ ಮುಂದುವರಿಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಪ್ರಾಪ್ತ ವಿದ್ಯಾರ್ಥಿನಿ ಜೊತೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಸುಬ್ರಹ್ಮಣ್ಯದಲ್ಲಿ ಥಳಿತ

    ಅಪ್ರಾಪ್ತ ವಿದ್ಯಾರ್ಥಿನಿ ಜೊತೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಸುಬ್ರಹ್ಮಣ್ಯದಲ್ಲಿ ಥಳಿತ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ(Moral Policing) ಮತ್ತೆ ಮುಂದುವರಿದಿದ್ದು ಇದೀಗ ಕುಕ್ಕೆ ಸುಬ್ರಹ್ಮಣ್ಯ(Kukke Subramanya) ಕ್ಷೇತ್ರಕ್ಕೂ ಕಾಲಿಟ್ಟಿದೆ.

    ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪರಿಸರದಲ್ಲಿ ಹಿಂದೂ(Hindu) ಹುಡುಗಿಯೊಂದಿಗೆ ತಿರುಗಾಡುತ್ತಿದ್ದ ಮುಸ್ಲಿಂ (Muslim) ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಇದನ್ನೂ ಓದಿ: ಐಸಿಸ್‌ ಜೊತೆ ಲಿಂಕ್‌ – ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನಾಯಕನ ಮಗ ಅರೆಸ್ಟ್‌

    ಕುಕ್ಕೆ ಸುಬ್ರಹ್ಮಣ್ಯದ ಬಸ್ ನಿಲ್ದಾಣದ ಬಳಿ ಹಿಂದೂ ವಿದ್ಯಾರ್ಥಿನಿಯೊಂದಿಗೆ ತಿರುಗಾಡುತ್ತಿದ್ದ ಸುಳ್ಯದ ಕಲ್ಲಗುಂಡಿ ನಿವಾಸಿ ಅಫೀದ್ ಎಂಬಾತನಿಗೆ ಯುವಕರ ಗುಂಪೊಂದು ಕುಮಾರಧಾರ ನದಿ ಬಳಿಯ ನಿರ್ಜನ‌ ಪ್ರದೇಶದಲ್ಲಿ ಥಳಿಸಿದೆ.

    ಹಲ್ಲೆಗೊಳಗಾದ ಯುವಕ ಅಫೀದ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಯುವಕನ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ನಡುವೆ ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದು, ಆಕೆಯ ತಂದೆಯೂ ಪೊಲೀಸ್ ದೂರು ನೀಡಿದ್ದು ಯುವಕನ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ವಸತಿ ಶಾಲೆಯ ಪ್ರಾಂಶುಪಾಲ ಬಂಧನ

    ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ವಸತಿ ಶಾಲೆಯ ಪ್ರಾಂಶುಪಾಲ ಬಂಧನ

    ಹಾಸನ: ಹಾಸ್ಟೆಲ್‌ನ (Hostel) ಅಪ್ರಾಪ್ತ ವಿದ್ಯಾರ್ಥಿನಿಯರಿಗೆ (Students) ಲೈಂಗಿಕ ಕಿರುಕುಳ (Sexual Harassment) ನೀಡುತ್ತಿದ್ದ ಆರೋಪದಡಿ ವಸತಿ ಶಾಲೆಯ ಪ್ರಾಂಶುಪಾಲನನ್ನು (Principal) ಪೊಲೀಸರು ಬಂಧಿಸಿರುವ ಘಟನೆ ಹಾಸನ (Hassan) ಜಿಲ್ಲೆ, ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.

    ವಸತಿ ಶಾಲೆಯ ಪ್ರಾಂಶುಪಾಲ ಶಿವಕುಮಾರ್ ಬಂಧಿತ ಆರೋಪಿಯಾಗಿದ್ದು, ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು. ದೂರಿನ ಅನ್ವಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ.

    ARREST

    ಆಪ್ತ ಸಮಾಲೋಚನೆ ವೇಳೆ ಪ್ರಾಂಶುಪಾಲ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ವೇಳೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಹೆಚ್.ಟಿ ಕೋಮಲ ಪ್ರಾಂಶುಪಾಲ ಶಿವಕುಮಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಚಿಕಿತ್ಸೆಗೆಂದು ಬಂದಿದ್ದ ತಾಯಿ, ಮಗಳು – ಆಸ್ಪತ್ರೆಯ ಕಬೋರ್ಡ್‍ನಲ್ಲಿ, ಹಾಸಿಗೆಯ ಕೆಳಗೆ ಶವವಾಗಿ ಪತ್ತೆ

    POCSO 2 1

    ದೂರು ದಾಖಲಿಸಿಕೊಂಡ ಪೊಲೀಸರು ಪ್ರಾಂಶುಪಾಲ ಶಿವಕುಮಾರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಶಿವಕುಮಾರ್ ಮೂಲತಃ ಕೊಡಗು ಜಿಲ್ಲೆಯವನಾಗಿದ್ದು, ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಅರಕಲಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೌದಿ ಪರೀಕ್ಷಾ ಕೇಂದ್ರಗಳಲ್ಲಿ ಬುರ್ಖಾ ಬ್ಯಾನ್

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತ ಬಾಲಕಿ ರೇಪ್‌ಕೇಸ್ – ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 1 ಲಕ್ಷ ಬಹುಮಾನ

    ಅಪ್ರಾಪ್ತ ಬಾಲಕಿ ರೇಪ್‌ಕೇಸ್ – ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 1 ಲಕ್ಷ ಬಹುಮಾನ

    ಕಲಬುರಗಿ: ಅಫಜಲಪುರ ತಾಲೂಕಿನ ಆಳಂದ ಗ್ರಾಮದಲ್ಲಿ ನಡೆದಿದ್ದ ಅತ್ಯಾಚಾರ (Rape), ಕೊಲೆ ಪ್ರಕರಣದ ತನಿಖಾ ವರದಿಯನ್ನು (Investigation Report) 9 ದಿನಗಳಲ್ಲೇ ಬಾಲ ನ್ಯಾಯಮಂಡಳಿಗೆ ಸಲ್ಲಿಸಲಾಗಿದೆ ಎಂದು ಎಸ್ಪಿ ಇಶಾ ಪಂತ್ (Isha Pant) ತಿಳಿಸಿದ್ದಾರೆ.

    ನ.1ರಂದು ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು (Police) ಸಾಕ್ಷಿ ಸಮೇತ 9 ದಿನಗಳ ಒಳಗೇ ಬಾಲ ನ್ಯಾಯಮಂಡಳಿಗೆ ವರದಿ ಸಲ್ಲಿಸಲಾಗಿದೆ. ಇದನ್ನೂ ಓದಿ: ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ರೇಪ್‌ ಮಾಡಿ ಕೊಲೆ

    sugar cane farm

    ಅಪರಾಧ ಕೃತ್ಯವೆಸಗಿದ ಬಾಲಕನನ್ನು ತನಿಖಾ ತಂಡ ಕೇವಲ 24 ಗಂಟೆಯಲ್ಲೇ ವಶಕ್ಕೆ ಪಡೆದು, ವಿಚಾರಣೆ ನಡೆಸಿ ಬಾಲ ನ್ಯಾಯ ಮಂಡಳಿ ಮುಂದೆ ಹಾಜರು ಪಡಿಸಲಾಗಿತ್ತು. ತನಿಖಾ ತಂಡದ ಕಾರ್ಯವನ್ನು ಮೆಚ್ಚಿ ಡಿಜಿ ಮತ್ತು ಐಜಿಪಿಯವರು 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಿ ಊದುಬತ್ತಿ ಹಚ್ಚಿ, ಆರತಿ ಬೆಳಗ್ತಾರಾ ನೋಡೋಣ – ಪ್ರಹ್ಲಾದ್‌ ಜೋಶಿ ಟಾಂಗ್‌

    ಶೇ.50 ಮೊತ್ತ ಬಾಲಕಿ ಕುಟುಂಬಕ್ಕೆ: ತನಿಖಾ ತಂಡಕ್ಕೆ ಡಿಜಿ (DGP) ಮತ್ತು ಐಜಿಪಿಯವರು (IGP) ಘೋಷಿಸಿದ 1 ಲಕ್ಷ ರೂ. ನಗದು ಬಹುಮಾನದ ಶೇ.50 ಮೊತ್ತವನ್ನು ಸಂತ್ರಸ್ತ ಬಾಲಕಿ ಕುಟುಂಬಕ್ಕೆ ನೀಡಲು ತನಿಖಾ ತಂಡ ನಿರ್ಧರಿಸಿದೆ. ತನಿಖಾ ತಂಡ ಕಾರ್ಯವನ್ನು ಎಸ್ಪಿ ಇಶಾ ಪಂತ್ ಅವರು ಪ್ರಶಂಸಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಸೀದಿಯೊಳಗೆ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಓರ್ವ ಅರೆಸ್ಟ್

    ಮಸೀದಿಯೊಳಗೆ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಓರ್ವ ಅರೆಸ್ಟ್

    ನವದೆಹಲಿ: 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಪೊಲೀಸರು (Delhi Police) ಬಂಧಿಸಿರುವ ಘಟನೆ ಇಲ್ಲಿನ ಮೌಜ್‌ಪುರ ಪ್ರದೇಶದ ಮಸೀದಿಯಲ್ಲಿ (Delhi Mosque) ನಡೆದಿದೆ. ಕಳೆದ 2 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    CRIME COURT

    ಆರೋಪಿ ಮೊಹಮ್ಮದ್ ಅರ್ಮಾನ್ ಎಂದು ಗುರುತಿಸಲಾಗಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಬಂಧಿಸಿದ್ದು ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ (POCSO Act) ಹಾಗೂ ಐಪಿಸಿ (IPC) ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ನಾವೇನಾದರೂ ಸಿಡಿದೆದ್ದರೆ ನೀವು ಉಳಿಯುವುದಿಲ್ಲ – ಕಾಂಗ್ರೆಸ್‍ಗೆ ಮುತಾಲಿಕ್ ವಾರ್ನಿಂಗ್

    crime 1

    ಕೆಲ ಕಿಡಿಗೇಡಿಗಳು ಮೌಜ್‌ಪುರ ಪ್ರದೇಶದಲ್ಲಿರುವ ಮಸೀದಿಗೆ ಬಂದಿದ್ದರು. ಅವರು ಮಸೀದಿಯೊಳಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ನವೆಂಬರ್ 9 ರಂದು, ಬಾಲಕಿ ತನ್ನ ತರಗತಿ ಮುಗಿದ ನಂತರ ಮಸೀದಿಗೆ ಭೇಟಿ ನೀಡಿದ್ದಳು. ಆಕೆ ಒಂಟಿಯಾಗಿರುವುದು ಕಂಡು ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ

    ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ

    ಮುಂಬೈ: ಅಪ್ರಾಪ್ತ ಬಾಲಕಿಯನ್ನು `ಐಟಂ’ ಎಂದು ಕರೆದು ಲೈಂಗಿಕವಾಗಿ ಕಿರುಕುಳ ನೀಡಿದ 25 ವರ್ಷದ ಉದ್ಯಮಿಯೊಬ್ಬನಿಗೆ 7 ವರ್ಷಗಳ ಬಳಿಕ 1.5 ವರ್ಷ ಜೈಲು ಶಿಕ್ಷೆ ವಿಧಿಸಿರುವ ಮುಂಬೈ ಕೋರ್ಟ್ (Mumbai Court), ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ ಎಂದು ರೋಡ್ ರೋಮಿಯೋಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

    Bombay High Court

    ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ಕೋರ್ಟ್‌ನ (Sessions Court) ವಿಶೇಷ ನ್ಯಾಯಾಧೀಶರಾದ ಎಸ್.ಜೆ ಅನ್ಸಾರಿ ಅವರ ನೇತೃತ್ವದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು. ಈ ವೇಳೆ `ಐಟಂ’ ಎಂಬ ಪದವು ಮಹಿಳೆಯರನ್ನು ಲೈಂಗಿಕ ರೀತಿಯಲ್ಲಿ ಆಕ್ಷೇಪಿಸುತ್ತದೆ. ಇದು ಐಪಿಸಿ (IPC) ಸೆಕ್ಷನ್ 354ರ ಅತಿರೇಖದ ವರ್ತನೆಯನ್ನು ಸೂಚಿಸುವ ಅಪರಾಧವಾಗಿದೆ ಎಂದು ಪರಿಗಣಿಸಿದೆ. ಇದನ್ನೂ ಓದಿ: ಮಹಿಳೆಯರ ನಗ್ನ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಆರೋಪಿ ಅರೆಸ್ಟ್

    court file

    ಹಾಗಾಗಿ ಅಪ್ರಾಪ್ತ ಬಾಲಕಿಯನ್ನು ಐಟಂ ಎಂದು ಕರೆದ ಉದ್ಯಮಿಯನ್ನು ಐಪಿಸಿ (IPC) ಸೆಕ್ಷನ್ 354 ಹಾಗೂ ಲೈಂಗಿಕ ಅಪರಾಧಗಳು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿ, 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಮಹಿಳೆಯರನ್ನು (Womens) ರಕ್ಷಿಸಲು ಇಂತಹ ಕಠಿಣ ಅಪರಾಧ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ನಿಷೇಧದ ನಡುವೆಯೂ ಪಟಾಕಿ ಸದ್ದು- ಅತಿಯಾದ ವಾಯುಮಾಲಿನ್ಯದಿಂದ ಉಸಿರಾಟಕ್ಕೂ ತೊಂದರೆ

    Law

    ಆರೋಪಿಯು `ಐಟಂ’ ಎಂಬ ಪದವನ್ನು ಬಳಸುವ ಮೂಲಕ ಆಕೆಯನ್ನು ಸಂಬೋಧಿಸಿದ್ದಾನೆ. ಇದು ಹುಡುಗಿಯರನ್ನು ಅವಹೇಳನಕಾರಿ ಶೈಲಿ ಸಂಬೋಧಿಸುವ ಸಾಮಾನ್ಯ ಪದವಾಗಿದೆ, ಜೊತೆಗೆ ಅತಿರೇಕದ ವರ್ತನೆಯನ್ನು ತೋರುತ್ತದೆ. ಇಂತಹ ಅಪರಾಧಗಳನ್ನು ಕಠಿಣ ಕ್ರಮಗಳ ಮೂಲಕ ನಿಭಾಯಿಸಬೇಕಿದೆ. ಜೊತೆಗೆ ರೋಡ್ ರೋಮಿಯೋಗಳಿಗೆ ತಕ್ಕಪಾಠ ಕಲಿಸುವ ಜೊತೆಗೆ ಮಹುಳೆಯರನ್ನು ರಕ್ಷಿಸಬೇಕಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ಆರೋಪಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ಕೋರ್ಟ್ 2015ರಲ್ಲಿ ನಡೆದ ಘಟನೆಗೆ ಈಗ ಶಿಕ್ಷೆ ವಿಧಿಸಿದೆ. 2015ರಂದು ಅಪ್ರಾಪ್ತ ಬಾಲಕಿ ಶಾಲೆಯಿಂದ ಹಿಂದಿರುಗುತ್ತಿದ್ದಾಗ ಉದ್ಯಮಿಯೊಬ್ಬ ಬಾಲಕಿಯನ್ನು ಐಟಂ ಎಂದು ಸಂಬೋಧಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು, ಇದೀಗ ಕೋರ್ಟ್ ಶಿಕ್ಷೆ ವಿಧಿಸಿದೆ.

    Live Tv
    [brid partner=56869869 player=32851 video=960834 autoplay=true]

  • 2ನೇ ಪೋಕ್ಸೋ ಕೇಸಲ್ಲಿ ಮುರುಘಾಶ್ರೀಗೆ ಸಂಕಷ್ಟ- ಮೈಸೂರಲ್ಲಿ ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

    2ನೇ ಪೋಕ್ಸೋ ಕೇಸಲ್ಲಿ ಮುರುಘಾಶ್ರೀಗೆ ಸಂಕಷ್ಟ- ಮೈಸೂರಲ್ಲಿ ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

    ಚಿತ್ರದುರ್ಗ: ಮುರುಘಾಶ್ರೀ (Murugha Shree) ವಿರುದ್ಧ ಫೋಕ್ಸೋ ಕೇಸ್ ಅಷ್ಟು ಬೇಗ ಮುಗಿಯೋ ಲಕ್ಷಣಗಳು ಕಾಣ್ತಿಲ್ಲ. ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿ ನಾಲ್ಕು ದಿನ ಕಳೆದ್ರೂ ಈವರೆಗೆ ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಂದು ದೂರುದಾರರ ಹೇಳಿಕೆ ಪಡೆಯಲು ಚಿತ್ರದುರ್ಗ (Chitradurga Police) ಪೊಲೀಸರೇ ಮೈಸೂರಿಗೆ ತೆರಳಿದ್ದಾರೆ.

    Murugha Mutt

    ಹೌದು. ಪೋಕ್ಸೋ ಕೇಸ್‍ನಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ತನ್ನಿಬ್ಬರು ಮಕ್ಕಳ ಜೊತೆ ಇನ್ನಿಬ್ಬರು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಅಂತ ಮೈಸೂರಿನಲ್ಲಿ (Mysuru) ಪ್ರಕರಣ ದಾಖಲಿಸಿದ್ದರು. ಈಗ ತನಿಖೆಯನ್ನು ಚುರುಕುಗೊಳಿಸಿರೋ ಚಿತ್ರದುರ್ಗ ಪೊಲೀಸರು, ಸಂತ್ರಸ್ತ ಮಕ್ಕಳಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

    MURUGHA SHREE HEALTH 2

    ಸಂತ್ರಸ್ತ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಮೈಸೂರಿಗೆ ಖುದ್ದು ತೆರಳಿದ್ದ ಚಿತ್ರದುರ್ಗದ ಪೊಲೀಸರು, ಮಕ್ಕಳ ರಕ್ಷಣಾ ಸಮಿತಿಯ ಸಮ್ಮುಖದಲ್ಲಿ ಸಿಆರ್‍ಪಿಸಿ 161 ಅಡಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. 3-4 ದಿನಗಳಲ್ಲಿ ಆರೋಪ ಮಾಡಿದ ಮಕ್ಕಳ ವೈದ್ಯಕೀಯ ಪರೀಕ್ಷೆ ಕೂಡ ನಡೆಯಲಿದೆ. ಇದನ್ನೂ ಓದಿ: ಡೇಟಿಂಗ್ ಬಗ್ಗೆ ಯುವತಿಗೆ ಅಡ್ವೈಸ್ ಕೊಟ್ಟ ಜೋ ಬೈಡೆನ್ – ವೀಡಿಯೋ ವೈರಲ್

    CHITRADURGA MURUGHA SHREE HOSPITAL

    ಇನ್ನೊಂದೆಡೆ ಬಾಲರೋಪಿ ಆಗಿದ್ದ 3ನೇ ಆರೋಪಿ ಬಸವಾದಿತ್ಯಗೆ ಮೊನ್ನೆಯಷ್ಟೇ ಜಾಮೀನು ಸಿಕ್ಕ ಬೆನ್ನಲ್ಲೇ, ಇದೀಗ ಉಳಿದ ಆರೋಪಿಗಳೂ ಕೂಡ ಬೇಲ್ ಸಲ್ಲಿಸಿದ್ದಾರೆ. 2ನೇ ಆರೋಪಿ ಹಾಗೂ ಲೇಡಿ ವಾರ್ಡನ್ ರಶ್ಮಿ, 4ನೇ ಆರೋಪಿ ಹಾಗೂ ಶ್ರೀಗಳ ಸಹಾಯಕ ಪರಮಶಿವಯ್ಯ, 5ನೇ ಆರೋಪಿ ಗಂಗಾಧರಯ್ಯ ಕೂಡ ಚಿತ್ರದುರ್ಗ ಕೋರ್ಟ್‍ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

    MURUGHA MUTT

    ಒಟ್ಟಿನಲ್ಲಿ ಮೊದಲ ಪೋಕ್ಸೋ ಕೇಸಲ್ಲೇ ಪರಿತಪಿಸುತ್ತಿರುವ ಮುರುಘಾ ಶ್ರೀಗಳಿಗೆ ಈಗ ಎರಡನೇ ಕೇಸ್ ಕೂಡ ಉರುಳಾಗಿದೆ. ಈ ಕೇಸ್‍ನಿಂದ ಸಿದ್ದು ಹೇಗೆ ಹೊರಬರುತ್ತಾರೋ ಕಾದು ನೋಡಬೇಕಿದೆ. ಇದನ್ನೂ ಓದಿ: ಯತ್ನಾಳಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ, ಅವರಷ್ಟು ಬುದ್ಧಿವಂತಿಕೆಯೂ ನನಗಿಲ್ಲ: ಸವದಿ

    Live Tv
    [brid partner=56869869 player=32851 video=960834 autoplay=true]

  • ಮುರುಘಾಶ್ರೀಗಳಿಗೆ ಮಕ್ಕಳ ಅಶ್ಲೀಲ ವೀಡಿಯೋ ನೋಡೋ ಚಟವಿತ್ತು – ಒಡನಾಡಿ ಆರೋಪ

    ಮುರುಘಾಶ್ರೀಗಳಿಗೆ ಮಕ್ಕಳ ಅಶ್ಲೀಲ ವೀಡಿಯೋ ನೋಡೋ ಚಟವಿತ್ತು – ಒಡನಾಡಿ ಆರೋಪ

    ಮೈಸೂರು: ಚಿತ್ರದುರ್ಗ ಮುರುಘಾಮಠದ (Murugha Mutt) ಶಿವಮೂರ್ತಿ ಶರಣರ (Shivamurthy Murugha Sharanaru) ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಸತ್ಯ ಹೊರ ಬಿದ್ದಿದೆ.

    ಮುರುಘಾ ಮಠದ ವಸತಿ ಶಾಲೆಯಲ್ಲಿದ್ದ (Murugha Mutt Residential School) ಕೆಲ ಹೆಣ್ಣು ಮಕ್ಕಳ ಅಶ್ಲೀಲ ವೀಡಿಯೋ (Video) ಸಹ ಮಾಡಲಾಗಿದ್ದು ಅದನ್ನು ಸ್ವಾಮೀಜಿಗಳಿಗೆ ಮಾರಾಟ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಗಲಾಟೆ – ಸೊಸೆಯಿಂದಲೇ ಅತ್ತೆಯ ಕೊಲೆ

    MURUGHA SHREE 3

    ಈ ಕುರಿತು ಮಾತನಾಡಿರುವ ಒಡನಾಡಿ ಸಂಸ್ಥೆಯ (Odanadi Seva Samsthe) ಮುಖ್ಯಸ್ಥ ಪರಶುರಾಮ್, ಮರುಘಾ ಮಠದ ವಸತಿ ಶಾಲೆಯಲ್ಲಿದ್ದ ಕೆಲ ಮಕ್ಕಳ ಬೆತ್ತಲೆ ವೀಡಿಯೋ ಮಾಡಿ ಸ್ವಾಮೀಜಿಗೆ ಮಾರಾಟ ಮಾಡಿದ್ದಾರೆ. ವೀಡಿಯೋ ಮಾಡುವ ವಿಚಾರದಲ್ಲಿ ಸ್ವಾಮೀಜಿಯ ಪಾತ್ರವೂ ಇದೆ. ಮಠದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೇ ಈ ವಿಚಾರ ಹೇಳಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಬಿಜೆಪಿ ಕಾರ್ಪೊರೇಟರ್ ಪತಿ ಮೇಲೆ ಪೌರಕಾರ್ಮಿಕರಿಂದ ಹಲ್ಲೆ

    ವೀಡಿಯೋ ಮಾಡಿದವರು, ವೀಡಿಯೋ ಮಾರಾಟ ಮಾಡಿದವರ ಬಂಧನವೂ ಆಗಬೇಕು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ದೊಡ್ಡ ಪಟ್ಟಿಯೇ ಇದೆ. ಇನ್ನೂ ಅನೇಕರು ಈ ಬಗ್ಗೆ ದೂರು ಕೊಡುವುದು ನಿಶ್ಚಿತ. ಮಠದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಇಬ್ಬರು ಅಪ್ರಾಪ್ತ ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ಶೋಷಣೆ ಆಗಿದೆ ಎಂದು ಆರೋಪಿಸಿದ್ದಾರೆ.

    ನಾವು ನಂಬಿದ್ದ ವ್ಯಕ್ತಿ ಇಷ್ಟು ಕ್ರೂರವಾಗಿ ವರ್ತಿಸಿದ್ದಾರಲ್ಲ ಅನ್ನೋದು ತುಂಬಾ ದುಃಖವಾಗಿದೆ. ಇಷ್ಟಾದರೂ ಸರ್ಕಾರ (Government Of Karnataka) ವಿಶೇಷ ತನಿಖಾ ದಳ (Speical Investigation Team) ನೇಮಿಸಿಲ್ಲ. ಈ ಪ್ರಕರಣದ ಹಿಂದಿರುವ ಎಲ್ಲ ಮುಖಗಳು ಆಚೆ ಬರಬೇಕಾದರೆ ರಾಷ್ಟ್ರಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಕಾಮುಕನಿಗೆ 142 ವರ್ಷ ಜೈಲು

    10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಕಾಮುಕನಿಗೆ 142 ವರ್ಷ ಜೈಲು

    ತಿರುವನಂತಪುರಂ: 10 ವರ್ಷದ ಬಾಲಕಿಗೆ 2 ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದ 41 ವರ್ಷದ ಕಾಮುಕನಿಗೆ ಕೇರಳದ ಪತ್ತನಂತಿಟ್ಟದ ಪೋಕ್ಸೋ ನ್ಯಾಯಾಲಯವು (Pocso Court) 142 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿದೆ.

    ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ನ್ಯಾಯಾಲಯವು ವ್ಯಕ್ತಿಗೆ ಶಿಕ್ಷೆ ವಿಧಿಸಿದೆ. ಅಲ್ಲದೇ ಆರೋಪಿ ದಂಡ ಪಾವತಿಸದೇ ಇದ್ದರೆ ಇನ್ನೂ ಮೂರು ವರ್ಷಗಳ ಕಾಲ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದು ಜಿಲ್ಲೆಯ ಪೋಕ್ಸೋ ಪ್ರಕರಣಗಳಲ್ಲೇ ಅತ್ಯಂತ ಗರಿಷ್ಠ ಅವಧಿಯ ಶಿಕ್ಷೆಯಾಗಿದೆ. ಇದನ್ನೂ ಓದಿ: PFI ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್‍ನ ಕೆಲವರು ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ: ತೇಜಸ್ವಿ ಸೂರ್ಯ

    crime

    ಆನಂದನ್ ಪಿ.ಆರ್. ಅಲಿಯಾಸ್ ಬಾಬು ಎಂದು ಗುರುತಿಸಲಾದ ಅಪರಾಧಿಯು 2019 ಮತ್ತು 2021ರ ನಡುವೆ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದನು. ಆಕೆ ಮೇಲೆ ಅನೇಕ ಬಾರಿ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅದಕ್ಕಾಗಿ ತಿರುವಲ್ಲಾ ಪೊಲೀಸರು (Police) ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು.

    ಪ್ರಾಸಿಕ್ಯೂಷನ್ ಪರವಾಗಿ ಪ್ರಧಾನ ಪೋಕ್ಸೋ (POCSO) ಪ್ರಾಸಿಕ್ಯೂಟರ್ ವಕೀಲ (Advocate) ಜೇಸನ್ ಮ್ಯಾಥ್ಯೂಸ್ ಹಾಜರಾದ ಪ್ರಕರಣದಲ್ಲಿ ಸಾಕ್ಷಿ ಹೇಳಿಕೆಗಳು, ವೈದ್ಯಕೀಯ ದಾಖಲೆಗಳು ಮತ್ತು ಸಾಕ್ಷ್ಯಗಳು ಪ್ರಾಸಿಕ್ಯೂಷನ್ ಪರವಾಗಿ ಪ್ರಬಲವಾಗಿದ್ದವು. ಪತ್ತನಂತಿಟ್ಟ ಜಿಲ್ಲಾ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೆಲ್ಲವನ್ನೂ ಪರಿಶೀಲಿಸಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದೆ – ಪ್ರಹ್ಲಾದ್ ಜೋಶಿ

    CRIME 3

    ಒಟ್ಟು 142 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಪೋಕ್ಸೋ ಅಡಿಯಲ್ಲಿ ಪಟ್ಟಿ ಮಾಡಲಾದ ಅಪರಾಧಗಳಿಗಾಗಿ ಒಟ್ಟು 5 ಲಕ್ಷ ರೂ. ಶಿಕ್ಷೆ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಲಿತ ಬಾಲಕಿಯನ್ನ ಇಡೀ ರಾತ್ರಿ ಠಾಣೆಯಲ್ಲಿರಿಸಿ ಥಳಿಸಿದ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

    ದಲಿತ ಬಾಲಕಿಯನ್ನ ಇಡೀ ರಾತ್ರಿ ಠಾಣೆಯಲ್ಲಿರಿಸಿ ಥಳಿಸಿದ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

    ಭೋಪಾಲ್: ಅತ್ಯಾಚಾರಕ್ಕೊಳಗಾಗಿದ್ದ 13 ವರ್ಷದ ದಲಿತ ಬಾಲಕಿಯನ್ನು (Dalit Girl) ರಾತ್ರಿ ಇಡೀ ಠಾಣೆಯಲ್ಲಿ ಇರಿಸಿಕೊಂಡು ಥಳಿಸಿದ ಘಟನೆ ಮಧ್ಯ ಪ್ರದೇಶದ (Madhya Pradesh) ಛತ್ತರ್‌ಪುರ ನಗರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸ್ (Police) ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

    stop rape

    ಅತ್ಯಾಚಾರ ಸಂತ್ರಸ್ತೆಯನ್ನು ಪೊಲೀಸ್ ಠಾಣೆಯಲ್ಲಿ ಇರಿಸಿದ್ದಕ್ಕಾಗಿ ನಗರ ಕೋತ್ವಾಲಿ ಠಾಣೆಯ ಎಚ್‌ಎಸ್‌ಒ ಅನೂಪ್ ಯಾದವ್, ಸಬ್ ಇನ್‌ಸ್ಪೆಕ್ಟರ್ ಮೋಹಿನಿ ಶರ್ಮಾ ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್ (PSI) ಗುರುದತ್ ಶೇಷಾ ಅವರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಬಾಬು ಖಾನ್ ನನ್ನು ಸೆಪ್ಟೆಂಬರ್ 1ರಂದು ಐಪಿಸಿ ಸೆಕ್ಷನ್ ಹಾಗೂ ಪರಿಶಿಷ್ಟ ಜಾತಿ ಪಂಗಡಗಳ (SC-ST Act) ದೌರ್ಜನ್ಯ ತಡೆ ಕಾಯ್ದೆ ಹಾಗೂ ಪೋಕ್ಸೋ  (POCSO) ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಛತ್ತರ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ 4 ಅಂತಸ್ತಿನ ಕಟ್ಟಡ ಕುಸಿತ – ಮೂವರ ದುರ್ಮರಣ

    STOP RAPE

    ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಈ ಸಂಬಂಧ ದೂರು ನೀಡಿದ ನಂತರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರತಾಪ್ ಸಿಂಗ್ ಚೌಹಾಣ್ ಹೇಳಿದ್ದಾರೆ.

    ದೂರಿನಲ್ಲಿ ಏನಿದೆ?: ಕಳೆದ ಆಗಸ್ಟ್ 27ರಂದು ಮಗಳು ಆಟವಾಡಲು ಮನೆಯಿಂದ ಹೊರಟಿದ್ದಳು ಮತ್ತೆ ಹಿಂದಿರುಗಿರಲಿಲ್ಲ. ಮರುದಿನ ಪತಿಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಬಳಿಕ ಆಗಸ್ಟ್ 30 ರಂದು ಮಗಳು ತನ್ನ ಮನೆಗೆ ವಾಪಸ್ಸಾದಳು. ಅದೇ ದಿನ ಬಾಬು ಖಾನ್ ಬಲವಂತವಾಗಿ ತನ್ನ ಮಗಳನ್ನ ಕರೆದೊಯ್ದು ಮೂರು ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಥಳೀಯ ಕಲಾವಿದರೊಂದಿಗೆ ನೃತ್ಯ ಮಾಡಿದ ಬಾಂಗ್ಲಾ ಪ್ರಧಾನಿ – ವೀಡಿಯೋ ವೈರಲ್

    rape a

    ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ಇಬ್ಬರು ಪೊಲೀಸರು ನನ್ನ ಮಗಳಿಗೆ ಹೇಳಿಕೆ ಬದಲಾಯಿಸುವಂತೆ ಒತ್ತಡ ಹೇರಿದರು. ಅಲ್ಲದೇ ನನ್ನ ಮಗಳನ್ನು ಹಿಡಿದು ಥಳಿಸಿದರು. ಅಲ್ಲೇ ಇದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ನನ್ನನ್ನು ಹೊರಗೆ ದಬ್ಬಿದರು. ಇಡೀ ರಾತ್ರಿ ನನ್ನ ಮಗಳನ್ನು ಠಾಣೆಯಲ್ಲೇ ಇರಿಸಿಕೊಂಡು ಥಳಿಸಿದರು. ಆಗಸ್ಟ್ 31 ರಂದು ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಯಾದವ್ ಅವರನ್ನು ಕೇಸ್ ದಾಖಲಿಸುವಂತೆ ಕೇಳಿದಾಗ ನಮ್ಮನ್ನು ಹೆದರಿಸಿ ಓಡಿಸಿದರು. ಅಂತಿಮವಾಗಿ ಸೆಪ್ಟೆಂಬರ್ 1 ರ ಸಂಜೆ ಪೊಲೀಸರು ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆದರೆ ಅಪಹರಣದ ಆರೋಪವನ್ನು ಎಫ್‌ಐಆರ್‌ನಲ್ಲಿ ಸೇರಿಸಿರಲಿಲ್ಲ. ಜೊತೆಗೆ ಬಾಲಕಿಯ ವಯಸ್ಸನ್ನು 13ರ ಬದಲಿಗೆ 17 ವರ್ಷ ಎಂದು ತೋರಿಸಲಾಗಿತ್ತು ಎಂದೂ ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]