Tag: ಪೊಲೀಸ್ ಇಲಾಖೆ

  • ಮೈಸೂರಿನಲ್ಲಿ ಮಹಿಷ ದಸರಾಕ್ಕೆ ಅನುಮತಿ

    ಮೈಸೂರಿನಲ್ಲಿ ಮಹಿಷ ದಸರಾಕ್ಕೆ ಅನುಮತಿ

    ಮೈಸೂರು: ಭಾರೀ ಚರ್ಚೆಯಾಗುತ್ತಿರುವ ಮಹಿಷ ದಸರಾದ (Mahisha Dasara) ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಅಲ್ಲದೇ ಕಾರ್ಯಕ್ರಮದಲ್ಲಿ ಯಾವುದೇ ಪ್ರಚೋದನಕಾರಿ ಭಾಷಣ ಮಾಡದಂತೆ ಪೊಲೀಸ್ ಆಯುಕ್ತ ಡಾ.ರಮೇಶ್ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪುರಭವನದಲ್ಲಿ ಬೆ.10 ರಿಂದ 12ರವರೆಗೆ ಮಹಿಷ ದಸರಾ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಪುರಭವನದ ಒಳಗಿನ ಸಭಾಂಗಣ ಬಿಟ್ಟು ನಗರದ ಎಲ್ಲಾ ಕಡೆ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ. ಇದರಿಂದಾಗಿ ಮೆರವಣಿಗೆ ಹಾಗೂ ಬೈಕ್ ರ‍್ಯಾಲಿ ನಡೆಸಬಾರದು. ಪರ ಹಾಗೂ ವಿರೋಧ ಘೋಷಣೆ ಕೂಗಬಾರದು. ಅಲ್ಲದೇ ಪ್ರಚೋದನಕಾರಿ ಹೇಳಿಕೆ ನೀಡಬಾರದು ಎಂದಿದ್ದಾರೆ. ಇದನ್ನೂ ಓದಿ: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿ ಮಾಜಿ ಶಾಸಕ ರಾಮಪ್ಪ ಲಮಾಣಿ

    ಭದ್ರತೆಗೆ 2 ಸಾವಿರ ಪೊಲೀಸರ (Police) ನಿಯೋಜನೆ ಮಾಡಲಾಗಿದೆ. ಮಹಿಷ ದಸರಾ ವಿಚಾರವಾಗಿ ಪ್ರಚೋದನಕಾರಿಯಾಗಿ ಹೇಳಿಕೆ ಹಾಗೂ ಪೋಸ್ಟ್ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಷಾ ದಸರಾ ಪರ, ವಿರೋಧ – ಮೈಸೂರಿನಲ್ಲಿ ಸೆಕ್ಷನ್ 144 ಜಾರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಂಬೂ ಸವಾರಿಗೆ ಬರಲಿದ ಗತವೈಭವ – ರಾಜ ಪೋಷಾಕಿನಲ್ಲಿ ಪೊಲೀಸರು

    ಜಂಬೂ ಸವಾರಿಗೆ ಬರಲಿದ ಗತವೈಭವ – ರಾಜ ಪೋಷಾಕಿನಲ್ಲಿ ಪೊಲೀಸರು

    ಮೈಸೂರು: ಈ ಬಾರಿ ದಸರಾ (Mysuru Dasara) ಜಂಬೂ ಸವಾರಿಯಲ್ಲಿ (Dasara Procession) ಗತಕಾಲದ ವೈಭವ ಮರುಕಳಿಸಲಿದೆ. ಈ ಬಾರಿ ದಸರಾದಲ್ಲಿ ರಾಜ ಪೋಷಾಕಿನಲ್ಲಿ ಪೊಲೀಸರು (Police) ಮಿಂಚಲಿದ್ದಾರೆ. ಇದೇ ವಸ್ತ್ರದಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.

    414 ವರ್ಷಗಳ ಇತಿಹಾಸವುಳ್ಳ ದಸರಾದಲ್ಲಿ ಈ ಬಾರಿ ರಾಜಪರಂಪರೆಯ ಜಂಬೂ ಸವಾರಿ ನಡೆಯಲಿದೆ. ಮರೆಯಾಗಿದ್ದ ಪರಂಪರೆಯ ಸೊಗಡು ಈ ಬಾರಿ ದಸರಾದಲ್ಲಿ ಮತ್ತೆ ಮರುಕಳಿಸಲಿದೆ. ಜಂಬೂ ಸವಾರಿ ವೇಳೆ ಅಂಬಾರಿ ಸುತ್ತ ರಾಜಪರಂಪರೆಯ ಪೋಷಾಕುಗಳಲ್ಲಿ ಪೊಲೀಸರು ಮಿಂಚಲಿದ್ದಾರೆ. ಕೇವಲ ಭಾವಚಿತ್ರದಲ್ಲಿ ಮಾತ್ರ ಕಾಣಸಿಗುತ್ತಿದ್ದ ಜಂಬೂ ಸವಾರಿಯ ಗತವೈಭವವನ್ನು ಇದೀಗಾ ಅದೇ ಮಾದರಿಯಲ್ಲಿ ನಡೆಸಲು ತಯಾರಿ ನಡೆಸಲಾಗಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ನಾಳೆ ಚಾಲನೆ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    ಅಂಬಾರಿ ಆನೆಯ ಸುತ್ತ ಭದ್ರತೆಗಾಗಿ ನಿಯೋಜಿಸುವ ಪೊಲೀಸ್ ಸಿಬ್ಬಂದಿ ಪಾರಂಪರಿಕ ಪೋಷಾಕು ತೊಟ್ಟುಕೊಂಡೆ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಪಾರಂಪರಿಕ ಪೋಷಾಕುಗಳು ಸಿದ್ಧವಾಗಿವೆ.

    ಅದೇ ರೀತಿ ರಾಜ ಬಿರುದುಗಳನ್ನು ಹಿಡಿದು ಕಲಾ ತಂಡಗಳು ಸಾಗಲಿವೆ. ಸುಮಾರು 200 ಜನರು ರಾಜರ ಕಾಲದಲ್ಲಿ ತೊಡುತ್ತಿದ್ದ ಉಡುಗೆಗಳನ್ನು ತೊಡಲಿದ್ದಾರೆ. ಈ ಹಿಂದೆ ಇದ್ದ ಹಸಿರು ಲ್ಯಾನ್ಸರ್, ಕೆಂಪು ಬಣ್ಣದ ಲ್ಯಾನ್ಸಾರ್, ಗ್ರಿಲ್ ಮೀಸೆ, ಬಿರುದು, ದರ್ಬಾರ್ ಹುಡೋಸ್ ಹಾಗೂ ಅರಮನೆಯ ಜಿಲೋ ಪೋಷಾಕುಗಳು ಇದಕ್ಕಾಗಿ ತಯಾರಾಗಿವೆ. ಇದನ್ನೂ ಓದಿ: ಬಂದೇ ಬಿಡ್ತು ದಸರಾ – ಮೈಸೂರು ಅರಮನೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾನೂನು ವಿರುದ್ಧ ಕೆಲಸ ಮಾಡಿದ್ರೆ ಯಾವುದೇ ಪಕ್ಷದವರಾದ್ರೂ ಕ್ರಮ: ಪರಮೇಶ್ವರ್

    ಕಾನೂನು ವಿರುದ್ಧ ಕೆಲಸ ಮಾಡಿದ್ರೆ ಯಾವುದೇ ಪಕ್ಷದವರಾದ್ರೂ ಕ್ರಮ: ಪರಮೇಶ್ವರ್

    ಬೆಂಗಳೂರು: ಕಾನೂನಿನ ವಿರುದ್ಧ ಯಾವುದೇ ಪಕ್ಷದವರು ನಡೆದುಕೊಂಡರೂ ಅವರ ವಿರುದ್ಧ ಪೊಲೀಸ್ (Police) ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ಹೇಳಿದ್ದಾರೆ.

    ಬಿಜೆಪಿ (BJP) ಕಾರ್ಯಕರ್ತರ ಮೇಲೆ ಸುಮ್ಮನೆ ಕೇಸ್ ಹಾಕುತ್ತಿದ್ದಾರೆ ಎಂದು ಆರೋಪಿಸಿ ಡಿಜಿಪಿಗೆ ಪಕ್ಷದ ನಿಯೋಗ ದೂರು ಕೊಟ್ಟ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಅನಗತ್ಯವಾಗಿ ಯಾರ ಖಾಸಗಿ ಜೀವನದಲ್ಲೂ ಎಂಟ್ರಿ ಆಗೋದಿಲ್ಲ. ಯಾರಾದರೂ ದೂರು ಕೊಟ್ಟರೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಅಲ್ಲದೇ ಎಫ್‍ಐಆರ್ ಹಾಕಿ ತನಿಖೆ ಮಾಡಿ ಅಗತ್ಯ ಬಿದ್ದರೆ ಚಾರ್ಜ್ ಶೀಟ್ ಹಾಕುತ್ತಾರೆ. ಇಲ್ಲವೇ ಪ್ರಕರಣವನ್ನು ಕೈ ಬಿಡುತ್ತಾರೆ. ಅದನ್ನು ಮಾಡಬೇಡಿ ಎಂದರೆ ಪೊಲೀಸ್ ಇಲಾಖೆ ಯಾಕೆ ಇರಬೇಕು? ಎಂದಿದ್ದಾರೆ. ಇದನ್ನೂ ಓದಿ: ವಜ್ರಕವಚ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಉಡುಪಿ ಕೃಷ್ಣ

    ಎಲ್ಲೇ ನ್ಯೂನತೆ ಕಂಡು ಬಂದರೆ ನಮ್ಮ ಗಮನಕ್ಕೆ ತರಲಿ. ನಾವು ಅದನ್ನು ಸರಿಪಡಿಸುತ್ತೇವೆ. ಆ ಪಕ್ಷ ಈ ಪಕ್ಷ ಎಂದು ಹೇಳೋದು ಸರಿಯಲ್ಲ. ಯಾವ ಪಕ್ಷದವರು ಎಂದು ಸಹ ನಾವು ನೋಡೋದಿಲ್ಲ. ಕಾನೂನು ವಿರುದ್ಧವಾಗಿ ಕೆಲಸ ಯಾರೇ ಮಾಡಿದರೂ ಅವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

    ಸರಿಯಾದ ಕ್ರಮ ಕೈಗೊಳ್ಳದೆ ಇದ್ದರೆ ಸಮಾಜದಲ್ಲಿ ಶಿಸ್ತು ಇರುವುದಿಲ್ಲ. ಅಹಿತಕರ ಘಟನೆಗಳು ನಡೆಯುತ್ತವೆ. ಇದನ್ನೆಲ್ಲ ತಡೆಯಲು ಪೊಲೀಸ್ ಇಲಾಖೆ ಇರುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅಪಮಾನ ಮಾಡಿಲ್ಲ, ಧರ್ಮದ ಬಗ್ಗೆ ಗೌರವವಿದೆ: ಪರಮೇಶ್ವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯದ ಇಬ್ಬರು IPS ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ – 18 ಮಂದಿಗೆ ವಿಶಿಷ್ಟ ಸೇವಾ ಪದಕ ಪ್ರದಾನ

    ರಾಜ್ಯದ ಇಬ್ಬರು IPS ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ – 18 ಮಂದಿಗೆ ವಿಶಿಷ್ಟ ಸೇವಾ ಪದಕ ಪ್ರದಾನ

    ಬೆಂಗಳೂರು: 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ (Ministry of Home Affairs) ಕೊಡಮಾಡುವ ರಾಷ್ಟ್ರಪತಿ ಪದಕಕ್ಕೆ (President Medal) ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಪೊಲೀಸ್‌ ವಿಶಿಷ್ಟ ಸೇವಾ ಪದಕಕ್ಕೆ 18 ಮಂದಿ ಪೊಲೀಸ್‌ ಅಧಿಕಾರಿಗಳು (Police Officers) ಭಾಜನರಾಗಿದ್ದಾರೆ.

    ಪೊಲೀಸ್‌ ಇಲಾಖೆಗೆ ಸಲ್ಲಿಸಿದ ಗಣನೀಯ ಸೇವೆಗೆ ಕೇಂದ್ರ ಗೃಹ ಸಚಿವಾಲಯ ಪದಕ ಪ್ರದಾನ ಮಾಡಲಿದೆ. ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.

    Untitled 1 copy 1

    ರಾಷ್ಟ್ರಪತಿ ಪದಕ:
    ಎಸ್. ಮುರುಗನ್, ಎಡಿಜಿಪಿ
    ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ

    ವಿಶಿಷ್ಟ ಸೇವಾ ಪದಕ:
    ಸಂದೀಪ್ ಪಾಟೀಲ್, ಐಜಿಪಿ
    ಬಿ ಎಸ್ ಮೋಹನ್ ಕುಮಾರ್, ಡಿವೈಎಸ್‌ಪಿ
    ನಾಗರಾಜ್, ಎಸಿಪಿ
    ಶಿವಶಂಕರ್, ಅಸಿಸ್ಟೆಂಟ್ ಡೈರೆಕ್ಟರ್
    ಭೀಮಾರಾವ್ ಗಿರೀಶ್, ಎಸ್ಪಿ
    ರಾಘವೇಂದ್ರ ಹೆಗ್ಡೆ , ಎಸ್‌ಪಿ
    ಜಗದೀಶ್ ಹೆಚ್.ಎಸ್, ಎಸಿಪಿ
    ಕೇಶವಮೂರ್ತಿ ಗೋಪಾಲಯ್ಯ, ಡಿಎಸ್‌ಪಿ
    ನಾಗಯ್ಯ ನಾಗರಾಜು, ಡಿಎಸ್‌ಪಿ
    ಬಿ.ಎನ್ ಶ್ರೀನಿವಾಸ್, ಡಿಎಸ್‌ಪಿ
    ಅಂಜುಮಾಲ ನಾಯ್ಕ್, ಡಿವೈಎಸ್‌ಪಿ
    ಅನಿಲ್ ಕುಮಾರ್ ಪ್ರಭಾಕರ್, ಪಿಐ
    ಅಶೋಕ್ ಆರ್.ಪಿ, ಪಿಐ
    ರಾಮಪ್ಪ ಗುತ್ತೇರ್, ಪಿಐ
    ಶಂಕರ, ಹೆಚ್‌ಸಿ
    ಕೆ.ವೆಂಕಟೇಶ್, ಹೆಚ್‌ಸಿ
    ಕುಮಾರ್, ಎಹೆಚ್‌ಸಿ
    ವಿ.ಬಂಗಾರು, ಕೆಎಸ್‌ಆರ್‌ಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 530 ಜನರಿಗೆ ರೌಡಿ ಶೀಟರ್ ಪಟ್ಟದಿಂದ ಮುಕ್ತಿ ನೀಡಿದ ಹು-ಧಾ ಪೊಲೀಸ್ ಇಲಾಖೆ

    530 ಜನರಿಗೆ ರೌಡಿ ಶೀಟರ್ ಪಟ್ಟದಿಂದ ಮುಕ್ತಿ ನೀಡಿದ ಹು-ಧಾ ಪೊಲೀಸ್ ಇಲಾಖೆ

    ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಗಳಿಗೆ ಕಾರಣವಾಗುವ ರೌಡಿ ಶೀಟರ್‌ಗಳನ್ನು (Rowdy Sheeter) ಸನ್ನಡತೆ ಸೇರಿ ಇತರ ಆಧಾರದ ಮೇಲೆ ಪಟ್ಟಿಯಿಂದ ಕೈಬಿಡಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ (Hubballi – Dharwad Police Department) ವ್ಯಾಪ್ತಿಯಲ್ಲಿ ಒಟ್ಟು 530 ಮಂದಿಯ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ಹೊರಹಾಕಲಾಗಿದೆ.

    ಕೆಲ ಮಾಹಿತಿಗಳನ್ನು ಆಧರಿಸಿ ರೌಡಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ. ಹು-ಧಾ ವ್ಯಾಪ್ತಿಯಲ್ಲಿ 2018ರಿಂದ 2023ರವರೆಗೆ ಬಹಳಷ್ಟು ರೌಡಿಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಹೆಚ್ಚು ರೌಡಿಗಳಿದ್ದಾರೆ. ಪ್ರತಿ ರೌಡಿ ಪಟ್ಟಿಯಲ್ಲಿ ಹಲವರ ಹೆಸರು ಸೇರ್ಪಡೆಯಾಗುತ್ತ ಹೋಗುತ್ತದೆ. ಕೊಲೆ, ಸುಲಿಗೆ, ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾದವರು ರೌಡಿ ಶೀಟರ್‌ಗೆ ಸರ್ಪಡೆಯಾಗುತ್ತಾರೆ. ಅದೂ ಒಬ್ಬರ ಮೇಲೆ ಒಂದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾದರೆ ಮಾತ್ರ. ಇದನ್ನೂ ಓದಿ: ತಳ್ಳಾಟ ನೂಕಾಟದಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದ ಯತ್ನಾಳ್ – ಆಸ್ಪತ್ರೆಗೆ ರವಾನೆ

    ಇದೇ ಆಧಾರದಲ್ಲಿ ಪ್ರತಿ ರೌಡಿಗಳ ಹೊಸ ಪಟ್ಟಿ ಸನ್ನಡತೆ ಆಧರಿಸಿ ಬಿಡುಗಡೆ ಪ್ರಕ್ರಿಯೆ ನಡೆಯುತ್ತದೆ. ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 2018ರಲ್ಲಿ 13, 2019ರಲ್ಲಿ 20, 2020ರಲ್ಲಿ 11, 2021ರಲ್ಲಿ 17, 2022ರಲ್ಲಿ 9 ಹಾಗೂ 2023ರಲ್ಲಿ 480 ರೌಡಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಎಲ್ಲ ವರ್ಷಗಳಿಗಿಂತ 2023ರಲ್ಲಿಯೇ ಅತಿ ಹೆಚ್ಚು ರೌಡಿಗಳನ್ನು ಪಟ್ಟಿಯಿಂದ ವಿಮುಕ್ತಗೊಳಿಸಲಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಕೊನೆಗೂ ಚಾಲನೆ – ಆ್ಯಪ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸ್ ಇಲಾಖೆಯಲ್ಲಿ ಸೆಲ್ಯೂಟ್, ಒದೆನೂ ಸಿಗುತ್ತೆ, ಗುಂಡು ಹಾರಿಸೋದು ಇರುತ್ತೆ: ಜಿ ಪರಮೇಶ್ವರ್

    ಪೊಲೀಸ್ ಇಲಾಖೆಯಲ್ಲಿ ಸೆಲ್ಯೂಟ್, ಒದೆನೂ ಸಿಗುತ್ತೆ, ಗುಂಡು ಹಾರಿಸೋದು ಇರುತ್ತೆ: ಜಿ ಪರಮೇಶ್ವರ್

    ಯಾರಿಗೆ ಯಾವುದು ಬೇಕೋ ತೀರ್ಮಾನ ಮಾಡಿ ಎಂದ ಗೃಹ ಸಚಿವ

    ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ (Police Department) ಸೆಲ್ಯೂಟ್ ಇರುತ್ತೆ, ಒದೆನೂ ಇರುತ್ತೆ, ಮುಂದುವರೆದು ಗುಂಡು ಹಾರಿಸೋದು ಇರುತ್ತೆ. ಯಾರಿಗೆ ಯಾವುದು ಬೇಕೋ ತೀರ್ಮಾನ ಮಾಡಿ ಎಂದು ಗೃಹಸಚಿವ ಜಿ. ಪರಮೇಶ್ವರ್ (G.Parameshwara) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಕೊಠಡಿ ಪೂಜೆ ಮಾಡಿದ ಬಳಿಕ ಮಾತನಾಡಿದ ಅವರು, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಪೊಲೀಸ್ ಇಲಾಖೆಯಲ್ಲಿ ಸೆಲ್ಯೂಟ್ ಸಿಗುತ್ತದೆ. ಒದೆನೂ ಸಿಗುತ್ತದೆ, ಮುಂದುವರಿದು ಗುಂಡು ಹಾರಿಸೋದು ಇರುತ್ತದೆ. ಆದರೆ ಯಾರಿಗೆ ಯಾವುದು ಬೇಕೋ ತೀರ್ಮಾನ ಮಾಡಿ. ಲಾಠಿ ಏಟು ತಿನ್ನಬೇಕೋ ಅಥವಾ ಗುಂಡು ಹಾರಿಸಿಕೊಳ್ಳಬೇಕೋ ಅಥವಾ ಶಾಂತಿಯಿಂದ ರಾಜ್ಯ ನಡೆಸಬೇಕೋ ಎಂದು ಜನರೇ ತೀರ್ಮಾನ ಮಾಡಲಿ ಎಂದರು. ಇದನ್ನೂ ಓದಿ: ಮಕ್ಕಳ ಜೊತೆ ಕ್ರಿಕೆಟ್ ಆಡಿದ ರೇಣುಕಾಚಾರ್ಯ

    ಬಜರಂಗದಳ (Bajarang Dal) ನಿಷೇಧ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಪ್ರಣಾಳಿಕೆಯಲ್ಲಿ ಯಾರು ಶಾಂತಿ ಕದಡುತ್ತಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ವ್ಯಕ್ತಿ ಅಥವಾ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೇವೆ. ಅವರು ಯಾರೂ ಅದನ್ನು ಮಾಡಲ್ಲ ಎಂದರೆ ಭಯ ಪಡುವ ಅಗತ್ಯವಿಲ್ಲ. ಮಾಡುತ್ತೇವೆ ಎಂದರೆ ಅವರಿಗೆ ಭಯ ಆಗುತ್ತದೆ. ಕಾನೂನು ಮುರಿಯಲ್ಲ ಎಂದರೆ ಭಯ ಯಾಕೆ? ಅದು ಅವರಿಗೆ ಅರ್ಥ ಆದರೆ ಸಾಕು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮಂಥರ್ ಗೌಡ ಗೆಲುವು – 135 ಕಿಮೀ ದೂರದ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ

    ನಮ್ಮ ಕಚೇರಿಯ ಪೂಜೆ ಮಾಡಿದ್ದೇವೆ. ಅನೇಕ ಜನ ಟೀಕೆ ಟಿಪ್ಪಣಿ ಮಾಡಬಹುದು. ದೇವರ ಹೆಸರಲ್ಲಿ ಪ್ರಮಾಣ ವಚನ ತೆಗೆದುಕೊಳ್ಳುತ್ತೇವೆ. ದೇವರನ್ನು ನೆನೆಸಿಕೊಂಡು ಕಚೇರಿ ಪೂಜೆ ಮಾಡಿದ್ದೇವೆ. ಇದು ನಮ್ಮೆಲ್ಲರಿಗೂ ಶಕ್ತಿ ಕೊಡುವಂತದ್ದು. ರಾಜ್ಯದ ಕಾನೂನು ವ್ಯವಸ್ಥೆಯನ್ನು ಕಾಪಾಡಬೇಕು. ಮುಖವಾಣಿಯಲ್ಲಿರುವ ಗೃಹ ಖಾತೆ ಬಹಳ ಪ್ರಾಮುಖ್ಯ. ಇಲ್ಲಿ ಏನೇ ವಿದ್ಯಮಾನಗಳು ನಡೆದರೂ ಜನತೆಗೆ ಮುಟ್ಟುತ್ತದೆ. ಇಲ್ಲಿಂದ ಒಳ್ಳೆಯ ಕೆಲಸಗಳಾಗಲಿ. ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಬ್ರೀಫ್ ಮಾಡುತ್ತೇವೆ. ಈಗ ಏನೇ ಹೇಳಿದರೂ ಅಪ್ರಸ್ತುತವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೃಷಿ ಚಟುವಟಿಕೆ ಮಾದರಿಯ ಕೇಕ್ ಮಾಡಿ ಚೆಲುವರಾಯಸ್ವಾಮಿ ಹುಟ್ಟುಹಬ್ಬ ಆಚರಣೆ

  • ಸೈಬರ್ ಕಳ್ಳರ ಕೈಚಳಕ – ಪೊಲೀಸ್ ಇಲಾಖೆ ಹೆಸರಿನಲ್ಲೇ ಫೇಕ್ ಫೇಸ್‍ಬುಕ್ ಅಕೌಂಟ್ ಸೃಷ್ಠಿ

    ಸೈಬರ್ ಕಳ್ಳರ ಕೈಚಳಕ – ಪೊಲೀಸ್ ಇಲಾಖೆ ಹೆಸರಿನಲ್ಲೇ ಫೇಕ್ ಫೇಸ್‍ಬುಕ್ ಅಕೌಂಟ್ ಸೃಷ್ಠಿ

    ಬೀದರ್: ಪೊಲೀಸ್ ಇಲಾಖೆಯ (Police Department) ಹೆಸರಿನಲ್ಲಿ ನಕಲಿ ಫೇಸ್‍ಬುಕ್ (Facebook) ಅಕೌಂಟ್ ಓಪನ್ ಮಾಡಿರುವ ಪ್ರಕರಣ ಬೀದರ್‌ನಲ್ಲಿ (Bidar) ಸೋಮವಾರ ಬೆಳಕಿಗೆ ಬಂದಿದೆ.

    ಸೈಬರ್ ವಂಚಕರು (Cyber Crime), ಬೀದರ್ ಎಸ್‍ಪಿ (SP) ಎಂಬ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್‍ನ್ನು ಸೃಷ್ಠಿಸಿದ್ದಾರೆ. ಅಲ್ಲದೆ ಜಲ್ಲೆಯ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಇರುವ ಇಲಾಖೆಯ ಅಕೌಂಟ್‍ನಲ್ಲಿ ಇರುವ ಸ್ನೇಹಿತರನ್ನು ಗುರಿಯಾಗಿಸಿ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ- ಗಂಟಲಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ನರಳಾಡಿದ!

    ಈ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ಅನಧಿಕೃತ ಫೇಸ್‍ಬುಕ್ ಅಕೌಂಟ್‍ನಿಂದ ಬರುತ್ತಿರುವ ರಿಕ್ವೆಸ್ಟ್‌ಗೆ ಸ್ಪಂದಿಸದಂತೆ ತಿಳಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಇಲಾಖೆ, ಸಾರ್ವಜನಿಕರು ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದಿದೆ. ಅಲ್ಲದೆ ಈ ರೀತಿ ಫೇಕ್ ಅಕೌಂಟ್ ಸೃಷ್ಠಿಸಿದವರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಇದನ್ನೂ ಓದಿ: 5, 6 ವರ್ಷದ ಬಾಲಕಿಯರ ಮೇಲೆ ಸಂಬಂಧಿಕನಿಂದಲೇ ರೇಪ್‌ – ಆರೋಪಿ ಎಸ್ಕೇಪ್‌

  • ಪೊಲೀಸ್ ಇಲಾಖೆಯನ್ನು ಕೇಸರೀಕರಣಗೊಳ್ಳಲು ಬಿಡುವುದಿಲ್ಲ: ಡಿಕೆಶಿ

    ಪೊಲೀಸ್ ಇಲಾಖೆಯನ್ನು ಕೇಸರೀಕರಣಗೊಳ್ಳಲು ಬಿಡುವುದಿಲ್ಲ: ಡಿಕೆಶಿ

    ಬೆಂಗಳೂರು: ಪೊಲೀಸ್ ಇಲಾಖೆಯನ್ನು (Police Department) ಕೇಸರೀಕರಣಗೊಳ್ಳಲು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ವಿಧಾನಸೌಧದಲ್ಲಿ (Vidhana Soudha) ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳಿಗೆ ಡಿಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಷ್ಟು ದಿನ ಪೊಲೀಸರು ಬಿಜೆಪಿ ಪರ ಕೆಲಸ ಮಾಡಿದ್ದು ಗೊತ್ತಿದೆ. ನಾಲ್ಕು ವರ್ಷಗಳ ನಿಮ್ಮ ವರ್ತನೆಗಳು ನಮಗೆ ತಿಳಿದಿದೆ. ಇನ್ನಾದರೂ ಉತ್ತಮ ಕೆಲಸ ಮಾಡಿ ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಎಂ.ಬಿ ಪಾಟೀಲ್‌ಗೆ ನೇರ ಎಚ್ಚರಿಕೆ ಕೊಟ್ಟ ಡಿಕೆ ಸುರೇಶ್

    ಸಿದ್ದರಾಮಯ್ಯರ ಜೊತೆ ಪೊಲೀಸರು ನಡೆದುಕೊಂಡ ರೀತಿ ತಿಳಿದಿದೆ. ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದರೂ ಕೇಸ್ ಹಾಕಿಲ್ಲ. ನಿಮ್ಮ ಕೆಲಸಗಳನ್ನು ಚೆನ್ನಾಗಿ ಗಮನಿಸಿದ್ದೇವೆ ಇನ್ನೂ ಇದೆಲ್ಲ ನಡೆಯುವುದಿಲ್ಲ ಎಂದಿದ್ದಾರೆ.

    ಮಂಗಳೂರಿನಲ್ಲಿ ಪೊಲೀಸರು ಕೇಸರಿ ಶಾಲು ಹಾಕುತ್ತಾರೆ ಎಂದರೆ ಅರ್ಥ ಏನು? ಈಗ ಕೇಸರಿ ಶಾಲು ಹಾಕಿ ನೋಡೋಣ? ನಮ್ಮ ಸರ್ಕಾರದಲ್ಲಿ ಈ ರೀತಿಯಾಗಲು ಅವಕಾಶ ಕೊಡುವುದಿಲ್ಲ. ಎಂದು ಗುಡುಗಿದ್ದಾರೆ.

    ಆಯುಧ ಪೂಜೆ ವೇಳೆ ಉಡುಪಿಯ ಕಾಪು (Kapu) ಪೊಲೀಸ್ ಠಾಣಾ ಪೊಲೀಸರು ಕೇಸರಿ ಶಾಲು ಧರಿಸಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಯುಪಿಎಸ್‍ಸಿ ಫಲಿತಾಂಶ ಪ್ರಕಟ – ಲೇಡಿಸ್‍ಗೆ ಫಸ್ಟ್ 4 ರ‍್ಯಾಂಕ್

  • ಮೋದಿಗೆ ಬಂದೋಬಸ್ತ್ ನೀಡಿದ್ದ ಏಂಜಲ್‍ಗೆ ಅದ್ದೂರಿ ಸೆಂಡಾಫ್

    ಮೋದಿಗೆ ಬಂದೋಬಸ್ತ್ ನೀಡಿದ್ದ ಏಂಜಲ್‍ಗೆ ಅದ್ದೂರಿ ಸೆಂಡಾಫ್

    ಕೋಲಾರ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ವಾನಕ್ಕೆ (Police Dog) ಕೆಜಿಎಫ್ ಠಾಣೆ ಪೊಲೀಸ್ (KGF Police Station) ಅಧಿಕಾರಿಗಳು ಸನ್ಮಾನಿಸಿ ಅದ್ದೂರಿಯಾಗಿ ಸೋಮವಾರ ಬೀಳ್ಕೊಡಿಗೆ (Farewell) ನೀಡಿದ್ದಾರೆ.

    KOLAR POLICE DOG 1

    ಕೊನೆಯದಾಗಿ ಭಾನುವಾರ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) ಕಾರ್ಯಕ್ರಮದಲ್ಲಿ ಏಂಜಲ್ ಭದ್ರತಾ ಕಾರ್ಯನಿರ್ವಹಿಸಿತ್ತು. ಅಲ್ಲದೆ ಹಲವಾರು ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಭೇಟಿ ನೀಡಿದ್ದಾಗ ಏಂಜಲ್ ಕಾರ್ಯ ನಿರ್ವಹಿಸಿತ್ತು. ಪೊಲೀಸ್ ಇಲಾಖೆಯ ಏಂಜಲ್‍ಗೆ ಈಗ ಕೆಜಿಎಫ್ ಎಸ್ಪಿ ಧರಣಿದೇವಿಯವರು ಅದ್ದೂರಿಯಾಗಿ ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಪಬ್‍ಜಿಗೆ ಬ್ರೇಕ್ ಹಾಕಿದ್ದ ತಾಯಿಯ ಕೊಲೆ – ಅಪ್ರಾಪ್ತ ಆರೋಪಿಗೆ ಜಾಮೀನು

    2015ರಲ್ಲಿ ಸೇವೆಗೆ ಸೇರಿದ್ದ ಏಂಜಲ್, ಲ್ಯಾಬ್ರಡರ್ ತಳಿಯ ಹೆಣ್ಣು ಶ್ವಾನ. ಬಾಂಬ್ ಸೇರಿದಂತೆ ಸ್ಫೋಟಕ ಪತ್ತೆಯಲ್ಲಿ ಪರಿಣಿತಿ ಹೊಂದಿತ್ತು. ಕಳೆದ ಎಂಟು ವರ್ಷಗಳ ಕಾಲ ಪೊಲೀಸ್ ಶ್ವಾನದಳದಲ್ಲಿ ಸೇವೆ ಸಲ್ಲಿಸಿತ್ತು.

    ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಪರಾಷ್ಟ್ರಪತಿ, ಕೇಂದ್ರದ ಮಂತ್ರಿಗಳು, ಗಣ್ಯ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸಿದ್ದ ಏಂಜಲ್ ಅತ್ಯುನ್ನತ ಸೇವೆ ಸಲ್ಲಿಸಿ ಇಲಾಖೆಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

  • ಆವರಣದಲ್ಲೇ ವಿದ್ಯಾರ್ಥಿನಿ ಕೊಲೆ ಪ್ರಕರಣ- ಬೆಂಗಳೂರು ಗ್ರಾಮಾಂತರ ಕಾಲೇಜುಗಳಿಗೆ ಹೊಸ ಗೈಡ್‍ಲೈನ್ಸ್

    ಆವರಣದಲ್ಲೇ ವಿದ್ಯಾರ್ಥಿನಿ ಕೊಲೆ ಪ್ರಕರಣ- ಬೆಂಗಳೂರು ಗ್ರಾಮಾಂತರ ಕಾಲೇಜುಗಳಿಗೆ ಹೊಸ ಗೈಡ್‍ಲೈನ್ಸ್

    ಬೆಂಗಳೂರು: ಪ್ರತಿಷ್ಠಿತ ಕಾಲೇಜು ಅವರಣ (College Campus) ದಲ್ಲಿ ನಡೆದ ವಿದ್ಯಾರ್ಥಿನಿ ಲಯಸ್ಮಿತಾ ಕೊಲೆ ಇಡೀ ಬೆಂಗಳೂರನ್ನೆ ನಡುಗಿಸಿತ್ತು. ಕಾಲೇಜಿಗೆ ತಮ್ಮ ಮಕ್ಕಳನ್ನ ಕಳುಹಿಸಲು ಪೋಷಕರು ಭಯಪಡುವಂತಾಗಿತ್ತು. ಇದರಿಂದ ಎಚ್ಚೆತ್ತಿರುವ ಪೊಲೀಸರು ಇಲಾಖೆ ಬೆಂಗಳೂರು ಗ್ರಾಮಾಂತರದ ಠಾಣಾ ವ್ಯಾಪ್ತಿಗಳಲ್ಲಿ ಬರುವ ಎಲ್ಲಾ ಕಾಲೇಜುಗಳಿಗೆ ಹೊಸ ಗೈಡ್ ಲೈನ್ (New Guidelines For College) ಹೊರಡಿಸಿದೆ. ಕಾಲೇಜು ಆಡಳಿತ ಮಂಡಳಿಗಳು ಇನ್ಮುಂದೆ ಈ ಹೊಸ ಗೈಡ್ ಲೈನ್ಸ್ ಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪೊಲೀಸರು ತಾಕೀತು ಮಾಡಿದ್ದಾರೆ.

    COLLEGE 1

    ಲಯಸ್ಮಿತಾ (Layasmitha) ಕೊಲೆಗೆ ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಂಡು ಬಂದಿದ್ದರಿಂದ ಪೊಲೀಸರು ಒಂದಷ್ಟು ಅಂಶಗಳನ್ನ ಫೈಂಡೌಟ್ ಮಾಡಿ ಪಬ್ಲಿಕ್ ಸೇಪ್ಟಿ ಆಕ್ಟ್ ಅಡಿಯಲ್ಲಿ ಹೊಸ ಗೈಡ್ ಲೈನ್ ಹೊರಡಿಸಿದ್ದಾರೆ. ಇದನ್ನೂ ಓದಿ: ನಗರ ಭಾಗದಲ್ಲೂ ಕಂಬಳ ಕಹಳೆ- ಕಾಂತಾರದಿಂದ ಮತ್ತಷ್ಟು ರಂಗೇರಿದ ಹವಾ

    COLLEGE 2

    ಕಾಲೇಜುಗಳಿಗೆ ನಯಾ ಗೈಡ್‍ಲೈನ್ಸ್: ಕಾಲೇಜು ಅವರಣದಲ್ಲಿ, ಪಾರ್ಕಿಂಗ್ ಲಾಟ್‍ನಲ್ಲಿ ಸಿಸಿಟಿವಿ ಕಡ್ಡಾಯವಾಗಿರಬೇಕು. ಹೊರಗಡೆಯಿಂದ ಬೈಕ್‍ನಲ್ಲಿ ಬರುವವರನ್ನ ಪರಿಶೀಲಿಸಬೇಕು. ಎಂಟ್ರಿ-ಎಕ್ಸಿಟ್ ಗೇಟ್‍ನಲ್ಲಿ ಭದ್ರತೆಯನ್ನ ಹೆಚ್ಚಿಸಿ ಕೊಡಬೇಕು. ಐಡಿ ಕಾರ್ಡ್ ಇರದೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು. ಗಲಾಟೆ ಸಂದರ್ಭ ಎದುರಾದರೆ ಪೊಲೀಸರಿಗೆ ತಿಳಿಸಬೇಕು. ಇಷ್ಟಲ್ಲದೇ ವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸರು ಕೂಡ ಪಬ್ಲಿಕ್ ಸೆಪ್ಟಿ ಆಕ್ಟ್ ಅಡಿಯಲ್ಲಿ ಸೂಕ್ತ ಭದ್ರತೆಗೆ ಸಿದ್ಧಮಾಡಿಕೊಂಡಿದ್ದಾರೆ.

    COLLEGE 3

    ಹೀಗೆ ಲಯಸ್ಮಿತಾ ಕೊಲೆಯ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಖಾಕಿ ಪಡೆ ಹೊಸ ಗೈಡ್ ಲೈನ್ಸ್ ಹೊರಡಿಸಿದೆ. ಹಾಗೆ ಕಡ್ಡಾಯವಾಗಿ ಎಲ್ಲಾ ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಗೈಡ್‍ಲೈನ್ಸ್ ಪಾಲನೆ ಮಾಡಬೇಕು. ಒಂದು ವೇಳೆ ಗೈಡ್‍ಲೈನ್ಸ್ ಉಲ್ಲಂಘನೆ ಮಾಡುವ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನ ಪೊಲೀಸರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k