Tag: ಪರಂವಃ ಸ್ಟುಡಿಯೋಸ್

  • ‘ಕಿರಿಕ್ ಪಾರ್ಟಿ’ ರಶ್ಮಿಕಾ ಮಂದಣ್ಣಗೆ ಶುಭಕೋರಿದ ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ

    ‘ಕಿರಿಕ್ ಪಾರ್ಟಿ’ ರಶ್ಮಿಕಾ ಮಂದಣ್ಣಗೆ ಶುಭಕೋರಿದ ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 27ನೇ ವರ್ಷಕ್ಕೆ ಕಾಲಿಟ್ಟಿರುವ ನಟಿಗೆ ಅಭಿಮಾನಿಗಳು, ಸಿನಿಮಾ ರಂಗದ ಸ್ನೇಹಿತರು ಶುಭಕೋರಿದ್ದಾರೆ. ಇದೀಗ ರಕ್ಷಿತ್ ಶೆಟ್ಟಿ (Raskshit Shetty) ಒಡೆತನದ ಪರಂವಃ ಸ್ಟುಡಿಯೋ ಕಡೆಯಿಂದ ರಶ್ಮಿಕಾ ಮಂದಣ್ಣಗೆ ವಿಶ್ ಮಾಡಿದ್ದಾರೆ. ಈ ಮೂಲಕ `ಕಿರಿಕ್ ಪಾರ್ಟಿ’ (Kirik Party) ಸಹನಟಿಗೆ ರಕ್ಷಿತ್ ಶುಭಕೋರಿದ್ದಾರೆ. ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗಿದೆ.

    rashmika mandanna 1 1

    ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ನಾಯಕಿಯಾಗಿ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. 2016ರಲ್ಲಿ ತೆರೆಗೆ ಬಂದ ಈ ಚಿತ್ರವನ್ನು ಪರಂವಃ ಸ್ಟುಡಿಯೋಸ್- ಪುಷ್ಕರ್ ಫಿಲ್ಮ್ಸ್ ಒಟ್ಟಾಗಿ ನಿರ್ಮಾಣ ಮಾಡಿತ್ತು. ಮೊದಲ ಚಿತ್ರದಲ್ಲೇ ರಶ್ಮಿಕಾ ಮಂದಣ್ಣಗೆ ಬಿಗ್ ಬ್ರೇಕ್ ಸಿಕ್ಕಿತು. ಈ ಸಮಯದಲ್ಲೇ ರಕ್ಷಿತ್- ರಶ್ಮಿಕಾ ಪ್ರೀತಿ ಶುರುವಾಗಿದ್ದು, ಇಬ್ಬರೂ ಹಲವು ಸಮಯ ಪ್ರೀತಿಯಲ್ಲಿದ್ದರು. ಇವರ ನಿಶ್ಚಿತಾರ್ಥ ಕೂಡ ಆಯಿತು. ಆದರೆ, ಈ ಸಂಬಂಧ ಹೆಚ್ಚು ದಿನ ಉಳಿಯಲೇ ಇಲ್ಲ. 2018ರಲ್ಲಿ ಬ್ರೇಕಪ್ ಆಯ್ತು.

    ರಕ್ಷಿತ್ ಶೆಟ್ಟಿ- ರಶ್ಮಿಕಾ ನಿಶ್ಚಿತಾರ್ಥ ಮುರಿದುಕೊಂಡ ಬಗ್ಗೆ ಘೋಷಣೆ ಮಾಡಿದರು. ರಶ್ಮಿಕಾ ಆಗಲೇ ದೊಡ್ಡ ಮಟ್ಟದ ಹೆಸರು ಮಾಡಿದ್ದರು. ರಶ್ಮಿಕಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ರಕ್ಷಿತ್. ಆದರೆ, ಈಗ ರಕ್ಷಿತ್‌ಗೆ ರಶ್ಮಿಕಾ ಮೋಸ ಮಾಡಿದ್ದಾರೆ ಎಂದು ಫ್ಯಾನ್ಸ್ ಭಾವಿಸಿದ್ದರು. ರಕ್ಷಿತ್ ಅಭಿಮಾನಿಗಳಿಗೆ ರಶ್ಮಿಕಾ ಮೇಲೆ ದ್ವೇಷ ಹುಟ್ಟೋಕೆ‌ ಈ ವಿಷ್ಯ ಕಾರಣ ಆಯಿತು. ಈಗ ಸಹನಟಿಗೆ ರಕ್ಷಿತ್‌, ತನ್ನ ನಿಮಾಣ ಸಂಸ್ಥೆ ಕಡೆಯಿಂದ ಬರ್ತ್‌ಡೇಗೆ ವಿಶ್‌ ಮಾಡಿದ್ದಾರೆ. ಇದನ್ನೂ ಓದಿ: ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ : ಕಿಚ್ಚ ಸುದೀಪ್

    rakshith shetty

    ರಶ್ಮಿಕಾ ಮಂದಣ್ಣ ಅವರಿಗೆ ಬರ್ತ್‌ಡೇಗೆ ಶುಭಾಶಯ (Wishes) ತಿಳಿಸಿ ಪರಂವಃ ಸ್ಟುಡಿಯೋಸ್ ಟ್ವೀಟ್ ಮಾಡಿದೆ. ರಶ್ಮಿಕಾ ಮಂದಣ್ಣ ಫೋಟೋ ಹಾಕಿ, ಗಾರ್ಜಿಯಸ್ ರಶ್ಮಿಕಾ ಮಂದಣ್ಣಗೆ ಹುಟ್ಟುಹಬ್ಬದ (Birthday) ಶುಭಾಶಯ. ಈ ವರ್ಷ ನಿಮಗೆ ಸಂತೋಷ, ನಗು ಮತ್ತು ಯಶಸ್ಸು ಹೆಚ್ಚಾಗಲಿ ಎಂದು ಪರಂವಃ ಸ್ಟುಡಿಯೋಸ್ ಪೋಸ್ಟ್ ಮಾಡಿದೆ. ಅಭಿಮಾನಿಗಳು ಕೂಡ ನಟಿಗೆ ಶುಭಕೋರಿದ್ದಾರೆ.

  • `777 ಚಾರ್ಲಿ’ ಸಕ್ಸಸ್ ನಂತರ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ

    `777 ಚಾರ್ಲಿ’ ಸಕ್ಸಸ್ ನಂತರ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ

    ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು ನಿರ್ಮಾಣ ಮಾಡುವುದಕ್ಕೆ ರಕ್ಷಿತ್ ಶೆಟ್ಟಿ ಯಾವಾಗಲೂ ಮುಂದು. ಈಗ ರಕ್ಷಿತ್ ನೇತೃತ್ವದ ಪರಂವಃ ಸ್ಟುಡಿಯೋಸ್ ಕಡೆಯಿಂದ ಹೊಸ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ಭಿನ್ನ ಕಥೆ `ಮಿಥ್ಯ’ ಚಿತ್ರಕ್ಕೆ ರಕ್ಷಿತ್ ಬಂಡವಾಳ ಹೂಡಿದ್ದಾರೆ.

    rakshith shetty 1 1`777 ಚಾರ್ಲಿ’ ಚಿತ್ರದ ಸಕ್ಸಸ್ ನಂತರ ರಕ್ಷಿತ್ ಶೆಟ್ಟಿ ಮತ್ತೆ ಹೊಸ ಸಿನಿಮಾ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಸುಮಂತ್ ಭಟ್ ನಿರ್ದೇಶನದ `ಮಿಥ್ಯ’ ಸಿನಿಮಾ ಪ್ರಯತ್ನದಲ್ಲೇ ಅವರು 11 ವರ್ಷದ ಬಾಲಕನ ಕಥೆಯನ್ನು ಹೇಳ ಹೊರಟಿದ್ದಾರೆ. ಬಾಲಕನ ನೋವಿನ ಕಥೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲನಟ ಆತಿಶ್ ಶೆಟ್ಟಿ ನಟಿಸಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಶಿಲ್ಪಾ ಶೆಟ್ಟಿ ಕಾಲಿಗೆ ಗಂಭೀರ ಪೆಟ್ಟು

    ಪುಟ್ಟ ಬಾಲಕನ ತಂದೆ ತಾಯಿ ನಿಧನ ಹೊಂದುತ್ತಾರೆ. ಅವರ ನೆನಪುಗಳಿಂದ ಹೊರಬರಲಾರದ ಈ ಬಾಲಕ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವುದರ ಜತೆಗೆ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ಮಿಥ್ಯ. ಸದ್ಯ ಚಿತ್ರದ ಪೋಸ್ಟರ್ ಮೂಲಕ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    Live Tv
    [brid partner=56869869 player=32851 video=960834 autoplay=true]