Tag: ನೈಸ್ ರೋಡ್

  • ‘ನೈಸ್ ರೋಡ್’ ಸಿನಿಮಾಗೆ ಕಂಟಕ- ಚಿತ್ರತಂಡಕ್ಕೆ ಬಂತು ನೋಟಿಸ್

    ‘ನೈಸ್ ರೋಡ್’ ಸಿನಿಮಾಗೆ ಕಂಟಕ- ಚಿತ್ರತಂಡಕ್ಕೆ ಬಂತು ನೋಟಿಸ್

    ಟ ಧರ್ಮ ಮತ್ತು ಜ್ಯೋತಿ ರೈ ನಟನೆಯ ‘ನೈಸ್ ರೋಡ್’ (Nice Road Film) ಕನ್ನಡ ಚಿತ್ರಕ್ಕೆ ನೈಸ್ ರೋಡ್ ಕಂಪನಿಯವರಿಂದಲೆ ಕಂಟಕ ಎದುರಾಗಿದೆ. ‘ನೈಸ್ ರೋಡ್’ ಎಂಬ ಹೆಸರನ್ನು ಬದಲಾಯಿಸದೆ ಇದ್ದರೆ ಕಂಪ್ಲೆಂಟ್ ಕೊಡುವುದಾಗಿ ಈ ಸಿನಿಮಾದ ನಿರ್ಮಾಪಕರಾದ ಗೋಪಾಲ್ ಹಳೆಪಾಳ್ಯ ಅವರಿಗೆ ನೋಟಿಸ್ ನೀಡಿದ್ದಾರೆ.

    FotoJet 2 37

    ಸಿನಿಮಾ ಈಗ ರಿಲೀಸ್‌ಗೆ ಸಿದ್ಧವಾಗಿದ್ದು, ಏಲ್ಲಾ ಕಡೆ ‘ನೈಸ್ ರೋಡ್’ ಎಂಬ ಹೆಸರಿನಿಂದಲೇ ಪ್ರಚಾರವಾಗಿದೆ. ಈ ಹಂತದಲ್ಲಿ ಹೆಸರು ಬದಲಾಯಿಸಲು ತುಂಬಾ ಖರ್ಚು ವೆಚ್ಚಗಳಾಗುವುದು ಅಲ್ಲದೆ, ತುಂಬಾ ಸಮಯವು ಬೇಕಾಗುತ್ತದೆ. ಇದನ್ನೂ ಓದಿ:ಶಾರುಖ್ ಖಾನ್ ಕಣ್ಣಿಗೆ ಗಾಯ- ಸರ್ಜರಿಗಾಗಿ ವಿದೇಶಕ್ಕೆ ಹೊರಟ ‘ಜವಾನ್’ ನಟ

    FotoJet 85

    ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೈಸ್ ರೋಡ್ ಎಂಬ ಟೈಟಲ್ ರಿಜಿಸ್ಟರ್ ಆಗಿದ್ದು ಸಿನಿಮಾ ಚಿತ್ರೀಕರಣ ಮುಗಿಸಿ ಈಗಾಗಲೇ ಸಿನಿಮಾ ಸೆನ್ಸಾರ್ ಆಗಿದ್ದು ಸೆನ್ಸಾರ್ ಮಂಡಳಿಯು ಕೂಡ ಸಿನಿಮಾ ನೋಡಿ ನೈಸ್ ರೋಡಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಿರ್ಧರಿಸಿ U/A ಪ್ರಮಾಣ ಪತ್ರ ಕೊಟ್ಟಿದಾರೆ.

    ಆದರೆ ಈಗ ನೈಸ್ ರೋಡ್ ಕಂಪನಿಯವರು ಏಕಏಕಿ ಬಂದು ಹೆಸರು ಬದಲಾಯಿಸಬೇಕೆಂದು ನೋಟೀಸ್ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ನಿರ್ಮಾಪಕ ಗೋಪಾಲ್ ಹಳೆಪಾಳ್ಯ ಮತ್ತು ಈ ಚಿತ್ರಕ್ಕೆ ಫೈನಾನ್ಸ್ ಮಾಡಿರುವ ಏನ್ ರಾಜೂಗೌಡ ಮತ್ತು ಈ ಸಿನಿಮಾದ ನಟರಾದ ಧರ್ಮ ಅವರ ಜೊತೆ ಮಾತಾಡಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ. ಮುಂದೆ ಸಿನಿಮಾ ತಂಡದವರು ಹೆಸರು ಬದಲಾಯಿಸುತ್ತಾರೋ ಇಲ್ಲ ಇದೆ ಹೆಸರಿನಲ್ಲೆ ಸಿನಿಮಾ ಬಿಡುಗಡೆ ಮಾಡೊತರೋ ಕಾದುನೋಡಬೇಕಿದೆ.

  • ‘ನೈಸ್ ರೋಡ್’ನಲ್ಲಿ ಕಾಣಿಸಿಕೊಂಡ ಧರ್ಮ : ಟ್ರೈಲರ್ ರಿಲೀಸ್

    ‘ನೈಸ್ ರೋಡ್’ನಲ್ಲಿ ಕಾಣಿಸಿಕೊಂಡ ಧರ್ಮ : ಟ್ರೈಲರ್ ರಿಲೀಸ್

    ಗೋಪಾಲ್ ಹಳೇಪಾಳ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ  ನೈಸ್ ರೋಡ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕಳೆದ ಜನ್ಮದಲ್ಲಿ ಮಾಡಿದ ತಪ್ಪಗೆ ಈ  ಜನ್ಮದಲ್ಲಿ ಶಿಕ್ಷೆ ಕೊಡುವುದು ಯಾವ ನ್ಯಾಯ  ಎನ್ನುವ  ಅಂಶವನ್ನಿಟ್ಟುಕೊಂಡು ಕರ್ಮ ಮತ್ತು ಧರ್ಮದ (Dharma)  ಮೇಲೆ ‘ನೈಸ್ ರೋಡ್’ (Nice Road) ಚಿತ್ರದ  ಕಥೆ ಹೆಣೆಯಲಾಗಿದೆ.  ನಿರ್ದೇಶನದ ಜೊತೆಗೆ ಪುನರ್ ಗೀತಾ ಸಿನಿಮಾಸ್  ಬ್ಯಾನರ್ ಅಡಿ ಗೋಪಾಲ್ ಹಳೇಪಾಳ್ಯ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.‌

    Nice Road 1

    ಈ ಸಂದರ್ಭದಲ್ಲಿ ನಿರ್ದೇಶಕ ಗೋಪಾಲ್  ಮಾತನಾಡುತ್ತ ಈ ಹಿಂದೆ ನಾನು  ತಾಂಡವ ಎಂಬ  ಸಿನಿಮಾ ನಿರ್ದೇಶನ ಮಾಡಿದ್ದೆ. ನೈಸ್ ರೋಡ್ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದ್ದು  ಪಾಪ, ಪುಣ್ಯ, ಪುನರ್ಜನ್ಮದ ಕಾನ್ಸೆಪ್ಟ್  ಇಟ್ಟುಕೊಂಡು ಮಾಡಿದ ಚಿತ್ರ.  ಈ  ಕಥೆ ಬರೆಯುವಾಗಲೇ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರಕ್ಕೆ  ಧರ್ಮ ಅವರನ್ನು ಆಯ್ಕೆ  ಮಾಡಿಕೊಂಡಿದ್ದೆ,  ಮತ್ತೊಂದು ಮುಖ್ಯ ಪಾತ್ರದಲ್ಲಿ ಜೋತಿ ರೈ ಕಾಣಿಸಿಕೊಂಡಿದ್ದಾರೆ.‌ ಗೋವಿಂದೇಗೌಡ, ಮಂಜು ನಾಥ್ ರಂಗಾಯಣ, ಮಂಜು ಕ್ರಿಶ್, ರೇಣು ಶಿಕಾರಿ, ಪ್ರಭು, ಸಚ್ಚಿ ರವಿಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. 25 ದಿನಗಳ ಕಾಲ ಬೆಂಗಳೂರು,  ಕುಣಿಗಲ್ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದು ಈ ತಿಂಗಳ ಕೊನೆಯ ವಾರ ರಿಲೀಸ್ ಮಾಡೋ  ಪ್ಲ್ಯಾನ್ ಇದೆ, ನೈಸ್ ರೋಡ್ ಗೂ  ನಮ್ಮ ಸಿನಿಮಾಗೂ  ಸಂಬಂಧವಿಲ್ಲ. ಹಳ್ಳಿಯ ಮುಂದೆ ಹೈವೇ ರಸ್ತೆಯಿರುತ್ತದೆ. ಆ ರಸ್ತೆ ಎಷ್ಟು ನೈಸಾಗಿದೆ ಅಂತ ಊರ ಜನ ಹೇಳ್ತಿರ್ತಾರೆ. ಅದನ್ನೇ ಚಿತ್ರದ ಟೈಟಲ್ ಆಗಿಟ್ಟಿದ್ದೇವೆ ಎಂದು ಹೇಳಿದರು.

    Nice Road 2

    ನಟ ಧರ್ಮ ಮಾತನಾಡಿ ಈವರೆಗೆ ಎಲ್ಲಾ ಥರದ ಪಾತ್ರಗಳನ್ನು ಮಾಡಿದ್ದೇನೆ.  ಇಲ್ಲೂ ಪೊಲೀಸ್ ಆಫೀಸರ್  ಪಾತ್ರ ಮಾಡಿದ್ದು, ಇದರಲ್ಲಿ ಕಥೆಯೇ ಹೀರೋ. ಕರ್ಮದ ಬಗ್ಗೆ ಕಥೆ ಹೇಳಲಾಗಿದ್ದು,  ಡಿಫರೆಂಟ್ ಆಗಿ ಬಂದಿದೆ. ಗೋಪಾಲ್ ನೀವೇ ಬೇಕು ಅಂತ ಬಂದಿದ್ದರು  ಎಂದು ಹೇಳಿದರು. ರಾಜುಗೌಡ ಮಾತನಾಡುತ್ತ ಈ ಕಾನ್ಸೆಪ್ಟ್ ಕೇಳಿದಾಗ ತುಂಬಾ ಇಷ್ಟ ಆಯ್ತು. ಕ್ಯಾರೆಕ್ಟರ್ ಗಳಲ್ಲಿ ನಮ್ಮ ಸುತ್ತಲಿನ ಅನೇಕ ಪಾತ್ರಗಳು ಸಿಗುತ್ತವೆ, ಇದು ಬದುಕಿನ ಆಯಾಮ ಕಟ್ಟಿಕೊಡುವ ಚಿತ್ರ ಈ ಬಳಗದ ಜೊತೆ ನಾನು ನಿಂತದ್ದು ಖುಷಿಯಿದೆ ಎಂದರು.

     

    ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡುತ್ತ  ಪ್ರಾರಂಭದಲ್ಲಿ ಹಾಡುಗಳು ಇರಲಿಲ್ಲ. ಆರ್.ಆರ್. ತುಂಬಾ ಚಾಲೆಂಜಿಂಗ್ ಆಗಿತ್ತು. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇರುವ ಚಿತ್ರ. ಮನುಷ್ಯ ಜೀವನದಲ್ಲಿ ನಡೆವ ಹಲವಾರು ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ ಎಂದರು.ಉಳಿದಂತೆ ಛಾಯಾಗ್ರಾಹಕ ಪ್ರವೀಣ್ ಶೆಟ್ಟಿ, ಕಲಾವಿದರಾದ ಮಂಜು ರಂಗಾಯಣ, ಗೋವಿಂದೇ ಗೌಡ, ರವಿಕಿಶೋರ್, ಸಚ್ಚಿ, ಸುರೇಖ, ಮಂಜು ಕ್ರಿಶ್, ಪ್ರಭು ರಾಜ್ ತಮ್ಮ ಪಾತ್ರಗಳ ಕುರಿತು ಮಾತನಾಡಿದರು.

  • ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್ – ಆರ್.ಅಶೋಕ್

    ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್ – ಆರ್.ಅಶೋಕ್

    ಬೆಂಗಳೂರು: ನೈಸ್ ಯೋಜನೆಗೆ ನೀಡಲಾಗಿರುವ 543 ಎಕರೆ ಹೆಚ್ಚುವರಿ ಭೂಮಿಯನ್ನು ಹಿಂಪಡೆಯುವ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

    ಸಭೆಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ನೈಸ್ ರಸ್ತೆ ದೊಡ್ಡ ಸಮಸ್ಯೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿ ನೈಸ್ ರಸ್ತೆಗೆ ಬೇಕಾದ ಎಲ್ಲ ಮಂಜೂರಾತಿ ಮಾಡಲಾಗಿತ್ತು. ಅದು ಅವರ ಪಾಪದ ಕೂಸು. ಈಗ ಅದರಿಂದ ಯಾವುದೇ ಉಪಯೋಗ ಆಗ್ತಿಲ್ಲ. ಬೆಂಗಳೂರು ಜನತೆಗೆ ದೊಡ್ಡ ಹೊರೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸ್ಪೇನ್‍ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಕೃಷಿ ವಸ್ತುಪ್ರದರ್ಶನ ಮೇಳಕ್ಕೆ ಎಸ್.ಟಿ.ಸೋಮಶೇಖರ್ ಪ್ರವಾಸ

    NICE Road

    ಬೆಂಗಳೂರಿನಲ್ಲಿ ಕಾಂಕ್ರಿಟ್ ರಸ್ತೆ ಆಗಬೇಕಿತ್ತು. ಈವರೆಗೂ ಮಾಡಿಲ್ಲ. ಕ್ರಾಸ್ ರೋಡ್ ಪಾಸ್ ಆಗುವ ಬ್ರಿಡ್ಜ್ ಮಾಡುವುದರಲ್ಲೂ ನಿಯಮ ಉಲ್ಲಂಘನೆ ಆಗಿದೆ. ಹಾಗಾಗಿ, ನೈಸ್‌ಗೆ ಈ ಹಿಂದೆ ನಿಗದಿ ಮಾಡಿದ್ದ ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲು ಚರ್ಚೆಯಾಗಿದೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಪ್ರಕ್ರಿಯೆ ಮುಗಿಸಲು ಸಂಪುಟ ಉಪಸಮಿತಿ ತೀರ್ಮಾನ ಮಾಡಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಗತ್ತನ್ನು ನೋಡಲು ಅವಕಾಶ ಕಲ್ಪಿಸುವ ಶ್ರೇಷ್ಠ ಕಾರ್ಯವೇ ನೇತ್ರದಾನ: ಬಿ.ಸಿ.ನಾಗೇಶ್

    NICE Road 1

    ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ನೈಸ್‌ಗೆ 543 ಎಕರೆ ಹೆಚ್ಚುವರಿ ಭೂಮಿ ಕೊಡಲಾಗಿದೆ. ಅದನ್ನು ಹಿಂಪಡೆಯುವ ಬಗ್ಗೆ ಮಾಹಿತಿ ಬಹಿರಂಗಪಡಿಸಲಾಗುವುದಿಲ್ಲ. 15 ದಿನಗಳಲ್ಲಿ ಇನ್ನೊಂದು ವರದಿ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇವೆ. ಆ ವರದಿ ಬಂದ ಬಳಿಕ ಇನ್ನೊಂದು ಸಭೆಯಲ್ಲಿ ನೈಸ್‌ಗೆ ಸಂಬಂಧಪಟ್ಟಂತೆ ಕೆಲ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ತನಿಖೆಗೆ ಸಹಕರಿಸದ ಪ್ರಿಯಾಂಕ್‌ ಖರ್ಗೆಯಿಂದ ಪಲಾಯನವಾದ: ಅರಗ ಜ್ಞಾನೇಂದ್ರ ಕಿಡಿ

    ಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಉಪಸ್ಥಿತರಿದ್ದರು.

  • ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

    ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

    ಬೆಂಗಳೂರು: ನೈಸ್ ರಸ್ತೆಯಲ್ಲಿ ಟಾಟಾ ನೆಕ್ಸಾನ್ ಕಾರು ಪಲ್ಟಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    FotoJet 3 9

    ಯುವಕ-ಯುವತಿಯರು ಪಾರ್ಟಿ ಮುಗಿಸಿಕೊಂಡು ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ನೈಸ್ ರೋಡ್ ಬಳಿ ಬಂದಿದ್ದರು. ಈ ವೇಳೆ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದವರಿಗೆ ಗಂಭೀರ ಸ್ವರೂಪದ ಗಾಯಗಳಾಗಿರಬಹುದು ಶಂಕೆ ಎದ್ದಿದೆ. ಇದನ್ನೂ ಓದಿ:  ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಭೇಟಿ ನೀಡಬಹುದು – ಜಿಲ್ಲಾಡಳಿತದಿಂದ ನಿರ್ಬಂಧ ತೆರವು

    FotoJet 2 11

    ಘಟನೆ ನಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಯುವಕ-ಯುವತಿಯರು ಕಾರನ್ನೆ ಬಿಟ್ಟು ಪರಾರಿಯಾದ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದು, ಗಾಯಾಳುಗಳು ಯಾವ ಆಸ್ಪತ್ರೆಯಲ್ಲಿದ್ದಾರೆ? ಕಾರು ಯಾರಿಗೆ ಸೇರಿದ್ದು? ಎನ್ನುವ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ:  ರಾಜ್ಯದಲ್ಲೂ ಗುಜರಾತ್ ಮಾದರಿ ಸಂಪುಟ ರಚನೆಯಾದರೆ ಒಳ್ಳೆಯದು: ವಿಜಯೇಂದ್ರ

    FotoJet 5 7

    ಪ್ರಸ್ತುತ ತನಿಖೆ ಮೂಲಕ ಈ ಕಾರು ಆಶ್ವಿನಿ ನಟರಾಜನ್ ಎನ್ನುವವರ ಹೆಸರಲ್ಲಿ ಇರುವುದು ಎಂದು ಪತ್ತೆಯಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಕಾರಿನ ಇನ್ಯುರೆನ್ಸ್ ಮುಗಿದಿದೆ ಎಂದು ತಿಳಿದುಬಂದಿದೆ.

  • ಬೆಂಗಳೂರು ಸಂಪರ್ಕಿಸುವ ನೈಸ್ ರೋಡ್ ಬಂದ್

    ಬೆಂಗಳೂರು ಸಂಪರ್ಕಿಸುವ ನೈಸ್ ರೋಡ್ ಬಂದ್

    ಬೆಂಗಳೂರು: ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಸಮಯ ಮುಗಿಯುತ್ತಿದ್ದಂತೆ ಪೊಲೀಸರು ಎಲ್ಲಾ ಅಂಗಡಿ, ರಸ್ತೆಗಳನ್ನು ಕ್ಲೋಸ್ ಮಾಡಿಸುತ್ತಿದ್ದಾರೆ. ಇದೀಗ ಬೆಂಗಳೂರು ಸಂಪರ್ಕಿಸುವ ನೈಸ್ ರೋಡ್ ಬಂದ್ ಮಾಡಲಾಗಿದೆ.

    ಬೆಂಗಳೂರಿಗೆ ಬರುತ್ತಿದ್ದವರು ಮತ್ತು ಬೆಂಗಳೂರಿನಿಂದ ಹೊರಟವರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಯಾವ ಕಡೆಯಿಂದ ಬರುತ್ತಾರೋ ಅದೇ ಮಾರ್ಗದಲ್ಲಿ ವಾಹನ ಸವಾರರನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಲ್ಲದೇ ಕೆಂಗೇರಿ ಚೆಕ್‍ಪೋಸ್ಟ್ ಬಳಿ ನೈಸ್ ರೋಡ್‍ಗೆ ಜೆಸಿಪಿ ಮೂಲಕ ಮಣ್ಣಿನ ರಾಶಿ ಹಾಕಿ ರಸ್ತೆಯನ್ನು ನಿರ್ಮಿಸುತ್ತಿದ್ದಾರೆ.

    vlcsnap 2020 07 15 14h24m16s233

    ಕೆಂಗೇರಿಯ ನೈಸ್ ರಸ್ತೆಯ ಚೆಕ್ ಪೋಸ್ಟ್ ಬಳಿ ಬೆಂಗಳೂರಿನಿಂದ ಒಳ ಬರುವ ಮತ್ತು ಹೊರ ಹೋಗುವ ವಾಹನ ಸಂಖ್ಯೆ ಹೆಚ್ಚಳವಾಗಿತ್ತು. ಲಾಕ್‍ಡೌನ್‍ನಲ್ಲೂ ನೂರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ವಿವಿಧ ಕಾರಣಗಳನ್ನು ನೆಪ ಮಾಡಿಕೊಂಡು ಜನರು ಸುಮ್ಮನೆ ಓಡಾಡುತ್ತಿದ್ದರು. ಈ ವೇಳೆ ಎರಡು ಕಡೆಗಳಲ್ಲೂ ಎಲ್ಲಾ ವಾಹನಗಳನ್ನು ತಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು.

    vlcsnap 2020 07 15 14h24m59s146

    ಆದರೆ ಅನಾವಶ್ಯಕ ವಾಹನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನಗಳನ್ನು ವಾಪಸ್ ಕಳಿಸುತ್ತಿದ್ದಾರೆ. ಪೊಲೀಸರು ಜೆಸಿಪಿಯಲ್ಲಿ ಮಣ್ಣಿನ ರಾಶಿ ಹಾಕಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಯೂಟರ್ನ್ ಮಾಡುವುದಕ್ಕೆ ರಸ್ತೆ ಮಾಡುವ ಮೂಲಕ ಅನಗತ್ಯವಾಗಿ ಬರುವವರನ್ನು ಅದೇ ಮಾರ್ಗವಾಗಿ ವಾಪಸ್ ಕಳುಹಿಸುತ್ತಿದ್ದಾರೆ.

  • ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡ್ತಿದ್ದವರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು – 27 ಮಂದಿ ಅರೆಸ್ಟ್

    ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡ್ತಿದ್ದವರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು – 27 ಮಂದಿ ಅರೆಸ್ಟ್

    ಬೆಂಗಳೂರು: ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡಿಕೊಂಡು ಜನರಿಗೆ ತೊಂದರೆ ಕೊಟ್ಟು, ಹಾವಳಿ ಇಡುತ್ತಿದ್ದವರಿಗೆ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

    ವೀಲಿಂಗ್ ಮಾಡಿಕೊಂಡು ತೊಂದರೆ ಕೊಡುತ್ತಿದ್ದ ಒಟ್ಟು 27 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ವೀರೇಶ್ ಆರ್, ಕುಶಾಲ್ ಆರ್, ದೀಕ್ಷಿತ್ ಆಚಾರ್ಯ, ಶಶಾಂಕ್ ಡಿ, ಸಾಗರ್ ಎಲ್ ದೀಪು, ಅಭಿಷೇಕ್ ಎಚ್.ಆರ್, ನರೇಂದ್ರ ಎನ್, ವಿಜಯ್ ಕುಮಾರ್ ಎನ್.ಎಸ್, ಸಂಜಯ್ ಸೇರಿದಂತೆ 27 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ವೀಲಿಂಗ್ ಮಾಡಲು ಬಳಸುತ್ತಿದ್ದ ಒಟ್ಟು 27 ಬೈಕ್‍ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    wheeling 1

    ಸೋಂಪುರ ಟೋಲ್ ಕಡೆಯಿಂದ ಹೊಸಕೆರೆಹಳ್ಳಿ ರಿಂಗ್ ರೋಡ್ ಕಡೆ ದಿನನಿತ್ಯ ವೀಲಿಂಗ್ ಮಾಡಿ ಬಂಧಿತರು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಆರೋಪಿಗಳ ವೀಲಿಂಗ್ ಹಾವಳಿಯಿಂದ ಬೇಸತ್ತ ಜನರು ಪೊಲೀಸರಿಗೆ ದೂರು ನೀಡಿದ್ದರು. ಸಾರ್ವಜನಿಕ ದೂರನ್ನ ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಮಾಡಿ ವೀಲಿಂಗ್ ಹಾವಳಿಕೊರರನ್ನ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ 189 ಐಎಂವಿ ಕಾಯ್ದೆಯಡಿಯಲ್ಲಿ ಬನಶಂಕರಿ ಬ್ಯಾಟರಾಯನಪುರ, ಬಸವನಗುಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

    wheeling 2

  • ನೈಸ್ ರೋಡಲ್ಲಿ ರಾಬರಿ – ಮೊಬೈಲ್, ಪರ್ಸ್ ಕಿತ್ತು ಗ್ಯಾಂಗ್ ಪರಾರಿ

    ನೈಸ್ ರೋಡಲ್ಲಿ ರಾಬರಿ – ಮೊಬೈಲ್, ಪರ್ಸ್ ಕಿತ್ತು ಗ್ಯಾಂಗ್ ಪರಾರಿ

    ಬೆಂಗಳೂರು: ನಗರದ ಹೊರವಲಯದಲ್ಲಿ ನೈಟ್ ರಾಬರ್ಸ್ ಹಾವಳಿ ಮಿತಿ ಮೀರಿದೆ. ಕತ್ತಲಾಗುತ್ತಿದ್ದಂತೆಯೇ ಅಪ್ರಾಪ್ತ ರಾಬರ್ಸ್ ಗ್ಯಾಂಗ್ ಫೀಲ್ಡಿಗಿಳಿದು ಸುಲಿಗೆ ಮಾಡುತ್ತಿದೆ.

    ಅಮಾಯಕರನ್ನ ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುತ್ತಿರುವ ದೃಶ್ಯವಳಿಗಳು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಗಾಂಜಾ ಮತ್ತಿನಲ್ಲಿ ರೋಡ್ ರಾಬರ್ಸ್ ಗಳು ಹೊರವಲಯದ ರಸ್ತೆಗಳಲ್ಲಿ ಅಡ್ಡ ಹಾಕಿ ಮೊಬೈಲ್, ಪರ್ಸ್ 15 ಸಾವಿರ ಹಣ ದೋಚಿಕೊಂಡು ಹೋಗಿದ್ದಾರೆ.

    MANJUNATH

    ಡಿಸೆಂಬರ್ 11 ರಂದು ಮಂಜುನಾಥ್ ಎಂಬ ವ್ಯಕ್ತಿ ರಾತ್ರಿ ನೈಸ್ ರಸ್ತೆ ಮಾರ್ಗವಾಗಿ ಮನೆಗೆ ಹೋಗುವಾಗ ಅಡ್ಡಗಟ್ಟಿ ಹಲ್ಲೆ ಮಾಡಿ ದೋಚಿಕೊಂಡು ಹೋಗಿದ್ದಾರೆ. ಘಟನೆ ಸಂಬಂದ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೈಸ್ ರಸ್ತೆಯಲ್ಲಿ ಲಾರಿಗೆ ಹಿಂದಿನಿಂದ ಕಾರ್ ಡಿಕ್ಕಿ- ಇಬ್ಬರು ಟೆಕ್ಕಿಗಳ ದುರ್ಮರಣ

    ನೈಸ್ ರಸ್ತೆಯಲ್ಲಿ ಲಾರಿಗೆ ಹಿಂದಿನಿಂದ ಕಾರ್ ಡಿಕ್ಕಿ- ಇಬ್ಬರು ಟೆಕ್ಕಿಗಳ ದುರ್ಮರಣ

    ಬೆಂಗಳೂರು: ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ ನಲ್ಲಿದ್ದ ಇಬ್ಬರು ಟೆಕ್ಕಿಗಳು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ನಡೆದಿದೆ.

    ಈ ಘಟನೆ ಇಂದು ಕೆಂಗೇರಿ ಬಳಿ ನೈಸ್ ರೋಡ್ ನಲ್ಲಿ ನಡೆದಿದೆ. ಮೃತ ದುರ್ದೈವಿ ಟೆಕ್ಕಿಗಳನ್ನು ಪ್ರಶಾಂತ್ ಹಾಗೂ ಅಕ್ಷಯ್ ಕುಮಾರ್ ಎಂದು ಗುರುತಿಸಲಾಗಿದೆ.

    WhatsApp Image 2018 01 03 at 11.18.02 AM

    ಬನ್ನೇರುಘಟ್ಟದ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿ ಕೆಲಸ ಮಾಡುತ್ತಿದ್ದ ಮೃತರಿಬ್ಬರು ಕೆಂಗೇರಿಯ ನೈಸ್ ರೋಡ್ ನಲ್ಲಿ ವೇಗವಾಗಿ ತಮ್ಮ ಕಾರು ಚಲಾಯಿಸಿದ್ದರಿಂದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇನ್ನು ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕೆಂಗೇರಿಯ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

    WhatsApp Image 2018 01 03 at 12.45.39 PM

    KENGERI TECHIE

    WhatsApp Image 2018 01 03 at 11.17.58 AM