Tag: ನಾಮಕರಣ

  • ‘ಆಪರೇಷನ್ ಗಂಗಾ’ ನೆನಪಿಗಾಗಿ ಮಗಳಿಗೆ ಗಂಗಾ ಅಂತ ಹೆಸರಿಡ್ತೀನಿ: ಉಕ್ರೇನ್‍ನಿಂದ ವಾಪಸಾದ ಭಾರತೀಯ

    ‘ಆಪರೇಷನ್ ಗಂಗಾ’ ನೆನಪಿಗಾಗಿ ಮಗಳಿಗೆ ಗಂಗಾ ಅಂತ ಹೆಸರಿಡ್ತೀನಿ: ಉಕ್ರೇನ್‍ನಿಂದ ವಾಪಸಾದ ಭಾರತೀಯ

    ವಾರ್ಸಾ: ಉಕ್ರೇನ್‍ನ ಕೀವ್‌ನಲ್ಲಿ ಸಿಲುಕಿದ್ದ ಕೇರಳದ ವ್ಯಕ್ತಿಯನ್ನು ಹಾಗೂ ಆತನ ಪತ್ನಿಯನ್ನು ʼಆಪರೇಷನ್ ಗಂಗಾʼದಡಿಯಲ್ಲಿ ಭಾರತ ರಕ್ಷಿಸಿದ್ದಕ್ಕೆ ತಮ್ಮ ಮಗುವಿಗೆ ಗಂಗಾ ಎಂಬ ಹೆಸರನ್ನು ಇಡಲು ನಿರ್ಧರಿಸಿದ್ದಾರೆ.

    ಅಭಿಜಿತ್ ಕೇರಳದ ನಿವಾಸಿ. ರಷ್ಯಾ ದಾಳಿಗೆ ಪುಟ್ಟ ರಾಷ್ಟ್ರ ಉಕ್ರೇನ್ ನಲುಗಿ ಹೋಗಿದೆ. ಅಲ್ಲಿನ ಕೀವ್ ನಗರದಲ್ಲಿ ಅಭಿಜಿತ್ ಪುಟ್ಟದಾದ ರೆಸ್ಟೋರೆಂಟ್‍ನ್ನು ಇಟ್ಟುಕೊಂಡಿದ್ದರು. ಆದರೆ ರಷ್ಯಾ ದಾಳಿಯಿಂದಾಗಿ ಅಭಿಜಿತ್ ಹಾಗೂ ಅವರ ಗರ್ಭಿಣಿ ಪತ್ನಿಯು ಉಕ್ರೇನ್‌ಲ್ಲಿ ಸಿಲುಕಿದ್ದರು. ನಂತರ ಅವರನ್ನು ರಕ್ಷಿಸಿ, ಸುರಕ್ಷಿತವಾಗಿ ಪೋಲೆಂಡಿಗೆ ಕರೆತರಲಾಯಿತು.

    indian students ukraine

    ಈ ಬಗ್ಗೆ ಮಾತನಾಡಿದ ಅವರು, ದಾಳಿಯಿಂದ ಸುರಕ್ಷಿತವಾಗಿ ಪಾರಾದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ನನ್ನ ಪತ್ನಿ ಒಂಬತ್ತು ತಿಂಗಳ ಗರ್ಭಿಣಿ. ಇದರಿಂದಾಗಿ ಪೋಲೆಂಡ್‍ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಪತ್ನಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ. ಮಾರ್ಚ್ 26ಕ್ಕೆ ಮಗು ಜನಿಸುವ ನಿರೀಕ್ಷೆಯಿದೆ ಎಂದರು.

    ukraine indians

    ಇದೇ ವೇಳೆ ಅವರು ಭಾರತ ಸರ್ಕಾರ ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯ ಆಪರೇಷನ್ ಗಂಗಾ ಹೆಸರಿನ ನೆನಪಿಗಾಗಿ ನನ್ನ ಮಗುವಿಗೆ ಗಂಗಾ ಎಂದು ಹೆಸರಿಡುತ್ತೇನೆ ಎಂದಿದ್ದಾರೆ. ವೈದ್ಯಕೀಯ ಸುರಕ್ಷತೆಯ ಕಾರಣದಿಂದಾಗಿ ಪೋಲೆಂಡ್‍ನ ಆಸ್ಪತ್ರೆಯಲ್ಲಿ ಪತ್ನಿಯೂ ಇರಬೇಕಾದ ಕಾರಣದಿಂದಾಗಿ ಅವರನ್ನು ಬಿಟ್ಟು ತಾವೊಬ್ಬರೇ ಭಾರತಕ್ಕೆ ಬರುವುದಾಗಿ ತಿಳಿಸಿದರು. ಇದನ್ನೂ ಓದಿ: ನವೀನ್ ಮೃತದೇಹ ಪಡೆಯಲು ಎಲ್ಲ ಪ್ರಯತ್ನ: ಬಸವರಾಜ ಬೊಮ್ಮಾಯಿ

    Indians

    ನಾನು ಉಕ್ರೇನ್‍ನಿಂದ ಪೋಲೆಂಡ್‍ಗೆ ಬರಲು ಒಂದು ಪೈಸೆ ಖರ್ಚು ಮಾಡಿಲ್ಲ. ಎಲ್ಲವನ್ನು ಭಾರತ ಸರ್ಕಾರವೇ ನೋಡಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೈಕೊಟ್ಟಿತೆ ನ್ಯಾಟೋ- ರಷ್ಯಾ ಬಾಂಬ್‌ ದಾಳಿ ತಡೆಗೆ ಉಕ್ರೇನ್‌ ಮನವಿ ತಿರಸ್ಕಾರ

    ಉಕ್ರೇನ್‍ನಲ್ಲಿ ಸಿಲುಕಿರುವ ಭಾರತದ ಪ್ರಜೆಗಳನ್ನು ರಕ್ಷಿಸಲು ಸರ್ಕಾರ ಆಪರೇಷನ್ ಗಂಗಾವನ್ನು ಪ್ರಾರಂಭಿಸಿದೆ. ಭಾರತದ ಏರ್ ಫೋರ್ಸ್‍ನವರು ಇದರಲ್ಲಿ ಪಾಲ್ಗೊಂಡು ಪ್ರಜೆಗಳನ್ನು ರಕ್ಷಿಸುವ ಕಾರ್ಯ ಚುರುಕುಗೊಳಿಸಿದ್ದಾರೆ.

  • ಪ್ರಧಾನಿ ಮೋದಿ ಸೋದರಳಿಯನ ಮಗಳಿಗೆ ಸುಷ್ಮಾ ಸ್ವರಾಜ್‌ ಹೆಸರು ನಾಮಕರಣ

    ಪ್ರಧಾನಿ ಮೋದಿ ಸೋದರಳಿಯನ ಮಗಳಿಗೆ ಸುಷ್ಮಾ ಸ್ವರಾಜ್‌ ಹೆಸರು ನಾಮಕರಣ

    ನವದೆಹಲಿ: ಕೇಂದ್ರ ಮಾಜಿ ಸಚಿವೆ ಹಾಗೂ ಬಿಜೆಪಿ ವರಿಷ್ಠರಾದ ಸುಷ್ಮಾ ಸ್ವರಾಜ್‌ ಅವರ 70ನೇ ಜನ್ಮದಿನವಾದ ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಕುತೂಹಲಕಾರಿ ಘಟನೆಯ ನೆನಪೊಂದನ್ನು ಹಂಚಿಕೊಂಡಿದ್ದಾರೆ.

    ಪಂಜಾಬ್‌ನ ಜಲಂಧರ್‌ನಿಂದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ ಹಿಂದಿರುಗುವಾಗ ಬರೆದ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರು ದಿವಂಗತ ನಾಯಕಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸುಷ್ಮಾ ಸ್ವರಾಜ್‌ ಅವರು ಗುಜರಾತ್‌ನ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ ಸಮಯವನ್ನು ಅವರು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ನನ್ನ ಸಹೋದರನಿದ್ದಂತೆ: ಚರಣ್‍ಜಿತ್ ಸಿಂಗ್ ಚನ್ನಿ

    Narendra Modi Mother A

    25 ವರ್ಷಗಳ ಹಿಂದೆ ನಾನು ಬಿಜೆಪಿಯಲ್ಲಿ ಸಂಘಟಕನಾಗಿ ಕೆಲಸ ಮಾಡುತ್ತಿದ್ದಾಗ, ಸುಷ್ಮಾ ಜಿ ಅವರು ಗುಜರಾತ್‌ನಲ್ಲಿ ಚುನಾವಣಾ ಪ್ರವಾಸದಲ್ಲಿದ್ದರು. ಅವರು ನನ್ನ ಹಳ್ಳಿಯಾದ ವಡ್ನಗರಕ್ಕೆ ಹೋಗಿ ನನ್ನ ತಾಯಿಯನ್ನು ಭೇಟಿಯಾಗಿದ್ದರು. ಆ ಸಮಯದಲ್ಲಿ ನಮ್ಮ ಕುಟುಂಬದಲ್ಲಿ ನನ್ನ ಸೋದರಳಿಯನಿಗೆ ಹೆಣ್ಣು ಮಗು ಜನಿಸಿತ್ತು. ಅವಳ ಹೆಸರಿನಲ್ಲಿ ಜ್ಯೋತಿಷ್ಯ ಕೇಳಿದಾಗ ಜ್ಯೋತಿಷಿಗಳು ಹೆಸರೊಂದನ್ನು ಸೂಚಿಸಿದ್ದರು.

    ಇದಾದ ಬಳಿಕ ಮತ್ತೊಂದು ಟ್ವಿಸ್ಟ್‌ ಬಂತು. ಸುಷ್ಮಾ ಜಿ ಅವರ ಭೇಟಿಯಾದ ನಂತರ ನನ್ನ ತಾಯಿ, ಮಗುವಿಗೆ ಸುಷ್ಮಾ ಎಂದು ಹೆಸರಿಡುವುದಾಗಿ ಹೇಳಿದರು ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ವಿರುದ್ಧ ಹಿಮಂತ ಬಿಸ್ವಾ ವಿವಾದಾತ್ಮಕ ಹೇಳಿಕೆ – ತೆಲಂಗಾಣ ಕಾಂಗ್ರೆಸ್ ನಾಯಕರಿಂದ ದೂರು

    sushma swaraj 1

    ನನ್ನ ತಾಯಿ ವಿದ್ಯಾವಂತರಲ್ಲ. ಆದರೆ ಆಲೋಚನೆಗಳಲ್ಲಿ ಅವರು ತುಂಬಾ ಆಧುನಿಕರು. ಆ ಸಮಯದಲ್ಲಿ ಎಲ್ಲರೆದರೂ ನಿರ್ಧಾರ ತಿಳಿಸಿದ ಸನ್ನಿವೇಶದ ನೆನಪು ಈಗಲೂ ಇದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ತಾಯಿಗೆ ಈಗ 90 ವರ್ಷ.

    ಸುಷ್ಮಾ ಸ್ವರಾಜ್‌ ಅವರು 2019ರ ಆಗಸ್ಟ್‌ ತಿಂಗಳಲ್ಲಿ ನಿಧನರಾಗಿದರು. ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿದಾಶಾಂಗ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಇದನ್ನೂ ಓದಿ: ತ್ರಿವಳಿ ತಲಾಕ್ ವಿರುದ್ಧದ ಕಾನೂನು ಮುಸ್ಲಿಂ ಮಹಿಳೆಯರ ಕುಟುಂಬ ಉಳಿಸಿದೆ: ಮೋದಿ

  • ಮಗನಿಗೆ ಪುನೀತ್ ಎಂದು ಹೆಸರಿಟ್ಟು ಅದ್ಧೂರಿ ಕಾರ್ಯಕ್ರಮ ಮಾಡಿದ ಅಪ್ಪು ಅಭಿಮಾನಿ

    ಮಗನಿಗೆ ಪುನೀತ್ ಎಂದು ಹೆಸರಿಟ್ಟು ಅದ್ಧೂರಿ ಕಾರ್ಯಕ್ರಮ ಮಾಡಿದ ಅಪ್ಪು ಅಭಿಮಾನಿ

    ಕೊಪ್ಪಳ: ಪುನೀತ್ ರಾಜ್‍ಕುಮಾರ್ ನಿಧನರಾಗಿ ತಿಂಗಳು ಕಳೆದರೂ ಅಪ್ಪು ಮೇಲಿನ ಅಭಿಮಾನವನ್ನು ಜನರು ಒಂದಲ್ಲ ಒಂದು ರೀತಿಯಲ್ಲಿ ತೋರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಕಡುಬಡತನದಲ್ಲಿದ್ದರೂ ದಂಪತಿ ಅದ್ಧೂರಿಯಾಗಿ ನಾಮಕರಣ ಕಾರ್ಯಕ್ರಮ ಮಾಡಿ ಮಗನಿಗೆ ಪುನೀತ್ ಎಂದು ಹೆಸರಿಟ್ಟಿದ್ದಾರೆ.

    ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪೂರ ಗ್ರಾಮದಲ್ಲಿ ಪಕ್ಕೀರಪ್ಪ ಹಾಗೂ ಪಾರ್ವತಿ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳು. ಈಗ ಇವರು ತಮ್ಮ ಮಗನಿಗೆ ಪುನೀತ್ ಎಂದು ನಾಮಕರಣ ಮಾಡಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಿದ್ದಾರೆ. ಇದನ್ನೂ ಓದಿ: ಮಗಳ ದಾಂಪತ್ಯ ಸರಿಪಡಿಸಲು ರಜನಿಕಾಂತ್ ಸರ್ಕಸ್

    puneeth

    ಫಕೀರಪ್ಪ ಪುನೀತ್ ಅಭಿಮಾನಿಯಾಗಿದ್ದಾರೆ. ಅಪ್ಪು ನೆನಪಿಗಾಗಿ ಮಗನಿಗೆ ಪುನೀತ್ ಎಂದು ನಾಮಕರಣ ಮಾಡಿದ್ದಾರೆ. ಕಡು ಬಡತನದಲ್ಲಿದ್ದರೂ ಅಪ್ಪು ನೆನಪಿಗೆ ಅದ್ಧೂರಿ ಕಾರ್ಯಕ್ರಮದ ಮೂಲಕ ಮಗನಿಗೆ ನಾಮಕರಣ ಮಾಡಿದ್ದಾರೆ. ಅಪ್ಪು ಅಭಿಮಾನಕ್ಕೆ ಜನರ ಹಾಗೂ ಗ್ರಾಮಸ್ಥರಿಂದ ಮೆಚ್ಚುಗೆ ಹರಿದು ಬರುತ್ತಿದೆ. ಅಭಿಮಾನದ ಮುಂದೆ ಬಡತನ ಅಡ್ಡಿಯಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: ನನ್ನ ಟ್ವಿಟ್ಟರ್ ರೀಚ್ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ – ದಾಖಲೆ ಮುಂದಿಟ್ಟು ಪರಾಗ್‍ಗೆ ರಾಹುಲ್ ಪತ್ರ

  • ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ: ಸುಮಲತಾ

    ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ: ಸುಮಲತಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರನ ನಾಮಕರಣದಲ್ಲಿ ಭಾಗಿಯಾಗಿದ್ದ ಸಂತೋಷದ ಕ್ಷಣಗಳನ್ನು ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    meghana raj

    ಪುಟ್ಟ ರಾಯನ್ ರಾಜ್ ಸರ್ಜಾ ಅವರಿಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ ಎಂದು ಬರೆದುಕೊಂಡು ಅಭಿಷೇಕ್ ಅಂಬರೀಶ್, ಸುಮಲತಾ, ಸುಂದರ್ ರಾಜ್, ಧ್ರವಾ ಸರ್ಜಾ, ಮೇಘನಾ ರಾಜ್ ಮತ್ತು ಅವರು ಮಗ ಒಂದೇ ಫ್ರೇಮ್‍ನಲ್ಲಿ ಇರುವ ಚಂದೆದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.

    ಸಿನಿಮಾ ರಂಗದಿಂದ ದೂರ ಉಳಿದಿರುವ ಸುಮಲತಾ ಅಂಬರೀಶ್ ಅವರು ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಆ್ಯಕ್ಟೀವ್ ಆಗಿದ್ದು, ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜೊತೆ ನಿತ್ಯ ಸಂಪರ್ಕದಲ್ಲಿರುತ್ತಾರೆ. ಇದನ್ನೂ ಓದಿ: ಮಗನಿಗೆ ರಾಯನ್ ಹೆಸರಿಟ್ಟಿದ್ದಕ್ಕೆ ಮೇಘನಾ ಸ್ಪಷ್ಟನೆ

     

    View this post on Instagram

     

    A post shared by Meghana Raj Sarja (@megsraj)

    ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಲಾಗಿತ್ತು. ಈ ಕುರಿತಂತೆ ಕೆಲವು ಮಂದಿ ರಾಯನ್ ರಾಜ್ ಸರ್ಜಾ ಎಂಬ ಹೆಸರಿನ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಈ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ ನೀಡಿದ್ದಾರೆ. ಒಬ್ಬ ತಾಯಿಯಾಗಿ ನಾನು ನನ್ನ ಮಗನಿಗೆ ಉತ್ತಮವಾದುದನ್ನು ನೀಡುವುದು ಬಹಳ ಮುಖ್ಯ. ಅವನ ತಂದೆ, ತಾಯಿ ಖುಷಿಪಟ್ಟಂತೆ ಎರಡು ಧರ್ಮದಲ್ಲಿರುವ ಒಳ್ಳೆಯ ಅಂಶ ಅವನಿಗೆ ಯಾಕೆ ಸಿಗಬಾರದು? ಜನರು ತಮ್ಮ ಜಾತಿ, ಧರ್ಮವನ್ನು ಲೆಕ್ಕಿಸದೇ ಅವನಿಗಾಗಿ ಹಾಗೂ ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ್ದಾರೆ. ಎಲ್ಲ ದೇವರಿಂದಲೂ ನಾವು ಆಶೀರ್ವಾದವನ್ನು ಕೋರುತ್ತೇವೆ. ಎರಡು ಸಂಪ್ರದಾಯದ ಪ್ರಕಾರ ಇದನ್ನು ಮಾಡುವುದು ನನಗೆ ಬಹಳ ಮುಖ್ಯವಾಗಿತ್ತು. ಏಕೆಂದರೆ ಇದಕ್ಕೆ ಕಾರಣ ಅವನ ತಂದೆ, ನಮ್ಮ ರಾಜ ಚಿರು ಎಲ್ಲದಕ್ಕಿಂತ ಹೆಚ್ಚಾಗಿ ಮಾನವೀಯತೆ ಮುಖ್ಯ ಎಂದು ನಂಬಿದ್ದರು. ಹೀಗಾಗಿ ಎರಡು ಸಂಪ್ರದಾಯದಲ್ಲಿ ಉತ್ತಮವಾಗಿರುವುದನ್ನು ಆಚರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಜಹಾಂಗೀರ್ ಎಂದು ಪುತ್ರನಿಗೆ ಹೆಸರಿಟ್ಟ ಕರೀನಾ

    ಜಹಾಂಗೀರ್ ಎಂದು ಪುತ್ರನಿಗೆ ಹೆಸರಿಟ್ಟ ಕರೀನಾ

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ 2 ನೇ ಪುತ್ರನಿಗೆ ಜಹಾಂಗೀರ್ ಎಂದು ಹೆಸರು ಇಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    kareena kapoor

    ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮೊದಲ ಮಗುವಿಗೆ ತೈಮೂರ್ ಅಲಿ ಖಾನ್ ಎಂದು ಹೆಸರು ಇಟ್ಟಿದ್ದು ಬಹಳ ಚರ್ಚೆಯಾಗಿತ್ತು. ಈ ಬಗ್ಗೆ ಅನೇಕರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಅದು ದಾಳಿಕೋರ, ಕ್ರೂರ ರಾಜನ ಹೆಸರು ಎಂಬ ಕಾರಣಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ತಮ್ಮ ಎರಡನೇ ಮಗನಿಗೆ ಹೆಸರು ಇಡುವಾಗ ಸೈಫ್-ಕರೀನಾ ತುಂಬ ಎಚ್ಚರಿಕೆ ವಹಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈಗ ಸೈಫ್-ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ:  ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಕೊಲೆ

    ಈ ವರ್ಷ ಫೆಬ್ರವರಿಯಲ್ಲಿ ಎರಡನೇ ಪುತ್ರನಿಗೆ ಕರೀನಾ ಜನ್ಮ ನೀಡಿದ್ದರು.  ಏನು ಹೆಸರು ಇಟ್ಟಿದ್ದಾರೆ ಎಂಬುದು ಕೂಡ ಬಹಿರಂಗ ಆಗಿರಲಿಲ್ಲ. ಇತ್ತೀಚೆಗೆ ಅವರ ಎರಡನೇ ಪುತ್ರನಿಗೆ ಅವರು ಜೇ (Jeh) ಎಂದು ಹೆಸರು ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

    kareena kapoor troll

    ಕರೀನಾ ಅವರು ಪ್ರಗ್ನೆನ್ಸಿ ಬೈಬಲ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಎರಡನೇ ಮಗುವಿನ ಬಗ್ಗೆ ಕರೀನಾ ವಿವರಿಸಿದ್ದಾರೆ. ಈ ಪುಸ್ತಕದಲ್ಲಿ ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಮಗುವಿನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

  • ಬೆಂಗಳೂರು-ಕಾರವಾರ ರೈಲಿಗೆ ಪಂಚಗಂಗಾ ಎಕ್ಸ್‌ಪ್ರೆಸ್ ನಾಮಕರಣ- ರೈಲ್ವೆ ಸಚಿವಾಲಯ ಆದೇಶ

    ಬೆಂಗಳೂರು-ಕಾರವಾರ ರೈಲಿಗೆ ಪಂಚಗಂಗಾ ಎಕ್ಸ್‌ಪ್ರೆಸ್ ನಾಮಕರಣ- ರೈಲ್ವೆ ಸಚಿವಾಲಯ ಆದೇಶ

    – ಪಂಚಗಂಗಾ ಎಕ್ಸ್ ಪ್ರೆಸ್ ನಾಮಕರಣಕ್ಕೆ ಮನವಿ ಮಾಡಿದ್ದ ಶೋಭಾ

    ಉಡುಪಿ: ಕರಾವಳಿ ಮತ್ತು ರಾಜ್ಯ ರಾಜಧಾನಿಯ ಸಂಪರ್ಕ ಸೇತು ಕಾರವಾರ-ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್ ಪಾಸ್ಟ್ ರೈಲಿಗೆ ಉಡುಪಿ ಜಿಲ್ಲೆಯ ಐದು ಪ್ರಮುಖ ಪುಣ್ಯ ನದಿಗಳು ಸಂಗಮಿಸಿ ಸೃಷ್ಟಿಯಾಗುವ ಪ್ರಾಕೃತಿಕ ಅಚ್ಚರಿ ಪಂಚಗಂಗಾವಳಿ ನದಿಯ ಹೆಸರನ್ನು ನಾಮಕರಣ ಮಾಡಲಾಗಿದೆ.

    bengaluru karwar train medium

    ಪ್ರತಿದಿನ ಓಡಾಡುವ ರೈಲನ್ನು ಇನ್ನು ಮುಂದೆ ಪಂಚಗಂಗಾ ಎಕ್ಸ್ ಪ್ರೆಸ್ ಎಂದು ಕರೆಯಲಾಗುತ್ತದೆ. ಕೆಂದ್ರ ರೈಲ್ವೆ ಸಚಿವಾಲಯ ನಾಮಕರಣ ಮಾಡಿ ಆದೇಶ ಹೊರಡಿಸಿದೆ. ಕ್ಷೇತ್ರದ ಜನರ ಅಪೇಕ್ಷೆಯಂತೆ ಸಂಸದೆ ಶೋಭಾ ಕರಂದ್ಲಾಜೆ ಅವರು ರೈಲ್ವೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ್ ಅಂಗಡಿಯವರನ್ನು ಭೇಟಿಯಾಗಿ ಕರಾವಳಿಯ ಬಹುಮುಖ್ಯ ಪುಣ್ಯ ಕ್ಷೇತ್ರಗಳ ಮೂಲಕ ಹರಿಯುವ ಪಂಚಗಂಗಾ, ಜಿಲ್ಲೆಯ ತೀರ್ಥ ಕ್ಷೇತ್ರ, ಪ್ರವಾಸೊದ್ಯಮ, ಮೀನುಗಾರಿಕೆ, ಕೃಷಿ ಹಾಗೂ ಜನಜೀವನಕ್ಕೆ ಅಧಾರವಾಗಿದೆ. ಹೀಗಾಗಿ ನೂತನ ಬೆಂಗಳೂರು-ಕಾರವಾರ ರೈಲಿಗೆ ‘ಪಂಚಗಂಗಾ’ ಹೆಸರಿಡಬೇಕು ಎಂದು ಮನವಿ ಮಾಡಿದ್ದರು.

    ಜನರ ಅಪೇಕ್ಷೆಯನ್ನು ಗೌರವಿಸಿ, ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಪಂಚಗಂಗಾ ಎಕ್ಸ್‍ಪ್ರೆಸ್ ಎಂಬ ಹೆಸರನ್ನು ಕರಾವಳಿಯ ಜೀವನಾಡಿಯಾದ ಬೆಂಗಳೂರು-ಕಾರವಾರ ರೈಲಿಗೆ ನಾಮಕರಣ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಹಾಗೂ ರೈಲ್ವೆ ಸಚಿವಾಲಯಕ್ಕೆ ಸಂಸದೆ ಶೋಭಾ ಕರಂದ್ಲಾಜೆಯವರು ಧನ್ಯವಾದ ಅರ್ಪಿಸಿದ್ದಾರೆ.

    Shobha Karandlaje

    ಕಾರವಾರ, ಉಡುಪಿ, ದ.ಕ ಜಿಲ್ಲೆಯ ಜನ ರೈಲನ್ನು ಹೆಚ್ಚಾಗಿ ನೆಚ್ಚಿಕೊಳ್ಳಬೇಕು. ಕಡಿಮೆ ಪ್ರಯಾಣ ದರ, ಸುಲಭ ಸಂಚಾರದ ಜೊತೆ ಮೂಲಭೂತ ಸೌಕರ್ಯಗಳು ರೈಲಿನಲ್ಲಿ ಇರುವ ಕಾರಣ ರಾಜಧಾನಿಗೆ ಓಡಾಡುವ ಎಲ್ಲರೂ ಬಳಸಿ ಎಂದು ಶೋಭಾ ಕರಂದ್ಲಾಜೆ ಕರೆ ನೀಡಿದ್ದಾರೆ.

  • ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಅಭಿಮಾನಿ

    ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಅಭಿಮಾನಿ

    ಕೊಪ್ಪಳ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಮಾನಿ ಮೇಲಿನ ತಮ್ಮ ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

    ಜಿಲ್ಲೆಯ ನೂತನ ಕುಕನೂರು ತಾಲೂಕಿನ ದ್ಯಾಂಪುರದ ನಿವಾಸಿಯಾಗಿರುವ ರೈತ ಮಂಜುನಾಥ ಅವರು ತಮ್ಮ ಮಗುವಿಗೆ ಸಿದ್ದರಾಮಯ್ಯ ಎಂದು ಶಾಸ್ತ್ರೋಕ್ತವಾಗಿ ಬುಧವಾರ ಬಂಧು-ಬಾಂಧವರ ಸಮ್ಮುಖದಲ್ಲಿ ನಾಮಕರಣ ಮಾಡಿದ್ದಾರೆ. ಮಂಜುನಾಥ ಹಾಗೂ ನೇತ್ರಾವತಿ ದಂಪತಿಗೆ ಜನಿಸಿರುವ ಮೊದಲ ಗಂಡು ಮಗುವಿಗೆ ಸಿದ್ದರಾಮಯ್ಯ ಎಂದು ಹೆಸರು ಇಟ್ಟಿದ್ದಾರೆ. ಈ ಮೂಲಕ ಅವರು ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

    kpl siddaramaih fan medium

    ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಸೇರಿದಂತೆ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿ ಮಾಡಿದ್ದರು. ಇಂತಹ ಅನೇಕ ಯೋಜನೆಗಳನ್ನು ಮೆಚ್ಚಿಕೊಂಡ ಮಂಜುನಾಥ ಅಂದಿನಿಂದ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಹೀಗಾಗಿ ತಮ್ಮ ನಾಯಕನ ಬಗೆಗಿನ ಅಭಿಮಾನವನ್ನು ಯಾವ ರೀತಿ ವ್ಯಕ್ತಪಡಿಸಬೇಕು ಎಂದುಕೊಂಡಾಗ ತಮಗೆ ಜನಿಸಿದ ಮೊದಲ ಗಂಡು ಮಗುವಿಗೆ ಸಿದ್ದರಾಮಯ್ಯ ಎಂದು ಹೆಸರಿಡಲು ನಿರ್ಧರಿಸಿದ್ದಾರೆ.

    kpl siddaramaih fan 2 medium

    ಅದರಂತೆ ಬುಧವಾರ ತಮ್ಮ ಮನೆಯಲ್ಲಿ ನಾಮಕರಣ ಕಾರ್ಯಕ್ರಮವನ್ನು ಬಂಧು-ಬಾಂಧವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಏರ್ಪಡಿಸಿ ಮಗುವನ್ನು ತೊಟ್ಟಿಲಿಗೆ ಹಾಕಿದ್ದಾರೆ. ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಜನಪರ ಕಾಳಜಿ, ಯೋಜನೆಗಳನ್ನು ಮೆಚ್ಚಿ ಅವರ ಕಟ್ಟಾ ಅಭಿಮಾನಿಯಾಗಿರುವೆ. ಹೀಗಾಗಿ ಅವರ ಹೆಸರನ್ನು ನನ್ನ ಮಗನಿಗೆ ನಾಮಕರಣ ಮಾಡಿದ್ದೇನೆ ಎಂದು ಮಗುವಿನ ತಂದೆ ಮಂಜುನಾಥ ಅವರು ತಿಳಿಸಿದರು.

  • ಮಗಳಿಗೆ ದುರ್ಗೆಯೆ ಹೆಸರಿಟ್ಟ ವಿರುಷ್ಕಾ

    ಮಗಳಿಗೆ ದುರ್ಗೆಯೆ ಹೆಸರಿಟ್ಟ ವಿರುಷ್ಕಾ

    ಮುಂಬೈ: ಜನವರಿ 11 ರಂದು ಅನುಷ್ಕಾ ಮುದ್ದಾದ ಹೆಣ್ಣು ಮಗುವಿನ ಜನ್ಮ ನೀಡಿದ್ದರು. ಇದೀಗ ಅವರ ಮುದ್ದು ಮಗಳಿಗೆ ಹೆಸರನ್ನು ಇಟ್ಟಿರುವ ವಿಚಾರವನ್ನು ಸೋಷಿಲ್ ಮೀಡಿಯಾ ಮೂಲಕವಾಗಿ ರಿವೀಲ್ ಮಾಡಿದ್ದಾರೆ.

    ಮುದ್ದು ಮಗಳಿಗೆ ‘ವಮಿಕಾ’ ಎನ್ನುವ ಹೆಸರಿಡುವ ಮೂಲಕವಾಗಿ ನಾಮಕರಣ ಮಾಡಿದ್ದಾರೆ. ತಾಯಿ ದುರ್ಗೆಯೆ ಹೆಸರು ಆಗಿದೆ ಮತ್ತು ವಿರಾಟ್- ಅನುಷ್ಕಾ ಹೆಸರಿನ ಮೊದಲ ಹಾಗೂ ಅಂತ್ಯದ ಅಕ್ಷರ ಜೋಡಿಸಿ ಮಗಳಿಗೆ ಹೆಸರಿಟ್ಟಿದ್ದಾರೆ.

    ನಾವಿಬ್ಬರು ಪ್ರೀತಿ, ಕೃತಜ್ಞತೆಯಿಂದ ಬದುಕಿದಂತೆ ನಾವು ವಮಿಕಾಳನ್ನು ಕೂಡ ನಡೆಸಿಕೊಂಡು ಹೋಗುತ್ತೇವೆ. ವಮಿಕಾ ನಮ್ಮ ಜೀವನದಲ್ಲಿ ಬಂದು ಅದೆಲ್ಲವನ್ನು ಮತ್ತೊಂದು ಹಂತಕ್ಕೆ ತಂದಿದ್ದಾಳೆ. ಕೆಲವೊಂದು ಸಂದರ್ಭದಲ್ಲಾದರೂ ಅಳು, ನಗು, ಚಿಂತೆ, ಆನಂದ ಭಾವನೆಗಳನ್ನು ಅನುಭವಿಸಿದ್ದೇವೆ. ಇತ್ತೀಚೆಗೆ ನಿದ್ದೆ ಕಡಿಮೆಯಾಗಿದೆ, ಆದರೆ ಹೃದಯ ತುಂಬಿದೆ. ನಿಮ್ಮೆಲ್ಲರ ಆಶಿರ್ವಾದ ಶುಭಾಶಯ, ಪ್ರೀತಿಗೆ ಧನ್ಯವಾದಗಳು ಎಂದು ಬರೆದು ತಮ್ಮ ಮಗುವಿನ ಜೊತೆಗೆ ದಂಪತಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

    ಅಭಿಮಾನಿಗಳಿಗಾಗಿ ತಮ್ಮ ಮದುವೆ ವಿಚಾರದಿಂದ ಹಿಡಿದು ಅವರ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕವಾಗಿ ತಿಳಿಸುವ ಈ ಜೋಡಿ ಮುದ್ದು ಮಗಳಿಗೆ ಯಾವ ಹೆಸರು ಇಡುತ್ತಾರೆ ಎಂಬ ಕುರಿತಾಗಿ ಚರ್ಚೆ ನಡೆಯುತ್ತಿತ್ತು. ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಈಗ ಮಗಳ ಜೊತೆಗಿರುವ ಫೋಟೋ ಜೊತೆಗೆ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ. ತಂದೆ-ತಾಯಿಗಳಾಗಿ ಬಡ್ತಿ ಪಡೆದಿರುವ ವಿರುಷ್ಕಾ ದಂಪತಿ ಮಗಳಿಗೆ ಹೆಸಟ್ಟ ವಿಚಾರವನ್ನು ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಮೂಲಕವಾಗಿ ಹಂಚಿಕೊಂಡು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.

  • ಲವ್ ಜಿಹಾದ್ ವಿರುದ್ಧ ಕಾನೂನು ಖಚಿತ: ಸದಾನಂದಗೌಡ

    ಲವ್ ಜಿಹಾದ್ ವಿರುದ್ಧ ಕಾನೂನು ಖಚಿತ: ಸದಾನಂದಗೌಡ

    ಮಡಿಕೇರಿ: ಮತಾಂತರ ಮಾಡುವುದಕ್ಕಾಗಿಯೇ ಮದುವೆ ಆಗುವುದನ್ನು ತಡೆಗಟ್ಟುವುದಕ್ಕಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

    ಕೊಡಗಿನ ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರುವ ವಿಷಯ ಹಿಂದಿನಿಂದಲೂ ಚರ್ಚೆಯಲ್ಲಿತ್ತು. ಇದೀಗ ಕಾನೂನು ತರುವುದಕ್ಕೆ ಕಾಲ ಕೂಡಿ ಬಂದಿದೆ. ಅಲಹಬಾದ್ ಕೋರ್ಟ್ ಕೂಡ ಲವ್ ಜಿಹಾದ್ ವಿರುದ್ಧ ತೀರ್ಪು ನೀಡಿದೆ. ಉತ್ತರ ಪ್ರದೇಶ ಸಿಎಂ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತಂದಿದ್ದಾರೆ ಎಂದರು.

    love jihad

    ರಾಜ್ಯದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲಾಗುವುದು. ಈಗಾಗಲೇ ಪಕ್ಷದ ಕೋರ್ ಕಮಿಟಿಯಲ್ಲೂ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ತರಲಾಗುವುದು. ಮದುವೆಯಾಗಿ ಬಳಿಕ ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುವುದು ಸರಿಯಲ್ಲ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

    ಕೊಡಗಿನಲ್ಲೇ ಮೊಮ್ಮಗನ ನಾಮಕರಣ ಮಾಡಿದ ಡಿವಿಎಸ್ ಸದಾ ರಾಜಕಾರಣದ ಗುಂಗಿನಲ್ಲೇ ಬ್ಯುಸಿಯಾಗಿರುತ್ತಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಇಂದು ಎಲ್ಲ ಜಂಜಾಟಗಳನ್ನು ಬದಿಗೊತ್ತಿ ಮೊಮ್ಮಗನ ನಾಮಕರಣ ಕಾರ್ಯಕ್ರಮಮದಲ್ಲಿ ಭಾಗವಹಿಸಿ ಸಂತೋಷದಿಂದ ಕಾಲ ಕಳೆದರು.

    WhatsApp Image 2020 11 12 at 4.57.05 PM

    ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ತಮ್ಮ ಸೋದರ ಸಂಬಂಧಿ ನಾಣಯ್ಯ ಅವರ ಮನೆಯಲ್ಲಿ ತಮ್ಮ ಮೊಮ್ಮಗನ ನಾಮಕರಣದಲ್ಲಿ ಭಾಗಿಯಾಗಿ ಇಡೀ ದಿನ ಕಾಲ ಕಳೆದರು. ಕೋವಿಡ್ ಇರುವ ಹಿನ್ನೆಲೆಯಲ್ಲಿ ಬೇರೆ ಯಾರಿಗೂ ಕೂಡ ಆಹ್ವಾನ ನೀಡಿರಲಿಲ್ಲ. ಸದಾನಂದಗೌಡರ ಮಗ ಕಾರ್ತಿಕ್, ಅವರ ಪತ್ನಿ ಮತ್ತು ಬೀಗರಾದ ನಾಣಯ್ಯ ಅವರ ಕುಟುಂಬದವರು ಮಾತ್ರವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಾಣಯ್ಯ ಅವರ ಪತ್ನಿ ಸುಧಾನಾಣಯ್ಯ ತಮ್ಮ ಮೊಮ್ಮಗನನ್ನು ಕಾಲ ಮೇಲೆ ಮಲಗಿಸಿಕೊಂಡು ವಿವಿಧ ಆಚರಣೆಗಳನ್ನು ನೆರವೇರಿಸಿದರು.

    WhatsApp Image 2020 11 12 at 4.57.02 PM

    ಈ ವೇಳೆ ಸದಾನಂದಗೌಡ ಮತ್ತು ಪತ್ನಿ ಡಾಟಿ ಸದಾನಂದಗೌಡ ಅವರು ಮೊಮ್ಮಗನ ಕೊರಳಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ಹಾಕಿದರು. ಅಲ್ಲದೆ ಬೆಳ್ಳಿಯ ಹೊಳಲೆಯಲ್ಲಿ ಬೆಣ್ಣೆ ತಿನ್ನಿಸಿ ಹಾರೈಸಿದರು. ಅರೆಗೌಡ ಸಂಪ್ರದಾಯದಂತೆ ನಾಮಕರಣ ಮಾಡಿ ಬಳಿಕ ತೊಟ್ಟಿಲಿಗೆ ಹಾಕಿ ತೂಗಿ ಸಂಭ್ರಮಿಸಿದರು. ಮೊಮ್ಮಗನಿಗೆ ದಕ್ಷ್ ಎಂದು ಹೆಸರಿಟ್ಟು ಹಾರೈಸಿದ್ದೇವೆ. ದೊಡ್ಡವರಾದ ಮೇಲೆ ಯಾವ ಹೆಸರಿಟ್ಟುಕೊಳ್ಳುತ್ತಾರೋ ಯಾರಿಗೆ ಗೊತ್ತು ಎಂದು ಸದಾನಂದಗೌಡ ಹಾಸ್ಯವಾಡಿದರು.

  • ಯಲಹಂಕ ವೀರ ಸಾವರ್ಕರ್ ಮೇಲ್ಸೇತುವೆ ಉದ್ಘಾಟನೆ

    ಯಲಹಂಕ ವೀರ ಸಾವರ್ಕರ್ ಮೇಲ್ಸೇತುವೆ ಉದ್ಘಾಟನೆ

    – ಬಿಗಿ ಭದ್ರತೆಯಲ್ಲಿ ನಡೆಯಿತು ಕಾರ್ಯಕ್ರಮ

    ಬೆಂಗಳೂರು: ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರನ್ನು ನಾಮಕರಣ ಮಾಡಿದೆ.

    ಇಂದು ನಾಮಕರಣದ ಕಾರ್ಯಕ್ರಮವನ್ನು ಸಿಎಂ ಯಡಿಯೂರಪ್ಪನವರು ಉದ್ಘಾಟನೆ ಮಾಡಿದ್ದಾರೆ. ಯಲಹಂಕದ ಡೈರಿ ಸರ್ಕಲ್ ಬಳಿ ಇರುವ ಮೇಲ್ಸೇತುವೆಗೆ ವೀರ ಸಾವರ್ಕರ್ ಅವರ ಹೆಸರನ್ನು ಇಡಲಾಗಿದೆ. 388.35 ಮೀಟರ್ ಉದ್ದದ ಈ ಮೇಲ್ಸೇತುವೆಯನ್ನು ಬಿಬಿಎಂಪಿಯಿಂದ 34 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

    Yelahanka Flyover b

    ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ಕಾಂಗ್ರೆಸ್, ಜೆಡಿಎಸ್ ವಿರೋಧಿಸಿತ್ತು. ಹೀಗಾಗಿ ಯಾವುದೇ ಪ್ರತಿಭಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಎಸ್‍ಆರ್ ವಿಶ್ವನಾಥ್, ಸಚಿವರಾದ ಸಿಟಿ ರವಿ, ಡಿಸಿಎಂ ಅಶ್ವಥ್ ನಾರಾಣ್, ಗೃಹ ಸಚಿವ ಬಸವರಾಜ್ ಬೊಮ್ಮಯಿ ಮತ್ತು ಬೈರತಿ ಬಸವರಾಜು ಉಪಸ್ಥಿತರಿದ್ದರು.

    Yelahanka Flyover 1

    ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರಿಡಲು ಸರ್ಕಾರ ಈ ಹಿಂದೆಯೇ ಮುಂದಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆ ಸರ್ಕಾರ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಿತ್ತು. ಮೇಲ್ಸೇತುವೆಗೆ ಸಾವರ್ಕರ್ ಹೆಸರು ಬೇಡ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿರೋಧ ಮಾಡಿದ್ದರು. ಜೊತೆಗೆ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದರು.