Tag: ನವೀನ್ ಸಜ್ಜು

  • ಹೋಳಿ ಆಡುತ್ತಾ ಕ್ರಿಕೆಟ್ ನೋಡುತ್ತಾರಂತೆ ತಾರೆಯರು!

    ಹೋಳಿ ಆಡುತ್ತಾ ಕ್ರಿಕೆಟ್ ನೋಡುತ್ತಾರಂತೆ ತಾರೆಯರು!

    ನಟಿ ಹರ್ಷಿಕಾ ಪೂಣಚ್ಚ, ಗಾಯಕ ನವೀನ್ ಸಜ್ಜು, ಚಂದನಾ ಗೌಡ ಸೇರಿದಂತೆ ಕನ್ನಡದ ನವ ನಟ-ನಟಿಯರು, ಹೊಸಾ ಸೆಲೆಬ್ರೆಟಿಗಳೆಲ್ಲಾ ಹೋಳಿ ಹಬ್ಬ ಆಚರಿಸಲು ಮುಂದಾಗಿದ್ದಾರೆ. ನಾಗರಬಾವಿ ಬಳಿ ಮೀಡಿಯ ಸ್ಟೇಷನ್ ಆಯೋಜಿಸಿರುವ ಈ ಈವೆಂಟ್‍ನಲ್ಲಿ ಐಪಿಎಲ್ ಕ್ರಿಕೆಟ್ ನೋಡುತ್ತಲೇ ಹೋಳಿ ಹಬ್ಬ ಆಚರಿಸುವ ವಿನೂತನ ಐಡಿಯಾ ಮಾಡಲಾಗಿದೆಯಂತೆ. ಇದೇ ಮಾರ್ಚ್ 23ರಂದು ಬೆಳಿಗ್ಗೆ 11ರಿಂದ ರಾತ್ರಿ 11ರ ತನಕ ನಡೆಯುವ `ರಂಗ್ ದೆ ಬೆಂಗಳೂರು 2019′ ಹೆಸರಿನ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕದ ಅನೇಕರು ಪಾಲ್ಗೊಳ್ಳಲಿದ್ದಾರೆ.

    D1tuFmxU4AIYDhZ

    ದಿನನಿತ್ಯದ ಒತ್ತಡದ ಬದುಕಿನಲ್ಲಿ ಜನ ಸಾಕಷ್ಟು ಹೈರಾಣಾಗಿರುತ್ತಾರೆ. ಕ್ರಿಕೆಟ್ ಮ್ಯಾಚ್ ಶುರುವಾಯಿತೆಂದರೆ, ಟೀವಿ ಮುಂದಷ್ಟೇ ಕೂತು ಎಂಜಾಯ್ ಮಾಡುತ್ತಾರೆ. ಇಷ್ಟಪಟ್ಟ ಆಟವನ್ನು ಓಕುಳಿಯಾಟದೊಂದಿಗೆ ಬ್ಲೆಂಡ್ ಮಾಡಿದರೆ ಸುಂದರವಾಗಿರುತ್ತದೆ ಅನ್ನಿಸಿತು. ಮನೆಮಂದಿಯೆಲ್ಲಾ ಪೂಲ್ ಪಾರ್ಟಿ, ರೈನ್ ಡ್ಯಾನ್ಸ್ ಜೊತೆಗೆ ಕ್ರಿಕೆಟ್ ನೋಡುತ್ತಾ ಥ್ರಿಲ್ ಅನುಭವಿಸುವ ಹೊಸಾ ಕಾನ್ಸೆಪ್ಟ್ ಇದು ಎನ್ನುವುದು ಈ ಕಾರ್ಯಕ್ರಮವನ್ನು ಆಯೋಜಿಸಿರುವ ಮೀಡಿಯಾ ಸ್ಟೇಷನ್‍ನ ವರುಣ್ ಅವರ ಅಭಿಪ್ರಾಯ.

    img 20190313 wa0007

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಧುನಿಕ ರೈತನಿಗೆ ಬಿಗ್‍ಬಾಸ್ ಕಿರೀಟ

    ಆಧುನಿಕ ರೈತನಿಗೆ ಬಿಗ್‍ಬಾಸ್ ಕಿರೀಟ

    ಬೆಂಗಳೂರು: ಭಾನುವಾರ ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಉಳಿದಿದ್ದ ಗಾಯಕ ನವೀನ್ ಸಜ್ಜು ಮತ್ತು ಶಶಿಕುಮಾರ್ ನಡುವೆ ವಿನ್ನರ್ ಆಗಲು ಬಿಗ್‍ಫೈಟ್ ನಡೆದಿತ್ತು. ಕಡೆಯದಾಗಿ ಜನಾಭಿಪ್ರಾಯದ ಮೇಲೆ ಶಶಿಯನ್ನು ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ವಿನ್ನರ್ ಎಂದು ಘೋಷಿಸಿದರು. ನವೀನ್ ಸಜ್ಜು ರನ್ನರ್ ಆಗಿ ಹೊರಹೊಮ್ಮಿದ್ರು. ದಿ ವಿನ್ನರ್ ಶಶಿಕುಮಾರ್ 50 ಲಕ್ಷ ರೂಪಾಯಿ ಮತ್ತು ಆಕರ್ಷಕ ಟ್ರೋಫಿಯನ್ನ ತಮ್ಮದಾಗಿಸಿಕೊಂಡರು.

    ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಬಳಿಕ ಮಾತನಾಡಿದ, ಶಶಿ ಇದು ನನ್ನೊಬ್ಬನ ಗೆಲುವಲ್ಲ, ಇದು ಎಲ್ಲರ ಗೆಲುವು ಎಂದರು. ನನಗೆ ಬಂದ ಬಹುಮಾನದ ಹಣವನ್ನು ರೈತಾಪಿ ವರ್ಗದ ಕಲ್ಯಾಣಕ್ಕೆ, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಮತ್ತು ಬೇಸಾಯದತ್ತ ಯುವಕರನ್ನು ಸೆಳೆಯುವುದಕ್ಕೆ ಬಳಸವುದಾಗಿ ಬಿಗ್‍ಬಾಸ್ ವಿನ್ನರ್ ಘೋಷಿಸಿದರು. ರನ್ನರ್ ಅಪ್ ನವೀನ್ ಸಜ್ಜು ಅವರ ಕನಸನ್ನು ನನಸು ಮಾಡೋದಾಗಿ ಕಿಚ್ಚ ಸುದೀಪ್ ಘೋಷಿಸಿದರು. ನನ್ನ ಕಡೆಯಿಂದ ರನ್ನರ್ ಅಪ್‍ಗೆ ಸ್ಪೆಷಲ್ ಗಿಫ್ಟ್ ಇರೋದಾಗಿ ನಟ ಕಿಚ್ಚ ಸುದೀಪ್ ಭರವಸೆ ನೀಡಿದ್ರು.

    shashi

    ಸೀಸನ್ -6ರ 12ನೇ ಕಂಟೆಸ್ಟೆಂಟ್ ಆಗಿ ಶಶಿ ಬಿಗ್‍ಬಾಸ್ ಮನೆಯೊಳಗೆ ಎಂಟ್ರಿ ನೀಡಿದ್ದರು. ಮಾಡರ್ನ್ ರೈತ ಅಂತಾನೇ ಫೇಮಸ್ ಆಗಿದ್ದ ಇವರು, ಎಲ್ಲಾ ಟಾಸ್ಕ್‍ಗಳನ್ನ ಕೂಡ ಚೆನ್ನಾಗಿಯೇ ಮಾಡಿದ್ದರು. ಹೀಗಾಗಿ, ರೈತನೊಬ್ಬ ಮೊದಲ ಬಾರಿಗೆ ಬಿಗ್ ಬಾಸ್ ಗೆಲ್ತಾನೆ ಅನ್ನೋ ಮಾತು ಕೇಳಿ ಬಂದಿತ್ತು. ಅದರಂತೆ ಶಶಿಕುಮಾರ್ ಬಿಗ್‍ಬಾಸ್ ಸೀಜನ್ -6 ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.

    ಬಿಗ್‍ಬಾಸ್ ಮನೆಯೊಳಗೆ ಎಂಟ್ರಿ ನೀಡಿದ್ದ 20 ಮಂದಿಯಲ್ಲಿ ಕೊನೆಗೆ ಮೂವರು ಉಳಿದಿದ್ರು. ಕವಿತಾ ಮೊದಲು ಮನೆಯಿಂದ ಹೊರಬಂದರು. ಶಶಿ, ನವೀನ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಗಾಯಕ ನವೀನ್ ಸಜ್ಜು ಅವರೇ ವಿನ್ ಆಗುತ್ತಾರೆ ಅನ್ನೋ ಅಭಿಪ್ರಾಯ ಬಹುತೇಕರಲ್ಲಿತ್ತು. ಆದ್ರೆ ಅದು ಸುಳ್ಳಾಗಿದೆ. ಮಾಡರ್ನ್ ರೈತ ಶಶಿ ಬಿಗ್‍ಬಾಸ್ ವಿನ್ನರ್ ಆಗಿದ್ದಾರೆ. ಈ ಸಂಬಂಧ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ. ಶಶಿ ಬಿಗ್‍ಬಾಸ್ ವಿನ್ನರ್.. ನವೀನ್ ಸಜ್ಜು ಜನರ ದಿಲ್‍ದಾರ್ ಎಂಬ ಡೈಲಾಗ್ ಹೊರಬೀಳುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಮನೆಯಿಂದ ಹೊರಬರುವಾಗ ಉಡುಗೊರೆ ಕೊಟ್ಟ ನವೀನ್- ಪ್ರೀತಿಯಿಂದ ತಬ್ಬಿಕೊಂಡ ಸೋನು

    ಬಿಗ್ ಮನೆಯಿಂದ ಹೊರಬರುವಾಗ ಉಡುಗೊರೆ ಕೊಟ್ಟ ನವೀನ್- ಪ್ರೀತಿಯಿಂದ ತಬ್ಬಿಕೊಂಡ ಸೋನು

    ಬೆಂಗಳೂರು: ಬಿಗ್ ಬಾಸ್ ಸೀಸನ್-6ರಲ್ಲಿ ಕಳೆದ ಶನಿವಾರ ಸ್ಫರ್ಧಿ ಸೋನು ಪಾಟೀಲ್ ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಸೋನು ಮನೆಯಿಂದ ಹೊರಬರುವಾಗ ಗಾಯಕ ನವೀನ್ ಸಜ್ಜು ಅವರಿಗೆ ಉಡುಗೊರೆಯೊಂದು ನೀಡಿದ್ದು, ಸೋನು ಪ್ರೀತಿಯಿಂದ ನವೀನ್ ಅವರನ್ನು ತಬ್ಬಿಕೊಂಡರು.

    ಕಳೆದ ಶನಿವಾರ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಅವರು ಸೋನು ಪಾಟೀಲ್‍ರನ್ನು ಮನೆಯಿಂದ ಹೊರಬರುವಂತೆ ಹೇಳಿದರು. ಎಲ್ಲರೂ ಸೋನು ಅವರನ್ನು ಮುಖ್ಯ ದ್ವಾರದ ಮೂಲಕ ಮನೆಯಿಂದ ಬೀಳ್ಕೊಟ್ಟರು.

    sonu patil 2

    ಈ ವೇಳೆ ನವೀನ್ ರೂಮಿಗೆ ಓಡಿ ಹೋಗಿ ತನ್ನ ಲಗೇಜ್‍ನಲ್ಲಿದ್ದ ಜರ್ಕಿನ್ ತೆಗೆದುಕೊಂಡು ಅದನ್ನು ಸೋನು ಅವರಿಗೆ ಉಡುಗೊರೆಯಾಗಿ ನೀಡಿದರು. ಸೋನು ಜರ್ಕಿನ್ ಪಡೆದು ನಾನು ಒಮ್ಮೆ ನಿನ್ನನ್ನು ತಬ್ಬಿಕೊಳ್ಳಬೇಕು ಎಂದು ಹೇಳಿ ನವೀನ್‍ರನ್ನು ಪ್ರೀತಿಯಿಂದ ತಬ್ಬಿಕೊಂಡರು.

    ಈ ಹಿಂದೆ ಟಾಸ್ಕ್ ವೊಂದರಲ್ಲಿ ಸೋನು, ನವೀನ್ ನನಗೆ ಒಳ್ಳೆಯ ಸ್ನೇಹಿತ. ನನಗೆ ಅವನ ಮೇಲೆ ಲವ್ ಇಲ್ಲ. ಕಷ್ಟ ಬಂದಾಗ ನನಗೆ ಯಾರೂ ಸಹಾಯ ಮಾಡಿಲ್ಲ. ಆದರೆ ನವೀನ್ ಹೆಣ್ಣುಮಕ್ಕಳಿಗೆ ಬಹಳ ಗೌರವ ನೀಡುತ್ತಾನೆ. ನನಗೆ ಚಳಿ ಆಗುತ್ತಿರುವಾಗ ಅವನು ಜರ್ಕಿನ್ ಕೊಟ್ಟ. ಹಾಗಾಗಿ ಫ್ರೆಂಡ್ ಆಗಿ ನವೀನ್ `ಐ ಲವ್ ಯು’ ಎಂದು ಹೇಳಿದರು.

    sonu patil 3

    ಅಲ್ಲದೇ ನಾನು ಸ್ನೇಹಿತನಾಗಿ ನಿನ್ನನ್ನು ಇಷ್ಟಪಡುತ್ತೇನೆ. ಲವ್, ಮದುವೆ ಎಂದರೆ ನನಗೆ ಇಷ್ಟವಿಲ್ಲ ಎಂದು ಸೋನು ಅವರು ನವೀನ್‍ಗೆ ಸ್ಪಷ್ಟಪಡಿಸಿದರು. ಸೋನು ಮಾತನ್ನು ಕೇಳಿ ನವೀನ್, ನಿನ್ನನ್ನು ಒಳ್ಳೆಯ ಗೆಳತಿ ಎಂದು ಸ್ವೀಕರಿಸುತ್ತೇನೆ ಎಂದು ಹೇಳಿದರು.

    ಸೋನು, ನವೀನ್‍ಗೆ ಐ ಲವ್ ಯೂ ಎಂದು ಹೇಳಿದ ಬಳಿಕ ಮನೆಯಲ್ಲಿದ್ದವರು ಇಬ್ಬರ ಬಗ್ಗೆ ಮಾತನಾಡಲು ಶುರು ಮಾಡಿದ್ದರು. ಇತರರ ಮಾತುಗಳಿಂದ ಕೋಪಗೊಂಡ ಸೋನು ಪಾಟೀಲ್, ನೀನು ನನಗೆ ಸ್ನೇಹಿತನಾಗಿ ಇಷ್ಟ. ಲವ್ ಮಾಡಿದರೆ ನಾನು ನಿನ್ನೇ ಲವ್ ಮಾಡ್ತೇನೆ. ಅದು ಏನ್ ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ಸವಾಲು ಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್‍ಬಾಸ್ ಸೀಸನ್-6: ಐ ಲವ್ ಯೂ ಅಂದ್ರು ಸೋನು ಪಾಟೀಲ್!

    ಬಿಗ್‍ಬಾಸ್ ಸೀಸನ್-6: ಐ ಲವ್ ಯೂ ಅಂದ್ರು ಸೋನು ಪಾಟೀಲ್!

    ಬೆಂಗಳೂರು: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್-6 ಬಂದು ಎರಡು ವಾರಗಳಾಗಿದೆ. ಎರಡನೇ ವಾರದಲ್ಲಿ ಸೋನು ಪಾಟೀಲ್ ತನ್ನ ಸಹ ಸ್ಪರ್ಧಿ ಗಾಯಕ ನವೀನ್ ಸಜ್ಜು ಅವರಿಗೆ ಎಲ್ಲರ ಸಮ್ಮುಖದಲ್ಲಿ ಐ ಲವ್ ಯೂ ಎಂದು ಹೇಳಿದ್ದಾರೆ.

    ಹೌದು. ಸೋಮವಾರ ಬಿಗ್ ಬಾಸ್ ಎಲ್ಲರಿಗೂ ಒಂದು ಟಾಸ್ಕ್ ನೀಡಿದ್ದರು. ಸ್ಪರ್ಧಿಗಳ ಮೊದಲ ಪ್ರೀತಿಯ ನೆನಪನ್ನು ಹೊರಹಾಕಲು ಪ್ರೀತಿ ಎಂಬ ಚಟುವಟಿಕೆ ನೀಡಿದ್ದರು. ಚಟುವಟಿಕೆ ಪ್ರಕಾರ ಎಲ್ಲರೂ ತಮ್ಮ ಫಸ್ಟ್ ಲವ್ ಅನ್ನು ಎಲ್ಲರ ಮುಂದೆ ಹೇಳಬೇಕಿತ್ತು.

    sonu patil 2

    ಬಿಗ್‍ಬಾಸ್ ನೀಡಿದ ಈ ಚಟುವಟಿಕೆಯಲ್ಲಿ ಸೋನು ಅವರು ನಾನು ಹುಡುಗರನ್ನು ಇಷ್ಟಪಡುವುದಿಲ್ಲ. ನನಗೆ ಈವರೆಗೂ ಎಂಟು ಜನ ಪ್ರಪೋಸ್ ಮಾಡಿದ್ದಾರೆ. ಅಲ್ಲದೇ ಅದರಲ್ಲಿ ನಾಲ್ಕು ಮಂದಿ ‘ಸೋನು’ ಎಂದು ಅಚ್ಚೆ ಹಾಕಿಸಿದ್ದಾರೆ. ಆದರೆ ನಾನು ಯಾರನ್ನು ಪ್ರೀತಿಸಿಲ್ಲ ಎಂದು ಹೇಳಿದರು.

    ಈ ಚಟುವಟಿಕೆಯಲ್ಲಿ ಸೋನು ಮೊದಲು ತಮ್ಮ ಅಜ್ಜ ಬಗ್ಗೆ ಮಾತನಾಡಿದ್ದರು. ನನ್ನ ಅಜ್ಜಿ ನನ್ನನ್ನು ಕಷ್ಟಪಟ್ಟು ಸಾಕಿದ್ದಾರೆ. ನನಗೆ ಅವರೆಂದರೆ ತುಂಬಾ ಇಷ್ಟ. ಅವರ ಮೇಲೆ ನನಗೆ ತುಂಬಾ ಪ್ರೀತಿ. ಅವರು ಕೂಡಿಟ್ಟ ಹಣದಲ್ಲಿ ನಾನು ಬಟ್ಟೆ ಖರೀದಿಸಿದ್ದೇನೆ ಎಂದು ತಮ್ಮ ಅಜ್ಜಿ ಬಗ್ಗೆ ಪ್ರೀತಿ ವ್ಯಕ್ತಪಡಿಸಿದರು.

    sanu patil 3

    ಅಜ್ಜಿ ಬಗ್ಗೆ ಮಾತನಾಡಿದ ನಂತರ ಸೋನು, ನವೀನ್ ನನಗೆ ಒಳ್ಳೆಯ ಸ್ನೇಹಿತ. ನನಗೆ ಅವನ ಮೇಲೆ ಲವ್ ಇಲ್ಲ. ಕಷ್ಟ ಬಂದಾಗ ನನಗೆ ಯಾರೂ ಸಹಾಯ ಮಾಡಿಲ್ಲ. ಆದರೆ ನವೀನ್ ಹೆಣ್ಣುಮಕ್ಕಳಿಗೆ ಬಹಳ ಗೌರವ ನೀಡುತ್ತಾನೆ. ನನಗೆ ಚಳಿ ಆಗುತ್ತಿರುವಾಗ ಅವನು ಜಾಕೇಟ್ ಕೊಟ್ಟ. ಹಾಗಾಗಿ ಫ್ರೆಂಡ್ ಆಗಿ ನವೀನ್ ‘ಐ ಲವ್ ಯು’ ಎಂದು ಹೇಳಿದರು.

    ನಾನು ಸ್ನೇಹಿತನಾಗಿ ನಿನ್ನನ್ನು ಇಷ್ಟಪಡುತ್ತೇನೆ. ಲವ್, ಮದುವೆ ಎಂದರೆ ನನಗೆ ಇಷ್ಟವಿಲ್ಲ ಎಂದು ಸೋನು ಅವರು ನವೀನ್‍ಗೆ ಸ್ಪಷ್ಟಪಡಿಸಿದರು. ಸೋನು ಮಾತನ್ನು ಕೇಳಿ ನವೀನ್, “ನಿನ್ನನ್ನು ಒಳ್ಳೆಯ ಗೆಳತಿ ಎಂದು ಸ್ವೀಕರಿಸುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv