– ಸೂರ್ಯ – ಚಂದ್ರ ಅದರ ಜಾಗದಲ್ಲಿ ಎರಡು ಚೆನ್ನಾಗಿರುತ್ತೆ ಎಂದ ಸುದೀಪ್
ನಾವೇನು ಚಿಕ್ಕವರಲ್ಲ, ನಾವು ದೂರಾಗಿದ್ದು ಯಾಕೆ ಅನ್ನೋದು ನಮಗೆ ಗೊತ್ತಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ನಟ ದರ್ಶನ್ (Actor Darshan) ಬಗ್ಗೆ ಹೇಳಿದರು.
ಸೆ.2ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಟ ದರ್ಶನ್ ಹಾಗೂ ತಮ್ಮ ಸ್ನೇಹದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರ ಸಿನಿಮಾಗೆ ಒಳ್ಳೇದಾಗಲಿ. ಅವರಿಗೆ ಅವರದ್ದೇ ಆದ ನೋವು ಇರುತ್ತೆ. ಅದರ ಹಿಂದೆ ಅವರ ಅಭಿಮಾನಿಗಳು ಇರುತ್ತಾರೆ. ಅಭಿಮಾನಿಗಳಿಗೂ ಒಂದು ನಂಬಿಕೆ ಇರುತ್ತದೆ. ನಾವು ಮಾತಾಡೋದು ತಪ್ಪಾಗುತ್ತೆ. ಸರ್ಕಾರ, ಕಾನೂನು ಅಂತ ಬಂದಾಗ ಅವರೇನು ಮಾಡಬೇಕು ಅದನ್ನ ಮಾಡ್ತಾ ಇರ್ತಾರೆ. ಅದಕ್ಕೂ ನಾವು ಅಡ್ಡ ಬರಬಾರದು. ಯಾರೂ ಕೈಕಟ್ಕೊಂಡು ಸುಮ್ಮನೇ ಕುಳಿತಿರಲ್ಲ. ಆದರೆ ಕೆಲವೊಂದಕ್ಕೆ ನಾನು ತಲೆಹಾಕೋಕೆ ಹೋಗಲ್ಲ. ಯಾಕಂದ್ರೆ ನಂಗೆ ವೈಯಕ್ತಿಕವಾಗಿ ಇಂಟ್ರೆಸ್ಟ್ ಇಲ್ಲ. ಮಾತಾಡಿದ್ರೆ ಅದು ಎಲ್ಲವನ್ನೂ ಹಾಳಮಾಡುತ್ತೆ. ಜೊತೆಗೆ ಅದು ಕೆಲವೊಮ್ಮೆ ಅಂತರ ಸೃಷ್ಟಿ ಮಾಡುತ್ತೆ ಎಂದು ಹೇಳಿದರು.ಇದನ್ನೂ ಓದಿ: ಪರಮ ಸುಂದರಿಯಾದ ರಮ್ಯಾ!
ಇನ್ನೂ ನಾವಿಬ್ಬರು ಯಾಕೆ ಮಾತಾಡಲ್ಲ ಅಂದ್ರೆ ಅದಕ್ಕೆ ಕೆಲವು ಕಾರಣಗಳಿವೆ. ಯಾರೂ ಆ ಕಾರಣಗಳ ಬಗ್ಗೆ ಕೇಳಲ್ಲ. ಆದ್ರೆ ನಮಗೆ ಗೊತ್ತಿರುತ್ತೆ. ಇನ್ನೂ ಯಾರದ್ದೋ ಮಾತು ಕೇಳಿಕೊಂಡು ಹೀಗೆ ಮಾಡುವಷ್ಟು ನಾವು ಚಿಕ್ಕವರಲ್ಲ, ನಮಗೆ ಕೆಲವು ವಿಷಯಗಳು ಅರ್ಥ ಆಗುತ್ತವೆ. ನಾವ್ಯಾಕೆ ಹೀಗೀದಿವಿ ಅಂತ ನಮ್ಮ ಸತ್ಯ ನಮಗೆ ಗೊತ್ತಿರುತ್ತೆ. ಸೂರ್ಯ ಹಾಗೂ ಚಂದ್ರ ಅದರ ಜಾಗದಲ್ಲಿ ಎರಡು ಚೆನ್ನಾಗಿರುತ್ತೆ ಎಂದರು.
ಕಿಚ್ಚ ಸುದೀಪ್ ಸೋಮವಾರ (ಸೆ.1) ರಾತ್ರಿ 9 ರಿಂದ 12 ಗಂಟೆವರೆಗೆ ಅಭಿಮಾನಿಗಳ ಜೊತೆ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಸಿನಿಮಾ ರೈಟರ್ ಎಸ್.ಎಸ್ ಡೇವಿಡ್ ನಿಧನ