Tag: ದಾವಣಗೆರೆ. ಜಿಲ್ಲಾಸ್ಪತ್ರೆ

  • ದಾವಣಗೆರೆ | 7 ತಿಂಗಳಲ್ಲಿ 135 ಶಿಶುಗಳು, 28 ಗರ್ಭಿಣಿಯರು ಸಾವು!

    ದಾವಣಗೆರೆ | 7 ತಿಂಗಳಲ್ಲಿ 135 ಶಿಶುಗಳು, 28 ಗರ್ಭಿಣಿಯರು ಸಾವು!

    ದಾವಣಗೆರೆ: ನಾಲ್ಕೈದು ಜಿಲ್ಲೆಗಳ ಜೀವನಾಡಿಯಾಗಿರುವ ದಾವಣಗೆರೆ ಜಿಲ್ಲಾಸ್ಪತ್ರೆ (Davanagere District Hospital) ಇದೀಗ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ 7 ತಿಂಗಳಲ್ಲಿ ನೂರಾರು ನವಜಾತ ಶಿಶುಗಳು ಹಾಗೂ ಗರ್ಭಿಣಿಯರು ಸಾವನ್ನಪ್ಪಿದ್ದಾರೆ.

    Davanagere Hospital 1

    ದಾವಣಗೆರೆ (Davanagere) ಜಿಲ್ಲಾಸ್ಪತ್ರೆ ಎಂದರೆ ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದೆ ಎನ್ನುವ ಆತಂಕಕಾರಿ ವರದಿ ಕೇಳಿ ಬಂದಿದೆ. ಇದನ್ನೂ ಕೇಳಿದ ಆರೋಗ್ಯ ಸಚಿವರೇ ನಿಬ್ಬೆರಗಾಗಿದ್ದಾರೆ.

    ಹೌದು, ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 135 ನವಜಾತ ಶಿಶುಗಳು 28 ಗರ್ಭಿಣಿಯರು ಸಾವನ್ನಪ್ಪಿರುವ ವರದಿಯಾಗಿದೆ. ಅದರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಐದು ಸಾವಾಗಿದ್ದರೆ, ಇನ್ನುಳಿದವರು ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರತಿ ತಿಂಗಳು 600 ರಿಂದ 700 ಹೆರಿಗೆ ಆಗುವ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರಿಂದ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮುಂಚಿತವಾಗಿ ಗರ್ಭಿಣಿಯರನ್ನು ಕಳಿಸುವಂತೆ ಸೂಚನೆ ನೀಡಲಾಗಿದೆ.

    Davanagere Hospital

    ಇನ್ನೂ ಜಿಲ್ಲೆಯ ಪ್ರಾಥಮಿಕ ಹಾಗು ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾವಹಿಸುವಂತೆ ಡಿಹೆಚ್‌ಓ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಮಾಡಲು ಅಭಿಯಾನವನ್ನೇ ಹಮ್ಮಿಕೊಂಡಿದ್ದು, ಜಿಲ್ಲಾಸ್ಪತ್ರೆಯ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಕೂಡ ಹೆಚ್ಚಿದೆ. ಅಲ್ಲದೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಸಿಜೇರಿಯನ್ ಡೆಲಿವರಿಗಳು ಶೇ.75ರಷ್ಟು ಜಾಸ್ತಿ ಇದೆ. ಅದರ ಬಗ್ಗೆ ಕ್ರಮ ವಹಿಸುವಂತೆ ಆರೋಗ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಒಟ್ಟಾರೆ ಕಳೆದ 7 ತಿಂಗಳಲ್ಲಿ ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಇದರ ಬಗ್ಗೆ ಆರೋಗ್ಯ ಇಲಾಖೆ ಎಚ್ಚರ ವಹಿಸಿದೆ. ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರ ಇನ್ನು ಹೆಚ್ಚಿನ ಸೌಲಭ್ಯ ಒದಗಿಸಿದರೆ ಬಡ ರೋಗಿಗಳ ಜೀವ ಉಳಿಸಿದಂತಾಗುತ್ತದೆ.

  • ದಾವಣಗೆರೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಧನದಾಹಕ್ಕಿಲ್ಲ ಕೊನೆ- ದುಡ್ಡು ಕೊಡದಿದ್ರೆ ಬಾಣಂತಿಯರಿಗಿಲ್ಲ ಹಾಸಿಗೆ

    ದಾವಣಗೆರೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಧನದಾಹಕ್ಕಿಲ್ಲ ಕೊನೆ- ದುಡ್ಡು ಕೊಡದಿದ್ರೆ ಬಾಣಂತಿಯರಿಗಿಲ್ಲ ಹಾಸಿಗೆ

    ದಾವಣಗೆರೆ: ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಜೀವಾಂಮೃತವಿದ್ದಂತೆ. ಅಲ್ಲಿ ಹೋದ್ರೆ ನಮಗೆ ಒಳಿತು ಆಗುತ್ತೆ ಎಂಬ ನಂಬಿಕೆ ಅಲ್ಲಿಗೆ ಬಂದಂತಹ ರೋಗಿಗಳದ್ದು, ಜಿಲ್ಲೆಯ ಆಸ್ಪತ್ರೆಯಲ್ಲಿ ರೋಗಿಗಳನ್ನ ನಾಯಿಗಳಿಗಿಂತಲು ಕೀಳಾಗಿ ಕಾಣುತ್ತಾರೆ. ಅಲ್ಲದೆ ಅವರಿಗೆ ಯಾವುದೇ ಸವಲತ್ತು ನೀಡದೆ ಬದುಕಿರುವಾಗಲೆ ನರಕ ತೋರಿಸುತ್ತಾರೆ.

    DVG 3 1

    ಹೌದು. ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಆಸ್ಪತ್ರೆಯಿಂದ ಹೊರಬಂದು ಮಲಗಿದ ಗರ್ಭಿಣಿ, ಇನ್ನೊಂದೆಡೆ ಬಾಣಂತಿಯರು ತಮ್ಮ ಹಸುಗೂಸನ್ನ ತೊಡೆಮೇಲೆ ಮಲಗಿಸಿಕೊಂಡು ನೆಲದ ಮೇಲೆ ಕುಳಿತಿರುತ್ತಾರೆ. ಈಗಾಗಲೇ ಹಲವು ಅವಾಂತರಗಳಿಂದ ಕುಖ್ಯಾತಿ ಗಳಿಸಿದ್ದ ಈ ಆಸ್ಪತ್ರೆ ಇದೀಗ ಪುನಃ ತನ್ನ ಎಡವಟ್ಟಿನಿಂದ ಸುದ್ದಿಯಾಗಿದೆ. ಆಸ್ಪತ್ರೆಗೆ ಬರೋ ಗರ್ಭಿಣಿಯರಿಗೆ, ಬಾಣಂತಿಯರಿಗೆ ದುಡ್ಡು ಕೊಟ್ರೆ ಮಾತ್ರವೇ ಬೆಡ್ ಕೊಡಲಾಗ್ತಿದೆ. ಹಣ ಕೊಡದಿದ್ರೆ, ಹೆರಿಗೆಯಾದ ಬಾಣಂತಿಯರಿಗೆ ಯಾವುದೇ ಸೌಲಭ್ಯ ನೀಡದೇ ಹೀನಾಯವಾಗಿ ಕಾಣ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಆಸ್ಪತ್ರೆಯಿಂದಲೇ ಹೊರಹಾಕ್ತಾರೆ ಅಂತ ಯುವ ಶಕ್ತಿ ವೇದಿಕೆಯ ರಾಜು ಆರೋಪಿಸಿದ್ದಾರೆ.

    DVG 6

    ಈ ಬಗ್ಗೆ ಗರ್ಭಿಣಿಯರು ಹಿರಿಯ ವೈದ್ಯಾಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡ್ರೂ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಬೆಡ್ ಬೇಕಾದ್ರೆ ದುಡ್ಡು ಕೊಡ್ಬೇಕು. ಇಲ್ಲವಾದ್ರೆ ನೆಲದ ಮೇಲೆಯೇ ಚಿಕಿತ್ಸೆಪಡೀಬೇಕಾದ ಪರಿಸ್ಥಿತಿ ರೋಗಿಗಳದ್ದಾಗಿದೆ.

    DVG 1 1

    ಒಟ್ಟಿನಲ್ಲಿ ಬಡವರಿಗೆ ಅನುಕೂಲವಾಗಲಿ ಅಂತ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಿದ್ರೆ, ಈ ವೈದ್ಯರು ಮತ್ತು ಸಿಬ್ಬಂದಿ ತಮ್ಮದೇ ಆಸ್ಪತ್ರೆ ಎನ್ನುವಂತೆ ದುರಂಹಕಾರ ತೋರಿಸ್ತಿದ್ದಾರೆ. ಇನ್ನಾದ್ರೂ ಈ ಧನದಾಹಿ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ತಾರಾ ಅಂತ ಕಾದು ನೋಡ್ಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    DVG 4 1